Tag: Dessert

  • ಹೋಳಿಗೆ ರುಚಿಯಷ್ಟೇ ಟೇಸ್ಟಿಯಾಗಿರುವ ‘ಸುಕ್ಕಿನುಂಡೆ’ ಮಾಡಿ ಸವಿಯಿರಿ

    ಹೋಳಿಗೆ ರುಚಿಯಷ್ಟೇ ಟೇಸ್ಟಿಯಾಗಿರುವ ‘ಸುಕ್ಕಿನುಂಡೆ’ ಮಾಡಿ ಸವಿಯಿರಿ

    ಡಲೆ ಬೇಳೆಯಲ್ಲಿ ಮಾಡುವ ಸಿಹಿ ತಿನಿಸು ಎಂದರೆ ನಮಗೆ ಥಟ್ ಎಂದು ನೆನಪಾಗುವುದು ಒಬ್ಬಟ್ಟು. ಆದರೆ ಇಂದು ನಾವು ಹೇಳಿಕೊಡುವ ರೆಸಿಪಿ ಸುಕ್ಕಿನುಂಡೆ. ಸುಕ್ಕಿನುಂಡೆ ಸಾಂಪ್ರದಾಯಿಕ ತಿನಿಸಾಗಿದ್ದು, ಯಾವುದೇ ಬೇಳೆಯನ್ನು ಬಳಸಿ ಈ ರೆಸಿಪಿಯನ್ನು ಮಾಡಬಹುದು. ಇಂದು ನಾವು ಕಡಲೆ ಬೇಳೆ ಬಳಸಿ ಸುಕ್ಕಿನುಂಡೆ ಹೇಗೆ ತಯಾರಿಸುವುದು ಎಂದು ಹೇಳಿಕೊಡುತ್ತೇವೆ. ಇದು ಆರೋಗ್ಯಕರವಾದ ಅಡುಗೆ ಕೂಡ ಆಗಿದೆ. ಒಳಗಡೆ ಹೋಳಿಗೆಯ ರುಚಿ ಇದ್ದು, ತಿನ್ನಲು ಸಖತ್ ಆಗಿ ಇರುತ್ತೆ. ಮತ್ತೆ ಇನ್ಯಾಕೆ ತಡ. ಈ ಶುಭ ಶನಿವಾರ ಕಡಲೆಬೇಳೆಯ ಸುಕ್ಕಿನುಂಡೆ ಮಾಡೋಣ.

    ಬೇಕಾಗುವ ಸಾಮಾಗ್ರಿಗಳು:
    * 3 ಗಂಟೆ ನೆನೆಸಿದ ಕಡಲೆ ಬೇಳೆ – 1 ಕಪ್
    * ಬೆಲ್ಲ – 1/3 ಕಪ್
    * ಉಪ್ಪು – ಅರ್ಧ ಟೀಸ್ಪೂನ್

    * ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    * 4 ಗಂಟೆ ನೆನೆಸಿದ ಅಕ್ಕಿ – 1 ಕಪ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಕರಿಯಲು ಎಣ್ಣೆ

    ಮಾಡುವ ವಿಧಾನ:
    * ಕುಕ್ಕರಿನಲ್ಲಿ 1 ಕಪ್ ಆಗುವಷ್ಟು ಕಡಲೆ ಬೇಳೆ ಹಾಗು ಒಂದೂಕಾಲು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ 4 ಕೂಗು ಕೂಗಿಸಿ. ನಂತರ ಇದರಲ್ಲಿರುವ ನೀರನ್ನು ಬಸಿದುಕೊಳ್ಳಿ.
    * ಕಡಲೆ ಬೇಳೆಯನ್ನು ಕುಕ್ಕರಿಗೆ ಹಾಕಿ, ಅದಕ್ಕೆ 1/3 ಕಪ್ ಬೆಲ್ಲ, ಕಾಲು ಚಮಚ ಉಪ್ಪು ಹಾಕಿ, ಬೆಲ್ಲ ಕರಗಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
    * ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಗಟ್ಟಿಯಾಗುವವರೆಗೆ ಬೇಯಿಸಿ.
    * ಮಿಕ್ಸಿ ಜಾರಿಗೆ 1 ಕಪ್ ಆಗುವಷ್ಟು ಅಕ್ಕಿ, ಅರ್ಧ ಚಮಚ ಉಪ್ಪು, ಕಾಲು ಚಮಚ ಅರಿಶಿನ ಪುಡಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿ. ಇದನ್ನು ಪಾತ್ರೆಗೆ ಹಾಕಿಕೊಳ್ಳಿ.
    * ಕಡಲೆಬೇಳೆ ಮತ್ತು ಬೆಲ್ಲದ ಮಿಶ್ರಣವನ್ನು ಉಂಡೆಗಳಾಗಿ ಮಾಡಿ. ಇವುಗಳನ್ನು ರುಬ್ಬಿದ ಹಿಟ್ಟಿನಲ್ಲಿ ಅದ್ದಿ.
    * ಎಣ್ಣೆಯನ್ನು ಬಿಸಿ ಮಾಡಿ ಒಂದೊಂದಾಗಿ ಹಾಕಿ. ಗರಿ-ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿದು ತೆಗೆಯಿರಿ.

