Tag: Devdutt Padikkal

  • ಅರ್ಧಶತಕ ಸಿಡಿಸಿ 2 ದಾಖಲೆ ನಿರ್ಮಿಸಿದ ಪಡಿಕ್ಕಲ್‌

    ಅರ್ಧಶತಕ ಸಿಡಿಸಿ 2 ದಾಖಲೆ ನಿರ್ಮಿಸಿದ ಪಡಿಕ್ಕಲ್‌

    ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿಯ ಆರಂಭಿಕ ಆಟಗಾರ ದೇವದತ್‌ ಪಡಿಕ್ಕಲ್‌ ಅರ್ಧಶತಕ ಹೊಡೆಯುವ ಮೂಲಕ 2 ದಾಖಲೆ ನಿರ್ಮಿಸಿದ್ದಾರೆ.

    ಆಡಿದ ಮೊದಲ ಐಪಿಎಲ್‌ ಆವೃತ್ತಿಯಲ್ಲಿ5 ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೇ ಆಡಿದ ಮೊದಲ ಸರಣಿಯಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಈ ಮೊದಲು ಶಿಖರ್‌ ಧವನ್‌ ಮತ್ತು ಶ್ರೇಯಸ್‌ ಅಯ್ಯರ್‌ 4 ಅರ್ಧಶತಕ ಸಿಡಿಸಿದ್ದರು. 2014 ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಮೊದಲ ಆವೃತ್ತಿಯಲ್ಲೇ 14 ಪಂದ್ಯಗಳಿಂದ 33.8ರ ಸರಾಸರಿಯಲ್ಲಿ 439 ರನ್ ಹೊಡೆದಿದ್ದರು. ಈಗ ಪಡಿಕ್ಕಲ್‌ 14 ಪಂದ್ಯಗಳಿಂದ 472 ರನ್‌ ಹೊಡೆದಿದ್ದಾರೆ.

    ವಿದೇಶಿ ಆಟಗಾರರನ್ನು ಸೇರಿಸಿಕೊಂಡರೆ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರು ತಾವಾಡಿದ ಮೊದಲ ಆವೃತ್ತಿಯಲ್ಲೇ ಬರೋಬ್ಬರಿ 600 ರನ್ ಸಿಡಿಸಿದ್ದರು.

    ಇಂದಿನ ಪಂದ್ಯದಲ್ಲಿ ಪಡಿಕ್ಕಲ್‌ 50 ರನ್‌(41 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಈ ಸರಣಿಯಲ್ಲಿ 33.71 ಸರಾಸರಿಯಲ್ಲಿ 472 ರನ್‌ ಹೊಡೆದಿರುವ ಪಡಿಕ್ಕಲ್‌ ವೈಯಕ್ತಿಕ ಗರಿಷ್ಟ 74 ರನ್‌ ಬಾರಿಸಿದ್ದಾರೆ. ಒಟ್ಟು 373 ಬಾಲ್‌ ಎದುರಿಸಿರುವ ಪಡಿಕ್ಕಲ್‌ 126.54 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಇಲ್ಲಿಯವರೆಗೆ ಒಟ್ಟು 51 ಬೌಂಡರಿ, 8 ಸಿಕ್ಸರ್‌ ಹೊಡೆದಿದ್ದಾರೆ.

    ಈ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೆಎಲ್‌ ರಾಹುಲ್‌ ಮೊದಲ ಸ್ಥಾನದಲ್ಲಿದ್ದರೆ ಶಿಖರ್‌ ಧವನ್‌ ಮತ್ತು ಪಡಿಕ್ಕಲ್‌ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ರಾಹುಲ್‌ 670 ರನ್‌ ಹೊಡೆದಿದ್ದರೆ, ಶಿಖರ್‌ ಧವನ್‌ 525 ರನ್‌ ಹೊಡೆದಿದ್ದಾರೆ.

  • ಮೊದಲ ಐಪಿಎಲ್‍ನಲ್ಲೇ ಐಯ್ಯರ್ ದಾಖಲೆ ಮುರಿಯುವ ಸನಿಹದಲ್ಲಿ ಪಡಿಕ್ಕಲ್

    ಮೊದಲ ಐಪಿಎಲ್‍ನಲ್ಲೇ ಐಯ್ಯರ್ ದಾಖಲೆ ಮುರಿಯುವ ಸನಿಹದಲ್ಲಿ ಪಡಿಕ್ಕಲ್

    ಅಬುಧಾಬಿ: ತಾನು ಆಡುತ್ತಿರುವ ಮೊದಲ ಐಪಿಎಲ್ ಆವೃತ್ತಿಯಲ್ಲೇ ಭಾರತೀಯ ಆಟಗಾರನಾಗಿ ಆರ್‌ಸಿಬಿ ತಂಡದ ಯುವ ಆಟಗಾರ ದೇವದತ್ ಪಡಿಕ್ಕಲ್ ಹೊಸ ದಾಖಲೆ ಬರೆಯುವ ತವಕದಲ್ಲಿ ಇದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ಆರಂಭದಿಂದಲೂ ಭರ್ಜರಿ ಫಾರ್ಮ್‍ನಲ್ಲಿರುವ ದೇವದತ್ ಪಡಿಕ್ಕಲ್ ಅರ್ಧಶತಕಗಳ ಮೇಲೆ ಅರ್ಧಶತಕ ಸಿಡಿಸಿ ಮಿಂಚುತ್ತಿದ್ದಾರೆ. ಈ ಮೂಲಕ ಈಗಾಗಲೇ ತಾವು ಆಡಿದ 12 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳ ಸಮೇತ 417 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಇದ್ದಾರೆ.

    ಪಡಿಕ್ಕಲ್ 417 ರನ್ ಸಿಡಿಸುವ ಮೂಲಕ ತಾನು ಆಡಿದ ಮೊದಲ ಐಪಿಎಲ್ ಆವೃತ್ತಿಯಲ್ಲೇ ಭಾರತದ ಆಟಗಾರನಾಗಿ ಅತೀ ಹೆಚ್ಚು ರನ್ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು 2014 ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಅವರು ತಾವು ಆಡಿದ ಮೊದಲ ಆವೃತ್ತಿಲ್ಲೇ 14 ಇನಿಂಗ್ಸ್ ಗಳಿಂದ 33.8ರ ಸರಾಸರಿಯಲ್ಲಿ 439 ರನ್ ಹೊಡೆದಿದ್ದರು.

    2014ರಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಐಯ್ಯರ್ ಆಡಿದ 14 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ದೇವದತ್ ಪಡಿಕ್ಕಲ್ ತಾವು ಆಡಿದ 12 ಪಂದ್ಯಗಳಲ್ಲೇ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೇ ಇನ್ನೂ ಕೇವಲ 22 ರನ್ ಸಿಡಿಸಿದರೆ, ಪಡಿಕ್ಕಲ್ ತಾವು ಆಡಿದ ಮೊದಲ ಅವೃತ್ತಿಯಲ್ಲೇ ದಾಖಲೆ ಬರೆಯವ ಸನಿಹದಲ್ಲಿದ್ದಾರೆ. ವಿದೇಶಿ ಆಟಗಾರರನ್ನು ಸೇರಿಸಿಕೊಂಡರೆ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರು ತಾವಾಡಿದ ಮೊದಲ ಆವೃತ್ತಿಯಲ್ಲೇ ಬರೋಬ್ಬರಿ 600 ರನ್ ಸಿಡಿಸಿದ್ದರು.

    ಪಡಿಕ್ಕಲ್ ಈಗಾಗಲೇ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಬೆಂಗಳೂರು ತಂಡ ಸೋತರೂ ಕೂಡ ಅಂದಿನ ಪಂದ್ಯದಲ್ಲಿ ಪಡಿಕ್ಕಲ್ ಉತ್ತಮವಾಗಿ ಆಡಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲಿ 45 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ಸಮೇತ 74 ರನ್ ಸಿಡಿಸಿದ್ದರು. ಆದರೆ ಅಂದು ಆರ್‍ಸಿಬಿ ತಂಡ ಹೀನಾಯವಾಗಿ ಸೋತಿತ್ತು.

  • ನಿಮ್ಮ ಜೊತೆ ಸ್ಪರ್ಧೆ ಮಾಡಲ್ಲ ಪಾಜಿ: ಯುವಿಗೆ ಪಡಿಕಲ್ ಉತ್ತರ

    ನಿಮ್ಮ ಜೊತೆ ಸ್ಪರ್ಧೆ ಮಾಡಲ್ಲ ಪಾಜಿ: ಯುವಿಗೆ ಪಡಿಕಲ್ ಉತ್ತರ

    ಬೆಂಗಳೂರು: ನಿಮ್ಮ ಜೊತೆ ಸ್ಪರ್ಧೆ ಮಾಡಲ್ಲ ಪಾಜಿ ಎಂದು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಮಾಡಿದ ಟ್ವೀಟ್‍ಗೆ ಆರ್‌ಸಿಬಿ ಆಟಗಾರ ದೇವದತ್ ಪಡಿಕಲ್ ಅವರು ಉತ್ತರ ನೀಡಿದ್ದಾರೆ.

    ನಿನ್ನೆಯ ವೀಕೆಂಡ್ ಧಮಾಕದ ಮೊದಲ ಮ್ಯಾಚಿನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ಪಡಿಕಲ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಗೆದ್ದು ಬೀಗಿತ್ತು. ಕೊಹ್ಲಿ ಮತ್ತು ಪಡಿಕಲ್ ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದ್ದರು.

    ಕೊಹ್ಲಿ ಮತ್ತು ಪಡಿಕಲ್ ಬ್ಯಾಟಿಂಗ್ ಮೆಚ್ಚಿ ಟ್ವೀಟ್ ಮಾಡಿದ್ದ ಯುವರಾಜ್ ಅವರು, ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಎಂಬುದು ಎಂದಿಗೂ ಇರುತ್ತದೆ. ಕಳೆದ ಎಂಟು ವರ್ಷದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಇದು ನಂಬಲು ಆಗದ ಮಾತು. ಪಡಿಕಲ್ ತುಂಬು ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. ಅವರ ಜೊತೆ ಬ್ಯಾಟ್ ಮಾಡಬೇಕು ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ಎಂದು ನೋಡಬೇಕು ಎಂದು ಹೇಳಿದ್ದರು.

    ಯುವರಾಜ್ ಅವರ ಕಮೆಂಟ್ ನೋಡಿ ರೀಟ್ವೀಟ್ ಮಾಡಿರುವ ಪಡಿಕಲ್ ಅವರು, ನಿಮ್ಮ ಜೊತೆ ಸ್ಪರ್ಧೆ ಮಾಡುವುದಿಲ್ಲ ಪಾಜಿ. ನಾನು ಫ್ಲಿಕ್ ಶಾಟ್ ಹೊಡೆಯುವುದನ್ನು ನಿಮ್ಮಿಂದಲೇ ಕಲಿತ್ತಿದ್ದೇನೆ. ಸ್ಪರ್ಧೆ ಬೇಡ ಆದರೆ ನಿಮ್ಮ ಜೊತೆ ಬ್ಯಾಟಿಂಗ್ ಮಾಡುವ ಆಸೆ ಇದೆ. ಬನ್ನಿ ಎಂದು ಬರೆದಿದ್ದಾರೆ. ಜೊತೆಗೆ ಯುವರಾಜ್ ಅವರ ಟ್ವೀಟ್‍ಗೆ ಕೊಹ್ಲಿ ಅವರು ಕಮೆಂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

    ನಿನ್ನೆಯ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭದಿಂದಲೂ ರಾಜಸ್ಥಾನ ಬೌಲರ್ ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಿಸಿದ ಪಡಿಕ್ಕಲ್ ಐಪಿಎಲ್ 2020ರ ಆವೃತ್ತಿಯಲ್ಲಿ 3ನೇ ಅರ್ಧ ಶತಕ ಸಿಡಿಸಿದರು. 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು. ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ತಂಡ 124 ರನ್ ಗಳಿಸಿದ್ದ ಸಂದರ್ಭದಲ್ಲಿ, ಭಾರೀ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 140 ಸ್ಟ್ರೈಕ್ ರೇಟ್‍ನೊಂದಿಗೆ 63 ರನ್ ಗಳಿಸಿದ ಪಡಿಕ್ಕಲ್ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

    ಐಪಿಎಲ್ 2020ರ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‍ನಲ್ಲಿ ವಿಫಲವಾಗಿದ್ದ ಕೊಹ್ಲಿ ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದರು. ಇನ್ಸಿಂಗ್ ಆರಂಭದಿಂದಲೂ ಆತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸಿದ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೊತೆಗೆ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ 72 ರನ್ ಸಿಡಿಸಿ ನಿನ್ನೆಯ ಪಂದ್ಯದಲ್ಲಿ ಅಜೇಯರಾಗಿ ಉಳಿದ್ದರು.

  • ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಅಬುಧಾಬಿ: ಪಂದ್ಯಕ್ಕೂ ಮುನ್ನ ಒತ್ತಡದಲ್ಲಿ ಇದ್ದೆ. ಆದರೆ ಎರಡು ಬಾಲ್ ಆಡಿದ ನಂತರ ವಿಶ್ವಾಸ ಜಾಸ್ತಿ ಆಯ್ತು ಎಂದು ಆರ್‍ಸಿಬಿ ತಂಡ ಉದಯೋನ್ಮುಖ ಆಟಗಾರ ದೇವದತ್ ಪಡಿಕಲ್ ಹೇಳಿದ್ದಾರೆ.

    ಸೋಮವಾರ ರಾತ್ರಿ ನಡೆದ ಐಪಿಎಲ್ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಕನ್ನಡಿಗ ದೇವದತ್ ಪಡಿಕಲ್ ಒಂದು ಮ್ಯಾಚಿನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಅವರು ಪಂದ್ಯಕ್ಕೂ ಮುನ್ನ ಬಹಳ ನರ್ವಸ್ ಆಗಿದ್ದೆ ಎಂದು ಚಹಲ್ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

    ಪಂದ್ಯ ಮುಗಿದ ಬಳಿಕ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಜೊತೆ ಪಡಿಕಲ್ ಮಾತನಾಡಿದ್ದಾರೆ. ಈ ವೇಳೆ ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ. ಸಂಜೆ ಊಟದ ನಂತರ ರೂಮಿನಲ್ಲೂ ಕೂಡ ತುಂಬ ಗೊಂದಲದಲ್ಲಿ ಓಡಾಡುತ್ತಿದ್ದೆ. ಆದರೆ ಬ್ಯಾಟಿಂಗ್ ಮಾಡಲು ಬಂದಾಗ ಎರಡು ಬಾಲ್ ಆಡಿದ ನಂತರ ವಿಶ್ವಾಸ ಹೆಚ್ಚಾಯ್ತು. ಇದಾದ ನಂತರ ಚೆನ್ನಾಗಿ ಆಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಓದಿ: ಆರ್‌ಸಿಬಿ ಡೆಬ್ಯು ಗೆಲುವಿನೊಂದಿಗೆ ಎಲೈಟ್ ಪಟ್ಟಿಗೆ ಕೊಹ್ಲಿ ಸೇರ್ಪಡೆ

    ಇದೇ ವೇಳೆ ವಿರಾಟ್, ಫಿಂಚ್ ಮತ್ತು ಎಬಿಡಿ ಜೊತೆ ಆಟವಾಡುತ್ತಿರುವ ಅನುಭವ ಹಂಚಿಕೊಂಡಿರುವ ಪಡಿಕಲ್, ಕಳೆದ ಒಂದು ತಿಂಗಳಿನಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಈ ವೇಳೆ ವಿರಾಟ್ ಬಹಳ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರು. ಅಲ್ಲಿ ನಮಗೆ ಕಲಿಯುವುದಕ್ಕೆ ಬಹಳ ಇತ್ತು. ಕೊಹ್ಲಿ ಅವರನ್ನು ನಾನು ಪ್ರಶ್ನೆ ಮಾಡುತ್ತಲೇ ಇರುತ್ತಿದ್ದೆ. ಈ ಪಂದ್ಯದಲ್ಲಿ ನಾನು ಫಿಂಚ್ ಅವರ ಜೊತೆ ಆಟವಾಡಿದೆ. ಈ ವೇಳೆ ಅವರು ನನಗೆ ಸ್ಟ್ರೈಕ್ ನೀಡುತ್ತಿದ್ದರು. ಇದರಿಂದ ನನಗೆ ಬಹಳ ಖುಷಿ ಆಯ್ತು ಎಂದು ಪಡಿಕಲ್ ತಿಳಿಸಿದ್ದಾರೆ.

    ಸೋಮವಾರ ದುಬೈ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 20 ವರ್ಷದ ಯುವ ಆರ್‍ಸಿಬಿ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್ ಹೊಡೆದು ಔಟಾಗಿದ್ದರು. 42 ಎಸೆತ ಎದುರಿಸಿದ ಇನ್ನಿಂಗ್ಸ್‍ನಲ್ಲಿ 8 ಬೌಂಡರಿ ಸಿಡಿಸಿದ್ದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‍ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ದೇವದತ್ ಪಡಿಕಲ್ ಪಾತ್ರವಾಗಿದ್ದಾರೆ.

  • 3 ವಿಕೆಟ್‌ ಕಿತ್ತು ರೋಚಕ ತಿರುವು ನೀಡಿದ ಚಹಲ್‌ – ಆರ್‌ಸಿಬಿಗೆ 10 ರನ್‌ಗಳ ಗೆಲುವು

    3 ವಿಕೆಟ್‌ ಕಿತ್ತು ರೋಚಕ ತಿರುವು ನೀಡಿದ ಚಹಲ್‌ – ಆರ್‌ಸಿಬಿಗೆ 10 ರನ್‌ಗಳ ಗೆಲುವು

    ದುಬೈ: ಆರಂಭದಲ್ಲಿ ಬ್ಯಾಟ್ಸ್‌ ಮನ್‌, ನಂತರ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಹೈದರಾಬಾದ್‌ ಸನ್‌ ರೈಸರ್ಸ್‌ ವಿರುದ್ಧದ ನಡೆದ ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 10 ರನ್‌ಗಳಿಂದ ಜಯಗಳಿಸಿದೆ.

    ಗೆಲ್ಲಲು 164 ರನ್‌ಗಳ ಗುರಿಯನ್ನು ಪಡೆದ ಹೈದರಾಬಾದ್‌ 19.4 ಓವರ್‌ ಗಳಲ್ಲಿ 153 ರನ್‌ಗಳಿಗೆ ಆಲೌಟ್‌ ಆಯ್ತು. ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮೂರು ವಿಕೆಟ್‌ ಕಬಳಿಸಿ ಪಂದ್ಯಕ್ಕೆ ರೋಚಕ ತಿರುವ ನೀಡಿದರೆ ಸೈನಿ ಎರಡು ವಿಕೆಟ್‌ ಕೀಳುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ನೆರವಾದರು. ಇದನ್ನೂ ಓದಿ :29 ಎಸೆತದಲ್ಲಿ 50 ರನ್‌ ಚಚ್ಚಿದ ಎಬಿಡಿ

    ತಿರುವು ಸಿಕ್ಕಿದ್ದು ಎಲ್ಲಿ? ನಾಯಕ ಡೇವಿಡ್‌ ವಾರ್ನರ್‌ ಆರಂಭದಲ್ಲೇ 6 ರನ್‌ ಗಳಿಸಿ ಔಟದರೂ ಜಾನಿ ಬೈರ್‌ಸ್ಟೋವ್ ಮತ್ತು ಮನೀಷ್‌ ಪಾಂಡೆ ಎರಡನೇ ವಿಕೆಟಿಗೆ 71 ರನ್‌ಗಳ ಜೊತೆಯಾಟವಾಡಿದರು.

    11.6 ಓವರ್‌ನಲ್ಲಿ ತಂಡದ ಮೊತ್ತ 89 ಆಗಿದ್ದಾಗ 34 ರನ್‌( 33 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದ ಮನೀಷ್‌ ಪಾಂಡೆ ಕ್ಯಾಚ್‌ ನೀಡಿದರೆ ಔಟಾದರೆ 121 ರನ್‌ ಆಗಿದ್ದಾಗ 61 ರನ್‌(43 ಎಸೆತ, 6 ಬೌಂಡರಿ, 2 ಸಿಕ್ಸರ್‌) ಚಚ್ಚಿದ್ದ ಜಾನಿ ಬೈರ್‌ಸ್ಟೋವ್ ಔಟಾದರು. ಇದನ್ನೂ ಓದಿ: ಭಾರತದ ಕ್ರಿಕೆಟ್‌ನಲ್ಲಿ ಪಡಿಕ್ಕಲ್‌ ಅಪರೂಪದ ಸಾಧನೆ

    ಚಹಲ್‌ ಬೈರ್‌ ಸ್ಟೋವ್‌ ಅವರನ್ನು ಬೌಲ್ಡ್‌ ಮಾಡಿದ ಬೆನ್ನಲ್ಲೇ ಬೆನ್ನಲ್ಲೇ ವಿಜಯ್‌ ಶಂಕರ್‌ ಅವರನ್ನು ಶೂನ್ಯಕ್ಕೆ ಬೌಲ್ಡ್‌ ಮಾಡಿದರು. 89 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್‌ 121 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತ್ತು. ಚಹಲ್‌ ಪಂದ್ಯಕ್ಕೆ ರೋಚಕ ತಿರುವು ನೀಡಿದ ಬೆನ್ನಲ್ಲೇ ಪ್ರಿಯಂ ಗಾರ್ಗ್‌ ಬೌಲ್ಡ್‌ ಆದರು. ನಂತರಅಭಿಷೇಕ್‌ ಶರ್ಮಾ ರನೌಟ್‌ ಆದರು. ನಂತರ ಸೈನಿ ರಶೀದ್‌ ಖಾನ್‌ ಮತ್ತು ಭುವನೇಶ್ವರ್‌ ಕುಮಾರ್‌ ಅವರನ್ನು ಬೌಲ್ಡ್‌ ಮಾಡಿದರು. ಈ ಮೂಲಕ ಪಂದ್ಯ ಆರ್‌ಸಿಬಿಯತ್ತ ವಾಲಿತು.

    ಚಹಲ್‌ 4 ಓವರ್‌ ಮಾಡಿ 18 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ದುಬೆ 3 ಓವರ್‌ ಮಾಡಿ 15 ರನ್‌ ನೀಡಿ 2 ವಿಕೆಟ್‌ ಕಿತ್ತರು. ನವ್‌ದೀಪ್‌ ಸೈನಿ 2 ವಿಕೆಟ್‌, ಡೇಲ್‌ ಸ್ಟೇನ್‌ 1 ವಿಕೆಟ್‌ ಕಿತ್ತರು.

  • 29 ಎಸೆತದಲ್ಲಿ 50 ರನ್‌ ಚಚ್ಚಿದ ಎಬಿಡಿ

    29 ಎಸೆತದಲ್ಲಿ 50 ರನ್‌ ಚಚ್ಚಿದ ಎಬಿಡಿ

    ದುಬೈ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಐಪಿಎಲ್‌ ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ. 29 ಎಸೆತದಲ್ಲಿ 50 ರನ್‌ ಸಿಡಿಸಿ ಮತ್ತೆ ನಾನೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್‌ ಎಂಬುದನ್ನು ನಿರೂಪಿಸಿದ್ದಾರೆ.

    30 ಎಸೆತದಲ್ಲಿ 51 ರನ್‌ ಹೊಡೆದ ಎಬಿಡಿ ಕೊನೆಯ ಓವರ್‌ನಲ್ಲಿ ರನೌಟ್‌ ಆದರು. ಈ ಸುಂದರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 2 ಸಿಕ್ಸ್‌ ಚಚ್ಚಿದ್ದರು.

    ಎಬಿಡಿ ಮತ್ತು ಕರ್ನಾಟಕದ ರಣಜಿ ಆಟಗಾರ ದೇವದತ್‌ ಪಡಿಕ್ಕಲ್‌ ಅವರ ಸೊಗಸಾದ ಅರ್ಧಶತಕದಿಂದ ಆರ್‌ಸಿಬಿ ಹೈದರಾಬಾದ್‌ ತಂಡಕ್ಕೆ 164 ರನ್‌ಗಳ ಗುರಿಯನ್ನು ನೀಡಿದೆ. ಇದನ್ನೂ ಓದಿ: ಭಾರತದ ಕ್ರಿಕೆಟ್‌ನಲ್ಲಿ ಪಡಿಕ್ಕಲ್‌ ಅಪರೂಪದ ಸಾಧನೆ

    ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ಪರ ಪಡಿಕ್ಕಲ್‌ ಮತ್ತು ಫಿಂಚ್‌ ಉತ್ತಮ ಆರಂಭ ನೀಡಿದರು. ಇವರಿಬ್ಬರು 67 ಎಸೆತಗಳಲ್ಲಿ 90 ರನ್‌ ಜೊತೆಯಾಟವಾಡಿದರು. ಪಡಿಕ್ಕಲ್‌ ಔಟಾದ ಬೆನ್ನಲ್ಲೇ 29 ರನ್‌(27 ಎಸೆತ, 2 ಬೌಂಡರಿ) ಹೊಡೆದಿದ್ದ ಫಿಂಚ್‌ ಎಲ್‌ಬಿಗೆ ಔಟಾದರು. ಕೊಹ್ಲಿ 13 ಎಸೆತಕ್ಕೆ 14 ರನ್‌ ಹೊಡೆದು ಔಟಾದರು.

    ಶಿವಂ ದುಬೆ 7 ರನ್‌ ಹೊಡೆದು ಔಟಾದರು. ಅಂತಿಮವಾಗಿ ಬೆಂಗಳೂರು ತಂಡ 5 ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿತು.

  • ಭಾರತದ ಕ್ರಿಕೆಟ್‌ನಲ್ಲಿ ಪಡಿಕ್ಕಲ್‌ ಅಪರೂಪದ ಸಾಧನೆ

    ಭಾರತದ ಕ್ರಿಕೆಟ್‌ನಲ್ಲಿ ಪಡಿಕ್ಕಲ್‌ ಅಪರೂಪದ ಸಾಧನೆ

    ದುಬೈ: ತಾನು ಆಡಿದ ಮೊದಲ ಐಪಿಎಲ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಕರ್ನಾಟಕದ ರಣಜಿ ಆಟಗಾರ ದೇವದತ್‌ ಪಡಿಕಲ್‌ ಅಪರೂಪದ ಸಾಧನೆ ನಿರ್ಮಿಸಿದ್ದಾರೆ.

    ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 20 ವರ್ಷದ ಯುವ ಆರ್‌ಸಿಬಿ ಆಟಗಾರ ಪಡಿಕ್ಕಲ್‌ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್‌(42 ಎಸೆತ, 8 ಬೌಂಡರಿ) ಹೊಡೆದು ಔಟಾದರು.

    ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್‌ ಎ, ಟಿ 20, ಐಪಿಎಲ್‌ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಪಡಿಕಲ್‌ 2019-20 ರ ವಿಜಯ್‌ ಹಜಾರೆ ಮತ್ತು ಸೈಯದ್‌ ಮುಸ್ತಾಕ್‌ ಆಲಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಹೊಡೆದಿದ್ದರು.

    ವಿಜಯ್‌ ಹಜಾರೆ ಟ್ರೋಫಿಯಲ್ಲಿ 11 ಇನ್ನಿಂಗ್ಸ್‌ ಆಡಿ 609 ರನ್‌ ಚಚ್ಚಿದ್ದರು. 81.09 ಸ್ಟ್ರೈಕ್‌ ರೇಟ್‌ನಲ್ಲಿ 2 ಶತಕ 5 ಅರ್ಧಶತಕ ಹೊಡೆದಿದ್ದರು.

    ಮುಸ್ತಾಕ್‌ ಆಲಿ ಟ್ರೋಫಿಯಲ್ಲಿ 12 ಇನ್ನಿಂಗ್ಸ್‌ ಗಳಿಂದ 580 ರನ್‌ ಭಾರಿಸಿದ್ದರು. 175.75 ಸ್ಟ್ರೈಕ್‌ ರೇಟ್‌ನಲ್ಲಿ 1 ಶತಕ, 5 ಅರ್ಧಶತಕ ಸಿಡಿಸಿದ್ದರು.

    ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ಪರ ಪಡಿಕ್ಕಲ್‌ ಮತ್ತು ಫಿಂಚ್‌ ಉತ್ತಮ ಆರಂಭ ನೀಡಿದರು. ಇವರಿಬ್ಬರು 67 ಎಸೆತಗಳಲ್ಲಿ 90 ರನ್‌ ಜೊತೆಯಾಟವಾಡಿದರು. ಪಡಿಕ್ಕಲ್‌ ಔಟಾದ ಬೆನ್ನಲ್ಲೇ 29 ರನ್‌(27 ಎಸೆತ, 2 ಬೌಂಡರಿ) ಹೊಡೆದಿದ್ದ ಫಿಂಚ್‌ ಎಲ್‌ಬಿಗೆ ಔಟಾದರು. ಕೊಹ್ಲಿ 13 ಎಸೆತಕ್ಕೆ 14 ರನ್‌ ಹೊಡೆದು ಔಟಾದರು.

  • ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ- ಪಂದ್ಯ ಡ್ರಾ ಆಗೋದು ಖಚಿತ

    ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ- ಪಂದ್ಯ ಡ್ರಾ ಆಗೋದು ಖಚಿತ

    ದೆಹಲಿ: ನಾಕೌಟ್ ಹಂತಕ್ಕೆ ತಲುಪಬೇಕಾದರೆ ಗೆಲುವು ಅನಿವಾರ್ಯ ಆಗಿದ್ದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬ್ಯಾಟಿಂಗ್ ಪಡೆ ಮುಗ್ಗರಿಸಿದೆ. ಇದರ ಹೊರತಾಗಿಯೂ ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಪಡೆದು ಸಮಾಧಾನಗೊಂಡಿದೆ.

    ಮಂದ ಬೆಳಕಿನ ಕಾರಣ ಎರಡು ದಿನ ಪೂರ್ಣ ಓವರ್ ಮಾಡಲು ಸಾಧ್ಯವಾಗಿರಲಿಲ್ಲ. ನೇ ದಿನವಾದ ಬುಧವಾರವೂಪೂರ್ಣ ಓವರ್ ಮಾಡಲು ಸಾಧ್ಯವಾಗಲಿಲ್ಲ. ಎರಡನೇ ದಿನದಾಟಕ್ಕೆ 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿದ್ದ ರೈಲ್ವೇಸ್ ತಂಡ ಇವತ್ತು 22 ರನ್ ಸೇರಿಸಿ ಆಲೌಟ್ ಆಯ್ತು. ಕರ್ನಾಟಕ ಪರ ಪ್ರತೀಕ್ ಜೈನ್ 5 ವಿಕೆಟ್ ಅಭಿಮನ್ಯು ಮಿಥುನ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

    ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಆರಂಭಿಕ ಅಘಾತ ಉಂಟಾಯ್ತು. ಆರ್.ಸಮರ್ಥ ಶೂನ್ಯಕ್ಕೆ ಔಟಾಗಿ ತಂಡವನ್ನ ಸಂಕಷ್ಟಕ್ಕೆ ತಳ್ಳಿದರು. ಆದರೆ ಭರವಸೆಯ ಆಟಗಾರ ದೇವದತ್ತ ಪಡಿಕ್ಕಲ್, ಎಸ್.ಶರತ್ ಹಾಗೂ ಕೆ.ಗೌತಮ್ ಆಟದಿಂದ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಪಡೆಯಿತು. ಪಡಿಕ್ಕಲ್ 55 ರನ್ (75 ಎಸೆತ, 9 ಬೌಂಡರಿ) , ಶರತ್ ಔಟಾಗದೆ 56 ರನ್ (164 ಎಸೆತ, 5 ಬೌಂಡರಿ), ಕೆ.ಗೌತಮ್ 41 ರನ್ (31 ಎಸೆತ, 2 ಬೌಂಡರಿ, 2 ಸಿಕ್ಸರ್) ಗಳಿಸಿ ಕರ್ನಾಟಕಕ್ಕೆ ಆಸರೆಯಾದರು. ರೈಲ್ವೇಸ್ ಪರ ಅಮಿತ್ ಮಿಶ್ರಾ 5 ವಿಕೆಟ್ ಪಡೆದರೆ, ಎಚ್.ಸಂಗ್ವಾನ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

    3ನೇ ದಿನದ ಅಂತ್ಯಕ್ಕೆ ಕರ್ನಾಟಕ ತಂಡ 9 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿ, ಕೇವಲ 17 ರನ್ ಮಾತ್ರ ಮುನ್ನಡೆ ಪಡೆದಿದೆ. ಇನ್ನೊಂದು ದಿನ ಆಟ ಬಾಕಿ ಇದ್ದು, ಪಂದ್ಯ ಡ್ರಾ ಆಗೋದು ನಿಶ್ಚಿತವಾಗಿದೆ. ಒಂದು ವೇಳೆ ಕರ್ನಾಟಕ ಗೆಲ್ಲಬೇಕಾದರೆ ಪವಾಡವೇ ನಡೆಯಬೇಕು. ಒಂದು ವೇಳೆ ಪಂದ್ಯ ಡ್ರಾ ಆದ್ರೆ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ 3 ಅಂಕ ಪಡೆಯಲಿದೆ. ಆದರೆ ನಾಕೌಟ್ ದಾರಿ ಮಾತ್ರ ದುರ್ಗಮವಾಗಲಿದೆ.

    ಸ್ಕೋರ್ ವಿವರ:
    ರೈಲ್ವೇಸ್ ಮೊದಲ ಇನ್ನಿಂಗ್ಸ್ 182 ಆಲೌಟ್
    ಕರ್ನಾಟಕ ಮೊದಲ ಇನ್ನಿಂಗ್ಸ್ 199/9

  • ಸೋಲಿನಿಂದ ಕರ್ನಾಟಕ ಪಾರು- ಹೋರಾಟದೊಂದಿಗೆ ಪಂದ್ಯ ಡ್ರಾ

    ಸೋಲಿನಿಂದ ಕರ್ನಾಟಕ ಪಾರು- ಹೋರಾಟದೊಂದಿಗೆ ಪಂದ್ಯ ಡ್ರಾ

    ರಾಜ್‍ಕೋಟ್: ಸೋಲಿನ ಅಂಚಿನಲ್ಲಿದ್ದ ಕರ್ನಾಟಕ ತಂಡ ಹೋರಾಟದೊಂದಿಗೆ ಸೌರಾಷ್ಟ್ರದ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಕೊನೆಯ ದಿನವಾದ ಇಂದು ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಂಡರು.

    380ರನ್ ಹಿನ್ನಡೆಯೊಂದಿಗೆ 4ನೇ ದಿನ ಪ್ರಾರಂಭಿಸಿದ ಕರ್ನಾಟಕ ಮೊದಲ ವಿಕೆಟ್‍ಗೆ ಸಮರ್ಥ್ ಹಾಗೂ ರೋಹನ್ ಕದಂ ಭರ್ಜರಿ ಬ್ಯಾಟಿಂಗ್‍ನಿಂದ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‍ಗೆ ಇಬ್ಬರು 96 ರನ್ ಸೇರಿಸಿ ಕರ್ನಾಟಕಕ್ಕೆ ಭದ್ರ ಬುನಾದಿ ಹಾಕಿದರು. ರೋಹನ್ ಕದಂ 42ರನ್ (132 ಎಸೆತ, 5 ಬೌಂಡರಿ) ಹೊಡೆದರೆ ಸಮರ್ಥ್ 74 ರನ್ (159 ಎಸೆತ, 10 ಬೌಂಡರಿ) ಸಿಡಿಸಿದರು.

    ಬಳಿಕ ಮೈದಾನಕ್ಕಿಳಿದ ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾದರು. ದೇವದತ್ತ ಔಟಾಗದೆ 53 ರನ್ (133 ಎಸೆತ, 9 ಬೌಂಡರಿ) ಸಿಡಿಸಿದರು. ಉಳಿದಂತೆ ಕೆ.ಸಿದ್ಧಾರ್ಥ್ 19 ರನ್, ಪವನ್ ದೇಶಪಾಂಡೆ 12 ರನ್ ಮತ್ತು ಶ್ರೇಯಸ್ ಗೋಪಾಲ್ 13 ರನ್ ಗಳಿಸಿದರು. ಅಂತಿಮವಾಗಿ ಕರ್ನಾಟಕ ಎರಡನೇ ಇನ್ನಿಂಗ್ಸ್ ನಲ್ಲಿ 89 ಓವರ್‍ಗಳಿಗೆ 4 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಂಡಿತು. ಸೌರಾಷ್ಟ್ರದ ಪರ ಜಡೇಜಾ 2 ವಿಕೆಟ್ ಪಡೆದರು.

    ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಚೇತೇಶ್ವರ ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಸೌರಾಷ್ಟ್ರಕ್ಕೆ 3 ಅಂಕ ಮತ್ತು ಕರ್ನಾಟಕಕ್ಕೆ 1 ಅಂಕ ಲಭಿಸಿದೆ.

    ಸ್ಕೋರ್ ವಿವರ:
    ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 581/7 ಡಿಕ್ಲೇರ್
    ಕರ್ನಾಟಕ ಮೊದಲ ಇನ್ನಿಂಗ್ಸ್ 171 ಆಲೌಟ್
    ಎರಡನೇ ಇನ್ನಿಂಗ್ಸ್ 220/4