Tag: Devil Cinema

  • `ಒಂದು ಸಲ ಸೋತು ಬಿಡು’ ಎನ್ನುತ್ತಾ ರೊಮ್ಯಾಂಟಿಕ್ ಆದ ದರ್ಶನ್ !

    `ಒಂದು ಸಲ ಸೋತು ಬಿಡು’ ಎನ್ನುತ್ತಾ ರೊಮ್ಯಾಂಟಿಕ್ ಆದ ದರ್ಶನ್ !

    ದ್ಯ ಜೈಲಲ್ಲಿರುವ ದರ್ಶನ್‌ಗೆ (Darshan) ಹಾಸಿಗೆ ದಿಂಬು ಪಡೆದುಕೊಳ್ಳುವುದೇ ದೊಡ್ಡ ಸಾಹಸ ಆಗಿರುವಾಗ ರೊಮ್ಯಾನ್ಸ್ ಎಲ್ಲಿಂದ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳೋದ್ರಲ್ಲಿ ಸಂದೇಹವಿಲ್ಲ. ಹೌದು ಜೈಲಲ್ಲಿರುವ ದರ್ಶನ್ ನರಕ ಅನುಭವಿಸುತ್ತಿದ್ದರೆ ಇಲ್ಲಿ ಅವರ ಅಭಿನಯದ `ಡೆವಿಲ್’ ಚಿತ್ರದ (Devil Cinema) ರೊಮ್ಯಾಂಟಿಕ್ ಹಾಡು ರಿಲೀಸ್ ಆಗೋದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಥೈಲ್ಯಾಂಡ್‌ನಲ್ಲಿ ಚಿತ್ರೀಕರಣವಾದ ಹಾಡಿಗೆ ನಟಿ ರಚನಾ ರೈ ಜೊತೆ ದರ್ಶನ್ ರೊಮ್ಯಾನ್ಸ್ ಮಾಡಿದ್ದಾರೆ. ಹಾಡಿನ ಪ್ರೋಮೋ ರಿಲೀಸ್ ಆಗಿದ್ದು ಅತಿವೇಗದಲ್ಲಿ ಭಾರಿ ಮೆಚ್ಚುಗೆ ಪಡೆದುಕೊಳ್ತಿದೆ.

    ಅಕ್ಟೋಬರ್ 10ರ ಶುಕ್ರವಾರ ಸಂಜೆ 6 ಗಂಟೆಗೆ ರಿಲೀಸ್ ಆಗಲಿರುವ ಹಾಡಿಗಾಗಿ ದರ್ಶನ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದು ಡೆವಿಲ್ ಚಿತ್ರದ ಎರಡನೇ ಹಾಡಾಗಿದ್ದು ಹಿಂದೆ ರಿಲೀಸ್ ಆಗಿದ್ದ `ಇದ್ರೆ ನೆಮ್ದಿಯಾಗಿರ್ಬೇಕ್’ ಹಾಡಿಗೆ ಕಾಂಟ್ರ್ಯಾಸ್ಟ್ ಆಗಿರಲಿದೆ ಈ ಹಾಡು. `ಒಂದೇ ಒಂದು ಸಲ ಸೋತು ಬಿಡು ನೀನು..ಒಂದೇ ಒಂದು ಮಾತೂ ಆಡದೆ’, ಎನ್ನುವ ಸಾಲಿನಿಂದ ಶುರುವಾಗುವ ಹಾಡಿನ ಹೆಚ್ಚಿನ ಮಾಹಿತಿ ರಿಲೀಸ್ ಆದ ಬಳಿಕವೇ ತಿಳಿಯಬೇಕಿದೆ.

    ರಿಲೀಸ್ ಆಗಿರುವ ಹಾಡಿನ ಪ್ರೋಮೋದಲ್ಲಿ ರಚನಾ ರೈ ಬೀಚ್‌ವೇರ್ ಧರಿಸಿ ದರ್ಶನ್ ಜೊತೆ ಬಿಂದಾಸ್ ಸ್ಟೆಪ್ ಹಾಕಿದ್ದಾರೆ.

