Tag: devendrafadnavis

  • ಇಂದು ಸುಪ್ರೀಂಕೋರ್ಟಿನಿಂದ ‘ಮಹಾ’ ತೀರ್ಪು- ಮೈತ್ರಿ ಪಕ್ಷಗಳ ಬಲಪ್ರದರ್ಶನ ಕಂಡು ಬಿಜೆಪಿಗೆ ಶಾಕ್

    ಇಂದು ಸುಪ್ರೀಂಕೋರ್ಟಿನಿಂದ ‘ಮಹಾ’ ತೀರ್ಪು- ಮೈತ್ರಿ ಪಕ್ಷಗಳ ಬಲಪ್ರದರ್ಶನ ಕಂಡು ಬಿಜೆಪಿಗೆ ಶಾಕ್

    ನವದೆಹಲಿ: ಮಹಾರಾಷ್ಟ್ರದಲ್ಲಿ ಚುಕ್ಕಾಣಿ ಹಿಡಿದಿರುವ ದೇವೇಂದ್ರ ಫಡ್ನವಿಸ್ ಸರ್ಕಾರದ ಭವಿಷ್ಯ ಏನು ಅನ್ನೋದನ್ನು ಇಂದು ಸುಪ್ರೀಂಕೋರ್ಟ್ ಬರೆಯಲಿದೆ.

    ಸೋಮವಾರ ವಿಚಾರಣೆ ಮುಕ್ತಾಯಗೊಳಿಸಿರುವ ನ್ಯಾಯಮೂರ್ತಿ ಎನ್‍ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ನೀಡಲಿದೆ. ಒಂದು ವೇಳೆ, 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದರೆ ಫಡ್ನವಿಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ. ಅನಿವಾರ್ಯವಾಗಿ ವಿಶ್ವಾಸಮತಯಾಚನೆ ಮಾಡಲೇಬೇಕಾಗುತ್ತದೆ. ಆದರೆ ಬಿಜೆಪಿ ಬಳಿ ಸಿಂಪಲ್ ಮೆಜಾರಿಟಿ ಇಲ್ಲವೇ ಇಲ್ಲ.

    ಡಿಸಿಎಂ ಎನ್‍ಸಿಪಿಯ ಅಜಿತ್ ಪವಾರ್ ಏಕಾಂಗಿಯಾಗಿ ಹೋಗಿದ್ದಾರೆ. ಇದಕ್ಕೆ ನಿನ್ನೆ ಮಿತ್ರ ಪಕ್ಷಗಳು ತೋರಿಸಿದ ಶಕ್ತಿಪ್ರದರ್ಶನವೇ ಸಾಕ್ಷಿ. ನಾವು 162 ಮಂದಿ ಇದ್ದೇವೆ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಮಾಡಿದೆ. ಎಲ್ಲರೂ ಶಪಥ ಬೇರೆ ಮಾಡಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೂ ಇದನ್ನು ಪ್ರಜಾಪ್ರಭುತ್ವದ ಅಣಕ ಎಂದು ಬಿಜೆಪಿ ಟೀಕಿಸಿದೆ. ಗೆಲ್ಲೋದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಈ ನಡುವೆ ಆಪರೇಷನ್ ಕಮಲ ಯತ್ನಗಳು ಒಳಗೊಳಗೆ ತೀವ್ರಗೊಂಡಿವೆ ಎನ್ನಲಾಗಿದೆ. ಇದನ್ನೂ ಓದಿ: ಮುಂದುವರಿದ ‘ಮಹಾ’ ನಾಟಕ- ಫೈವ್ ಸ್ಟಾರ್ ಹೋಟೆಲಿನಲ್ಲಿ ಮೂರು ಪಕ್ಷಗಳ ಶಕ್ತಿ ಪ್ರದರ್ಶನ

    ಯಾರು ಯಾವುದೇ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಇಂದು ನಡೆಯುವ ಸಂಸತ್ ಜಂಟಿ ಅಧಿವೇಶನ ಬಹಿಷ್ಕರಿಸಲು ತೀರ್ಮಾನಿಸಿವೆ. ಇಂದು ಬೆಳಗ್ಗೆ 10ರಿಂದ 11 ಗಂಟೆಯವರೆಎಗೆ ಸಂಸತ್ ಭವವನ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ಪ್ಲಾನ್ ಮಾಡಿದ್ದಾರೆ. ಈ ನಡುವೆಯೇ ಸಿಎಂ ಫಡ್ನವಿಸ್ ನೆರೆ ಪರಿಹಾರ ಕಾರ್ಯಗಳಿಗೆ 5,300 ಕೋಟಿ ಅನುದಾನ ಘೋಷಿಸಿದ್ದಾರೆ.