Tag: deve gowda

  • ಸಿಎಂ ಪತ್ರ ಬರೆದಿದ್ದು ಯಾವಾಗ? ದೇವೇಗೌಡರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? – ಬಿಜೆಪಿಗೆ ಜೆಡಿಎಸ್ ಪ್ರಶ್ನೆ

    ಸಿಎಂ ಪತ್ರ ಬರೆದಿದ್ದು ಯಾವಾಗ? ದೇವೇಗೌಡರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? – ಬಿಜೆಪಿಗೆ ಜೆಡಿಎಸ್ ಪ್ರಶ್ನೆ

    ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ಪತ್ರವನ್ನು ಮಾಜಿ ಪ್ರಧಾನಿ ದೇವೇಗೌಡರ (HD DeveGowda) ನಿವಾಸಕ್ಕೆ ತಲುಪಿಸಿದ್ದು ಯಾವಾಗ? ಸತ್ಯ ಹೇಳುವ ಧಮ್ಮು, ತಾಕತ್ತು ಸಿಎಂಗೆ (Basavaraj Bommai) ಇದೆಯಾ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿಗೆ (BJP) ಜೆಡಿಎಸ್ ಪ್ರಶ್ನಿಸಿದೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಜೆಡಿಎಸ್ (JDS), ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳಿಗೆ ಕರೆ ಮಾಡಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ, ಸರಿ. ನವೆಂಬರ್ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು ಯಾವಾಗ? ಆ ಪತ್ರವನ್ನು ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ? ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ. ಆದರೆ, ಮುಖ್ಯಮಂತ್ರಿಗಳೇ ಪತ್ರ ಬರೆದು ದೇವೇಗೌಡರನ್ನು ಆಹ್ವಾನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ, ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ ಎಂದು ಕಿಡಿಕಾರಿದ್ದಾರೆ.

    ಈ ಮುನ್ನ, ಕನ್ನಡ ನೆಲದಿಂದ ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗರಾದ ದೇವೇಗೌಡ ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಆಹ್ವಾನ ನೀಡದೇ ಇರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಗುರುವಾರ ಟ್ವೀಟ್ ಮಾಡುವ ಮೂಲಕ ಜೆಡಿಎಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಇದನ್ನೂ ಓದಿ: ದೇವೇಗೌಡರಿಗೆ ಆಹ್ವಾನ ನೀಡದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ : ಬಿಜೆಪಿ ವಿರುದ್ಧ ಜೆಡಿಎಸ್‌ ಆಕ್ರೋಶ

    ಇದಕ್ಕೆ ಪ್ರತಿಯಾಗಿ ಶುಕ್ರವಾರ ಬಿಜೆಪಿ ಟ್ವೀಟ್ ಮಾಡಿದ್ದು, ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಜೆಡಿಎಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿತ್ತು. ಇದನ್ನೂ ಓದಿ: ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ನೀಡಿ, ಖುದ್ದು ಸಿಎಂ ಕರೆ ಮಾಡಿದ್ದಾರೆ – ಬಿಜೆಪಿ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ

    ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ

    ಹಾಸನ: ಜಿಲ್ಲೆಯಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ. ಯಾವ ಶಾಸಕರು ಪಕ್ಷ ಬಿಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.

    ಹಾಸನ ತಾಲೂಕಿಗೆ ಕಳಂಕ ಬಂದಿದೆ. ಇಡೀ ಜಿಲ್ಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಅದನ್ನು ಅಳಿಸಬೇಕು, ಅದನ್ನು ಅಳಿಸಲು ನಮ್ಮ ಕಾರ್ಯಕರ್ತರ ಜೊತೆ ಸೇರಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ. ಈಗಾಗಲೇ ಪಂಚಾಯ್ತಿವಾರು ಕಾರ್ಯಕರ್ತರ ಸಭೆ ಶುರು ಮಾಡಿದ್ದೇನೆ. ಐದು ಪಂಚಾಯ್ತಿ ಮುಗಿದಿದ್ದು, ಇನ್ನು ಎರಡು ವಾರದಲ್ಲಿ ಎಲ್ಲಾ ಪಂಚಾಯ್ತಿಗಳು ಮುಗಿಯುತ್ತದೆ. ಕಾರ್ಯಕರ್ತರ ಅಭಿಪ್ರಾಯ ಏನಿದೆ ಎಂಬುದನ್ನು ದೇವೇಗೌಡರು, ಕುಮಾರಸ್ವಾಮಿ, ಜಿಲ್ಲೆಯ ಶಾಸಕರ ಗಮನಕ್ಕೆ ತರುತ್ತೇನೆ. ಆಮೇಲೆ ಹಾಸನಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂದು ನಿರ್ಧಾರ ಮಾಡುತ್ತೇವೆ. ಮತ್ತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕ ಆಯ್ಕೆಯಾಗಬೇಕು, ಆ ಕೆಲಸ ಮಾಡುವ ಜವಾಬ್ದಾರಿ ನನ್ನದು, ಅವರಿಗೆ, ಇವರಿಗೆ ಟಿಕೆಟ್ ಕೊಡಿ ಅಂತ ಹೇಳಲು ನಾನು ಯಾವ ಹೈಕಮಾಂಡ್ ಅಲ್ಲ ಎಂದು ಗುಡುಗಿದ್ದಾರೆ.

