Tag: deve gowda

  • ಕೊನೆಗೂ ದೇವೇಗೌಡರ ಸ್ಪರ್ಧೆ ಫಿಕ್ಸ್

    ಕೊನೆಗೂ ದೇವೇಗೌಡರ ಸ್ಪರ್ಧೆ ಫಿಕ್ಸ್

    ಬೆಂಗಳೂರು: ಮೊಮ್ಮಗನಿಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟು ತಮ್ಮ ಸ್ಪರ್ಧೆಗೆ ಕ್ಷೇತ್ರ ಹುಡುಕಾಟದಲ್ಲಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಕೊನೆಗೂ ತುಮಕೂರಿನಿಂದ ಅಖಾಡಕ್ಕಿಳಿಯೋದು ಫಿಕ್ಸ್ ಆಗಿದ್ದು, ಈ ಕುರಿತು ದೇವೇಗೌಡರು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

    ಎಲ್ಲವೂ ಅಂದುಕೊಂಡಂತೆ ಆದರೆ ಕಲ್ಪವೃಕ್ಷ ನಾಡಿನಿಂದಲೇ ಗೌಡರ ಕಣ ರೆಡಿಯಾಗಲಿದೆ. ಅಂದಹಾಗೆ ಎಲ್ಲಿಂದ ಸ್ಪರ್ಧೆ ಮಾಡಬೇಕು ಅಂತ ಗೊಂದಲದಲ್ಲಿದ್ದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿತಾರೆ ಎನ್ನಲಾಗಿತ್ತು. ಆದರೆ ಬೆಂಗಳೂರು ಉತ್ತರಕ್ಕಿಂತ ತುಮಕೂರು ಸೇಫ್ ಅನ್ನಿಸಿದ ಕಾರಣಕ್ಕೆ ತುಮಕೂರಿನಿಂದ ಸ್ಪರ್ಧೆಗಿಳಿಯಲು ದೇವೇಗೌಡರು ಸಜ್ಜಾಗಿದ್ದಾರೆ. ಇಂದು ತುಮಕೂರು ಸ್ಪರ್ಧೆ ಬಗ್ಗೆ ದೇವೇಗೌಡರು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.

    ದೇವೇಗೌಡರು ಕಿರಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಹಾಗೂ ಹಿರಿಯ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇತ್ತ ದೇವೇಗೌಡರು ಮೈಸೂರಿನಿಂದ ನಿಲ್ಲಬೇಕು ಎಂದು ಇಚ್ಛಿಸಿದ್ದರು. ಆದರೆ ಗೌಡರು ಮೈಸೂರು ಕೇಳಿದ್ದರೂ ಕಾಂಗ್ರೆಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಬೆಂಗಳೂರು ಉತ್ತರ ಮತ್ತು ತುಮಕೂರು ಈ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿತ್ತು.

    ಈಗ ಬೆಂಗಳೂರಿಗಿಂತ ತುಮಕೂರು ಸೇಫ್ ಎಂದು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಯಾಕೆಂದರೆ ತುಮಕೂರಿನಲ್ಲಿ ಜೆಡಿಎಸ್‍ಗೆ ನೆಲೆ ಇದ್ದು, ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಜೊತೆಗೆ ಮೈತ್ರಿಪಕ್ಷದ ನಾಯಕರು ಕೂಡ ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ಕೆಲವರು ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡಿದರೆ ಸೋಲಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ರಾಜ್ಯ ಮಟ್ಟದಲ್ಲಿ ದೋಸ್ತಿ ಸರ್ಕಾರದ ಮೂಲಕ ಗೆಲ್ಲಬಹುದು ಎಂಬುದು ದೇವೇಗೌಡರ ಲೆಕ್ಕಚಾರವಾಗಿದೆ.

  • ಮೊಮ್ಮಕ್ಕಳಿಗೆ ಕ್ಷೇತ್ರ ದಾನ ಮಾಡಿದ ದೇವೇಗೌಡ್ರಿಗೆ ಈಗ ಟೆನ್ಶನ್..!

    ಮೊಮ್ಮಕ್ಕಳಿಗೆ ಕ್ಷೇತ್ರ ದಾನ ಮಾಡಿದ ದೇವೇಗೌಡ್ರಿಗೆ ಈಗ ಟೆನ್ಶನ್..!

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಮೊಮ್ಮಕ್ಕಳಿಗೆ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಮೊಮ್ಮಗನಿಗೆ ಕ್ಷೇತ್ರದಾನ ಮಾಡಿದ ದೇವೇಗೌಡರಿಗೆ ಈಗ ಟೆನ್ಶನ್ ಶುರುವಾಗಿದೆ.

