Tag: deve gowda

  • ಬೆಳ್ಳಂಬೆಳಗ್ಗೆ ಬಸವರಾಜ್ ಹೊರಟ್ಟಿ ಮನೆಗೆ ಮಾಜಿ ಪ್ರಧಾನಿ ಎಚ್‍ಡಿಡಿ ಭೇಟಿ

    ಬೆಳ್ಳಂಬೆಳಗ್ಗೆ ಬಸವರಾಜ್ ಹೊರಟ್ಟಿ ಮನೆಗೆ ಮಾಜಿ ಪ್ರಧಾನಿ ಎಚ್‍ಡಿಡಿ ಭೇಟಿ

    ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಮನೆಗೆ ಭೇಟಿ ನೀಡಿದ್ದಾರೆ.

    ಬೆಳಗ್ಗೆ ಬೆಂಗಳೂರಿನಿಂದ ಪಕ್ಷದ ಕಾರ್ಯಕ್ರಮದ ನಿಮಿತ್ತ ಎಚ್.ಡಿ ದೇವೇಗೌಡರು ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಬಸವರಾಜ ಹೊರಟ್ಟಿ ಅವರ ಮನೆಯಲ್ಲಿ ಉಪಹಾರ ಸೇವನೆ ಮಾಡಿದ್ದಾರೆ. ಬಳಿಕ ಸ್ವಲ್ಪ ಹೊತ್ತು ಕುಳಿತು ಮಾತನಾಡಿದ್ದಾರೆ. ನಂತರ ದೇವೇಗೌಡರು ಬೆಳಗಾವಿಗೆ ಪ್ರಯಾಣ ಬೆಳಸಲಿದ್ದು, ದೇವೇಗೌಡರಿಗೆ ಮಾಜಿ ಶಾಸಕ ಕೋನರೆಡ್ಡಿ ಸಾಥ್ ನೀಡಿದ್ದಾರೆ.

    ಈ ವೇಳೆ ಮಾತನಾಡಿದ ಹೆಚ್.ಡಿ.ದೇವೇಗೌಡ, ಮುಂದೆ ಬರುವ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನ ಚುರುಕುಗೊಳಿಸಲು ಇಂದು ಹುಬ್ಬಳ್ಳಿಗೆ ಬಂದಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸರಿಯಾದ ಫಲಿತಾಂಶ ಬಂದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದರಿಂದ ಪಕ್ಷ ಸಂಘಟನೆ ಮಾಡಲು ಸಮಯ ಸಿಗುವುದಿಲ್ಲ. ಇದರಿಂದ ನಾನು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಎನ್‍ಡಿಎ ಹೊರತುಪಡಿಸಿ ಎಲ್ಲಾ ಮುಖಂಡರು ಬೆಂಗಳೂರಿನಲ್ಲಿ ಸೇರಿದ್ದೇವೆ. ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿಗೆ ಇದೆ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಇವೆ. ಲೋಕಸಭಾ ಚುನಾವಣೆ ಮುಂಚೆ ಕೆಲವು ಪಕ್ಷಗಳು ಹೊಂದಾಣಿಕೆ ಆಗಬಹುದು. ಚುನಾವಣಾ ನಂತರವೂ ಹೊಂದಾಣಿಕೆ ಆಗಬಹುದು. ಶಿವಸೇನೆಯ ಬಿಜೆಪಿ ಪಕ್ಷದ ಹೊಂದಾಣಿಕೆ ಮಾಡಿಕೊಳ್ಳುವುದು ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.

