Tag: devotee

  • ಕೊಪ್ಪಳದಲ್ಲಿ ಕವೀಂದ್ರ ತೀರ್ಥರ ಪೂರ್ವಾರಾಧನೆ ಮಹೋತ್ಸವ

    ಕೊಪ್ಪಳದಲ್ಲಿ ಕವೀಂದ್ರ ತೀರ್ಥರ ಪೂರ್ವಾರಾಧನೆ ಮಹೋತ್ಸವ

    ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ನವಬೃಂದಾವನ ಗಡ್ಡೆಯಲ್ಲಿ ಮಂತ್ರಾಲಯದ ರಾಯರ ಮಠದ ವತಿಯಿಂದ ಕವೀಂದ್ರ ತೀರ್ಥರ ಪೂರ್ವಾರಾಧನೆ ಮಹೋತ್ಸವವನ್ನು (Kavindra Tirtha Preliminary Worship) ಆಚರಣೆ ಮಾಡಲಾಯಿತು.

    ಮಂತ್ರಾಲಯ ರಾಯರ ಮಠದ ಪೀಠಾಧಿಪತಿಗಳಾದ ಸುಬುದೇಂದ್ರ ಶ್ರೀಗಳ ನೇತೃತ್ವದಲ್ಲಿ ಕವೀಂದ್ರ ತೀರ್ಥರ ಪೂರ್ವಾರಾಧನೆಯನ್ನು ಹಮ್ಮಿಕೊಳ್ಳಲಾಗಿದೆ.

    ಕವೀಂದ್ರ ತೀರ್ಥರ ಪೂರ್ವಾರಾಧನೆಯ ಅಂಗವಾಗಿ ರಾಯರ ಮಠದ ಶ್ರೀಗಳು ನವಬೃಂದಾವನ ಗಡ್ಡೆಯಲ್ಲಿ ಮೂಲರಾಮ ದೇವರ ಪೂಜೆ, ಸಂಸ್ಥಾನ ಪೂಜೆಯನ್ನು ನಡೆಸಲಾಯಿತು. ನಂತರ ಕವೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ರೇಷ್ಮೆ ವಸ್ತುಗಳ ಅಲಂಕಾರ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

    ನಂತರ ಮಠದ ಪಂಡಿತರದಿಂದ ಪ್ರವಚನ ಕಾರ್ಯಕ್ರಮ ನಡೆಸಲಾಯಿತು. ಶ್ರೀಗಳಾದ ಸುಬುದೇಂದ್ರ ಶ್ರೀಗಳ ನೇತೃತ್ವದಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ, ಅನುಗ್ರಹ ಸಂದೇಶ, ಫಲ ಮಂತ್ರಾಕ್ಷಣೆ ವಿತರಣೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಗಳನ್ನು ನಡೆಸಿದರು. ಪೂರ್ವಾರಾಧನೆ ಮಹೋತ್ಸವಕ್ಕೆ ಸ್ಥಳೀಯ ಭಕ್ತರು ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿದರು.

  • ಯಡಿಯೂರು ಸಿದ್ದಲಿಂಗೇಶ್ವರ ಜಾತ್ರೆ ಸಂಪನ್ನ

    ಯಡಿಯೂರು ಸಿದ್ದಲಿಂಗೇಶ್ವರ ಜಾತ್ರೆ ಸಂಪನ್ನ

    ತುಮಕೂರು: ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ (Yediyur siddhalingeshwara Rathotsava) ಶನಿವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

    ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಸ್ವಾಮಿ ಗದ್ದುಗೆಗೆ ವಿಶೇಷ ಅಭಿಷೇಕ, ಅಲಂಕಾರ ಮತ್ತು ಪೂಜೆಗಳು ನಡೆಯಿತು. 12 ಗಂಟೆಗೆ ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ ಬಾಳೆಹೊನ್ನೂರು ಶಾಖಾಮಠದ ರೇಣುಕ ಶಿವಾಚಾರ್ಯ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಂದಿಧ್ವಜ ಪೂಜೆಯ ನಂತರ ಷಟ್‌ಸ್ಥಲ ಧ್ವಜ ಹರಾಜು ಪ್ರಕ್ರಿಯೆ ನಡೆದು ಮೈಸೂರಿನ ದೀಪಕ್ ಸದಾಶಿವಯ್ಯ ಪಡೆದುಕೊಂಡರು.