    ದೇವೇಗೌಡರು ಕಿರಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಹಾಗೂ ಹಿರಿಯ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇತ್ತ ದೇವೇಗೌಡರು ಮೈಸೂರಿನಿಂದ ನಿಲ್ಲಬೇಕು ಎಂದು ಇಚ್ಛಿಸಿದ್ದರು. ಆದರೆ ಗೌಡರು ಮೈಸೂರು ಕೇಳಿದ್ದರೂ ಕಾಂಗ್ರೆಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಬೆಂಗಳೂರು ಉತ್ತರ ಮತ್ತು ತುಮಕೂರು ಈ ಎರಡು ಕ್ಷೇತ್ರದಲ್ಲಿ ಎಲ್ಲಿ ನಿಲ್ಲಬೇಕೆಂಬ ಬಗ್ಗೆ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ ದೇವೇಗೌಡರು ಬೆಂಗಳೂರು ಉತ್ತರದಲ್ಲಿ ನಿಂತರೆ ಗೆಲುವು ಅಷ್ಟೊಂದು ಸುಲಭವಾಗಿಲ್ಲ ಎಂಬ ಆತಂಕ ಎದುರಾಗಿದ್ದು, ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಿದರೆ ಗೆಲುವು ಸಾಧ್ಯನಾ ಎಂದು ಗುಪ್ತಚರ ಇಲಾಖೆ ಮಾಹಿತಿ ಪಡೆಯಲು ಮಾಜಿ ಪ್ರಧಾನಿ ದೇವೇಗೌಡರು ಮುಂದಾಗಿದ್ದಾರೆ. ಅಲ್ಲಿಂದ `ಬೆಂಗಳೂರು ಉತ್ತರ ಸೇಫ್ ಸೀಟು’ ಎಂದು ಬಂದರೆ ಅಲ್ಲಿಯೇ ನಿಲ್ಲಬೇಕು ಎಂಬುದು ದೇವೇಗೌಡರ ಇಂಗಿತವಾಗಿದೆ. ಒಂದು ವೇಳೆ ಇದು ಸೇಫ್ ಅಲ್ಲ ಎಂದು ಬಂದರೆ, ಆಗ ಕಾಂಗ್ರೆಸ್ ಗೆದ್ದಿದ್ದ ತುಮಕೂರಿನಿಂದಲೇ ದೇವೇಗೌಡರ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಬೆಂಗಳೂರು ಉತ್ತರದಿಂದ ದೇವೇಗೌಡರು ನಿಂತರೆ ಸದಾನಂದಗೌಡರ ವಿರುದ್ಧ ಸ್ಪರ್ಧೆ ಮಾಡಬೇಕಾಗುತ್ತದೆ. ತುಮಕೂರಿನಲ್ಲಿ ಹಾಲಿ ಸದಸ್ಯರು ಕಾಂಗ್ರೆಸ್ಸಿನವರ ವಿರುದ್ಧ ಸ್ಪರ್ಧೆ ಮಾಡಬೇಕಾಗುತ್ತದೆ. ಸದ್ಯಕ್ಕೆ ದೇವೇಗೌಡರು ಬೆಂಗಳೂರಿನಲ್ಲಿ ಜನರ ಅಭಿಪ್ರಾಯವನ್ನು ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಕಲೆಯಾಕುತ್ತಿದ್ದಾರೆ. ಇಲ್ಲಿ ನಿಂತು ಗೆಲ್ಲುವುದು ಕಠಿಣವಾಗುತ್ತದೆ ಎಂದರೆ ತುಮಕೂರಿನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇದುವರೆಗೂ ಜೆಡಿಎಸ್ ಈ ಎರಡು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿನ್ನೆ ಹಾಸನದಲ್ಲಿ ಪ್ರಜ್ವಲ್ ಪಟ್ಟಾಭಿಷೇಕ – ಇಂದು ಮಂಡ್ಯದಲ್ಲಿ ನಿಖಿಲ್‍ಗೆ ಟಿಕೆಟ್ ಪಕ್ಕಾ..!

    ನಿನ್ನೆ ಹಾಸನದಲ್ಲಿ ಪ್ರಜ್ವಲ್ ಪಟ್ಟಾಭಿಷೇಕ – ಇಂದು ಮಂಡ್ಯದಲ್ಲಿ ನಿಖಿಲ್‍ಗೆ ಟಿಕೆಟ್ ಪಕ್ಕಾ..!

    -ತರಾತುರಿಯಲ್ಲಿ ರಾತ್ರಿಯಿಡೀ ವೇದಿಕೆ ಸಿದ್ಧ

    ಮಂಡ್ಯ: ಬುಧವಾರಷ್ಟೇ ಹಾಸನದಲ್ಲಿ ಹಿರಿಯ ಮೊಮ್ಮಗ ಪ್ರಜ್ವಲ್‍ಗೆ ಪಟ್ಟಾಭಿಷೇಕ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರು ಇಂದು ಕಿರಿಯ ಮೊಮ್ಮಗನ ಪಟ್ಟಾಭಿಷೇಕಕ್ಕೆ ಅಣಿಯಾಗಿದ್ದಾರೆ. ಮಂಡ್ಯದಲ್ಲಿಂದು ನಿಖಿಲ್ ಕುಮಾರಸ್ವಾಮಿ ಹೆಸರನ್ನ ಅಧಿಕೃತವಾಗಿ ಘೋಷಿಸಲಾಗುತ್ತಿದ್ದು, ಇದಕ್ಕಾಗಿ ಬೃಹತ್ ಸಮಾವೇಶ ನಡೆಯಲಿದೆ.

