Tag: Devi

  • ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ಬಾಲಿವುಡ್ (Bollywood) ನಟಿ ಬಿಪಾಶಾ ಬಸು(Bipasha Basu) ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳ ಆರೋಗ್ಯದ ಬಗ್ಗೆ ಬಿಪಾಶಾ ಭಾವುಕರಾಗಿದ್ದಾರೆ. ಮಗಳು ಹುಟ್ಟಿದ ಮೂರೇ ದಿನಕ್ಕೆ ಮಗಳಿಗೆ ಹಾರ್ಟ್‌ನಲ್ಲಿ ರಂಧ್ರವಿರುವ ವಿಚಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆಕೆಯ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂದು ನಟಿ ಲೈವ್‌ನಲ್ಲಿ ಕಣ್ಣೀರಿಟ್ಟಿದ್ದಾರೆ.

    ಹಿಂದಿ ಸಿನಿಮಾಗಳ ಮೂಲ ಸಂಚಲನ ಮೂಡಿಸಿದ ನಟಿ ಬಿಪಾಶಾ ಅವರು ಮದುವೆಯ ಬಳಿಕ ಮಗಳ ಆರೈಕೆ, ದಾಂಪತ್ಯ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ನಟಿ ನೇಹಾ ಧೂಫಿಯಾ (Neha Dhuphia) ನಡೆಸಿರುವ ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ಮಗಳ ಬಗ್ಗೆ ಆಘಾತಕಾರಿ ಸುದ್ದಿಯೊಂದನ್ನ ಬಿಪಾಶಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಒಲಿದು ಬಂದ ಅದೃಷ್ಟ- ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡತಿ

    ಮಗು ಜನಿಸಿದ ಮೂರನೇ ದಿನಕ್ಕೆ ಈ ಶಾಕಿಂಗ್ ವಿಚಾರ ವೈದ್ಯರಿಗೆ ತಿಳಿಯಿತು. ಇದನ್ನು ವೈದ್ಯರು ಬಿಪಾಶಾಗೆ ಹೇಳಿದರು. ಆದರೆ, ಈ ವಿಚಾರವನ್ನು ಅವರು ಎಲ್ಲೂ ಹಂಚಿಕೊಳ್ಳಲಿಲ್ಲ. ಮಗುವಿನ ಹೃದಯದಲ್ಲಿ ರಂಧ್ರಗಳಿರುವ ವಿಚಾರ ಮೂರು ದಿನಗಳ ನಂತರ ನಮಗೆ ತಿಳಿಯಿತು. ಸರಿ ಆಗಬಹುದು ಎಂದು ಕಾದೆವು. ಆದರೆ, ಆಗಲಿಲ್ಲ. ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ತುಂಬಾ ಕಷ್ಟ. ಕೊನೆಗೂ ನಾವು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆವು. ಬಳಿಕ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದರು ಎಂದು ನಟಿ ಬಿಪಾಶಾ ತಿಳಿಸಿದರು.

    ಮಗಳು ಆಪರೇಷನ್ ಥಿಯೇಟರ್‌ನಲ್ಲಿದ್ದ ಆ 6 ಗಂಟೆ ನನ್ನ ಪ್ರಾಣವೇ ನಿಂತು ಹೋದಂತೆ ಅಂದು ಭಾಸವಾಗಿತ್ತು. ದೇವಿ (Devi) ಈಗ ಆರಾಮಾಗಿದ್ದಾಳೆ. ಮಗು ಗುಣಮುಖವಾಗಿದ್ದಾಳೆ ಎಂದು ತಿಳಿಯಲು ಪ್ರತಿ ತಿಂಗಳು ಮಗುವಿಗೆ ಹೃದಯದ ಸ್ಕ್ಯಾನ್ ಮಾಡಬೇಕಾಗುತ್ತದೆ. ಅದನ್ನು ನಾವು ಮಾಡಿಸುತ್ತಿದ್ದೇವೆ ಎಂದು ನಟಿ ಕಣ್ಣೀರು ಹಾಕಿದ್ದಾರೆ.

