Tag: DFO

  • ಬೆಳಗಾವಿಯಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಚಿರತೆ ಸೆರೆಗೆ 7 ಬೋನ್, 16 ಕ್ಯಾಮೆರಾ

    ಬೆಳಗಾವಿಯಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಚಿರತೆ ಸೆರೆಗೆ 7 ಬೋನ್, 16 ಕ್ಯಾಮೆರಾ

    ಬೆಳಗಾವಿ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅನುವಾದ ಕೃತಿ `ರುದ್ರಪ್ರಯಾಗದ ಭಯಾನಕ ನರಭಕ್ಷಕ’ದಲ್ಲಿ ಬರುವಂತೆ ಬೆಳಗಾವಿಯಲ್ಲೊಂದು ಚಿರತೆ ಕಳೆದ ನಾಲ್ಕು ದಿನಗಳಿಂದಲೂ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.

    ತೇಜಸ್ವಿ ಅವರ ಕೃತಿಯಲ್ಲಿ ಬರುವ ಈ ಚಿರತೆ ಹತ್ತಾರು ಜನರನ್ನು ಕೊಂದಿತ್ತು. ಇದರಿಂದ ಇಡೀ ರುದ್ರಪ್ರಯಾಗದ ಜನ ಸಂಜೆ 6 ಗಂಟೆಯ ನಂತರ ಹೊರಗೆ ಕಾಲಿಡುವುದಕ್ಕೂ ಹೆದರುತ್ತಿದ್ದರು. ಇದೀಗ ಅಂತಹದ್ದೇ ಒಂದು ಚಿರತೆ ಇಡೀ ಬೆಳಗಾವಿಯ ಜನರ ನಿದ್ದೆಗೆಡಿಸಿದೆ.

    ಈಗಾಗಲೇ ಇಲ್ಲಿನ ಅನೇಕ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದೀಗ ಇಲ್ಲಿನ ಗಾಲ್ಫ್ ಮೈದಾನದಲ್ಲಿ ಚಿರತೆ ಓಡಾಡಿರುವುದು ಅರಣ್ಯ ಇಲಾಖೆ ಅಳವಡಿಸಿರುವ ಟ್ರ‍್ಯಾಪಿಂಗ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಬೆಳಗಾವಿ ಡಿಎಫ್‌ಒ ಎಚ್.ಎಸ್.ಅಂಥೋನಿ ಚಿರತೆಯ ಚಲನವಲನಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: 40 ಪರ್ಸೆಂಟ್‌ ಸರ್ಕಾರದಲ್ಲಿ 3ನೇ ಸಿಎಂ ಸೀಟು ಹತ್ತುವ ಕಾಲ ಬಂದಿದೆ: ಬೊಮ್ಮಾಯಿ ಕಾಲೆಳೆದ ಕಾಂಗ್ರೆಸ್‌

    ಕಳೆದ ಆಗಸ್ಟ್ 5ರಂದು ಬೆಳಗಾವಿಯ ಜಾಧವ್ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಕಟ್ಟಡ ಕಾರ್ಮಿಕ ಸಿದರಾಯಿ ಮೀರ್‌ಜಕರ್ ಮೇಲೆ ದಾಳಿ ಮಾಡಿ ನಾಪತ್ತೆಯಾಗಿತ್ತು. ಕಟ್ಟಡ ಕಾರ್ಮಿಕನ ಮೇಲಿನ ಚಿರತೆ ದಾಳಿಯ ಸುದ್ದಿಯನ್ನು ಕೇಳಿದ ಕಾರ್ಮಿಕನ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದಾದ ಬಳಿಕ ಚಿರತೆ ಗಾಲ್ಫ್ ಮೈದಾನದಲ್ಲಿ ಪ್ರತ್ಯಕ್ಷ ಆಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಜಂಟಿಯ 50ಕ್ಕೂ ಹೆಚ್ಚು ಸಿಬ್ಬಂದಿ 7 ಬೋನು ಇರಿಸಿ, ಕ್ಯಾಮೆರಾ ಅಳವಡಿಸಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಗಾಲ್ಫ್ ಮೈದಾನದ ಒಂದು ಕಿ.ಮೀ. ವ್ಯಾಪ್ತಿಯ ಸರ್ಕಾರಿ, ಖಾಸಗಿ ಶಾಲೆಗಳಿಗೆ ಡಿಡಿಪಿಐ ಮೌಖಿಕ ಆದೇಶದನ್ವಯ ಬೆಳಗಾವಿ ನಗರ ಬಿಇಒ ರಜೆ ಘೋಷಿಸಿದ್ದಾರೆ. ಜಾಧವ ನಗರ, ಹನುಮಾನ ನಗರ, ಕುವೆಂಪು ನಗರ, ಸಹ್ಯಾದ್ರಿ ನಗರ ಕ್ಲಬ್ ರಸ್ತೆ, ಕ್ಯಾಂಪ್ ಪ್ರದೇಶದಲ್ಲಿರುವ ಶಾಲೆಗಳಿಗೆ ರಜೆ ನೀಡಲಾಗಿದೆ.

