Tag: DG&IGP

  • ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ಎಂ.ಎ ಸಲೀಂ ನೇಮಕ

    ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ಎಂ.ಎ ಸಲೀಂ ನೇಮಕ

    ಬೆಂಗಳೂರು: ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ (DG-IGP) ಐಪಿಎಸ್‌ ಅಧಿಕಾರಿ ಎಂ.ಎ ಸಲೀಂ (MA Saleem) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ (Karnataka Police) ಇಂದು (ಶನಿವಾರ) ಅಧಿಸೂಚನೆ ಹೊರಡಿಸಿದೆ.

    ಸಿಐಡಿಯ (CID) ಆರ್ಥಿಕ ಅಪರಾಧಗಳು ಹಾಗೂ ವಿಶೇಷ ಘಟಕ ವಿಭಾಗದ ಪೊಲೀಸ್ ನಿರ್ದೇಶಕರಾಗಿದ್ದ ಸಲೀಂ ಅವರನ್ನು ಸರ್ಕಾರ ಮೇ 21ರಂದು ಪ್ರಭಾರ ಡಿಜಿ-ಐಜಿಪಿ ಆಗಿ ನೇಮಕ ಮಾಡಲಾಗಿತ್ತು. ಇದನ್ನೂ ಓದಿ: ಎಂಸಿಸಿ ಫಲಿತಾಂಶದ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಕೌನ್ಸೆಲಿಂಗ್ – ಕೆಇಎ

    ನಿವೃತ್ತ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರಿಂದ 43ನೇ ಡಿಜಿಪಿಯಾಗಿ ಸಲೀಂ ಅಧಿಕಾರ ಸ್ವೀಕರಿಸಿದ್ದರು. ಇದನ್ನೂ ಓದಿ: ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

  • ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು

    ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು

    ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ (Rajath Kishan) ಅನ್ನು ಕೊಲೆ ಮಾಡುವುದಾಗಿ ಪತ್ನಿ ಅಕ್ಷಿತಾಗೆ ಕೊಲೆ ಬೆದರಿಕೆ ಸಂದೇಶ ಬಂದ ಹಿನ್ನೆಲೆ ರಜತ್ ಡಿಜಿಐಜಿಪಿಗೆ (DGIGP) ದೂರು ನೀಡಿದ್ದಾರೆ.

    ಧರ್ಮಸ್ಥಳದಲ್ಲಿ (Dharmasthala) ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದ ವೇಳೆ ರಜತ್ ಕಿಶನ್ ಸ್ಥಳದಲ್ಲಿದ್ದರು. ಈ ಹಿನ್ನೆಲೆ ರಜತ್ ಪತ್ನಿ ಅಕ್ಷಿತಾಗೆ ಕೆಲವು ಕಿಡಿಗೇಡಿಗಳು ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಜತ್, ನನ್ನ ಪತ್ನಿ ಅಕ್ಷಿತಾಗೆ, ಕೊಲೆ ಮಾಡ್ತೀವಿ ಅಂಥ ಬೆದರಿಕೆ ಸಂದೇಶ ಬಂದಿತ್ತು. ಇದು ಬಹಳ ಕೆಟ್ಟದ್ದು. ನಾವು ಯಾವುದೇ ಜಾತಿ, ಧರ್ಮ ಜಾಗ ದೇವಸ್ಥಾನ ಬಗ್ಗೆ ಮಾತಾಡಿಲ್ಲ. ನಾವು ಹೋಗಿದ್ದು ಸೌಜನ್ಯ ಪರ ನ್ಯಾಯಕ್ಕಾಗಿ. ಕತ್ತರಿಸ್ತೀನಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ಸಾವು

    ಹಾಡಹಗಲೇ ನಮ್ಮ ಕಣ್ಣಮುಂದೆನೇ ಎಲ್ಲ ನಡೆದಿದ್ದು. ಹಲ್ಲೆ ಮಾಡಿದವರ ಮೇಲೆ ದೂರು ಕೊಟ್ಟಿದ್ದೇನೆ. ನನ್ನ ಪತ್ನಿಗೆ ಬೆದರಿಕೆ ಸಂದೇಶ ಹಾಕಿದವರ ವಿರುದ್ಧವೂ ದೂರು ಕೊಟ್ಟಿದ್ದೇವೆ. ನಾವು ಕೊಟ್ಟ ದೂರು ಸೈಬರ್ ಠಾಣೆಗೆ ವರ್ಗಾವಣೆ ಆಗಿದೆ. ಕರಾವಳಿ, ಮಂಡ್ಯ ಅಂತೆಲ್ಲ ಹೇಳುತ್ತಿದ್ದಾರೆ. ನಾವು ಮಂಡ್ಯದವರನ್ನ ಕರ್ಕೊಂಡು ಬರುತ್ತೇವೆ ಎಂದು ಹೇಳಿಲ್ಲ. ಬೆದರಿಕೆಗಳಿಗೆ ನಾವು ಹೆದರಲ್ಲ ಎಂದರು. ಇದನ್ನೂ ಓದಿ: ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ: ಪಿ.ಸಿ ಮೋಹನ್

