Tag: Development Projects

  • ಬಿಹಾರ, ಬಂಗಾಳಕ್ಕಿಂದು ಮೋದಿ ಭೇಟಿ – 18,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

    ಬಿಹಾರ, ಬಂಗಾಳಕ್ಕಿಂದು ಮೋದಿ ಭೇಟಿ – 18,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

    ಪಾಟ್ನಾ: ಬಿಹಾರ ವಿಧಾನಸಭೆಯ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಕಾವು ಜೋರಾಗುತ್ತಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪ್ರವಾಸ ಕೂಡ ಹೆಚ್ಚಾಗಿ ನಡೆಯುತ್ತಿದೆ. ಇಂದು ಪಶ್ಚಿಮ ಬಂಗಾಳ, ಬಿಹಾರಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 18,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ (Development Projects) ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಹೌದು. ಬಿಹಾರದ ಚಂಪಾರಣ್‌ ಬಳಿಕ ಪ್ರಧಾನಿ ಅವರ ಕಣ್ಣು ಈಗ ಮಗಧ ಪ್ರದೇಶದ ಮೇಲಿದೆ. ಹೀಗಾಗಿ ʻಮಿಷನ್‌ ಮಗಧʼ ಸಾಧಿಸುವ ಪ್ರಯತ್ನದ ಭಾಗವಾಗಿಯೂ ಇಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

    18,000 ಸಾವಿರ ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈ ಪೈಕಿ ಬಿಹಾರದ ಗಯಾದಲ್ಲಿ ಸುಮಾರು 13,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಕೋಲ್ಕತ್ತಾದಲ್ಲಿ 5,200 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನೂ ಓದಿ: ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಇದರಲ್ಲಿ ವಿದ್ಯುತ್, ಸಂಪರ್ಕ, ಆರೋಗ್ಯ ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ಹಲವು ಯೋಜನೆಗಳು ಸೇರಿವೆ. ಇದರ ಹೊರತಾಗಿ, ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಇದರಲ್ಲಿ ಒಂದು ರೈಲು ದೆಹಲಿ ಮತ್ತು ಗಯಾ ನಡುವೆ ಚಲಿಸಿದ್ರೆ, ಮತ್ತೊಂದು ರೈಲು ಬಿಹಾರ ಮತ್ತು ಜಾರ್ಖಂಡ್ ನಡುವೆ ಚಲಿಸುತ್ತದೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಹೆಚ್‌ಡಿಕೆ

    ಬಿಹಾರ ಭೇಟಿ ಸಮಯದಲ್ಲಿ ಮೋದಿ ಅವರು ಗಯಾದ ಜೊತೆಗೆ ಪಾಟ್ನಾ ಮತ್ತು ಬೇಗುಸರಾಯ್ ಜಿಲ್ಲೆಗಳಿಗೂ ಭೇಟಿ ನೀಡಲಿದ್ದು, ಮಗಧ ವಿಶ್ವವಿದ್ಯಾಲಯದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಿಹಾರದ ಮಗಧ ಪ್ರದೇಶವು ಬಿಹಾರದಲ್ಲಿ ಬಿಜೆಪಿಯ ಅತ್ಯಂತ ದುರ್ಬಲ ಕೋಟೆ ಎಂದು ಪರಿಗಣಿಸಲಾಗಿದೆ. ಇದರ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಲೇ ಇದೆ. ಇದರ ಭಾಗವಾಗಿ ಇಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಅವರ ಭೇಟಿ ಬಿಗ್‌ ಬೂಸ್ಟ್‌ ನೀಡಲಿದೆಯೇ ಅನ್ನೋದನ್ನ ಕಾದುನೋಡಬೇಕಿದೆ.

    ಒಟ್ಟಿನಲ್ಲಿ ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಬಿಹಾರದಲ್ಲಿ ʻಮತದಾರರ ಹಕ್ಕುಗಳ ಯಾತ್ರೆʼ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಧಾನಿಯವರ ಭೇಟಿ ರಾಜಕೀಯ ಕಾವು ಹೆಚ್ಚಿಸಿದೆ.

  • ವಾರಣಾಸಿ | 2,200 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

    ವಾರಣಾಸಿ | 2,200 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

    – ಆಪರೇಷನ್‌ ಸಿಂಧೂರ ಯಶಸ್ಸನ್ನ ಮಹಾದೇವನ ಪಾದಗಳಿಗೆ ಅರ್ಪಿಸುತ್ತೇನೆ; ಮೋದಿ
    – 9.7 ಕೋಟಿ ರೈತರ ಖಾತೆಗಳಿಗೆ 20,000 ಕೋಟಿ ಜಮೆ

    ಲಕ್ನೋ: ಸ್ವ-ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ನಗರಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಿದರು.