    – ರುಚಿಯಾದ ಕಡಲೆಬೇಳೆ ಸುಕ್ಕಿನುಂಡೆ ಸವಿಯಲು ಸಿದ್ಧ.

    Live Tv
    [brid partner=56869869 player=32851 video=960834 autoplay=true]

  • ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ

    ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ

    ವೆ ಉಂಡೆ ಮಾಡುವುದು ತುಂಬಾ ಸುಲಭ. ಮನೆಗೆ ಅತಿಥಿ ಬಂದಾಗ ಏನಾದರೂ ದಿಢೀರ್ ಎಂದು ಸಿಹಿ ಮಾಡಬೇಕು ಎಂದರೆ ಈ ತಿಂಡಿಯನ್ನು ಟ್ರೈ ಮಾಡಿ. ಏಕೆಂದರೆ ಈ ರೆಸಿಪಿ ಮಾಡಲು ಸುಲಭ. ಅಚ್ಟೇ ಅಲ್ಲದೇ ಇದನ್ನು ತಿನ್ನಲು ತುಂಬಾ ರುಚಿಯಾಗಿ ಇರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ರವೆ – 1 ಕಪ್
    * ತುಪ್ಪ – ¼ ಕಪ್
    * ಕತ್ತರಿಸಿದ ಗೋಡಂಬಿ – 6
    * ಒಣದ್ರಾಕ್ಷಿ – 2 ಟೇಬಲ್ ಸ್ಪೂನ್
    * ತೆಂಗಿನಕಾಯಿ ತುರಿ – ¼ ಕಪ್

    * ಸಕ್ಕರೆ – 1 ಕಪ್
    * ನೀರು – ¼ ಕಪ್
    * ಏಲಕ್ಕಿ ಪುಡಿ – ¼ ಟೀಸ್ಪೂನ್
    * ಹಾಲು – 2 ಟೇಬಲ್ ಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಪ್ಯಾನ್‍ನಲ್ಲಿ ಕತ್ತರಿಸಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ. ಒಣದ್ರಾಕ್ಷಿ ಮತ್ತು ಗೋಡಂಬಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಅವುಗಳನ್ನು ತಟ್ಟೆಗೆ ವರ್ಗಾಯಿಸಿ ಮತ್ತು ಪಕ್ಕಕ್ಕೆ ಇರಿಸಿ.
    * ಬಾಣಲೆಯಲ್ಲಿ ರವಾ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ತಿಳಿ ಕಂದು ಬಣ್ಣಕ್ಕೆ ಬದಲಾಯಿಸುವವರೆಗೆ ಮತ್ತು ಪರಿಮಳ ಬರುವವರೆಗೆ ಹುರಿಯಿರಿ.
    * ನೀರ ಮತ್ತು ಸಕ್ಕರೆ ಸೇರಿಸಿ ಪಾಕವನ್ನು ತಯಾರಿಸಿ. ಸಕ್ಕರೆ ಕರಗುವವರೆಗೂ ಬೇರೆಸಿ 5 ನಿಮಿಷಗಳ ಕಾಲ ಕುದಿಸಿ.


    * ತೆಂಗಿನಕಾಯಿ ತುರಿಯನ್ನು ಹುರಿದುಕೊಳ್ಳಿ. ಅದಕ್ಕೆ ರವಾ, ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಮತ್ತು ಸಕ್ಕರೆ ಪಾಕ ಮತ್ತು ಹಾಲನ್ನು ಸೇರಿಸಿ ಹುರಿಯಿರಿ.
    * ನಂತರ ಆ ಮಿಶ್ರಣವನ್ನು ತೆಗೆದು ಕೈಗೆ ತುಪ್ಪ ಹಚ್ಚಿಕೊಂಡು ಉಂಡೆಗಳ ಮಾಡಿಕೊಳ್ಳಿ

  • ಸಿಹಿ ಪ್ರಿಯರು ಸುಲಭವಾಗಿ ಮಾಡಿ ‘ಹಾಲು ಬರ್ಫಿ’

