Tag: Devraj

  • ‘SCAM (1770)’  ಚಿತ್ರದ ಟೀಸರ್  ರಿಲೀಸ್ ಮಾಡಿದ ದತ್ತಣ್ಣ

    ‘SCAM (1770)’ ಚಿತ್ರದ ಟೀಸರ್ ರಿಲೀಸ್ ಮಾಡಿದ ದತ್ತಣ್ಣ

    ಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು ಕುರಿತಾದ   ‘SCAM (1770)’ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಹಿರಿಯ ನಟ ದತ್ತಣ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

    ನಮ್ಮ‌ ಕಾಲದ ಶಿಕ್ಷಣ ವ್ಯವಸ್ಥೆಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗ 92 ಅಂಕ ಪಡೆದರೆ ಅವರೆ ಮೊದಲು. ಈಗ 99 ಬಂದರೂ ಸಾಕಾಗುವುದಿಲ್ಲ ಎನ್ನುತ್ತಾರೆ. ಶಿಕ್ಷಣದ ವ್ಯವಸ್ಥೆಯಲ್ಲಿ ನಡೆಯುತ್ತಿರುವ scam ಬಗ್ಗೆ ಈ ಚಿತ್ರ ಬರುತ್ತಿದೆ‌ .  ಚಿತ್ರ ಯಶಸ್ವಿಯಾಗಲಿ ಎಂದು ದತ್ತಣ್ಣ (Duttanna) ಹಾರೈಸಿದರು. ಇದನ್ನೂ ಓದಿ:ಬಿರುಕಿನ ಸಂಬಂಧಕ್ಕೆ ‘ಮಾವು-ಬೇವು’ ಸಿನಿಮಾ ಅಮೃತ ದಾರ

    ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಿದು. ನಾನು ಕೂಡ ಶಿಕ್ಷಣ ವ್ಯವಸ್ಥೆ ಕುರಿತಾದ ಎಷ್ಟೋ ಕೇಸ್ ಗಳನ್ನು ತೆಗೆದುಕೊಂಡಿದ್ದೇನೆ. ನಾವಿಬ್ಬರು ಸೇರಿ ಬರೆದ ಕಥೆ ನಿರ್ಮಾಪಕರಿಗೆ ಇಷ್ಟವಾಯಿತು ಎಂದು ಇಂದು ನಟೇಶ್(ವೈದ್ಯೆ) ಹಾಗೂ ನೇತ್ರಾವತಿ (ಅಡ್ವೊಕೇಟ್)ತಿಳಿಸಿದರು.

    ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ SCAM (1770). ಯಾವ ಅಭ್ಯಾಸ ತಪ್ಪಿದರೂ ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದ್ದರೆ ಬದುಕುವುದು ಕಷ್ಟ. ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಶಿಕ್ಷಣಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಿದು. ಟೀಸರ್ ಬಿಡುಗಡೆ ಮಾಡಿಕೊಟ್ಟ ದತ್ತಣ್ಣ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ  ಎಂದರು ನಿರ್ದೇಶಕ (Vikas Pushpagiri) ವಿಕಾಸ್ ಪುಷ್ಪಗಿರಿ.

    ಡಿ.ಕ್ರಿಯೇಷನ್ಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡಿರುವ ದೇವರಾಜ್ (Devraj) ಅವರು ಚಿತ್ರದ ಬಗ್ಗೆ ಮಾತನಾಡಿದರು.  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಚಿತ್ರ ಖ್ಯಾತಿಯ ರಂಜನ್  ನಿಶ್ಚಿತ, ಹರಿಣಿ, ನಾರಾಯಣಸ್ವಾಮಿ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ನಿರ್ದೇಶಕರ ಜೊತೆಗೂಡಿ ಚಿತ್ರಕಥೆ ಬರೆಯುತ್ತಿರುವ ಶಂಕರ್ ರಾಮನ್ ಮುಂತಾದ ಚಿತ್ರತಂಡದ ಸದಸ್ಯರು  ಚಿತ್ರದ ಕುರಿತು ಮಾಹಿತಿ ನೀಡಿದರು.