    ಸಿದ್ಧಲಿಂಗೇಶ್ವರ ಸ್ವಾಮಿ ನಿರ್ವಿಕಲ್ಪ ಸಮಾಧಿಯಾದ ಅಭಿಜಿನ್ ಮುಹೂರ್ತದಲ್ಲಿ ರಥಬೀದಿಯಲ್ಲಿ ರಥೋತ್ಸವ ಪ್ರಾರಂಭವಾಗಿದ್ದು, ಸಾವಿರಾರು ಭಕ್ತರು ತೇರು ಎಳೆದು ಸಂಭ್ರಮಿಸಿದರು. ಧವನ, ಬಾಳೆಹಣ್ಣು ಮತ್ತು ಕರಿಮೆಣಸನ್ನು ರಥಕ್ಕೆ ತೂರಿ ಹರಕೆ ಸಮರ್ಪಿಸಿದರು. ಇದನ್ನೂ ಓದಿ: ವಕ್ಫ್ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆ ಮನೆ ಕಟ್ಟಿಸ್ತೇವೆ – ಸಿಎಂ ಯೋಗಿ

    ಬಿಸಿಲಿನ ಝಳ ಹೆಚ್ಚಾಗಿದ್ದರೂ, ಅಸಂಖ್ಯಾತ ಭಕ್ತರ ದಾಹ ಮತ್ತು ಹಸಿವು ತಣಿಸಲು ದೇವಾಲಯ ಸಿಬ್ಬಂದಿ, ದಾಸೋಹ ಮಹಾಮನೆ ಸೇರಿದಂತೆ ನೂರಾರು ಕಡೆ ಅರವಂಟಿಕೆ ನಡೆಸಲಾಗಿತ್ತು. ನೀರುಮಜ್ಜಿಗೆ, ಪಾನಕ, ಹೆಸರುಬೇಳೆ ಕೊಸಂಬರಿ, ವಿವಿಧ ಬಗೆಯ ಭಕ್ಯಗಳನ್ನು ವಿತರಿಸಿದರು. ಇದನ್ನೂ ಓದಿ: L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

  • ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

    ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

    ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂಧೀಶ್ವರನ ಶ್ರೀ ಭೋಗ ನಂದೀಶ್ವರ ದೇವಾಲಯಕ್ಕೆ (Bhoga Nandishwara Gudi) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹುರುಳಗುರ್ಕಿ ಗ್ರಾಮದ ವೆಂಕಟೇಗೌಡ ಹಾಗೂ ಕುಟುಂಬಸ್ಥರು ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತದ ಹಣ ಖರ್ಚು ಮಾಡಿ ಭವ್ಯವಾದ ರಥ (Chariot) ಮಾಡಿಸಿ ಅರ್ಪಿಸಿದ್ದಾರೆ.

    ಅಂದಹಾಗೆ ಮಹಾಶಿವರಾತ್ರಿ ಹಬ್ಬದ ಮರುದಿನ ಶ್ರೀ ಭೋಗನಂದೀಶ್ವರ ಸ್ವಾಮಿ ಹಾಗೂ ಅರುಣಾಚಲೇಶ್ವರ ಸ್ವಾಮಿಯ ಜೋಡಿ ಬ್ರಹ್ಮರಥೋತ್ಸವ ಪ್ರತಿ ವರ್ಷವೂ ವಿಜೃಂಭಣೆಯಿಂದ ನೆರವೇರುತ್ತದೆ. ಆದ್ರೆ ಪುರಾತನ ಕಾಲದ ಹಳೆಯ ಕಾಲದ ರಥ ಬಳಕೆಗೆ ಯೋಗ್ಯವಾಗಿರಲಿಲ್ಲ. ರಥೋತ್ಸವದ ವೇಳೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿತ್ತು. ಇನ್ನೂ ಕಳೆದ ಬಾರಿ ರಥದ ಅಚ್ಚು ಮುರಿದು ರಥ ಕದಲೇ ಇಲ್ಲ. ಇದ್ರಿಂದ ಭಕ್ತರಿಗೆ ಸಾಕಷ್ಟು ಬೇಸರ ಸಹ ಆಗಿತ್ತು. ಹಾಗಾಗಿ ಶಿವನ ಭಕ್ತನೂ ಆಗಿರುವ ಉದ್ಯಮಿ ವೆಂಕಟೇಗೌಡ ಎಂಬುವವರು ಈಗ ಕುಂದಾಪುರ ಕುಂಭಾಶಿಯ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ಸಾಗುವಾನಿ ಹಾಗೂ ಭೋಗಿ ಮರ ಬಳಸಿ ಭವ್ಯವಾದ ರಥ ನಿರ್ಮಾಣ ಮಾಡಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಮೂಲಕ ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ- ಹೆಚ್.ಕೆ ಪಾಟೀಲ್