    ಇಂದು ಮಂಡ್ಯದಲ್ಲಿ ಸ್ವತಃ ದೇವೇಗೌಡರೇ ನಿಖಿಲ್ ಕುಮಾರಸ್ವಾಮಿಯನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದಕ್ಕಾಗಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮದ್ದೂರಿನಿಂದ ಬೆಳಗ್ಗೆ 11 ಗಂಟೆಗೆ ನಿಖಿಲ್ ಕುಮಾರಸ್ವಾಮಿಯನ್ನು ಬೃಹತ್ ಬೈಕ್ ರ‍್ಯಾಲಿಯಲ್ಲಿ ಸಮಾವೇಶದ ಸ್ಥಳಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕ್ರಮವಾದ್ದರಿಂದ ಸಿಎಂ ಸಹಿತ ಪಕ್ಷದ ನಾಯಕರಷ್ಟೇ ಭಾಗಿಯಾಗಲಿದ್ದಾರೆ.

    ಇನ್ನು ತರಾತುರಿಯಲ್ಲಿ ಕಾರ್ಯಕ್ರಮ ಘೋಷಣೆ ಆಗಿರುವುದರಿಂದ ಇಡೀ ರಾತ್ರಿ ವೇದಿಕೆ ನಿರ್ಮಾಣ ಕಾರ್ಯ ನಡೆದಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಸಚಿವ ಪುಟ್ಟರಾಜು ಹೆಗಲಿಗೆ ವಹಿಸಲಾಗಿದೆ. ಹೀಗಾಗಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಸಚಿವರು ಅಂತಿಮ ಹಂತದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಪುಟ್ಟರಾಜು, ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಅಧಿಕೃತವಾಗಿ ಘೋಷಣೆಯಾಗಿರುವುದರಿಂದ ಕಾಂಗ್ರೆಸ್ ಮುಖಂಡರು ಒಮ್ಮತದಿಂದ ಬೆಂಬಲಿಸಲಿದ್ದಾರೆ ಎಂದಿದ್ದಾರೆ.

    ಇತ್ತ ಸುಮಲತಾ ಅಂಬರೀಶ್ ಇಂದು ಕೂಡ ಮಂಡ್ಯದಲ್ಲಿ ಪ್ರವಾಸ ಮುಂದುವರಿಸಲಿದ್ದು, ಮೇಲುಕೋಟೆ ಚಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಪ್ರಚಾರ ಆರಂಭಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾಳೆ ಮಂಡ್ಯಗೆ ಹೋಗ್ತಿದ್ದೇನೆ, ಅದ್ಯಾರು ಗೋ ಬ್ಯಾಕ್ ಅಂತಾರೋ ನೊಡೋಣ: ಎಚ್‍ಡಿಡಿ ಸವಾಲು

    ನಾಳೆ ಮಂಡ್ಯಗೆ ಹೋಗ್ತಿದ್ದೇನೆ, ಅದ್ಯಾರು ಗೋ ಬ್ಯಾಕ್ ಅಂತಾರೋ ನೊಡೋಣ: ಎಚ್‍ಡಿಡಿ ಸವಾಲು

    ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಅಂತಿಮಗೊಳಿಸಿ ಘೋಷಣೆ ಮಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು, ನಾಳೆ ಮಂಡ್ಯ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

    ನಾಳೆ ಮಂಡ್ಯಗೆ ಎಚ್‍ಡಿಡಿ ಭೇಟಿ ನೀಡುವುವುದರಿಂದ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಚುನಾವಣೆಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಆ ಮೂಲಕ ಲೋಕಸಮರಕ್ಕೆ ನಿಖಿಲ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ವೇಳೆ ದೇವೇಗೌಡರಿಗೆ ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ.

    ಮಂಡ್ಯಕ್ಕೆ ತೆರಳುವ ಬಗ್ಗೆ ಇಂದು ಹಾಸನದಲ್ಲಿ ಪ್ರಸ್ತಾಪ ಮಾಡಿದ ದೇವೇಗೌಡರು, ಮಂಡ್ಯದಲ್ಲಿ ಕೆಲವರು ನಿಖಿಲ್ ಗೋ ಬ್ಯಾಕ್ ಎಂದಿದ್ದಾರೆ. ನಾನು ನಾಳೆ ಮಂಡ್ಯಕ್ಕೆ ಹೋಗುತ್ತೇನೆ ಗೋ ಬ್ಯಾಕ್ ಎಂದು ಕೂಗಲಿ ನೋಡೋಣ ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಗೋ ಬ್ಯಾಕ್ ಚಳವಳಿ ಮಾಡಿದವರಿಗೆ ಸವಾಲು ಎಸೆದಿದ್ದಾರೆ.

