Tag: deve gowda

  • ಬಿಜೆಪಿ ವಿರುದ್ಧ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಬೇಕು: ಹೆಚ್‍ಡಿಡಿ

    ಬಿಜೆಪಿ ವಿರುದ್ಧ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಬೇಕು: ಹೆಚ್‍ಡಿಡಿ

    ಹಾಸನ: ಬಿಜೆಪಿ ವಿರುದ್ಧ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಬೇಕು ಎಂದು ಮಾಜಿ ಪ್ರಧಾನಿ ಹೆಚ್ ದೇವೇಗೌಡ ಕರೆ ನೀಡಿದ್ದಾರೆ.

    ಹಾಸನದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲ ಬಿಜೆಪಿ ನಾಯಕರು ಮಹಾತ್ಮ ಗಾಂಧೀಜಿ ಬಗ್ಗೆ ಆಡುವ ಮಾತು ಕೇಳಿದರೆ ನಮ್ಮ ಕರುಳು ಕತ್ತರಿಸಿ ಬರುತ್ತೆ. ರಾಜಕೀಯದಲ್ಲಿ ಅಧಿಕಾರ ಬರುತ್ತೆ ಹೋಗುತ್ತೆ ಅದೇ ಶಾಶ್ವತ ಅಲ್ಲ. ಹಿಂದೂ ರಾಷ್ಟ್ರ ತರುತ್ತೇವೆ ಎಂದು ಉದ್ಧಟತನದಿಂದ ಮಾತನಾಡುತ್ತಾರೆ. ಇದನ್ನು ತಡೆಯುವ ಶಕ್ತಿ ಇರೋದು ಮಹಾಜನತೆಗೆ ಮಾತ್ರ ಎಂದರು.

    ಬಿಜೆಪಿ ವಿರುದ್ಧ ಹಿಂದು ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಬೇಕು. ಸುಪ್ರೀಂಕೋರ್ಟ್ ಕೂಡ ಈ ದಿನಗಳಲ್ಲಿ ಬಲ ಕಳೆದುಕೊಳ್ಳುತ್ತಿದೆ ಎಂಬ ಭಯ ನನ್ನನ್ನು ಕಾಡುತ್ತಿದೆ. ನಾನೇನು ಕಾನೂನು ಪಂಡಿತನಲ್ಲ ಆದರೆ ಪರಿಸ್ಥಿತಿ ನೋಡಿ ಹಾಗನ್ನಿಸುತ್ತಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದರು. ನಾವೆಲ್ಲರೂ ಒಟ್ಟು ಸೇರಿ ಸಿಎಎ, ಎನ್.ಆರ್.ಸಿ ಮತ್ತು ಎನ್.ಆರ್.ಪಿ ಕಾನೂನುಗಳನ್ನ ವಿರೋಧಿಸಬೇಕು. ನಮ್ಮ ದೇಶದಲ್ಲಿ ವಿವಿಧ ಜಾತಿ ಜನಾಂಗದವರು ವಾಸವಿದ್ದಾರೆ ತಿಳಿಸಿದರು.

    ನರೇಂದ್ರ ಮೋದಿ ಮಾತನಾಡುವ ದಾಟಿಯಲ್ಲೇ ಹಿಂದೂ ರಾಷ್ಟ್ರ ಮಾಡುವಂತಿದೆ. ಅವರು ಅಂದುಕೊಂಡಿರುವುದು ಅಷ್ಟು ಸುಲಭವಾದುದ್ದಲ್ಲ. ಈ ಕಾಯ್ದೆಯಿಂದ ಕೇವಲ ಮುಸ್ಲಿಂರಿಗೆ ಮಾತ್ರವಲ್ಲ ಉಳಿದವರಿಗೂ ತೊಂದರೆಯಾಗುತ್ತದೆ. ಮಹಾತ್ಮ ಗಾಂಧೀಜಿಯನ್ನು ಕೊಲೆ ಮಾಡಿದವರಿಗೆ ಭಾರತ ರತ್ನ ನೀಡಬೇಕು ಎನ್ನುತ್ತಿದ್ದಾರೆ. ಲೋಕಸಭೆಯಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿದ್ದೆ ಇದಕ್ಕೆ ಕಾರಣ. ಮೋದಿ ಆಡಳಿತದಲ್ಲಿ ಜಾತಿ ಜನಾಂಗದ ಘರ್ಷಣೆಗಳು ಹೆಚ್ಚಾಗಿವೆ ಎಂದು ಆಕ್ರೋಶ ಹೊರಹಾಕಿದರು.

