Tag: Devanand Chavan

  • ಎಂ.ಬಿ ಪಾಟೀಲ್ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಜೆಡಿಎಸ್ ಶಾಸಕ

    ಎಂ.ಬಿ ಪಾಟೀಲ್ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಜೆಡಿಎಸ್ ಶಾಸಕ

    ವಿಜಯಪುರ: ರಾಜ್ಯ ಸರ್ಕಾರದ ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಪ್ರತಿಮೆ ನಿರ್ಮಾಣ ಮಾಡಲು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ್ ಮುಂದಾಗಿದ್ದಾರೆ.

    ಈ ವಿಚಾರದ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಎಂ.ಬಿ ಪಾಟೀಲ್ ಅವರ ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿರುವದಾಗಿ ತಿಳಿಸಿದರು.

    ಹಾಲಿ ಗೃಹ ಮಂತ್ರಿ ಆಗಿರುವ ಎಂ.ಬಿ ಪಾಟೀಲ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾಗ ನಮ್ಮ ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜೆಡಿಎಸ್ ವರಿಷ್ಠ ದೇವೆಗೌಡರಂತೆ ಅವರು ಕೂಡ ಜಿಲ್ಲೆಯ ಜನರಿಗೆ ನೀರಿನ ಕೊಡುಗೆ ನೀಡಿದ್ದಾರೆ. ಆದ ಕಾರಣ ವೈಯಕ್ತಿಕವಾಗಿ ಸೇರಿದಂತೆ ಸಾರ್ಜನಿಕರ ಸಹಯೋಗದಲ್ಲಿ ಪ್ರತಿಮೆ ಪ್ರತಿಷ್ಠಪನೆಗೆ ನಿರ್ಧರಿಸಿರುವುದಾಗಿ ಶಾಸಕ ದೇವಾನಂದ್ ಚವ್ಹಾಣ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

    ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರು ನಮ್ಮ ಜಿಲ್ಲೆಗೆ ನೀರಿನ ವ್ಯವಸ್ಥೆ ಮಾಡಿಕೊಂಡುವಂತೆ ಎಂ.ಬಿ ಪಾಟೀಲ್ ಅವರಿಗೆ ಮನವಿ ಮಾಡಿದ್ದರು. ಅದರಂತೆ ನಮ್ಮ ಜಿಲ್ಲೆಗೆ ಪಾಟೀಲ್ ಅವರು ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅದಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಈ ಪ್ರತಿಮೆ ಮಾಡಿಸಲಿದ್ದೇವೆ ಎಂದು ಹೇಳಿದರು

  • ನಿರ್ಗತಿಕನಾಗಿದ್ದಾಗ ಕುಮಾರಣ್ಣ ಅವಕಾಶ ಕೊಟ್ಟು ಬೆಳೆಸಿದ್ರು: ದೇವಾನಂದ್ ಚವ್ಹಾಣ್

    ನಿರ್ಗತಿಕನಾಗಿದ್ದಾಗ ಕುಮಾರಣ್ಣ ಅವಕಾಶ ಕೊಟ್ಟು ಬೆಳೆಸಿದ್ರು: ದೇವಾನಂದ್ ಚವ್ಹಾಣ್

    ವಿಜಯಪುರ: ಜೆಡಿಎಸ್ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಸೇರುವ ಪ್ರಶ್ನೆಯೇ ಇಲ್ಲ ಎಂದು ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ್ ಚವ್ಹಾಣ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾನು ನಿರ್ಗತಿಕನಾಗಿದ್ದಾಗ ಸಿಎಂ ಕುಮಾರಸ್ವಾಮಿ ಅವರು ನನಗೆ ಅವಕಾಶ ಕೊಟ್ಟು ಬೆಳೆಸಿದ್ದಾರೆ. ನನ್ನನ್ನು ಮನೆ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ನಾನು ಜೆಡಿಎಸ್‍ನ ಕಟ್ಟಾ ಕಾರ್ಯಕರ್ತ, ಪಕ್ಷ ಬಿಡುವ ವಿಚಾರ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

    ಬೆಂಗಳೂರಿನಿಂದ ವಿಜಯಪುರಕ್ಕೆ ಇಂದು ಬರುತ್ತಿದ್ದಂತೆ ಎಲ್ಲರೂ ನನಗೆ ಬಿಜೆಪಿ ಸೇರುತ್ತೀರಾ ಅಂತ ಕೇಳಿದರು. ಆಗ ನನಗೆ ಆಶ್ಚರ್ಯವಾಯಿತು. ಸಿಎಂ ಕುಮಾರಸ್ವಾಮಿ, ಪಕ್ಷದ ಮುಖಂಡ ಬಸವರಾಜ ಹೊರಟ್ಟಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಜೊತೆಗೆ ಸರ್ಕಾರದ ಬಗ್ಗೆ ಚರ್ಚೆ ಮಾಡಿ ಬಂದಿದ್ದೇನೆ. ಸರ್ಕಾರ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತೆ. ಕುಮಾರಸ್ವಾಮಿ ಅವರೇ ಸಿಎಂ ಆಗಿರುತ್ತಾರೆ. ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿದೆ ಅಂತ ನಾಯಕರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ನಾನು ಯಾವುದೇ ಬಿಜೆಪಿ ನಾಯಕರ ಜೊತೆಗೆ ಮಾತನಾಡಿಲ್ಲ. ನಮ್ಮ ಸಮಾಜದ ಕೆಲ ಮುಖಂಡರು ಬಿಜೆಪಿಗೆ ಸೇರುವ ಬಗ್ಗೆ ಮಾತಾಡಿದ್ದಾರೆ. ಆದರೆ ನಾನು ನಯವಾಗಿ ತಿರಸ್ಕರಿಸಿದ್ದೇನೆ. ವಿಜಯಪುರ ಲೋಕಸಭಾ ಅಭ್ಯರ್ಥಿ, ಪತ್ನಿ ಸುನಿತಾ ಚೌಹನ್ ಅವರ ಸೋಲಿಗೆ ಯಾರೂ ಹೊಣೆಯಲ್ಲ. ಜನಾಭಿಪ್ರಾಯ ಹೇಗಿದೆಯೋ ಹಾಗೆ ಆಗಿದೆ. ಯಾರನ್ನೂ ದೂಷಿಸುವುದು ಸರಿಯಲ್ಲ ಎಂದರು.