    ತುಮಕೂರು ಕೇಳಿದರೆ ಮಂಡ್ಯ ನಮಗೆ ಬಿಟ್ಟು ಕೊಡಿ ಎಂದು ಕಾಂಗ್ರೆಸ್ ಕೇಳಿದೆ. ಆದ್ದರಿಂದ ನನ್ನ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ ರಾಷ್ಟ್ರದ ಎಲ್ಲಾ ಮುಖಂಡರಿಂದ ನನ್ನ ಸ್ಪರ್ಧೆ ಬಗ್ಗೆ ಒತ್ತಾಯವಿದೆ ಎಂದರು.

    ಸಿಎಂ ಕುಮಾರಸ್ವಾಮಿ ಅವರು ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ಮಾಡುತ್ತಾರೆ. ನಮಗೆ ಮೊದಲು 12 ಸ್ಥಾನ ನಂತರ 10 ಅಂತಾ ಹೇಳುತ್ತಿದ್ದಾರೆ. ಏನಾಗುತ್ತೋ ಕಾದು ನೋಡೋಣ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಯ ಮಹಾರಹಸ್ಯ ಬಯಲು

    ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಯ ಮಹಾರಹಸ್ಯ ಬಯಲು

    ಬೆಂಗಳೂರು: ಮಂಡ್ಯ ಕುರುಕ್ಷೇತ್ರ ಅಖಾಡದಲ್ಲಿ ತೊಡೆ ತಟ್ಟಿ ನಿಂತಿರುವ ನಿಖಿಲ್ ಕುಮಾರಸ್ವಾಮಿಯನ್ನು ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿಸಿದ್ದಾರೆ. ಆದರೆ ಅದಕ್ಕೂ ಮೊದಲೂ ಜ್ಯೋತಿಷಿಗಳ ಮಾತು ಕೇಳಿ ನಿಖಿಲ್ ರಾಜಕೀಯ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

    ನಿಖಿಲ್ ಅಸಲಿಗೆ ರಾಜಕೀಯಕ್ಕೆ ಎಂಟ್ರಿಯಾಗುವ ಟೈಂ ಇದಲ್ಲ ಎನ್ನುವುದು ಗೌಡರ ಕುಟುಂಬದ ಆಪ್ತ ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಲೆಕ್ಕಚಾರ. ಆದರೆ ನಿಖಿಲ್‍ಗೆ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಪೂಜಾಫಲದ ಕೃಪಾಕಟಾಕ್ಷ ಸಿಗಲಿದೆ. ಇದೇ ನಿಖಿಲ್ ಅವರನ್ನು ಕಾಪಾಡುತ್ತದೆ ಎಂದು ನಿಖಿಲ್ ಎಂಟ್ರಿಯನ್ನು ವಿಶ್ಲೇಷಿಸಿದ್ದಾರೆ.

    ಹಿರಿಯರ ಭಕ್ತಿ ಸಂಕಲ್ಪ ನಿಖಿಲ್ ಕೈಹಿಡಿಯಲಿದ್ದು, ಇದೇ ಕಾರಣಕ್ಕೆ ಕುಮಾರಸ್ವಾಮಿ ಶೃಂಗೇರಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಗವಿಗಂಗಾಧರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ.

    ದೇವೇಗೌಡರು ಜಾತಕ, ದೇವರು, ಭವಿಷ್ಯ ಎಂದು ನಂಬುತ್ತಾರೆ. ಈ ಸಲಹೆಯನ್ನು ಜ್ಯೋತಿಷಿಯೊಬ್ಬರಿಂದಲೇ ಪಡೆದುಕೊಂಡು ಮೊಮ್ಮಗನನ್ನು ಅಖಾಡಕ್ಕಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಯೋತ್ಪಾದನೆ, ಕತ್ತೆ ರಫ್ತು ಇವೆರಡೇ ಪಾಕ್‍ಗೆ ಗೊತ್ತಿರೋದು: ಸೂಲಿಬೆಲೆ ಕಿಡಿ

    ಭಯೋತ್ಪಾದನೆ, ಕತ್ತೆ ರಫ್ತು ಇವೆರಡೇ ಪಾಕ್‍ಗೆ ಗೊತ್ತಿರೋದು: ಸೂಲಿಬೆಲೆ ಕಿಡಿ

    ಬೀದರ್: ಮಾನವ ಹಕ್ಕುಗಳ ಹೆಸರಿನಲ್ಲಿ ಬೀದಿಗೆ ಬರುವ ಕೇಲ ಅಯೋಗ್ಯರಿಂದಲೇ ಇಂದು ಕಾಶ್ಮೀರ ಹಾಳಾಗಿದೆ ಇದು ದುರ್ದೈವದ ಸಂಗತಿಯಾಗಿದೆ. ಅದರಲ್ಲೂ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ ಹಾಗೂ ಗೌರಿ ಲಂಕೇಶ್ ಇವರೆಲ್ಲರೂ ಸೇರಿಕೊಂಡು ಮಾನವ ಹಕ್ಕುಗಳ ಹೆಸರಿನಲ್ಲಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುರ್ದೈವದ ಸಂಗತಿ ಎಂದು ಖ್ಯಾತ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

