Tag: devil film

  • ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್- ಫ್ಯಾನ್ಸ್‌ಗೆ ಕಾದಿದ್ಯಾ ಸರ್ಪ್ರೈಸ್?

    ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್- ಫ್ಯಾನ್ಸ್‌ಗೆ ಕಾದಿದ್ಯಾ ಸರ್ಪ್ರೈಸ್?

    ನ್ನಡದ ನಟ ದರ್ಶನ್‌ಗೆ (Darshan) ಫೆ.16ರಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದರ ನಡುವೆ ನಟನ ಕಡೆಯಿಂದ ಹುಟ್ಟುಹಬ್ಬಕ್ಕೆ (Birthday) ಏನಾದರೂ ಸರ್ಪ್ರೈಸ್ ಕಾದಿದ್ಯಾ? ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

    ದರ್ಶನ್ ಹುಟ್ಟುಹಬ್ಬಕ್ಕೆ 15 ದಿನಗಳು ಬಾಕಿಯಿದೆ. ಈ ಕುರಿತು ನಟನ ಫ್ಯಾನ್ಸ್ ಅಪ್‌ಡೇಟ್ ಹಂಚಿಕೊಂಡಿದ್ದು, ಅವರ ಹುಟ್ಟುಹಬ್ಬಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಪ್ರತಿ ವರ್ಷ ನಟನ ಹೆಸರಲ್ಲಿ ಅಭಿಮಾನಿಗಳು ದವಸ ದಾನ್ಯ ವಿತರಿಸೋದು, ಅನ್ನದಾನ, ರಕ್ತದಾನ ಹೀಗೆ ನಾನಾ ಕಾರ್ಯಗಳನ್ನು ಮಾಡುತ್ತಾರೆ. ಈ ವರ್ಷವೂ ಕೂಡ ದರ್ಶನ್ ಹೆಸರಲ್ಲಿ ಏನೆಲ್ಲಾ ತಯಾರಿ ಮಾಡುತ್ತಾರೆ ಫ್ಯಾನ್ಸ್ ಎಂದು ಕಾದುನೋಡಬೇಕಿದೆ.

    https://youtu.be/3gYUPQBGmRw?si=lSIpYsVTRaJBYK5r

    ಇನ್ನೂ ಈ ವರ್ಷ ದರ್ಶನ್ ಅವರು ಮೈಸೂರು ಅಥವಾ ಬೆಂಗಳೂರು ಇದರಲ್ಲಿ ಎಲ್ಲಿ ಬರ್ತ್‌ಡೇ ಆಚರಣೆ ಮಾಡುತ್ತಾರೆ. ಸದ್ಯ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ ಈ ಬಾರಿ ಅಭಿಮಾನಿಗಳನ್ನು ಭೇಟಿ ಮಾಡ್ತಾರಾ? ಎಂದು ಕಾದುನೋಡಬೇಕಿದೆ.

  • ಜೈಲಿನಲ್ಲಿರುವ ದರ್ಶನ್‌ಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ ಪುಸ್ತಕ ಕೊರಿಯರ್

    ಜೈಲಿನಲ್ಲಿರುವ ದರ್ಶನ್‌ಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ ಪುಸ್ತಕ ಕೊರಿಯರ್

    ಕೊಲೆ ಪ್ರಕರಣದ ಸಂಬಂಧ ಆರೋಪಿಯಾಗಿ ದರ್ಶನ್ (Darshan) ಪರಪ್ಪನ ಅಗ್ರಹಾರದಲ್ಲಿದ್ದಾರೆ. ನಟ ಸದ್ಯ ಯೋಗ, ಧ್ಯಾನ, ಪುಸ್ತಕದ ಮೊರೆ ಹೋಗಿದ್ದಾರೆ. ಇದೀಗ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ (Siddaroodha Matha) ದರ್ಶನ್‌ಗೆ ಪುಸ್ತಕ ಕೊರಿಯರ್ ಮಾಡಲಾಗಿದೆ. ಮಠದ ಧರ್ಮದರ್ಶಿ ಕಾರಾಗೃಹದಲ್ಲಿರುವ ದರ್ಶನಗೆ ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ಪೋಸ್ಟ್ ಮೂಲಕ ಕಳುಹಿಸಿದ್ದಾರೆ. ಇದನ್ನೂ ಓದಿ:ಎರಡು ಭಾಗಗಳಲ್ಲಿ ಬರಲಿದೆ ‘ಹಾಯ್ ನಾನ್ನಾ’ ಡೈರೆಕ್ಟರ್‌ ಜೊತೆಗಿನ ಜ್ಯೂ.ಎನ್‌ಟಿಆರ್‌ ಹೊಸ ಸಿನಿಮಾ

