ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ವರ್ಗವೇ ಧರೆಗಿಳಿದಿದೆ. ಇಂದು ಸಂಜೆ 7 ರಿಂದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ (Abhishek Ambarish) ಹಾಗೂ ಫ್ಯಾಷನ್ ಗುರು ಎಂದೇ ಖ್ಯಾತರಾದ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ (Aviva) ಅವರ ಆರತಕ್ಷತೆ (Reception) ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಅದ್ದೂರಿ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಆರತಕ್ಷತೆಯ ಮಂಟಪ ಹೂವು, ತಳಿರು, ತೋರಣಗಳಿಂದ ಅಲಂಕೃತಗೊಂಡಿದೆ.
ಸಾಮಾನ್ಯವಾಗಿ ಭಾರೀ ಬಜೆಟ್ ಸಿನಿಮಾಗಳಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಮಾಡುವುದನ್ನು ದೃಶ್ಯವಾಗಿ ನೋಡಿದ್ದೇವೆ. ಆದರೆ, ನಟಿ ಸುಮಲತಾ ಅವರು ತಮ್ಮ ಪುತ್ರನ ಆರತಕ್ಷತೆಗಾಗಿ ಅಂಥದ್ದೊಂದು ದೃಶ್ಯ ವೈಭವವನ್ನೇ ನಿಜವಾಗಿಯೂ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ವೇದಿಕೆಯನ್ನು ನೋಡಲು ಎರಡು ಕಣ್ಣು ಸಾಲವು. ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್
ಅದೊಂದು ಅಲಂಕೃತವಾದ ವೇದಿಕೆ. ಹೂಗಳು ಮತ್ತು ಬಣ್ಣ ಬಣ್ಣದ ಲೈಟ್ ಗಳಿಂದಾಗಿ ಅದು ಫಳಫಳ ಹೊಳೆಯುತ್ತಿದೆ. ಗೋಲಾಕಾರದಲ್ಲಿ ಅದು ಮಿರಿಮಿರಿ ಮಿಂಚುತ್ತಿದೆ. ಈ ಮಧ್ಯ ನಿಂತು ನವಜೋಡಿಗಳು ವೇದಿಕೆಗೆ ಮತ್ತಷ್ಟು ರಂಗು ತುಂಬಲಿದ್ದಾರೆ. ಅಂದಹಾಗೆ ಈ ವೇದಿಕೆಯು ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ (Crystal Shaglier) ನಲ್ಲಿ ನಿರ್ಮಾಣವಾಗಿದೆ. 300 ಶಾಗ್ಲಿಯರ್ಸ್ ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಅನ್ನು ಬಳಸಿಕೊಳ್ಳಲಾಗಿದೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಡಿಸೈನ್ ನಿರ್ಮಾಣ ಮಾಡಲಾಗಿದೆ ಎನ್ನುವ ಮಾಹಿತಿಯು ಇದೆ. ದೆಹಲಿಯ ಸಮೋರದಾ ಬಾದ್ ನಿಂದ ಇವುಗಳನ್ನು ತರಿಸಲಾಗಿದೆ ಎಂದು ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ. ವೇಡಿಂಗ್ಸ್ ಬೈ ಧ್ರುವ ಎನ್ನುವ ಸಂಸ್ಥೆಯು ಇದರ ನಿರ್ಮಾಣದ ಹೊಣೆ ಹೊತ್ತಿದ್ದು, ಈ ಸಂಸ್ಥೆಯೇ ಶಿವರಾಜ್ ಕುಮಾರ್ ಮಗಳ ಮದುವೆ ಹಾಗೂ ಯಶ್ ಮದುವೆ, ಜನಾರ್ದನ ರೆಡ್ಡಿ ಮಗಳ ಮದುವೆ ಮತ್ತು ಯದುವೀರ್ ಮಹರಾಜರು ಸೇರಿದಂತೆ ಸಾಕಷ್ಟು ಗಣ್ಯರ ಮದುವೆಗೆ ವೇದಿಕೆ ರೆಡಿ ಮಾಡಿ ಕೊಟ್ಟಿದೆ.