     

    ಹಾಸನದ ದೇವಿಗೆರೆಗೆ ಬಾಗಿನ ಅರ್ಪಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ ತಿಂಗಳಿನಿಂದ ಹಾಸನ ತಾಲೂಕನ್ನು ನೂಡಲ್ ತಾಲೂಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಕಾರ್ಯವ್ಯಾಪ್ತಿಯಲ್ಲಿ ಏನು ಜವಾಬ್ದಾರಿ ಇದೆ, ಕಾರ್ಯಕರ್ತರನ್ನು ‌ಪ್ರೋತ್ಸಾಹಿಸಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.

    ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಪಕ್ಷ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸೂರಜ್ ಜಿಲ್ಲೆಯಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ. ನನಗೆ ಇನ್ನೂ ಹೆಚ್ಚಿನ ವಿಶ್ವಾಸವಿದೆ. ಇಬ್ಬರು ಶಾಸಕರು ಎಲ್ಲೂ ಹೋಗಲ್ಲ. ಚುನಾವಣೆ 2022ಕ್ಕೆ ಇಲ್ಲ 2023ಕ್ಕೆ ಬರತ್ತೋ, ಇದೇ ಹಾಲಿ ಶಾಸಕರು ಸ್ಪರ್ಧೆ ಮಾಡಿ ಜಯಭೇರಿ ಭಾರಿಸುತ್ತಾರೆ ಎಂದಿದ್ದಾರೆ.

    ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ. ಕಾಫಿ, ಭತ್ತ, ಜೋಳ ನಾಶವಾಗಿ ರೈತರಿಗೆ ಅನಾನುಕೂಲ ಪರಿಸ್ಥಿತಿ ಇದೆ. ಬೆಳೆ ನಷ್ಟದ ಬಗ್ಗೆ ವರದಿ ಕೊಡಲು ಆರ್‍ಐ, ವಿಐಗಳಿಗೆ ಸೂಚನೆ ಕೊಡಿ ಎಂದು ಎಲ್ಲಾ ತಹಸೀಲ್ದಾರ್‌ಗಳಿಗೆ ಹೇಳಿದ್ದೇನೆ. ಪಕ್ಷಾತೀತವಾಗಿ ಕೆಲಸ ಮಾಡಿ ಅಂಥ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇವೇಗೌಡರ ಕುಟುಂಬದರಿಗೆ ಸಾಲ ಕೊಟ್ಟಿರುವ ಕುಪೇಂದ್ರ : ಪಟ್ಟಿಯಲ್ಲಿ ದಾಖಲು

    ದೇವೇಗೌಡರ ಕುಟುಂಬದರಿಗೆ ಸಾಲ ಕೊಟ್ಟಿರುವ ಕುಪೇಂದ್ರ : ಪಟ್ಟಿಯಲ್ಲಿ ದಾಖಲು

    ಹಾಸನ: ಜೆಡಿಎಸ್‍ನಿಂದ ರಾಜ್ಯಸಭೆಗೆ ಸ್ಪರ್ಧೆ ಮಾಡಿರೋ ಉದ್ಯಮಿ ಕುಪೇಂದ್ರ ರೆಡ್ಡಿ ನಾಮಪತ್ರದ ಜೊತೆ ಸಲ್ಲಿಕೆ ಮಾಡಿರುವ ಅಫಿಡವಿಟ್‍ನಲ್ಲಿ ಕೆಲ ಅಂಶಗಳು ಕುತೂಹಲಕ್ಕೆ ಕಾರಣವಾಗಿದೆ.