    ರಥ ನೋಡಲು ಬಲು ಅಕರ್ಷಕವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ನೂತನ ರಥವನ್ನ ಇದೇ ಕಾರ್ತಿಕ ಸೋಮವಾರದಂದು ಅಧಿಕೃತವಾಗಿ ಬ್ರಹ್ಮರಥೋತ್ಸವ ಮಾಡುವ ಮೂಲಕ ಚಾಲನೆ ಕೊಡಲಾಗುತ್ತಿದೆ. ಇದಕ್ಕೂ ಮುನ್ನ ಭಾನುವಾರದಂದು ಹೋಮ ಹವನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಬಗ್ಗೆ ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ರಥದಾನಿ ವೆಂಕಟೇಗೌಡ, ನಾನು ನಂದಿ ಗ್ರಾಮದಲ್ಲೇ ಓದಿದವನಾಗಿದ್ದು ಬಹಳಷ್ಟು ವರ್ಷಗಳಿಂದ ಜಾತ್ರೆ ಹಾಗೂ ರಥೋತ್ಸವವನ್ನ ಕಣ್ತುಂಬಿಕೊಂಡಿದ್ದೇನೆ. ನಾನು ಶಿವರಾತ್ರಿ ಸಮಯದಲ್ಲೂ ಈ ದೇವಾಲಯಕ್ಕೆ ಬಂದು ಹೋಗುತ್ತಿದ್ದೆ, ದೇವಾಲಯಕ್ಕೆ ಬಂದಾಗ ಭಗವಂತ ನನಗೆ ಶಕ್ತಿ ಕೊಡು ಅಂತ ಬೇಡಿಕೊಂಡಿದ್ದೆ. ಹಾಗೆಯೇ ಧರ್ಮಸ್ಥಳ ಮಂಜುನಾಥಸ್ವಾಮಿ ದೇವರ ದರ್ಶನ ಪಡೆದು ಶ್ರೀ ಭೋಗ ನಂದೀಶ್ವರ ರಥ ಮಾಡಿಸುವ ಶಕ್ತಿ ಕೊಡಪ್ಪ ಅಂತ ಕೈ ಮುಗಿದು ಬೇಡಿಕೊಂಡಿದ್ದೆ. ಆ ದೇವರ ಪ್ರೇರಣೆ ಎಂಬಂತೆ ಈಗ ರಥ ನಿರ್ಮಾಣವಾಗಿದೆ ಎಂದು ಸ್ಮರಿಸಿದ್ದಾರೆ.

    ಸೋಮವಾರ (ನ.25) ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸುವಂತೆ ರಥದಾನಿ ವೆಂಕಟೇಗೌಡ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ರಥ ಶಿಲ್ಪಿ ರಾಜಗೋಪಾಲ್ ಆಚಾರ್. ವೆಂಕಟೇಗೌಡರು ರಥ ಮಾಡಿಸಲು ನಮ್ಮ ಬಳಿ ಬಂದಾಗ ಬಹಳಷ್ಟು ರಥಧ ಮಾದರಿಗಳನ್ನ ತೋರಿಸಿದ್ದೆವು. ಆಗ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ರಥ ಕಂಡ ವೆಂಕಟೇಗೌಡರು ಅದೇ ಮಾದರಿಯ ರಥ ಬೇಕು ಅಂತ ತಿಳಿಸಿದರು. ಈಗ ಅದೇ ಮಾದರಿಯಲ್ಲೇ ರಥ ಸುಂದರವಾಗಿ ಮೂಡಿ ಬಂದಿದೆ.

    ಇದು ಶೈವಾಗಮ ಶೈಲಿಯಲ್ಲಿದ್ದು, ಶಿವನಿಗೆ ಸಂಬಂಧಪಟ್ಟ ಕಥಾ ಪ್ರಾಕಾರಗಳನ್ನ ಕೆತ್ತನೆ ಮಾಡಲಾಗಿದೆ. ರಥದ ಚಕ್ರಗಳು 8 ಅಡಿ ಎತ್ತರವಿದೆ, ರಥದ ಜಿಡ್ಡೆ ಭಾಗ 15 ಅಡಿ ಇದ್ದು, ದೇವರ ಪೀಠ 3 ಅಡಿ ಎತ್ತರವಿದೆ. 5 ಅಡಿಯ ಕಳಶ ಹೊಂದಿದೆ. ಒಟ್ಟು 54 ಅಡಿ ಎತ್ತರ ಇರಲಿದೆ. 6 ಚಕ್ರ ಹೊಂದಿರುವ ರಥವನ್ನ ಬ್ರಹ್ಮರಥ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

    ಭಾನುವಾರ ವಿಶೇಷ ಪೂಜೆ ಹೋಮ-ಹವನ ನಡೆಸಿದ ನಂತರ ಧರ್ಮಸ್ಥಳದ ಪ್ರಧಾನ ಅರ್ಚಕರು ತಮ್ಮ ತಂಡದೊಂದಿಗೆ ದೇವಾಲಯಕ್ಕೆ ರಥ ಸಮರ್ಪಣೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ರಥಕ್ಕೆ ಚಾಲನೆ ನೀಡಲಾಗುತ್ತದೆ. ಕಾರ್ತಿಕ ಸೋಮವಾರದಂದು ಆಗಮಿಸುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಸಹ ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರು | ಎದುರಾಳಿ ವಿರುದ್ಧ ಸಂಚು ಮಾಡ್ತಿದ್ದಾಗ್ಲೇ ನಟೋರಿಯಸ್ ರೌಡಿಶೀಟರ್ ಅರೆಸ್ಟ್!

  • ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ – ಭಕ್ತೆಯಿಂದ ಆರೋಪ!

    ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ – ಭಕ್ತೆಯಿಂದ ಆರೋಪ!

    ಹೈದರಾಬಾದ್: ತೆಲಂಗಾಣದ (Telangana) ಖಮ್ಮಂ (Khammam) ಜಿಲ್ಲೆಯ ಭಕ್ತೆಯೊಬ್ಬರು ಪವಿತ್ರ ತಿರುಪತಿ ಲಡ್ಡು (Tirupati Laddu) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗೆ ತಂದ ಪ್ರಸಾದದಲ್ಲಿ, ಕಾಗದದಲ್ಲಿ ಸುತ್ತಿಟ್ಟಿರುವ ತಂಬಾಕು (Tobacco) ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ.

    ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ವಿವಾದದ ನಡುವೆಯೇ ಈ ಘಟನೆ ನಡೆದಿದೆ. ಇದನ್ನೂ ಓದಿ: ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು

    ಗೊಲ್ಲಗುಡೆಂ (Gollagudem) ಪಂಚಾಯತ್‌ನ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ನೆರೆಮನೆಯವರಿಗೆ ಹಂಚಲೆಂದು ಲಡ್ಡು ತೆಗೆದುಕೊಂಡು ಮನೆಗೆ ತೆರಳಿದ್ದರು. ಪ್ರಸಾದ ರೂಪದಲ್ಲಿ ತಂದಿದ್ದ ಲಡ್ಡುವಿನಲ್ಲಿ ಸಣ್ಣ ಪೇಪರ್‌ನಲ್ಲಿ ಕಟ್ಟಿದ್ದ ಗುಟ್ಕಾ ಪತ್ತೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ – ಭಕ್ತೆಯಿಂದ ಆರೋಪ!

    ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿರುವುದು ಇದೇ ಮೊದಲಲ್ಲ. 2012ರಲ್ಲೂ ಲಡ್ಡು ಪ್ರಸಾದದಲ್ಲಿ ಗುಟ್ಕಾ ಪ್ಯಾಕೆಟ್ ಸಿಕ್ಕಿರುವುದು ಗಮನಾರ್ಹ. ಈಗಾಗಲೇ ತುಪ್ಪದಲ್ಲಿ ಕಲಬೆರಕೆ ವಿಷಯ ವಿವಾದವಾಗಿದ್ದು, ಈ ಬೆನ್ನಲ್ಲೇ ಗುಟ್ಕಾ ಪತ್ತೆಯಾಗಿದೆ ಎಂಬ ಆರೋಪವೂ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಝೆಲೆನ್ಸ್ಕಿ ಭೇಟಿಯಾದ ಮೋದಿ – ಶಾಂತಿಮಂತ್ರ ಪಠಿಸಿದ ಪ್ರಧಾನಿ

    ಆಂಧ್ರಪ್ರದೇಶದ ತಿರುಪತಿ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ಲಡ್ಡು ಈಗ ಮಹಾ ವಿವಾದಕ್ಕೆ ಕಾರಣವಾಗಿದೆ. ಲಡ್ಡುವಿನಲ್ಲಿಗೋವು, ಹಂದಿಯ ಕೊಬ್ಬು ಮಿಶ್ರಣ ಮಾಡಲಾಗಿದೆ, ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ ಬಳಿಕ ವಿವಾದ ಭುಗಿಲೆದ್ದಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಫೀಲ್ಡಿಗಿಳಿದು ರಸ್ತೆ ಗುಂಡಿ ಪರಿಶೀಲಿಸಿದ ಡಿಸಿಎಂ – 14,307 ರಸ್ತೆಗುಂಡಿಗಳಿಗೆ ಮುಕ್ತಿ

  • ಪುರಿ ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು – ಉಸಿರುಗಟ್ಟಿ ಭಕ್ತ ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ!

    ಪುರಿ ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು – ಉಸಿರುಗಟ್ಟಿ ಭಕ್ತ ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ!

    ಭುವನೇಶ್ವರ: ಒಡಿಶಾದ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯಲ್ಲಿ (Puri Jagannath Rath Yatra) ರಥ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಉಸಿರುಗಟ್ಟಿ ಓರ್ವ ಭಕ್ತ (Devotee) ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

    ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದ್ದು, ಉಸಿರಾಡಲು ಆಗದೇ ಓರ್ವ ಭಕ್ತ ಮೃತಪಟ್ಟಿದ್ದಾರೆ. ನೂಕುನುಗ್ಗಲು ಬಳಿಕ ಕಾಲ್ತುಳಿತವೂ (Stampede) ಉಂಟಾಗಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: BMW ಡಿಕ್ಕಿ ಹೊಡೆದು ಮಹಿಳೆ ಸಾವು – ಸಿಎಂ ಏಕನಾಥ್‌ ಶಿಂಧೆ ಬಣದ ನಾಯಕನ ಪುತ್ರ ಆರೋಪಿ

    ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದೆ, ಭಕ್ತನೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ಯೋಜನೆಗೆ ಗೋವಾ ಮತ್ತೆ ಕ್ಯಾತೆ – ಕೇಂದ್ರದಿಂದ ‘ಪ್ರವಾಹ್’ ತಂಡ ರಚನೆ

    ಕಾಲ್ತುಳಿತದ ಬಳಿಕ ಸುಮಾರು 300 ಜನರನ್ನ ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 50 ಮಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಶ್ಚಾರ್ಜ್‌ ಮಾಡಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಕಾಲ್ತುಳಿತದ ಬಳಿಕವೂ ರಥಯಾತ್ರೆಯು ಸುಗಮವಾಗಿ ಸಾಗಿದೆ ಎಂದು ಒಡಿಶಾ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

