ತುಮಕೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ದೇವರಾಜು ಅರಸುರವರ (Devaraj Urs) ದಾಖಲೆ ಸರಿಗಟ್ಟುತ್ತಾರೆ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳುವುದರ ಮೂಲಕ ಸಚಿವ ಕೆಎನ್ ರಾಜಣ್ಣ (KN Rajanna) ಸಿದ್ದರಾಮಯ್ಯರ ಪರ ಬ್ಯಾಟ್ ಬೀಸಿದ್ದಾರೆ.
ತುಮಕೂರಿನ (Tumakuru) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಗೆ ಹೇಗೆ ಯಡಿಯೂರಪ್ಪರು (BS Yediyurappa) ಮುಖ್ಯನೋ, ಜೆಡಿಎಸ್‌ಗೆ ದೇವೇಗೌಡ ಆಂಡ್ ಕಂಪನಿ ಮುಖ್ಯನೋ, ಹಾಗೆನೇ ಸಿದ್ದರಾಮಯ್ಯ ಆಂಡ್ ಕಂಪನಿ ಕಾಂಗ್ರೆಸ್‌ಗೆ ಮುಖ್ಯ ಎಂದು ಹೇಳುವುದರ ಮೂಲಕ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಅನ್ನೋದನ್ನು ರಾಜಣ್ಣ ಹೇಳಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ ಅಂತ ನಾನೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ: ಹೆಚ್‌ಡಿಡಿ
ಇದರ ಜೊತೆಗೆ ದೆಹಲಿ ಭೇಟಿ ವಿಚಾರವನ್ನು ಪ್ರಸ್ತಾಪಿಸಿದ ಕೆಎನ್ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಕೆಲ ಬದಲಾವಣೆ ತರುವಂತೆ ಹೈಕಮಾಂಡ್‌ಗೆ ಸಲಹೆ ನೀಡಿದ್ದೇನೆ. ಆಯಾ ಕ್ಷೇತ್ರದಲ್ಲಿ ಶಾಸಕರು ಯಾವ ಸಮುದಾಯಕ್ಕೆ ಸೇರಿರುತ್ತಾರೋ ಆ ಸಮುದಾಯ ಬಿಟ್ಟು ಬೇರೆ ಸಮುದಾಯಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಸಲಹೆ ನೀಡಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಮಂತ್ರಿಗಿರಿ ತೊರೆಯುತ್ತೇನೆ. ಡಿಕೆಶಿ ಅವರಂತೆ ನನನೂ ಎರಡೆರಡು ಸ್ಥಾನಮಾನ ಕೊಡಿ ಎಂದು ನಾನು ಹೈಕಮಾಂಡ್‌ಗೆ ಕೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ
ಸಿದ್ದರಾಮಯ್ಯರಂತೆ ಅರಸು ಸಹ ಪ್ರಖ್ಯಾತಿ ಪಡೆದ ನಾಯಕ ಎಂದ ಮಾಜಿ ಸಚಿವ
ಬೆಂಗಳೂರು: ಸಿದ್ದರಾಮಯ್ಯನವರೇ (Siddaramaiah) ನೀವು ದೃತಿಗೆಡಬೇಡಿ. ಎಲ್ಲಾ ಮುಖ್ಯಮಂತ್ರಿಗಳ ಮೇಲೂ ಆಪಾದನೆ ಬಂದಿತ್ತು. ದೇವರಾಜು ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಎಲ್ಲರ ಮೇಲೂ ಆರೋಪ ಬಂದಿತ್ತು. ಆಪಾದನೆ ಮಾಡುವುದೇ ಕೆಲವರ ಕೆಲಸ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ (P G R Sindhia) ಹೇಳಿದ್ದಾರೆ.