    JDS to counter Congress' Mekedatu rally, to launch 'Jaladhaare' rally from Jan 26

    ಕುಪೇಂದ್ರ ರೆಡ್ಡಿ ಯಾರ್ಯಾರಿಗೆ ಸಾಲ ನೀಡಿದ್ದಾರೆ ಎಂಬ ಪಟ್ಟಿ ಈಗ ಎಲ್ಲರ ಗಮನ ಸೆಳೆದಿದೆ. ಕಾರಣ ದೇವೇಗೌಡರ ಕುಟುಂಬದ ಹಲವರು ಸಾಲ ಪಡೆದುಕೊಂಡ ಪಟ್ಟಿಯಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಹೆಚ್‍.ಡಿ.ರೇವಣ್ಣ, ಅವರಿಂದ ಸಾಲ ಪಡೆಯಬಾರದು ಎಂಬ ನಿಯಮ ಏನಾದ್ರೂ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

    ಸಾಲ ನೀಡಿಕೆ ಪಟ್ಟಿ
    * ಭವಾನಿ ರೇವಣ್ಣ – 2 ಕೋಟಿ ರೂ.
    * ಪ್ರಜ್ವಲ್ ಆರ್ – 1 ಕೋಟಿ ರೂ.
    * ಹೆಚ್‍.ಡಿ.ರಮೇಶ್ – 3.90 ಕೋಟಿ ರೂ.
    * ಸೂರಜ್ – 5.80 ಕೋಟಿ ರೂ.
    * ಚನ್ನಾಂಬಿಕ ಫಿಲಮ್ಸ್ – 4 ಕೋಟಿ ರೂ.
    * ಜಮೀರ್ ಅಹಮದ್ ಖಾನ್ – 1 ಕೋಟಿ ರೂ.
    * ಸಿಎಸ್ ಪುಟ್ಟರಾಜು – 1.5 ಕೋಟಿ ರೂ.

    Revanna for Eng medium in primary schools | Deccan Herald

    ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ
    ಸಾಲ ತೆಗೆದುಕೊಳ್ಳಬಾರದು ಅಂತ ಎಲ್ಲಾದ್ರು ಇದೆಯಾ? ಅದು 4 ವರ್ಷಗಳ ಹಿಂದೆ ಚುನಾವಣೆಗೆ ಸಾಲ ಮಾಡಿರೋದು. ಕದ್ದು ಮುಚ್ಚಿ ತಗೊಂಡಿಲ್ಲ. ಎಲ್ಲವನ್ನು ಅಕೌಂಟ್ ಮೂಲಕವೇ ತೆಗೆದುಕೊಂಡಿದ್ದೇವೆ. ಪುಕ್ಸಟ್ಟೆ ಯಾವ ಹಣವೂ ತೆಗೆದುಕೊಂಡಿಲ್ಲ. ಎಲ್ಲದ್ದಕ್ಕೂ ದಾಖಲಾತಿ ಇದೆ ಎಂದು ತಿಳಿಸಿದರು.

  • ನಿಖಿಲ್ ಕುಮಾರಸ್ವಾಮಿ ಮಗನ ಪೂರ್ತಿ ಹೆಸರು ಅವ್ಯನ್ ದೇವ್ ಎನ್.ಕೆ : ಈ ಹೆಸರು ಸೂಚಿಸಿದ್ದು ಯಾರು?

    ನಿಖಿಲ್ ಕುಮಾರಸ್ವಾಮಿ ಮಗನ ಪೂರ್ತಿ ಹೆಸರು ಅವ್ಯನ್ ದೇವ್ ಎನ್.ಕೆ : ಈ ಹೆಸರು ಸೂಚಿಸಿದ್ದು ಯಾರು?

    ನಿನ್ನೆಯಷ್ಟೇ ನಟ, ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನಾಮಕರಣ ಶಾಸ್ತ್ರ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಇವರ ಪತ್ನಿ ಚೆನ್ನಮ್ಮ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇವರ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ನಿಖಿಲ್ ಅವರ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದರು.

    ಮಧ್ಯಾಹ್ನ ಶುಭ ಮುಹೂರ್ತದ ವೇಳೆ ನಿಖಿಲ್ ಮತ್ತು ರೇವತಿ ದಂಪತಿಯ ಪುತ್ರನಿಗೆ ಅವ್ಯನ್ ದೇವ್ ಎಂದು ಹೆಸರಿಟ್ಟರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ತಮ್ಮ ಮಗನ ಪೂರ್ತಿ ಹೆಸರನ್ನು ಅವ್ಯನ್ ದೇವ್ ಎನ್‍.ಕೆ ಎಂದು ಹೇಳಿದರು. ಅಂದರೆ, ಅವ್ಯನ್ ದೇವ್ ನಿಖಿಲ್ ಕುಮಾರಸ್ವಾಮಿ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

     