    ಬೀದರ್‍ ನ ಫಾರ್ಮಸಿ ಕಾಲೇಜು ಆವರಣದಲ್ಲಿ ನಡೆದ “ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು” ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೂಲಿಬೆಲೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನಚರಣೆ ಮಾಡಿದ್ರು. ಇದನ್ನೂ ಓದಿ: ಆರ್ಥಿಕ ದಿವಾಳಿ ಸರಿದೂಗಿಸಲು ಕತ್ತೆಗಳ ಮೊರೆ ಹೋದ ಪಾಕಿಸ್ತಾನ

    ಬಳಿಕ ಮಾತನಾಡಿದ ಅವರು, ಪಾಪಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಬೀಕಾರಿ ದೇಶವಾಗಿದ್ದು, ಕತ್ತೆ ರಫ್ತು ಮಾಡುವ ದಯನೀಯ ಸ್ಥಿತಿಗೆ ಬಂದಿದೆ. ಭಯೋತ್ಪಾದನೆ ಮತ್ತು ಚೀನಾಕ್ಕೆ ಕತ್ತೆ ರಫ್ತು ಮಾಡುವುದು ಇವರೆಡೇ ಪಾಕಿಸ್ತಾನಕ್ಕೆ ಗೊತ್ತಿರುವುದು. ಮುಂದೆ ಭಾರತ ಒಬ್ಬ ಯೋಧನನ್ನು ಕಳೆದುಕೊಳ್ಳಬಾರದು. ಪಾಕಿಸ್ತಾನದ ಒಬ್ಬರನ್ನು ಬಿಡಬಾರದು ಎಂದು ಹುತಾತ್ಮ ಯೋಧರು ಸಾವನ್ನಪ್ಪಿದ ಕ್ಷಣಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು.

    ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕುಟುಂಬದ ರಾಜಕೀಯ ಬಗ್ಗೆ ಕಿಡಿಕಾರಿದ್ದು, ತಂದೆ ಪ್ರಧಾನಿಯಾಗಿದ್ದ ಪ್ರಭಾವದಿಂದ ಮಗ ಸಿಎಂ, ಮಗ ಸಿಎಂ ಎನ್ನುವ ಕಾರಣಕ್ಕೆ ಅಣ್ಣ ಮಂತ್ರಿ, ಸಿಎಂ ಪತ್ನಿ ಶಾಸಕಿ, ಸಿಎಂ ಪತ್ನಿ ಶಾಸಕಿಯಾಗಿದ್ದರಿಂದ ನಾನು ಯಾಕೆ ಶಾಸಕಿಯಾಗಬಾರದು ಎಂದು ಅಣ್ಣನ ಪತ್ನಿ ಗಲಾಟೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗಾಗಿ ಸಿಎಂ ಹಾಗೂ ಅಣ್ಣನ ಮಕ್ಕಳಲ್ಲಿ ಪೈಪೋಟಿ ಇದೆ. ಇವರಿಗೆ ಪರಿವಾರವೇ ದೇಶವಾಗಿದೆ. ಆದರೆ ಮೋದಿಗೆ ದೇಶವೇ ಪರಿವಾರ ಎಂದು ಮಾಜಿ ಪ್ರಧಾನಿ ಎಚ್.ಡಿ.ಡಿ ಹಾಗೂ ಸಿಎಂ ಎಚ್.ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು.

    https://www.youtube.com/watch?v=uqZadi6yn30

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರ ಉಳಿಸಿಕೊಳ್ಳಲು ಶಾರದಾಂಬೆಗೆ ಮೊರೆ – ಶೃಂಗೇರಿಯಲ್ಲಿ ರೇವಣ್ಣರಿಂದ ಸುದರ್ಶನ ಹೋಮ

    ಸರ್ಕಾರ ಉಳಿಸಿಕೊಳ್ಳಲು ಶಾರದಾಂಬೆಗೆ ಮೊರೆ – ಶೃಂಗೇರಿಯಲ್ಲಿ ರೇವಣ್ಣರಿಂದ ಸುದರ್ಶನ ಹೋಮ

    ಚಿಕ್ಕಮಗಳೂರು: ಕೈ ನಾಯಕರ ಬಂಡಾಯದ ನಡುವೆ ದೇವೇಗೌಡರ ಕುಟುಂಬ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದೆ.

    ಸಚಿವ ಎಚ್.ಡಿ.ರೇವಣ್ಣ ಶೃಂಗೇರಿಯಲ್ಲಿ ಕೃತ್ತಿಮಿ ಶಕ್ತಿ ದೋಷ ಪರಿಹಾರಾರ್ಥ ಸುದರ್ಶನ ಹೋಮ ನಡೆಸಿದ್ದು, ಮೂರು ದಿನಗಳ ಹೋಮ ಕಳೆದ ರಾತ್ರಿ ಪೂರ್ಣಾಹುತಿ ಆಗಿದೆ. ಮತ್ತೊಂದು ಕಡೆ ಸಿಎಂ ಕುಮಾರಸ್ವಾಮಿ ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. 9 ದಿನಗಳ ಕಾಲ ನಡೆಯಲಿರುವ ಮಹಾಮಸ್ತಾಕಭಿಷೇಕ ಸಂಭ್ರಮಕ್ಕೆ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