    ಸುಮಾರು 2,200 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳ (Development Projects) ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದ್ರು. ಇದೇ ವೇಳೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನ ಜಮೆ ಮಾಡಿದರು. 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 20,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನ ಜಮೆ ಮಾಡಿದರು. ಇದನ್ನೂ ಓದಿ: Operation Akhal | ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ

    ಇದೇ ವೇಳೆ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್‌ ಸಿಂಧೂರ (Operation Sindoor) ಯಶಸ್ಸಿನ ಕುರಿತು ವಿವರಣೆ ನೀಡಿದ್ರು. ಆಪರೇಷನ್‌ ಸಿಂಧೂರ ಯಶಸ್ಸನ್ನ ನಾನು‌ ಮಹಾದೇವನಿಗೆ ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ಕೋಮುವಾದ ಹರಡಲು ಯತ್ನಿಸಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರೋದು ಭಾರತ ಚಿತ್ರರಂಗಕ್ಕೆ ಅವಮಾನ: ಪಿಣರಾಯಿ ವಿಜಯನ್

    ನಮ್ಮ ಹೆಣ್ಣುಮಕ್ಕಳ ಸಿಂಧೂರಕ್ಕೆ ಸೇಡು ತೀರಿಸಿಕೊಳ್ಳಲು ನಾವು ತೆಗೆದುಕೊಂಡ ಪ್ರತಿಜ್ಞೆ ಈಡೇರಿದೆ. ಮಹಾದೇವನ ಆಶೀರ್ವಾದದಿಂದ ಮಾತ್ರ ಅದು ಸಾಧ್ಯವಾಗಿದೆ. ಹಾಗಾಗಿ ʻಆಪರೇಷನ್ ಸಿಂಧೂರʼದ ಯಶಸ್ಸನ್ನ ಮಹಾದೇವನ ಪಾದಗಳಿಗೆ ಅರ್ಪಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್‌ ಟ್ರಂಪ್‌

  • ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

    ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

    – ಅಭಿವೃದ್ಧಿ ಯೋಜನೆಗಳು ಭಾರತದ ಆತ್ಮ ವಿಶ್ವಾಸದ ಸಂಕೇತ; ಮೋದಿ ಬಣ್ಣನೆ

    ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು 4,800 ಕೋಟಿ ಮೊತ್ತದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ್ದಾರೆ.

    ಮಾಲ್ಡೀವ್ಸ್‌ನಲ್ಲಿ 2 ದಿನಗಳ ಪ್ರವಾಸದ ಬಳಿಕ ಭಾರತಕ್ಕೆ ಬಂದಿಳಿದ ಮೋದಿ ಶನಿವಾರ (ಇಂದು) ತಮಿಳುನಾಡಿನ ತೂತುಕುಡಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ (Development Projects) ಚಾಲನೆ ನೀಡಿದ್ದಾರೆ. ಉದ್ಘಾಟನೆಯಾದ ಪ್ರಮುಖ ಯೋಜನೆಗಳಲ್ಲಿ ವಿಮಾನ ನಿಲ್ದಾಣದಲ್ಲಿ 17,000 ಚದರ ಮೀಟರ್ ವಿಸ್ತೀರ್ಣದ ಅತ್ಯಾಧುನಿಕ ಟರ್ಮಿನಲ್ ಕಟ್ಟಡವೂ ಸೇರಿದೆ. ಅಲ್ಲದೇ ಹೆದ್ದಾರಿ, ರೈಲ್ವೆ, ಬಂದರು, ವಿದ್ಯುತ್‌ ಯೋಜನೆಗಳೂ ಇದರಲ್ಲಿ ಸೇರಿವೆ. ಸೇಥಿಯಾಥೋಪೆ-ಚೋಳಾಪುರ ನಡುವಿನ ಚತುಷ್ಫಥ ಹೆದ್ದಾರಿ ಸೇರಿದಂತೆ ಹಲವು ಸಂಪರ್ಕ ಯೋಜನೆಗಳನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ.

    ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ನಾಲ್ಕು ದಿನಗಳ ವಿದೇಶಿ ಪ್ರವಾಸದ ನಂತರ, ಭಗವಾನ್ ರಾಮೇಶ್ವರಂನ ಈ ಪವಿತ್ರ ಭೂಮಿಗೆ ನೇರವಾಗಿ ಬರುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಈ ಅಭಿವೃದ್ಧಿ ಯೋಜನೆಗಳು ಪ್ರಪಂಚ ಬೆಳೆಯುತ್ತಿರುವುದರ ನಂಬಿಕೆ, ಜೊತೆಗೆ ಭಾರತದ ಹೊಸ ಆತ್ಮ ವಿಶ್ವಾಸದ ಸಂಕೇತವಾಗಿದೆ. ಈ ಆತ್ಮವಿಶ್ವಾಸದೊಂದಿಗೆ, ನಾವು ವಿಕಸಿತ ಭಾರತ ಮತ್ತು ವಿಕಸಿತ ತಮಿಳುನಾಡನ್ನು ನಿರ್ಮಿಸುತ್ತೇವೆ ಎಂದು ಆತ್ಮವಿಶ್ವಾಸ ತುಂಬಿದರು.

    ಮುಂದುವರಿದು.. ಯಾವುದೇ ರಾಜ್ಯದ ಬೆಳವಣಿಗೆಗೆ ಮೂಲಸೌಕರ್ಯ ಮತ್ತು ಶಕ್ತಿ ಅಗತ್ಯವಾಗಿ ಬೇಕಾಗುತ್ತದೆ. ಮೂಲಸೌಕರ್ಯ ಮತ್ತು ಇಂಧನ ರಾಜ್ಯದ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಕಳೆದ 11 ವರ್ಷಗಳಲ್ಲಿ ಇವುಗಳ ಮೇಲೆ ನಾವು ಗಮನ ಹರಿಸಿರುವುದು ತಮಿಳುನಾಡಿನ ಬೆಳವಣಿಗೆಯ ಬಗ್ಗೆ ನಮ್ಮ ಬದ್ಧತೆ ತೋರಿಸುತ್ತದೆ ಎಂದು ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ತಿಳಿಸಿದರು.

  • ಬಿಹಾರದಲ್ಲಿ ಇಂದು 5,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ಬಿಹಾರದಲ್ಲಿ ಇಂದು 5,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ಪಾಟ್ನಾ: ಬಿಹಾರದ ಸಿವಾನ್‌ನಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಚಾಲನೆ ನೀಡಲಿದ್ದಾರೆ. ಜೊತೆಗೆ ರಾಜ್ಯದ ವಿವಿಧೆಡೆ 5,000 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು (Development Projects) ಉದ್ಘಾಟಿಸಲಿದ್ದಾರೆ.

    ಅಧಿಕೃತ ಪ್ರಕಟಣೆಯ ಪ್ರಕಾರ, ಉತ್ತರ ಬಿಹಾರದ (North Bihar) ಸಂಪರ್ಕಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಜಾಫರ್‌ಪುರ ಮತ್ತು ಬೆಟ್ಟಿಯಾ ಮೂಲಕ ಪಾಟಲಿಪುತ್ರ ಮತ್ತು ಗೋರಖ್‌ಪುರ ಮಾರ್ಗದಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express Train) ಪ್ರಾರಂಭಿಸಲಾಗುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: Plane Crash | ಬ್ಲ್ಯಾಕ್‌ ಬಾಕ್ಸ್‌ಗಳನ್ನು ವಿದೇಶಕ್ಕೆ ಕಳಿಸಿಲ್ಲ: ಸುಳ್ಳು ಸುದ್ದಿ ಹರಡದಂತೆ ಕೇಂದ್ರ ಸರ್ಕಾರ ಮನವಿ

    ಅಲ್ಲದೇ ʻಮೇಕ್ ಇನ್ ಇಂಡಿಯಾ – ಮೇಕ್ ಫಾರ್ ದಿ ವರ್ಲ್ಡ್ʼ (Make in India – Make for the World) ಎಂಬ ಧ್ಯೇಯದೊಂದಿಗೆ ಪ್ರಧಾನಿ ಮೋದಿ ಗಿನಿಯಾ ಗಣರಾಜ್ಯಕ್ಕೆ ರಫ್ತು ಮಾಡಲು ಮಾರ್ಹೌರಾ ಸ್ಥಾವರದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಲೋಕೋಮೋಟಿವ್ ಸಹ ಉದ್ಘಾಟಿಸಲಿದ್ದಾರೆ. ಜೊತೆಗೆ ಗಂಗಾ ನದಿ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ 1,800 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದ ʻನಯಾಮಿ ಗಂಗೆʼ ಯೋಜನೆ ಅಡಿಯಲ್ಲಿ 6 ಒಳಚರಂಡಿ ಸಂಸ್ಕರಣಾ ಘಟಕಗಳನ್ನೂ ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    ಹೆಚ್ಚುವರಿಯಾಗಿ, ಬಿಹಾರ ರಾಜ್ಯಾದ್ಯಂತ ವಿವಿಧ ಪಟ್ಟಣಗಳಲ್ಲಿ 3,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ನೀರು ಸರಬರಾಜು, ನೈರ್ಮಲ್ಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 500 ಮೆಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬಿಇಎಸ್ಎಸ್)ಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆಪಡುತ್ತಾರೆ: ಅಮಿತ್ ಶಾ