  • ವೃದ್ಧೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಎಚ್‍ಡಿಡಿ

    ವೃದ್ಧೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಎಚ್‍ಡಿಡಿ

    ಮಂಡ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವೃದ್ಧೆಯೊಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದಲ್ಲಿ ಸಂತಾನ ಲಕ್ಷ್ಮಿ ದೇವಿ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೇವೇಗೌಡರು, ಅದೇ ಗ್ರಾಮದ 92 ವರ್ಷದ ವೃದ್ಧೆ ಕೆಂಪಮ್ಮ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

    ಸಂತಾನ ಲಕ್ಷ್ಮಿ ದೇವಿ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ದೇವೇಗೌಡರು ಬಂದಿದ್ದಾರೆ ಎಂದು ತಿಳಿದು, ಕೆಂಪಮ್ಮ ಅವರನ್ನು ನೋಡಲು ಬಂದಿದ್ದರು. ಈ ವೇಳೆ ವೃದ್ಧೆಯ ಯೋಗ ಕ್ಷೇಮ ವಿಚಾರಿಸಿದ ದೇವೇಗೌಡರು ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ವೃದ್ಧೆಯನ್ನು ವೇದಿಕೆಯಲ್ಲಿ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದರು.

  • ದೇವೇಗೌಡ್ರು ಕುಮಾರಸ್ವಾಮಿಗೆ ಸರಿಯಾಗಿ ಟ್ರೈನಿಂಗ್ ಕೊಟ್ಟಿಲ್ಲ – ವಿ ಸೋಮಣ್ಣ

    ದೇವೇಗೌಡ್ರು ಕುಮಾರಸ್ವಾಮಿಗೆ ಸರಿಯಾಗಿ ಟ್ರೈನಿಂಗ್ ಕೊಟ್ಟಿಲ್ಲ – ವಿ ಸೋಮಣ್ಣ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ದೇವೇಗೌಡರು ಸರಿಯಾದ ರೀತಿಯಲ್ಲಿ ತರಬೇತಿ ನೀಡಿಲ್ಲ ಅನಿಸುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೆಚ್‍ಡಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಇಂದು ಮುಂಜಾನೆ ಕಬ್ಬನ್ ಪಾರ್ಕಿನಲ್ಲಿ ಮಾತನಾಡಿದ ಸೋಮಣ್ಣ ಮಂಗಳೂರು ಬಾಂಬ್ ಪ್ರಕರಣದ ಬಗ್ಗೆ ಹೆಚ್‍ಡಿಕೆ ಟೀಕೆಗೆ ಖಾರವಾಗಿ ತಿರುಗೇಟು ನೀಡಿದರು. ಹೆಚ್‍ಡಿ ಕುಮಾರಸ್ವಾಮಿ ಎರಡು ಬಾರಿ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದವರು ಅವರ ಬಾಯಿಯಲ್ಲಿ ಇಂತಹ ಮಾತುಗಳು ಸಲ್ಲದು. ಕುಮಾರಸ್ವಾಮಿಗೆ ಇಂತಹ ಕೀಳುಮಟ್ಟದ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಹೇಳಿದರು.

    ದಕ್ಷ ಪೊಲೀಸ್ ಅಧಿಕಾರಿಗಳ ದಕ್ಷತೆಯನ್ನ ಕುಗ್ಗಿಸುತ್ತವೇ ಇಂತಹ ಹೇಳಿಕೆಗಳು. ಕುಮಾರಸ್ವಾಮಿಯರು ಕೆಲವೊಮ್ಮೆ ಹಿಟ್ ಅಂಡ್ ರನ್ ಮಾಡುತ್ತಾರೆ. ಇದು ಅವರಿಗೂ ಒಳ್ಳೆಯದಲ್ಲ. ಕುಮಾರಸ್ವಾಮಿಯರವರ ಈ ಹೇಳಿಕೆಯನ್ನು ದೇವೇಗೌಡರು ಸಿರಿಯಸ್ ಆಗಿ ತಗೆದುಕೊಂಡಿಲ್ಲ ಅನ್ನಿಸುತ್ತೆ. ಕುಮಾರಸ್ವಾಮಿ ಗಂಟೆಗೊಂದು ಹೇಳಿಕೆ ನೀಡಿ ನಾನು ಮಾತನಾಡಿಲ್ಲ ಅಂತಾರೆ ಎಂಧು ವ್ಯಂಗ್ಯವಾಡಿದರು.

    ಮಂಗಳೂರಿನಲ್ಲಿ ಗಣರಾಜ್ಯೋತ್ಸವ ಸ್ವಾತಂತ್ರ್ಯ ದಿನಾಚಾರಣೆಗೂ ಮುನ್ನ ಪೊಲೀಸ್ರು ಅಣಕು ಪ್ರದರ್ಶನ ಮಾಡುವ ರೀತಿಯಲ್ಲಿ, ಮಂಗಳೂರು ಕಮಿಷನರ್ ಹರ್ಷ ಅಣಕು ಪ್ರದರ್ಶನ ಮಾಡಿ ಜನರಲ್ಲಿ ಆತಂಕ ಹುಟ್ಟಿಸಿದ್ದಾರೆ ಎಂದು ಕುಮಾರಸ್ವಾಮಿಯವರು ವ್ಯಂಗ್ಯವಾಡಿದರು.