  • ನಟ ದೇವರಾಜ್ ಕಿರಿಯ ಪುತ್ರನ ‘ವೈರಂ’ ಚಿತ್ರದ ಟೀಸರ್ ರಿಲೀಸ್

    ನಟ ದೇವರಾಜ್ ಕಿರಿಯ ಪುತ್ರನ ‘ವೈರಂ’ ಚಿತ್ರದ ಟೀಸರ್ ರಿಲೀಸ್

    ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ (Pranam) ದೇವರಾಜ್ ಅಭಿನಯದ ವೈರಂ (Vairam) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಗಿದೆ.  ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ (Ragini Prajwal) ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಅವರು ಮಾತನಾಡುತ್ತಾ,  ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ  ಸಮಯದಲ್ಲಿ ನನ್ನ ಮಗನ 2ನೇ  ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್  ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.

    ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ.. ಹಿಂದಿನ  ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೇನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ. ಡಿ.ಓ.ಪಿ. ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡರಾಮ್ ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ತು. ಶಂಕರ್ ಅಶ್ವಥ್ ಹಾಗೂ ವೀಣಾಸುಂದರ್ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಎಂಜಾಯ್ ಮಾಡುವಂಥ ೪ ಹಾಡುಗಳಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ ಎಂದು ನಾಯಕ ಪ್ರಣಾಮ್ ದೇವರಾಜ್ ತಿಳಿಸಿದರು.  ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಚಿತ್ರದ ನಾಯಕಿ ಮೋನಾಲ್ ಮಾತನಾಡುತ್ತ ಇದು ನನ್ನ ಮೊದಲ ಕನ್ನಡ ಚಿತ್ರ. ಒಬ್ಬ ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆ ಲವ್ ಸ್ಟೋರಿ ಚಿತ್ರದಲ್ಲಿದೆ ಎಂದರು.  ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್ ಮಾಡುತ್ತಾರೆಂಬ ನಂಬಿಕೆಯಿದೆ ಎಂದರು ಖಳನಾಯಕ ಗರುಡಾರಾಮ್.

     ಚಿತ್ರದಲ್ಲಿ ಹೀರೋ ಡೆಡಿಕೇಶನ್, ಇನ್ವಾಲ್ ಮೆಂಟ್ ತುಂಬಾ ಚೆನ್ನಾಗಿತ್ತು. ಆತ ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ನಿರ್ದೇಶಕ ಸಾಯಿಶಿವನ್,  ಪ್ರಣಾಮ್ ದೇವರಾಜ್ ಅವರನ್ನು ಹೊಗಳಿದರು. ನಿರ್ಮಾಪಕರಾದ ಜೆ.ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ಚಿತ್ರದ ಬಗ್ಗೆ ಮಾತನಾಡಿದರು. ಗೋಪಿನಾಥ್ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Special -‘ಬಾಟಲಿ ಆಯುವ ಹುಡುಗ’ನ ಬೆನ್ನಿಗೆ ನಿಂತ ನಟ ನೀನಾಸಂ ಸತೀಶ್, ದಯಾನಂದ್

    Special -‘ಬಾಟಲಿ ಆಯುವ ಹುಡುಗ’ನ ಬೆನ್ನಿಗೆ ನಿಂತ ನಟ ನೀನಾಸಂ ಸತೀಶ್, ದಯಾನಂದ್

    ನ್ನಡದ ಹೆಸರಾಂತ ನಟ ನೀನಾಸಂ ಸತೀಶ್ ಇದೀಗ ಅವರ ಹೊಸ ಸಿನಿಮಾ ‘ಅಶೋಕ ಬ್ಲೇಡ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದದ್ದು ಪ್ರತಿಭಾವಂತ ಬರಹಗಾರ ಟಿ.ಕೆ.ದಯಾನಂದ್. ತಮ್ಮ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ನಡೆದ ಘಟನೆಯೊಂದನ್ನು ದಯಾನಂದ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಬೀದಿಗೆ ಬಿದ್ದಿದ್ದ ಹುಡುಗನಿಗೆ ಹೊಸ ಬದುಕು ರೂಪಿಸುವಲ್ಲಿ ನಟ ಸತೀಶ್ ನೀನಾಸಂ ನೆರವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಓವರ್ ಟು ದಯಾನಂದ್..