    ಜೈಲಿನಲ್ಲಿರುವ ದರ್ಶನ್‌ಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ ಪುಸ್ತಕ ಕಳುಹಿಸಲಾಗಿದೆ. ಈ ಕುರಿತು ಸಿದ್ಧಾರೂಢ ಮಠದ ಧರ್ಮದರ್ಶಿಗಳಾದ ಡಾ.ಗೋವಿಂದ ಮಣ್ಣೂರು ಮಾತನಾಡಿ, ಸಿದ್ಧಾರೂಢರ ಚರಿತಾಮೃತ ಪುಸ್ತಕ ಕಳಿಸಿದ್ದೇವೆ. ಸುಮಾರು 200 ರಿಂದ 250 ಪುಟಗಳ ಪುಸ್ತಕ ಅದು. ಸಿದ್ದಾರೂಢರು ನಡೆದುಬಂದ ದಾರಿಯನ್ನು ಪುಸ್ತಕ ಒಳಗೊಂಡಿದೆ. ಪುಸ್ತಕ ಓದಿ ಖಂಡಿತ ದರ್ಶನ ಬದಲಾವಣೆ ಆಗುತ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.

    2011 ರಲ್ಲಿ ನಟ ದರ್ಶನ್ ಐತಿಹಾಸಿಕ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದರು. ನಮ್ಮ ಮಠದಲ್ಲಿ ದರ್ಶನ್ ಅವರ ಎರಡು ಸಿನಿಮಾಗಳು ಶೂಟಿಂಗ್ ಆಗಿವೆ. ನಮ್ ಮಠಕ್ಕೂ ಅವರು ಬಂದಿದ್ದಾರೆ. ಅವರಿಗೆ ಜೈಲಿನಲ್ಲಿ ಪುಸ್ತಕ ಅಗತ್ಯ ಇದೆ ಅಂತ ಕೇಳಿದೆವು. ಹಾಗಾಗಿ ಮಠದಿಂದಲೇ ಪುಸ್ತಕ ಕಳುಹಿಸಲಾಗಿದೆ. ದರ್ಶನ್ ಅವರ ಮನ ಪರಿವರ್ತನೆಗೆ ಈ ಪುಸ್ತಕ ಸಹಾಯ ಮಾಡಲಿದೆ ಅನ್ನೋ ನಂಬಿಕೆ ಮಠದ್ದು ಎಂದು ಡಾ.ಗೋವಿಂದ್ ಮಣ್ಣೂರು (Govind Mannur) ಮಾತನಾಡಿದ್ದಾರೆ.

  • Darshan: ‘ಡೆವಿಲ್’ ಸಿನಿಮಾ ಕೈತಪ್ಪಿದರೆ ನಿಜಕ್ಕೂ ಬೇಸರ ಆಗುತ್ತೆ- ವಿನಯ್ ಗೌಡ

    Darshan: ‘ಡೆವಿಲ್’ ಸಿನಿಮಾ ಕೈತಪ್ಪಿದರೆ ನಿಜಕ್ಕೂ ಬೇಸರ ಆಗುತ್ತೆ- ವಿನಯ್ ಗೌಡ

    ‘ಬಿಗ್ ಬಾಸ್’ (Bigg Boss Kannada 10) ಮನೆಯ ಆನೆ ವಿನಯ್ ಗೌಡಗೆ (Vinay Gowda) ದೊಡ್ಮನೆ ಆಟದ ನಂತರ ಸಿನಿಮಾಗೆ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಅದರಲ್ಲಿ ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾ ಕೂಡ ಒಂದು. ಇದೀಗ ಸಿನಿಮಾ ಕಂಪ್ಲಿಟ್ ಆಗುತ್ತಾ, ಇಲ್ವಾ ಅಂತ ಚಿತ್ರತಂಡ ತಲೆಬಿಸಿ ಮಾಡಿಕೊಂಡಿದೆ. ಇದರ ನಡುವೆ ಡೆವಿಲ್ ಸಿನಿಮಾ ಬಗ್ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಲವ್‌, ಬ್ರೇಕಪ್‌ ಬಗ್ಗೆ ಸ್ಫೋಟಕ ವಿಚಾರ ಬಿಚ್ಚಿಟ್ಟ ‘ಕಿರಾತಕ’ ನಟಿ