  • ದಿನಕ್ಕೆ 18 ಗಂಟೆ ಕೆಲ್ಸ: ಮಗನ ಆರೋಗ್ಯದ ಬಗ್ಗೆ ಎಚ್‍ಡಿಡಿ ಆತಂಕ

    ದಿನಕ್ಕೆ 18 ಗಂಟೆ ಕೆಲ್ಸ: ಮಗನ ಆರೋಗ್ಯದ ಬಗ್ಗೆ ಎಚ್‍ಡಿಡಿ ಆತಂಕ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

    ನಗರದ ಜೆಡಿಎಸ್ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಮಾಡುತ್ತಿರುವ ಕಾರಣ ಗ್ರಾಮವಾಸ್ತವ್ಯ ಮಾಡಲು ಸಮಯ ಸಿಗುತ್ತಿಲ್ಲ. 18 ಗಂಟೆ ಗಂಟೆಗಳ ಕಾಲ ಕೆಲಸ ಮಾಡುವ ಕಾರಣ ಆರೋಗ್ಯದ ಬಗ್ಗೆ ನನಗೆ ಆತಂಕವಾಗುತ್ತಿದೆ ಎಂದು ಮಗನ ಬಗ್ಗೆ ದೇವೇಗೌಡರು ಕಾಳಜಿ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನು ಜನ ಕೈಬಿಟ್ಟರೂ, ನಾವು ಕೊಟ್ಟ ಮಾತು ಬಿಡೊಲ್ಲ ಎಂದು ಭಾವಿಸಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದಾರೆ. ಒಂದು ಕಡೆಗೆ ಮಾಜಿ ಸ್ನೇಹಿತರ ಅಸಹಕಾರ, ಮತ್ತೊಂದು ಕಡೆ ವಿಧಾನಸಭೆಯಲ್ಲಿ ಹೋರಾಟ ಮಾಡುವ ಸ್ಥಿತಿ ಇದೆ. ಈ ಬೆಳವಣಿಗೆಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿರುವೆ ಎಂದು ದೇವೇಗೌಡರು ಅಸಮಾಧಾನ ಹೊರ ಹಾಕಿದರು.

    ನಾನು ವಿಶ್ರಾಂತಿ ಪಡೆಯಲ್ಲ, ಹೋರಾಟಕ್ಕೆ ಸಿದ್ಧವಾಗಿರುವೆ. ಮತ್ತೆ ನಾವೆಲ್ಲರೂ ಹೋರಾಟ ಮಾಡೋಣ. ಆದರೆ ಮೈತ್ರಿ ಸರ್ಕಾರಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆಕೊಟ್ಟರು.

    ಸಮ್ಮಿಶ್ರ ಸರ್ಕಾರದ ಜವಾಬ್ದಾರಿಯನ್ನು ಕುಮಾರಸ್ವಾಮಿ ಹೊತ್ತಿದ್ದಾರೆ. ಆದರೆ ರಾಜ್ಯದ ಜನರು ಅವರನ್ನು ಗುರುತಿಸಿಲ್ಲ. ಕುಮಾರಸ್ವಾಮಿ ಕಳೆದ 3 ವರ್ಷಗಳಿಂದ ರಾಜ್ಯಾದಂತ ಪ್ರವಾಸ ಮಾಡಿದ್ದಾರೆ. ನಮ್ಮ ಪಕ್ಷ 100 ಕ್ಕೂ ಹೆಚ್ಚು ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎನ್ನುವ ಭರವಸೆ ಇತ್ತು. ಆದರೆ ಅದು ಆಗಲಿಲ್ಲ. ಈಗ ಜನರ ತೀರ್ಪನ್ನು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಸೋಲಿಗೆ ಕಾರ್ಯಕರ್ತರಲ್ಲಿ ದೋಷಗಳು ಕಾರಣವಾಗಿದ್ದರೆ ಅದನ್ನು ತಿದ್ದಿಕೊಳ್ಳಬೇಕು ಎಂದು ಸಲಹೆ ನೀಡಿದರು.

