Tag: Devanur Mahadeva

  • ಕಾಂಗ್ರೆಸ್‍ಗೆ ಆಳಾಗಿ ಬರೆಯುವವರಿಗೆ RSS ಆಳ ಅಗಲ ತಿಳಿಯುವುದಿಲ್ಲ: ಪ್ರತಾಪ್ ಸಿಂಹ

    ಕಾಂಗ್ರೆಸ್‍ಗೆ ಆಳಾಗಿ ಬರೆಯುವವರಿಗೆ RSS ಆಳ ಅಗಲ ತಿಳಿಯುವುದಿಲ್ಲ: ಪ್ರತಾಪ್ ಸಿಂಹ

    ಮೈಸೂರು: ಕಾಂಗ್ರೆಸ್‍ಗೆ ಆಳಾಗಿ ಬರೆಯುವವರಿಗೆ ಆರ್‌ಎಸ್‍ಎಸ್‍ನ ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

    ಆರ್‌ಎಸ್‍ಎಸ್ ಆಳ ಮತ್ತು ಅಗಲ ದೇವನೂರು ಮಹಾದೇವ ಕೃತಿ ರಚನೆ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಕಾಂಗ್ರೆಸ್‍ಗೆ ಆಳಾಗಿ ಬರೆಯುವವರಿಗೆ ಆರ್‌ಎಸ್‍ಎಸ್‍ನ ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಂದು ಪಕ್ಷದ ಆಳಾಗಿ ಬರೆದಿದ್ದಾರೆ. ಕುಸುಮ ಬಾಲೆ ನಂತರ ದೇವನೂರು ಮಹಾದೇವ ಅವರಲ್ಲಿ ಒಂದಷ್ಟು ಸೃಜನ ಶೀಲತೆ ಉಳಿದುಕೊಂಡಿದೆ ಎಂದು ಕೊಂಡಿದ್ದೆ. ಆದರೆ ಆರ್‌ಎಸ್‍ಎಸ್ ಆಳ ಅಗಲ ಪುಸ್ತಕ ಬರೆಯಲು ಹೋಗಿ ಅವರ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:  ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ

    ಚತುವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ. ಒಂದು ಧರ್ಮ, ಒಬ್ಬ ನಾಟಕ, ಒಂದು ದೇಶವನ್ನ ಆರ್‌ಎಸ್‌ಎಸ್‌ ಪ್ರತಿಪಾದಿಸುತ್ತಿದೆ ಎಂದು ಬರೆದಿದ್ದಾರೆ. ಆದರೆ ಒಬ್ಬ ವ್ಯಕ್ತಿ ಒಂದು ಪುಸ್ತಕ ಒಂದು ದೇಶದಿಂದ ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ದೇವನೂರು ಮಹಾದೇವ ಯಾಕೆ ಮಾತನಾಡಲ್ಲ? ಚತುವರ್ಣ ಪದ್ಧತಿ ನಾವು ಬಿಟ್ಟು ಎಷ್ಟೋ ವರ್ಷವಾಗಿವೆ. ಕ್ರಿಶ್ಚಿಯನ್, ಇಸ್ಲಾಂ ಧರ್ಮದಲ್ಲೂ ಚತುವರ್ಣ ಪದ್ಧತಿ ಇದೆ. ಕ್ರಿಶ್ಚಿಯನ್ ಧರ್ಮದಲ್ಲೂ ಕ್ಯಾಥೋಲಿಕ್ ಪ್ರೊಟೆಸ್ಟೆಂಟ್, ನಿಗ್ರೋ ಮುಂತಾದ ಪಂಥಗಳಿವೆ ಎಂದಿದ್ದಾರೆ.

    ಇಸ್ಲಾಂ ಧರ್ಮದಲ್ಲೂ ಸುನ್ನಿ, ಸಿಯಾ, ಪಠಾಣ್, ಮೊಗಲ್ ಜಾತಿಗಳಿವೆ. ಚತುವರ್ಣ ವಿರೋಧಿಸುವುದಾದರೆ ಎಲ್ಲಾ ಧರ್ಮಗಳ ಬಗ್ಗೆಯೂ ಮಾತನಾಡಿ. ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ. ಬ್ಯಾಂಕ್‍ಗಳ ಸಾಲ ರೈಟ್ ಆಫ್ ಬಗ್ಗೆ ಏನೇನೋ ಬರೆದಿದ್ದಾರೆ. ಇದೆಲ್ಲವನ್ನ ಗಮನಿಸಿದರೆ, ಒಬ್ಬ ಕಾಂಗ್ರೆಸ್‍ನ ಕಾರ್ಯಕರ್ತ ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತನಾಗಿ ಬರೆದು ಸಿದ್ದರಾಮಯ್ಯ ದೇವನೂರು ಮಹದೇವ ಜೊತೆ ಮಾತನಾಡಿ ಅವರ ಹೆಸರನ್ನು ಹಾಕಿಸಿದ್ದಾರೆ. ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