    ಸಿಹಿ ಪ್ರಿಯರು ಸುಲಭವಾಗಿ ಮಾಡಿ ‘ಹಾಲು ಬರ್ಫಿ’

    ರ್ಫಿ’ ಮಾಡುವ ವಿಧಾನ ತುಂಬಾ ಸುಲಭ. ಬರ್ಫಿ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ತುಂಬಾ ಇಷ್ಟ. ಅದಕ್ಕೆ ಸಿಹಿ ಪ್ರಿಯರಿಗಾಗಿ ಇಂದು ‘ಹಾಲು ಬರ್ಫಿ’ ಮಾಡುವ ಸುಲಭ ವಿಧಾನವನ್ನು ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಪದಾರ್ಥಗಳು:
    * ತುಪ್ಪ – ¼ ಕಪ್
    * ಹಾಲು – 1ವರೆ ಲೀಟರ್
    * ಹಾಲಿನ ಪುಡಿ – 2 ಕಪ್
    * ಸಕ್ಕರೆ – 4 ಕಪ್
    * ಏಲಕ್ಕಿ ಪುಡಿ – 4 ಟೀಸ್ಪೂನ್

    * ಕಟ್ ಮಾಡಿದ ಬಾದಾಮಿ – 2 ಚಮಚ
    * ಕಟ್ ಮಾಡಿದ ಪಿಸ್ತಾ – 2 ಚಮಚ
    * ಬೇಕಿಂಗ್ ಪೇಪರ್

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ ¼ ಕಪ್ ತುಪ್ಪ ಮತ್ತು ಹಾಲು ಸೇರಿಸಿ.
    * ಬಾಣಲಿಯನ್ನು ಬಿಸಿ ಮಾಡಿ ಹಾಲಿನ ಮಿಶ್ರಣಕ್ಕೆ ನಿಧಾನವಾಗಿ ಹಾಲಿನ ಪುಡಿ ಮತ್ತು ಅಗತ್ಯವಿರುವಷ್ಟು ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲ ಮಿಶ್ರಣವು ಸರಿಯಾಗಿ ಮಿಕ್ಸ್ ಆಗಿದೆಯ ಎಂದು ಖಚಿತಪಡಿಸಿಕೊಳ್ಳಿ.

    Milk Powder Barfi | Milk Burfi Recipe - Sandhya's Kitchen* ಹಾಲು 10 ನಿಮಿಷಗಳ ಕಾಲ ಬೆರೆಸಿದ ಹಾಲಿನ ಮಿಶ್ರಣವನ್ನು ಹಿಟ್ಟಿನಂತೆ ಕಳಿಸಿಕೊಳ್ಳಿ. ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮತ್ತು ಚೆನ್ನಾಗಿ ಸಂಯೋಜಿಸಿ.
    * ತಯಾರಾದ ಹಿಟ್ಟನ್ನು ಬೇಕಿಂಗ್ ಪೇಪರ್‌ನಿಂದ ಲೇಪಿತ ಬರ್ಫಿ ಆಕಾರದಲ್ಲಿ ಕಟ್ ಮಾಡಿಕೊಳ್ಳಿ, ಅದರ ಮೇಲೆ ಸ್ವಲ್ಪ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾಗಳೊಂದಿಗೆ ಮೇಲ್ಭಾಗಕ್ಕೆ ಹಾಕಿ.
    * 2 ಗಂಟೆಗಳ ಕಾಲ ಅದನ್ನು ಮುಚ್ಚಿಡಿ. ಸ್ವಲ್ಪ ಸಮಯದ ನಂತರ ಬರ್ಫಿಗಳನ್ನು ತೆಗೆದು ಸವಿಯಿರಿ.

  • ಮೋಸ್ಟ್ ಫೇವರೇಟ್ ಸಿಹಿ ತಿಂಡಿ ಕಜ್ಜಾಯ ಮಾಡಿ

    ಮೋಸ್ಟ್ ಫೇವರೇಟ್ ಸಿಹಿ ತಿಂಡಿ ಕಜ್ಜಾಯ ಮಾಡಿ

    ಕ್ಷಿಣ ಭಾರತದ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಕಜ್ಜಾಯ. ಇದನ್ನು ಜನರು ತಿನ್ನಲು ಎಷ್ಟ ಇಷ್ಟಪಡುವತ್ತಾರೋ ಅಷ್ಟೇ ಮಾಡಲು ಕಷ್ಟ ಪಡುತ್ತಾರೆ. ಏಕೆಂದರೆ ಕಜ್ಜಾಯದ ಪಾಕವಿಧಾನ ಅಷ್ಟು ಸುಲಭವಾಗಿಲ್ಲ. ಆದರೆ ಅಡುಗೆ ಪ್ರಿಯರಿಗೆ ಕಜ್ಜಾಯ ಮಾಡುವುದು ಎಂದರೆ ಹಬ್ಬ. ನೀವು ಒಮ್ಮೆ ಟ್ರೈ ಮಾಡಿ. ಈ ಪಾಕವನ್ನು 2 ತಿಂಗಳ ಕಾಲ ಇಟ್ಟುಕೊಳ್ಳಬಹುದು.