    ಗಾಲ್ಫ್ ಮೈದಾನ ಬಳಿ ರಕ್ಷಣಾ ಇಲಾಖೆಗೆ ಸೇರಿದ 250 ಎಕರೆ ಪ್ರದೇಶದ ಅರಣ್ಯದಲ್ಲಿ ಚಿರತೆ ಮರೆಯಾಗಿದ್ದು ಚಿರತೆ ಸೆರೆಗೆ ಗಾಲ್ಫ್ ಮೈದಾನದ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು 7 ಬೋನು, 16 ಟ್ರ‍್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇದರ ಜೊತೆಗೆ ಗದಗ, ದಾಂಡೇಲಿ, ಭೀಮಗಡ ಅರಣ್ಯ ವಲಯದ ತಜ್ಞ ಸಿಬ್ಬಂದಿಗಳನ್ನು ಕರೆಯಿಸಿ ಶೋಧ ನಡೆಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಡಿಎಫ್‌ಒ ಎಚ್.ಎಸ್.ಅಂಥೋನಿ ಪ್ರತಿಕ್ರಿಯೆ ನೀಡಿದ್ದು, ಅರಣ್ಯ ಇಲಾಖೆಯ ಟ್ರ‍್ಯಾಪ್ ಕ್ಯಾಮೆರಾದಲ್ಲಿ ಕಳೆದ ರಾತ್ರಿ ಚಿರತೆ ಸೆರೆಯಾಗಿದೆ. ಗಾಲ್ಫ್ ಮೈದಾನದ ಪ್ರದೇಶದ ಒಳಗಡೆಯೇ ಓಡ್ಡಾಡುತ್ತಿದೆ. ಚಿರತೆ ಸೆರೆ ಕಾರ್ಯಾಚರಣೆ ಮುಗಿಯುವವರೆಗೂ ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಸಹಕರಿಸಬೇಕು. ಗಾಲ್ಫ್ ಮೈದಾನ ಬಳಿ ವಾಯುವಿಹಾರಿಗಳು ಸೇರಿದಂತೆ ಸಾರ್ವಜನಿಕರು ಈ ಭಾಗದಲ್ಲಿ ಓಡಾಡದಂತೆ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಭೀತಿಯ ನಡುವೆಯೂ ಮರಕಳ್ಳತನ – ಕಳ್ಳರಿಗೆ ಲಾಠಿ ಏಟು

    ಕೊರೊನಾ ಭೀತಿಯ ನಡುವೆಯೂ ಮರಕಳ್ಳತನ – ಕಳ್ಳರಿಗೆ ಲಾಠಿ ಏಟು

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಗೆ ಈಡಿ ರಾಷ್ಟ್ರವೇ ತತ್ತರಿಸಿ ಹೋಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ತಡೆಗಟ್ಟಲು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪ್ರಧಾನಿ ಅವರ ಈ ಆದೇಶವನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು, ಲಾಕ್‍ಡೌನ್ ಇದೆ ಎಂದು ಕಾಡಿನತ್ತ ಯಾರೂ ಸಹ ತಲೆ ಹಾಕುವುದಿಲ್ಲ. ಇದೇ ಸಮಯದಲ್ಲಿ ಬೆಲೆ ಬಾಳುವ ಮರಗಳಿಗೆ ಕೊಡಲಿ ಹಾಕಿ ಮರಗಳ್ಳತನಕ್ಕೆ ಪ್ರಯತ್ನಿಸಿರುವ ಘಟನೆ ಶಿವಮೊಗ್ಗದ ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಈ ವೇಳೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ಅರಣ್ಯ ರಕ್ಷಕನ ಮೇಲೆ ಮರಗಳ್ಳರಾದ ರಾಜೇಂದ್ರ, ಮುರುಗೇಶ, ವಿರೇಂದ್ರ ಹಾಗೂ ಬಲರಾಮ್ ಸೇರಿ ಹಲ್ಲೆಗೆ ಮುಂದಾಗಿದ್ದಾರೆ. ಈ ಖದೀಮರು ಲಕ್ಷಾಂತರ ರೂ. ಬೆಲೆ ಬಾಳುವ ಮರಗಳಾದ ಸಾಗುವಾನಿ, ಬೀಟೆ ಸೇರಿದಂತೆ ಇತರೆ ಮರಗಳನ್ನು ಕಳ್ಳತನ ಮಾಡಿ ಶಿವಮೊಗ್ಗ ಮೂಲದ ಹಬೀಬ್ ಎಂಬುವನಿಗೆ ಮಾರಾಟಕ್ಕೆ ಯತ್ನಿಸಿದ್ದರು.

    ಸದ್ಯ ಮೂವರು ಮರಗಳ್ಳರನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ಬಂಧಿತರನ್ನು ಶಿವಮೊಗ್ಗ ವನ್ಯಜೀವಿ ವಲಯದ ಡಿಎಫ್‍ಒ ನಾಗರಾಜ್ ಮುಂದೆ ನಿಲ್ಲಿಸಿದ್ದಾರೆ. ಡಿಎಫ್‍ಒ ನಾಗರಾಜ್ ಮರಗಳ್ಳರಿಗೆ ಕರ್ಫ್ಯೂ ಇದ್ದರೂ ಮನೆಯಿಂದ ಹೊರ ಬಂದು ಮರಗಳ್ಳತನ ಮಾಡುತ್ತೀರಾ ಎಂದು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂವರಿಗೂ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊರ್ವ ಪರಾರಿಯಾಗಿದ್ದು, ಆತನ ಪತ್ತೆಗೂ ಬಲೆ ಬೀಸಿದ್ದಾರೆ.