  • ಬಿಎಸ್‍ವೈಯನ್ನು ಎತ್ತಾಕುವ ವಿದ್ಯೆಯನ್ನು ಅಪ್ಪ, ಮಗ ಕಲಿತಿದ್ದಾರೆ – ಆಯನೂರು ವಾಗ್ದಾಳಿ

    ಬಿಎಸ್‍ವೈಯನ್ನು ಎತ್ತಾಕುವ ವಿದ್ಯೆಯನ್ನು ಅಪ್ಪ, ಮಗ ಕಲಿತಿದ್ದಾರೆ – ಆಯನೂರು ವಾಗ್ದಾಳಿ

    ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎತ್ತಾಕುವ ಹಲಕುತನದ ವಿದ್ಯೆಯನ್ನು ಅಪ್ಪ, ಮಗ ಹೆಣೆದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಅಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಡೆದ ಶಾಸಕ ಎಸ್.ಎ.ರವೀಂದ್ರನಾಥ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನವರು ಒಂದು ಕಡೆ ಯಡಿಯೂರಪ್ಪನವರ ಸರ್ಕಾರ ಬೀಳಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಇನ್ನೊಂದೆಡೆ ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎನ್ನುತ್ತಾರೆ. ಅನರ್ಹ ಶಾಸಕರು ಸೋತರೆ ಸರ್ಕಾರ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದ್ದಾರೆ.

    ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಇವರೇ ಬೆನ್ನ ಮೇಲೆ ಯಡಿಯೂರಪ್ಪ ನವರನ್ನು ಕೂರಿಸಿಕೊಳ್ಳಬೇಕು ಎನ್ನುವ ತಂತ್ರ ರೂಪಿಸಿದ್ದಾರೆ. ಹಿಂದಿನ ಬಾರಿ ಎತ್ತಾಕಿದರಲ್ಲ, ಅದೇ ರೀತಿ ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ಇಂಥ ಎತ್ತಾಕುವಂತಹ ಹಲುಕತನದ ವಿದ್ಯೆಯನ್ನು ಅಪ್ಪ ಮಗ ಹೆಣಿದಿದ್ದಾರೆ ಎಂದು ಕಿಡಿ ಕಾರಿದರು.

    ಉಪ ಚುನಾವಣೆಯಲ್ಲಿ ಬಿಜೆಪಿ ಖಚಿತವಾಗಿ ಗೆಲುವು ಸಾಧಿಸುತ್ತದೆ, ಈ ಕಾರಣಕ್ಕಾಗಿ ಜೆಡಿಎಸ್ ಬಿಜೆಪಿಯನ್ನು ಸಮರ್ಥಸಿಕೊಂಡು ಬರುತ್ತಿದ್ದಾರೆ. ಆದರೆ ಜನರಿಗೆ ಇದೆಲ್ಲ ಗೊತ್ತಿದೆ. ಬಿಜೆಪಿಯನ್ನು ಸೋಲಿಸಲು ಬಿಡುವುದಿಲ್ಲ. ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಸರ್ಕಾರ ಮುಂದುವರಿಯುತ್ತದೆ. ಯಡಿಯೂರಪ್ಪನವರ ನೇತೃತ್ವದಲ್ಲಿ 15ಕ್ಕೆ 15 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ದೇವೇಗೌಡರ ಒತ್ತಡಕ್ಕೆ ಮಣಿದು ಯಾದಗಿರಿ ಎಸ್‌ಐ ಎತ್ತಂಗಡಿ

    ದೇವೇಗೌಡರ ಒತ್ತಡಕ್ಕೆ ಮಣಿದು ಯಾದಗಿರಿ ಎಸ್‌ಐ ಎತ್ತಂಗಡಿ

    ಯಾದಗಿರಿ: ರಾಜಕೀಯ ವಿಚಾರವಾಗಿ ನಮ್ಮದು ದೋಸ್ತಿ ಇಲ್ಲ ಅನ್ನೋ ಯಡಿಯೂರಪ್ಪ ಅವರು ಆಡಳಿತಾತ್ಮಕ ವಿಷಯದಲ್ಲಿ ದೇವೇಗೌಡರ ಒತ್ತಡಕ್ಕೆ ಮಣಿದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಯಾದಗಿರಿ ಸಿಟಿ ಸ್ಟೇಷನ್ ಪಿಎಸ್‌ಐ ಬಾಪುಗೌಡ ಪಾಟೀಲ್‌ರನ್ನ ಕಲಬುರಗಿಯ ಐಜಿ ಕಚೇರಿಗೆ ಸರ್ಕಾರ ಎತ್ತಂಗಡಿ ಮಾಡಿದೆ. ದೇವೇಗೌಡರು ಹೇಳಿದ್ದರಿಂದಾಗಿ ನಾನು ಕ್ರಮ ತೆಗೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಸಿಎಂ ಅವರ ಈ ಕ್ರಮವನ್ನು ದೇವೇಗೌಡರು ಸ್ವಾಗತಿಸಿದ್ದಾರೆ.

    ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಯಡಿಯೂರಪ್ಪಗೆ ನಾನು ಪತ್ರ ಬರೆದಿದ್ದೆ. ಇದನ್ನೇ ಏನೋ ಸಾಧನೆ ಎಂದು ನಮ್ಮ ಕಾರ್ಯಕರ್ತರು ಹಿಗ್ಗೋದು ಬೇಡ. ದ್ವೇಷ ಸಾಧಿಸೋದೂ ಬೇಡ. ಶಾಂತವಾಗಿರಿ ಅಂತ ಸಲಹೆ ನೀಡಿದ್ದಾರೆ. ಆದರೆ ರಾಜಕೀಯ ಒತ್ತಡಕ್ಕೆ ಎಸ್‌ಐ ವರ್ಗಾವಣೆ ಮಾಡಿರೋದು ಈಗ ವ್ಯಾಪಕ ಚರ್ಚೆಗೀಡಾಗಿದೆ. ಇದನ್ನು ಓದಿ: ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

    ಪಿಎಸ್‌ಐ ಅಮಾನತಿಗಾಗಿ ದೇವೇಗೌಡ ಹೋರಾಟವನ್ನು ಸಚಿವ ಸಿ.ಟಿ ರವಿ ಅಣಕಿಸಿದ್ದಾರೆ. ದೊಡ್ಡವರು ದೊಡ್ಡವರ ರೀತಿ ನಡೆದುಕೊಳ್ಳಬೇಕು. ದೊಡ್ಡವರು ಸಣ್ಣವರ ರೀತಿಯಲ್ಲಿ ನಡೆದುಕೊಳ್ಳಬಾರದು ಅಂದಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಪ್ರಶ್ನಿಸಿ ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಶರಣಗೌಡ ಕಂದಕೂರು ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಎಸ್‌ಐ ಬಂಧಿಸಿದ್ದರು. ಬೇಲ್ ಮೇಲೆ ಹೊರ ಬಂದಿದ್ದ ಕಾರ್ಯಕರ್ತರು, ಎಸ್‌ಐ ವರ್ಗಾವಣೆಗೆ ದೇವೇಗೌಡರ ನೇತೃತ್ವದಲ್ಲಿ ಧರಣಿ ಮಾಡಿದ್ದರು. ಇದನ್ನು ಓದಿ: ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

    ಅಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಹೆಚ್‌ಡಿಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದ್ದರು. ಯಾದಗಿರಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ನಮ್ಮ ಹೋರಾಟ ಇಷ್ಟಕ್ಕೆ ಕೊನೆಯಾಗದು. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರ ವಿರುದ್ಧ ಈ ರೀತಿ ಹಗೆತನ ನಡೆದರೆ ನಾನು ಸಹಿಸಲಾರೆ. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು.

  • ಬೆಳಕಾಗುವಷ್ಟರಲ್ಲಿ ಉಲ್ಟಾ ಹೊಡೆದ ಯಡಿಯೂರಪ್ಪ, ಎಚ್‌ಡಿಡಿ

    ಬೆಳಕಾಗುವಷ್ಟರಲ್ಲಿ ಉಲ್ಟಾ ಹೊಡೆದ ಯಡಿಯೂರಪ್ಪ, ಎಚ್‌ಡಿಡಿ

    ಬೆಂಗಳೂರು: ಮಧ್ಯಂತರ ಚುನಾವಣೆ ತಪ್ಪಿಸಲು, ಸಿದ್ದರಾಮಯ್ಯ ಸಿಎಂ ಕನಸಿಗೆ ಕೊಳ್ಳಿ ಇಡೋಕೆ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎನ್ನುವ ಚರ್ಚೆ ಜೋರಾಗಿದೆ.

    ಈ ಹೊತ್ತಲ್ಲೇ, ಯಡಿಯೂರಪ್ಪ ಅವರ ಸರ್ಕಾರವನ್ನು ಬೀಳಿಸಲು ಹೋಗಲ್ಲ ಅಂತ ಕುಮಾರಸ್ವಾಮಿ ಜೊತೆಗೆ ದೇವೇಗೌಡರೂ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೌದು, ದೇವೇಗೌಡರು ಫೋನ್ ಮಾಡಿದ್ದರು. ಮಾತುಕತೆ ನಡೆಸಿದ್ದೇವೆ. ಅದನ್ನೆಲ್ಲಾ ಮಾಧ್ಯಮದ ಮುಂದೆ ಹೇಳೋಕೆ ಆಗಲ್ಲ ಅಂತ ಹೇಳಿದ್ದರು.