  • ಡಿಸೆಂಬರ್‌ನಲ್ಲಿ `ಡೆವಿಲ್’ ರಿಲೀಸ್ – ಡಿಂಪಲ್ ಕ್ವೀನ್ ರಚ್ಚು ಹೇಳಿದ್ದೇನು?

    ಡಿಸೆಂಬರ್‌ನಲ್ಲಿ `ಡೆವಿಲ್’ ರಿಲೀಸ್ – ಡಿಂಪಲ್ ಕ್ವೀನ್ ರಚ್ಚು ಹೇಳಿದ್ದೇನು?

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನ ನಿವಾಸದ ಮುಂದೆ ಅಭಿಮಾನಿಗಳ ಸಮ್ಮುಖದಲ್ಲಿ ಗ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ದೂರದ ಊರಿನಿಂದ ಬಂದ ಅಭಿಮಾನಿಗಳಿಗೆ ಸೆಲ್ಫಿ ಕೊಟ್ಟು ಇಡೀ ದಿನ ಅವರೊಂದಿಗೆ ಕಳೆದಿದ್ದಾರೆ. ಹುಟ್ಟುಹಬ್ಬದ ಈ ವೇಳೆ ದರ್ಶನ್ ಅಭಿಮಾನಿಗಳು (Darshan Fans) ಹಬ್ಬ ಮಾಡುವ ಸುದ್ದಿ ಕೊಟ್ಟಿದ್ದಾರೆ ರಚಿತಾ ರಾಮ್.

    ರಚಿತಾ ರಾಮ್, ನಟ ದರ್ಶನ್ ಅವರ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ದರ್ಶನ್ ಕಳೆದ ಬಾರಿ ಜೈಲಿನಲ್ಲಿದ್ದಾಗ ಭೇಟಿ ಕೂಡಾ ಮಾಡಿ ಬಂದಿದ್ದರು. ತಮ್ಮ ಹುಟ್ಟುಹಬ್ಬದ ವೇಳೆ ಮತ್ತೆ ಅವರ ನೆನಪು ಮಾಡಿಕೊಂಡಿದ್ದಾರೆ ರಚಿತಾ. ಪ್ರತೀವರ್ಷ ದರ್ಶನ್ ಅವರಿಂದ ಬರುತ್ತಿದ್ದ ವಿಶ್ ಮಿಸ್ ಮಾಡಿಕೊಂಡ ಬಗ್ಗೆ ಬೇಸರ ಹೊರಹಾಕಿದ್ದಾರೆ. ಇನ್ನು ದರ್ಶನ್ ನಟನೆಯ ಡೆವಿಲ್ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದನ್ನೂ ಓದಿ: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್

    ಡೆವಿಲ್ ಸಿನಿಮಾದ (Devil Movie) ರಿಲೀಸ್ ವೇಳೆ ಚಿತ್ರದ ಪ್ರಚಾರಕ್ಕೆ ನಿಲ್ಲೋದಾಗಿ ನಟಿ ರಚಿತಾ ರಾಮ್ ಹೇಳಿದ್ದಾರೆ. ನನ್ನನ್ನು ಇಂಡಸ್ಟ್ರಿಗೆ ತಂದಿದ್ದೇ ದರ್ಶನ್ ಸರ್, ಅವರು ನಮ್ಮ ಗುರುಗಳು. ಅವರ ಸಿನಿಮಾ ರಿಲೀಸ್ ವೇಳೆ ಪ್ರಚಾರ ಮಾಡುತ್ತೇನೆ. ಆ ಚಿತ್ರತಂಡದ ಜೊತೆ ನಿಲ್ಲುತ್ತೇನೆ ಎನ್ನುವ ಮಾತುಗಳನ್ನಾಡಿದ್ದಾರೆ.