    ಅಶೋಕ ಬ್ಲೇಡ್ ಶೂಟಿಂಗಲ್ಲಿದ್ದೆ.. ಒಬ್ಬ ಹುಚ್ಚನ ಥರ ಇರೋ ಹುಡುಗ ಖಾಲಿಬಾಟಲಿ ತುಂಬಿದ ಚೀಲವೊಂದನ್ನು ಹಿಡಿದು ಸಿನಿಮ ಸೆಟ್’ನಲ್ಲಿ ಓಡಾಡುತ್ತಿದ್ದ, ನಮ್ಮ ಅಸೋಸಿಯೇಟ್ ಡೈರೆಕ್ಟರ್ ಸುಹಾಸ್ ಸ್ಕ್ರಿಪ್ಟ್ ಹಿಡಿದು  ಏನೋ ಪ್ರಿಪೇರ್ ಆಗ್ತಿದ್ದ ವೇಳೆ ಈತ ಸುಹಾಸ್ ಪಕ್ಕ ನಿಂತು ಸ್ಕ್ರಿಪ್ಟನ್ನೇ ನೋಡ್ತಿದ್ದ.  ಕುತೂಹಲವಾಗಿ ಪಕ್ಕ ಕೂರಿಸಿಕೊಂಡು ಏನ ಮರಾಯ ವಯಸ್ಸುಡುಗ ಹಿಂಗಾಗಿದಿ? ಯಾವೂರು, ಅಪ್ಪ-ಅಮ್ಮ ಏನ್ಮಾಡ್ತರೆ? ಅಂದೆ. ಬಿಕ್ಕಲು ಶುರುಮಾಡಿದವನು ಒಂದೇ ಸಮ ಅಳತೊಡಗಿದ.

    ಅವನದೊಂದು ದಾರುಣ ಕಥೆ. ಈತ ಚಿತ್ರದುರ್ಗದ ಹೊಳಲ್ಕೆರೆಯವ.  ಅಪ್ಪ ಮರಳುಲೋಡ್ ಮಾಡುವಾಗ ಟ್ರಾಕ್ಟರ್ ಮಗುಚಿಬಿದ್ದು ತೀರಿದ್ದಾರೆ. ಮಾತು ಬಾರದ ತಾಯಿ ಇವನನ್ನು ಎದೆಯೆತ್ತರ ಸಾಕಿ ಆಕೆಯೂ ತೀರಿದ್ದಾರೆ. ನಂತರ ಈತ ನೋಡಿದ್ದು ಕ್ರೂರ ಸಮಾಜದ ಹತ್ತೆಂಟು ಮುಖಗಳು, ಸಂಬಂಧಗಳು ಯಾತನೆ ಕೊಡಲು ಶುರುವಾದಂತೆ ವೈರಾಗ್ಯ ಹುಟ್ಟಿದವನಂತೆ ಮನೆ ತೊರೆದು ಗರಗರ ಸುತ್ತುತ್ತಿದ್ದಾನೆ. ಹೊಟ್ಟೆಪಾಡಿಗೆ ಬಾಟಲಿ ಆಯುತ್ತಾನೆ, ಕೆಜಿಗೆ 20 ಸಿಗುತ್ತದೆ. ದಿನಕ್ಕೆ 150-200. ಊಟ ಮಾಡಿ ಟ್ರೈನು, ಗುಡಿ, ಫುಟ್’ಪಾತ್ ಎಲ್ಲೆಂದರಲ್ಲಿ ರಾತ್ರಿ ಕಳೆಯುತ್ತಾನೆ. ಇದನ್ನೂ ಓದಿ: ರಾಜಣ್ಣ ಮನೆಯ ಮಿಸ್ಟರ್ ಗರಗಸ ಎಂದು ಕಿಚ್ಚನ ಬಳಿ ದೂರಿಟ್ಟ ಮನೆಮಂದಿ