    ದೇವೇಗೌಡರು ಕೂಡ ಕುಮಾರಸ್ವಾಮಿ ಏನ್ರೀ ಹೇಳೋದು. ನಾನೇ ಹೇಳ್ತೇನೆ. ಯಡಿಯೂರಪ್ಪ 3 ವರ್ಷ 8 ತಿಂಗಳು ಪೂರೈಸಲಿ ಅಂತ ಹೇಳಿದ್ದೇನೆ ಅದರಲ್ಲಿ ವಿಶೇಷ ಅರ್ಥ ಏನಿದೆ ಅಂತ ನಿನ್ನೆ ಸುದ್ದಿಗೋಷ್ಠಿ ಹೇಳಿದ್ದರು. ಇದನ್ನು ಓದಿ: ಯಡಿಯೂರಪ್ಪ ನಮಗೇನು ಶತ್ರು ಅಲ್ಲ, ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು – ಹೆಚ್‌ಡಿಡಿ

    ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕರಂತೂ ನಮ್ಮ ಅನುಮಾನ, ಊಹೆಗಳು ನಿಜವಾಗಿವೆ. ಜೆಡಿಎಸ್‌ನಿಂದ ಇನ್ನೇನು ನಿರೀಕ್ಷೆ ಮಾಡೋಕೆ ಆಗುತ್ತೆ ಅಂತ ಲೇವಡಿ ಮಾಡಿತ್ತು. ಈಗ ರಾತ್ರಿ ಮುಗಿದು ಬೆಳಗಾಗುವಷ್ಟರಲ್ಲೇ ಯಡಿಯೂರಪ್ಪ ಅವರೂ, ದೇವೇಗೌಡರೂ ತಮ್ಮ ಹೇಳಿಕೆಗಳ ಬಗ್ಗೆ ಉಲ್ಟಾ ಹೊಡೆದಿದ್ದಾರೆ.

    ದೇವೇಗೌಡರ ಜೊತೆಗಿನ ಫೋನ್ ಮಾತುಕತೆ ನಿರಾಕರಿಸಿರುವ ಸಿಎಂ, ದೇವೇಗೌಡ್ರು ಫೋನ್ ಮಾಡಿದ್ರು ಅನ್ನೋ ವಿಷಯದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಮಾಜಿ ಪ್ರಧಾನಿಯಾಗಿ ದೇವೇಗೌಡರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋ ಶಕ್ತಿ ಇದೆ. ನಾನು ದೇವೇಗೌಡರ ಹೆಸರನ್ನು ಯಾವುದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಿಲ್ಲ ಅಂದಿದ್ದಾರೆ. ಇದನ್ನು ಓದಿ: ನಾನು ಎಲ್ಲೂ ಹೆಚ್‌ಡಿಡಿ ಹೆಸರನ್ನು ಪ್ರಸ್ತಾಪಿಸಿಲ್ಲ- ಫೋನ್ ಮಾತುಕತೆ ಕುರಿತು ಬಿಎಸ್‌ವೈ ಯೂಟರ್ನ್

    ದೇವೇಗೌಡ್ರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಜೊತೆ ರಾಜಕೀಯ ಮಾತುಕತೆ ನಡೆದಿಲ್ಲ. ಬೆಂಗಳೂರಿನ ಬುಕ್‌ಹೌಸ್‌ಗೆ ಸಂಬಂಧಿಸಿದ ಫೈಲನ್ನ ಸಿಎಂ ತಡೆ ಹಿಡಿದ್ದಿದ್ದರು. ಆಗ ಸಿಎಂ ಸಲಹೆಗಾರ ಲಕ್ಷ್ಮಿ ನಾರಾಯಣ ಅವ್ರಿಗೆ ಮಾತಾಡಿ ಬಳಿಕ ಸಿಎಂ ಜೊತೆ ಮಾತಾಡಿದ್ದೆ ಅಷ್ಟೇ. ಅದು ಬಿಟ್ಟು ಏನು ಬೇರೆ ಮಾತಾಡಿಲ್ಲ ಅಂತ ಸ್ಪಷ್ಟಪಡಿಸಿದ್ರು. ಅಲ್ಲದೆ, ಯಡಿಯೂರಪ್ಪ ಶತ್ರು ಅಲ್ಲ, ಮಾತಾಡಬಾರದು ಅಂತೇನೂ ಇಲ್ಲವಲ್ಲ ಅಂತಲೂ ಹೇಳಿದ್ದಾರೆ.

  • ಗುಜರಾತ್ ಪ್ರವಾಸದಲ್ಲಿ ಎಚ್‍ಡಿಡಿ – ಏಕತಾ ಪ್ರತಿಮೆಗೆ ಭೇಟಿ

    ಗುಜರಾತ್ ಪ್ರವಾಸದಲ್ಲಿ ಎಚ್‍ಡಿಡಿ – ಏಕತಾ ಪ್ರತಿಮೆಗೆ ಭೇಟಿ

    ಗಾಂಧಿನಗರ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಕ್ಕಿನ ಪ್ರತಿಮೆ ಇರುವ ಸ್ಥಳಕ್ಕೆ ಭಾರತದ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ನೀಡಿದ್ದಾರೆ.

    ಗುಜರಾತ್‍ನ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರದ ಅಣೆಕಟ್ಟಿನ ಬಳಿ ಇರುವ ಸರ್ದಾರ್ ವಲ್ಲಭಬಾಯಿ ಅವರ 182 ಮೀಟರ್ ಉದ್ದದ ಏಕತಾ ಪ್ರತಿಮೆಯನ್ನು ದೇವೇಗೌಡರು ವೀಕ್ಷಿಸಿದ್ದಾರೆ.

    ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಗುಜರಾತ್‍ಗೆ ವಿಮಾನ ಮೂಲಕ ಪ್ರಯಾಣ ಬೆಳೆಸಿರುವ ಗೌಡರು, ಏಕತಾ ಪ್ರತಿಮೆಯ ಜೊತೆಗೆ ಗುಜರಾತ್ ನಲ್ಲಿರುವ ಇತರ ಪ್ರದೇಶಗಳಿಗೂ ಭೇಟಿ ನೀಡಲಿದ್ದಾರೆ. ಇದರ ಜೊತೆಗೆ ಗರುಡೇಶ್ವರ ದೇವಸ್ಥಾನ, ರಂಗ್ ಅವದೂತ್ ಮಹಾರಾಜ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

    ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ 2018 ಅಕ್ಟೋಬರ್ 31 ಅನಾವರಣ ಮಾಡಲಾಯಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ವಲ್ಲಭಭಾಯ್ ಅವರ ಪೂರ್ಣ ಪ್ರತಿಮೆ ಇದಾಗಿದ್ದು ಧೋತಿ ಮತ್ತು ಜುಬ್ಬ ತೊಟ್ಟ ಸ್ಯಾಂಡಲ್ ಚಪ್ಪಲಿ ಧರಿಸಿರುವ ಪಟೇಲ್ ರ ಸರಳ ವ್ಯಕ್ತಿತ್ವವನ್ನು ನಾವು ಪ್ರತಿಮೆಯಲ್ಲಿ ಕಾಣಬಹುದು.

    ಈ ಯೋಜನೆ ಆರಂಭಗೊಂಡಿದ್ದು ಹೇಗೆ?
    2010 ರಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಘೋಷಿಸಿದ್ದರು. 2013 ರಲ್ಲಿ ಯೋಜನೆ ನಿರ್ಮಾಣ ಶಂಕುಸ್ಥಾಪನೆ ನಡೆಸಿ ಕಾಮಗಾರಿಯನ್ನು ಆರಂಭಿಸಲಾಯಿತು. 2015 ರಲ್ಲಿ ಹೈಡ್ರಲಾಜಿಕಲ್ ಸಮೀಕ್ಷೆ, ಸುರಂಗ ಪರೀಕ್ಷೆ, ನೆರಳು ಬೆಳಕಿನ ಅಧ್ಯಯನಗಳನ್ನು ಪೂರ್ಣಗೊಳಿಸಿದ ಎಲ್ ಆಂಡ್ ಟಿ ಸಂಸ್ಥೆಯೂ ಈ ಬೃಹತ್ ಯೋಜನೆ ಉಸ್ತುವಾರಿಯನ್ನು ಹೊತ್ತುಕೊಂಡು ಸಂಪೂರ್ಣ ಮಾಡಿದೆ. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.

    ಎಷ್ಟು ಖರ್ಚಾಗಿದೆ?
    ವಿಶ್ವದ ಉತ್ಕೃಷ್ಟ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪವನ್ನು ಏಕತಾ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. 2,989 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಷ್ಟೇ ಗಟ್ಟಿಯಾಗಿ ಪ್ರತಿಮೆ ನಿರ್ಮಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು 2012-13ರ ಬಜೆಟ್ ನಲ್ಲಿ 100 ಕೋಟಿ, 2014-15ರ ಬಜೆಟ್ ನಲ್ಲಿ 500 ಕೋಟಿ ಹಣವನ್ನು ಗುಜರಾತ್ ಸರ್ಕಾರ ನೀಡಿತ್ತು. 200 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ 2014-15ರ ಬಜೆಟ್ ನಲ್ಲಿ ನೀಡಿತ್ತು.

    ಏನೆಲ್ಲ ವಿಶೇಷತೆಯಿದೆ?
    ಪ್ರತಿಮೆಯಲ್ಲೇ ಎರಡು ಲಿಫ್ಟ್ ಗಳಿವೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರವಾಸಿಗರ ವಸತಿಗಾಗಿ 52 ರೂಂಗಳಿರುವ ಶ್ರೇಷ್ಠ ಭಾರತ ಹೆಸರಿನ ತ್ರಿಸ್ಟಾರ್ ಲಾಡ್ಜ್ ನಿರ್ಮಿಸಿದೆ. ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‍ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯವಿದೆ. 250 ಟೆಂಟ್‍ಗಳಿರುವ `ಟೆಂಟ್ ಸಿಟಿ’, 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್‍ವೇ, ವೀಕ್ಷಣಾ ಗ್ಯಾಲರಿಯೂ ಇದೆ. ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೋ ಗ್ಯಾಲರಿ, ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ನಾಲ್ಕು ಹಂತದಲ್ಲಿ ಕಾಮಗಾರಿ ಮಾಡಲಾಗಿದ್ದು ತ್ರೀಡಿ ತಂತ್ರಜ್ಞಾನದ ಮೂಲಕ ಪಟೇಲರ ಚಿತ್ರಗಳನ್ನು ಸೃಷ್ಟಿಸಿ ಅವರ ಸಾಧನೆಗಳನ್ನು ಪ್ರವಾಸಿಗರಿಗೆ ತಿಳಿಸಲಾಗುತ್ತದೆ.