    ಧರ್ಮಸ್ಥಳದಲ್ಲಿ ಮಾತನಾಡಿದ ಸಚಿವ ರೇವಣ್ಣ, ಬಿಸಿ ಪಾಟೀಲ್ ಮುಂಬೈಗೆ ಹೋದರೆ ಏನು ಆಗುವುದಿಲ್ಲ. ಬಜೆಟ್ ಅನುಮೋದನೆ ಆಗಿಯೇ ಆಗುತ್ತದೆ. ದೇವರ ಅನುಗ್ರಹ ಸರ್ಕಾರದ ಮೇಲಿದೆ. ಕುಮಾರಸ್ವಾಮಿಯನ್ನು ಅಲುಗಾಡಿಸೋಕೆ ಆಗಲ್ಲ ಎಂದಿದ್ದರು.

    ಈ ಹಿಂದೆ ದೇವೇಗೌಡರ ಕುಟುಂಬ ಅತಿರುದ್ರ ಮಹಾಯಾಗ ನಡೆಸಿದ್ದು ಬಳಿಕ ಕುಮಾರಸ್ವಾಮಿ ಸಿಎಂ ಆದ ಮೇಲೆ ಐದು ಬಾರಿ ಶೃಂಗೇರಿಗೆ ಹೋಗಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಶೂಲಿನಿ ಯಾಗ ಮಾಡಿಸಿದ್ದರು. ಇಲ್ಲಿಗೆ ಬಂದಾಗಲೆಲ್ಲ ಒಂದೊಂದು ವಿಶೇಷ ಪೂಜೆ ಕೈಗೊಳ್ಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೋತಿಷಿಯ ಸಲಹೆ ಬಳಿಕ ದೇವೇಗೌಡರಿಂದ ಫೆ.8 ಬಜೆಟ್ ದಿನಾಂಕ ಫಿಕ್ಸ್

    ಜ್ಯೋತಿಷಿಯ ಸಲಹೆ ಬಳಿಕ ದೇವೇಗೌಡರಿಂದ ಫೆ.8 ಬಜೆಟ್ ದಿನಾಂಕ ಫಿಕ್ಸ್

    ಬೆಂಗಳೂರು: ಒಂದು ಕಡೆ ಬಿಜೆಪಿ ತನ್ನ ಕೊನೆ ಆಟ ಎಂಬಂತೆ ‘ಆಪರೇಷನ್ ಲೋಟಸ್ ರಾಕೆಟ್’ ಮಾಡುತ್ತಿದ್ದು, ಇತ್ತ ರಾಜ್ಯ ರಾಜಕೀಯದಲ್ಲಿ ರಥಸಪ್ತಮಿಯ ಛೂ ಮಂತ್ರ ನಡೆಯುತ್ತಿದೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಕ್ಷಿಸಲು ಮಾಜಿ ಪ್ರಧಾನಿ ದೇವೇಗೌಡ ಅವರು ರಥಸಪ್ತಮಿಯ ಅಸ್ತ್ರದ ಬೆನ್ನೇರಿದ್ದಾರೆ. ಆಪರೇಷನ್ ಲೋಟಸ್ ರಾಕೆಟ್ ಸದ್ದು ಜೋರಾಗುತ್ತಲೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಡುಕಾಡಿ ದಿ ಬೆಸ್ಟ್ ಡೇಯನ್ನೇ ಬಜೆಟ್ ಮಂಡನೆಗೆ ದೇವೇಗೌಡರು ನಿಗದಿ ಮಾಡಿದ್ದಾರೆ.

    ಹೌದು. ಫೆಬ್ರವರಿ 8 ಶುಕ್ರವಾರ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಶುಕ್ರವಾರ ಬಜೆಟ್ ಮಂಡನೆ ಮಾಡಿದರೆ ಕುಮಾರಸ್ವಾಮಿ ಸಿಎಂ ಸೀಟು ಭದ್ರವಾಗಿರುತ್ತದೆ. ಮಾಘಮಾಸ ಪೂರ್ವಭಾದ್ರ ನಕ್ಷತ್ರ ಕುಂಭರಾಶಿ ಜೊತೆಗೆ ಶುಭ ಶುಕ್ರವಾರ ಎಂದು ಗೌಡರ ಕುಟುಂಬದ ಆಪ್ತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತರು ಹೇಳಿದ್ದಾರೆ. ಹೀಗಾಗಿ ಜ್ಯೋತಿಷ್ಯರ ಸಲಹೆಯ ಪ್ರಕಾರವೇ ದೇವೇಗೌಡರು ಅಂದಿನ ದಿನವೇ ಬಜೆಟ್ ಮಂಡನೆ ಫಿಕ್ಸ್ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ.