    ಆತ ಹೇಳಿಕೊಂಡ ವ್ಯಥೆಯೊಂದು ಇಲ್ಲಿ ಬರೆಯಲಾಗದಷ್ಟು ಬರ್ಬರವಾಗಿದೆ.‌ ಸಣ್ಣವಯಸ್ಸಿಗೇ ತಿನ್ನಬಾರದ ಏಟುಗಳನ್ನೆಲ್ಲ ತಿಂದು ಬಿಟ್ಟಿದೆ ಈ ಜೀವ. ಅಳುತ್ತಿದ್ದ ಅವನನ್ನು ಎಬ್ಬಿಸಿಕೊಂಡು ಬಟ್ಟೆ ಅಂಗಡಿಗೆ ಒಯ್ದು, ಅವನಿಗಿಷ್ಟವಾದ ಬಟ್ಟೆ ಕೊಡಿಸಿ, ಕಟಿಂಗ್ ಶೇವಿಂಗ್ ಮಾಡಿಸಿದರೆ ಮುದ್ದಾದ ಈ ಹೊಸ ದೇವರಾಜ ತಯಾರಾದ. ನಟ ಸತೀಶ್ ನೀನಾಸಂರಿಗೆ ಪರಿಚಯ ಮಾಡಿಸಿದೆ. ದಿನಬೆಳಗಾದರೆ ಎಲ್ಲರಿಂದ ದೂರ ಓಡಿಸಲ್ಪಡುತ್ತಿದ್ದ ಹುಡುಗ ಕಾನ್ಫಿಡೆಂಟಾಗಿ ಸತೀಶ್ ನೀನಾಸಂರ ಕೈಕುಲುಕಿ ಶೇಕ್ ಹ್ಯಾಂಡ್ ಕೊಟ್ಟ. ಸತೀಶ್’ರಿಗೆ ಎಲ್ಲ ವಿವರಿಸಿದೆ. ಈಗ ದೇವರಾಜನ ಬದುಕಿಗೊಂದು ವ್ಯವಸ್ಥೆಯಾಗುತ್ತಿದೆ. ಸತೀಶ್ ನೀನಾಸಂ, ದೇವರಾಜನ ಬೆನ್ನಿಗೆ ನಿಂತಿದ್ದಾರೆ. ಹೀಗೆ ಶೂಟಿಂಗ್ ನಡುವೆ ನಮ್ಮ ಒಂದು ದಿನ ಸಾರ್ಥಕವಾಯ್ತು.

    ಹೀಗೆ ದಯಾನಂದ ದಾರುಣ ಬದುಕಿನ ವ್ಯಥೆಯೊಂದನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅಲ್ಲದೇ, ಈ ಹುಡುಗನ ಊರಿನವರು ಯಾರಾದರೂ ಸಂಪರ್ಕಕ್ಕೆ ಬನ್ನಿ ಎಂದು ಅವರು ಕೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡೈನಾಮಿಕ್ ಸ್ಟಾರ್ ದೇವರಾಜ್ ಹುಟ್ಟುಹಬ್ಬವನ್ನು ವಿಶಿಷ್ಟ್ಯವಾಗಿ ಆಚರಿಸಿದ ‘ಉಸಿರೇ ಉಸಿರೇ’ ಟೀಮ್

    ಡೈನಾಮಿಕ್ ಸ್ಟಾರ್ ದೇವರಾಜ್ ಹುಟ್ಟುಹಬ್ಬವನ್ನು ವಿಶಿಷ್ಟ್ಯವಾಗಿ ಆಚರಿಸಿದ ‘ಉಸಿರೇ ಉಸಿರೇ’ ಟೀಮ್

    ಪ್ರದೀಪ್ ಯಾದವ್ ನಿರ್ಮಾಣದ “ಉಸಿರೇ ಉಸಿರೇ” (Usire Usire) ಚಿತ್ರದಲ್ಲಿ  ಡೈನಾಮಿಕ್ ಸ್ಟಾರ್ ದೇವರಾಜ್ (Devraj) ಅಭಿನಯಿಸುತ್ತಿದ್ದಾರೆ.  “ಉಸಿರೇ ಉಸಿರೇ” ಚಿತ್ರತಂಡದಿಂದ ದೇವರಾಜ್ ಅವರ ಹುಟ್ಟುಹಬ್ಬವನ್ನು (birthday) ಆಚರಿಸಲಾಯಿತು. ಇದೇ ಸಂದರ್ಭದಲ್ಲಿ “ಉಸಿರೇ ಉಸಿರೇ” ಚಿತ್ರದಲ್ಲಿನ ದೇವರಾಜ್ ರವರ ವಿಭಿನ್ನ ಪಾತ್ರದಲ್ಲಿನ ಪೋಸ್ಟರ್ ಮತ್ತು ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಯಿತು.