    ಹಕ್ಕುಸ್ವಾಮ್ಯವಿಲ್ಲದ ಆರ್‌ಎಸ್‍ಎಸ್ (RSS) ಆಳ ಮತ್ತು ಅಗಲ ಹೆಸರಿನ ಕೃತಿಯನ್ನು ಸಾಹಿತಿ ದೇವನೂರು ಮಹಾದೇವ ರಚಿಸಿದ್ದು, ಆರ್‌ಎಸ್‍ಎಸ್‍ನ ಗೋಲ್ವಾಲ್ಕರ್, ಹೆಡ್ಲವಾ ಚಿಂತನ ಗಂಗಾ ಸಾವರ್ಕರ್ ಭಾಷಣಗಳು ಜೊತೆಗೆ ಮನುಷ್ಯ ವಿರೋಧಿ ಮನಸ್ಮೃತಿ ಮತ್ತು ಭಗವದ್ಗೀತೆಗಳಲ್ಲಿ ದೇಶದ ಕುರಿತು ಹಿಂದುತ್ವದ ಕುರಿತು ಏನೇನೆಲ್ಲಾ ಹೇಳಲಾಗಿದೆ ಎಂಬುವುದನ್ನು ತಿಳಿಸಲಾಗಿದೆ.

    ಇವುಗಳಲ್ಲಿ ಯಾವುದನ್ನು ಆರ್‌ಎಸ್‍ಎಸ್ ತನ್ನ ಸಿದ್ಧಾಂತದಲ್ಲಿ ಅಳವಡಿಸಿಕೊಂಡು ಭಾರತದಲ್ಲಿ ಕೆಲಸ ಮಾಡುತ್ತಿದೆ. ಈ ಸಿದ್ಧಾಂತದಿಂದ ಬಹುತ್ವ ಭಾರತಕ್ಕೆ ಮತ್ತು ನಾವೆಲ್ಲ ಒಪ್ಪಿ ಬದುಕುತ್ತಿರುವ ಭಾರತದ ಸಂವಿಧಾನದ ಆಶಯಗಳಿಗೆ ಹೇಗೆ ಧಕ್ಕೆಯುಂಟಾಗುತ್ತದೆ ಎಂಬುದರ ಬಗ್ಗೆ ಬರೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು: ದೇವನೂರು

    ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು: ದೇವನೂರು

    ಮೈಸೂರು: ಧರ್ಮದ ಮುಖವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ. ಜನ ಸಮುದಾಯದ ವಿವೇಕ ಕಡಿಮೆಯಾಗುತ್ತಿದೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹಲಾಲ್ ವಿವಾದದ ಕುರಿತು ಪ್ರಶ್ನಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಸಾಹಿತಿ, ಕಾನೂನು ಹಾಗೂ ಸುವ್ಯವಸ್ಥೆ ಇದೆ ಎಂದಾದರೆ ಸರ್ಕಾರ ಇಂತಹ ವಿಚಾರವಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದೇಶದ ಮೊದಲ ಹಸಿರು ಸಂಚಾರಿ ಪಥ ಕಾಮಗಾರಿ: ಜಗದೀಶ್ ಶೆಟ್ಟರ್

    ಸರ್ಕಾರ ಜನ ಸಮುದಾಯವನ್ನು ಒಡೆದು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ವಿರೋಧ ಪಕ್ಷಗಳು ಇದನ್ನೆಲ್ಲಾ ನೋಡಿಕೊಂಡು ಮಂಕಾಗಿ ಕೂತಿದೆ. ಮಾಂಸವನ್ನು ಹಾಗೆ ಕತ್ತರಿಸಬೇಕು ಹೀಗೆ ಕತ್ತರಿಸಬೇಕು ಎಂದು ಹೇಳಲು ಅವರು ಯಾರು ಎಂದು ಮಾಂಸ ತಿನ್ನುವವರೇ ಪ್ರಶ್ನಿಸಿದ್ದಾರೆ. ಮಾಂಸವನ್ನು ಕತ್ತರಿಸುವ ರೀತಿಯಲ್ಲೂ ಮಾನವೀಯತೆ ಇದೆ ಎನ್ನುತ್ತಾರೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬರುತ್ತೆ? ಎಂದು ದೇಮ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