ಅರಮನೆ ರಸ್ತೆಯ ಸ್ಕೌಟ್ಸ್ & ಗೈಡ್ಸ್ ಸಭಾಂಗಣದಲ್ಲಿ ನಡೆದ ಬರಹಗಾರ ವಿ.ಎಸ್. ಉಗ್ರಪ್ಪ ಅವರ ʻಸಮರ್ಥ ಜನನಾಯಕʼಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯರನ್ನು ಏನು ಮಾಡುವುದಕ್ಕೆ ಆಗುವುದಿಲ್ಲ. ನಿಮ್ಮ ಜೊತೆ ಕಾಂಗ್ರೆಸ್ ಪಕ್ಷ ಇದೆ. ಕಾಂಗ್ರೆಸ್ ನಾಯಕರು, ಅಧ್ಯಕ್ಷರು ಇದ್ದಾರೆ. ಡಿ.ಕೆ.ಶಿವಕುಮಾರ್ (D.K Shivakumar) ಇದ್ದಾರೆ. ಅವರು ನಿಜವಾಗಿಯೂ ಕಲ್ಲು ಬಂಡೆನೇ. ಆ ಕಲ್ಲು ಬಂಡೆ ನಿಮ್ಮ ಜೊತೆಗಿದೆ, ಹೆದರಬೇಡಿ ಎಂದಿದ್ದಾರೆ.
1978 ರಲ್ಲಿ ದೇವರಾಜು ಅರಸು (Devaraj Urs) ಮುಖ್ಯಮಂತ್ರಿ ಆಗಿದ್ದರು. ಅವರು ಸಿದ್ದರಾಮಯ್ಯನವರಂತೆ ಪ್ರಖ್ಯಾತಿ ಪಡೆದ ನಾಯಕರಾಗಿದ್ದರು. ದೇವರಾಜ್ ಅರಸು ಕಾಂಗ್ರೆಸ್‌ನ್ನು ಗೆಲ್ಲಿಸಿದ್ದಷ್ಟೇ ಅಲ್ಲ, ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿದರು. ಇವತ್ತು ಸಿದ್ದರಾಮಯ್ಯ 5 ಗ್ಯಾರಂಟಿ ತಂದಂತೆ ಅವತ್ತು ದೇವರಾಜ ಅರಸು 20 ಅಂಶದ ಕಾರ್ಯಕ್ರಮಗಳನ್ನು ತಂದರು. ಅರಸು ಅವರ ವಿರುದ್ಧ ಅಂದು ಸುಪ್ರಿಂ ಕೋರ್ಟ್ ನ್ಯಾಯಮೂತಿಗಳ ಮೂಲಕ ತನಿಖೆ ನಡೆಸಿ ಅವರನ್ನು ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದ್ದರು. ಆದರೂ ಜನ ಅವರನ್ನ ಕೈ ಬಿಡಲಿಲ್ಲ. ಇದು ಈಗಿನ ಬೆಳವಣಿಗೆಗೂ ಸಾಮ್ಯತೆ ಇದೆ. ಅಂದು ಕಾಂಗ್ರೆಸ್ ನಾಯಕರೆ ಅರಸು ವಿರುದ್ಧ ಹೈ ಕಮಾಂಡ್ ನಾಯಕರಿಗೆ ದೂರು ನೀಡುತ್ತಿದ್ದರು ಎಂದಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಅದೇನು ಮಾತಕತೆ ಒಪ್ಪಂದ ಆಗಿದೆಯೋ ಗೊತ್ತಿಲ್ಲ. ಆಗಿದ್ದರೆ ಅದರಂತೆ ನೀವು ನಡೆದುಕೊಳ್ಳಿ ಅದು ನಿಮಗೆ ಬಿಟ್ಟಿದ್ದು. ಆದರೆ ನಿಮ್ಮ ರಾಜೀನಾಮೆ ಕೇಳುವ ಇವರೆಲ್ಲಾ ಯಾರು? ಗಾಜಿನಮನೆಯಲ್ಲಿ ಕುಳಿತು ಕಲ್ಲು ಹೊಡೆಯುವವರು. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಏನು ಕಾಮೆಂಟ್ ಮಾಡ್ತಾರೆ ಥೂ. ಸಿದ್ದರಾಮಯ್ಯನವರೆ ಧೈರ್ಯವಾಗಿ ಮುನ್ನುಗ್ಗಿ ನೀವು ತಪ್ಪು ಮಾಡಿಲ್ಲ. ನೀವು ಡಿ.ಕೆ.ಶಿವಕುಮಾರ್ ಅವರನ್ನು ಬೆಳೆಸಬೇಕು. ಅವರಿಗೆ ಇನ್ನೂ 25 ವರ್ಷದ ರಾಜಕಾರಣ ಇದೆ. ಸಿದ್ದರಾಮಯ್ಯನವರು ಮನಸ್ಸು ಮಾಡಬೇಕು ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಜಸ್ಟಿಸ್ ನಾಗಮೋಹನ್ ದಾಸ್, ಸಾಹಿತಿ ಬರಗೂರು ರಾಮಚಂದ್ರಪ್ಪ ಉಪಸ್ಥಿತಿ ಇದ್ದರು.
ವಿಧಾನಸೌಧದಲ್ಲಿ ನಡೆದ ದೇವರಾಜ್ ಅರಸ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ್ ಅರಸ್ ಸಾಮಾಜಿಕ ನ್ಯಾಯದ ಪರ ಇದ್ದವರು. ಬಡವರು, ದಲಿತರು, ರೈತರು, ಮಹಿಳೆಯರ ಪರ ಇದ್ದವರು. ಅವರ ಕೊಡುಗೆ ಅಪಾರವಾದದ್ದು. ಹೀಗಾಗಿ ದೇವರಾಜ್ ಅರಸ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಅಂತ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.
ಇದಲ್ಲದೆ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ್ ಅರಸ್ ಎಲೆಕ್ಟ್ರಾನಿಕ್ ಸಿಟಿ (Devaraj Urs Electronic City) ಅಂತ ನಾಮಕರಣ ಮಾಡಲು ಪ್ರಕ್ರಿಯೆ ಶುರು ಮಾಡಲಾಗಿದೆ. ಆದಷ್ಟು ಬೇಗ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ್ ಅರಸ್ ಹೆಸರು ಇಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ನವೆಂಬರ್ 1ಕ್ಕೆ ವಿಧಾನಸೌಧದಲ್ಲಿ ನಿರ್ಮಾಣ ಆಗುತ್ತಿರುವ ಭುವನೇಶ್ವರಿ ಪ್ರತಿಮೆಯನ್ನು ಉದ್ಘಾಟನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.ಇದನ್ನೂ ಓದಿ: ಶತಮಾನ ಕಂಡ ಸರ್ಕಾರಿ ಶಾಲೆ ಕಿಡಿಗೇಡಿಗಳಿಂದ ಧ್ವಂಸ
ಬಾಗಲಕೋಟೆ: INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ (BJP) ಹೆದರಿದೆ, ಎರಡು ಮಾತಿಲ್ಲ. ನಾನು ಸಹ ಮೊದಮೊದಲು ಮೋದಿಯವರನ್ನು (Narendra Modi) ಅಭಿಮಾನಿಸುತ್ತಿದ್ದೆ. ಇಂದು ಮೋದಿಯವರು ಕೆಳಗಿಳಿಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ (JDS) ಮೈತ್ರಿ ಆಯ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಬಾಗಲಕೋಟೆಯಲ್ಲಿ (Bagalkote) ಅವರು ಪ್ರತಿಕ್ರಿಯಿಸಿದರು. ಬಿಜೆಪಿಯವರು ಎಲ್ಲಿಯಾದರೂ ಈ ದೇಶದ ಜನರ ಅಕ್ಷರ, ಆರೋಗ್ಯ, ಅನ್ನ, ನಮ್ಮ ಉದ್ಯೋಗದ ಬಗ್ಗೆ ಏನಾದರೂ ಮಾತನಾಡಿದ್ದಾರಾ? ಏನೂ ಮಾತನಾಡುತ್ತಿಲ್ಲ. ಬಿಜೆಪಿಯವರು ಭೂತ ಕಾಲದಲ್ಲಿದ್ದಾರೆ ಎಂದು ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದರು. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ
1,200 ವರ್ಷಗಳ ಹಿಂದೆ ಇಲ್ಲಿ ರಾಮ ಇದ್ದ ಎನ್ನುವುದು ಯಾರಿಗೆ ಬೇಕು? ರಾಮ ಬೇಕು ನಿಜ. ಆದರೆ ಭೂತಕಾಲದ ಚರ್ಚೆ ಬಿಟ್ಟು ವರ್ತಮಾನಕ್ಕೆ ಬನ್ನಿ. ವರ್ತಮಾನಕ್ಕೆ ಬಂದು ಚರ್ಚೆ ಮಾಡಿ ಭವಿಷ್ಯವನ್ನು ಕಟ್ಟುವುದಾಗಬೇಕೆ ಹೊರತು, ಬರೀ ನೀವು ಭೂತಕಾಲದಲ್ಲೇ ಓಡಾಡುತ್ತಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ
ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ದೇವರಾಜ ಅರಸು (D. Devaraj Urs) ಜೊತೆ ಹೋಲಿಕೆ ಮಾಡಿಕೊಳ್ಳುತ್ತಾರೆ ಎಂಬ ಬಿಕೆ ಹರಿಪ್ರಸಾದ್ (B.K.Hariprasad) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹರಿಪ್ರಸಾದ್ ಕಾಮೆಂಟನ್ನು ನಾವು ಯಾರು ಒಪ್ಪಿಕೊಳ್ಳುವುದಿಲ್ಲ. ದೇವರಾಜ ಅರಸು ಕಾರಲ್ಲಿ ಕೂತುಕೊಂಡರೆ ಏನು? ದೇವರಾಜ ಅರಸು ಅವರದ್ದು ಸರ್ಕಾರಿ ಕಾರು. ಸರ್ಕಾರ ಕೊಟ್ಟ ಕಾರನ್ನು ದೇವರಾಜ ಅರಸು ಅವರು ಮತ್ತೆ ಸರ್ಕಾರಕ್ಕೆ ವಾಪಸ್ ಕೊಟ್ಟರು. ಅದರಲ್ಲಿ ಸರ್ಕಾರದ ಮುಖ್ಯಮಂತ್ರಿ ಕೂರುವುದರಲ್ಲಿ ತಪ್ಪೇನಿದೆ ಎಂದರು. ಇದನ್ನೂ ಓದಿ: ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ
ನಾನು ಸಂಗೊಳ್ಳಿ ರಾಯಣ್ಣ ಅವರನ್ನು ಆರಾಧನೆ ಮಾಡುತ್ತೇನೆ. ಹಾಗಂತ ನಾನು ಸಂಗೊಳ್ಳಿ ರಾಯಣ್ಣ ಆಗೋದಕ್ಕೆ ಆಗುತ್ತಾ? ಸಿದ್ದರಾಮಯ್ಯ ಸಹ ದೇವರಾಜ ಅರಸು ಅವರನ್ನು ಆರಾಧನೆ ಮಾಡುತ್ತಾರೆ. ಅದನ್ನು ಬಿಟ್ಟರೆ ನಾನೇ ದೇವರಾಜ ಅರಸು ಅಂತ ಎಲ್ಲಿ ಹೇಳಿದ್ದಾರೆ? ಇದೆಲ್ಲಾ ಅನವಶ್ಯಕ. ಹರಿಪ್ರಸಾದ್ ಅವರಿಗೆ ನಾನು ವಿನಂತಿ ಮಾಡುತ್ತೇನೆ. ನಿಜ ನಿಮ್ಮನ್ನು ಮಂತ್ರಿ ಮಾಡಬೇಕಿತ್ತು ಅನ್ನುತ್ತೀರಿ. ಆದರೆ ಅದು ನಮಗೆ ಸಂಬಂಧವಿಲ್ಲ. ಇಂದು ಈಡಿಗ ಸಮಾಜಕ್ಕೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾತಿನಿಧ್ಯ ಕೊಟ್ಟಿದ್ದಾರೆ. ಬಂಗಾರಪ್ಪ ಅವರ ಮಗನೇ ಶಿಕ್ಷಣ ಮಂತ್ರಿಯಾಗಿದ್ದಾನೆ. ಹಾಗಾಗಿ ಕೊಟ್ಟೇ ಇಲ್ಲ ಅಂತಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್; 500 ಹೆಚ್ಚುವರಿ ಬಸ್ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧಾರ
ನಿಮ್ಮ ಧ್ವನಿ ಯಾವ ತರಹ ಹೋಗುತ್ತಿದೆ ಅಂದರೆ ನಮ್ಮ ಸಮುದಾಯಕ್ಕೆ ಸಂಪುಟದಲ್ಲಿ ಆಧ್ಯತೆ ಕೊಟ್ಟಿಲ್ಲ ಅಂತ ಹೋಗ್ತಿದೆ. ಕಾಂಗ್ರೆಸ್ ಈಡಿಗ ಸಮುದಾಯಕ್ಕೆ ಕೊಟ್ಟಷ್ಟು ಪ್ರಾತಿನಿಧ್ಯ ಯಾವ ಪಕ್ಷವೂ ಕೊಟ್ಟಿಲ್ಲ. ಬಂಗಾರಪ್ಪ ಸಿಎಂ ಆಗಿದ್ದರು. ಹಿಂದೆ ಯಾವುದೇ ಸಂಪುಟವಿರಲಿ, ಮೂರು-ನಾಲ್ಕು ಜನ ಮಂತ್ರಿ ಇರುತ್ತಿದ್ದರು. ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದರು, ಮಂತ್ರಿಯೂ ಆಗಿದ್ದರು. ಹೌದು ದೇವರಾಜ ಅರಸು ಅವರ ಒಂದು ಕಾಲವಿತ್ತು. ಆ ಕಾಲ ವಾಪಸ್ ಬರಲ್ಲ. ನಾವು ಅದನ್ನೇ ಹೇಳುತ್ತಾ ಕೂತರೆ ಆಗಲ್ಲ. ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು. ಅದಕ್ಕೆ ತಾನೇ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ನಾನು 40 ವರ್ಷ ಕಾಂಗ್ರೆಸ್‌ನಲ್ಲಿದ್ದು, ಜೆಡಿಎಸ್‌ಗೆ ಹೋಗಿ, ಬಿಜೆಪಿ ಹೋಗಿ ಬಂದಿದ್ದೇನೆ. ಇದಕ್ಕೆ ಹಲವಾರು ಕಾರಣಗಳಿವೆ. ಇದು ನನ್ನ ಪೊಲಿಟಿಕಲ್ ಜರ್ನಿ ಎಂದರು. ಇದನ್ನೂ ಓದಿ: ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ, ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು: ಎನ್‌ವೈ ಗೋಪಾಲಕೃಷ್ಣ
ಬೆಂಗಳೂರು: ಮಾಜಿ ಸಿಎಂ ದಿವಂಗತ ದೇವರಾಜ ಅರಸು (Devaraj Urs) ಅವರ 108ನೇ ಜನ್ಮದಿನದ ಹಿನ್ನೆಲೆ ಅರಸು ಅವರ ಭಾವಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಮಾಲಾರ್ಪಣೆ ಮಾಡಿದ್ದಾರೆ. ಬಳಿಕ ಮಾಜಿ ಸಿಎಂ ಅವರ ನೆಚ್ಚಿನ ಬೆಂಝ್ ಕಾರಿನಲ್ಲಿ (Benz Car) ಸವಾರಿ ಮಾಡಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ಅರಸು ಅವರ ಪ್ರತಿಮೆ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅರಸು ಅವರು ಬಳಸುತ್ತಿದ್ದ ಕಪ್ಪು ಬಣ್ಣದ ಬೆಂಝ್ ಕಾರಿನಲ್ಲಿ ಸಿಎಂ ಸಿದ್ದರಾಮಯ್ಯ ರೌಂಡ್ಸ್ ಹೊಡೆದಿದ್ದಾರೆ.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ದೇವರಾಜ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್ ಆಗುತ್ತೆ – ಕೋಡಿಮಠ ಶ್ರೀಗಳ ಭವಿಷ್ಯ
ಉಡುಪಿ: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು (D. Devaraj Urs) ಜನ್ಮದಿನ ಆಗಸ್ಟ್ 20ರಂದು ನಡೆಯಲಿದೆ. ಬಿಜೆಪಿ ಸರ್ಕಾರ ಇದ್ದಾಗ ಮೂರು ದಿನಗಳ ಕಾಲ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ದೇವರಾಜ ಅರಸು ಉತ್ಸವ ಆರಂಭ ಮಾಡಿತ್ತು. ಸಿದ್ದರಾಮಯ್ಯ (Siddaramaiah) ಸರ್ಕಾರ ಈ ಪರಿಪಾಠ ಕೈಬಿಟ್ಟಿದೆ. ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದುಕು ಬರಹ ಸಾಮಾಜಿಕ ನ್ಯಾಯ ವಿಚಾರವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿತ್ತು. ಹಾಸ್ಟೆಲ್ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಮಾಡಿಸಿದ್ದೆವು, ವಿಚಾರ ಸಂಕೀರ್ಣವನ್ನು ಮಾಡಿದ್ದೆವು. ರಾಜ್ಯ ಮಟ್ಟದ ಪ್ರಶಸ್ತಿ ನೀಡಿದ್ದೆವು, ಅರಸು ಆದರ್ಶ ಪಾಲಿಸಿದವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿದ್ದೆವು. ಸಿದ್ದರಾಮಯ್ಯ ಹಿಂದುಳಿದವರ ಕಾಳಜಿ ಬಗ್ಗೆ ಮಾತನಾಡುತ್ತಾರೆ. ಈ ಸರ್ಕಾರ ಕೂಡ ಮೂರು ದಿನಗಳ ಉತ್ಸವ ಮಾಡಬೇಕೆಂದು ಸಿದ್ದರಾಮಯ್ಯಗೆ ಪತ್ರ ಬರೆದಿದ್ದೆ. ದುರಾದೃಷ್ಟವಶಾತ್ ಮುಖ್ಯಮಂತ್ರಿ ಕಚೇರಿಯಿಂದ ಹಿಂಬರಹ ಬಿಟ್ಟರೆ ಬೇರೇನೂ ಪ್ರತಿಕ್ರಿಯೆ ಬಂದಿಲ್ಲ. ಹಿಂದಿನ ಸರ್ಕಾರ ಮಾಡಿದ ಅರಸು ಉತ್ಸವ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮೂರು ದಿನಗಳ ಆಚರಣೆಗೆ ಯಾವ ದೊಡ್ಡ ಮೊತ್ತದ ಅವಶ್ಯಕತೆ ಇಲ್ಲ. ಆಯಾ ಜಿಲ್ಲೆಗಳಲ್ಲಿರುವ ಅನುದಾನ ಬಳಸಿಕೊಂಡು ಮಾಡಬಹುದು. ಯಾವುದೇ ವಿಶೇಷ ಅನುದಾನದ ಸಮಸ್ಯೆ ಆಗುವುದಿಲ್ಲ. ಆದರೆ ಇಚ್ಛಾಶಕ್ತಿ ಬೇಕು ಅಷ್ಟೇ. ಸಿದ್ದರಾಮಯ್ಯನವರೇ ಇಚ್ಛಾಶಕ್ತಿ ಪ್ರದರ್ಶಿಸಿ ಎಂದು ಕೋಟಾ ಕಿವಿ ಹಿಂಡಿದ್ದಾರೆ.
ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಆಗಿದ್ದ ದಿವಂಗತ ದೇವರಾಜ ಅರಸು ಅವರ ಸಮಸ್ಮರಣೆಯ ನೆನಪಿನ ಕಾರ್ಯಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸುತ್ತಾ? ಒಂದು ಸರ್ಕಾರಿ ಕಾರ್ಯಕ್ರಮದ ರೀತಿ ಆಚರಿಸುತ್ತಾ ಎಂಬ ಪ್ರಶ್ನೆ ಇದೆ.