    ಫೆಬ್ರವರಿ 8 ರಂದು 12.30ಕ್ಕೆ ಬಜೆಟ್ ಮಂಡನೆಗೆ ಮುಂದಾಗಿರುವ ಹಿಂದೆ ಸಿಕ್ರೇಟ್ ಕೂಡ ಇದೆ. ಫೆಬ್ರವರಿ 8 ಮಾಘಮಾಸದ ಆರಂಭ ರಥಸಪ್ತಮಿ ಯಾತ್ರೆಗೆ ಸೂರ್ಯ ಏಕಚಕ್ರಾಧಿಪತಿಯಾಗಿ ಹೊರಡುವ ಸಮಯ. ಈ ಸಮಯದಲ್ಲಿ ಶುಭಕಾರ್ಯ ಮಾಡಿದರೆ ಯಾವುದೇ ಅಡ್ಡಿ ಆತಂಕಗಳು ಇರುವುದಿಲ್ಲ. ಎಲ್ಲವೂ ಸಾಂಗವಾಗಿ ನೇರವೇರುತ್ತೆ ಎಂಬುದು ಜ್ಯೋತಿಷಿಗಳ ನಂಬಿಕೆಯಾಗಿದೆ. ಅಲ್ಲದೇ ಈ ದಿನದಲ್ಲಿ ಬಜೆಟ್ ಮಂಡನೆ ಮಾಡಿದರೆ ಜನರಿಗೆ ಸಮಾಧಾನಕರವಾಗಿಯೂ ಇರಲಿದೆ. ಜೊತೆಗೆ 12 ಮಾಸಗಳಲ್ಲಿ ಇದು ಒಳ್ಳೆಯ ಮಾಸ ಹಾಗೂ ಫೆಬ್ರವರಿ 8 ಉತ್ತಮ ದಿನ ಅನ್ನೋದು ಜ್ಯೋತಿಷ್ಯರ ನಂಬಿಕೆಯಾಗಿದ್ದು, ಜ್ಯೋತಿಷ್ಯರ ಸಲಹೆಯ ಮೇರೆಗೆ ದೇವೇಗೌಡರು ಈ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

    ಮಾಘಮಾಸ ಪೂರ್ವಭಾದ್ರ ನಕ್ಷತ್ರದ ಜೊತೆಗೆ ಶುಭ ಶುಕ್ರವಾರ, ರಾಹುಕಾಲ ಕಳೆದ ಬಳಿಕ ಸೂರ್ಯ ರಥಸಪ್ತಮಿ ಯಾತ್ರೆ ಶುರುಮಾಡುವ ಸಮಯದಲ್ಲಿಯೇ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜಕೀಯದಲ್ಲಿರುವವರಿಗೆ ರವಿದೆಸೆ ಬಹಳ ಮುಖ್ಯವಾಗಿದ್ದು, ಬಜೆಟ್ ಮಂಡನೆಗೆ ಈ ಸೂಕ್ತ ದಿನವನ್ನ ಆಯ್ಕೆ ಮಾಡಲಾಗಿದೆ ಎಂದು ದೇವೇಗೌಡರ ಕುಟುಂಬದ ಆಪ್ತ ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೇದಿಕೆಯಲ್ಲಿ ನಿದ್ದೆಗೆ ಜಾರಿದ ಸಚಿವ ರೇವಣ್ಣ

    ವೇದಿಕೆಯಲ್ಲಿ ನಿದ್ದೆಗೆ ಜಾರಿದ ಸಚಿವ ರೇವಣ್ಣ

    ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ತಮ್ಮ ಮಾತನ್ನು ಮುಗಿಸಿ ವೇದಿಕೆಯಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.

    ಹಾಸನದಲ್ಲಿ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ಈ ವೇಳೆ ಸಚಿವ ರೇವಣ್ಣ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಭಾಷಣವನ್ನು ಶುರುಮಾಡಿದ್ದಾರೆ. ಆದರೆ ತಂದೆಯ ಭಾಷಣದ ವೇಳೆಯು ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.

    ಕಾಂಗ್ರೆಸ್ ಪಕ್ಷದ ಮಧ್ಯೆ ಸಿಕ್ಕಾಕಿಕೊಂಡ ಕರ್ನಾಟಕ ಸಿಎಂ ಕ್ಲರ್ಕ್ ನಂತಾಗಿದ್ದಾರೆಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಚ್‍ಡಿಡಿ, ಮೋದಿ ಬಗ್ಗೆ ಬೆಳಗ್ಗೆಯಿಂದ ಸಂಜೆಯವರೆಗೂ ತಮಾಷೆ ಮಾಡಬೇಡಿ. ಅದೇನು ದೊಡ್ಡ ವಿಷಯವಲ್ಲ ಬಿಟ್ಟಾಕಿ ಎಂದು ಹೇಳಿ ವ್ಯಂಗ್ಯ ಮಾಡಿದ್ದಾರೆ.