    ಬಿಗ್ ಬಾಸ್‌ನಿಂದ ಬಂದ್ಮೇಲೆ ‘ಡೆವಿಲ್’ (Devil Film) ನಾನು ನಟಿಸಿದ ಪ್ರಾಜೆಕ್ಟ್. ‘ಡೆವಿಲ್’ ಡೈರೆಕ್ಟರ್ ಮಿಲನ ಪ್ರಕಾಶ್ ಅವರ ನಿರ್ಮಾಣದ ಧಾರಾವಾಹಿಗಳಲ್ಲಿ ನಾನು ನಟಿಸಿದ್ದೇನೆ. ನನ್ನ ನಟನೆ ಏನು ಅಂತ ಅವರು ನೋಡಿದ್ದರು. ಹಾಗಾಗಿ ನನ್ನ ಕರೆಸಿ ನೆಗೆಟಿವ್ ಶೇಡ್ ಪಾತ್ರ ಇದೆ, ಒಳ್ಳೆಯ ಸ್ಟಾರ್ ಮುಂದೆ ವಿಲನ್ ಪಾತ್ರ ಅಂತ ಹೇಳಿದರು. ಆ ಮೇಲೆ ನನಗೆ ಅದು ‘ಡೆವಿಲ್’ ಸಿನಿಮಾ ಎಂದು ತಿಳಿಯಿತು. ನನ್ನ ಭಾಗದ 30% ಶೂಟಿಂಗ್ ಆಗಿದೆ. ಇನ್ನೂ ಡೈಲಾಗ್, ದರ್ಶನ್ ಜೊತೆಗಿನ ಒಂದಷ್ಟು ಶೂಟಿಂಗ್ ಬಾಕಿ ಇದೆ ಎಂದು ವಿನಯ್ ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಕಾನೂನು ವ್ಯವಸ್ಥೆಯ ಅಡಿಯಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ನಾನು ದರ್ಶನ್ ಅವರ ಬಗ್ಗೆ ಮಾತಾಡೋದು ಸರಿ ಇಲ್ಲ. ಎಲ್ಲವೂ ಖುಷಿ ಖುಷಿಯಾಗಿ ಮುಗಿಯಲಿ ಅಂತ ಬಯಸುವೆ ಎಂದು ವಿನಯ್ ಗೌಡ ಹೇಳಿದ್ದಾರೆ.

    ನಾನು ಈ ಪ್ರಾಜೆಕ್ಟ್ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡೋದಿಲ್ಲ. ನನಗೆ ‘ಡೆವಿಲ್’ ಸಿನಿಮಾ ಒಳ್ಳೆಯ ಪ್ರಾಜೆಕ್ಟ್ ಆಗಿತ್ತು. ಇದು ಕೈತಪ್ಪಿದರೆ ನಿಜಕ್ಕೂ ಬೇಸರ ಆಗತ್ತೆ, ಅದರಲ್ಲಿ ಸಂದೇಹ ಇಲ್ಲ ಎಂದು ವಿನಯ್ ಹೇಳಿದ್ದಾರೆ.

    ‘ಡೆವಿಲ್’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರಾವಳಿ ಬೆಡಗಿ ರಚನಾ ರೈ (Rachana Rai) ನಾಯಕಿಯಾಗಿ ನಟಿಸಿದರು. 30%ರಷ್ಟು ಶೂಟಿಂಗ್ ನಡೆದಿತ್ತು. ಆದರೆ ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ದರ್ಶನ್‌ರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

  • ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಮೇಕಿಂಗ್ ವಿಡಿಯೋ ಔಟ್

    ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಮೇಕಿಂಗ್ ವಿಡಿಯೋ ಔಟ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿಮಾನಿಗಳಿಗೆ ಸಿಹಿಸುದ್ದಿ. ಇತ್ತೀಚೆಗೆ ‘ಡೆವಿಲ್’ (Devil Film) ಸಿನಿಮಾದ ಫಸ್ಟ್ ಲುಕ್  ರಿಲೀಸ್ ಆಗಿತ್ತು. ಈಗ ಅದರ ತೆರೆಹಿಂದಿನ ಝಲಕ್ ಹೇಗಿತ್ತು ಎಂಬುದನ್ನು ಇದೀಗ ರಿವೀಲ್ ಮಾಡಿದ್ದಾರೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ.

