Tag: Devendra Fandnavis

  • 44 ವರ್ಷಗಳ ನಂಟು ಕಡಿದುಕೊಂಡ ಮುಂಬೈ ಕಾಂಗ್ರೆಸ್ ಮುಖಂಡ – 5 ಬಾರಿ ಕಾರ್ಪೋರೇಟರ್ ಆಗಿದ್ದ ರವಿರಾಜ ಬಿಜೆಪಿ ಸೇರ್ಪಡೆ

    44 ವರ್ಷಗಳ ನಂಟು ಕಡಿದುಕೊಂಡ ಮುಂಬೈ ಕಾಂಗ್ರೆಸ್ ಮುಖಂಡ – 5 ಬಾರಿ ಕಾರ್ಪೋರೇಟರ್ ಆಗಿದ್ದ ರವಿರಾಜ ಬಿಜೆಪಿ ಸೇರ್ಪಡೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra Assembly Elections) ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಮುಂಬೈನ (Mumbai) ಕಾಂಗ್ರೆಸ್ (Congress) ಹಿರಿಯ ಮುಖಂಡ ಹಾಗೂ 5 ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದ ರವಿರಾಜ (Ravi Raja) ಬಿಜೆಪಿ ಸೇರಿದ್ದಾರೆ.

    44 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರವಿರಾಜ ಇದೀಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ (BJP) ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ 44 ವರ್ಷಗಳ ನಂಟನ್ನು ರವಿರಾಜ ಶಾಶ್ವತವಾಗಿ ಕಡಿದುಕೊಂಡಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಮತ್ತು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರು ರವಿರಾಜ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇದನ್ನೂ ಓದಿ: ಜಮೀನು ವಿವಾದ ಹಿನ್ನೆಲೆ 17 ವರ್ಷದ ಬಾಲಕನ ಶಿರಚ್ಛೇದನ – 6 ಮಂದಿಯ ವಿರುದ್ಧ ಎಫ್‌ಐಆರ್

    ಬಳಿಕ ಮಾತನಾಡಿದ ದೇವೇಂದ್ರ ಫಡ್ನವಿಸ್, ಇನ್ನಷ್ಟು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಮಹಾಯತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಜನರಲ್ಲಿದೆ. ರವಿರಾಜ ಮುಂಬೈನಲ್ಲಿರುವ ಸಮಸ್ಯೆಗಳಿಗೆ ಎನ್‌ಸೈಕ್ಲೋಪೀಡಿಯಾ ಇದ್ದಂತೆ. ಅವರು ನಮ್ಮ ಹಳೆಯ ಸ್ನೇಹಿತ ಕೂಡ ಹೌದು. ರವಿರಾಜ ಮತ್ತವರ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರಿದ್ದು ಪಕ್ಷದ ಬಲವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು

    ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: ಸಿಎಂಗೆ ಇ.ಡಿ ಬಂದ ಮೇಲೆ ಭಯ ಆಗಿದೆ, ಅದಕ್ಕೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ: ಜೋಶಿ

  • ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಬಿಜೆಪಿ ಸೇರ್ಪಡೆ

    ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಬಿಜೆಪಿ ಸೇರ್ಪಡೆ

    ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು(ಮಂಗಳವಾರ) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂಬೈ ಬಿಜೆಪಿ ಕಚೇರಿಯಲ್ಲಿ ಅವರು ಪಕ್ಷಕ್ಕೆ ಸೇರಿದ್ದು, ಅವರೊಂದಿಗೆ ಮಾಜಿ ಕಾಂಗ್ರೆಸ್ ಎಂಎಲ್‍ಸಿ ಅಮರ್ ರಾಜುರ್ಕರ್ ಕೂಡಾ ಬಿಜೆಪಿ ಸೇರಿದ್ದಾರೆ.

    ಚವಾಣ್ ಸೋಮವಾರ ತಮ್ಮ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‍ನಿಂದ ಹೊರಬರುವುದು ಅವರ ವೈಯಕ್ತಿಕ ನಿರ್ಧಾರ ಎಂದಿದ್ದರು. ಎರಡು ದಿನಗಳಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದರು. ಇದೀಗ ಕಾಂಗ್ರೆಸ್ ತೊರೆದ ಒಂದೇ ದಿನದಲ್ಲಿ ಬಿಜೆಪಿಗೆ ಅವರು ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ದೆಹಲಿಯ ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 1 ಸ್ಥಾನ- AAP ಪ್ರಸ್ತಾಪ

    ಸೋಮವಾರ, ಕಾಂಗ್ರೆಸ್ ತೊರೆದ ಬಳಿಕ ಅವರು, ನಾನು ಪಕ್ಷವನ್ನು ತೊರೆದಿದ್ದೇನೆ, ಶಾಸಕ ಸ್ಥಾನ ಮತ್ತು ಇತರ ಎಲ್ಲಾ ಪಕ್ಷದ ಹುದ್ದೆಗಳಿಂದ ಹೊರ ಬಂದಿದ್ದೇನೆ. ನಾನು ಪಕ್ಷದೊಂದಿಗಿನ ನನ್ನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದೇನೆ. ನಾನು ಪಕ್ಷಕ್ಕೆ ಪ್ರಮಾಣಿಕವಾಗಿ ದುಡಿದಿದ್ದೇನೆ ಎಂದಿದ್ದರು.

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಚವಾಣ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಮುಂಬೈ ಬಿಜೆಪಿ ಕಚೇರಿಯಲ್ಲಿ ಅಧಿಕೃತ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ಡಿಕೆಶಿ ಮೇಲೆ ಲೋಕಾಯುಕ್ತದಿಂದ ಎಫ್‌ಐಆರ್‌ ದಾಖಲು