    ರಥಯಾತ್ರೆ ವೀಕ್ಷಿಸಿದ ರಾಷ್ಟ್ರಪತಿ:
    ಪ್ರಸಿದ್ಧ ಜಗನ್ನಾಥ ದೇಗುಲದ ವಾರ್ಷಿಕ ರಥಯಾತ್ರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದು, ಅವರು ಲಕ್ಷಾಂತರ ಭಕ್ತರೊಂದಿಗೆ ಈ ರಥಯಾತ್ರೆ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಹೊಸ ಕ್ರಿಮಿನಲ್‌ ಕಾನೂನಿನಡಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಸ್‌ ದಾಖಲು

  • ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಸಾಗರ

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಸಾಗರ

    – ದರ್ಶನಕ್ಕೆ 24 ಗಂಟೆ ಕಾಯಬೇಕಿದೆ ಭಕ್ತರು

    ಅಮರಾವತಿ: ರಜೆಗಳು ಮುಗಿಯುವ ಹೊತ್ತಲ್ಲಿ ತಿರುಪತಿ (Tirupathi) ತಿರುಮಲದಲ್ಲಿ ಭಾರೀ ರಶ್ ಕಂಡುಬಂದಿದೆ.

    ತೆಲುಗು ರಾಜ್ಯಗಳ ಜೊತೆಗೆ ಕರ್ನಾಟಕ, ತಮಿಳುನಾಡಿನಿಂದ ಅಧಿಕ ಸಂಖ್ಯೆಯ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬಂದಿರುವ ಕಾರಣ, ಸರಿಸುಮಾರು 3 ಕಿಲೋಮೀಟರ್ ಉದ್ದಕ್ಕೆ ಸರತಿಸಾಲು ಕಂಡುಬಂದಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್, ನಾರಾಯಣಗಿರಿ ಶೆಡ್‍ಗಳು ತುಂಬಿಹೋಗಿವೆ. ರಿಂಗ್ ರೋಡ್‍ನಿಂದ ಆಕ್ಟೋಪಸ್ ಭವನದವರೆಗೂ ಭಕ್ತರ ಸರತಿ ಸಾಲು ಇದೆ.‌

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕನಿಷ್ಠ 24 ಗಂಟೆ ಹಿಡಿಯುತ್ತಿದೆ. ಸರತಿ ಸಾಲಲ್ಲಿ ಇರುವ ಭಕ್ತರಿಗೆ ಕುಡಿಯುವ ನೀರು, ಅನ್ನಪ್ರಸಾದ, ಹಾಲನ್ನು ಟಿಟಿಡಿ ಒದಗಿಸುತ್ತಿದೆ. ಮೂರು ದಿನದ ಮೊದಲು ದಿನಕ್ಕೆ 60ಸಾವಿರ ಭಕ್ತರು ದರ್ಶನ ಪಡೆಯುತ್ತಿದರು. ಇದೀಗ ಭಕ್ತರ ಸಂಖ್ಯೆ 85ರಿಂದ 90ಸಾವಿರ ಇದೆ. ಭಕ್ತರ ರಶ್ ಇನ್ನೂ ಕೆಲವು ದಿನ ಹೀಗೆ ಮುಂದುವರೆಯುವ ಸಂಭವ ಇದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧಾರಾಕಾರ ಮಳೆ; ರಸ್ತೆಗಳಲ್ಲಿ ಹರಿದ ನೀರು

    ಟಿಟಿಡಿ ಮಾಹಿತಿ ಪ್ರಕಾರ, ಬುಧವಾರ ಒಂದೇ ದಿನ 81,930 ಭಕ್ತರು, ಗುರುವಾರ 76,369 ಹಾಗೂ ಶುಕ್ರವಾರ 71,510 ಭಕ್ತರು ದರ್ಶನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಭಕ್ತರನ್ನು ನಿಯಂತ್ರಿಸುವುದು ಟಿಟಿಡಿ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

  • ಇದುವರೆಗೆ 1.5 ಕೋಟಿ ಭಕ್ತರು ರಾಮಮಂದಿರಕ್ಕೆ ಭೇಟಿ- ವಿದೇಶಿಗರೇ ಹೆಚ್ಚು

    ಇದುವರೆಗೆ 1.5 ಕೋಟಿ ಭಕ್ತರು ರಾಮಮಂದಿರಕ್ಕೆ ಭೇಟಿ- ವಿದೇಶಿಗರೇ ಹೆಚ್ಚು

    ಅಯೋಧ್ಯೆ: ಸುಮಾರು 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮಮಂದಿರಕ್ಕೆ (Ayodhya Ram Mandir) ಇದುವರೆಗೆ 1.5 ಕೋಟಿ ಭಕ್ತರು ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ವಿದೇಶಿ ಭಕ್ತರೇ ಹೆಚ್ಚು.