    ಅವ್ಯನ್ ದೇವ್ ಎಂದು ಹೆಸರು ಕೇಳುತ್ತಿದ್ದಂತೆಯೇ ಇದರ ಅರ್ಥವೇನು ಅನ್ನುವುದರ ಹುಡುಕಾಟ ಕೂಡ ನಡೆಯಿತು. ಇಂತಹ ಹೆಸರನ್ನು ಆಯ್ಕೆ ಮಾಡಿದ್ದು ಯಾರು? ಎನ್ನುವ ಕುತೂಹಲ ಕೂಡ ಮೂಡಿತ್ತು. ಅದಕ್ಕೂ ನಿಖಿಲ್ ತೆರೆ ಎಳೆದಿದ್ದಾರೆ. ಅವ್ಯನ್ ಅಂದರೆ ಗಣೇಶ ಮತ್ತು ವಿಷ್ಣುದೇವನಿಗೆ ಕರೆಯುವ ಮತ್ತೊಂದು ಹೆಸರಂತೆ. ಈ ಹೆಸರನ್ನು ಆಯ್ಕೆ ಮಾಡಿದ್ದು ತಮ್ಮ ಪತ್ನಿ ರೇವತಿ ಎಂದು ಹೇಳಿದ್ದಾರೆ ನಿಖಿಲ್. 

  • ನಿಖಿಲ್ ಕುಮಾರ್ ಸ್ವಾಮಿ ಮಗನ ಹೆಸರು ಆವ್ಯಾನ್ ದೇವ್ : ಅರ್ಥ ಬಲು ರೋಚಕ

    ನಿಖಿಲ್ ಕುಮಾರ್ ಸ್ವಾಮಿ ಮಗನ ಹೆಸರು ಆವ್ಯಾನ್ ದೇವ್ : ಅರ್ಥ ಬಲು ರೋಚಕ

    ಟ, ಯುವರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಅವರು ತಮ್ಮ ಪುತ್ರನಿಗೆ ಆವ್ಯಾನ್ ದೇವ್ ಎಂದು ಹೆಸರಿಟ್ಟಿದ್ದಾರೆ. ಈ ರೀತಿಯ ಹೆಸರನ್ನು ನಾಮಕರಣ ಮಾಡುತ್ತಿದ್ದಂತೆಯೇ ಅರ್ಥ ಹುಡುಕುವುದರಲ್ಲಿ ಅಭಿಮಾನಿಗಳು ಬ್ಯುಸಿಯಾಗಿದ್ದರು. ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ತಮ್ಮ ಮಗನಿಗೆ ಆವ್ಯಾನ್ ಅಜಾದ್ ಎಂದು ಹೆಸರಿಟ್ಟಿರುವ ಕಾರಣಕ್ಕಾಗಿ ಅಭಿಮಾನಿಗಳು ಕನ್ ಫ್ಯೂಸ್ ಕೂಡ ಆಗಿದ್ದರು.

    ಆವ್ಯಾನ್ ದೇವ್ ಅಂದರೆ, ಅದು ದೇವರ ಹೆಸರು. ಗಣಪತಿಯ ಮತ್ತೊಂದು ಹೆಸರು ಕೂಡ. ಅಲ್ಲದೇ, ಅದೃಷ್ಟದಿಂದ ಜನಿಸಿದವನು ಎಂಬ ಅರ್ಥವನ್ನೂ ಇದು ಸೂಚಿಸುತ್ತದೆ. ಹಾಗಾಗಿ ಇಂಥದ್ದೊಂದು ಹೆಸರಿಟ್ಟಿದ್ದಾರೆ. ಮಗುವಿಗೆ ಒಂಬತ್ತು ತಿಂಗಳು ತುಂಬಿರುವ ಸಂದರ್ಭದಲ್ಲಿ ನಿಖಿಲ್ ಮತ್ತು ರೇವತಿ ದಂಪತಿ ತಮ್ಮ ಮಗುವಿಗೆ ಮುದ್ದಾದ ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

    ಈ ಸಂದರ್ಭದಲ್ಲಿ ಆವ್ಯಾನ್ ದೇವ್ ಬಿಳಿ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಮಿಂಚುತ್ತಿದ್ದನು. ಮಾಜಿ ಪ್ರಧಾನಿ ಮತ್ತು ಆವ್ಯಾನ್ ಮುತ್ತಾತ ದೇವೇಗೌಡರು ಮೊಮ್ಮಗನಿಗೆ ಮುತ್ತು ಕೊಡುವ ಮೂಲಕ ಶುಭಹಾರೈಸಿದರೆ, ನಿಖಿಲ್ ತಾಯಿ ಮೊಮ್ಮಗನಿಗಾಗಿ ಬಂಗಾರದ ಹಲವು ಆಭರಣಗಳನ್ನು ತಂದಿದ್ದರು.

    ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ನಡೆಯಿತು. ಬೆಳಗ್ಗೆ 10.30 ರಿಂದ 12.20ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಗುವಿಗೆ ನಾಮಕರಣ ಮಾಡಲಾಗಿದೆ.