    ಈ ಸುದ್ದಿ ಕೇಳಿದ ದಚ್ಚು ಫ್ಯಾನ್ಸ್ ಖುಷಿಯಿಂದ ಸಂಭ್ರಮಿಸಿದ್ದಾರೆ. ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಎಲ್ಲಾ ನಟರ ಅಭಿಮಾನಿಗಳು ಆಗಮಿಸಿ ರಚ್ಚು ಬರ್ತ್ಡೇ ಗ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದ್ದಾರೆ. ರಚಿತಾ ರಾಮ್ ಈ ವರ್ಷದ ತಮ್ಮ ಹುಟ್ಟು ಹಬ್ಬದ ವೇಳೆ ಹಲವಾರು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

  • ಡೆವಿಲ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಡೆವಿಲ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ರ್ಶನ್ (Darshan) ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಗುಡ್‌ನ್ಯೂಸ್. ದರ್ಶನ್ ನಟನೆಯ ಡೆವಿಲ್ (Devil) ಸಿನಿಮಾದ `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ಇಂದು (ಆ.24) ರಿಲೀಸ್ ಆಗಿದೆ. ಸಾಂಗ್ ರಿಲೀಸ್ ಆಗಿ ಕೆಲವೇ ನಿಮಿಷಗಳಲ್ಲಿ ಚಿತ್ರದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದೆ. ಹೌದು, ಡೆವಿಲ್ ಸಿನಿಮಾ ಇದೇ ವರ್ಷ ಡಿಸೆಂಬರ್ 12ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸುದ್ದಿಯನ್ನ ದರ್ಶನ್ ಅವರ ಸಾಮಾಜಿಕ ಜಾಲತಾದಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ.

    ದರ್ಶನ್ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಿರುವ ದರ್ಶನ್ ಪತ್ನಿ ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಧನ್ಯವಾದಗಳನ್ನ ಹೇಳಿದ್ದಾರೆ. `ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು. ನೀವು ಕಾತುರದಿಂದ ಕಾಯುತ್ತಿದ್ದ ದಿ ಡೆವಿಲ್ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ’ ಎಂದು ತಮ್ಮ ಸೆಲೆಬ್ರಿಟಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸಾಂಗ್ ನೋಡಿ ಸಂಭ್ರಮ ಪಡುತ್ತಿದ್ದ ಫ್ಯಾನ್ಸ್ ಸಿನಿಮಾ ರಿಲೀಸ್ ಡೇಟ್ ನೋಡಿ ಮತ್ತಷ್ಟು ಖುಷಿಯಿಂದ ಸಂಭ್ರಮಿಸಿದ್ದಾರೆ.

     

    ಡೆವಿಲ್ ಸಿನಿಮಾದ `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಮೊದಲ ಸಾಂಗ್ ರಿಲೀಸ್ ಆಗಿ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಇದೀಗ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿರೋದು ದರ್ಶನ್ ಸೆಲೆಬ್ರಿಟಿಗಳಿಗೆ ಗಣೇಶ್ ಹಬ್ಬ ಡಬಲ್ ಧಮಾಕಾ ಸೃಷ್ಟಿಸಿದೆ. ಡಿಸೆಂಬರ್ 12ಕ್ಕೆ ಹಬ್ಬ ಮಾಡೋಕೆ ದರ್ಶನ್ ಫ್ಯಾನ್ಸ್ ಸಜ್ಜಾಗಿ ಎನ್ನುವ ಮೆಸೇಜ್ ಪಾಸ್ ಮಾಡಿದೆ ಡೆವಿಲ್ ಚಿತ್ರತಂಡ.

  • ದರ್ಶನ್‌ ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳು ಮಾಡಿಕೊಂಡ್ರು: ರಮ್ಯಾ ಸಾಫ್ಟ್‌ ಕಾರ್ನರ್‌

    ದರ್ಶನ್‌ ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳು ಮಾಡಿಕೊಂಡ್ರು: ರಮ್ಯಾ ಸಾಫ್ಟ್‌ ಕಾರ್ನರ್‌