    2018ರ ವಿಧಾನಸಭೆ ಚುನಾವಣೆಯಲ್ಲಿ 20 ತಿಂಗಳ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವಲ್ಲಿ ನಮ್ಮ ಕಾರ್ಯಕರ್ತರು ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಬೇಕು. ನಾವು ಕಾಂಗ್ರೆಸ್ ಪಕ್ಷವನ್ನು ದೂರಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರ ನಡೆಸಿಕೊಂಡು ಹೋಗುವುದು ತುಂಬ ಕಷ್ಟ. ವಿರೋಧ ಪಕ್ಷದಲ್ಲಿ 104 ಜನ ಇರುವುದು ಕರ್ನಾಟಕ ಇತಿಹಾಸದಲ್ಲೆ ಇದೇ ಮೊದಲು. ಬಿಜೆಪಿಯವರನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

  • ದೇವೇಗೌಡ್ರ ಮಾತಿನಿಂದಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇನ್ಮುಂದೆ ಕೂಲ್ ಕೂಲ್!

    ದೇವೇಗೌಡ್ರ ಮಾತಿನಿಂದಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇನ್ಮುಂದೆ ಕೂಲ್ ಕೂಲ್!

    ಬೆಂಗಳೂರು: ಬಜೆಟ್ ಮಂಡನೆ ಮತ್ತು ಸಚಿವ ಸಂಪುಟ ರಚನೆ, ಜನತಾ ದರ್ಶನ ಹೀಗೆ ಪ್ರತಿದಿನ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಂದೆ ಹೇಳಿದ ಮಾತಿನಂತೆ ರಿಲ್ಯಾಕ್ಸ್ ಆಗಿದ್ದಾರೆ.

    ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡ ಅವರು, ನೀನು ಆರೋಗ್ಯದ ಕಡೆ ಗಮನ ಕೊಡು. ಆಡಳಿತ, ಆರೋಗ್ಯ ಇದರ ಬಗ್ಗೆ ಮಾತ್ರ ನಿನ್ನ ಗಮನ ಇರಲಿ ಎಂದು ಮಗನಿಗೆ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.

    ಸರ್ಕಾರ ಎಷ್ಟು ದಿನ ಇರುತ್ತೋ, ಬಿಡುತ್ತೋ ಅನ್ನೋ ಚಿಂತೆ ನಿನಗೆ ಬೇಡ. ನಾನು ಎಲ್ಲವನ್ನು ನೋಡಿಕೊಳ್ಳುತ್ತೀನಿ. ಮುಂದೆ ನಿಂತು ನಾನು ಲೀಡ್ ಮಾಡ್ತೀನಿ. ನೀನು ನಿನ್ನ ಆರೋಗ್ಯ ನೋಡಿಕೋ. ಮೈತ್ರಿ ಸರ್ಕಾರದ ರಾಜಕಾರಣ ನನಗೆ ಬಿಡು. ಕಾಂಗ್ರೆಸ್ ಹೈಕಮಾಂಡ್ ಹತ್ತಿರ ನಾನು ಮಾತನಾಡುತ್ತೇನೆ. ರಾಜ್ಯ ನಾಯಕರು, ಶಾಸಕರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಅವರ ರಿಮೋಟ್ ನನ್ ಹತ್ರ ಇದೆ ಎಂದು ಕುಮಾರಸ್ವಾಮಿಗೆ ತಂದೆ ದೇವೇಗೌಡರು ಉಪದೇಶ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಅಪ್ಪ-ಮಕ್ಕಳ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಪ್ರಹ್ಲಾದ್ ಜೋಶಿ

    ಅಪ್ಪ-ಮಕ್ಕಳ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆಂದು ಸಂಸದ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದರು. ಆದರೆ ಈಗ ಅವರ ಮಗ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೆ ಬಜೆಟ್ ನಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ತಂದೆ-ಮಕ್ಕಳು ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸಿದ್ದಾರೆ. ದೋಸ್ತಿ ಸರ್ಕಾರದ ಮೊದಲ ಬಜೆಟ್‍ನಲ್ಲಿ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಅನುದಾನ ನೀಡಿದ್ದಾರೆ. ಈ ಮೂಲಕ ಜನರ ಕಣ್ಣಿಗೆ ಮಣ್ಣೆರಚಿ, ಒಂದು ಕೈಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಿದ್ದಾರೆ ಎಂದರು.

    ಇನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದ ಸಾಲದ ಕುರಿತಂತೆ ಪ್ರತಿಕ್ರಿಯೆ ನೀಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸರ್ಕಾರ ಮಾಡಿದ ಸಾಲವನ್ನು ನಾವು ತೀರಿಸಿದ್ದೇವೆ. ಆದರೂ ರಾಹುಲ್ ಗಾಂಧಿ ಮೋದಿ ಸರ್ಕಾರಕ್ಕೆ ಚಾಲೆಂಜ್ ಮಾಡಿದ್ದಾರೆ. ಆದರೆ ಈಗ ರಾಜ್ಯದಲ್ಲಿ ನಿಮ್ಮ ಸಹಭಾಗಿತ್ವದ ದೋಸ್ತಿ ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಸಿದೆ. ಇದರ ಕುರಿತು ರಾಹುಲ್ ಗಾಂಧಿಯವರು ತಮ್ಮ ನಿಲುವು ಸ್ಪಷ್ಟ ಪಡಿಸಬೇಕು ಎಂದು ಅಗ್ರಹಿಸಿದರು.

    ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಈ ದೋಸ್ತಿ ಸರ್ಕಾರ ಹಾಳು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ರಾಜ್ಯವನ್ನು ಸಾಲಗಾರ ರಾಜ್ಯವನ್ನಾಗಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ಜುಲೈ -27 ದೊಡ್ಡಗೌಡ್ರ ಕುಟುಂಬಕ್ಕೆ ಡೇಂಜರ್ – ಭವಿಷ್ಯ ನುಡಿದ ಗವಿಗಂಗಾಧರ ದೇಗುಲದ ಪ್ರಧಾನ ಅರ್ಚಕ

    ಜುಲೈ -27 ದೊಡ್ಡಗೌಡ್ರ ಕುಟುಂಬಕ್ಕೆ ಡೇಂಜರ್ – ಭವಿಷ್ಯ ನುಡಿದ ಗವಿಗಂಗಾಧರ ದೇಗುಲದ ಪ್ರಧಾನ ಅರ್ಚಕ

    ಬೆಂಗಳೂರು: ಜ್ಯೋತಿಷ್ಯ, ವಾಸ್ತುವನ್ನೆಲ್ಲಾ ಚಾಚೂ ತಪ್ಪದೇ ಪಾಲಿಸುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೀಗ ಗ್ರಹಣ ಭಯ ಕಾಡುತ್ತಿದೆ.

    ಹೌದು, ಜುಲೈ 27ರಂದು ಕೇತುಗ್ರಸ್ಥ ಚಂದ್ರ ಗ್ರಹಣ ಘಟಿಸಲಿದೆ. ಕೇತುವಿನ ಅದಿದೇವತೆ ಶಿವನಿಗೆ ಕಾಟ ಕೊಡುವ ಗ್ರಹಣ ಇದಂತೆ. ಇದು ಮಗ ಹಾಗೂ ಮಕ್ಕಳ ಮಧ್ಯೆ ವೈಮನಸ್ಸು ತಿಕ್ಕಾಟ ತರುವ ಗ್ರಹಣವಂತೆ. ಕೇತುವಿನ ಅಧಿದೇವತೆ ಶಿವನಿಗೆ ತೊಂದರೆ ಕಾಟ ಕೊಡುವ ಗ್ರಹಣ ಇದಾಗಲಿದ್ದು ಅಪ್ಪ ಮಕ್ಕಳ ಮಧ್ಯೆ ಬಿರುಕು ಮೂಡಲಿದ್ಯಯಂತೆ ಎಂದು ತಿಳಿದು ಬಂದಿದೆ.

