Tag: dhadak film

  • ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್

    ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್

    ಬಾಲಿವುಡ್‌ನ(Bollywood) ಸುಂದರಿ ಜಾಹ್ನವಿ ಕಪೂರ್ (Janhvi Kapoor) ಮತ್ತೆ ಸುದ್ದಿಯಲ್ಲಿದ್ದಾರೆ. ಟ್ರೋಲಿಗರ ವಿರುದ್ಧ ಫುಲ್ ಗರಂ ಆಗಿದ್ದಾರೆ. ತಾವು ಏನೇ ಮಾಡಿದ್ರು ನೆಗೆಟಿವ್ ಟ್ರೋಲ್ ಮಾಡುವವರಿಗೆ ನಟಿ ಜಾಹ್ನವಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಹಜ ನಟನೆಯ ಮೂಲಕ ಸೂಪರ್ ಸ್ಟಾರ್ ಆಗಿ ಮಿಂಚಿದ್ದ ಶ್ರೀದೇವಿ (Sridevi Kapoor) ಪುತ್ರಿ ಜಾಹ್ನವಿ ಕಪೂರ್ ಇದೀಗ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ವಿಚಾರ ಗೊತ್ತೆ ಇದೆ. ಇತ್ತೀಚೆಗೆ ಜಾಹ್ನಿವಿ ಕಪೂರ್ ಎಲ್ಲಿಯೇ ಹೋದರು, ಏನೇ ಮಾಡಿದ್ದರು ಟ್ರೋಲ್ ಮಾಡೋದ್ದಕ್ಕೆ ಶುರು ಮಾಡಿದ್ದಾರೆ. ಇದರಿಂದ ಬೇಸರವಾಗಿರುವ ನಟಿ ಇದೀಗ ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

    ನಾನು ಚಿತ್ರೀಕರಣದಲ್ಲಿ ಎಷ್ಟು ಕಷ್ಟ ಪಡುತ್ತೀನಿ ಎಂದು ನನ್ನ ರಕ್ತದಿಂದ ಬೇಕಿದ್ದರೆ ಬರೆದು ಕೊಡುತ್ತೇನೆ. ನನ್ನ ಕೆಲಸದ ಬಗ್ಗೆ ಯಾರಿಗೂ ಅನುಮಾನ ಬೇಡ ಯಾರು ಅನುಮಾನ ಪಡುವ ಅಗತ್ಯವಿಲ್ಲ. ನನಗೆ ಒಂದೇ ವಿಷಯವನ್ನು ಪದೇ ಪದೇ ಹೇಳುವುದು ಬೇಸರ ತರುತ್ತದೆ. ನನಗಾಗಿ ನಾನು ಸವಾಲುಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ಈಗಷ್ಟೆ ನಾನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದೇನೆ ಎನ್ನುವುದು ಗೊತ್ತಿದೆ ಅಂದ್ಮೇಲೆ ಯಾಕೆ ಸ್ಟಾರ್ ಕಿಡ್ ಅಂತ ಹೇಳಿ ಅವಕಾಶ ಕಿತ್ತುಕೊಳ್ಳುತ್ತಿರುವುದು ಎಂದು ಜಾಹ್ನವಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ನಮ್ಮ ತಾಯಿಗೆ ಇರುವ ಸ್ಟಾರ್ ಡಮ್ ನೋಡಿ ನಾನು ಹೇಗೆ ಸುಮ್ಮನಿರಲು ಸಾಧ್ಯ, ನಾನು ಸಾಧನೆ ಮಾಡಬೇಕು ಅನ್ನೋ ಯೋಚನೆ ಪದೇ ಪದೇ ಬರುತ್ತದೆ. ಅಮ್ಮ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಾಗ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾಗ ನಾನು ಇರಲಿಲ್ಲ. ಅವರು ನಟಿಸುವುದನ್ನು ನಿಲ್ಲಿಸಿದ ಮೇಲೆ ನಾನು ಹುಟ್ಟಿದ್ದು. ಅಮ್ಮ ಸಿನಿಮಾ ಮಾಡುವಾಗ, ಪರ್ಫಾರ್ಮೆನ್ಸ್ ಕೊಡುವಾಗ ಅಥವಾ ಸೆಟ್‌ನಲ್ಲಿ ಇದ್ದಾಗ ಮಾತನಾಡುತ್ತಿದ್ದ ವಿಧಾನ, ತಂಡಕ್ಕೆ ನೀಡುತ್ತಿದ್ದ ಸಹಕಾರದ ಬಗ್ಗೆ ಬಹಳ ಜನರು ಹೇಳಿದನ್ನು ನಾನು ಕೇಳಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡಿರುವೆ ಎಂದು ನಟಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಬಾಲಿವುಡ್ ಗ್ಲಾಮರ್ ಗೊಂಬೆ ಜಾನ್ವಿ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದ ನಟಿ ಜಾನ್ವಿ, ಈಗ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿರೋ ಅಭಿಮಾನಿಗಳು, ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.

