Tag: Dhakad

  • ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಕಂಗನಾ ರಣಾವತ್ : ಸೋತವರ ಲಿಸ್ಟ್ ಹಾಕಿ ಕಿಡಿಕಿಡಿ

    ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಕಂಗನಾ ರಣಾವತ್ : ಸೋತವರ ಲಿಸ್ಟ್ ಹಾಕಿ ಕಿಡಿಕಿಡಿ

    ಬಾಲಿವುಡ್ ನಟಿ ಕಂಗನಾ ರಣಾವತ್ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ಇವರ ನಟನೆಯ ಧಾಕಡ್ ಸಿನಿಮಾ ಮಕಾಡೆ ಮಲಗಿಕೊಂಡ ದಿನದಿಂದ ಇವರ ಮೇಲೆ ಮುಗಿಬಿದ್ದವರನ್ನು ಮೊದಲ ಬಾರಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ತಮ್ಮನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ, ತಮ್ಮೊಂದಿಗೆ ಸೋತ ಚಿತ್ರಗಳ ಯಾದಿಯನ್ನೇ ಅವರು ರಿಲೀಸ್ ಮಾಡಿದ್ದಾರೆ.

    ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಬಾಕ್ಸ್ ಆಫೀಸಿನಲ್ಲಿ ಅದು ಭಾರೀ ಸದ್ದು ಮಾಡಲಿದೆ ಎಂದು ಹೇಳಲಾಗಿತ್ತು. ಅಲ್ಲದೇ, ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂದು ಸ್ವತಃ ಸಿನಿಮಾ ತಂಡವೇ ಹೇಳಿಕೊಂಡಿತ್ತು. ಆದರೆ, ಈ ಯಾವ ಮ್ಯಾಜಿಕ್ ಕೂಡ ನಡೆಯಲಿಲ್ಲ. ಮೊದಲ ದಿನವೇ ಸಿನಿಮಾ ಸೋಲೊಪ್ಪಿಕೊಂಡಿತ್ತು. ಕಂಗನಾ ರಣಾವತ್ ಗೆ ಕೊಟ್ಟ ಸಂಭಾವನೆಯಷ್ಟು ದುಡ್ಡು ಬರಲಿಲ್ಲ ಎನ್ನುವ ಸತ್ಯ ಹೊರ ಬಿತ್ತು. ಇದೆಲ್ಲವನ್ನೂ ಗಮನಿಸಿದ ಕಂಗನಾ ಸೋಲಿನ ಬಗ್ಗೆ ಮಾತನಾಡುವವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ಬಾಲಿವುಡ್ ನಲ್ಲಿ ಕೇವಲ ಧಾಕಡ್ ಸಿನಿಮಾ ಮಾತ್ರ ಸೋತಿಲ್ಲ. ಇನ್ನೂ ಹಲವು ಚಿತ್ರಗಳು ಸೋತಿವೆ. ಆದರೂ, ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕೇವಲ ನನ್ನ ಸಿನಿಮಾಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ನನ್ನನ್ನಷ್ಟೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹಲವಾರು ಸಿನಿಮಾಗಳ ಪೋಸ್ಟರ್ ಮತ್ತು ಬಂದಿರುವ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೊಂದು ವೈಯಕ್ತಿಕ ದ್ವೇಷ ಯಾಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಂಗನಾ ರಣಾವತ್ ನಂಬಿಕೊಂಡು ಕಚೇರಿಯನ್ನೇ ಮಾರಿದ ಧಾಕಡ್ ನಿರ್ಮಾಪಕ

    ಕಂಗನಾ ರಣಾವತ್ ನಂಬಿಕೊಂಡು ಕಚೇರಿಯನ್ನೇ ಮಾರಿದ ಧಾಕಡ್ ನಿರ್ಮಾಪಕ

    ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ, ಈ ಸಿನಿಮಾದ ನಿರ್ಮಾಪಕ ದೀಪಕ್ ಮುಕುಟ್ ಅವರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಸಿನಿಮಾ ನೂರಾರು ಕೋಟಿ ವ್ಯಾಪಾರ ಮಾಡುತ್ತದೆ ಎಂದೇ ದೀಪಕ್ ನಂಬಿದ್ದರು. ಹಾಗಾಗಿ ಕೋಟಿ ಕೋಟಿ ಹಣವನ್ನು ಸುರಿದು ಸಿನಿಮಾ ಮಾಡಿದರು. ಪ್ರಚಾರದಲ್ಲೂ ಅವರು ಹಿಂದೆ ಬೀಳಲಿಲ್ಲ. ಆದರೆ, ಧಾಕಡ್ ಗೆಲ್ಲಲಿಲ್ಲ. ಎಂದೂ ಸುಧಾರಿಸಿಕೊಳ್ಳದೇ ಇರುವಷ್ಟು ನಷ್ಟವನ್ನು ಅದು ಮಾಡಿದೆ.

    ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಲಿದೆ ಎಂದೇ ನಂಬಲಾಗಿತ್ತು. ಕಂಗನಾ ಅವರಿಗೂ ಈ ಸಿನಿಮಾದ ಮೇಲೆ ಅಷ್ಟೊಂದು ಭರವಸೆ ಇತ್ತು. ಹಾಗಾಗಿ ಓಪನ್ ಆಗಿಯೇ ಹಲವು ವಿಷಯಗಳನ್ನು ಅವರು ಮಾತನಾಡಿದರು. ಈ ಮಾತೇ ಅವರಿಗೆ ಮುಳುವಾಗಿದೆ ಎಂದು ಹೇಳಲಾಗುತ್ತಿದೆ. ಇಡೀ ಬಾಲಿವುಡ್ ಅನ್ನು ಬಾಯಿಗೆ ಬಂದಂತೆ ಬೈದ ಕಾರಣದಿಂದಾಗಿ ಈ ಸಿನಿಮಾವನ್ನು ಯಾರೂ ಪ್ರಮೋಟ್ ಮಾಡಲಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಈ ಸಿನಿಮಾ ಅಂದಾಜು 80 ಕೋಟಿಯಲ್ಲಿ ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಾಕ್ಸ್ ಆಫೀಸಿನಿಂದ ನಿರ್ಮಾಪಕರಿಗೆ ಬಂದ ಹಣ ಕೇವಲ 5 ಕೋಟಿ ಎನ್ನಲಾಗುತ್ತಿದೆ. ಪ್ರಚಾರದ ಖರ್ಚು ಸೇರಿದಂತೆ 90 ಕೋಟಿಗೂ ಅಧಿಕ ಹಣವನ್ನು ಈ ಚಿತ್ರಕ್ಕಾಗಿ ನಿರ್ಮಾಪಕರು ಖರ್ಚು ಮಾಡಿದ್ದರಂತೆ. ಅದಕ್ಕಾಗಿ ಸಾಲವನ್ನು ಮಾಡಿಕೊಂಡಿದ್ದರಂತೆ. ಈ ಸಾಲವನ್ನು ತೀರಿಸಲು ಅವರು ತಮ್ಮ ಕಚೇರಿಯನ್ನೇ ಮಾರಿದ್ದಾರಂತೆ ನಿರ್ಮಾಪಕರು. ಕಚೇರಿ ಮಾರಿ ಬಂದ ಹಣದಲ್ಲಿ ಸಾಲು ತೀರಿಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಧಾಕಡ್ ಸೋಲಿನ ಬೆನ್ನಲ್ಲೆ ‘ಎಮರ್ಜೆನ್ಸಿ’ ಘೋಷಿಸಿದ ಕಂಗನಾ ರಣಾವತ್ : ಇಂದಿರಾ ಗಾಂಧಿ ನೆನಪಿನ ಚಿತ್ರವಾ?

    ಧಾಕಡ್ ಸೋಲಿನ ಬೆನ್ನಲ್ಲೆ ‘ಎಮರ್ಜೆನ್ಸಿ’ ಘೋಷಿಸಿದ ಕಂಗನಾ ರಣಾವತ್ : ಇಂದಿರಾ ಗಾಂಧಿ ನೆನಪಿನ ಚಿತ್ರವಾ?

    ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ಅವರನ್ನು ಧಾಕಡ್ ಸೋಲು ನಿದ್ದೆಗೆಡಿಸಿದೆ. ಅವರ ವೃತ್ತಿ ಜೀವನದಲ್ಲೇ ಇಂಥದ್ದೊಂದು ಸೋಲು ನೋಡಿರಲಿಲ್ಲ ಎಂದು ಬಣ್ಣಿಸಲಾಗುತ್ತಿದೆ. ಹಾಕಿದ ಬಂಡವಾಳವಲ್ಲ, ಕಂಗನಾ ರಣಾವತ್ ಅವರಿಗೆ ಖರೀದಿಸಿದ್ದ ಕಾಸ್ಟ್ಯೂಮ್ ಹಣವೂ ವಾಪಸ್ಸು ಬಂದಿಲ್ಲವೆಂದು ಬಾಲಿವುಡ್ ಬಾಕ್ಸ್ ಆಫೀಸ್ ಅಣಕವಾಡುತ್ತಿದೆ.