    ಫೆಬ್ರವರಿಯಲ್ಲಿ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿತ್ತು. ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕ್ಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವಾ? ಎಂದು ದರ್ಶನ್‌ ಹೇಳಿರುವ ಡೈಲಾಗ್ ‘ಡೆವಿಲ್’ ಮೊದಲ ಟೀಸರ್‌ನಲ್ಲಿತ್ತು. ಈಗ ಇದರ ವಿಡಿಯೋ ಬಿಡಲಾಗಿದೆ. ಕಲರ್‌ಫುಲ್‌ ಲೋಕೇಷನ್‌ನಲ್ಲಿ ದರ್ಶನ್ ಸಖತ್ ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಕ್ರಿಕೆಟ್ ಬಾಲ್‌ನಂತೆ ಕಾಣುವ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಮಿಂಚಿಂಗ್

    ‘ತಾರಕ್’ ನಂತರ ‘ಡೆವಿಲ್’ ಚಿತ್ರದ ಮೂಲಕ ಮತ್ತೆ ದರ್ಶನ್‌ಗೆ ಪ್ರಕಾಶ್ ವೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಆದರೆ ಶೂಟಿಂಗ್ ವೇಳೆ, ದರ್ಶನ್ ಕೈಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಈಗ ಗುಣಮುಖರಾಗಿರುವ ದರ್ಶನ್ ಸದ್ಯದಲ್ಲೇ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

    ಅಂದಹಾಗೆ, ‘ಕಾಟೇರ’ (Kaatera)  ಚಿತ್ರದ ಸಕ್ಸಸ್ ನಂತರ 8ಕ್ಕೂ ಹೆಚ್ಚು ಸಿನಿಮಾಗಳಿಗೆ ದರ್ಶನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  • ಗುಣಮುಖರಾದ ದರ್ಶನ್- ಕೈಯಿಂದ ಬ್ಯಾಂಡೇಜ್ ತೆಗೆದು ಫ್ಯಾನ್ಸ್‌ ಜೊತೆ ಕಾಣಿಸಿಕೊಂಡ ಡಿಬಾಸ್

    ಗುಣಮುಖರಾದ ದರ್ಶನ್- ಕೈಯಿಂದ ಬ್ಯಾಂಡೇಜ್ ತೆಗೆದು ಫ್ಯಾನ್ಸ್‌ ಜೊತೆ ಕಾಣಿಸಿಕೊಂಡ ಡಿಬಾಸ್

    ‘ಡೆವಿಲ್’ (Devil Film) ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದ ನಟ ದರ್ಶನ್ (Actor Darshan) ಇದೀಗ ಗುಣಮುಖರಾಗಿದ್ದಾರೆ. ಕೈಯಿಂದ ಬ್ಯಾಂಡೇಜ್ ತೆಗೆದು ತಮ್ಮ ಸೆಲೆಬ್ರಿಟಿಸ್ ಜೊತೆ ದರ್ಶನ್ ಫೋಟೋಗೆ ಪೋಸ್ ನೀಡಿದ್ದಾರೆ. ಅಭಿಮಾನಿಗಳ ಜೊತೆಯಿರುವ ಡಿಬಾಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಇದೀಗ ಬ್ಯಾಂಡೇಜ್ ಇಲ್ಲದೇ ದರ್ಶನ್ ಕಾಣಿಸಿಕೊಂಡಿದ್ದಾರೆ. ಸರ್ಜರಿ ಬಳಿಕ ಚೇತರಿಸಿಕೊಂಡಿರುವ ದರ್ಶನ್ ಅಭಿಮಾನಿಗಳ ಜೊತೆ ಖುಷಿ ಖುಷಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಗುಣಮುಖರಾಗಿರುವ ದರ್ಶನ್‌ರನ್ನು ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ದರ್ಶನ್ ಈಗೀನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.‌ ಇದನ್ನೂ ಓದಿ:‘ಪುಷ್ಪ 2’ ಚಿತ್ರದ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಫಹಾದ್ ಫಾಸಿಲ್