    ಗ್ರಹಣದಿಂದಾಗಲಿರುವ ತೊಂದರೆಯ ಬಗ್ಗೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರೂ ಆಗಿರುವ ಖ್ಯಾತ ಜ್ಯೋತಿಷಿ ಸೋಮಸುಂದರ ದೀಕ್ಷಿತರು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಮೂಲಕ ದೊಡ್ಡಗೌಡರಿಗೆ ತಿಳಿಸಿದ್ದಾರೆ.

    ಈ ಗ್ರಹಣ ರಾಜಕೀಯ ಅಸ್ಥಿರತೆಗೂ ಕಾರಣವಾಗಬಹುದು ಅನ್ನುವ ಭವಿಷ್ಯವಾಣಿಯನ್ನು ಹೇಳಿದ್ದಾರೆ. ಇದರಿಂದ ಭಯಗೊಂಡಿರುವ ರೇವಣ್ಣ ಗ್ರಹಣದಂದು ಶಿವನ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ನಡೆಸುವುದಾಗಿ ಜ್ಯೋತಿಷಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

    ನವಗ್ರಹಗಳಿಗೆ ಎಡೆಬಿಡದೇ ಕ್ಷೀರಾಭಿಷೇಕ, ಉದ್ಭವ ಶಿವಲಿಂಗಕ್ಕೆ ಕ್ಷೀರ ಎಳೆನೀರಿನ ಅಭಿಷೇಕ, ಸಂಪ್ರೋಕ್ಷಣಾ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ವ್ಯಕ್ತಿಗೆ ದೈವಾನುಗ್ರಹವಿದ್ದರೂ ಮಾನಸಿಕವಾಗಿ ಹಿಂಸೆ ಕೊಡಲಿರುವ ಗ್ರಹಣವಿದು ಅನ್ನೋದು ಜ್ಯೋತಿಷಿಗಳ ಮಾತಾಗಿದೆ.

  • ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಕಾಂಗ್ರೆಸ್ಸಿಗೆ 3 ಷರತ್ತು ವಿಧಿಸಿದ ದೇವೇಗೌಡರು!

    ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಕಾಂಗ್ರೆಸ್ಸಿಗೆ 3 ಷರತ್ತು ವಿಧಿಸಿದ ದೇವೇಗೌಡರು!

    ಬೆಂಗಳೂರು: ಜೆಡಿಎಸ್ ನ ವರಿಷ್ಠ ಅಧಿಕಾರಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಗೆ ಮೂರು ಷರತ್ತು ವಿಧಿಸಿದ್ದಾರೆ.

    ತಮ್ಮ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಹೈಕಮಾಂಡ್‍ಗೆ ದೂರು ನೀಡಿ ಮೂರು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇವೇಗೌಡ ಕಂಡೀಷನ್ ಲೆಕ್ಕಚಾರಕ್ಕೆ ಕೈ ಹೈಕಮಾಂಡ್  ಗೆ ತಲೆ ಬಿಸಿಯಾಗಿದೆ. ಇದನ್ನೂ ಓದಿ: ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ

    ದೇವೇಗೌಡರ ಷರತ್ತು:
    ಷರತ್ತು 1
    ಸಿದ್ದರಾಮಯ್ಯ ಬೇಕೋ? ಲೋಕಸಭೆ ಚುನಾವಣೆ ಬೇಕೋ? ಈ ಆಯ್ಕೆ ಕಾಂಗ್ರೆಸ್ ಹೈಕಮಾಂಡಿಗೆ.

    ಷರತ್ತು 2:
    ಸಮನ್ವಯ ಸಮಿತಿ ಎಲ್ಲದಕ್ಕೂ ಅನ್ವಯವಾಗಲ್ಲ. ಪ್ರಮುಖ ವಿಚಾರಗಳು ಮಾತ್ರ ಇಲ್ಲಿ ಚರ್ಚೆಯಾಗಲಿ. ಉಳಿದ ವಿಚಾರಗಳನ್ನು ಸಿಎಂ, ಡಿಸಿಎಂ ನಿರ್ಧರಿಸಬೇಕು.