    – ವಿಜಯಲಕ್ಷ್ಮಿ ಪರವೂ ಬ್ಯಾಟ್‌ ಬೀಸಿದ ರಮ್ಯಾ

    ಚಿತ್ರರಂಗಕ್ಕೆ ದರ್ಶನ್‌ (Darshan) ಲೈಟ್‌ಬಾಯ್‌ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್‌ ಕಾರ್ನರ್‌ ತೋರಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್‌ ಕಾಮೆಂಟ್ಸ್‌ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್‌ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸುವುದಾಗಿ ಹೇಳಿದರು. ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ – ಅಭಿಮಾನಿಗಳೊಂದಿಗೆ ನಿಂತ ನಟ ಅನಿರುದ್ಧ

    ಮುಂದುವರಿದು… ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌

    ಇನ್ನೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಅಂತಿನಿ ಅಂದರು. ಇದನ್ನೂ ಓದಿ: ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

  • ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

    ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

    ಕೊಲೆ ಆರೋಪಿ ಆಗಿರುವ ನಟ ದರ್ಶನ್‌ (Darshan) ಮೂರನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿ ಮೂರು ದಿನಗಳು ಕಳೆದಿವೆ. ರಾಜಾತಿಥ್ಯ ಕೊಟ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್‌ (Supreme Court) ಎಚ್ಚರಿಕೆ ನೀಡಿರುವ ಹಿನ್ನೆಲೆ ದರ್ಶನ್‌ಗೆ ಜೈಲ್‌ನ ಮೆನುವಿನ ಪ್ರಕಾರವೇ ಊಟ ನೀಡಲಾಗುತ್ತಿದೆ.

     

    View this post on Instagram

     

    A post shared by Vijayalakshmi darshan (@viji.darshan)

    ಸದ್ಯಕ್ಕೆ ಸಹ ಕೈದಿಗಳ ಜೊತೆಗೂ ಬಿಡದ ಕಾರಣ ನಾಲ್ಕು ಗೋಡೆಗಳ ಮಧ್ಯದಲ್ಲೇ ದಿನದ ಬಹುತೇಕ ಸಮಯ ಕಳೆಬೇಕಿದೆ ದರ್ಶನ್‌. ಇತ್ತ ಮೇಲಿಂದ ಮೇಲೆ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಪತ್ನಿ ವಿಜಯಲಕ್ಷ್ಮಿ ಈಗ ದರ್ಶನ್‌ ಪರ ಸಿನಿ ಪ್ರಚಾರಕ್ಕಿಳಿದಿದ್ದಾರೆ. ಇದನ್ನೂ ಓದಿ: ಬಂಧನ ಬಳಿಕ ದರ್ಶನ್, ಪವಿತ್ರಾ ಗೌಡ ಮೊದಲ ಫೋಟೋ ವೈರಲ್

    ಯೆಸ್‌. ದರ್ಶನ್‌ ಪರ ಅಖಾಡಕ್ಕಿಳಿದಿರುವ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ತಮ್ಮ ಇನ್‌ಸ್ಟಾ ಖಾತೆಯಲ್ಲಿ ಡೆವಿಲ್‌ ಸಿನಿಮಾ ಪ್ರಚಾರ ಕುರಿತಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ದಚ್ಚು ಅಭಿಮಾನಿಗಳಿಗೆ ಭರವಸೆಯಾಗಿ ನಿಂತಿದ್ದಾರೆ. ಇದನ್ನೂ ಓದಿ: ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್

    ಪೋಸ್ಟ್‌ನಲ್ಲಿ ಏನಿದೆ?
    ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತಮ್ಮ ಹೃದಯದಲ್ಲಿ ಹೊತ್ತುಕೊಂಡಿರ್ತಾರೆ. ನಿಮ್ಮೆಲ್ಲರಿಗಾಗಿ ಹಿಂತಿರುಗುವವರೆಗೆ, ಅವರ ಪರವಾಗಿ ನಾನು ಸೋಷಿಉಲ್‌ ಮೀಡಿಯಾವನ್ನು ನಿರ್ವಹಿಸುತ್ತೇನೆ. ಜೊತೆಗೆ ಚಲನಚಿತ್ರ ಪ್ರಚಾರ ಹಾಗೂ ಅಪ್‌ಡೇಟ್ಸ್‌ಗಳನ್ನು ಹಂಚಿಕೊಳ್ಳುತ್ತೇನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ – ಹೆಸರೇನು ಗೊತ್ತಾ?

    ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆ ಮತ್ತು ತಾಳ್ಮೆ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ. ಆ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ. ನೀವು ಯಾವಾಗಲೂ ತಿಳಿದಿರುವ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಹಿಂತಿರುಗುತ್ತಾರೆ ಎಂದು ಬರೆದುಕೊಂಡಿದ್ದಾರೆ.

  • ಥೈಲ್ಯಾಂಡ್‌ನಲ್ಲಿ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್

    ಥೈಲ್ಯಾಂಡ್‌ನಲ್ಲಿ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್

    ಬೆಂಗಳೂರು: ‘ಡೆವಿಲ್’ ಸಿನಿಮಾ (Devil Cinema) ಶೂಟಿಂಗ್ ಸಲುವಾಗಿ ಥೈಲ್ಯಾಂಡ್‌ಗೆ (Thailand) ತೆರಳಿದ್ದ ನಟ ದರ್ಶನ್ (Darshan) ಶುಕ್ರವಾರ ರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ರಾತ್ರಿ 11:45ರ ವಿಮಾನದಲ್ಲಿ ದೇವನಹಳ್ಳಿಯ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ಕಳೆದ 10 ದಿನಗಳ ಹಿಂದೆ ‘ಡೆವಿಲ್’ ಸಿನಿಮಾ ಶೂಟಿಂಗ್‌ಗೆಂದು ನಟ ದರ್ಶನ್, ಪತ್ನಿ ಹಾಗೂ ಮಗನೊಂದಿಗೆ ಥೈಲ್ಯಾಂಡ್‌ಗೆ ತೆರಳಿದ್ದರು.

    ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಒಂದು ವಾರದಲ್ಲಿ ಆದೇಶ ಹೊರಡಿಸಲಿದೆ.

  • ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್

    ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್

    ಡೆವಿಲ್ (Devil) ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ನಟ ದರ್ಶನ್ (Darshan) ಥೈಲ್ಯಾಂಡ್‌ಗೆ (Thailand) ತೆರಳಿದ್ದಾರೆ. ಇಂದಿನಿಂದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಹಸಿರು ಬಣ್ಣದ ಸೂಟ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ವಿದೇಶಿ ಪ್ರವಾಸಿಗರ ಜೊತೆ ದರ್ಶನ್ ಫೋಟೋ ರಿವೀಲ್ ಆಗಿದೆ.

    ಕಳೆದ ಮಂಗಳವಾರ ರಾತ್ರಿ ದರ್ಶನ್, ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆ ಹಾಗೂ ಡೆವಿಲ್ ಟೀಮ್ ಜೊತೆ ಥೈಲ್ಯಾಂಡ್‌ಗೆ ತೆರಳಿದ್ದರು. ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ನಟಿ ರಚನಾ ರೈ ಜೊತೆ ದರ್ಶನ್ ಡ್ಯುಯೆಟ್ ಸಾಂಗ್ ಇದಾಗಿದೆ.

     

    ನಾಲ್ಕೈದು ದಿನಗಳ ಕಾಲ ಥೈಲ್ಯಾಂಡ್ ದೇಶದ ಬ್ಯಾಂಕಾಕ್, ಫುಕೆಟ್, ಕ್ರಾಬಿಯಲ್ಲಿ ಹಾಡಿನ ಚಿತ್ರೀಕಣ ನಡೆಯಲಿದ್ದು ಬಳಿಕ ಕೆಲ ದಿನ ದರ್ಶನ್ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ದರ್ಶನ್ ಭಾರತಕ್ಕೆ ಮರಳಲಿದ್ದಾರೆ. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ವರ್ಷಗಳ ಬಳಿಕ ದೇಶ ಬಿಟ್ಟು ವಿದೇಶಕ್ಕೆ ತೆರಳಿರುವ ಖುಷಿಯಲ್ಲಿದ್ದಾರೆ.