    “ಬಿಗ್ ಬಾಸ್” ಖ್ಯಾತಿಯ ರಾಜೀವ್ (Rajeev) ಈ ಚಿತ್ರದ ನಾಯಕ. ಶ್ರೀಜಿತ ನಾಯಕಿ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ,ಬ್ರಹ್ಮಾನಂದಮ್,ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಸಿ.ಎಂ.ವಿಜಯ್ (Vijay) ನಿರ್ದೇಶನದ ಈ ಚಿತ್ರಕ್ಕೆ  ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು.

    Live Tv
    [brid partner=56869869 player=32851 video=960834 autoplay=true]

  • ‘ಚಾಂಪಿಯನ್’ ಸಿನಿಮಾದ ಟ್ರೈಲರ್ ರಿಲೀಸ್ : ಚಿತ್ರ ತಂಡಕ್ಕೆ ಡೈನಾಮಿಕ್ ಸ್ಟಾರ್ ದೇವರಾಜ್ ಸಾಥ್

    ‘ಚಾಂಪಿಯನ್’ ಸಿನಿಮಾದ ಟ್ರೈಲರ್ ರಿಲೀಸ್ : ಚಿತ್ರ ತಂಡಕ್ಕೆ ಡೈನಾಮಿಕ್ ಸ್ಟಾರ್ ದೇವರಾಜ್ ಸಾಥ್

    ಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ (Aditi Prabhudev) ನಾಯಕ, ನಾಯಕಿಯಾಗಿ ನಟಿಸಿರುವ “ಚಾಂಪಿಯನ್” (Champion) ಚಿತ್ರದ ಟ್ರೇಲರ್ (Trailer)ಡೈನಾಮಿಕ್ ಸ್ಟಾರ್ ದೇವರಾಜ್ (Devraj) ಅವರಿಂದ ಇತ್ತೀಚಿಗೆ ಬಿಡುಗಡೆಯಾಯಿತು.‌ ಈ ಕುರಿತು ಚಿತ್ರತಂಡವು ಹಲವು ವಿಚಾರಗಳನ್ನು ಹಂಚಿಕೊಂಡಿದೆ. ನಾನು ಹದಿನಾಲ್ಕು ವರ್ಷಗಳ ಹಿಂದೆ ನನ್ನ ಸ್ನೇಹಿತ ಸಚಿನ್ ಧನಪಾಲ್ ಗೆ ಹೇಳಿದ್ದೆ.  ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾ ಹೀರೋ ಮಾಡುತ್ತೀನಿ ಎಂದು. ಈಗ ಆ ಮಾತು ನಿಜವಾಗಿದೆ. ಸಚಿನ್ ಧನಪಾಲ್ ನಾಯಕನಾಗಿ ನಟಿಸಿರುವ “ಚಾಂಪಿಯನ್” ಚಿತ್ರವನ್ನು ನಾನು ನಿರ್ಮಾಣ ಮಾಡಿದ್ದೀನಿ. ಚಿತ್ರ ಅಕ್ಟೋಬರ್ 14 ರಂದು ಬಿಡುಗಡೆಯಾಗಲಿದೆ. 2019 ರಲ್ಲಿ ಈ ಚಿತ್ರ ಆರಂಭವಾಯಿತು. ನಂತರ ಕೋವಿಡ್.. ಆನಂತರ ನಮ್ಮ ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ಅವರ ಹಠಾತ್ ನಿಧನ. ಈ ರೀತಿ ಹಲವು ಅಡೆತಡೆಗಳನ್ನು ದಾಟಿ ಈಗ ಚಿತ್ರ ಬಿಡುಗಡೆ ಹಂತ ತಲುಪಿದೆ‌. ಉತ್ತರ ಕರ್ನಾಟಕದ ನನ್ನ ಸ್ನೇಹಿತರು ತಮ್ಮದೇ ಚಿತ್ರ ಅನ್ನುವ ಹಾಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಹಾಗೂ ಸಚಿನ್ ಕುಟುಂಬದವರು ಸಾಕಷ್ಟು ಜನ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಮಿಯಲ್ಲಿ ನಮಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರ ಬೆಂಬಲ ಕೂಡ ನಮ್ಮಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಶಿವಾನಂದ ಎಸ್ ನೀಲಣ್ಣನವರ್.

