Tag: Deviramma Temple

  • ದೇವಿರಮ್ಮನ ದರ್ಶನದಿಂದ ದೀಪಾವಳಿಗೆ ಚಾಲನೆ – ಏನಿದು ಮಲೆನಾಡಿಗರ ಹಬ್ಬದ ವಿಶೇಷ?

    ದೇವಿರಮ್ಮನ ದರ್ಶನದಿಂದ ದೀಪಾವಳಿಗೆ ಚಾಲನೆ – ಏನಿದು ಮಲೆನಾಡಿಗರ ಹಬ್ಬದ ವಿಶೇಷ?

    ರ್ಷಕ್ಕೆ ಒಂದು ಬಾರಿ ದರ್ಶನ ನೀಡುವ ದೇವಿರಮ್ಮನ (Deviramma Temple) ದರ್ಶನದ ಮೂಲಕ ಕಾಫಿನಾಡಿನ ಜನರ ದೀಪಾವಳಿ (Deepavali) ಹಬ್ಬಕ್ಕೆ ಅಧಿಕೃತ ಚಾಲನೆ ಸಿಗುತ್ತದೆ. ಸುಮಾರು 3,000 ಅಡಿ ಎತ್ತರ ಇರುವ ಬೆಟ್ಟವನ್ನು ನರಕಚತುರ್ದಶಿಯಂದು ಹತ್ತಿ ಭಕ್ತರು ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತಾರೆ.

    3800 ಅಡಿ ಎತ್ತರದ ಬೆಟ್ಟದ ಮೇಲಿರುವ ದೇವಿರಮ್ಮ ವರ್ಷಕ್ಕೊಮ್ಮೆ ದರ್ಶನ ನೀಡುತ್ತಾಳೆ. ಲಕ್ಷಾಂತರ ಭಕ್ತರು ಬರಿಗಾಲಿನಲ್ಲಿ ಬೆಟ್ಟ ಏರಿ ದೇವಿಯ ದರ್ಶನ ಪಡೆಯುತ್ತಾರೆ. ಮೈಸೂರು ಅರಮನೆಯಿಂದಲೂ ಪೂಜಾ ಸಾಮಗ್ರಿಗಳು ಈ ದೇವಾಲಯಕ್ಕೆ ಬರುತ್ತವೆ.

    ಹರಕೆ ಹೊತ್ತ ಭಕ್ತರು ಬಳೆ, ತುಪ್ಪದ ಬಟ್ಟೆ, ಕಟ್ಟಿಗೆಯನ್ನು ಹೊತ್ತು ಸಾಗಿ ದೇವಿಗೆ ಸಮರ್ಪಿಸಿದ್ದಾರೆ. ದೇವಿರಮ್ಮ ಬೆಟ್ಟ ಏರಲು ನಿರ್ದಿಷ್ಟ ದಾರಿಯಿಲ್ಲ ಕಲ್ಲು-ಮಳ್ಳಿನ ಕಡಿದಾದ ಹಾದಿಯಲ್ಲೇ ಸಾಗಬೇಕು. ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸುವ ದೇವಿಯ ದರ್ಶನವಾದ ಬಳಿಕ ಕುಳಿತುಕೊಳ್ಳದೇ ಬೆಟ್ಟದಿಂದ ಇಳಿಯಬೇಕು ಎಂಬುದು ವಿಶೇಷ ನಿಯಮ!

    ಈ ರೀತಿ ಆರಂಭಗೊಳ್ಳುವ ದೀಪಾವಳಿ, ಮೂರು ದಿನಗಳ ಕಾಲ ವಿಶೇಷ ಆಚರಣೆಗಳೊಂದಿಗೆ ಕಾಫಿನಾಡಿನೆಲ್ಲೆಡೆ ಮುಂದುವರಿಯುತ್ತದೆ. ಇದೇ ರೀತಿ ದೀಪಾವಳಿಯ ಕೊನೆಯ ದಿನ ರೈತರು ಆಚರಿಸುವ ದೀಪದ ಕೋಲು ಸಂಪ್ರದಾಯ ಬಹಳ ವಿಭಿನ್ನವಾಗಿದೆ. ಈ ಆಚರಣೆ ಮಲೆನಾಡಿನ ಭಾಗದಲ್ಲಿ ಮಾತ್ರ ಆಚರಣೆ ಮಾಡುತ್ತಾರೆ.