  • ಕ್ಯಾಮೆರಾ ಮುಂದೆ ನಿಖಿಲ್ ಕುಮಾರ್ ಸ್ವಾಮಿ ಪುತ್ರ ಆವ್ಯನ್ ದೇವ್

    ಕ್ಯಾಮೆರಾ ಮುಂದೆ ನಿಖಿಲ್ ಕುಮಾರ್ ಸ್ವಾಮಿ ಪುತ್ರ ಆವ್ಯನ್ ದೇವ್

    ಟ, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರ್ ಸ್ವಾಮಿ ಪುತ್ರ ಆವ್ಯನ್ ದೇವ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದಿದ್ದಾರೆ. ತಮ್ಮ ಮಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್ ಕುಮಾರ ಸ್ವಾಮಿ ಈವರೆಗೂ ಹಾಕಿದ್ದರೂ, ಮುಖ ತೋರಿಸಿರಲಿಲ್ಲ. ಅಲ್ಲದೇ, ಮಾಧ್ಯಮಗಳ ಕ್ಯಾಮೆರಾಗೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಗನನ್ನು ಕೂರಿಸಿದ್ದಾರೆ ನಿಖಿಲ್.

    ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ನಡೆಯಿತು. ಬೆಳಗ್ಗೆ 10.30 ರಿಂದ 12.20ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಗುವಿಗೆ ನಾಮಕರಣ ಮಾಡಲಾಗಿದೆ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣ ಗಣನೆ

    ಪ್ರಪೌತ್ರ ಜನನ ಶಾಂತಿ, ನಾಮಕರಣ ಹಾಗೂ ಕನಕಾಭಿಷೇಕ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ನಡೆದಿದ್ದು, ದೊಡ್ಡ ಗೌಡರ ಕುಟುಂಬವು ಮೊಮ್ಮಗನಿಗೆ ಆವ್ಯನ್ ದೇವ್ ಎಂದು ಹೆಸರಿಟ್ಟಿದ್ದಾರೆ.  ನಿಖಿಲ್ ಮತ್ತು ರೇವತಿ ದಂಪತಿಯ ಈ ಮಗುವಿಗೆ ಈಗ ಒಂಬತ್ತು ತಿಂಗಳು. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

    ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ದೇವೇಗೌಡರ ಕುಟುಂಬ ಮತ್ತು ಅವರ ಆಪ್ತರು ಮಾತ್ರ ಭಾಗಿಯಾಗಿದ್ದಾರೆ.  ಮಗು ನಾಮಕರಣಕ್ಕೆ ವಿವಿಧ ಹೂಗಳಿಂದ ಸಿಂಗಾರ ಗೊಂಡಿದ್ದು, ಬೆಳ್ಳಿ ತೊಟ್ಟಿಲಲ್ಲಿ ಮಗುವಿನ ನಾಮಕರಣ ಶಾಸ್ತ್ರ ನಡೆದಿದೆ.

  • ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಟ, ಯುವರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಬೆಳಗ್ಗೆ 10.30 ರಿಂದ 12.20ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಗುವಿಗೆ ನಾಮಕರಣ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

    ಪ್ರಪೌತ್ರ ಜನನ ಶಾಂತಿ, ನಾಮಕರಣ ಹಾಗೂ ಕನಕಾಭಿಷೇಕ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ನಡೆಯುತ್ತಿದ್ದು, ದೊಡ್ಡ ಗೌಡರ ಕುಟುಂಬವು ಮೊಮ್ಮಗನಿಗೆ ಆವ್ಯನ್ ದೇವ್ ಎಂದು ಹೆಸರಿಡಲು ನಿರ್ಧರಿಸಿದ್ದಾರಂತೆ.  ನಿಖಿಲ್ ಮತ್ತು ರೇವತಿ ದಂಪತಿಯ ಈ ಮಗುವಿಗೆ ಈಗ ಒಂಬತ್ತು ತಿಂಗಳು. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

    ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ದೇವೇಗೌಡರ ಕುಟುಂಬ ಮತ್ತು ಅವರ ಆಪ್ತರು ಮಾತ್ರ ಭಾಗಿಯಾಗಿದ್ದಾರೆ.  ಮಗು ನಾಮಕರಣಕ್ಕೆ ವಿವಿಧ ಹೂಗಳಿಂದ ಸಿಂಗಾರ ಗೊಂಡಿದ್ದು, ಬೆಳ್ಳಿ ತೊಟ್ಟಿಲಲ್ಲಿ ಮಗುವಿನ ನಾಮಕರಣ ಶಾಸ್ತ್ರ ನಡೆಯಲಿದೆ.

  • ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ

    ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ

    ಬೆಂಗಳೂರು: ದೇಶದಲ್ಲಿ ತೃತೀಯ ರಂಗದ ಸದ್ದು ಮತ್ತೊಮ್ಮೆ ಪ್ರಾರಂಭವಾಗಿದೆ. ಇದಕ್ಕೆ ವೇದಿಕೆ ಎಂಬಂತೆ ಇಂದು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.

    ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಸುಮಾರು ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಇಬ್ಬರು ನಾಯಕರು ಚರ್ಚೆ ನಡೆಸಿದರು. ಚರ್ಚೆಯಲ್ಲಿ ತೃತೀಯ ರಂಗದ ಬಗ್ಗೆ ಚರ್ಚೆ ಆಗಿರೋದನ್ನ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಒಪ್ಪಿಕೊಂಡರು. ಇದನ್ನೂ ಓದಿ: ಹಣಕಾಸಿನ ವಿಷಯಕ್ಕೆ ಗೆಳೆಯನನ್ನೆ ಕೊಲೆ ಮಾಡಿಸಿದ ಕಿಡಿಗೇಡಿ 

    ಸಭೆ ಬಳಿಕ ಮಾತನಾಡಿದ ಚಂದ್ರಶೇಖರ್ ರಾವ್, ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವ ಶಕ್ತಿ ದೇಶದಲ್ಲಿದೆ. ದೇಶದಲ್ಲಿ ಹಲವು ಸಂಪನ್ಮೂಲಗಳಿವೆ. ಇವತ್ತಿಗೂ ಹಲವು ಸಮಸ್ಯೆ ಬಗ್ಗೆ ಚರ್ಚೆಯಾಗಿಲ್ಲ. ಈ ಬಗ್ಗೆ ಚರ್ಚೆ ಮಾಡಲಾಗಿದೆ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿ ಇದ್ದಾರೆ. ಭರವಸೆಗಳನ್ನ ಸಾಕಷ್ಟು ಕೊಡಬಹುದು. ಆದರೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಅನ್ನೋದು ಮುಖ್ಯ ಎಂದು ಹೆಸರು ಹೇಳದೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದರು.

    ಇವತ್ತು ದೇಶಕ್ಕೆ ಅಪಮಾನ ಮಾಡೋ ಕೆಲಸ ಆಗುತ್ತಿದೆ. ಸರ್ಕಾರ ಮಾಡೋದು ಮುಖ್ಯ ಅಲ್ಲ. ಸಮಸ್ಯೆ ಪರಿಹಾರ ಆಗಿದೆಯಾ ಅನ್ನೋದು ಮುಖ್ಯ. 75 ವರ್ಷಗಳ ಅಮೃತ ಮಹೋತ್ಸವದಲ್ಲಿ ನಾವು ಇದ್ದೇವೆ. ಆದರೂ ಕೂಡ ದೇಶ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಷ್ಟೇ ಅಲ್ಲ ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದೆ ಎಂದರು.

    ಕಾಂಗ್ರೆಸ್-ಬಿಜೆಪಿ ಸರ್ಕಾರ ಮಾಡೋದು ಮುಖ್ಯ ಅಲ್ಲ. ಉಜ್ವಲ ಭಾರತ ಆಗೋದು ನಮಗೆ ಮುಖ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ. ಮಾಧ್ಯಮಗಳು ಈ ನಿಟ್ಟಿನಲ್ಲಿ ನಮ್ಮ ಜೊತೆ ಸಹಕಾರ ಕೊಡಿ. ಸೆನ್ಸೇಷನಲ್ ಸುದ್ದಿಗಳನ್ನ ಬಿಡಿ. ದೇಶದ ಧನಾತ್ಮಕ ದಾರಿಯಲ್ಲಿ ಹೋಗುವಂತ ನಿಟ್ಟಿನಲ್ಲಿ ಸುದ್ದಿಗಳನ್ನ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ:  ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್‌ ನಾಯಕ ಶವವಾಗಿ ಪತ್ತೆ 

    ದೇಶದಲ್ಲಿ ಇಂದು ಯಾವ ವರ್ಗಗಳು ಸಂತೋಷವಾಗಿ ಇಲ್ಲ. ಡಾಲರ್ ಬೆಲೆ ಇವತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಕುಸಿದಿದೆ. ಇದೆಲ್ಲವೂ ಸರಿ ಹೋಗಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ. ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಭಾರತ ಬದಲಾವಣೆ ಖಂಡಿತ ಆಗಲಿದ್ದು, 2-3 ತಿಂಗಳಲ್ಲಿ ನಿಮಗೆ ಒಂದು ಉತ್ತಮ ಸುದ್ದಿಕೊಡ್ತೀವಿ ಎಂದು ತಿಳಿಸಿದರು.