ಅಂದಹಾಗೆ ಇಂದು ನಡೆಯಲಿರುವ ಆರತಕ್ಷತೆಗೆ ಪರ ಭಾಷಾ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಚಿರಂಜೀವಿ ಕುಟುಂಬ, ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್, ನಟ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರಂತೆ.
ಚೋಕರ್ ನೆಕ್ಲೆಸ್ ಒಂದು ವಿಶೇಷವಾದ ಆಭರಣವಾಗಿದ್ದು, ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಎಲ್ಲಾ ಆಭರಣಗಳ ಮಧ್ಯೆ ಚೋಕರ್ ನೆಕ್ಲೆಸ್ ಎದ್ದು ಕಾಣುವಂತಹ ಅದ್ಭುತವಾದಂತಹ ಆಭರಣವಾಗಿದ್ದು, ಮದುವೆ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣದಲ್ಲಿ ಬಹುತೇಕ ಮಂದಿ ಚೋಕರ್ ನೆಕ್ಲೆಸ್‍ನನ್ನೇ ಮೊದಲು ಆಯ್ಕೆ ಮಾಡುತ್ತಾರೆ. ಅದರಲ್ಲಿಯೂ ಮುತ್ತು, ರತ್ನಗಳಿಂದ ಸಿದ್ದ ಪಡಿಸಿದ್ದ ಚೋಕರ್ ನೆಕ್ಲೆಸ್ ಹೆಚ್ಚು ಲುಕ್ ನೀಡುತ್ತದೆ. ಇದರಲ್ಲಿ ಹಲವು ವಿಧಗಳಿದ್ದು, ಕಪ್ಪು ಬಣ್ಣದ ಚೋಕರ್ ನೆಕ್ಲೆಸ್ ಸರ್ವೇಸಾಮಾನ್ಯವಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಇದು ಫ್ಯಾಶನ್ ಕೂಡ ಆಗಿದೆ. ಸದ್ಯ ಚೋಕರ್ ನೆಕ್ಲೆಸ್ ಡಿಸೈನ್ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.
ವಿಶಿಷ್ಟ ಮಾದರಿಯ ಮತ್ತು ವಿಸ್ತಾರವಾದ ಈ ಸೋಗಸಾದ ಚಿನ್ನದ ಹಾರವು ನೀವು ಸಾಂಪ್ರಾದಯಿಕ ಉಡುಗೆ ತೊಟ್ಟಾಗ ಸುಂದವಾಗಿ ಕಾಣಿಸುತ್ತದೆ. ರತ್ನದ ಕಲ್ಲು ಮತ್ತು ಹೂವಿನ ಡಿಸೈನ್ ಹೊಂದಿರುವ ಈ ಚೋಕರ್ ನೆಕ್ಲೆಸ್ ಎಲ್ಲರ ಗಮನ ಸೆಳೆಯುತ್ತದೆ.
ಮದುವೆ ಸಮಯದಲ್ಲಿ ಚಿನ್ನದ ಚೋಕರ್ ನೆಕ್ಲೆಸ್ ಬೆರಗು ನೀಡುವುದರ ಜೊತೆಗೆ ರಾಯಲ್ ಲುಕ್ ನೀಡುತ್ತದೆ ಮತ್ತು ಆ ದಿನದಂದು ನಿಮಗೆ ಸ್ಪೆಶಲ್ ಫೀಲ್ ನೀಡುತ್ತದೆ.
