Tag: Devaraj Arasu

  • ಸಿದ್ದರಾಮಯ್ಯ ಹರಕೆಯ ಕುರಿ, ಕಾಂಗ್ರೆಸ್‍ಗೆ ದಮ್ಮಿದ್ರೆ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ: ಶ್ರೀರಾಮುಲು ಸವಾಲು

    ಸಿದ್ದರಾಮಯ್ಯ ಹರಕೆಯ ಕುರಿ, ಕಾಂಗ್ರೆಸ್‍ಗೆ ದಮ್ಮಿದ್ರೆ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ: ಶ್ರೀರಾಮುಲು ಸವಾಲು

    ರಾಯಚೂರು: ಸಿದ್ದರಾಮಯ್ಯ (Siddaramaiah) ಹರಕೆಯ ಕುರಿಯಾಗಿದ್ದಾರೆ. ಅವರು ಹರಕೆಯ ಕುರಿಯಾಗಬಾರದು. ಕಾಂಗ್ರೆಸ್‍ಗೆ (Congress) ದಮ್, ತಾಕತ್ ಇದ್ರೆ ಸಿದ್ದರಾಮಯ್ಯ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಸಾರಿಗೆ ಸಚಿವ ಶ್ರೀರಾಮುಲು (Sriramulu) ಸವಾಲು ಹಾಕಿದ್ದಾರೆ.

    ರಾಯಚೂರಿನ (Raichuru) ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijaya sankalpa yatre) ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇವರಾಜ ಅರಸು (Devaraj Arasu), ನಿಜಲಿಂಗಪ್ಪ (Nijalingappa), ವೀರೇಂದ್ರ ಪಾಟೀಲ್, ಬಂಗಾರಪ್ಪ (Bangarappa) ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಂಡರೋ, ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ನಡೆಸಿಕೊಳ್ಳುತ್ತಿದೆ. ಆ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದು ಎಂದಿದ್ದಾರೆ. ಇದನ್ನೂ ಓದಿ: ಶಾಸಕ ಹಂಚಿದ ಕುಕ್ಕರ್ ಅಸಲಿ ಮುಖ ತೆರೆದಿಟ್ಟ ಶೃಂಗೇರಿಯ ಮತದಾರರು

    ಕಾಂಗ್ರೆಸ್‍ನಲ್ಲಿ ಒಗ್ಗಟ್ಟಿಲ್ಲ, ಒಳ ಜಗಳಗಳು ಪ್ರಾರಂಭವಾಗಿ ಮನೆಯೊಂದು ಮೂರು ಬಾಗಿಲಾಗಿದೆ ಎಂದು ವ್ಯಂಗ್ಯಮಾಡಿದ್ದಾರೆ.

    ನಾನು ಉಪ ಮುಖ್ಯಮಂತ್ರಿ ಸ್ಥಾನ ಕೇಳವ ಕಾಲ ಹೋಗಿದೆ. ಈಗ ಪ್ರಮೋಷನ್ ಆಗಿ ಸಿಎಂ ಸ್ಥಾನ ಕೇಳುವ ಸಮಯ ಬಂದಿದೆ. ಪಕ್ಷ ಮುಂದೆ ನನ್ನನ್ನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಬಹುದು ಎಂದು ಸಿಎಂ ಬಯಕೆಯನ್ನು ತೆರೆದಿಟ್ಟಿದ್ದಾರೆ.

    ಬಿಎಂಟಿಸಿ (BMTC) ಬಸ್‍ನಲ್ಲಿ ಕಂಡಕ್ಟರ್ ಸಜೀವ ದಹನ ವಿಚಾರವಾಗಿ, ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶ ಮಾಡಿದ್ದೇನೆ. ಕುಟುಂಬದವರಿಗೆ ಉದ್ಯೋಗ ನೀಡಲು ಆದೇಶಿಸಿಸಲಾಗಿದೆ. ಇನ್ಸೂರೆನ್ಸ್ ಬಗ್ಗೆಯೂ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ, ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇವೆ. 10% ವೇತನ ಹೆಚ್ಚಳಕ್ಕೆ ನಾವು ಒಪ್ಪಿದ್ದೇವೆ. ಆದರೆ ನೌಕರರು ಒಪ್ಪುತ್ತಿಲ್ಲ ಎಂದಿದ್ದಾರೆ.

    ಜನಾರ್ದನ ರೆಡ್ಡಿಗೆ (Janardhana Reddy) ಸಿಬಿಐ (CBI) ಸಮನ್ಸ್ (Summons) ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸಾಮಾನ್ಯ ಪ್ರಕ್ರಿಯೆ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿಗರ (BJP) ಮೇಲೂ ದಾಳಿಯಾಗಿವೆ. ಕಾನೂನು ಚೌಕಟ್ಟಿನಲ್ಲಿ ಸಿಬಿಐ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ: ಸುಮಲತಾ

  • ಕರ್ನಾಟಕ ಕಟ್ಟುವಲ್ಲಿ ದಿ.ದೇವರಾಜ ಅರಸು ಪಾತ್ರ ಹಿರಿದು: ಬೊಮ್ಮಾಯಿ

    ಕರ್ನಾಟಕ ಕಟ್ಟುವಲ್ಲಿ ದಿ.ದೇವರಾಜ ಅರಸು ಪಾತ್ರ ಹಿರಿದು: ಬೊಮ್ಮಾಯಿ

    ಬೆಂಗಳೂರು: ಕರ್ನಾಟಕದ ನಾಮಕರಣದಿಂದ ಹಿಡಿದು ಕರ್ನಾಟಕ ಕಟ್ಟುವಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಪಾತ್ರ ಹಿರಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

    ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕನ್ನಡ ನಾಡು ಕಂಡಂಥ ಧೀಮಂತ ನಾಯಕರು, ಜನಪರ, ಹಿಂದುಳಿದ ಮತ್ತು ರೈತಪರ ಮುಖ್ಯಮಂತ್ರಿ ದೇವರಾಜ ಅರಸು. ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವಿದು. ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ. ಹಿಂದುಳಿದ ವರ್ಗಗಳ ಏಳಿಗೆಗಾಗಿ, ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಕೆಲಸ ಮಾಡಬೇಕು. ವಿಶೇಷವಾಗಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವ ಸಂಕಲ್ಪವನ್ನು ಮಾಡುವ ದಿನ ಇದು ಎಂದು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: 48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

    ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ನಮ್ಮೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಕರ್ನಾಟಕದಲ್ಲಿ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ. ಅವರ ಹೆಜ್ಜೆ ಗುರುತುಗಳು ಕರ್ನಾಟಕದ ಭೂಮಿಯಲ್ಲಿ ಶಾಶ್ವತವಾಗಿದೆ. ಅವರ ಹೆಸರಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವರ ವಿಚಾರಧಾರೆಗಳು ಪಕ್ಷಾತೀತವಾಗಿ, ಸರ್ವ ಸಮ್ಮತವಾಗಿ ಒಪ್ಪುವಂಥ ನಾಯಕರು ಎಂದು ನುಡಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ನಾಯಕರಿಂದ ಕೋವಿಡ್ ನಿಯಮ ಉಲ್ಲಂಘನೆ – ದೂರು ದಾಖಲು

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

  • ಒಳ್ಳೆಯ ಆಡಳಿತ ನೀಡಿದ್ರೆ ಯಾಕೆ 78ಕ್ಕೆ ಇಳಿಯಿತು – ಸಿದ್ದು ವಿರುದ್ಧ ಮತ್ತೆ ವಿಶ್ವನಾಥ್ ಗರಂ

    ಒಳ್ಳೆಯ ಆಡಳಿತ ನೀಡಿದ್ರೆ ಯಾಕೆ 78ಕ್ಕೆ ಇಳಿಯಿತು – ಸಿದ್ದು ವಿರುದ್ಧ ಮತ್ತೆ ವಿಶ್ವನಾಥ್ ಗರಂ

    ಮೈಸೂರು: ಕಾಂಗ್ರೆಸ್ ತನ್ನ ಅವಧಿಯಲ್ಲಿ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಇದ್ದ ಸಂಖ್ಯಾಬಲ ಈ ಬಾರಿಯ ಚುನಾವಣೆಯಲ್ಲಿ ಏಕೆ 78ಕ್ಕೆ ಇಳಿಯಿತು ಎಂದು ಪ್ರಶ್ನೆ ಮಾಡುವ ಮೂಲಕ ಮತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕೆಲ ಕಾಂಗ್ರೆಸ್ ನಾಯಕರು ಚಮಚಾ ಗಿರಿ ಮಾಡುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ 5 ವರ್ಷ ತನ್ನ ಆಡಳಿತದಲ್ಲಿ ಏನ್ ಮಾಡಿದ್ದಾರೆ? ಒಳ್ಳೆಯ ಆಡಳಿತ ನೀಡಿದ ದೇವರಾಜ ಅರಸು ಅವರನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಅವರ ರೀತಿಯಲ್ಲಿ ಆಡಳಿತ ನಡೆಸಿದ್ದಾರ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ತನ್ನ ಅವಧಿಯಲ್ಲಿ ಆಡಳಿತ ಚೆನ್ನಾಗಿತ್ತು, ಐದು ವರ್ಷ ಪೂರೈಸಿದ ಸಿಎಂ ನಾನು ಎಂದು ಹೇಳುತ್ತಾರೆ. ಆಗದರೆ 130 ಇದ್ದ ಸಂಖ್ಯಾಬಲ 78ಕ್ಕೆ ಏಕೆ ಇಳಿಯಿತು? ಒಳ್ಳೆಯ ಅಡಳಿತ ನೀಡಿದ ಕಾಂಗ್ರೆಸ್ ಪಕ್ಷ ಏಕೆ ಅಧಿಕಾರ ಕಳೆದುಕೊಂಡಿತು. ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳುತ್ತಾರೆ ಎಂದರು.

    ಇದೇ ವೇಳೆ ಸ್ಥಳೀಯ ಚುನಾವಣೆಯ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರು, ಸ್ಥಳೀಯ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಸ್ಥಳೀಯ ಜೆಡಿಎಸ್ ನಾಯಕರಿಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

    ಸಿಎಂ ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ವಿಧಾನಸೌದದ ಬಾಗಿಲು ಹಾಕಿಕೊಂಡು ಬಂದಿದ್ದಾರಾ?. ಮಂತ್ರಿಗಳಿದ್ದಾರೆ, ಅಧಿಕಾರಿಗಳಿದ್ದಾರೆ ಕಾಲ ಕಾಲಕ್ಕೆ ಸಿಎಂ ಸಲಹೆ ಸೂಚನೆ ಸಭೆ ಮಾಡುತ್ತಿದ್ದಾರೆ. ಆಡಳಿತ ಚೆನ್ನಾಗಿ ನಡೆಯುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿ ಎಲ್ಲೂ ಶೂನ್ಯ ವಾತಾವರಣ ಕ್ರಿಯೇಟ್ ಆಗಿಲ್ಲ. ಅವರಿಗೆ ಎಲ್ಲಿ ಮನಸ್ಸಿಗೆ ಸಮಾಧಾನ ಸಿಗುತ್ತದೆಯೋ ಅಲ್ಲಿಗೆ ಹೋಗೋದು ಕಾಮನ್ ಎಂದು ಸಮರ್ಥಿಸಿಕೊಂಡರು.

  • ಬಿಜೆಪಿಯವರು ಜನರಿಗೆ ಹೀಗೆ ಮೋಸ ಮಾಡ್ತಾಯಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಬಿಜೆಪಿಯವರು ಜನರಿಗೆ ಹೀಗೆ ಮೋಸ ಮಾಡ್ತಾಯಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ನಾವು ಮಾಡಿದ ಕಾರ್ಯಕ್ರಮಗಳಿಗೆ ಬಿಜೆಪಿಯಿಂದ ಹೊಸ ಹೆಸರು. ಇದು ಬಿಜೆಪಿಯವರಿಂದ ಜನರಿಗೆ ಆಗ್ತಿರುವ ಮೋಸ. ಇವರಿಗೆ 40 ತಿಂಗಳಲ್ಲಿ ಒಂದು ಸಣ್ಣ ರೈಲು ನಡೆಸುವುದಕ್ಕಾಗಲ್ಲ. ಇವರ ಅವಧಿಯಲ್ಲಿ 27 ರೈಲು ದುರಂತಗಳು ಜರುಗಿವೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ನಗರದಲ್ಲಿ ಕೆಪಿಸಿಸಿ, ಒಬಿಸಿ ಘಟಕದ ವತಿಯಿಂದ ಪುರಭವನದಲ್ಲಿ ಮಾಜಿ ಸಿಎಂ ದಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬುಲೆಟ್ ರೈಲು ತರುತ್ತವೆ ಅಂತಿದ್ದಾರೆ. ಮೊದಲು ರೈಲ್ವೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ. ಅದು ಬುಲೆಟ್ ಟ್ರೈನ್ ತರ್ತಿರೋದು  ಕಾರ್ಪೋರೇಟ್  ಕುಳಗಳಿಗಾಗಿ ಜನರಿಗಾಗಿಯಲ್ಲ ಎಂದರು.

    500 ಕಿ.ಮೀ ಬುಲೆಟ್ ಟ್ರೈನ್ 1 ಲಕ್ಷ ಕೋಟಿ ರೂ. ಖರ್ಚು ಮಾಡ್ತಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್‍ಗೂ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಕ್ಲಬ್‍ಗಳಿಗೆ ಬಿಜೆಪಿಯವರು ಯಾಕೆ ವಿರೋಧಿಸ್ತಿಲ್ಲ. ಅದು ಸರ್ಕಾರಿ ಜಾಗದಲ್ಲಿ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ ಎಂದು ಹೇಳಿದರು.

    ಬಿಜೆಪಿಯವ್ರು ಮೀಸಲಾತಿಯನ್ನ ರದ್ದು ಮಾಡಲು ಯೋಚಿಸ್ತಿದ್ದಾರೆ. ಮೋದಿ ಅವರಿಗೆ ಅಧಿಕಾರ ಕೊಟ್ರೆ ಡಿಕ್ಟೇಟರ್ ಶಿಪ್ ಬರುತ್ತೆ. ಮೋದಿ ಆಡಳಿತದಿಂದ ಪ್ರಜಾಪ್ರಭುತ್ವ ಬರಲ್ಲ. ಯುವಜನ ಇದನ್ನು ಮನಗಾಣಬೇಕು. ಈ ದೇಶದ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಆದರೆ ಈ ದೇಶ ಉಳಿಯಬೇಕಾದರೆ ಕಾಂಗ್ರೆಸ್ ಆಡಳಿತ ಬರಬೇಕು. ಗೋರಕ್ಷಣೆ ಹೆಸರಲ್ಲಿ ಗೋರಕ್ಷಕರು ಅಮಾಯಕರ ಪ್ರಾಣ ತೆಗೆಯುತ್ತಿದ್ದಾರೆ. ಹಾಲು ಕೊಂಡೊಯ್ಯುವರ ಮೇಲೂ ಗೋರಕ್ಷಕರಿಂದ ಹಲ್ಲೆ ಆಗ್ತಿದೆ. ಹಿಂದೂಸ್ತಾನವಾಗಿಯೇ ಉಳಿಸಿ ಹಿಂಸೆಯ ಸ್ಥಾನ ಮಾಡಬೇಡಿ ಎಂದರು.

    ರಾಜೀವ್ ಗಾಂಧಿ ಯುವ ಸಮೂಹಕ್ಕೆ ರಾಜಕೀಯದಲ್ಲಿ ಅವಕಾಶ ಕೊಡಬೇಕೆಂದು ಅವರ ಬಯಕೆಯಾಗಿತ್ತು. ಅದಕ್ಕಾಗಿ ಅವರು 18 ವರ್ಷಕ್ಕೆ ಮತದಾನಕ್ಕೆ ಅವಕಾಶ ಕೊಟ್ರು. ಹಾಗೆ ಅಧಿಕಾರ ವಿಕೇಂದ್ರಿಕರಣಕ್ಕೆ ಸಹ ಅವಕಾಶ ಮಾಡಿಕೊಟ್ಟಿದ್ದಾರೆ. ಮೊಬೈಲ್, ಕಂಪ್ಯೂಟರ್ ಪರಿಚಯ ಮಾಡಿದಾಗ ತುಂಬಾ ಜನ ವಿರೋಧಿಸಿದರು. ಆದರೆ ಅವತ್ತು ಟೀಕೆ ಮಾಡಿದವರೇ ಇವತ್ತು ನಾಲ್ಕು ನಾಲ್ಕು ಮೊಬೈಲ್ ಇಟ್ಕೊಂಡಿದ್ದಾರೆ ಎಂದು ಹೇಳಿದರು.

    ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸಾಧಕರಿಗೆ ಅರಸು ಗೌರವ ಪುರಸ್ಕಾರವನ್ನು ನೀಡಲಾಯಿತು. ಸಾಹಿತಿ ಚನ್ನಣ್ಣ ವಾಲೀಕಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ ವಾಡ್ ಮತ್ತು ವೇದಾ ಕೃಷ್ಣಮೂರ್ತಿಗೆ ಗೌರವ ಪುರಸ್ಕಾರ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಸಂಸದರಾದ ಮುನಿಯಪ್ಪ, ಸಚಿವ ಕೆ ಜೆ ಜಾರ್ಜ್, ಎಂಎಲ್‍ಸಿ ಬೋಸ್ ಇದ್ದರು.

  • ಬಿಜೆಪಿಯವರು ಮೀಸಲಾತಿಯ ವಿರೋಧಿಗಳು: ಸಿದ್ದರಾಮಯ್ಯ

    ಬಿಜೆಪಿಯವರು ಮೀಸಲಾತಿಯ ವಿರೋಧಿಗಳು: ಸಿದ್ದರಾಮಯ್ಯ

    ಬೆಂಗಳೂರು: ಬಿಜೆಪಿಯವರು ಮೀಸಲಾತಿಯ ವಿರೋಧಿಗಳು. ಮಂಡಲ್ ಕಮೀಷನ್ ವಿರೋಧಿಗಳು. ಸಂವಿಧಾನದ 74ನೇ ತಿದ್ದುಪಡಿ ವಿರೋಧಿಗಳು. ದಲಿತರು ಮನೆಗೆ ಹೋಗಿ ಹೋಟೆಲ್ ಊಟ ಮಾಡ್ತಾರೆ. ದಲಿತರ ಹೆಣ್ಣು ಮಕ್ಕಳು ಮದುವೆಯಾಗಿ ಅಂತ ಹೇಳಿದ ಕೂಡಲೇ ದಲಿತರ ಮನೆಗೆ ಹೋಗುವುದೇ ಬಿಟ್ಟರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಕೆಪಿಸಿಸಿ, ಒಬಿಸಿ ಘಟಕದ ವತಿಯಿಂದ ಪುರಭವನದಲ್ಲಿ ಮಾಜಿ ಸಿಎಂ ದಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವಗ9ಗಳ ಆಯೋಗ ಮಾಡಬೇಕು ಅಂತ ಸುಪ್ರೀಂ ಕೋಟ್9 ಹೇಳಿತ್ತು. ಆದರೆ ರಾಜ್ಯದ ಆಯೋಗಗಳ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ಬಿಜೆಪಿ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಖಂಡಿಸಬೇಕು ಎಂದರು.

    ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಸಮುದಾಯವನ್ನು ಸೇರಿಸಬೇಕೆಂಬ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರಬೇಕು. ಆದರೆ ಈಗ ಕೇಂದ್ರ ಕೇಂದ್ರ ಸರ್ಕಾರ ಈ ಅಧಿಕಾರವನ್ನೇ ಕಿತ್ತುಕೊಳ್ಳಲು ಹೊರಟಿದೆ. ಇದನ್ನೇ ನಾವು ವಿರೋಧಿಸುತ್ತಿರುವುದು. ಆದರೆ ಅಮಿತ್ ಶಾ ಅವರು ನಾವು ಮೀಸಲಾತಿ ವಿರೋಧಿಗಳು ಅಂತ ಹೇಳಿದ್ದಾರೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಬಿಲ್ ತರುವುದಕ್ಕೆ ಬಿಜೆಪಿ ಹೊರಟಿದೆ. ಆ ಮೂಲಕ ಬಿಜೆಪಿಯಿಂದ ಆಯೋಗದ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ನಡೀತಿದೆ ಎಂದರು.

    ಈಶ್ವರಪ್ಪ ಹಿಂದುಳಿದ ವರ್ಗಗಳಿಗೆ ರಾಯಣ್ಣ ಬ್ರಿಗೇಡ್ ಅಂತ ಮಾಡಿದರು. ಆದರೆ ಹಿಂದುಳಿದ ವರ್ಗಗಳಿಗೆ ಈಶ್ವರಪ್ಪ ಏನೂ ಮಾಡಲಿಲ್ಲ. ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಮಾಜಿ ರಾಜ್ಯಪಾಲರಾದ ನ್ಯಾ.ರಾಮಾಜೋಯಿಸ್ ಸುಪ್ರೀಂ ಕೋರ್ಟಿನಲ್ಲಿ ಮೀಸಲಾತಿ ಬೇಡ ಅಂತ ಅರ್ಜಿ ಹಾಕಿದ್ದು ಬಿಜೆಪಿಯವರಿಗೆ ರಾಜಗುರು ಇದ್ದ ಹಾಗೆ. ಆದರೆ ಅದೃಷ್ಟವಶಾತ್ ರಾಮಜೋಯಿಸ್ ಅರ್ಜಿ ಕೋರ್ಟಿನಲ್ಲಿ ತಿರಸ್ಕೃತವಾಯಿತು. ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ತುಂಬಾ ಅನ್ಯಾಯವಾಗತ್ತಿತ್ತು. ಬಿಜೆಪಿಯವರಿಗೆ ಹಿಂದುಳಿದ ವರ್ಗಗಳ ಹೆಸರು ಹೇಳುವ ನೈತಿಕತೆ ಇಲ್ಲ. ಹಿಂದುಳಿದ ವರ್ಗಗಳು ಬಿಜೆಪಿ ಕಡೆಗೆ ತಲೆ ಹಾಕಿಯೂ ಮಲಗಬಾರದು ಎಂದು ಹೇಳಿದರು.

    ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸಾಧಕರಿಗೆ ಅರಸು ಗೌರವ ಪುರಸ್ಕಾರವನ್ನು ನೀಡಲಾಯಿತು. ಸಾಹಿತಿ ಚನ್ನಣ್ಣ ವಾಲೀಕಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ ವಾಡ್ ಮತ್ತು ವೇದಾ ಕೃಷ್ಣಮೂರ್ತಿಗೆ ಗೌರವ ಪುರಸ್ಕಾರ ನೀಡಿದರು. ಈ ವೇಳೆ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಸಂಸದರಾದ ಮುನಿಯಪ್ಪ, ಸಚಿವ ಕೆ ಜೆ ಜಾರ್ಜ್, ಎಂಎಲ್‍ಸಿ ಬೋಸ್ ಇದ್ದರು.