    ನಾನು ಚಿತ್ರದಲ್ಲಿ ನಟಿಸುತ್ತೇನೆ ಎಂದು ಅಂದು ಕೊಂಡಿರಲಿಲ್ಲ. ಏಕೆಂದರೆ ನನ್ನ ತಂದೆ, ತಮ್ಮ ಎಲ್ಲಾ ಆರ್ಮಿಯಲ್ಲಿದ್ದಾರೆ. ನಾನು ಸಹ ಪರೀಕ್ಷೆ ಬರೆದಿದ್ದೆ. ಆದರೆ ಸೆಲೆಕ್ಟ್ ಆಗಲಿಲ್ಲ. ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದೆ. ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತ ಶಿವಾನಂದ, ಕೊಟ್ಟ ಮಾತಿನಂತೆ “ಚಾಂಪಿಯನ್” ಚಿತ್ರದ ಮೂಲಕ ನನ್ನನ್ನು ಹೀರೋ ಮಾಡಿದ್ದಾರೆ.  ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಸನ್ನಿಲಿಯೋನ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.  ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಸರ್ ಗೆ, ಸಮಾರಂಭಕ್ಕೆ ಆಗಮಿಸಿರುವ ಲಹರಿ ವೇಲು ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ಮುಂದಿನ ತಿಂಗಳ ಹದಿನಾಲ್ಕು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಪ್ರೋತ್ಸಾಹ ನೀಡಿ ಎಂದರು ನಾಯಕ ಸಚಿನ್ ಧನಪಾಲ್ (Sachin Dhanapal). ಇದನ್ನೂ ಓದಿ:ನಾಯಕಿ ರುಕ್ಮಿಣಿ ಜೊತೆ ಆಫ್ರಿಕಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್ ಗಣೇಶ್

    ನಾನು ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ ನಿರ್ದೇಶಕ ಶಾಹುರಾಜ್ ಶಿಂಧೆ. ಇಂದು ಅವರಿಲ್ಲದಿರುವುದು ತುಂಬಾ ದುಃಖದ ವಿಷಯ.  ಉತ್ತರ ಕರ್ನಾಟಕದ ನಿರ್ಮಾಪಕ ಶಿವಾನಂದ್ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಸ್ನೇಹಿತನಿಗಾಗಿ ಅವರು ಚಿತ್ರ ನಿರ್ಮಾಣ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ.  ಮೊದಲ ಚಿತ್ರದಲ್ಲೇ ಸಚಿನ್ ಚೆನ್ನಾಗಿ ನಟಿಸಿದ್ದಾರೆ. ನನ್ನ‌ ಪಾತ್ರ ಕೂಡ ಚೆನ್ನಾಗಿದೆ. ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕಿರಲಿ ಎಂದು ನಟಿ‌ ಅದಿತಿ ಪ್ರಭುದೇವ ತಿಳಿಸಿದರು. ನನ್ನ ಮನೆಗೆ ಶಿವಾನಂದ್ ಹಾಗೂ ಸಚಿನ್ ಅವರು ಬಂದಿದಾಗ ನಾನು, ನಿರ್ಮಾಪಕ ಹಾಗೂ ಹೀರೋ ಬಂದಿದ್ದಾರೆ ಅಂದು ಕೊಂಡಿದ್ದೆ. ಆನಂತರ ಇವರ ಸ್ನೇಹದ ಬಗ್ಗೆ ತಿಳಿದು ಆನಂದವಾಯಿತು. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು ನಟ ದೇವರಾಜ್.ಲಹರಿ ವೇಲು “ಚಾಂಪಿಯನ್” ಗೆ ಶುಭ ಕೋರಿದರು. ಛಾಯಾಗ್ರಾಹಕ ಸರವಣನ್ ನಟರಾಜನ್ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ ಚಿತ್ರದ ಬಗ್ಗೆ ‌ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]