    ಷರತ್ತು 3:
    ನಿಮ್ಮ ನಾಯಕರಿಗೂ ನಮಗೂ ಸಂಬಂಧವಿಲ್ಲ. ನಿಮ್ಮವರನ್ನ ನೀವೇ ನಿಯಂತ್ರಿಸಬೇಕು. ಹೈಕಮಾಂಡ್ ಮಟ್ಟದಲ್ಲಿ ಮಾತ್ರ ಒಪ್ಪಂದ, ಜಾರಿ ನಿಮ್ಮ ಕರ್ತವ್ಯ

    https://www.youtube.com/watch?v=Q32J9Q7ZATk

  • ಸುಗಮ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಂದ `ಪಂಚ’ಸೂತ್ರ!

    ಸುಗಮ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಂದ `ಪಂಚ’ಸೂತ್ರ!

    ಬೆಂಗಳೂರು: ಅತೃಪ್ತರನ್ನು ತೃಪ್ತಿ ಪಡಿಸಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪಂಚಸೂತ್ರಗಳನ್ನು ರೂಪಿಸಿದ್ದಾರೆ.

    ದೇವೇಗೌಡರ ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಾಗೂ ಪಕ್ಷ ಸಂಘಟನೆಗೆ ತೃಪ್ತ ಅಸ್ತ್ರ ಅನುಸರಿಸಲು ಮುಂದಾಗಿದ್ದು, ಸಚಿವ ಸ್ಥಾನದಿಂದ ಅಸಮಾಧಾನದಿಂದರುವ ಶಾಸಕರಿಗೆ ಪ್ರಮುಖ, ನಿಗಮ-ಮಂಡಳಿ ಮತ್ತು ಸಿಎಂ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನ ಮಾಡಲು ದೇವೇಗೌಡರು ಚಿಂತನೆ ಮಾಡಿದ್ದಾರೆ. ಇದರ ಜೊತೆಗೆ ಪಕ್ಷ ಕೈ ಬಿಟ್ಟಿರುವ ಜಾತಿಗಳ ಕ್ರೂಢೀಕರಣಕ್ಕೂ ದೇವೇಗೌಡರು ಯೋಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ತಂತ್ರಕ್ಕೆ ಎಚ್‍ಡಿಡಿ ಸಲಹೆಯಂತೆ ಎಚ್‍ಡಿಕೆಯಿಂದ ಹೊಸ ಬಾಣ!

    ದೇವೇಗೌಡರು ಜಾತಿಗಳ ಪ್ರಮುಖ ನಾಯಕರ ಮೂಲಕ ಜಾತಿಗಳ ಮತ ಕ್ರೂಢೀಕರಣಕ್ಕೆ ನಿರ್ಧಾರ ಮಾಡಿದ್ದು, ಮುಸ್ಲಿಂ, ಲಿಂಗಾಯತ, ಕುರುಬ ಮತ್ತು ದಲಿತ ಮತಗಳನ್ನು ಕ್ರೂಢೀಕರಣ ಮಾಡಲಿದ್ದಾರೆ. ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆಗೆ ದೇವೇಗೌಡರು ರೂಪಿಸಿರುವ ಪಂಚಸೂತ್ರ ಇದಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಮಾಜಿ ಸಿಎಂ ತಂತ್ರಕ್ಕೆ ಎಚ್‍ಡಿಡಿ ಸಲಹೆಯಂತೆ ಎಚ್‍ಡಿಕೆಯಿಂದ ಹೊಸ ಬಾಣ!