    ಏನಿದು ದೀಪದ ಕೋಲು?
    ದೀಪದ ಕೋಲು ಎಂದರೆ ಮಲೆನಾಡ ಭಾಗದಲ್ಲಿ ಸಿಗುವ ದೂಪದ ಮರದಿಂದ ಸಿಕ್ಕ ದ್ರವವನ್ನು ತೆಗೆದು ಗಟ್ಟಿಯಾಗಿಸಿ ಬಳಿಕ ಪುಡಿ ಮಾಡಿ ಬೇಯಿಸಿಕೊಂಡು ಕೋಲುಗಳಿಗೆ ಸುತ್ತಿ ಅದನ್ನು ಭೂಮಿ ಪೂಜೆಗೆ ಬಳಸುತ್ತಾರೆ.

    ಈ ದೀಪದ ಕೋಲನ್ನು ಹಾಡು ಹೇಳುವ ಮೂಲಕ ಜಮೀನಿನಲ್ಲಿ ಹಚ್ಚಿ ಪೂಜೆ ಮಾಡಲಾಗುತ್ತದೆ. ಈ ದೀಪದ ಕೋಲನ್ನು ಹಚ್ಚುವುದರಿಂದ ಮನೆ, ಹೊಲ, ಗದ್ದೆಗಳಿಗೆ ಯಾವುದೇ ದುಷ್ಟಶಕ್ತಿಯ ಸಮಸ್ಯೆ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ.

    ಈ ದೀಪದ ಕೋಲನ್ನು ಇಟ್ಟು ಪೂಜಿಸಿದ ಬಳಿಕ ಮನೆಯಲ್ಲಿ ಮಾಡಿದ ಅಡುಗೆಗಳನ್ನು ಎಡೆಯಾಗಿ ಇಡಲಾಗುತ್ತದೆ. ಈ ದೀಪದ ಬೆಳಕಲ್ಲಿ ಅಗಲಿದ ಕುಟುಂಬದ ಹಿರಿಯರು ಬಂದು ಊಟ ಮಾಡುತ್ತಾರೆ ಎನ್ನುವ ನಂಬಿಕೆ ಸಹ ಮಲೆನಾಡಿಗರದ್ದು.

  • ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

    ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

    ಚಿಕ್ಕಮಗಳೂರು: ಸಮುದ್ರಮಟ್ಟದಿಂದ 3,000 ಅಡಿಗಳಷ್ಟು ಎತ್ತರದ ಪಿರಮಿಡ್ ಆಕಾರದ ಗುಡ್ಡದ ತುದಿಯಲ್ಲಿ ನೆಲೆ ನಿಂತಿರೋ ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.‌

    ವರ್ಷಕ್ಕೊಮ್ಮೆ ದರ್ಶನ ನೀಡೋ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಈ ಬಾರಿ ಜಿಲ್ಲೆಯಲ್ಲಿ ವಿಪರೀತ ಮಳೆ ಹೆಚ್ಚಾಗಿರುವುದರಿಂದ ಭಕ್ತರು ಬೆಟ್ಟ ಹತ್ತುವಾಗ ತುಂಬಾ ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕೂಡ ಮನವಿ ಮಾಡಿದೆ.

    ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಈಗಾಗಲೇ ಬೆಟ್ಟವನ್ನು ಹತ್ತಿ ಪರಿಶೀಲನೆ ನಡೆಸಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿ ದೇವರ ಮೊರೆ ಹೋಗುತ್ತಾರೆ. ಆದರೆ, ಬಿಂಡಿಗ ದೇವಿರಮ್ಮನ ಭಕ್ತರು ತಮ್ಮ ಬಯಕೆ ಈಡೇರಿಸಿಕೊಳ್ಳಲು ತಾಯಿ ಎದುರು ದೇಹವನ್ನು ದಂಡಿಸುತ್ತಾರೆ. ಬರಿಗಾಲಲ್ಲೇ 3,000 ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರಾ ಮಹೋತ್ಸವದಲ್ಲಿ ಈ ಬಾರಿಯೂ ಸಾವಿರಾರು ಭಕ್ತರು ಪಾಲ್ಗೊಳ್ಳೋ ನಿರೀಕ್ಷೆ ಇದೆ. ಇದೇ ತಿಂಗಳ 31 ರಿಂದ ನವೆಂಬರ್ 3ರ ವರೆಗೆ ದೀಪೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಬೆಟ್ಟಕ್ಕೆ 80,000 ಅಧಿಕ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಸಾವಿರಾರು ಭಕ್ತರು ರಾತ್ರೋರಾತ್ರಿ ಬೆಟ್ಟವನ್ನೇರಿ ದೇವಿ ದರ್ಶನ ಪಡೆಯುತ್ತಾರೆ. ದೀಪಾವಳಿ ಅಂಗವಾಗಿ ಮೂರು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತೆ.