    ಹೌದು. ರಾಮಮಂದಿರ ಉದ್ಘಾಟನೆಯಾದಾಗಿನಿಂದ ರಾಮಲಲ್ಲಾ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 1.5 ಕೋಟಿ ಭಕ್ತರು ರಾಮಮಂದಿರವನ್ನು ದರ್ಶನಕ್ಕಾಗಿ ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಭಕ್ತರೂ ಸೇರಿದ್ದಾರೆ.

    ಜನವರಿ 22 ರಂದು ಪ್ರಾಣಪ್ರ ತಿಷ್ಠಾ ಕಾರ್ಯಕ್ರಮದ ನಂತರ ಮರುದಿನ ಸಾಮಾನ್ಯ ಭಕ್ತರಿಗಾಗಿ ರಾಮಮಂದಿರವನ್ನು ತೆರೆಯಲಾಯಿತು. ಹೀಗಾಗಿ ರಾಮಲಲ್ಲಾ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸತೊಡಗಿದರು. ಪ್ರತಿದಿನ ಸರಾಸರಿ ಒಂದು ಲಕ್ಷ ಜನರು ರಾಮಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಮನವಮಿಯ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಾಮಮಂದಿರವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ಬಾಲಕರಾಮನಿಗೆ ನಿತ್ಯ ಬೆಳಗ್ಗೆ ಆರತಿ – ದೂರದರ್ಶನದಲ್ಲಿ ನೇರಪ್ರಸಾರ

    ಇಲ್ಲಿಯವರೆಗೆ ರಾಮ ಮಂದಿರಕ್ಕೆ ಭೇಟಿ ನೀಡಿದ 1.5 ಕೋಟಿ ಭಕ್ತರಲ್ಲಿ ಸುಮಾರು ಒಂದು ಲಕ್ಷ ಭಕ್ತರು ವಿದೇಶಿಯರೂ ಆಗಿದ್ದಾರೆ. ಶ್ರೀ ರಾಮನ ದರ್ಶನ ಪಡೆಯಲು ವಿದೇಶದಿಂದ ಜನ ಬರುತ್ತಿದ್ದಾರೆ. ಈ ವೇಳೆ ಲಕ್ಷ ಕೋಟಿಯ ಅರ್ಪಣೆಗಳೂ ನಡೆಯುತ್ತಿವೆ. ರಾಮ ನವಮಿಯ (Rama Navami) ದಿನದಂದು ಸುಮಾರು 40 ಲಕ್ಷ ಭಕ್ತರು ಅಯೋಧ್ಯೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

    ಇದಕ್ಕಾಗಿ ಆಡಳಿತವು ಶ್ರ ದ್ಧೆಯಿಂದ ಕೆಲಸಮಾಡುತ್ತಿದೆ. ಭಕ್ತರಿಗೆಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿ ಸಲಾಗುತ್ತಿದೆ. ಹೊರಗಿನಿಂದ ಬರುವ ಭಕ್ತರಿಗೆ ವಸತಿ ಮತ್ತು ಊಟಕ್ಕೆ ಯಾವುದೇ ತೊಂದರೆಯಾಗದಂತೆ ಹೋಟೆಲ್, ರೆಸ್ಟೋರೆಂಟ್‌ ಗಳ ನಿರ್ಮಾಣವೂ ತ್ವರಿತಗತಿಯಲ್ಲಿ ನಡೆಯುತ್ತಿದೆ.

  • ಸಾರ್ವಜನಿಕರ ದರ್ಶನಕ್ಕೆ ತೆರೆದ ಅಬುಧಾಬಿ ಹಿಂದೂ ದೇವಾಲಯ- ಡ್ರೆಸ್‌ ಕೋಡ್‌, ಟೈಮಿಂಗ್ಸ್‌ ವಿವರ ಇಲ್ಲಿದೆ

    ಸಾರ್ವಜನಿಕರ ದರ್ಶನಕ್ಕೆ ತೆರೆದ ಅಬುಧಾಬಿ ಹಿಂದೂ ದೇವಾಲಯ- ಡ್ರೆಸ್‌ ಕೋಡ್‌, ಟೈಮಿಂಗ್ಸ್‌ ವಿವರ ಇಲ್ಲಿದೆ

    ಅಬುಧಾಬಿ: ಇದೇ ವರ್ಷ ಫೆಬ್ರವರಿ 14 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ UAEಯ ಮೊದಲ ಹಿಂದೂ ದೇವಾಲಯವನ್ನು ಶುಕ್ರವಾರ ಭಕ್ತರು ಮತ್ತು ಸಾರ್ವಜನಿಕರಿಗೆ ತೆರೆಯಲಾಗಿದೆ. ಆದರೆ ಭಕ್ತರಿಗೆ ಡ್ರೆಸ್‌ ಕೋಡ್‌ (Dress Code) ಮಾಡಲಾಗಿದ್ದು, ದರ್ಶನಕ್ಕೆ ಸಮಯ ಕೂಡ ನಿಗದಿಪಡಿಸಲಾಗಿದೆ.