    ಬಳಿಕ ಮಾತನಾಡಿದ ರಜತ್ ಪತ್ನಿ ಅಕ್ಷಿತಾ, ಸೋಷಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ಮೆಸೇಜ್ ಹಾಕಿದ್ದಾರೆ. ನಿನ್ನ ಗಂಡನನ್ನ ವಾಪಸ್ ಕರೆಸಿಕೋ. ಕರಾವಳಿ ಬೇರೆ ಥರ, ಮಂಡ್ಯ ಅಲ್ಲ ಅಂತೆಲ್ಲ ಹಾಕಿದ್ದಾರೆ. ನಾವು ಹುಟ್ಟಿ ಬೆಳೆದಿದ್ದು ಮಂಡ್ಯ. ನಾವು ದೂರು ಕೊಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಉದ್ವಿಗ್ನತೆ – 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರತ್ಯೇಕ FIR ದಾಖಲು

  • ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಬೆಂಗಳೂರು: ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘಿಸಿ ಸುಖಾ ಸುಮ್ಮನೆ ದ್ವಿಚಕ್ರ ವಾಹನಗಳನ್ನು ತಡೆಹಿಡಿಯುತ್ತಿದ್ದ ಹೆಚ್.ಎಸ್.ಆರ್ ಟ್ರಾಫಿಕ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ ಅನ್ನು ಅಮಾನತು ಮಾಡಲಾಗಿದೆ.

    ಸಂಚಾರ ನಿಯಮ ಉಲ್ಲಂಘಿಸಿ ಬೆಳ್ಳಂದೂರು `eco space’ (ಇಕೋ ಸ್ಪೇಸ್) ಬಳಿ ಸುಖಾ ಸುಮ್ಮನೆ ದ್ವಿಚಕ್ರ ವಾಹನ ತಡೆಯುತ್ತಿದ್ದರು. ಈ ಕುರಿತು ಸಾರ್ವಜನಿಕರು ಟ್ವೀಟ್ ಮೂಲಕ ಡಿಜಿಪಿ ಪ್ರವಿಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಪೂರ್ವ ವಿಭಾಗ ಡಿಸಿಪಿ ಕಲಾ ಕೃಷ್ಣಸ್ವಾಮಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    ತನಿಖೆ ವೇಳೆ ಕಾನ್ಸ್‌ಟೇಬಲ್‌ ಸುಖಾ ಸುಮ್ಮನೆ ವಾಹನ ತಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಪೊಲೀಸರು ಕರ್ತವ್ಯ ವೇಳೆ ಬಾಂಡಿ ವೋರ್ನ್ ಕ್ಯಾಮೆರಾ ಆನ್ ಮಾಡಿಕೊಂಡು ಕೆಲಸ ಮಾಡಬೇಕು. ಆದರೆ ಟ್ರಾಫಿಕ್ ಕಾನ್ಸ್‌ಟೇಬಲ್‌ ಬಾಂಡಿ ವೋರ್ನ್ ಕ್ಯಾಮರಾ ರೆರ್ಕಾಡಿಂಗ್‌ನ ಆನ್ ಮಾಡದೇ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಬಗ್ಗೆ ತನಿಖಾ ವರದಿ ನೀಡಿದ ಬಳಿಕ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಕಾನ್ಸ್‌ಟೇಬಲ್‌ ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಖಾದ್ಯ ತೈಲ ಬೆಲೆ 30 ರೂ. ಭಾರೀ ಇಳಿಕೆ

    ಅಲ್ಲದೆ ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘನೆ ಮಾಡಿದ ಕಾನ್ಸ್‌ಟೇಬಲ್‌ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನೂತನ ಡಿಜಿ & ಐಜಿ ನೇಮಕ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ

    ನೂತನ ಡಿಜಿ & ಐಜಿ ನೇಮಕ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕಕ್ಕೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಹಾಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು 2020ರ ಜನವರಿ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಡಿಜಿ ನೇಮಕಕ್ಕೆ ಸರ್ಕಾರ ಪ್ರಕ್ರಿಯೆ ನಡೆಸಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೇತೃತ್ವದಲ್ಲಿ ನಿನ್ನೆ ಉನ್ನತಾಧಿಕಾರಿಗಳ ಸಭೆ ನಡೆಯಿತು. 1983ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ನೀಲಮಣಿ ರಾಜು ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ನಿಯಮದಂತೆ ಸರ್ಕಾರ ಹಿರಿತನಕ್ಕೆ ಆದ್ಯತೆ ನೀಡಬೇಕಿದ್ದು, ಉನ್ನತಾಧಿಕಾರ ಸಮಿತಿ ಅರ್ಹರಾಗಿರುವ 3 ಹಿರಿಯ ಅಧಿಕಾರಿಗಳ ಹೆಸರುಗಳಿರುವ ಪ್ಯಾನಲ್ ಅನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕು. ಈ ಅಧಿಕಾರಿಗಳ ಸೇವಾ ಹಿರಿತನ ಮತ್ತು ಕಾರ್ಯಕ್ಷಮತೆ ಬಗ್ಗೆ ಕೇಂದ್ರ ಸರ್ಕಾರಕ್ಕೇನಾದ್ರೂ ಆಕ್ಷೇಪಗಳಿದ್ದರೆ ವರದಿ ನೀಡುತ್ತದೆ. ವರದಿ ಬಳಿಕ ರಾಜ್ಯ ಸರ್ಕಾರ ಮೂವರ ಪೈಕಿ ಯಾರನ್ನಾದ್ರೂ ಆಯ್ಕೆ ಮಾಡಕೊಳ್ಳಬಹುದು. ಈ ನೇಮಕ ಮತ್ತು ಆಯ್ಕೆ ರಾಜ್ಯ ಸರ್ಕಾರದ ವಿವೇಚನಾಧಿಕಾರವಾದ್ರೂ ಈ ನಿಯಮಗಳನ್ನು ಪಾಲಿಸಲೇಬೇಕು.

    ನಿನ್ನೆ ನಡೆದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ 3 ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. 1985ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಎಡಿಜಿಪಿ ಎ.ಎಂ.ಪ್ರಸಾದ್, 1986 ಬ್ಯಾಚ್‍ನ ಅಧಿಕಾರಿಗಳಾಗಿರುವ ಎಡಿಜಿಪಿಗಳಾದ ಪ್ರವೀಣ್ ಸೂದ್ ಮತ್ತು ಪಿ.ಕೆ.ಗರ್ಗ್ ಇವರುಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

    ಎ.ಎಂ. ಪ್ರಸಾದ್ ಅವರಿಗೆ 2020ರ ಅಕ್ಟೋಬರ್ ತಿಂಗಳವರೆಗೆ ಸೇವೆಗೆ ಅವಕಾಶವಿದ್ದು, ಬಹುತೇಕ ಪ್ರಸಾದ್ ಅವರೇ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗುವುದು ಖಚಿತ. ನಂತರದ ಅವಕಾಶವಿರುವ ಪ್ರವೀಣ್ ಸೂದ್ ಅವರಿಗೆ 2024ರ ಮೇ ತಿಂಗಳವರೆಗೂ ಸೇವಾವಧಿ ಇದೆ. ಪಿ.ಕೆ.ಗರ್ಗ್ ಅವರಿಗೆ 2021ರ ಏಪ್ರಿಲ್‍ವರೆಗೆ ಅವಕಾಶವಿದೆ. ಹೀಗಾಗಿ ಸೇವಾ ಹಿರಿತನ ಪರಿಗಣಿಸಿ ಎ.ಎಂ.ಪ್ರಸಾದ್ ಅವರಿಗೆ ಡಿಜಿ ಹುದ್ದೆ ಲಭಿಸುವ ಸಾಧ್ಯತೆ ಇದೆ. ಜನವರಿ ಅಂತ್ಯಕ್ಕೆ ನೂತನ ಡಿಜಿ ನೇಮಕ ಆದೇಶ ಹೊರಬೀಳಲಿದೆ.