    2016ರಲ್ಲಿ ಕರಣ್ ಗ್ರೋವರ್ (Karan Grover) ಜೊತೆ ಬಿಪಾಶಾ ಬಸು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮುದ್ದಾದ ಮಗಳು ದೇವಿ ಪಾಲನೆಯಲ್ಲಿ ನಟಿ ಬ್ಯುಸಿಯಿದ್ದಾರೆ. ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಬಿಪಾಶಾ ಬಸು

    ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಬಿಪಾಶಾ ಬಸು

    ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu) ಸದ್ಯ ತಾಯ್ತನದಲ್ಲಿ ಖುಷಿಯಲ್ಲಿದ್ದಾರೆ. ಮುದ್ದು ಮಗಳು ದೇವಿ (Devi) ಮುಖವನ್ನ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಮಗಳ ಚೆಂದದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ರೇಸ್ 2, ಅಲೋನ್, ಗೋಲ್ ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಬಿಪಾಶಾ ಬಸು ಮಿಂಚಿದ್ದಾರೆ.

    2014ರಲ್ಲಿ Alone ಸಿನಿಮಾದಲ್ಲಿ ಕರಣ್ ಸಿಂಗ್‌ಗೆ ಬಿಪಾಶಾ ಬಸು ನಾಯಕಿಯಾಗಿದ್ದರು. ಸಿನಿಮಾ ಸೆಟ್‌ನಲ್ಲಿ ಭೇಟಿಯಾದ ಈ ಜೋಡಿ ರಿಯಲ್‌ ಲೈಫ್‌ನಲ್ಲಿಯೂ ಜೋಡಿಯಾದರು. 2016ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಬಿಪಾಶಾ-ಕರಣ್ ಮದುವೆಯಾದರು.

     

    View this post on Instagram

     

    A post shared by Bipasha Basu (@bipashabasu)

    ಕಳೆದ ವರ್ಷ ನವೆಂಬರ್ 12ರಂದು ಮುದ್ದು ಮಗಳ ಆಗಮನವಾಗಿತ್ತು. ಮಗುವಿಗೆ ದೇವಿ ಎಂದು ಹೆಸರನ್ನೀಟ್ಟಿದ್ದಾರೆ. ಇದೀಗ 5 ತಿಂಗಳು ತುಂಬಿದ ಶುಭ ಸಂದರ್ಭದಲ್ಲಿ, ಫಸ್ಟ್ ಟೈಮ್ ಮಗಳ ಮುಖವನ್ನ ನಟಿ ರಿವೀಲ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿರುವ ಮಗುವಿಗೆ ಹೇರ್ ಬೆಂಡ್ ಹಾಕಿರುವ ಫೋಟೋವನ್ನ ಬಿಪಾಶಾ ದಂಪತಿ ಶೇರ್ ಮಾಡಿದ್ದಾರೆ. ಬಿಪಾಶಾ ಮಗಳು ದೇವಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಮಗು ಹುಟ್ಟಿದ ಒಂದೇ ತಾಸಿಗೆ ಹೆಸರಿಟ್ಟು ಸಂಭ್ರಮಿಸಿದ ನಟಿ ಬಿಪಾಶಾ ಬಸು

    ಮಗು ಹುಟ್ಟಿದ ಒಂದೇ ತಾಸಿಗೆ ಹೆಸರಿಟ್ಟು ಸಂಭ್ರಮಿಸಿದ ನಟಿ ಬಿಪಾಶಾ ಬಸು

    ಟಿ ಬಿಪಾಶಾ ಬಸು ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಚ್ಚರಿಯೆಂದರೆ ಮಗು ಹುಟ್ಟಿದ ಒಂದೇ ತಾಸಿಗೆ ತಮ್ಮ ಮಗುವಿಗೆ ಮುದ್ದಾದ ಹೆಸರಿಟ್ಟಿದ್ದಾರೆ. ತಾವು ದೇವಿಯ ಆರಾಧಕರು ಆಗಿರುವ ಕಾರಣದಿಂದಾಗಿ ತಮ್ಮ ಮಗುವಿಗೆ ಅವರು ‘ದೇವಿ’ ಎಂದು ಹೆಸರಿಟ್ಟಿದ್ದಾರೆ. ತಮ್ಮ ಮನೆಗೆ ದೇವಿಯನ್ನು ಬರಮಾಡಿಕೊಂಡಿರುವುದಾಗಿ ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಬಿಪಾಶಾ ಬಸು ತಾಯಿ ಆಗುವ ಮೂಲಕ ಹೊಸ ಜವಾಬ್ದಾರಿಯತ್ತ ಹೊರಳಿದ್ದು, ಹಲವು ದಿನಗಳಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ, ನಾಲ್ಕೈದು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದೇನೆ ಎಂದೂ ಬರೆದುಕೊಂಡಿದ್ದರು. ಇದನ್ನೂ ಓದಿ:ಗಡಿನಾಡ ಕನ್ನಡಿಗ ಎಂದ ರೂಪೇಶ್‌ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು

    ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಆಗಾಗ್ಗೆ ಖಾಸಗಿ ಜೀವನದ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಮೊದಲ ಮಗುವಿನ ಕುರಿತು ಸಾಕಷ್ಟು ಕನಸುಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಮಗು ಹಾರೈಕೆ, ಮಗುವಿನ ಲಾಲನೆ, ಪಾಲನೆ ಸೇರಿದಂತೆ ಹಲವು ಟಿಪ್ಸ್ ಗಳನ್ನು ಹಿರಿಯರಿಂದ ಪಡೆದುಕೊಳ್ಳುವ ಕುರಿತು ಹೇಳಿಕೊಂಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಇದೇ ಆಗಸ್ಟ್ ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿಯನ್ನ ತಿಳಿಸಿದ್ದರು.

    ಬಿಪಾಶಾಗೆ ಮಗುವಾಗುತ್ತಿದ್ದಂತೆಯೇ ಅವರ ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಿಪಾಶಾ ಇಷ್ಟಪಟ್ಟಂತೆ ಅವರಿಗೆ ಹೆಣ್ಣು ಮಗುವೇ ಆಗಿದೆ ಎಂದು ಹಲವರು ಸಂಭ್ರಮಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯದಲ್ಲೇ ಮಗುವಿನೊಂದಿಗೆ ಬಿಪಾಶಾ ಮನೆಗೂ ಬರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ದೇವಿಗೆ ದೇವಾಲಯ ನಿರ್ಮಿಸಿ ವಿಶೇಷ ಪೂಜೆ

    ಕೊರೊನಾ ದೇವಿಗೆ ದೇವಾಲಯ ನಿರ್ಮಿಸಿ ವಿಶೇಷ ಪೂಜೆ

    ಚೆನ್ನೈ: ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾಗೆ ಈಗ ತಮಿಳುನಾಡಿನಲ್ಲಿ ದೇವರ ಸ್ವರೂಪ ನೀಡಲಾಗಿದೆ. ಈ ಮೂಲಕ ಕೊರೊನಾ ಆರ್ಭಟವನ್ನು ತಣ್ಣಾಗಾಗಿಸುವಂತೆ ಕೊರೊನಾ ಅಮ್ಮನಿಗೆ ವಿಶೇಷ ಪೂಜೆ ನಡೆಸುವ ಮೂಲಕವಾಗಿ ಸುದ್ದಿಯಲ್ಲಿದೆ.

    ಸೋಂಕು ನಿವಾರಣೆಗಾಗಿ ವಿಶೇಷ ಪೂಜೆಗೆ ಮೊರೆ ಹೋಗಿದ್ದಾರೆ ತಮಿಳುನಾಡಿನ ಕೊಯಿಮತ್ತೂರಿನ ಜನ. ಕೊಯಿಮತ್ತೂರಿನ ಹೆಸರಾಂತ ಕಾಮಾಚಿಪುರಿ ಅಧೀನಂ ಪೀಠ ಕೋವಿಡ್ ಸೋಂಕಿಗಾಗಿ ವಿಶೇಷವಾಗಿ ಕೊರೊನಾ ದೇವಿ ದೇಗುಲವನ್ನು ನಿರ್ಮಿಸಿದೆ. ಈ ದೇವಾಲಯದಲ್ಲಿ ಕೊರೊನಾ ದೇವರನ್ನು ಶಾಂತಗೊಳಿಸಿ, ಸೋಂಕು ನಿವಾರಣೆಯಾಗುವಂತೆ ದಿನನಿತ್ಯ ಪೂಜೆ ನಡೆಸಲಾಗುತ್ತಿದೆ.