  • ಹಿತ್ತಾಳೆ ಕಿವಿ ಆರೋಪ, ಶಿವರಾಮೇಗೌಡರನ್ನು ಕಸದಬುಟ್ಟಿಗೆ ಹೋಲಿಸಿದ ರೇವಣ್ಣ

    ಹಿತ್ತಾಳೆ ಕಿವಿ ಆರೋಪ, ಶಿವರಾಮೇಗೌಡರನ್ನು ಕಸದಬುಟ್ಟಿಗೆ ಹೋಲಿಸಿದ ರೇವಣ್ಣ

    – ಕುಮಾರಸ್ವಾಮಿ ಧರ್ಮರಾಯ

    ಹಾಸನ: ದೇವೇಗೌಡರು ಮತ್ತು ಕುಮಾರಸ್ವಾಮಿ ಅವರದು ಹಿತ್ತಾಳೆ ಕಿವಿ ಎಂದಿದ್ದ ಮಾಜಿ ಎಂಪಿ ಶಿವರಾಮೇಗೌಡರನ್ನು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಕಸದಬುಟ್ಟಿಗೆ ಹೋಲಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಸದಬುಟ್ಟಿಯಲ್ಲಿ ಇದ್ದವರನ್ನು ತೆಗೆದುಕೊಂಡು ಗೆಲ್ಲಿಸುತ್ತಾರೆ. ಶಿವರಾಮೇಗೌಡ ಅವರಂಥವರನ್ನು ಬೆಳೆಸುತ್ತಾರೆ. ಇದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ದೌರ್ಭಾಗ್ಯ ಎಂದು ಹೇಳಿದರು.

    ಕುಮಾರಸ್ವಾಮಿ ಧರ್ಮರಾಯ ಇದ್ದ ಹಾಗೇ ಕೆಲವರು ಹೇಳಿದರೆ ಅದಕ್ಕೆ ಓಕೆ ಎನ್ನುತ್ತಾರೆ. ಅದಕ್ಕೆ ಈ ರೀತಿ ಆಗುತ್ತದೆ. ಬ್ಯಾಕ್ ಗ್ರೌಂಡ್ ನೋಡಿ, ನಂತರ ಪಕ್ಷದಲ್ಲಿ ಅವಕಾಶ ಕೊಡಬೇಕು. ಆದರೆ ಅದು ಯಾವುದನ್ನು ಮಾಡದೇ ಹೋದರೆ ಮುಂದೆ ಹೀಗಾಗುತ್ತೆ ಎಂದು ಶಿವರಾಮೇಗೌಡರ ವಿರುದ್ಧ ಕಿಡಿಕಾರಿದರು. ಇದನ್ನು ಓದಿ: ಹೆಚ್‍ಡಿಕೆ, ಹೆಚ್‍ಡಿಡಿ ದೇಹ ಬಂಗಾರ, ಕಿವಿ ಮಾತ್ರ ಹಿತ್ತಾಳೆ: ಶಿವರಾಮೇಗೌಡ

    ಒದೇ ವೇಳೆ ಹಾಸನವನ್ನು ರೇವಣ್ಣಗೆ ಬರೆದುಕೊಟ್ಟಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನಗೆ ನನ್ನ ಜಿಲ್ಲೆಯ ಅಭಿವೃದ್ಧಿ ಆಗಬೇಕು ಅಷ್ಟೇ. ಅದನ್ನು ಬಿಟ್ಟರೆ ಹಾಸನ ನನ್ನ ಸಾಮ್ರಾಜ್ಯ ನಾನು ಮಹಾರಾಜ ಎಂದು ಎಲ್ಲೂ ಹೇಳಿಲ್ಲ ಎಂದು ಟಾಂಗ್ ಕೊಟ್ಟರು.

    ಉಪಚುನಾವಣೆ ನಡೆಯುವುದರ ಬಗ್ಗೆ ಕೇಳಿದಾಗ, ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ನಾಯಕರು ಈಗಾಗಲೇ ಹೇಳಿದ್ದಾರೆ. ಈ ವಿಚಾರವಾಗಿ ಪಕ್ಷದ ವರಿಷ್ಠರಾದ ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಈ ವೇಳೆ ಜಿಟಿ ದೇವೇಗೌಡರ ಬಗ್ಗೆ ಕೇಳಿದಾಗ ಅವರು ದೊಡ್ಡವರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

  • ಹೆಚ್‍ಡಿಕೆ, ಹೆಚ್‍ಡಿಡಿ ದೇಹ ಬಂಗಾರ, ಕಿವಿ ಮಾತ್ರ ಹಿತ್ತಾಳೆ: ಶಿವರಾಮೇಗೌಡ

    ಹೆಚ್‍ಡಿಕೆ, ಹೆಚ್‍ಡಿಡಿ ದೇಹ ಬಂಗಾರ, ಕಿವಿ ಮಾತ್ರ ಹಿತ್ತಾಳೆ: ಶಿವರಾಮೇಗೌಡ

    ಮಂಡ್ಯ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರ ದೇಹವೆಲ್ಲಾ ಬಂಗಾರ. ಆದರೆ ಕಿವಿ ಮಾತ್ರ ಹಿತ್ತಾಳೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ.