    ಮಾಜಿ ಸಿಎಂ ತಂತ್ರಕ್ಕೆ ಎಚ್‍ಡಿಡಿ ಸಲಹೆಯಂತೆ ಎಚ್‍ಡಿಕೆಯಿಂದ ಹೊಸ ಬಾಣ!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರಕ್ಕೆ ಪ್ರತಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಸಲಹೆಯಂತೆ ಹೊಸ ಬಾಣ ಬಿಡಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ.

    ಸಿದ್ದರಾಮಯ್ಯಗೆ ಕ್ಯಾಬಿನೆಟ್ ಸ್ಥಾನಮಾನ ನೀಡುವ ಕುರಿತ ಆದೇಶ ಮುಂದೆ ಹೋಗಿದೆ. ಸೋಮವಾರವೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಕ್ಯಾಬಿನೆಟ್ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಬೇಕಿತ್ತು. ಆದ್ರೆ ಇವತ್ತಿನ ತನಕ ಆ ಫೈಲ್ ಮೂವ್ ಆಗದೇ ಪೆಂಡಿಂಗ್ ಉಳಿದಿದೆ. ಹೀಗಾಗಿ ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಗುತ್ತಾ? ಇಲ್ವಾ? ಅನ್ನೋ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಮಾತಾಡಿರೋ ಸಿದ್ದರಾಮಯ್ಯರಿಗೆ ಎದುರಾಯ್ತು ಕಂಟಕ!

    ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರ ಶಾಂತಿವನದಲ್ಲಿದ್ದುಕೊಂಡು ದೋಸ್ತಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಬಾಂಬ್ ಸಿಡಿಸ್ತಿದ್ದು, ಇದರಿಂದ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ತತ್ತರಿಸಿದಂತೆ ಕಂಡು ಬಂದಿದೆ. ಹೀಗಾಗಿ ಈ ಇಬ್ಬರಿಗೂ ಟೆನ್ಶನ್ ಮೇಲೆ ಟೆನ್ಶನ್ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ದೇವೇಗೌಡರು ಸಿಎಂ ಎಚ್ ಡಿಕೆಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

  • ಸಿದ್ದರಾಮಯ್ಯ ಪ್ರಯೋಗಿಸಿದ `ಅಸಮಾಧಾನ’ದ ಕ್ಷಿಪಣಿಗೆ ಜೆಡಿಎಸ್ ತತ್ತರ

    ಸಿದ್ದರಾಮಯ್ಯ ಪ್ರಯೋಗಿಸಿದ `ಅಸಮಾಧಾನ’ದ ಕ್ಷಿಪಣಿಗೆ ಜೆಡಿಎಸ್ ತತ್ತರ

    ಬೆಂಗಳೂರು: ಮಾಜಿ ಸಿಎಂ ಪ್ರಯೋಗಿಸಿದ `ಅಸಮಾಧಾನ’ದ ಕ್ಷಿಪಣಿಗೆ ಜೆಡಿಎಸ್ ತತ್ತರವಾಗಿದ್ದು, ಸಿದ್ದರಾಮಯ್ಯರ ಮೇಲೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆಂಡಮಂಡಲವಾಗಿದ್ದಾರಂತೆ.

    ಜೆಡಿಎಸ್‍ ನಲ್ಲಿ ಸಚಿವರು, ಶಾಸಕರು ಬಾಯಿಯನ್ನೇ ಬಿಡುತ್ತಿಲ್ಲ. ಯಾರೊಬ್ಬರೂ ಸರ್ಕಾರದ ಪರ ವಹಿಸಿಕೊಂಡು ಮಾತೇ ಆಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ಸಿದ್ದು ಟೀಂನಿಂದ ದಿನದಿಂದ ದಿನಕ್ಕೆ ಟಾಕ್ ಫೈಟ್ ನಡೆಯುತ್ತಿದೆ. ಆದರೆ ಜೆಡಿಎಸ್ ಶಾಸಕರು ಮಾತ್ರ ಎಲ್ಲದಕ್ಕೂ ಫುಲ್ ಸೈಲೆಂಟ್ ಆಗಿದ್ದಾರೆ. ಇದರಿಂದ ಮಾಜಿ ಪ್ರಧಾನಿ ದೇವೇಗೌಡ ಕೆಂಡಮಂಡಲವಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್