    ಈಗಾಗಲೇ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರೆವೇರಿಸಲಾಗುತ್ತಿದ್ದು, ಈ ದೇವಾಲದಯಲ್ಲಿ 48 ದಿನಗಳ ಕಾಲ ವಿಶೇಷ ಪೂಜೆ ಮತ್ತು ಪುನಸ್ಕಾರಗಳನ್ನು ನಡೆಯಲಿದೆ. ಇದರ ಜೊತೆಗೆ ವಿಶೇಷ ಮಹಾಯಾಗವನ್ನು ಆಯೋಜಿಸಿದ್ದು, ಈ ಮೂಲಕ ದೇವರನ್ನು ಸಂತೃಪ್ತಿಗೊಳಿಸಿ ಶಾಂತವಾಗುವಂತೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಧೀನಂನ ಮುಖ್ಯಸ್ಥ ಶಿವಲಿಂಗೇಶ್ವರ್ ತಿಳಿಸಿದ್ದಾರೆ.

    ತಮಿಳುನಾಡಿನಲ್ಲಿ ಈ ಹಿಂದೆ ಸಾಂಕ್ರಾಮಿಕ ರೋಗಗಳು ಬಂದಾಗ ಅವುಗಳನ್ನು ದೇವಿ ರೂಪದಲ್ಲಿ ಆರಾಧಿಸಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಹಿಂದೆ ಪ್ಲೇಗ್ ಜನರನ್ನು ಇನ್ನಿಲ್ಲಂತೆ ಕಾಡಿದಾಗ ಪ್ಲೇಗ್ ಮಾರಿಯಮ್ಮ ದೇವಾಲಯವನ್ನು ಕೊಯಿಮತ್ತೂರಿನಲ್ಲಿ ನಿರ್ಮಿಸಿ, ಪೂಜೆ ಸಲ್ಲಿಸಲಾಗಿತ್ತು.

  • 2 ಸಾವಿರ ಕೆ.ಜಿ ಹಣ್ಣುಗಳಿಂದ ಅಲಂಕೃತಗೊಂಡ ಅಮ್ಮ

    2 ಸಾವಿರ ಕೆ.ಜಿ ಹಣ್ಣುಗಳಿಂದ ಅಲಂಕೃತಗೊಂಡ ಅಮ್ಮ

    ಚೆನ್ನೈ: ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ಭಕ್ತಾದಿಗಳು `ಅಮ್ಮನ್’ ದೇವಸ್ಥಾನವನ್ನು ಬರೋಬ್ಬರಿ 2000 ಕಿಲೋಗ್ರಾಂಗಳಷ್ಟು ಹಣ್ಣುಗಳಿಂದ ಅಲಂಕಾರ ಮಾಡಿದ್ದಾರೆ.

    ಮಾವಿನ ಹಣ್ಣುಗಳು, ಅನಾನಸ್, ಪೇರಳೆ ಮತ್ತು ಬಾಳೆಹಣ್ಣುಗಳಿಂದ ತಾಯಿಗೆ ಅಲಂಕಾರ ಮಾಡಲಾಗಿದೆ. ಜೊತೆಗೆ 26 ಕ್ಕೂ ಹೆಚ್ಚು ವಿಧದ ಹಣ್ಣುಗಳನ್ನು ತಾಯಿ ಗರ್ಭಗುಡಿಯ ತುಂಬಾ ಅಲಂಕಾರ ಮಾಡಲಾಗಿದೆ. ಇದರಿಂದ ಅಮ್ಮ ವಿವಿಧ ರೀತಿಯ ಹಣ್ಣುಗಳ ಮಧ್ಯೆ ವೈಭವವಾಗಿ ನೋಡಲು ಆಕರ್ಷಕವಾಗಿ ಕಾಣುತ್ತಿದ್ದರು. ಈ ಅಲಂಕಾರವನ್ನು ನೋಡಲು ಭಕ್ತರು ನೆರದಿದ್ದರು.

    ತಮಿಳು ದೇವಸ್ಥಾನದ ಆಷಾಢ ತಿಂಗಳಲ್ಲಿ ಹಿಂದೂಗಳಿಗೆ ಮಂಗಳಕರವೆಂದು ನಂಬಿದ್ದಾರೆ. ಆದ್ದರಿಂದ ಮಹಾಳಿ ಅಮ್ಮನ್ ದೇವಸ್ಥಾನದಲ್ಲಿ ಭಕ್ತರು ಹೂ ಮಾಲೆಯನ್ನು ನೀಡಿದ್ದರು. ಭಕ್ತರು ನೀಡಿದ ಹೂಮಾಲೆಯಿಂದ ದೇವಿಯ ಮೂರ್ತಿಗಳನ್ನು ಅಲಂಕಾರ ಮಾಡಲಾಗಿದೆ.