  • ಡೆವಿಲ್ ಸಿನಿಮಾದಲ್ಲಿ ನಟಿಸಿಲ್ಲ ದರ್ಶನ್ ಪುತ್ರ

    ಡೆವಿಲ್ ಸಿನಿಮಾದಲ್ಲಿ ನಟಿಸಿಲ್ಲ ದರ್ಶನ್ ಪುತ್ರ

    ರಡು ದಿನಗಳ ಹಿಂದೆಯಷ್ಟೇ ಡೆವಿಲ್ (Devil) ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿತ್ತು. ಆ ವಿಡಿಯೋದಲ್ಲಿ ದರ್ಶನ್ (Darshan) ಪುತ್ರ ವಿನೀಶ್ ಮೇಕಪ್ ಮಾಡಿಕೊಳ್ಳುತ್ತಿರುವ ದೃಶ್ಯವೂ ಇತ್ತು. ಹಾಗಾಗಿ ಡೆವಿಲ್ ಚಿತ್ರದಲ್ಲಿ ವಿನೀಶ್ ಕೂಡ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಮತ್ತೊಂದು ವಿಷಯವು ಚರ್ಚೆಗೆ ಬಂದಿತ್ತು.

    ಅಂದುಕೊಂಡಂತೆ ಆಗಿದ್ದರೆ ದರ್ಶನ್ ಸಹೋದರಿಯ ಮಗ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಅಕ್ಕನ ಮಗನ ಬದಲು ಪುತ್ರನಿಗೆ ನಟಿಸಲು ಅವಕಾಶ ಕೊಟ್ಟರಾ ದರ್ಶನ್ ಅನ್ನುವ ಪ್ರಶ್ನೆಯು ವಿಡಿಯೋ ವೈರಲ್ ಆದ ಮೇಲೆ ಎದ್ದಿತ್ತು. ದರ್ಶನ್ ಸಹೋದರಿ ಮಗ ಚಂದುಗೆ ದರ್ಶನ್ ಫ್ಯಾನ್ಸ್ ಕಾಲು ಮುಗಿದರು ಅನ್ನೋ ಕಾರಣಕ್ಕೆ ಡೆವಿಲ್ ಸಿನಿಮಾದಿಂದ ಕೈ ಬಿಟ್ಟಿರೋ ವಿಷ್ಯವನ್ನು ದರ್ಶನ್ ಅವರೇ ಬಹಿರಂಗಪಡಿಸಿದ್ದರು. ಇದೀಗ ಡೆವಿಲ್ ಸಿನಿಮಾದ ರಾಜಸ್ಥಾನ ಭಾಗದ ಶೂಟಿಂಗ್ ವಿಡಿಯೋ ರಿಲೀಸ್ ಆಗಿದ್ದು, ಅದರಲ್ಲಿ ದರ್ಶನ್ ಪುತ್ರ ವಿನೀಶ್ (Vineesh) ಮೇಕಪ್ ಮಾಡಿಕೊಳ್ಳುತ್ತಿರುವುದು ಕಾಣಬಹುದಾಗಿತ್ತು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ

    ವಿನೀಶ್ ಮೇಕಪ್ ಮಾಡಿಕೊಳ್ಳುತ್ತಾ ಹೇರ್ ಸ್ಟೈಲ್ ಸರಿ ಮಾಡಿಕೊಳ್ಳುತ್ತಿರುವುದು ಡೆವಿಲ್ ಮೇಕಿಂಗ್ ಝಲಕ್‌ನಲ್ಲಿದೆ. ಜೊತೆಗೆ ಈ ಹಿಂದೆ ಐರಾವತ ಹಾಗೂ ಯಜಮಾನ ಚಿತ್ರದಲ್ಲಿ ತಂದೆ ಜೊತೆ ವಿನೀಶ್ ನಟಿಸಿದ್ದರು. ಈಗ ಡೆವಿಲ್ ಚಿತ್ರದಲ್ಲೂ ನಟಿಸಿದ್ದಾರಾ ಅನ್ನೋ ಕುತೂಹಲ ಮೂಡಿಸಿತ್ತು. ಸಿಕ್ಕಿರೋ ಮಾಹಿತಿ ಪ್ರಕಾರ ವಿನೀಶ್ ನಟಿಸಿಲ್ಲ. ಸುಮ್ಮನೆ ಮೇಕಪ್ ಮಾಡಿಕೊಂಡಿದ್ದರಷ್ಟೇ ಎನ್ನಲಾಗಿದೆ. ಇದನ್ನೂ ಓದಿ: ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು

    ಮಾರ್ಚ್ ಕೊನೆ ವಾರದಲ್ಲಿ ಡೆವಿಲ್ ಚಿತ್ರತಂಡ ರಾಜಸ್ಥಾನಕ್ಕೆ ತೆರಳಿತ್ತು. ಉದಯಪುರ ರಾಫೆಲ್ಸ್ ಹೋಟೆಲ್‌ನಲ್ಲಿ 10 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಕೆಲವು ಸನ್ನಿವೇಶಗಳ ಜೊತೆಗೆ ಉದಯಪುರ ಶೆಡ್ಯೂಲ್‌ನಲ್ಲಿ ಸಣ್ಣದೊಂದು ಆಕ್ಷನ್ ಸೀಕ್ವೆನ್ಸ್ ಶೂಟ್ ಕೂಡ ಮಾಡಲಾಗಿದೆ.

  • ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

    ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

    ಟ ದರ್ಶನ್ ಪ್ರಸ್ತುತ `ಡೆವಿಲ್’ ಸಿನಿಮಾದ (Devil Cinema) ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಕಳೆದ ತಿಂಗಳೇ `ಡೆವಿಲ್’ ಚಿತ್ರದ ಟಾಕಿ ಭಾಗದ ಚಿತ್ರೀಕರಣಕ್ಕೆ ಫುಲ್‌ಸ್ಟಾಪ್ ಬಿದ್ದಿತ್ತು. ದರ್ಶನ್ (Darshan) ಕನ್ವರ್‌ಲಾಲ್ ಗೆಟಪ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಟಾಕಿ ಮುಕ್ತಾಯವಾಗಿದ್ದ ವಿಷಯ ಘೋಷಿಸಿತ್ತು `ಡೆವಿಲ್’ ತಂಡ. ಇದೀಗ ಬಾಕಿ ಉಳಿದಿರುವ ಎರಡು ಹಾಡಿನ ಚಿತ್ರೀಕರಣಲ್ಲಿ ಒಂದು ಹಾಡನ್ನ ಇದೇ ವಾರ ಚಿತ್ರೀಕರಿಸಿಕೊಳ್ಳಲಿರುವ ತಂಡ ಬಾಕಿ ಉಳಿದಿರುವ ಫೈಟ್‌ಸೀನ್ ಚಿತ್ರೀಕರಣವನ್ನೂ ಇದೇ ವಾರವೇ ಮುಗಿಸಲಿದೆ.

    ಸೋಮವಾರದಿಂದ ಸಾಹಸ ದೃಶ್ಯವೊಂದರ ಚಿತ್ರೀಕರಣ ಬಳಿಕ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಬಾಕಿ ಉಳಿದಿರುವ ಇನ್ನೊಂದು ಹಾಡನ್ನ ವಿದೇಶದಲ್ಲಿ ಚಿತ್ರೀಕರಿಸಿಕೊಳ್ಳಲು ಪ್ಲ್ಯಾನ್ ರೆಡಿಯಾಗಿದ್ದು‌, ಮುಂದಿನ ತಿಂಗಳು ಮೊದಲ ವಾರದಲ್ಲೇ ದರ್ಶನ್ ವಿದೇಶ ಪ್ರಯಾಣ ಬೆಳೆಸಲಿದ್ದಾರೆ. ವಿದೇಶಕ್ಕೆ ತೆರಳಲು ಈಗಾಗ್ಲೇ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿರುವ ದರ್ಶನ್, ಜುಲೈ ಮೊದಲ ವಾರದಲ್ಲಿ ಡೆವಿಲ್ ಹಾಡಿನ ಚಿತ್ರೀಕರಣಕ್ಕಾಗಿ ತಂಡದ ಜೊತೆ ಯುರೋಪ್ ದೇಶಗಳಿಗೆ ತೆರಳಲಿದ್ದಾರೆ. ಬಹುಶಃ ಸ್ವಿಜ್ಡರ್‌ಲ್ಯಾಂಡ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ದುಬೈಗೂ ತೆರಳುವ ಸಂಭವ ಇದೆ.