    ಬಹುನಿರೀಕ್ಷಿತ `ಡೆವಿಲ್’ ಸಿನಿಮಾ ಫಸ್ಟ್ ಶೆಡ್ಯೂಲ್ ಮುಗಿದಿದೆ. ಶೀಘ್ರದಲ್ಲೇ ‘ಡೆವಿಲ್’ 2ನೇ ಹಂತದ ಶೂಟಿಂಗ್ ದರ್ಶನ್ ಭಾಗಿಯಾಗಲಿದ್ದಾರೆ.

  • ಡೆವಿಲ್‌ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್‌ ರಾಮ್‌

    ಡೆವಿಲ್‌ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್‌ ರಾಮ್‌

    ಟಾಲಿವುಡ್‌ನ (Tollywood) ಖಡಕ್ ಹೀರೋ ಕಲ್ಯಾಣ್ ರಾಮ್ ಅವರು ‘ಡೆವಿಲ್” (Devil Film)ಆಗಿ ಬರುತ್ತಿದ್ದಾರೆ. ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುತ್ತಿದೆ. ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಲ್ಯಾಣ್ ರಾಮ್ (Kalyan Ram) ಈ ಬಾರಿಯೂ ವಿಶಿಷ್ಟ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ.

    ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ‘ಡೆವಿಲ್’ ಗ್ಲಿಂಪ್ಸ್ ಭಾರೀ ಸದ್ದು ಮಾಡುತ್ತಿದೆ. 1 ನಿಮಿಷ 2 ಸೆಕೆಂಡ್ ಇರುವ ಝಲಕ್‌ನಲ್ಲಿ ಡೆವಿಲ್ ಸ್ವಾತಂತ್ರ‍್ಯ ಪೂರ್ವದ ಬ್ರಿಟಿಷ್ ಏಜೆಂಟ್ ಕಥೆ ಅನ್ನೋ ಗೊತ್ತಾಗುತ್ತಿದೆ. ಗೂಢಚಾರಿ ಹೇಗೆ ಇರಬೇಕು ಅನ್ನೋದನ್ನು ವಿವರಿಸುತ್ತಾ ಎಂಟ್ರಿ ಕೊಡುವ ಕಲ್ಯಾಣ್ ರಾಮ್ ಲುಕ್ ಗೆಟಪ್ ಗಮನ ಸೆಳೆಯುತ್ತದೆ. ಕ್ಯಾಮೆರಾ ವರ್ಕ್ ಹಾಗೂ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ. ಕಲ್ಯಾಣ್ ರಾಮ್ ಗೆ ಜೋಡಿಯಾಗಿ ಸಂಯುಕ್ತ ಮೆನನ್ ನಟಿಸಿದ್ದಾರೆ. ಇದನ್ನೂ ಓದಿ:Salaar Teaser ಔಟ್: ಅದ್ದೂರಿ ಮೇಕಿಂಗ್, ಬ್ರಿಲಿಯಂಟ್ ಕಾಂಬಿನೇಷನ್

    ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಪ್ರೆಸೆಂಟ್ ಮಾಡುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಕಾಂತ್ ವಿಸ್ಸಾ ಒದಗಿಸಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಚಿತ್ರಕ್ಕೆ ಸಂಗೀತ, ಸೌಂದರರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ‘ಡೆವಿಲ್’ ಸಿನಿಮಾ ಮೂಡಿಬರಲಿದೆ.

    ಈ ವರ್ಷ ‘ಅಮಿಗೋಸ್’ ಚಿತ್ರದ ಮೂಲಕ ಕಲ್ಯಾಣ್ ರಾಮ್ ಗಮನ ಸೆಳೆದಿದ್ದರು. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಕನ್ನಡದ ನಟಿ ಆಶಿಕಾ ರಂಗನಾಥ್ ಜೋಡಿಯಾಗಿದ್ದರು. ಈಗ ಡೆವಿಲ್ ಕಥೆ ಹೇಳಲು ಜ್ಯೂ.ಎನ್‌ಟಿಆರ್ ಸಹೋದರ ಸಜ್ಜಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]