  • ದೇವೇಗೌಡರಿಗೆ ವಯಸ್ಸಾಗಿರಬಹುದು, ಆದ್ರೆ ತಲೆ ಮಾತ್ರ 30 ವರ್ಷದ ಹುಡುಗನಂತೆ: ಸಿ.ಎಂ.ಇಬ್ರಾಹಿಂ

    ದೇವೇಗೌಡರಿಗೆ ವಯಸ್ಸಾಗಿರಬಹುದು, ಆದ್ರೆ ತಲೆ ಮಾತ್ರ 30 ವರ್ಷದ ಹುಡುಗನಂತೆ: ಸಿ.ಎಂ.ಇಬ್ರಾಹಿಂ

    ಹಾಸನ: ಬಿಜೆಪಿ, ಕಾಂಗ್ರೆಸ್ ಎಷ್ಟೇ ಕುಣಿದಾಡಿದ್ರೂ ಮುಂದೆ ಜೆಡಿಎಸ್ ಅಧಿಕಾರ ಮಾಡುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

    ಹಾಸನದಲ್ಲಿ ನಡೆದ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಿಖಿಲ್, ಸೂರಜ್ ಜೆಡಿಎಸ್ ಸ್ವತ್ತಲ್ಲ, ರಾಜ್ಯದ ಸ್ವತ್ತು. ಹಳೇ ಭೂಕೈಲಾಸವನ್ನು ಹೊಸ ಪ್ರಿಂಟ್ ಹಾಕಿಕೊಂಡು ಹೊರಟಿದ್ದೇವೆ. ಹಾಸನ ಜಿಲ್ಲೆಯ ಬಗ್ಗೆ ನಾನು 1967 ರಿಂದ ನೋಡಿದ್ದೇನೆ. ಹಾಸನ ಜಿಲ್ಲೆ ರಾಜ್ಯಕ್ಕೆ ಹೋರಾಟ ಮಾಡುವ ಗಂಡಸರನ್ನು ಹುಟ್ಟಿಸಿರುವ ಜಿಲ್ಲೆ. ಬಿಜೆಪಿ, ಕಾಂಗ್ರೆಸ್ ಎಷ್ಟೇ ಕುಣಿದಾಡಿದ್ರೂ ಮುಂದೆ ಜೆಡಿಎಸ್ ಅಧಿಕಾರ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಇದನ್ನೂ ಓದಿ: ಮದುವೆ ಮನೆಯಿಂದ ಮಸಣ ಸೇರಿದ ಒಂದೇ ಊರಿನ 7 ಜನ – ಶೋಕ ಸಾಗರದಲ್ಲಿ ಗ್ರಾಮ

    ಇದೇ ವೇಳೆ ಮಾತನಾಡಿದ ಅವರು, ವಾಜಪೇಯಿ ಒಳ್ಳೆಯವರು. ಆರ್‌ಎಸ್‍ಎಸ್‍ನಲ್ಲೂ ಒಳ್ಳೆಯವರಿದ್ದಾರೆ. ನಾನೂ ಕೂಡ ಕೆಲ ಬಿಜೆಪಿ ಅವರ ಜೊತೆ ಒಡನಾಟ ಇಟ್ಕೊಂಡಿದ್ದೆ. ಅಂದಿನ ಬಿಜೆಪಿ ನಾಯಕರ ಗುಣ ಇಂದು ಇದ್ಯಾ? ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ದುಡ್ಡು ಎಣಿಸಲು ಮಷಿನ್ ಅನ್ನೇ ಇಟ್ಟುಕೊಂಡಿದ್ದಾರೆ. 40% ತೆಗೆದುಕೊಂಡು ಸಂತೋಷ್ ಸಾವಿಗೆ ಕಾರಣರಾದ್ರು. ಅವನ ಮನೆಗೆ ಹಿಂದೂ ಮುಖಂಡ ಮುತಾಲಿಕ್ ಹೋಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿರಬಹುದು. ಆದ್ರೆ ತಲೆ ಮಾತ್ರ 30 ವರ್ಷದ ಹುಡುಗನಂತೆ ಯೋಚಿಸುತ್ತೆ ಎಂದು ಪ್ರಶಂಸಿಸಿದರು.

    ಮಾಧ್ಯಮ ಸ್ನೇಹಿತರೆ, ನೀವು ಬಳ್ಳಿ ನಾವು ಕಾಯಿ. ನಮ್ಮನ್ನು ರಕ್ಷಣೆ ಮಾಡಿ. ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯ ಬಿಟೀಂ ಎಂದಿದ್ದಾರೆ. ನಿಮ್ಮನ್ನು ಬಾದಾಮಿಗೆ ಕರೆದುಕೊಂಡು ಹೋಗಿದ್ಯಾರು. ಮೈಸೂರಲ್ಲಿ 300 ಓಟೀಂ ಗೆಲ್ಲಿಸಿದ್ಯಾರು. ಹಾಸನದಲ್ಲಿ ಕಾಂಗ್ರೆಸ್‍ನವರು ಬಿಜೆಪಿಗೆ ವೋಟು ಹಾಕಿದ್ದಕ್ಕೆ ಗೆದ್ರು. ಈಗ ಹೇಳಿ ಬಿಟೀಂ ಯಾರು? ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ ಹಾಗೆ ನನಗೆ ಮಾಡಬೇಡಿ ಎಂದು ತಿರುಗೇಟು ಕೊಟ್ಟರು.