    ಕೊಲೆ ಆರೋಪದಡಿ ಜೈಲು ಸೇರಿದ್ದ ದರ್ಶನ್ ಅಲ್ಪ ಶೂಟಿಂಗ್ ಆಗಿ ನಿಂತುಹೋಗಿದ್ದ `ಡೆವಿಲ್’ ಚಿತ್ರದ ಚಿತ್ರೀಕರಣವನ್ನ ಇದೀಗ ಸಂಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ. ಮಾರ್ಚ್ ಕೊನೆಯ ವಾರದಿಂದ `ಡೆವಿಲ್’ ಚಿತ್ರೀಕರಣ ಮರು ಪ್ರಾರಂಭವಾಗಿತ್ತು. ಇದೀಗ ಜೂನ್ ಅಂತ್ಯದಲ್ಲಿ `ಡೆವಿಲ್’ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ. ಶೀಘ್ರದಲ್ಲೇ `ಡೆವಿಲ್’ ಟೀಮ್, ರಿಲೀಸ್ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

  • ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಬೆಂಗಳೂರು: ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಆದೇಶವನ್ನು ಕೋರ್ಟ್ ಮೇ 30 ಕ್ಕೆ ಕಾಯ್ದಿರಿಸಿದೆ.

    ಇಂದು ಅರ್ಜಿ ವಿಚಾರಣೆ ನಡೆಸಿದ 64ನೇ ಸಿಸಿಎಚ್ ಕೋರ್ಟ್ ವಾದ-ಪ್ರತಿವಾದ ಆಲಿಸಿ ಮೇ 30ಕ್ಕೆ ಆದೇಶ ಕಾಯ್ದಿರಿಸಿದೆ. ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ದುಬೈ ಮತ್ತು ಯೂರೋಪ್‌ಗೆ ತೆರಳಲು ಜೂನ್ 1ರಿಂದ ಜೂನ್ 25ರ ವರೆಗೆ ಅವಕಾಶಕ್ಕಾಗಿ ದರ್ಶನ್ ಮನವಿ ಸಲ್ಲಿಸಿದ್ದರು. ದರ್ಶನ್ ಅರ್ಜಿಗೆ ಎಸ್‌ಎಸ್‌ಪಿ ಆಕ್ಷೇಪಣೆ ಸಲ್ಲಿಸಿದ್ದರು.

    ಸಿಆರ್‌ಪಿಸಿ ಸೆಕ್ಷನ್ 439(1) (b) ಅಡಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.

    ದರ್ಶನ್ ವಿದೇಶಕ್ಕೆ ತೆರಳಿದರೆ ವಾಪಸ್ ಭಾರತಕ್ಕೆ ಬರುವುದು ಅನುಮಾನ. ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ವಿದೇಶಕ್ಕೆ ತೆರಳುವುದಕ್ಕೆ ಅನುಮತಿ ನೀಡದಂತೆ ಎಸ್‌ಪಿಪಿ ಕೋರ್ಟ್ ಮುಂದೆ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ಮೇ 30ಕ್ಕೆ ಕಾಯ್ದಿರಿಸಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪವನ್ನು ದರ್ಶನ್ ಎದುರಿಸುತ್ತಿದ್ದಾರೆ. ಹಲವು ತಿಂಗಳುಗಳ ಜೈಲುವಾಸದ ಬಳಿಕ ದರ್ಶನ್‌ಗೆ ಕೋರ್ಟ್ ಜಾಮೀನು ನೀಡಿದೆ.