    ಇಂದು ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, 20 ವರ್ಷ ಅಧಿಕಾರ ಸಿಗದ ನನಗೆ ಜೆಡಿಎಸ್ ಪಕ್ಷ ಎಂ.ಪಿ ಮಾಡಿದೆ. ಕುಮಾರಸ್ವಾಮಿ ಮತ್ತು ದೇವೇಗೌಡ್ರು ಹಾಗೂ ನನ್ನ ಮಧ್ಯೆ ಯಾವುದೇ ಅಸಮಾಧಾನ ಇಲ್ಲ. ಸಣ್ಣ ಪುಟ್ಟ ಅಸಮಾಧಾನ ಇದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.

    ದೊಡ್ಡವರಿಗೆ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಅಧಿಕಾರ ಇದೆ. ಕೆಲ ಭಟ್ಟಂಗಿಗಳು ಕುಮಾರಸ್ವಾಮಿ ಬಳಿ ನನ್ನ ಬಗ್ಗೆ ಚಾಡಿ ಹೇಳಿದ್ದಾರೆ. ಯಾರು ಏನ್ ಹೇಳಿದರು ಅವರುಗಳು ಕೇಳಿ ಬಿಡುತ್ತಾರೆ. ಆ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತನಾಡುವುದಕ್ಕೆ ನನಗೆ ಸಮಯ ಸಿಕ್ಕಿಲ್ಲ. ಡಿಕೆಶಿ ವಿಚಾರವಾಗಿ ಡೆಲ್ಲಿ ಹೋಗಿದ್ದರಿಂದ ಸಮಯ ಸಿಗಲಿಲ್ಲ ಎಂದು ತಿಳಿಸಿದ್ದಾರೆ.

    ಕುಮಾರಸ್ವಾಮಿ, ದೇವೇಗೌಡರ ದೇಹ ಬಂಗಾರ ಆದರೆ ಕಿವಿ ಹಿತ್ತಾಳೆಯಾದ್ದರಿಂದ ಭಟ್ಟಂಗಿಗಳ ಮಾತು ಕೇಳುತ್ತಾರೆ. ಜೆಡಿಎಸ್ ಪಕ್ಷ ನನ್ನ ಎಂ.ಪಿ ಮಾಡಿದ್ದಕ್ಕೆ ನನಗೆ ಕೃತಜ್ಞತೆ ಇದೆ. ಜೆಡಿಎಸ್ ವರಿಷ್ಠರ ಮೇಲೆ ಗೌರವವಿದೆ. ದೇವೇಗೌಡರು ಹಲವು ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ. ನನ್ನ ಮುಂದೆ ಯಾವುದೇ ಅವಕಾಶ ಇಲ್ಲ. ನಾನು ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

  • ಸಿದ್ದರಾಮಯ್ಯ, ಹೆಚ್‍ಡಿಡಿ ಮಾತು ಕೇಳಿ ಸ್ಪೀಕರ್ ಅನ್ಯಾಯ ಮಾಡಿದ್ರು: ಬಿ.ಸಿ ಪಾಟೀಲ್

    ಸಿದ್ದರಾಮಯ್ಯ, ಹೆಚ್‍ಡಿಡಿ ಮಾತು ಕೇಳಿ ಸ್ಪೀಕರ್ ಅನ್ಯಾಯ ಮಾಡಿದ್ರು: ಬಿ.ಸಿ ಪಾಟೀಲ್

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಮಾತು ಕೇಳಿಕೊಂಡು ಸ್ಪೀಕರ್ ರಮೇಶ್ ಕುಮಾರ್ ಅನ್ಯಾಯ ಮಾಡಿದರು ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ವಿಚಾರದಲ್ಲಿ ಅನರ್ಹ ಶಾಸಕರ ಕೈವಾಡವಿಲ್ಲ. ಹಾಗೆ ಅಂದುಕೊಂಡಿದ್ದರೆ ಅದು ಮೂರ್ಖತನ ಅಷ್ಟೇ ಎಂದು ಕಿಡಿಕಾರಿದರು.

    ಕಾನೂನಿನ ಮುಂದೆ ಎಲ್ಲರೂ ಒಂದೇ. ಡಿ.ಕೆ ಶಿವಕುಮಾರ್ ಅವರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತದೆ ಇಲ್ಲ ಅವರು ತಪ್ಪೇ ಮಾಡಿಲ್ಲ ಎಂದರೆ ಶಿಕ್ಷೆ ಆಗಲ್ಲ ಅಷ್ಟೇ ಎಂದು ಹೇಳಿದರು. ಇದೇ ವೇಳೆ ಅನರ್ಹರಾಗಿರೋ ನಾವು ಸುಪ್ರೀಂ ಕೊರ್ಟಿನಲ್ಲಿ ಗೆದ್ದು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.