    ಧಾಕಡ್ ಸೋಲನ್ನು ಒಪ್ಪಿಕೊಂಡಂತಿರುವ ಕಂಗನಾ, ಅದರಿಂದ ಆಚೆ ಬರುವುದಕ್ಕೆ ತಮ್ಮದೇ ನಿರ್ದೇಶನದ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಘೋಷಣೆ ಆಗಿರುವ ‘ಎಮರ್ಜೆನ್ಸಿ’ ಸಿನಿಮಾಗೆ ಅವರು ಚಾಲನೆ ನೀಡಿದ್ದಾರೆ. ಜೊತೆಗೆ ಈ ಸಿನಿಮಾದ ಬಗ್ಗೆ ಸಾಕಷ್ಟು ಎಚ್ಚರಿಕೆ ತಗೆದುಕೊಂಡು ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಧಾಕಡ್ ಸೋಲಿಗೆ ನಾನಾ ಕಾರಣಗಳನ್ನು ಕೊಡಬಹುದು. ಆದರೆ, ಎಮರ್ಜೆನ್ಸಿ ಏನಾದರೂ ಕೈ ಹಿಡಿಯದೇ ಹೋದರೆ, ಎಲ್ಲ ಜವಾಬ್ದಾರಿಯನ್ನೂ ಒಬ್ಬರೇ ಹೊರಬೇಕು. ಹಾಗಾಗಿ ಶೂಟಿಂಗ್ ಮುನ್ನವೇ ಎಲ್ಲ ರೀತಿಯ ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿಯಲಿದ್ದಾರಂತೆ. ಸ್ಕ್ರಿಪ್ಟ್, ತಾರಾಗಣ ಆಯ್ಕೆ, ಗೆಲುವಿಗೆ ಬೇಕಾದ ಸಿದ್ಧ ಸೂತ್ರಗಳನ್ನು ಮುಂದಿಟ್ಟುಕೊಂಡೇ ಈ ಬಾರಿ ಸಿನಿಮಾ ಮಾಡುತ್ತಾರಂತೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಅಂದಹಾಗೆ ಎಮರ್ಜೆನ್ಸಿ ಹೊಸ ಬಗೆಯ ಸಿನಿಮಾವಂತೆ. ಈ ಸಿನಿಮಾದ ಟೈಟಲ್ ಕೇಳಿದಾಕ್ಷಣ ಇದು ಇಂದಿರಾ ಗಾಂಧಿ ಅವರ ಕುರಿತಾದ ಚಿತ್ರವಾ ಎನ್ನುವ ಅನುಮಾನ ಮೂಡುವುದು ಸಹಜ. ಇದು ಅವರ ಕುರಿತಾದ ಚಿತ್ರವಲ್ಲ ಎಂದು ಈಗಾಗಲೇ ಕಂಗನಾ ಹೇಳಿದ್ದಾರೆ. ಆದರೆ, ಎಮರ್ಜೆನ್ಸಿ ವೇಳೆಯ ಮೂಡ್ ಅನ್ನು ಈ ಚಿತ್ರ ಕಟ್ಟಿಕೊಡಲಿದೆಯಂತೆ.

  • ಕಂಗನಾ ಸಿನಿಮಾ ಸೋಲು ಹಾಲು ಕುಡಿದಷ್ಟು ಖುಷಿಯಾಗಿದೆ : ನಟಿ ಪಾಯಲ್

    ಕಂಗನಾ ಸಿನಿಮಾ ಸೋಲು ಹಾಲು ಕುಡಿದಷ್ಟು ಖುಷಿಯಾಗಿದೆ : ನಟಿ ಪಾಯಲ್

    ರಾಷ್ಟ್ರ ಪ್ರಶಸ್ತಿ ವಿಜೇತ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಈ ಸಿನಿಮಾವನ್ನು ಜನರಿಗೆ ತೋರಿಸಲು ಚಿತ್ರತಂಡ ಏನೆಲ್ಲ ಹರಸಾಹಸ ಮಾಡುತ್ತಿದೆ. ಆದರೆ, ಕೆಲವರು ಮಾತ್ರ ಕಂಗನಾ ಸಿನಿಮಾ ಸೋತಿದ್ದಕ್ಕೆ ಪಾರ್ಟಿ ಮಾಡುತ್ತಿದ್ದಾರಂತೆ. ಸೋಲನ್ನು ಸಂಭ್ರಮಿಸುತ್ತಿದ್ದಾರಂತೆ. ಅದನ್ನು ಬಹಿರಂಗವಾಗಿಯೂ ಹೇಳಿಕೊಂಡಿದ್ದಾರೆ ನಟಿ ಪಾಯಲ್ ರೋಹಟ್ಗಿ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಪಾಯಲ್ ರೋಹಟ್ಗಿ ಅವರು, ಕಂಗನಾ ರಣಾವತ್‍ ನಡೆಸಿಕೊಡುತ್ತಿದ್ದ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ ಅವರು ಬೇಗನೆ ಆಚೆ ಬಂದರು. ಅದಕ್ಕೆ ಕಾರಣ ಕಂಗನಾ ಅನ್ನುವುದು ಅವರ ಅನಿಸಿಕೆ. ಹೀಗಾಗಿಯೇ ಧಾಕಡ್ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಪಾಯಲ್, ಈ ಸಿನಿಮಾ ಸೋಲಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಮೂರು ದಿನಗಳ ಹಿಂದೆಯಷ್ಟೇ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ರಿಲೀಸ್ ಆಗಿದೆ. ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿದೆ. ಮೂರು ದಿನಗಳ ಒಟ್ಟು ಕಲೆಕ್ಷನ್ ಒಂದು ಕೋಟಿ ಕೂಡ ಆಗಿಲ್ಲ ಎನ್ನುತ್ತಿವೆ ಬಾಕ್ಸ್ ಆಫೀಸ್ ಮೂಲಗಳು. ಇದನ್ನು ತಿಳಿದುಕೊಂಡಿರುವ ಪಾಯಲ್, ಮತ್ತೆ ಇನ್ಸಸ್ಟಾ ಗ್ರಾಮ್ ನಲ್ಲಿ ಸೋತಿರುವ ಸಿನಿಮಾದ ಕುರಿತು ಬರೆದಿದ್ದಾರೆ. ಈ ಸಿನಿಮಾ ಸೋತಿದ್ದು, ನನಗೆ ಹಾಲು ಕುಡಿದಷ್ಟೇ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಲಾಕ್ ಅಪ್ ಶೋ ನಲ್ಲಿ ಗೆದ್ದಿರುವ ಮುನಾವರ್ ಬಗ್ಗೆಯೂ ಗೇಲಿ ಮಾಡಿರುವ ಪಾಯಲ್, 18 ಲಕ್ಷ ವೋಟು ಪಡೆದುಕೊಂಡು ಗೆದ್ದವರು ಕೂಡ ಈ ಸಿನಿಮಾದ ಪ್ರಚಾರ ಮಾಡಲಿಲ್ಲ. ಯಾರದೋ ಮನೆಗೆ ಪಾರ್ಟಿಗೆ ಹೋಗಿ ಬಂದ ನಂತರ ಕಂಗನಾ ಅವರು ಆ ಹುಡುಗನನ್ನು ಗೆಲ್ಲಿಸಿ ಬಿಟ್ಟರು. ಪಾರ್ಟಿಗೆ ಕರೆಯಿಸಿಕೊಂಡವರು ಕೂಡ ಸಿನಿಮಾ ಪ್ರಚಾರಕ್ಕೆ ಬರಲಿಲ್ಲ ಎಂದು ಗೇಲಿ ಮಾಡಿದ್ದಾರೆ.

  • ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರು

    ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರು

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಬೇಸಿಗೆಯ ಉರಿಬಿಸಿಲಿನಲ್ಲೂ ಅವರ ಅಭಿಮಾನಿಗಳಿಗೆ ಅಭಿಮಾನಿಗಳನ್ನು ಮತ್ತಷ್ಟು ಹಾಟ್ ಹಾಟ್ ಆಗಿ ಇಟ್ಟಿದ್ದಾರೆ. ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಹಾಟ್ ಹಾಟ್ ಆಗಿರುವ ಹೊಸ ಫೋಟೋ ಶೂಟ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಈ ನಡೆಗೆ ಇಡೀ ಅಭಿಮಾನಿ ಪಡೆ ದಂಗಾಗಿದೆ. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದ ಕಂಗನಾ ರಣಾವತ್ ಈ ಬಾರಿ ಹಾಟ್ ಹಾಟ್ ಫೋಟೋ ಕಾರಣದಿಂದಾಗಿ ಪ್ರಚಾರದ ತುತ್ತತುದಿ ಏರಿ ಕೂತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಬಿಟೌನ್ ಕೂಡ ಶಾಕ್ ಆಗಿ ಕೂತಿದೆ. ಕಂಗನಾ ಅವತಾರ ಕಂಡು ಬೆಚ್ಚಿ ಬಿದ್ದಿದೆ.

     

    View this post on Instagram

     

    A post shared by Kangana Dhaakad (@kanganaranaut)

    ಸದ್ಯ ಕಂಗನಾ ರಣಾವತ್ ಲಾಕ್ ಅಪ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಅತೀ ಹೆಚ್ಚು ಸ್ಪರ್ಧಿಗಳಾಗಿದ್ದು ವಿವಾದಿತ ತಾರೆಯರು. ದಿನವೂ ಒಂದಿಲ್ಲೊಂದು ವಿವಾದ ಮಾಡುವ ಮೂಲಕ ಶೋ ಅನ್ನು ಟಾಪ್ ನಲ್ಲಿ ಇಟ್ಟಿದ್ದಾರೆ. ಅವರು ಮಾತ್ರವಲ್ಲ, ಅವರ ಮಾತಿಗೆ ಪ್ರತ್ಯುತ್ತರವಾಗಿ ಮಾತನಾಡುವ ಕಂಗನಾ ಕೂಡ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಲೇ ಇರುತ್ತಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಇಂದು ಕಂಗನಾ ರಣಾವತ್ ನಟನೆಯ ‘ಧಾಕಡ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇಂದು ರಿಲಿಸ್ ಆದ ಟ್ರೇಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ರಂಗನಾ ಈ ರೀತಿಯ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೆಲವರು ಈ ಫೋಸ್ಟ್ ಗೆ ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ಇದೆಂಥ ಸಂಸ್ಕೃತಿ ಎಂದು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ.

  • ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

    ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

    ಮುಂಬೈ: ಸದಾ ಒಂದಲ್ಲ ಒಂದು ವಿವಾದದ ಮೂಲಕ ಸದ್ದು ಮಾಡುವ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ಫೋಟೋವೊಂದಕ್ಕೆ ಪೋಸ್ ನೀಡುವ ಮೂಲಕ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ಯುವಕರ ಎದೆಬಡಿತ ಏರಿಸುವಂತಿದೆ ಎಂದೇ ಹೆಳಬಹುದು.

    ಧಾಕಡ್ ಚಿತ್ರೀಕರಣಕ್ಕಾಗಿ ಯುರೋಪ್‍ನಲ್ಲಿರುವ ಕಂಗನಾ ಶೂಟಿಂಗ್ ಮುಗಿಸಿ ಇದೀಗ ಕೂಲ್ ಆಗಿ ಚಿತ್ರತಂಡದೊಂದಿಗೆ ಪಾರ್ಟಿ ಮಾಡುತ್ತಿದ್ದಾರೆ. ಈ ಮಧ್ಯೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ತಿಳಿ ಸಂಜೆಯಲ್ಲಿ ಕ್ರಿಮ್ ಕಲರ್ ಡ್ರಸ್ ತೊಟ್ಟು ಕಂಗನಾ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇನ್ನೂ ಈ ಫೋಟೋ ನೋಡಿದ ಅಭಿಮಾನಿಗಳು ಕಂಗನಾ ಹಾಟ್ ಲುಕ್‍ಗೆ ಫುಲ್ ಫಿದಾ ಆಗಿದ್ದಾರೆ. ಫೋಟೋ ಜೊತೆಗೆ ಪ್ರೀತಿಯಲ್ಲಿ ಹುಟ್ಟು, ಸಾವು ಇಲ್ಲ. ಅವರನ್ನು ನೋಡುತ್ತಾ ಬದುಕುವಾಗಲೇ ನಿಜವಾದ ಧೈರ್ಯ ಹೊರಬರುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಧಾಕಡ್ ಚಿತ್ರಕ್ಕೆ ನಿರ್ದೇಶಕ ರಜನೀಶ್ ಘಾಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ಸ್ಪೈ ಥ್ರಿಲ್ಲರ್ ಕಥಾಹಂದರವಾಗಿದ್ದು, ಈ ಚಿತ್ರದ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಹಾಗೂ ದಿವ್ಯಾ ಸತ್ ಅಭಿನಯಿಸಿದ್ದಾರೆ. ಜೊತೆಗೆ ಕಂಗನಾ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಬಯೋಪಿಕ್ ತಲೈವಿ ಚಿತ್ರದಲ್ಲಿ ಅಭಿನಯಿಸಿದ್ದು, ಕೋವಿಡ್ ಕಾರಣದಿಂದಾಗಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದನ್ನೂ ಓದಿ:ಪತ್ನಿ ಜೊತೆಗಿನ ಲವ್ಲೀ ಫೋಟೋ ಶೇರ್ ಮಾಡಿದ ನಟ ನಿಖಿಲ್

     

    View this post on Instagram

     

    A post shared by Kangana Ranaut (@kanganaranaut)