    3,000 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿರೋ ದೇವಿರಮ್ಮ ವರ್ಷಕ್ಕೊಮ್ಮೆ ಮಾತ್ರ ಜನರಿಗೆ ದರ್ಶನ ನೀಡೋದು. ಮತ್ತೊಂದು ವಿಶೇಷ ಅಂದ್ರೆ 3000 ಅಡಿ ಎತ್ತರವಿರೋ ಈ ಬೆಟ್ಟವನ್ನ ಭಕ್ತಾಧಿಗಳು ಬರಿಗಾಲಲ್ಲೇ ಹತ್ತುತ್ತಾರೆ. ಮೂರು ದಿನಗಳ ಕಾಲ ನಡೆಯೋ ದೇವರಮ್ಮನ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಅಕ್ಟೋಬರ್ 31ರ ನರಕ ಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆಸಿ ಬೆಳಗಿನ ಜಾವ 4 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತೆ. ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡು, ಬೆಟ್ಟ-ಗುಡ್ಡದ ಕಲ್ಲಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು, ಬೆಟ್ಟವನ್ನೇರಿ ಪೂಜೆ ಮಾಡಿಸಿದ್ರೆ ಭಕ್ತರ ಇಷ್ಟಾರ್ಥ ಸಿದ್ಧಿಸೋದ್ರಿಂದ ಭಕ್ತರು ಜಾತ್ರೆಯಂದು ದೇಹವನ್ನ ದಂಡಿಸೋದ್ರ ಮೂಲಕ ತಮ್ಮ ಕಾರ್ಯ, ಬಯಕೆಯನ್ನ ಸಿದ್ಧಿಸಿಕೊಳ್ಳುತ್ತಾರೆ.

  • ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿರಮ್ಮನ ಪೂಜೆಗೆ ಭಕ್ತರ ದಂಡು

    ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿರಮ್ಮನ ಪೂಜೆಗೆ ಭಕ್ತರ ದಂಡು

    ಚಿಕ್ಕಮಗಳೂರು: ನರಕ ಚತುರ್ದಶಿ ದಿನ ಮಾತ್ರ ದರ್ಶನ ಕೊಡುವ ಮಲ್ಲೇನಹಳ್ಳಿಯ ಬೆಟ್ಟದ ತುದಿಯಲ್ಲಿ ನೆಲೆಸಿರುವ ಬಿಂಡಿಗಾ ದೇವಿರಮ್ಮನ (Deviramma) ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದಾರೆ.

    3 ಸಾವಿರ ಅಡಿಗಳ ಅಡಿ ಎತ್ತರವಿರುವ ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮನ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ರಾತ್ರಿಯಿಂದಲೇ ದೇವಿಯ ದರ್ಶನಕ್ಕಾಗಿ ಬರಿಗಾಲಲ್ಲೇ ಬೆಟ್ಟ ಹತ್ತಿ ಬರುತ್ತಿದ್ದಾರೆ. ಸುಮಾರು 50 ಸಾವಿರ ಜನ ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದೇಗುಲಕ್ಕೆ ದಾಖಲೆಯ ಆದಾಯ- 9 ದಿನಗಳಲ್ಲಿ 4,56,22,580 ರೂ. ಸಂಗ್ರಹ

    ದೀಪಾವಳಿ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಬಂದೊಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಬೆಳಕಿನ ಹಬ್ಬಕ್ಕಿದೆ ರಾಮಾಯಣದ ನಂಟು