    ಈ ಸಂಬಂಧ BAPS ಹಿಂದೂ ಮಂದಿರದ ಎಕ್ಸ್‌ ಖಾತೆಯಲ್ಲಿ ವಿವರ ನೀಡಲಾಗಿದೆ. ಬಹಳ ದಿನಗಳ ಕಾಯುವಿಕೆ ಮುಗಿದಿದೆ. ಅಬುಧಾಬಿ ಮಂದಿರ ಈಗ ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ ಎಂಬ ಪೋಸ್ಟ್‌ ಜೊತೆಗೆ ಭವ್ಯ ದೇಗುಲದ ಅದ್ಭುತ ವೀಡಿಯೋವನ್ನು ಸಹ ಹಂಚಿಕೊಂಡಿದೆ. ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ದೇವಾಲಯವು ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ:ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

    ನಿಯಮಗಳ ವಿವರ: ಅಬುಧಾಬಿ ದೇವಸ್ಥಾನಕ್ಕೆ (Abu Dhabi Hindu Temple) ಭೇಟಿ ನೀಡಲು ಡ್ರೆಸ್ ಕೋಡ್ ಮಾಡಲಾಗಿದೆ. ದೇವಾಲಯದ ವೆಬ್‌ಸೈಟ್‌ನಲ್ಲಿ ಭಕ್ತರು ಯಾವ ರೀತಿಯ ಬಟ್ಟೆಗೆ ಆದ್ಯತೆ ನೀಡಬೇಕು ಮತ್ತು ಯಾವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಫೋಟೋಗ್ರಫಿ ನಿಯಮಗಳು ಇತ್ಯಾದಿಗಳ ಬಗ್ಗೆ ಸವಿವರವಾಗಿ ಉಲ್ಲೇಖಿಸಲಾಗಿದೆ.

    ಡ್ರೆಸ್‌ ಕೋಡ್‌ ಏನು..?
    * ಭಕ್ತರು ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳು ಕಾಣುವಂತೆ ಬಟ್ಟೆ ಧರಿಸಬಾರದು.
    * ಕ್ಯಾಪ್ಸ್, ಟೀ ಶರ್ಟ್‌ಗಳು ಮತ್ತು ಆಕ್ಷೇಪಾರ್ಹ ವಿನ್ಯಾಸಗಳನ್ನು ಹೊಂದಿರುವ ಇತರ ಉಡುಪುಗಳನ್ನು ಅನುಮತಿಸಲಾಗುವುದಿಲ್ಲ.
    * ಅರೆಬರೆ ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳಿಗೆ ಅವಕಾಶ ಇಲ್ಲ.
    * ತಬ್ಬಿಬ್ಬುಗೊಳಿಸುವ ಶಬ್ದಗಳು ಹಾಗೂ ಶೈನಿಂಗ್‌ ಬಟ್ಟೆಗಳಿಗೂ ನಿಷೇಧ.

    ಈ ಮಾರ್ಗಸೂಚಿಗಳನ್ನು ಅನುಸರಿಸದ ಅಥವಾ ನಮ್ಮ ಸಿಬ್ಬಂದಿಯಿಂದ ಸೂಕ್ತವಲ್ಲವೆಂದು ಪರಿಗಣಿಸಲ್ಪಟ್ಟಿರುವ ಭಕ್ತರಿಗೆ ದೇಗುಲದೊಳಗೆ ಪ್ರವೇಶವನ್ನು ನಿರಾಕರಿಸಲಾಗುವುದು. ಒಟ್ಟಿನಲ್ಲಿ ಪ್ರಶಾಂತ ವಾತಾವರಣವನ್ನು ಕಾಪಾಡಲು ಮತ್ತು ನಮ್ಮ ಆವರಣದ ಕ್ರಮಬದ್ಧ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ.

    ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಈ ದೇವಾಲಯವನ್ನು ನಿರ್ಮಿಸಿದೆ. ದೇವಾಲಯದ ಭೂಮಿಯನ್ನು ಯುಎಇ ಸರ್ಕಾರ ದಾನ ಮಾಡಿದೆ.

  • ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ 2ನೇ ದಿನ- ದೇವಿ ದರ್ಶನ ಪಡೆಯುತ್ತಿರೋ ಭಕ್ತರು

    ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ 2ನೇ ದಿನ- ದೇವಿ ದರ್ಶನ ಪಡೆಯುತ್ತಿರೋ ಭಕ್ತರು

    ಹಾಸನ: ಹಾಸನಾಂಬೆ (Hasanamba) ದೇವಿ ಗರ್ಭಗುಡಿ ಬಾಗಿಲು ತೆರೆದು ಇಂದಿಗೆ ಮೂರನೇ ದಿನವಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಎರಡನೇ ದಿನವಾಗಿದೆ.

    ಹಾಸನಾಂಬೆ ದೇವಿ ದರ್ಶನಕ್ಕೆ ಈಗಾಗಲೇ ಭಕ್ತರು ಆಗಮಿಸುತ್ತಿದ್ದಾರೆ. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಸಂಖ್ಯೆ ಕೊಂಚ ಕಡಿಮೆ ಇರುವುದರಿಂದ ಭಕ್ತರು ಬೇಗ ಬೇಗ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ.