    ದೇವಿಯ ಪ್ರಾರ್ಥನೆ ಮತ್ತು ವಿಶೇಷ ಪೂಜೆಯ ನಂತರ ಅಂದರೆ ಮರುದಿನ ನಗರದ ಭಕ್ತರಿಗೆ ಮತ್ತು ಬಡವರಿಗೆ ಈ ಹಣ್ಣುಗಳನ್ನು ವಿತರಿಸಲಾಗುತ್ತದೆ.

  • ಬರೋಬ್ಬರಿ 5 ಕೋಟಿ ರೂ. ನಲ್ಲಿ ಕಂಗೊಳಿಸುತ್ತಿದೆ ಮುತ್ತುಮಾರಿಯಮ್ಮ ದೇವಿ

    ಬರೋಬ್ಬರಿ 5 ಕೋಟಿ ರೂ. ನಲ್ಲಿ ಕಂಗೊಳಿಸುತ್ತಿದೆ ಮುತ್ತುಮಾರಿಯಮ್ಮ ದೇವಿ

    ಚೆನ್ನೈ: ತಮಿಳರಿಗೆ ಶನಿವಾರ ಹೊಸ ವರ್ಷದ ಸಂಭ್ರಮ. ಹೀಗಾಗಿ ತಮಿಳುನಾಡು ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು.

    ಹೊಸ ವರ್ಷವನ್ನು ಕೊಯಂಬತ್ತೂರಿನಲ್ಲಿ ವಿಭಿನ್ನವಾಗಿ ಆಚರಿಸಲಾಗಿದೆ. ಪ್ರಸಿದ್ಧ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬರೋಬ್ಬರಿ 4 ಕೋಟಿ ರೂ.ಮೌಲ್ಯದ ನೋಟುಗಳಿಂದ ಮುತ್ತು ಮಾರಿಯಮ್ಮನಿಗೆ ಅಲಂಕಾರ ಮಾಡಲಾಗಿತ್ತು.

    ಶ್ರೀ ಮುತ್ತುಮರಿಯಮ್ಮನ್ ದೇವಾಲಯವು ಪುರಾತನ ಕಾಲದ ಮಂದಿರವಾಗಿದೆ. ಇಲ್ಲಿಗೆ ದೂರದ ಪ್ರದೇಶಗಳಿಂದ ಸ್ಥಳೀಯರು ಮತ್ತು ಭಕ್ತರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ಉತ್ಸವಗಳಲ್ಲಿ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ಹೊಸ ವರ್ಷದ ಆಚರಣೆ ಪ್ರಯುಕ್ತ ಅನೇಕ ಭಕ್ತರು ಮತ್ತು ಪ್ರವಾಸಿಗರು ಬಂದಿದ್ದರು.


    ಗರಿ ಗರಿಯ 2 ಸಾವಿರ 500 ಮತ್ತು 200 ರೂ. ನೋಟುಗಳಲ್ಲಿ ಮುತ್ತು ಮಾರಿಯಮ್ಮನನ್ನು ಅಲಂಕರಿಸಲಾಗಿತ್ತು. ಒಟ್ಟು 4 ಕೋಟಿ ರೂ. ಮೌಲ್ಯದ ನೋಟುಗಳ ಜೊತೆಗೆ 1 ಕೋಟಿ ಮೌಲ್ಯದ ವಜ್ರ ಹಾಗೂ ಮುತ್ತುಗಳನ್ನು ಅಲಂಕಾರದಲ್ಲಿ ಬಳಸಲಾಗಿತ್ತು.

    ಸಕಲ ಸಂಪನ್ನೆಯಾಗಿ ಮೈದಳೆದಿರುವ ನೋಟಿನ ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬಂದಿತ್ತು. ಭಕ್ತರಂತೂ ಬಿಟ್ಟ ಕಣ್ಣನ್ನು ಬಿಟ್ಟಂತೆ ದೇವಿಯನ್ನು ನೋಡಿ ಕೈ ಮುಗಿದಿದ್ದಾರೆ.