    56 ವರ್ಷ ಈ ಜಿಲ್ಲೆಯಲ್ಲಿ ನನ್ನನ್ನ ರಾಜಕೀಯವಾಗಿ ಬೆಳೆಸಿದ್ದೀರಿ. ನನಗೆ ಯಾರೂ ಶತ್ರುಗಳಿಲ್ಲ, ನಾನು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ನಾನು ಯಾರ ಮನಸನ್ನೂ ನೋಯಿಸಿಲ್ಲ. ಅದೇ ರೀತಿ ಪಕ್ಷ ನನ್ನ ಮನೆಯ ಆಸ್ತಿಯಲ್ಲ. ಇದು ಎಲ್ಲರಿಗೂ ಸೇರಿದ ಪಕ್ಷವಾಗಿದೆ. ಕುಮಾರಸ್ವಾಮಿ 38 ಜನರನ್ನ ಕಟ್ಟಿಕೊಂಡು ಸಿಎಂ ಆಗಿದ್ದು, ಅವರ ನೋವೇನು ಎಂದು ನನಗೆ ಗೊತ್ತಿದೆ. ಕಾಂಗ್ರೆಸ್ಸಿನ 78 ಜನರನ್ನ ಕಟ್ಟಿಕೊಂಡು ಸರ್ಕಾರ ನಡೆಸಬೇಕು. ಮೈತ್ರಿ ಸರ್ಕಾರದಲ್ಲಿ ಪಕ್ಷವೂ ಉಳಿಯಬೇಕು ಎಂದು ದೇವೇಗೌಡರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರ್ ಕಣಕ್ಕೆ..?

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರ್ ಕಣಕ್ಕೆ..?

    ಮಂಡ್ಯ: ಹಾಸನ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತ ಎಂಬ ಮಾಹಿತಿ ಬೆನ್ನಲ್ಲೇ, ಇತ್ತ ಜೆಡಿಎಸ್ ಭದ್ರಕೋಟೆ ಮಂಡ್ಯದಿಂದ ದೇವೇಗೌಡರ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

    ನಿಖಿಲ್ ಸ್ಪರ್ಧೆಗಾಗಿ ಮಂಡ್ಯದಲ್ಲಿ ದೊಡ್ಡಗೌಡರ ಕುಟುಂಬ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದು, ಇತ್ತ ಈ ಬಾರಿ ಮಂಡ್ಯದಿಂದ ಸ್ವತಃ ದೇವೇಗೌಡರೇ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ.

    ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ನಿಖಿಲ್‍ ರನ್ನ ಕಣಕ್ಕಿಳಿಸಿದರೆ ಮೊಮ್ಮಗನ ರಾಜಕೀಯ ಎಂಟ್ರಿಯನ್ನು ಸುಲಭ ಜಯದೊಂದಿಗೆ ಆರಂಭಿಸಬಹುದು ಅಂತ ದೊಡ್ಡಗೌಡ ಕುಟುಂಬ ಯೋಚಿಸುತ್ತಿದೆ. ಈ ಎಲ್ಲ ಊಹಾಪೋಹಗಳೂ ಸತ್ಯ ಎಂಬಂತೆ ನಾವು ಈಗಾಗಲೇ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಕೊಡುವಂತೆ ಕೇಳಿಕೊಂಡಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಮಂಡ್ಯದಲ್ಲಿ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಮಂಡ್ಯ ಜನರು ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಿಖಿಲ್ ಏನಾದರೂ ಮಂಡ್ಯದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸುವುದು ನಮ್ಮ ಜವಬ್ದಾರಿ ಎಂದು ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಹೇಳಿದ್ದಾರೆ.

    ಮಂಡ್ಯದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂದು ಖಚಿತವಾಗಿಲ್ಲ. ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮಂಡ್ಯದಿಂದ ದೇವೇಗೌಡರನ್ನು ಸ್ಪರ್ಧೆ ಮಾಡುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ. ನಿಖಿಲ್ ಸ್ಪರ್ಧೆ ಮಾಡಿದರೂ ಓಕೆ ಎಂದು ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜು ಹೇಳಿದ್ದಾರೆ. ಇತ್ತ ಮಂಡ್ಯ ಸಂಸದ ಎಲ್‍ಆರ್.ಶಿವರಾಮೇಗೌಡ ಕೂಡ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಉತ್ಸಾಹದಲ್ಲಿದ್ದು, ಉಪಚುನಾವಣೆಯಲ್ಲಿ ಗೆದ್ದ ನಾನು ಕೆಲವೇ ತಿಂಗಳಿಗೆ ಸಂಸದನಾಗಿಲ್ಲ. ದೇವೇಗೌಡರು ಮತ್ತೊಮ್ಮೆ ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಮಂಡ್ಯ ಸಂಸದರಾಗುವ ಕನಸಲ್ಲಿದ್ದಾರೆ.

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕಣಕ್ಕಿಳೀತಾರೋ ಅಥವಾ ದೇವೇಗೌಡರು ಕಣಕ್ಕಿಳೀತಾರೋ ಎಂಬ ಚರ್ಚೆ ಜಿಲ್ಲೆಯಾದ್ಯಂತ ಜೋರಾಗೆ ಶುರುವಾಗಿದೆ. ಆದರೆ ಅಂತಿಮವಾಗಿ ಯಾರು ಅಭ್ಯರ್ಥಿ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv