Tag: Devdutt Padikkal

  • ಐಪಿಎಲ್‌ನಿಂದ ಪಡಿಕ್ಕಲ್ ಔಟ್ – ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದ ಆರ್‌ಸಿಬಿ

    ಐಪಿಎಲ್‌ನಿಂದ ಪಡಿಕ್ಕಲ್ ಔಟ್ – ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದ ಆರ್‌ಸಿಬಿ

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಶಾಕ್ ಎದುರಾಗಿದೆ. ಸ್ಟಾರ್ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್(Devdutt Padikkal) ಆರೋಗ್ಯ ಸಮಸ್ಯೆಯಿಂದ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ.

    ಪಡಿಕ್ಕಲ್ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿದ್ದು, ಆರ್‌ಸಿಬಿಯ(RCB) ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದೀಗ ಪಡಿಕ್ಕಲ್ ಸ್ಥಾನವನ್ನು ತುಂಬಲು ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್‌ವಾಲ್‌ನನ್ನು(Mayank Agarwal) ತಂಡಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಇದನ್ನೂ ಓದಿ: ಬೀಚ್‌ನಲ್ಲಿ ಸುನಾಮಿ ಎಬ್ಬಿಸಿ, ಪಡ್ಡೆ ಹುಡುಗರಿಗೆ ಗ್ಲಾಮರ್‌ ಟ್ರೀಟ್‌ ಕೊಟ್ಟ ರಮ್ಯಾ!

    ಆರ್‌ಸಿಬಿ ಪರ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಪಡಿಕ್ಕಲ್ 10 ಪಂದ್ಯಗಳಲ್ಲಿ 247ರನ್ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳೂ ಒಳಗೊಂಡಿವೆ. ಹೆಚ್ಚಿನ ಪಂದ್ಯಗಳಲ್ಲಿ ದೇವದತ್ತ್ ಕಳಪೆ ಬ್ಯಾಟಿಂಗ್ ಮೂಲಕ ನಿರಾಶೆ ಮೂಡಿಸಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನು ಜಗತ್ತಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಬೆಳಗಾವಿಯ ಸೊಸೆ!

    ಇನ್ನು ಮಯಾಂಕ್ 2011ರಲ್ಲಿ ಆರ್‌ಸಿಬಿ ಪರ ಆಡುವ ಮೂಲಕ ಐಪಿಎಲ್ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರು ಆರ್‌ಸಿಬಿಯಿಂದ ಹೊರಬಿದ್ದಿದ್ದರು. ಇವರು ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಒಟ್ಟು 127 ಪಂದ್ಯಗಳನ್ನಾಡಿದ್ದಾರೆ.

    ಕಳೆದ ಆವೃತ್ತಿಯಲ್ಲಿ ಸನ್‌ರೈಸ್‌ರ್ಸ್ ಹೈದರಾಬಾದ್(Sunrisers Hyderabad) ಪರ ಇದ್ದ ಮಯಾಂಕ್ ಅಗರ್ವಾಲ್ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಹಾಗಾಗಿ 2025ರ ಐಪಿಎಲ್‌ಗೆ ನಡೆದ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಮಯಾಂಕ್‌ರನ್ನ ಆರ್‌ಸಿಬಿ ಫ್ರಾಂಚೈಸಿಯು 1 ಕೋಟಿ ರೂ.ಗೆ ಖರೀದಿ ಮಾಡಿದೆ. ಇದನ್ನೂ ಓದಿ: ಭಾರತದ ವಿರುದ್ಧವೇ ಪೋಸ್ಟ್ – ಮಲಯಾಳಂ ನಟಿ ವಿರುದ್ಧ ಆಕ್ರೋಶ

    ಸದ್ಯ ಆರ್‌ಸಿಬಿಗೆ ಲೀಗ್ ಸುತ್ತಿನಲ್ಲಿ ಮೂರು ಪಂದ್ಯಗಳು ಬಾಕಿ ಉಳಿದಿವೆ. ಮೇ 9ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಕಾದಾಟಕ್ಕಿಳಿಯಲಿದೆ. ಮೇ 13ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹಾಗೂ ಮೇ 17ರಂದು ಕೆಕೆಆರ್ ವಿರುದ್ಧ ತವರು ಕ್ರೀಡಾಂಗಣದಲ್ಲಿ ಆಡಲಿದೆ.

  • IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

    IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು

    ಬೆಂಗಳೂರು: ಕೊನೆಯ ಓವರ್‌ನಲ್ಲಿ ನೋಬಾಲ್‌ ಯಡವಟ್ಟಿನ ಹೊರತಾಗಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಸಿಎಸ್‌ಕೆ (CSK), ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ವಿರೋಚಿತ ಸೋಲಿಗೆ ತುತ್ತಾಯಿತು. ಆದ್ರೆ ಡೆತ್‌ ಓವರ್‌ನಲ್ಲಿ ಕಂಬ್ಯಾಕ್‌ ಮಾಡಿದ ಆರ್‌ಸಿಬಿ 2 ರನ್‌ಗಳ ರೋಚಕ ಗೆಲುವು ಸಾಧಿಸಿತು.

    ಈ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ನಂ.1 ಸ್ಥಾನಕ್ಕೇರಿದ್ದು, ಪ್ಲೇ ಆಫ್‌ ಹಾದಿ ಬಹುತೇಕ ಖಚಿತಪಡಿಸಿಕೊಂಡಿದೆ. ಜೊತೆಗೆ 16 ವರ್ಷಗಳ ಐಪಿಎಲ್‌ (IPL 2025) ಇತಿಹಾಸದಲ್ಲಿ ಮೊದಲ ಬಾರಿಗೆ ಸತತ 2 ಬಾರಿ ಸಿಎಸ್‌ಕೆ ವಿರುದ್ಧ ಗೆದ್ದು ಬೀಗಿದ ಸಾಧನೆ ಮಾಡಿದೆ.

    214 ರನ್‌ಗಳ ಬೃಹತ್‌ ಚೇಸಿಂಗ್‌ ಆರಂಭಿಸಿದ್ದ ಸಿಎಸ್‌ಕೆ 16 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 171 ರನ್‌ ಕೆಲಹಾಕಿ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ 17ನೇ ಓವರ್‌ನಲ್ಲಿ ಸ್ಪೋಟಕ ಆಟವಾಡುತ್ತಿದ್ದ ಆಯುಷ್‌ ಮಾತ್ರೆ, ದೇವಾಲ್‌ ಬ್ರೇವಿಸ್‌ ವಿಕೆಟ್‌ ಒಪ್ಪಿಸಿದ್ರು. ಇದು ಆರ್‌ಸಿಬಿ ಗೆಲುವಿಗೆ ಬಹುದೊಡ್ಡ ಟರ್ನಿಂಗ್‌ ನೀಡಿತು. ಬ್ರೇವಿಸ್‌ (Dewald Brevis) ಎಲ್‌ಬಿಡಬ್ಲ್ಯೂಗೆ ತುತ್ತಾದರು, ರಿವ್ಯೂ ತೆಗೆದುಕೊಳ್ಳುವಷ್ಟರಲ್ಲಿ ಸಮಯ ಮೀರಿತ್ತು. ಹೀಗಾಗಿ ಅಂಪೈರ್ಸ್‌ ಕಾಲ್‌ ಪ್ರಕಾರ ಔಟ್‌ ತೀರ್ಪು ನೀಡಲಾಯಿತು. ಅಲ್ಲದೇ ಕೊನೆಯ ಓವರ್‌ನ 3ನೇ ಎಸೆತದಲ್ಲಿ ಎಂ.ಎಸ್‌ ಧೋನಿ ಸಹ ಎಲ್‌ಬಿಎಬ್ಲ್ಯೂಗೆ ತುತ್ತಾಗಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಿತು.

    ಆಯುಷ್‌ ಮಾತ್ರೆ 94 ರನ್‌ (48 ಎಸೆತ, 5 ಸಿಕ್ಸರ್‌, 9 ಬೌಂಡರಿ), ಶೈಕ್‌ ರಶೀದ್‌ 14 ರನ್‌, ಸ್ಯಾಮ್‌ ಕರ್ರನ್‌ 5 ರನ್‌, ಜಡೇಜಾ 77 ರನ್‌ (45 ಎಸೆತ, 2 ಸಿಕ್ಸರ್‌, 8 ಬೌಂಡರಿ), ಎಂ.ಎಸ್‌ ಧೋನಿ 12 ರಮ್‌, ಶಿವಂ ದುಬೆ 8 ರನ್‌ ಕೊಡುಗೆ ನೀಡಿದರು.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತ್ತು. ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ಜಾಕೊಬ್ ಬೆಥೆಲ್ ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ರನ್ ವೇಗವೂ ಕಡಿತಗೊಂಡಿತ್ತು. 14 ಓವರ್‌ಗಳಲ್ಲಿ 144 ರನ್ ಗಳಿಸಿದ್ದ ಆರ್‌ಸಿಬಿ 18 ಓವರ್ ಕಳೆದರೂ 160 ರನ್ ಗಡಿ ದಾಟುವಲ್ಲಿ ವಿಫಲವಾಗಿತ್ತು.

    ಇದರಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವುದೂ ಕಷ್ಟವಾಗಿತ್ತು. ಆದ್ರೆ ಕೊನೆಯಲ್ಲಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್ 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್ ಚಚ್ಚಿದರು. ಜೊತೆಗೆ 20ನೇ ಓವರ್‌ನಲ್ಲಿ ಬರೋಬ್ಬರಿ 20 ರನ್ ಚಚ್ಚಿದ ಪರಿಣಾಮ ಆರ್‌ಸಿಬಿ ಸುಲಭವಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಆರ್‌ಸಿಬಿ ಪರ ವಿರಾಟ್ ಕೊಗ್ಲಿ 62 ರನ್ (33 ಎಸೆತ, 5 ಸಿಕ್ಸರ್, 5 ಬೌಂಡರಿ), ಬೆಥೆಲ್ 55 ರನ್ (33 ಎಸೆತ, 2 ಸಿಕ್ಸರ್, 8 ಬೌಂಡರಿ), ರೊಮಾರಿಯೊ ಶೆಫರ್ಡ್ 53 ರನ್ (14 ಎಸೆತ, 6 ಸಿಕ್ಸರ್, 4 ಬೌಂಡರಿ) ಚಚ್ಚಿದರು. ಇನ್ನುಳಿದಂತೆ ದೇವದತ್ ಪಡಿಕಲ್ 17 ರನ್, ರಜತ್ ಪಾಟಿದಾರ್ 11 ರನ್, ಜಿತೇಶ್ ಶರ್ಮಾ 7 ರನ್, ಟಿಮ್ ಡೇವಿಡ್ 2 ರನ್ ಕೊಡುಗೆ ನೀಡಿದರು.

    ಸಿಎಸ್‌ಕೆ ಪರ ಮತೀಶ ಪಥಿರಣ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್, ಸ್ಯಾಮ್ ಕರ್ರನ್ ತಲಾ ಒಂದೊAದು ವಿಕೆಟ್ ಪಡೆದು ಮಿಂಚಿದರು.

  • ಸ್ಫೋಟಕ ಫಿಫ್ಟಿ – ಕನ್ನಡಿಗ ಕೆ.ಎಲ್‌ ರಾಹುಲ್‌ ದಾಖಲೆ ಸರಿಗಟ್ಟಿದ ರೊಮಾರಿಯೊ ಶೆಫರ್ಡ್

    ಸ್ಫೋಟಕ ಫಿಫ್ಟಿ – ಕನ್ನಡಿಗ ಕೆ.ಎಲ್‌ ರಾಹುಲ್‌ ದಾಖಲೆ ಸರಿಗಟ್ಟಿದ ರೊಮಾರಿಯೊ ಶೆಫರ್ಡ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ ರೊಮಾರಿಯೊ ಶೆಫರ್ಡ್‌ (Romario Shepherd) ಕೇವಲ 14 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

    ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮತೀಶ ಪಥಿರಣ ಬೌಲಿಂಗ್‌ಗೆ 20 ರನ್‌ ಚಚ್ಚಿದ ಶೆಫರ್ಡ್‌ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಗೆಕೆ ಪಾತ್ರರಾದರು. ಜೊತೆಗೆ ಈ ಸಾಧನೆ ಮಾಡಿದ ಕನ್ನಡಿಗ ಕೆ.ಎಲ್‌ ರಾಹುಲ್‌, ಪ್ಯಾಟ್‌ ಕಮ್ಮಿನ್ಸ್‌ ಅವರ ದಾಖಲೆಗಳನ್ನೂ ಸರಿಗಟ್ಟಿದರು.

    ವೇಗದ ಫಿಫ್ಟಿ ಬಾರಿಸಿದ ಟಾಪ್‌-5 ಪ್ಲೇಯರ್ಸ್‌
    ಯಶಸ್ವಿ ಜೈಸ್ವಾಲ್‌ – ರಾಜಸ್ಥಾನ್‌ ರಾಯಲ್ಸ್‌ 13 ಎಸೆತ (2023)
    ರೊಮಾರಿಯೊ ಶೆಫರ್ಡ್‌ – ಆರ್‌ಸಿಬಿ – 14 ಎಸೆತ (2025)
    ಕೆ.ಎಲ್‌ ರಾಹಿಲ್‌ – ಪಿಬಿಕೆಎಸ್‌ – 14 ಎಸೆತ (2018)
    ಪ್ಯಾಟ್‌ ಕಮ್ಮಿನ್ಸ್‌ – ಕೆಕೆಆರ್‌ – 14 ಎಸೆತ (2022)
    ಯೂಸೂಫ್‌ ಪಠಾಣ್‌ – ಕೆಕೆಆರ್‌ – 15 ಎಸೆತ (2014)

    ಕೊನೇ 2 ಓವರ್‌ಗಳಲ್ಲಿ 54 ಎನ್‌:
    ಆರ್‌ಸಿಬಿ ಪರ ಮೊದಲ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಮತ್ತು ಜಾಕೊಬ್‌ ಬೆಥೆಲ್‌ ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ರನ್‌ ವೇಗವೂ ಕಡಿತಗೊಂಡಿತ್ತು. 14 ಓವರ್‌ಗಳಲ್ಲಿ 144 ರನ್‌ ಗಳಿಸಿದ್ದ‌ ಆರ್‌ಸಿಬಿ 18 ಓವರ್‌ ಕಳೆದರೂ 160 ರನ್‌ ಗಡಿ ದಾಟುವಲ್ಲಿ ವಿಫಲವಾಗಿತ್ತು. ಇದರಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವುದೂ ಕಷ್ಟವಾಗಿತ್ತು. ಆದ್ರೆ ಕೊನೆಯಲ್ಲಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್‌ 19ನೇ ಓವರ್‌ನಲ್ಲಿ ಖಲೀಲ್‌ ಅಹ್ಮದ್‌ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್‌ ಚಚ್ಚಿದರು. ಜೊತೆಗೆ 20ನೇ ಓವರ್‌ನಲ್ಲಿ ಬರೋಬ್ಬರಿ 20 ರನ್‌ ಚಚ್ಚಿದ ಪರಿಣಾಮ ಆರ್‌ಸಿಬಿ ಸುಲಭವಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಆರ್‌ಸಿಬಿ ಪರ ವಿರಾಟ್‌ ಕೊಗ್ಲಿ 62 ರನ್‌ (33 ಎಸೆತ, 5 ಸಿಕ್ಸರ್‌, 5 ಬೌಂಡರಿ), ಬೆಥೆಲ್‌ 55 ರನ್‌ (33 ಎಸೆತ, 2 ಸಿಕ್ಸರ್‌, 8 ಬೌಂಡರಿ), ರೊಮಾರಿಯೊ ಶೆಫರ್ಡ್‌ 53 ರನ್‌ (14 ಎಸೆತ, 6 ಸಿಕ್ಸರ್, 4 ಬೌಂಡರಿ) ಚಚ್ಚಿದರು. ಇನ್ನುಳಿದಂತೆ ದೇವದತ್‌ ಪಡಿಕಲ್‌ 17 ರನ್‌, ರಜತ್‌ ಪಾಟಿದಾರ್‌ 11 ರನ್‌, ಜಿತೇಶ್‌ ಶರ್ಮಾ 7 ರನ್‌, ಟಿಮ್‌ ಡೇವಿಡ್‌ 2 ರನ್‌ ಕೊಡುಗೆ ನೀಡಿದರು.

  • ಶೆಫರ್ಡ್ ಬೆಂಕಿ ಬ್ಯಾಟಿಂಗ್‌ – ಕೊನೇ 12 ಎಸೆತಗಳಲ್ಲಿ 54 ರನ್‌, ಸಿಎಸ್‌ಕೆ ಗೆಲುವಿಗೆ 214 ರನ್‌ ಗುರಿ ನೀಡಿದ ಆರ್‌ಸಿಬಿ

    ಶೆಫರ್ಡ್ ಬೆಂಕಿ ಬ್ಯಾಟಿಂಗ್‌ – ಕೊನೇ 12 ಎಸೆತಗಳಲ್ಲಿ 54 ರನ್‌, ಸಿಎಸ್‌ಕೆ ಗೆಲುವಿಗೆ 214 ರನ್‌ ಗುರಿ ನೀಡಿದ ಆರ್‌ಸಿಬಿ

    ಬೆಂಗಳೂರು: ರೊಮಾರಿಯೊ ಶೆಫರ್ಡ್ (Romario Shepherd) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 213 ರನ್‌ ಕಲೆಹಾಕಿದ ಆರ್‌ಸಿಬಿ (RCB) ಎದುರಾಳಿ ಸಿಎಸ್‌ಕೆ ಗೆಲುವಿಗೆ 214 ರನ್‌ಗಳ ಗುರಿ ನೀಡಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು. ಮೊದಲ ವಿಕೆಟ್‌ಗೆ ವಿರಾಟ್‌ ಕೊಹ್ಲಿ (Virat Kohli) ಮತ್ತು ಜಾಕೊಬ್‌ ಬೆಥೆಲ್‌ (Jacob Bethell )ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ರನ್‌ ವೇಗವೂ ಕಡಿತಗೊಂಡಿತ್ತು. 14 ಓವರ್‌ಗಳಲ್ಲಿ 144 ರನ್‌ ಗಳಿಸಿದ್ದ‌ ಆರ್‌ಸಿಬಿ 18 ಓವರ್‌ ಕಳೆದರೂ 160 ರನ್‌ ಗಡಿ ದಾಟುವಲ್ಲಿ ವಿಫಲವಾಗಿತ್ತು.

    ಇದರಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವುದೂ ಕಷ್ಟವೆಂದೇ ಭಾವಿಸಲಾಗಿತ್ತು. ಆದ್ರೆ ಕೊನೆಯಲ್ಲಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್‌ 19ನೇ ಓವರ್‌ನಲ್ಲಿ ಖಲೀಲ್‌ ಅಹ್ಮದ್‌ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್‌ ಚಚ್ಚಿದರು. ಜೊತೆಗೆ 20ನೇ ಓವರ್‌ನಲ್ಲಿ ಬರೋಬ್ಬರಿ 20 ರನ್‌ ಚಚ್ಚಿದ ಪರಿಣಾಮ ಆರ್‌ಸಿಬಿ ಸುಲಭವಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಆರ್‌ಸಿಬಿ ಪರ ವಿರಾಟ್‌ ಕೊಗ್ಲಿ 62 ರನ್‌ (33 ಎಸೆತ, 5 ಸಿಕ್ಸರ್‌, 5 ಬೌಂಡರಿ), ಬೆಥೆಲ್‌ 55 ರನ್‌ (33 ಎಸೆತ, 2 ಸಿಕ್ಸರ್‌, 8 ಬೌಂಡರಿ), ರೊಮಾರಿಯೊ ಶೆಫರ್ಡ್‌ 53 ರನ್‌ (14 ಎಸೆತ, 6 ಸಿಕ್ಸರ್, 4 ಬೌಂಡರಿ) ಚಚ್ಚಿದರು. ಇನ್ನುಳಿದಂತೆ ದೇವದತ್‌ ಪಡಿಕಲ್‌ 17 ರನ್‌, ರಜತ್‌ ಪಾಟಿದಾರ್‌ 11 ರನ್‌, ಜಿತೇಶ್‌ ಶರ್ಮಾ 7 ರನ್‌, ಟಿಮ್‌ ಡೇವಿಡ್‌ 2 ರನ್‌ ಕೊಡುಗೆ ನೀಡಿದರು.

    ಸಿಎಸ್‌ಕೆ ಪರ ಮತೀಶ ಪಥಿರಣ 3 ವಿಕೆಟ್‌ ಕಿತ್ತರೆ, ನೂರ್‌ ಅಹ್ಮದ್‌, ಸ್ಯಾಮ್‌ ಕರ್ರನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು,

  • IPL 2025 | ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಸಿಎಸ್‌ಕೆ – ಸ್ಟಾರ್‌ ಬೌಲರನ್ನೇ ಕೈಬಿಟ್ಟ ಆರ್‌ಸಿಬಿ

    IPL 2025 | ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಸಿಎಸ್‌ಕೆ – ಸ್ಟಾರ್‌ ಬೌಲರನ್ನೇ ಕೈಬಿಟ್ಟ ಆರ್‌ಸಿಬಿ

    ಬೆಂಗಳೂರು: ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಮತ್ತು ಸಿಎಸ್‌ಕೆ (RCB vs CSK) ನಡುವಿನ ಹಣಾಹಣಿ ಕೆಲವೇ ಕ್ಷಣಗಳಲ್ಲಿ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ರಾತ್ರಿ 7:30ಕ್ಕೆ ಪಂದ್ಯ ಶುರುವಾಗಲಿದೆ. ಟಾಸ್‌ ಗೆದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದೆ. ಇನ್ನೂ ತವರು ಕ್ರೀಡಾಂಗಣದಲ್ಲಿ 9ನೇ ಬಾರಿಗೆ ಟಾಸ್‌ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಹ್‌ ಮಾಡಲು ಮುಂದಾಗಿದೆ.

    ಇತ್ತ ಬ್ಯಾಟಿಂಗ್‌ ಮಾಡಲು ಸಜ್ಜಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. ಕಳೆದ ಕೆಲ ಪಂದ್ಯಗಳಲ್ಲಿ ತಮ್ಮ ಘಾತುಕ ದಾಳಿಯಿಂದ ಗೆಲುವು ತಂದುಕೊಟ್ಟಿದ್ದ ಜೋಶ್‌ ಹೇಜಲ್ವುಡ್‌ (Josh Hazlewood) ಅವರನ್ನ ಕೈಬಿಟ್ಟಿದೆ. ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿಗೆ (Lungi Ngidi) ಮಣೆ ಹಾಕಿದೆ. ಜೊತೆಗೆ‌ ಅಗ್ರ ಕ್ರಮಾಂದಕ ಬ್ಯಾಟರ್‌ಗಳಲ್ಲಿ ಫಿಲ್‌ ಸಾಲ್ಟ್‌ ಬದಲಿಗೆ ಜಾಕೋಬ್‌ ಬೆಥೆಲ್ (Jacob Bethell) ಅವರನ್ನೇ ಕಣಕ್ಕಿಳಿಸಲಿದೆ.

    ಸಿಎಸ್‌ಕೆ ಪ್ಲೇಯಿಂಗ್‌-11
    ಆಯುಷ್ ಮ್ಹಾತ್ರೆ, ಶೇಖ್‌ ರಶೀದ್, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ದೇವಾಲ್‌ ಬ್ರೇವಿಸ್‌, ದೀಪಕ್ ಹೂಡಾ, ಎಂ.ಎಸ್ ಧೋನಿ (ನಾಯಕ + ವಿಕೆಟ್‌ ಕೀಪರ್‌), ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪಥಿರಣ.

    ಆರ್‌ಸಿಬಿ ಪ್ಲೇಯಿಂಗ್‌-11
    ವಿರಾಟ್ ಕೊಹ್ಲಿ, ಜಾಕೋಬ್‌ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್.

  • ತವರಿನಲ್ಲಿ RCBಗೆ ʻಜೋಶ್‌ʼ ತಂದ ಜಯ – ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಬೆಂಗಳೂರು

    ತವರಿನಲ್ಲಿ RCBಗೆ ʻಜೋಶ್‌ʼ ತಂದ ಜಯ – ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಬೆಂಗಳೂರು

    – ರೋಚಕ ಹಣಾಹಣಿಯಲ್ಲಿ ರಾಜಸ್ಥಾನ್‌ಗೆ ವಿರೋಚಿತ ಸೋಲು

    ಬೆಂಗಳೂರು: ಕಳೆದ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ತನ್ನ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸೋಲಿನ ಮುಖವಾಡ ಕಳಚುವುದರ ಜೊತೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    ಗುರುವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ 11 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಆಡಿರುವ ಒಂಬತ್ತು ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ ಮತ್ತೆ 3ನೇ ಸ್ಥಾನಕ್ಕೇರಿದೆ.

    ಗೆಲುವಿಗೆ 206 ರನ್ ಗಳ ಕಠಿಣ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳು ಮುಗಿದಾಗ 9 ವಿಕೆಟ್ ನಷ್ಟಕ್ಕೆ ಕೇವಲ 194 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ 49 ರನ್‌ ಗಳಿಸುವ ಮೂಲಕ ಸ್ಫೋಟಕ ಆರಂಭ ಒದಗಿಸಿದರೂ ಅದನ್ನು ಕೊನೇವರೆಗೂ ಬೆಳೆಸಿಕೊಂಡು ಹೋಗುವಲ್ಲಿ ರಾಜಸ್ಥಾನ ರಾಯಲ್ಸ್ ಸಂಪೂರ್ಣವಾಗಿ ಎಡವಿತು.

    ಹೇಜಲ್ವುಡ್ 4 ವಿಕೆಟ್
    ಜೋಶ್‌ ಹೇಜಲ್ವುಡ್‌ ತನ್ನ ಪಾಲಿನ ಅಂತಿಮ ಓವರ್‌ನಲ್ಲಿ ಸ್ಫೋಟಕವಾಗಿ ಆಡುತ್ತಿದ್ದ ಧ್ರುವ್ ಜುರೆಲ್ (47) ಅವರು ಆರ್ ಸಿಬಿ ಪಾಳೆಯದಿಂದ ಪಂದ್ಯ ಕಿತ್ತುಕೊಳ್ಳುವ ಸೂಚನೆ ನೀಡಿದರಾದರೂ ಹೇಜಲ್ವುಡ್ ಅದಕ್ಕೆ ಅವಕಾಶ ನೀಡಲಿಲ್ಲ. ಹೇಟ್ಮೇಯರ್ (11), ಶುಭಂ ದುಬೆ (12) ಸೇರಿದಂತೆ ಯಾವ ಬ್ಯಾಟರ್ ಸಹ ಅಗತ್ಯ ಸಂದರ್ಭದಲ್ಲಿ ಆಟವಾಡಲು ವಿಫಲವಾಗಿದ್ದರಿಂದ ಆರ್‌ಸಿಬಿ ಜಯಭೇರಿ ಬಾರಿಸಿತು. ಆರ್ ಸಿಬಿ ಪರ ಹೇಜಲ್ವುಡ್ ಅವರು 33 ರನ್ ಗಳಿಗೆ 4 ವಿಕೆಟ್ ಕಬಳಿಸಿದರು. ಕೃನಾಲ್ ಪಾಂಡ್ಯ 2 ವಿಕೆಟ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ತಲಾ 1 ವಿಕೆಟ್ ಗಳಿಸಿದರು.

    ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಜತ್ ಪಾಟೀದಾರ್ ಬಳಗ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.

    ಕೊಹ್ಲಿ- ಪಡಿಕ್ಕಲ್ ಮಿಂಚಿನಾಟ:
    ಆರ್‌ಸಿಬಿ ಪವರ್‌ ಪ್ಲೇನಲ್ಲಿ ಸ್ಫೋಟಕ ಆರಂಭ ಪಡೆದಿತ್ತು. ಆ ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ದೇವದತ್ ಪಡಿಕ್ಕಲ್ ಅವರು 95 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ತಂಡದ ಮೊತ್ತವನ್ನು 15 ಓವರ್ ಗಳಲ್ಲಿ 150ರ ಗಡಿದಾಟಿಸಿದರು. 16ನೇ ಓವರ್ ನಲ್ಲೇ ಆರ್ಚರ್ ಅವರು ವಿರಾಟ್ ಕೊಹ್ಲಿ ಅವರನ್ನು ಜೋಫ್ರಾ ಆರ್ಚರ್ ಅವರು ಔಟ್ ಮಾಡಿದರು. ವಿರಾಟ್ ಕೊಹ್ಲಿ ಅವರು 42 ಎಸೆತಗಳಲ್ಲಿ 70 ರನ್ ಗಳನ್ನು ಗಳಿಸಿದರು. ಅದರಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದವು. ಮುಂದಿನ ಓವರ್ ನಲ್ಲೇ ಸಂದೀಪ್ ಶರ್ಮಾ ಅವರು ದೇವದತ್ ಪಡಿಕ್ಕಲ್ ಅವರನ್ನು ಪೆವಿಲಿಯನ್ ಗೆ ಅಟ್ಟಿದರು.

    27 ಎಸೆತಗಳಿಂದ 50 ರನ್ ಗಳಿಸಿದ ಅವರ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದವು. ಇದು ದೇವದತ್ ಪಡಿಕ್ಕಲ್ ಅವರ ನಿರಂತರ ಎರಡನೇ ಅರ್ಧಶತಕವಾಗಿದೆ. ಅಂತಿಮ ಹಂತದಲ್ಲಿ ಟಿಂ ಡೇವಿಡ್ (23) ಮತ್ತು ಜಿತೇಶ್ ಶರ್ಮಾ(20) ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ರಾಜಸ್ಥಾನ ರಾಯಲ್ಸ್ ಪರ ಸಂದೀಪ್ ಶರ್ಮಾ 2 ವಿಕೆಟ್ ಗಳಿಸಿದರೆ, ಜೋಫ್ರಾ ಆರ್ಚರ್ ಮತ್ತು ಹಸರಂಗ ತಲಾ ಒಂದು ವಿಕೆಟ್ ಉರುಳಿಸಿದರು. ಮತ್ತೊಂದು ವಿಕೆಟ್ ರನೌಟ್ ರೂಪದಲ್ಲಿ ಬಂತು.

  • ಕೊಹ್ಲಿ, ಪಡಿಕ್ಕಲ್‌ ಮಿಂಚು- ‘ಕಿಂಗ್ಸ್‌’ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ

    ಕೊಹ್ಲಿ, ಪಡಿಕ್ಕಲ್‌ ಮಿಂಚು- ‘ಕಿಂಗ್ಸ್‌’ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ

    – ಆರ್‌ಸಿಬಿಗೆ 7 ವಿಕೆಟ್‌ಗಳ ಜಯ

    ಮೊಹಲಿ: ವಿರಾಟ್‌ ಕೊಹ್ಲಿ (Virat Kohli), ದೇವದತ್‌ ಪಡಿಕ್ಕಲ್‌ ಅಮೋಘ ಡಬಲ್‌ ಫಿಫ್ಟಿ ಆಟಕ್ಕೆ ಪಂಜಾಬ್‌ ಕಿಂಗ್ಸ್‌ (PBKS) ಸೋತು ಶರಣಾಯಿತು. ಕಿಂಗ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ (RCB) ತವರಿನ ಸೋಲಿಗೆ ಸೇಡು ತೀರಿಸಿಕೊಂಡಿದೆ.

    ಮೊಹಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಪಂಜಾಬ್‌ ಮೊದಲು ಬ್ಯಾಟಿಂಗ್‌ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತು. 157 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 18.5 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೇಯಸ್‌ ಪಡೆ ಉತ್ತಮ ಆರಂಭ ಪಡೆದುಕೊಂಡಿತ್ತು. ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ಭರವಸೆ ಮೂಡಿಸಿದ್ದರು. ತಂಡದ ಮೊತ್ತ 42 ರನ್‌ ಇದ್ದಾಗ ಮೊದಲ ವಿಕೆಟ್‌ ಬಿದ್ದಿತು. 22 ರನ್‌ ಗಳಿಸಿ ಆರ್ಯ ಔಟಾದರು. ಇವರ ಬೆನ್ನಲ್ಲೇ ಸಿಂಗ್‌ ಕೂಡ (33) ವಿಕೆಟ್‌ ಒಪ್ಪಿಸಿ ಹೊರ ನಡೆದರು. ಇವರ ಬಳಿಕ ಆರ್‌ಸಿಬಿ ಬೌಲರ್‌ಗಳು ಸಾಲು ಸಾಲು ವಿಕೆಟ್‌ ಉರುಳಿಸಿದರು.

    ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಕೇವಲ 6 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಜೋಶ್‌ ಇಂಗ್ಲಿಸ್‌ 29, ಶಶಾಂಕ್‌ ಸಿಂಗ್‌ 31, ಮಾರ್ಕೊ ಜಾನ್ಸೆನ್‌ 25 ರನ್‌ ಗಳಿಸಿದರು. ಉಳಿದ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಪರಿಣಾಮವಾಗಿ ಪಂಜಾಬ್‌ 157 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಆರ್‌ಸಿಬಿ ಪರ ಕೃಣಾಲ್‌ ಪಾಂಡ್ಯ, ಸುಯಶ್ ಶರ್ಮಾ ತಲಾ 2 ವಿಕೆಟ್‌ ಪಡೆದರು.

    ಪಂಜಾಬ್‌ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಫಾರ್ಮ್‌ನಲ್ಲಿರುವ ಓಪನರ್‌ ಫಿಲ್‌ ಸಾಲ್ಟ್‌ ಕೇವಲ 1 ರನ್‌ಗೆ ಔಟಾಗಿದ್ದು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಯಿತು. ಈ ನಡುವೆ ಜವಾಬ್ದಾರಿಯುತ ಆಟವಾಡಿದ ವಿರಾಟ್‌ ಕೊಹ್ಲಿ ಮತ್ತು ದೇವದತ್‌ ಪಡಿಕ್ಕಲ್‌ ಜೋಡಿ ಕಿಂಗ್ಸ್‌ ಬೌಲರ್‌ಗಳನ್ನು ಬೆಂಡೆತ್ತಿತು. ಪಡಿಕ್ಕಲ್‌ 35 ಬಾಲ್‌ಗೆ 5 ಫೋರ್‌, 4 ಸಿಕ್ಸರ್‌ನೊಂದಿಗೆ 61 ರನ್‌ ಗಳಿಸಿದರು. ಕೊಹ್ಲಿ ಬೌಟಾಗದೇ 54 ಬಾಲ್‌ಗೆ 7 ಫೋರ್‌, 1 ಸಿಕ್ಸರ್‌ನೊಂದಿಗೆ 73 ರನ್‌ ಬಾರಿಸಿದರು. ಈ ಜೋಡಿ 69 ಬಾಲ್‌ಗೆ 103 ರನ್‌ಗಳ ಅಮೋಘ ಜೊತೆಯಾಟವಾಡಿತು.

    ರಜತ್‌ ಪಾಟೀದಾರ್‌ 12, ಜಿತೇಶ್‌ ಶರ್ಮಾ 11 (ಔಟಾಗದೇ) ರನ್‌ ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 18.5 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಗೆಲುವು ದಾಖಲಿಸಿತು.

  • ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    – ಬೆಂಗಳೂರು ಮನೆ, ವಾಪಸ್‌ ಬಂದಿದ್ದಕ್ಕೆ ಖುಷಿ ಇದೆ ಎಂದ ಕನ್ನಡಿಗ

    ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಗುಜರಾತ್‌ ಟೈಟಾನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ನಟ, ರೇಡಿಯೋ ಜಾಕಿ ಡ್ಯಾನಿಷ್‌ ಸೇಟ್‌ ಅವರು ಆರ್‌ಸಿಬಿ ತಂಡದ ಆಟಗಾರ ದೇವದತ್‌ ಪಡಿಕ್ಕಲ್‌ ಸಂದರ್ಶನ ಮಾಡಿದ್ದಾರೆ. ಕನ್ನಡಿಗನಾದ ಪಡಿಕ್ಕಲ್‌ ಕನ್ನಡವನ್ನು ಸೊಗಸಾಗಿ ಮಾತನಾಡಿದ್ದಾರೆ.

    ಆರ್‌ಸಿಬಿ ಇನ್‌ಸೈಡ್‌ ಶೋನಲ್ಲಿ ಪಡಿಕ್ಕಲ್‌ ಅವರನ್ನು ‘ಡಿಡಿಪಿ’ ಎಂದು ಸೇಟ್‌ ಪರಿಚಯಿಸುತ್ತಾರೆ. ಕನ್ನಡದಲ್ಲೇ ಪ್ರಶ್ನೆಗಳನ್ನು ಕೇಳುತ್ತಾರೆ. ‘ಹೇಗಿತ್ತಪ್ಪ ನಾರ್ಥ್‌ ಇಂಡಿಯಾ ಟೂರ್‌’ ಎಂದು ಕೇಳ್ತಾರೆ. ಅದಕ್ಕೆ ಪಡಿಕ್ಕಲ್‌, ‘ತುಂಬಾ ಚೆನ್ನಾಗಿತ್ತು. ಬೆಂಗಳೂರು ನನ್ನ ಮನೆ. ವಾಪಸ್‌ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಕನ್ನಡದಲ್ಲೇ ಹೇಳ್ತಾರೆ.

    ಮೊದಲು ನೀನು ಯೂತ್‌ಫುಲ್‌ ರೀತಿ ಮಾತಾಡ್ತಿದ್ದೆ. ಈಗ ಹರ್ಷ ಬೋಗ್ಲೆ ಥರ ಮಾತಾಡ್ತಿದ್ದೀಯಾ ಅಂತ ಕೇಳಿದಾಗ, ‘ಮತ್ತೆ ಹೆಂಗೆ ಮಾತಾಡ್ಬೇಕು’ ಅಂತ ಕನ್ನಡದಲ್ಲೇ ಪಡಿಕ್ಕಲ್‌ ಮರುಪ್ರಶ್ನೆ ಹಾಕ್ತಾರೆ. ಸ್ವಲ್ಪ ಜಾಲಿ ಆಗಿರು ಎಂದಾಗ, ‘ನಿಮ್‌ ಹತ್ರ ಜಾಲಿಯಾಗಿರೋಕೆ ಸ್ವಲ್ಪ ಕಷ್ಟ ಇದೆ’ ಅಂತ ಪಡಿಕ್ಕಲ್‌ ಉತ್ತರಿಸುತ್ತಾರೆ.

    ಇನ್‌ಸ್ಟಾದಲ್ಲಿ ಕೊರಿಯನ್ಸ್‌ ರೀತಿ ಸ್ಟೈಲ್‌ ಮಾಡ್ತಿದ್ದೀಯಾ ಎಂದು ಕೇಳಿದಾಗ, ‘ಅದೇ ತಾನೆ ಟ್ರೆಂಡ್‌ ಈಗ’ ಎಂದು ಪಡಿಕ್ಕಲ್‌ ಉತ್ತರಿಸುತ್ತಾರೆ.

    ಯುಗಾದಿ, ದೀಪಾವಳಿಗೆ ನಾರ್ಮಲ್‌ ಆಗಿ ವಿಶ್‌ ಮಾಡ್ತೀಯಾ. ಅಂತಾರಾಷ್ಟ್ರೀಯ ವಿಶೇಷ ದಿನಗಳಿಗೆ ವಿಶ್‌ ಮಾಡು ಎಂದಾಗ, ‘ವಿಶ್ವ ಕಪ್‌ ಕೇಕ್‌ ದಿನ.. ವಿಶ್ವ ಶೌಚಾಲಯದ ದಿನ.. ವಿಶ್ವ ಮೊಟ್ಟೆ ದಿನ’ಕ್ಕೆ ಕನ್ನಡದಲ್ಲೇ ವಿಶ್‌ ಮಾಡಿ ಪಡಿಕ್ಕಲ್‌ ಗಮನ ಸೆಳೆದಿದ್ದಾರೆ.

    ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡನ್ನು ಮಾರ್ಪಡಿಸಿ, ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಸೇಟ್‌ ಹಾಡುತ್ತಾರೆ. ಅದಕ್ಕೆ ಹೂಂ ಅಂತೀಯಾ.. ಎಂದು ಪಡಿಕ್ಕಲ್‌ ದನಿಗೂಡಿಸುತ್ತಾರೆ. ಸಂದರ್ಶನವು ಫನ್‌ ಆಗಿ ಸಾಗುತ್ತದೆ.

  • ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಪಂದ್ಯಕ್ಕೆ ಜಡ್ಡು ಇನ್‌ – ಕೆ.ಎಲ್‌ ರಾಹುಲ್‌ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್‌

    ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಪಂದ್ಯಕ್ಕೆ ಜಡ್ಡು ಇನ್‌ – ಕೆ.ಎಲ್‌ ರಾಹುಲ್‌ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್‌

    ರಾಜ್‌ಕೋಟ್‌: ಇದೇ ಫೆ.15ರಿಂದ ಇಂಗ್ಲೆಂಡ್‌ ವಿರುದ್ಧ ಇಲ್ಲಿ ನಡೆಯಲಿರುವ 3ನೇ ಟೆಸ್ಟ್‌ ಪಂದ್ಯದಿಂದ ಟೀಂ ಇಂಡಿಯಾ ಬ್ಯಾಟಿಂಗ್‌ ಪಿಲ್ಲರ್‌ ಕೆ.ಎಲ್‌ ರಾಹುಲ್‌ ಹೊರಗುಳಿದಿದ್ದಾರೆ. ಆದ್ರೆ ಕೆ.ಎಲ್‌ ರಾಹುಲ್‌ (KL Rahul) ಅವರ ಸ್ಥಾನಕ್ಕೆ ಬಿಸಿಸಿಐ (BCCI) ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದೆ.

    ಇಂಗ್ಲೆಂಡ್‌ ವಿರುದ್ಧದ 3ನೇ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲು ಕನ್ನಡಿಗ ಕೆ.ಎಲ್‌ ರಾಹುಲ್‌ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಅವರನ್ನು ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಜಡೇಜಾ ಪಾಲ್ಗೊಳ್ಳುವಿಕೆಗೆ ಬಿಸಿಸಿಐ ಗ್ರೀನ್‌ ಸಿಗ್ನಲ್‌ ನೀಡಿದ್ದು, ಫಿಟ್‌ನೆಸ್‌ ಸಾಬೀತುಪಡಿಸುವಲ್ಲಿ ವಿಫಲರಾದ ಕೆ.ಎಲ್‌ ರಾಹುಲ್‌ ಅವರನ್ನು ಪಂದ್ಯದಿಂದ ಹೊರಗಿಡಲಾಗಿದೆ. ಅಲ್ಲದೇ ಕೆ.ಎಲ್‌ ರಾಹುಲ್‌ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗನನ್ನೇ ಆದ ದೇವದತ್‌ ಪಡಿಕ್ಕಲ್‌ (Devdutt Padikkal) ಅವರಿಗೆ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಔಟ್‌ – ಟೂರ್ನಿಯಿಂದಲೇ ಹೊರಗುಳಿದ ಕೊಹ್ಲಿ

    ಸದ್ಯ ವಿರಾಟ್‌ ಕೊಹ್ಲಿ (Virat Kohli) ಅವರ ಅನುಪಸ್ಥಿತಿಯಿಂದ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್‌ ಬಲದ ಕೊರತೆಯಾಗಿದೆ. ಅನುಭವಿ ಅಗ್ರಕ್ರಮಾಂಕದಲ್ಲಿ ಕೊಹ್ಲಿ ಅವರ ಸ್ಥಾನ ತುಂಬಲು ಕೆ.ಎಲ್‌ ರಾಹುಲ್‌ ಅವರನ್ನು ತಂಡಕ್ಕೆ ಕರೆತರುವ ಉತ್ಸಾಹದಲ್ಲಿ ಬಿಸಿಸಿಐ ಇತ್ತು. ಆದ್ರೆ ಕೆ.ಎಲ್‌ ರಾಹುಲ್‌ ಅವರು ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ವೇಳೆ ಬಲತೋಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಸದ್ಯ ಕೆ.ಎಲ್‌ ರಾಹುಲ್‌ ಅವರು ಸಂಪೂರ್ಣ ಫಿಟ್‌ ಇರುವುದು ಕಂಡುಬಂದಿಲ್ಲ. ಹಾಗಾಗಿ ರಾಹುಲ್‌ ಅವರನ್ನು ಇನ್ನೂ ಒಂದು ವಾರಗಳ ಕಾಲ ಅವರನ್ನು ವೈದ್ಯಕೀಯ ಮೇಲ್ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ರೋಹಿತ್‌, ಗಿಲ್‌ ಅಲ್ಲ; ಟೀಂ ಇಂಡಿಯಾದ ಈ ಆಟಗಾರ ಇಂಗ್ಲೆಂಡ್‌ಗೆ ಸಮಸ್ಯೆ – ಮೈಕೆಲ್‌ ವಾನ್‌

    ಪಡಿಕಲ್‌ಗೆ ಚಾನ್ಸ್‌:
    ಕೆ.ಎಲ್‌ ರಾಹುಲ್‌ ಬದಲಿಗೆ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ. ಸದ್ಯ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ದೇವದತ್‌ ಪಡಿಕಲ್‌ ಕರ್ನಾಟಕದ ಪರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲಿ 193 ರನ್‌ ಗಳಿಸಿ ಮಿಂಚಿದ್ದರು. ಅಲ್ಲದೇ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ನಡೆದ ಎರಡು ಟೆಸ್ಟ್‌ ಪಂದ್ಯದ ಮೂರು ಇನ್ನಿಂಗ್ಸ್‌ಗಳಲ್ಲಿ ಭಾರತ ಎ ತಂಡದ ಪರ ಕ್ರಮವಾಗಿ 105, 65 ಮತ್ತು 21 ರನ್‌ ಗಳಿಸಿದ್ದರು. ಇದನ್ನೂ ಓದಿ: ಮತ್ತೆ ಹೀನಾಯ ಸೋಲು, ಭಾರತದ ವಿಶ್ವಕಪ್‌ ಕನಸು ಭಗ್ನ – 14 ವರ್ಷಗಳ ಬಳಿಕ ಆಸೀಸ್‌ಗೆ U19 ವಿಶ್ವಕಪ್‌ ಕಿರೀಟ!

  • IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    ಶಿಮ್ಲಾ: ಶಿಮ್ರಾನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. ಕೊನೆಯವರೆಗೂ ಹೋರಾಡಿದ ಪಂಜಾಬ್‌ ಕಿಂಗ್ಸ್‌ ಸೋಲಿನೊಂದಿಗೆ ವಿದಾಯ ಹೇಳಿದೆ.

    ಪಂಜಾಬ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.148 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ. ಒಂದು ವೇಳೆ ಭಾನುವಾರದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಸೋತರೇ ರಾಜಸ್ಥಾನ್‌ ರಾಯಲ್ಸ್‌ಗೆ ಪ್ಲೇ ಆಫ್‌ ತಲುಪುವ ಅವಕಾಶ ಸಿಗಲಿದೆ.

    ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಗೆಲುವು ಸಾಧಿಸಿತು.

    ಕೊನೆಯ 4 ಓವರ್‌ಗಳಲ್ಲಿ ರಾಜಸ್ಥಾನ್‌ಗೆ 39 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 6 ರನ್‌, 18ನೇ ಓವರ್‌ನಲ್ಲಿ 14 ರನ್‌ ಹಾಗೂ 19ನೇ ಓವರ್‌ನಲ್ಲಿ 11 ರನ್‌ ಸೇರ್ಪಡೆಯಾಯಿತು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಶಿಮ್ರಾನ್‌ ಹೆಟ್ಮೇಯರ್‌ 28 ಎಸೆತಗಳಲ್ಲಿ ಭರ್ಜರಿ 46 ರನ್‌ (4 ಬೌಂಡರಿ, 3 ಸಿಕ್ಸ್‌) ಚಚ್ಚಿ ಔಟಾದರು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿದ್ದಾಗ. ಮೊದಲ 3 ಎಸೆತಗಳಲ್ಲಿ 4 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ಕ್ರೀಸ್‌ ತೆಗೆದುಕೊಂಡ ಧ್ರುವ್‌ ಜುರೆಲ್‌ ಸಿಕ್ಸ್‌ ಬಾರಿಸುವ ಮೂಲಕ ಜಯ ತಂದುಕೊಟ್ಟರು.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡರೂ 2 ವಿಕೆಟ್‌ಗೆ ಉತ್ತಮ ಆರಂಭ ಪಡೆಯಿತು. 2ನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕಲ್‌ ಹಾಗೂ ಯಶಸ್ವೀ ಜೈಸ್ವಾಲ್‌ ಭರ್ಜರಿ ಅರ್ಧ ಶತಕ ಸಿಡಿಸಿ ಔಟಾದರು.

    ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಈ ಮೂಲಕ 14 ಲೀಗ್‌ ಪಂದ್ಯಗಳಲ್ಲಿ 600 ರನ್‌ ಪೂರೈಸಿದರು. ಪಡಿಕಲ್‌ 30 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಕೊನೆಯ ಪಂದ್ಯದಲ್ಲೂ ನಾಯಕ ಸಂಜು ಸ್ಯಾಮ್ಸನ್‌ ಕೇವಲ 2 ರನ್‌ ಗಳಿಸಿ ನಿರಾಸೆ ಮೂಡಿಸಿದರು. ರಿಯಾನ್‌ ಪರಾಗ್‌ 12 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ 20 ರನ್‌ ಗಳಿಸುವ ಮೂಲಕ ತಂಡಕ್ಕೆ ಇನ್ನಷ್ಟು ರನ್‌ ಕೊಡುಗೆ ನೀಡಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್‌ ಕರ್ರನ್‌, ಜಿತೇಶ್‌ ಶರ್ಮಾ ಹಾಗೂ ಶಾರೂಖ್‌ ಖಾನ್‌ ಬ್ಯಾಟಿಂಗ್‌ ನೆರವಿನಿಂದ 187 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

    ಜಿತೇಶ್‌ ಶರ್ಮಾ 44 ರನ್‌ (28 ಎಸೆತ, 3 ಸಿಕ್ಸ್‌, 3 ಬೌಂಡರಿ) ಗಳಿಸಿದರೆ, ಶಾರೂಖ್‌ ಖಾನ್‌ 41 ರನ್‌ (23 ಎಸೆತ, 2 ಸಿಕ್ಸರ್‌, 4 ಬೌಂಡರಿ), ಸ್ಯಾಮ್‌ ಕರ್ರನ್‌ 49 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸ್‌) ಗಳಿಸಿ ಅಜೇಯರಾಗುಳಿದರು. ನಾಯಕ ಶಿಖರ್‌ ಧವನ್‌ 17 ರನ್‌, ಅಥರ್ವ್‌ ಟೈಡೆ 19 ರನ್‌ ಕೊಡುಗೆ ನೀಡಿದರು.

    ರಾಜಸ್ಥಾನ್‌ ಪರ ನವದೀಪ್‌ ಸೈನಿ 4 ಓವರ್‌ಗಳಲ್ಲಿ 40 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ ಹಾಗೂ ಆಡಂ ಜಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.