Tag: devotional songs

  • ದೇಗುಲದಲ್ಲಿ ಸ್ಪೀಕರ್‌ ಬಳಸಿ ಭಕ್ತಿಗೀತೆ ಹಾಕಿದ್ದಕ್ಕೆ ಹಲ್ಲೆ ನಡೆಸಿ ವ್ಯಕ್ತಿ ಕೊಲೆ

    ದೇಗುಲದಲ್ಲಿ ಸ್ಪೀಕರ್‌ ಬಳಸಿ ಭಕ್ತಿಗೀತೆ ಹಾಕಿದ್ದಕ್ಕೆ ಹಲ್ಲೆ ನಡೆಸಿ ವ್ಯಕ್ತಿ ಕೊಲೆ

    ಗಾಂಧೀನಗರ: ದೇಗುಲದಲ್ಲಿ ಭಕ್ತಿಗೀತೆಗಳನ್ನು ಹಾಕಲು ಸ್ಪೀಕರ್‌ ಬಳಸಿದ್ದಕ್ಕಾಗಿ ವ್ಯಕ್ತಿಯನ್ನು ಗುಂಪೊಂದು ಹೊಡೆದು ಹತ್ಯೆ ಮಾಡಿರುವ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

    ಮೇ 3 ರಂದು ಜಿಲ್ಲೆಯ ಮುದರ್ದಾ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆರು ಆರೋಪಿಗಳ ಪೈಕಿ ಐವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಲಂಗ್ನಾಜ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಎಸ್‌.ಬಿ.ಚಾವ್ಡಾ ತಿಳಿಸಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ

    loudspeakers

    42 ವಯಸ್ಸಿನ ಜಸ್ವಂತ್‌ ಠಾಕೂರ್‌ ಎಂಬ ವ್ಯಕ್ತಿಯನ್ನು ಆರು ಮಂದಿ ಹೊಡೆದು ಹತ್ಯೆ ಮಾಡಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರು ಜನರಲ್ಲಿ ಐವರನ್ನು ನಾವು ಬಂಧಿಸಿದ್ದೇವೆ. ಠಾಕೂರ್ ಕುಟುಂಬವು ತಮ್ಮ ಮನೆಯೊಳಗಡೆಯೇ ಪುಟ್ಟದಾದ ದೇಗುಲವನ್ನು ನಿರ್ಮಿಸಿಕೊಂಡಿದ್ದರು. ಭಕ್ತಿಗೀತೆಗಳನ್ನು ಹಾಕಲು ಸ್ಪೀಕರ್‌ ಬಳಸುತ್ತಿದ್ದರು. ಇದೇ ವಿಚಾರಕ್ಕೆ ಠಾಕೂರ್‌ ಮತ್ತು ಆತನ ಸಹೋದರ ಅಜಿತ್‌ ವಿರುದ್ಧ ಗುಂಪೊಂದು ತಿರುಗಿಬಿದ್ದಿದೆ. ನಂತರ ಮಾತಿಗೆ ಮಾತು ಬೆಳೆದು, ಠಾಕೂರ್‌ ಮೇಲೆ ಕಲ್ಲುಗಳನ್ನು ತೂರಿದ್ದಾರೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: WHO ಡೇಟಾ, ಕಾಂಗ್ರೆಸ್ ಬೇಟಾ ಎರಡೂ ತಪ್ಪು: ಬಿಜೆಪಿ ಆರೋಪ

    ಮೇ 3ರ ಸಂಜೆ ಅಜಿತ್ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಭಕ್ತಿಗೀತೆಗಳನ್ನು ಹಾಕಿದ್ದ. ಈ ವೇಳೆ ಸ್ಪೀಕರ್‌ ಬಳಕೆಗೆ ವ್ಯಕ್ತಿಯೊಬ್ಬ ಆಕ್ಷೇಪ ವ್ಯಕ್ತಪಡಿಸಿದ್ದ. ಸ್ಪೀಕರ್‌ ಸೌಂಡ್‌ ಕಡಿಮೆ ಮಾಡಲಾಗಿದೆ ಎಂದು ಅಜಿತ್ ಹೇಳಿದ್ದಾನೆ. ಈ ವೇಳೆ ಜಯಂತಿ ಠಾಕೂರ್ ಮತ್ತು ವಿನು ಠಾಕೂರ್ ನೇತೃತ್ವದ ಗುಂಪೊಂದು ಜಸ್ವಂತ್‌ ಮತ್ತು ಅಜಿತ್‌ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಸಹೋದರರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಜಸ್ವಂತ್‌ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.