    ಎಲ್ಲದಕ್ಕೂ ನಾವು ಅಪ್ಪ, ಮಕ್ಕಳೇ ಉತ್ತರ ಕೊಡಬೇಕಾ..? ಬಾಯಿಬಡ್ಕೋಬೇಕಾ..? ಪಕ್ಷದಲ್ಲಿ ಇರುವ ಹಿರಿಯರು, ಸಚಿವರು, ಶಾಸಕರು ಏನ್ ಮಾಡುತ್ತಿದ್ದಾರೆ..? ಯಾವುದೇ ವಿಚಾರಕ್ಕೂ ಒಬ್ಬರಿಂದಲೂ ಪಕ್ಷ ಸಮರ್ಥನೆಯ ಮಾತೇ ಇಲ್ಲ. ಮೌನವಾಗಿರೋದು ಸಾಕು, ಹಿಂಗೆ ಇದ್ದರೆ ಪಕ್ಷ ಉಳಿಯಲ್ಲ ಎಂದು ದೇವೇಗೌಡು ಪಕ್ಷದ ನಾಯಕರಿಗೆ ಹೇಳಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

  • ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ, ಲೋಕಸಭೆಯಲ್ಲಿ ಚರ್ಚಿಸಿ ಪ್ರಾಧಿಕಾರ ರಚನೆಯಾಗಬೇಕು: ಎಚ್‍ಡಿಡಿ

    ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ, ಲೋಕಸಭೆಯಲ್ಲಿ ಚರ್ಚಿಸಿ ಪ್ರಾಧಿಕಾರ ರಚನೆಯಾಗಬೇಕು: ಎಚ್‍ಡಿಡಿ

    ಬೆಂಗಳೂರು: ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ. 35 ತಾಲೂಕಿಗೆ ಸೇರಿದ್ದು. ಹೀಗಾಗಿ ನೀರು ಹಂಚಿಕೆ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಕಾವೇರಿ ಪ್ರಾಧಿಕಾರದ ಕುರಿತು ಚರ್ಚೆ ಆಗಬೇಕು. ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ. ಕಾವೇರಿ ವ್ಯಾಜ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಸಂಸದರಿಗೆ ಮಾಹಿತಿ ನೀಡಲು ಪುಸ್ತಕವೊಂದನ್ನು ಹೊರತರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿರುವೆ ಎಂದು ಅವರು ಹೇಳಿದರು.

    ಕಾವೇರಿ ವ್ಯಾಜ್ಯಕ್ಕೆ ಸಂಬಂಧಿಸಿದ ಮಾಹಿತಿ, ಚರ್ಚೆ ಮತ್ತು ದಾಖಲೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಹೇಳಿರುವೆ. ನಮ್ಮ ರಾಜ್ಯಕ್ಕೆ ಕಾವೇರಿ ನೀರು ಎಷ್ಟು ಉಳಿಸಲು ಸಾಧ್ಯವೋ ಅಷ್ಟು ಉಳಿಸಲು ನಾನು ಶ್ರಮಿಸುತ್ತೇನೆ ಎಂದು ಹೇಳಿದ ಅವರು, ಉಜಿರೆಯಲ್ಲಿ ಬಜೆಟ್ ಮತ್ತು ರೈತರ ಸಾಲ ಮನ್ನಾ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿ, ಅದೆಲ್ಲವನ್ನು ನಾನು ಈಗ ಮಾತನಾಡುವುದಿಲ್ಲ ಎಂದು ಸಿಟ್ಟು ವ್ಯಕ್ತಪಡಿಸಿದರು.