    ಬೇಕಾಗಿರುವ ಪದಾರ್ಥಗಳು:
    * ಅಕ್ಕಿ – 1 ಕಪ್
    * ಬಿಳಿ ಎಳ್ಳು – 1 ಟೀಸ್ಪೂನ್
    * ಗಸಗಸೆ -1 ಟೀಸ್ಪೂನ್
    * ಬೆಲ್ಲ – 2 ಅಚ್ಚು
    * ನೀರು – ¼ ಕಪ್
    * ಏಲಕ್ಕಿ ಪುಡಿ – ¼ ಟೀಸ್ಪೂನ್
    * ಕರಿ ಮೆಣಸು ಪುಡಿ – ¼ ಟೀಸ್ಪೂನ್
    * ತುಪ್ಪ, ಆಳವಾಗಿ ಹುರಿಯಲು

    ಮಾಡುವ ವಿಧಾನ:
    * ಮೊದಲನೆಯದಾಗಿ, 1 ಕಪ್ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ. ನಂತರ ನೀರನ್ನು ಪೂರ್ತಿಯಾಗಿ ತೆಗೆದು, ಒಣ ಬಟ್ಟೆಯ ಮೇಲೆ ಹರಡಿ. 30 ನಿಮಿಷಗಳ ಕಾಲ ಒಣಗಿಸಲು ಬಿಡಿ.
    * ಅಕ್ಕಿ ಇನ್ನೂ ತೇವವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಸಂಪೂರ್ಣವಾಗಿ ಒಣಗಲು ಬಿಡಬೇಡಿ.
    * ಈಗ ಅಕ್ಕಿಯನ್ನು ಮಿಕ್ಸಿಗೆ ವರ್ಗಾಯಿಸಿ ಪುಡಿ ಮಾಡಿಕೊಳ್ಳಿ. ಅಕ್ಕಿ ಹಿಟ್ಟನ್ನು ಜರಡಿಯಾಡಿ.
    * ತವಾವನ್ನು ಬಿಸಿ ಮಾಡಿಕೊಂಡು ಅದಕ್ಕೆ ಎಳ್ಳು ಮತ್ತು 1 ಟೀಸ್ಪೂನ್ ಗಸಗಸೆ ರೋಸ್ಟ್ ಮಾಡಿ. ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.

    * ನಂತರ, ದೊಡ್ಡ ಪಾತ್ರೆಗೆ ನೀರು ಬೆರೆಸಿ ಬೆಲ್ಲವನ್ನು ಹಾಕಿ. ಬೆಲ್ಲ ಕರಗುವ ತನಕ ಚೆನ್ನಾಗಿ ಬೇಯಿಸಿ. ಬೆಲ್ಲದ ಸಿರಪ್ ಅನ್ನು ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ.
    * ಬೆಲ್ಲದ ಸಿರಪ್‍ಗೆ ಅಕ್ಕಿ ಹಿಟ್ಟನ್ನು ಗಂಟಾಗದಂತೆ ಮಿಶ್ರಣ ಮಾಡಿ. ಹುರಿದ ಗಸಗಸೆ ಮತ್ತು ಎಳ್ಳು ಕೂಡ ಸೇರಿಸಿ.
    * ಇದಲ್ಲದೆ ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಳಿ ಟೀಸ್ಪೂನ್ ಕರಿ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
    * ಮಿಶ್ರಣವನ್ನು ಗಾಜಿನ ಬಟ್ಟಲಿಗೆ ವರ್ಗಾಯಿಸಿ. ಈ ಮಿಶ್ರಣ ಒಣಗದಂತೆ ನೊಡಿಕೊಳ್ಳುವುದಕ್ಕೆ ಎಣ್ಣೆ ಅಥವಾ ತುಪ್ಪದೊಂದಿಗೆ ಮಿಕ್ಸ್ ಮಾಡಿ 12 ಗಂಟೆ ಕಾಲ ಮುಚ್ಚಿಡಿ.