    ನಾನು ಚರಿತ್ರೆ ಬರೆದವನ್ನು ಎಲ್ಲವನ್ನೂ ಬಿಚ್ಚಿಡುತ್ತೇನೆ. ನಾನು ಕೇವಲ ಮುಸ್ಲಿಂರ ನಾಯಕನಲ್ಲ. ನಾನು ಈ ರಾಜ್ಯದ ಜನರ ದಾಸ. ನಾನು ಜೋಳಿಗೆ ಹಾಕಿಕೊಂಡು ಹೊರಟಿದ್ದೇನೆ. ನಾವು ಭಿಕ್ಷೆ ಕೇಳುತ್ತಿದ್ದೇವೆ, ಜನ ನಮಗೆ ಭಿಕ್ಷೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್

    ಶಿವಲಿಂಗೇಗೌಡ, ರಾಮಸ್ವಾಮಿ ಬಂದಿಲ್ಲ ಎಂದು ಕೇಳಿದ್ರು. ಆದರೆ ಅವರು ಬಂದಿಲ್ಲ, ಆದ್ರೆ ಎಲ್ಲಿ ಹೋಗ್ತಾರೆ ನೋಡೋಣ. ಹಳೇ ಮೈಸೂರು ಭಾಗಕ್ಕೆ ಈಗಾಗಲೇ ಬೇಲಿ ಹಾಕಿದ್ದೇವೆ. ಮುಂದೆ ತೋರಿಸುತ್ತೇವೆ ಸಾಬ್ರು ಚಿತ್ರ ಹೇಗೆ ತೋರಿಸ್ತಾರೆ ನೋಡಿವ್ರಂತೆ ಎಂದು ಮಾತನಾಡಿದರು.

  • ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ: ಹೆಚ್‍ಡಿಕೆ

    ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ: ಹೆಚ್‍ಡಿಕೆ

    ಬೆಂಗಳೂರು: ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

    ತಾಯಿ ಚನ್ನಮ್ಮಗೆ ಐಟಿ ನೋಟಿಸ್ ನೀಡಿರುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದ್ರಲ್ಲಿ ತಲೆಕಡೆಸಿಕೊಳ್ಳುವ ವಿಚಾರ ಏನಿದೆ. ನೋಟಿಸ್ ನೀಡಿರುವ ಬಗ್ಗೆ ನನಗೆ ಐಡಿಯಾ ಇಲ್ಲ, ಈ ಬಗ್ಗೆ ನನಗೆ ಯಾವುದು ಗೊತ್ತಿಲ್ಲ. ನೋಟಿಸ್ ಕೊಟ್ಟಿರೋದು ನನಗೆ ಗೊತ್ತಿಲ್ಲ. ಕೊಟ್ಟಿದ್ದರು ಸಹ ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ ಎಂದು ಸಮಾಧಾನವಾಗಿ ಪ್ರತಿಕ್ರಿಯೆ ಕೊಟ್ಟರು. ಇದನ್ನೂ ಓದಿ: ಎಚ್‍ಡಿಡಿ ಪತ್ನಿಗೆ ಐಟಿ ನೋಟಿಸ್

    ನಮ್ಮ ಕುಟುಂಬದಲ್ಲಿ ನಮ್ಮ ವ್ಯವಹಾರ ತೆರೆದ ಪುಸ್ತಕ. ದೇವೇಗೌಡರ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದು ಮಹತ್ವ ಕೊಟ್ಟಿಲ್ಲ. ನಾವು ಸಹ ನಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದು ಪ್ರಾಮುಖ್ಯತೆ ಕೊಟ್ಟವರಲ್ಲ. ನಾವು ಪರಿಶುದ್ಧವಾಗಿರಬೇಕು ಅಷ್ಟೇ. ನೋಟಿಸ್ ಕೊಟ್ಟಿದ್ದಾರೆ ಅದಕ್ಕೆ ಏನ್ ಉತ್ತರ ಕೊಡಬೇಕೋ ಕೊಟ್ಟರಾಯ್ತು. ನನ್ನ ಸಹೋದರನಿಗೂ ಅದನ್ನೇ ಹೇಳಿದ್ದೇನೆ. ಇದನ್ನ ನಾವು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

    ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರ್ತಾರೆ ಅದನ್ನು ನಾವು ಸಲ್ಲಿಸುತ್ತೇವೆ. ಇದನ್ನ ರಾಜಕೀಯವಾಗಿ ಪ್ರಚಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ ಎಂದು ಉತ್ತರಿಸದರು. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