    `ದಡಕ್’ ಚಿತ್ರದ ಮೂಲಕ ಬಿಟೌನ್‌ಗೆ ಲಗ್ಗೆಯಿಟ್ಟ ನಟಿ ಜಾನ್ವಿ ಕಪೂರ್, ಮೊದಲ ಚಿತ್ರದಲ್ಲೇ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು. ಇನ್ನು ಖ್ಯಾತ ನಟಿ ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಅನೇಕರಿಗೆ ಜಾನ್ವಿ ಅಚ್ಚುಮೆಚ್ಚು. ಶ್ರೀದೇವಿ ನಿಧನದ ನಂತರ ಜಾನ್ವಿ ಅವರಲ್ಲಿ ಶ್ರೀದೇವಿ ಅವರನ್ನು ಕಾಣುತ್ತಿದ್ದಾರೆ. ಆದರೆ ಜಾನ್ವಿ ನಟನೆಯಲ್ಲಿ ಇನ್ನೂ ಪಳಗಬೇಕಾಗಿದೆ. ಆದರೆ ಡ್ಯಾನ್ಸ್‌ನಲ್ಲಿ ಪಳಗಿದ್ದಾರೆ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ. ಇದೀಗ ಜಾನ್ವಿ ಹಂಚಿಕೊಂಡಿರೋ ಡ್ಯಾನ್ಸ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಬಾಲಿವುಡ್ ನಟಿ ರೇಖಾ ಅವರು ಹೆಜ್ಜೆ ಹಾಕಿದ್ದ `ಆಂಕೋ ಕೋ ಮಸ್ತಿ’ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಏ.29 ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಅಂಗವಾಗಿ ಶೇರ್ ಮಾಡಬೇಕಿದ್ದ ವಿಡಿಯೋ ಇದೀಗ ಪೋಸ್ಟ್ ಮಾಡಿದ್ದಾರೆ. ಜಾನ್ವಿ ಟ್ಯಾಲೆಂಟ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜಾನ್ವಿ ಡ್ಯಾನ್ಸ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.

    ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಪ್ರಯತ್ನಿಸಿದ್ದ ಬೈರಕೀ ಭಾವ. ಎಲ್ಲರಿಗೂ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯ ಶುಭಾಶಯ. ಎರಡು ದಿನ ತಡವಾಗಿ ಹೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. `ಆಂಕೋ ಕೋ ಮಸ್ತಿ’ ಹಾಡಿಗೆ ಕುಳಿತೇ ಡ್ಯಾನ್ಸ್ ಮಾಡಿದ್ದಾರೆ. ಜಾನು ಡ್ಯಾನ್ಸ್ ನೋಡಿ ಪಡ್ಡೆ ಹುಡುಗರು ದಿಲ್‌ಖುಷ್ ಆಗಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್: ನಟ ಶಿವಣ್ಣ ಭಾವನ್ಮಾತಕ ಮಾತು

     

    View this post on Instagram

     

    A post shared by Janhvi Kapoor (@janhvikapoor)

    ಇನ್ನು ಸಿನಿಮಾಗಳ ವಿಚಾರಕ್ಕೆ ಬರೋದಾದರೆ ನಟಿ ಜಾನ್ವಿ ಅಕೌಂಟ್‌ನಲ್ಲಿ `ಗುಡ್ ಲಕ್ ಜೆರ್ರಿ’, `ಮಿಲಿ’, `ಬವಾಲ್’, ಮತ್ತು `ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಚಿತ್ರಗಳು ಕೈಯಲ್ಲಿವೆ. ಜಾನ್ವಿ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.