    ಫ್ರೈ ಮಾಡುವುದು ಹೇಗೆ?
    * 12 ಗಂಟೆಗಳ ನಂತರ, ಮೃದುವಾದ ಹಿಟ್ಟಿಗೆ ಬಾಳೆಹಣ್ಣನ್ನು ಬೆರೆಸಿ ಒಂದು ಟೇಬಲ್‍ಸ್ಪೂನ್ ಅಕ್ಕಿ ಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ.
    * ಮಿಶ್ರಣವನ್ನು ಉದ್ದಿನ ವಡ್ಡೆಯಂತೆ ಒತ್ತಿ ಚಪ್ಪಟೆ ಮಾಡಿ
    * ರಸವನ್ನು ಬೇರ್ಪಡಿಸದೆ ನಿಧಾನವಾಗಿ ತೆಗೆಯಿರಿ.
    * ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಡೀಪ್ ಫ್ರೈ ಮಾಡಿ.

    ಗಾಳಿಯಾಡದ ಡಬ್ಬದಲ್ಲಿ ಕಜ್ಜಾಯವನ್ನು ಸಂಗ್ರಹಿಸುವುದರಿಂದ ಈ ಮಿಶ್ರಣವನ್ನು 2 ವಾರಗಳ ಕಾಲ ಇಟ್ಟುಕೊಳ್ಳಬಹುದು.

  • ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಿಹಿಯಾದ ತಿಂಡಿಗಳನ್ನು ಮಾಡಬೇಕು. ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಹೋಳಿಗೆ. ಬೇಳೆ ಹೋಳಿಗೆ ತಿಂದು ಬೇಸರವಾಗಿದ್ರೆ ಈ ಬಾರಿ ಮನೆಯೆಲ್ಲಿ ಕಾಯಿ ಹೋಳಿಗೆ ಮಾಡಿ ಸವಿಯಿರಿ. ಇಲ್ಲಿದೆ ಮಾಡುವ ವಿಧಾನ…

    ಬೇಕಾಗುವ ಸಾಮಗ್ರಿಗಳು:
    * ಕಾಯಿ- 3 ಕಪ್
    * ಬೆಲ್ಲ- 2 ಕಪ್
    * ಹುರಗಡಲೆ- 1 ಟೇಬಲ್ ಸ್ಪೂನ್
    * ಗಸಗಸೆ- 2 ಟೀ ಸ್ಪೂನ್
    * ಏಲಕ್ಕಿ ಪುಡಿ – 1 ಟೀ ಸ್ಪೂನ್
    * ಹೋಳಿಗೆ ರವೆ- ಕಾಲು ಕೆಜಿ
    * ಮೈದಾಹಿಟ್ಟು- 100 ಗ್ರಾಂ
    * ಅರಿಶಿನ- 1 ಟೀ ಸ್ಪೂನ್
    * ಅಡುಗೆ ಎಣ್ಣೆ- 1 ಕಪ್
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಒಂದು ಅಗಲವಾದ ಪಾತ್ರೆಗೆ ಹೋಳಿಗೆ ರವೆ, ಮೈದಾಹಿಟ್ಟು, ಅರಿಶಿನ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು ಮೃದುವಾಗಿರಬೇಕು, ಹೆಚ್ಚು ಗಟ್ಟಿಗಿದ್ರೆ ಹೋಳಿಗೆ ಲಟ್ಟಿಸುವುದು ಕಷ್ಟವಾಗುತ್ತದೆ.
    * ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ಮುಚ್ಚಿ ಇಟ್ಟಿರಬೇಕು.

    * ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹುರಿಗಡೆಲೆ ಹಾಕಿ 2 ಸ್ಪೂನ್ ನೀರು ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.
    * ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ. ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರುಬ್ಬಿರುವ ಕಾಯಿ ಮಿಶ್ರಣವನ್ನು ಹಾಕಬೇಕು.
    * ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಬಣ್ಣ ಬದಲಾಗಿ ಗಟ್ಟಿಯಾಗಿ ಬರುವವರೆಗೆ ಸಣ್ಣ ಉರಿ ಬೆಂಕಿಯಲ್ಲಿ ಬೇಯಿಸಬೇಕು. ಇದಕ್ಕೆ ಗಸಗಸೆ, ಏಲಕ್ಕಿ ಹಾಕಿ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು.

    * ಊರ್ಣಕ್ಕೆ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ತೆಗೆದುಕೊಂಡು ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಹೋಳಿಗೆ ಪೇಪರ್ ಮೇಲೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಕಾಯಿ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. ಬಿಸಿಯಾದ ತುಪ್ಪದೊಂದಿಗೆ ಹೋಳಿಗೆಯನ್ನು ಸವಿಯ ಬಹುದಾಗಿದೆ.