    ಬಳಿಕ ಬಿಹಾರದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ 53,600ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ – ತಡರಾತ್ರಿ ರೆಬೆಲ್ ನಾಯಕ ಸಭೆ

  • ಏ.11ರಂದು ವಾರಣಾಸಿಗೆ ಮೋದಿ ಭೇಟಿ – 3,884 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

    ಏ.11ರಂದು ವಾರಣಾಸಿಗೆ ಮೋದಿ ಭೇಟಿ – 3,884 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದೇ ಏಪ್ರಿಲ್‌ 11ರಂದು (ನಾಳೆ) ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು, 3,884.18 ಕೋಟಿ ರೂ. ಮೌಲ್ಯದ 44 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಾರಣಾಸಿಯ ಬಿಜೆಪಿ ಅಧ್ಯಕ್ಷ ದಿಲೀಪ್ ಪಟೇಲ್ (Dilip Patel) ತಿಳಿಸಿದ್ದಾರೆ. ಇದು ವಾರಣಾಸಿಗೆ (Varanasi) ಮೋದಿ ಅವರ 50ನೇ ಭೇಟಿಯಾಗಿದೆ.

    ಪ್ರಧಾನಿ ಮೋದಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 130 ಕುಡಿಯುವ ನೀರಿನ ಯೋಜನೆಗಳು, 100 ಹೊಸ ಅಂಗನವಾಡಿ ಕೇಂದ್ರಗಳು, 356 ಗ್ರಂಥಾಲಯಗಳು, 4 ಗ್ರಾಮೀಣ ರಸ್ತೆಗಳು ಮತ್ತು 2 ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಅಲ್ಲದೇ ನಗರದ ವಿದ್ಯುತ್ ಮೂಲಸೌಕರ್ಯ (Electrical Infrastructure) ಬಲಪಡಿಸುವ ನಿಟ್ಟಿನಲ್ಲಿ 15 ಹೊಸ ಸಬ್‌ಸ್ಟೇಷನ್‌ಗಳ ನಿರ್ಮಾಣ, ಹೊಸ ಟ್ರಾನ್ಸ್‌ಫಾರ್ಮರ್‌ಗಳ ಸ್ಥಾಪನೆ ಮತ್ತು 1,500 ಕಿಮೀ ಹೊಸ ವಿದ್ಯುತ್ ಮಾರ್ಗಗಳ ಸ್ಥಾಪನೆ ಸೇರಿದಂತೆ, 2,250 ಕೋಟಿ ರೂ. ವೆಚ್ಚದ 25 ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

    ಮೂರು ಹೊಸ ಮೇಲ್ಸೇತುವೆಗಳು, ವಿವಿಧ ರಸ್ತೆ ಅಗಲೀಕರಣ ಕ್ರಮಗಳು, ಶಾಲಾ ನವೀಕರಣ ಕಾರ್ಯಗಳು ಹಾಗೂ ಶಿವಪುರ ಮತ್ತು ಉತ್ತರ ಪ್ರದೇಶದ ಕಾಲೇಜಿನಲ್ಲಿ ಎರಡು ಕ್ರೀಡಾಂಗಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ರೋಹನಿಯಾದ ಮೆಹಂದಿಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಇವಿಎಂ ದುರ್ಬಳಕೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಸ – ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ

    4,000 ಪೊಲೀಸ್‌ ಭದ್ರತೆ
    ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳಿಂದ ಸುಮಾರು 4,000 ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಮತ್ತು ಭದ್ರತಾ ವಿಭಾಗದ ಎಡಿಜಿ ರಘುವೀರ್ ಲಾಲ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಕಟ್ಟಿಸಿದ ಶೀಶ್ ಮಹಲ್‌ಗೆ ಹೋಗೋಕೆ ಇಷ್ಟವಿಲ್ಲ – ಸಿಎಂ ಆಗಿ 50 ದಿನ ಕಳೆದ್ರೂ ರೇಖಾ ಗುಪ್ತಾಗೆ ಇನ್ನೂ ಅಧಿಕೃತ ನಿವಾಸವಿಲ್ಲ!