    ಒಂದು ಸಾವಿರ ಹಾಗೂ 300 ರೂ. ವಿಶೇಷ ದರ್ಶನದ ಸಾಲು ಸದ್ಯಕ್ಕೆ ಖಾಲಿ ಖಾಲಿಯಾಗಿದ್ದು, ವೀಕೆಂಡ್ ಆದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಇದನ್ನೂ ಓದಿ: ಜನವಸತಿ ಪ್ರದೇಶದಲ್ಲೇ ಅಕ್ರಮ ಗಣಿಗಾರಿಕೆ- ಕಟ್ಟಡಗಳು ಬಿರುಕು, ಬೆಚ್ಚಿದ ಅಂಗನವಾಡಿ ಮಕ್ಕಳು

    ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸಲಿರುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಓಪನ್ ಆಗಿದೆ. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.24ಕ್ಕೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವ ಇಂದಿನಿಂದ ನ.15 ರವರೆಗೆ ನಡೆಯಲಿದೆ.

    ಈ ಬಾರಿ ಜಾತ್ರಾ ಮಹೋತ್ಸವ ವಿಶೇಷತೆಯಿಂದ ಕೂಡಿದ್ದು ಹೆಲಿಟೂರಿಸಂ, ಪ್ಯಾರಾ ಸೈಲಿಂಗ್, ಪ್ಯಾರಾ ಮೋಟಾರ್, ಚಾಪರ್‍ನಲ್ಲಿ ಹಾರಾಟ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಈ ಬಾರಿ ಒಟ್ಟು ಹದಿನೈದು ದಿನಗಳಲ್ಲಿ 13 ದಿನ ಮಾತ್ರ ಸಾರ್ವಜನಿಕ ದರ್ಶನ ಹಾಗೂ ಶಕ್ತಿ ಯೋಜನೆ ಜಾರಿ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಮಳೆ ಬಂದರೆ ಭಕ್ತರು ನೆನೆಯದಂತೆ ಜರ್ಮನ್ ಟೆಂಟ್, ಫ್ಯಾನ್, ಎಸಿ ಸೇರಿ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಈ ಬಾರಿ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಮೂರು ಹೊತ್ತು ಕೂಡ ಪ್ರಸಾದ ವಿತರಣೆ ವ್ಯವಸ್ಥೆ ಕಲ್ಪಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು – ದೇವರಲ್ಲಿ ಭಕ್ತನ ವಿಚಿತ್ರ ಕೋರಿಕೆ

    ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು – ದೇವರಲ್ಲಿ ಭಕ್ತನ ವಿಚಿತ್ರ ಕೋರಿಕೆ

    ಚಿಕ್ಕಮಗಳೂರು: ಸಾಮಾನ್ಯವಾಗಿ ಒಳ್ಳೆ ವಿದ್ಯೆ, ಬುದ್ಧಿ, ಆರೋಗ್ಯ ಕೊಡು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು (Demand) ಭಕ್ತರು (Devotees) ದೇವರ ಮುಂದೆ ಇಡುತ್ತಾರೆ. ಆದರೆ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು ಎಂಬ ವಿಚಿತ್ರ ಕೋರಿಕೆಯನ್ನು ಭಕ್ತರೊಬ್ಬರು ದೇವರ ಮುಂದೆ ಇಟ್ಟಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ಕಳಸ  (Kalasa) ತಾಲೂಕಿನಲ್ಲಿ ನಡೆದಿದೆ.

    ಕೇಳಲು ಆಶ್ಚರ್ಯವಾಗಿದ್ದರೂ ಇದು ನಿಜ. ಭಕ್ತರೊಬ್ಬರು ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ ಈ ರೀತಿಯಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾನೆ. ಗಿರಿಜಾದೇವಿಗೆ ಭಕ್ತರೊಬ್ಬರು ಪತ್ರ (Letter) ಬರೆದಿದ್ದು, ಭಕ್ತರ ವಿಚಿತ್ರ ಬೇಡಿಕೆಯನ್ನು ಓದಿದ ಹುಂಡಿ ಎಣಿಕೆ ಅಧಿಕಾರಿಗಳು ನಕ್ಕು ನಕ್ಕು ಸುಸ್ತಾಗಿದ್ದಾರೆ. ಇದನ್ನೂ ಓದಿ: Gruhajyothi Scheme: ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಿಎಂ

    ಪತ್ರದಲ್ಲಿ ಏನಿದೆ?
    ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಜಗತ್ತಿನಲ್ಲೇ ಸುಂದರ ಎಂಬ ಖ್ಯಾತಿ ಗಳಿಸಬೇಕು. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು. ಸರ್ವ ಸುಂದರಿಯಾದ ಗಿರಿಜಾ ದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನನ್ನ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನು ಈಡೇರಿಸು ತಾಯಿ ಎಂದು ಪತ್ರದಲ್ಲಿ ಬರೆದು ಕಾಣಿಕೆ ಹುಂಡಿಯಲ್ಲಿ ಭಕ್ತ ಹಾಕಿದ್ದಾನೆ.  ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]