Tag: Devyan Photo

  • 6 ತಿಂಗಳ ಬಳಿಕ ಮಗನನ್ನು ಪರಿಚಯಿಸಿದ ಶ್ರೇಯಾ ಘೋಷಾಲ್

    6 ತಿಂಗಳ ಬಳಿಕ ಮಗನನ್ನು ಪರಿಚಯಿಸಿದ ಶ್ರೇಯಾ ಘೋಷಾಲ್

    ಮುಂಬೈ: ಬಾಲಿವುಡ್ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ 6 ತಿಂಗಳ ಬಳಿಕ ತಮ್ಮ ಮುದ್ದಿನ ಮಗ ದೇವ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

    ತಮ್ಮ ಮಧುರವಾದ ಕಂಠದಿಂದಲೇ ಎಲ್ಲರ ಮನ ಗೆದ್ದಿರುವ ಶ್ರೇಯಾ ಘೋಷಲ್ ಪುತ್ರ ದೇವ್‍ಯಾನ್‍ಗೆ 5 ತಿಂಗಳು ತುಂಬಿದ್ದು 6ನೇ ತಿಂಗಳಿಗೆ ಕಾಲಿಟ್ಟಿದ್ದಾನೆ. ಈ ಹಿನ್ನೆಲೆ ಶ್ರೇಯಾ ಘೋಷಾಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗನ ಕ್ಯೂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಶ್ರೇಯಾ ದೇವ್‍ಯಾನ್ ತೋಳಿನಲ್ಲಿ ಎತ್ತಿಕೊಂಡಿದ್ದರೆ, ದೇವ್ಯಾನ್ ಕ್ಯೂಟ್ ಆಗಿ ಸ್ಮೈಲ್ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾನೆ. ಇದನ್ನೂ ಓದಿ: ಮದುವೆ ಫೋಟೋ ಜೊತೆಗೆ ಭಾವನಾತ್ಮಕ ಸಾಲು ಬರೆದು ಶೇರ್ ಮಾಡಿ ಶಿಲ್ಪಾ ಶೆಟ್ಟಿ

    Shreya Ghoshal

    ಫೋಟೋ ಜೊತೆಗೆ, ಎಲ್ಲರಿಗೂ ಹಾಯ್, ನಾನು ದೇವ್‍ಯಾನ್, ನನಗೀಗ 6 ತಿಂಗಳು. ಪ್ರಸ್ತುತ ನನ್ನ ಸುತ್ತಲಿರುವ ಪ್ರಪಂಚವನ್ನು ಅನ್ವೇಷಿಸುವಲ್ಲಿ ನಾನು ಬ್ಯುಸಿಯಾಗಿದ್ದೇನೆ. ನನ್ನ ನೆಚ್ಚಿನ ಹಾಡಗಳನ್ನು ಕೇಳುತ್ತಿದ್ದೇನೆ, ಎಲ್ಲಾ ರೀತಿಯ ಚಿತ್ರಗಳಿರುವ ಪುಸ್ತಕಗಳನ್ನು ಓದುತ್ತಿದ್ದೇನೆ. ಸಿಲ್ಲಿ ಜೋಕ್‍ಗಳಿಗೆ ಜೋರಾಗಿ ನಗುತ್ತಿರುತ್ತೇನೆ ಮತ್ತು ನನ್ನ ತಾಯಿಯೊಂದಿಗೆ ಸಂಭಾಷಣೆ ನಡೆಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕಾಗಿ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಮಗನ ಪರವಾಗಿ ಶ್ರೇಯಾ ಘೋಷಾಲ್ ಬರೆದುಕೊಂಡಿದ್ದಾರೆ.

    ಶ್ರೇಯಾ ಘೋಷಾಲ್ ಉದ್ಯಮಿ ಶೀಲಾದಿತ್ಯ ಮುಖೋಪಾಧ್ಯಯ ಜೊತೆ ಆರು ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು. ಇದೀಗ 2021ರ ಮೇ ತಿಂಗಳಿಗೆ ಶ್ರೇಯಾ ಘೋಷಾಲ್ ಅವರಿಗೆ ದೇವ್ಯಾನ್ ಜನಿಸಿದ. ಇದನ್ನೂ ಓದಿ: ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲೊಂದು ಮರ್ಡರ್ ಮಿಸ್ಟ್ರಿ ಕಥೆ ಹೇಳ ಹೊರಟ ಗುರುರಾಜ್ ಕುಲಕರ್ಣಿ

     

    View this post on Instagram

     

    A post shared by shreyaghoshal (@shreyaghoshal)

    ಪ್ಯಾರಿಸ್ ಪ್ರಣಯ ಸಿನಿಮಾದ ಮೂಲಕ ಶ್ರೇಯಾ ಘೋಷಾಲ್ ಕನ್ನಡ ಸಿನಿಪ್ರಿಯರಿಗೆ ಪರಿಚಯವಾದರು. ಮುಂಗಾರು ಮಳೆ ಸೇರಿದಂತೆ ಇಲ್ಲಿಯವರೆಗೂ ಕನ್ನಡದ ಹಲವಾರು ಸಿನಿಮಾದಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದು, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳಲ್ಲೂ ಹಾಡು ಹಾಡಿದ್ದಾರೆ.