ಕೆಂಪು ರತ್ನ ಕಲ್ಲುಗಳಿಂದ ವಿನ್ಯಾಸಗೊಳಿಸಿರುವ ಈ ಸುಂದರವಾದ ಚೋಕರ್ ನೆಕ್ಲೆಸ್ ರಾಜಮನೆತನದ ಲುಕ್ ನೀಡುತ್ತದೆ. ಈ ಚೋಕರ್ ನೆಕ್ಲೆಸ್ ಡಿಸೈನರ್ ಲೆಹೆಂಗಾ ಮತ್ತು ಸೀರೆಗೆ ಸಖತ್ ಮ್ಯಾಚ್ ಆಗುತ್ತದೆ.
ಈ ಅದ್ಭುತವಾದ ಚೋಕರ್ ನೆಕ್ಲೆಸ್ ನೋಡುವಾಗ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತ್ತದೆ ಎಂದೇ ಹೆಳಬಹುದು. ಇದು ಕುಂದನ್‍ನಿಂದ ಕೂಡಿದ ಸುಂದರವಾದ ಹೂವಿನ ವಿನ್ಯಾಸವಿರುವ ಚೋಕರ್ ನೆಕ್ಲೆಸ್ ಆಗಿದೆ.
ಈ ಚೋಕರ್ ನೆಕ್ಲೆಸ್ ರಾಜಮನೆತನದ ರಾಣಿಯರು ಧರಿಸಿದಂತೆ ಲುಕ್ ನೀಡುತ್ತದೆ. ಮದುವೆ ಮತ್ತು ಅದ್ದೂರಿ ಸಮಾರಂಭಗಳಲ್ಲಿ ಈ ಹಳದಿ ಬಣ್ಣದ ಚಿನ್ನದ ಚೋಕರ್ ನೆಕ್ಲೆಸ್ ಅದ್ಬುತವಾಗಿ ಕಾಣುತ್ತದೆ.
ಭಾರತದಲ್ಲಿ ಮನ್ಸೂನ್ ಬಂದರೆ ಸಾಕು ಎಲ್ಲರಿಗೂ ತೊಂದರೆ ತಪ್ಪಿದ್ದಲ್ಲ. ಕಿರಿದಾದ ರಸ್ತೆಗಳು, ಗುಂಡಿಗಳು ಮತ್ತು ಕಷ್ಟಕರವಾದ ಹವಾಮಾನ. ಈ ವೇಳೆ ನಮ್ಮನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಉಪಯೋಗಿಸುತ್ತೇವೆ. ಛತ್ರಿಗಳಲ್ಲಿ ನಾನಾ ರೀತಿಯ ಮುದ್ರಣ ಹಾಗೂ ಬಣ್ಣದ ಛತ್ರಿಗಳಿದೆ. ಛತ್ರಿಗಳ ಡಿಸೈನ್ ಕುರಿತಂತೆ ಕೆಲವು ಮಾಹಿತಿ ಈ ಕೆಳಗಿನಂತಿದೆ.
ಕೆಹ್ಕ್ಲೊ ಬಣ್ಣದ ಛತ್ರಿಗಳು
ಕಲೆಯನ್ನು ಪ್ರೀತಿಸುವವರಿಗೆ ಈ ಛತ್ರಿ ಬಹಳ ಇಷ್ಟವಾಗುತ್ತದೆ. ಈ ಛತ್ರಿ ಜನಸಂದಣಿಯ ಮಧ್ಯೆ ಎದ್ದು ಕಾಣಿಸುತ್ತದೆ. ಈ ಛತ್ರಿ ಮೇಲೆ ಮನುಷ್ಯನ ಮುಖವನ್ನು ಚಿತ್ರಿಸಲಾಗಿದೆ.
ಸ್ಟೇಜ್ ಡೂಡಲ್ ಮುದ್ರಿತ ಬಿಳಿ ಛತ್ರಿ
ನಿಮಗೆ ಬಿಳಿ ಬಣ್ಣ ಎಂದರೆ ಇಷ್ಟನಾ? ಹಾಗಾದರೆ ಈ ಛತ್ರಿ ನಿಮಗೆ ಬಲು ಬೇಗ ಇಷ್ಟ ಆಗುತ್ತದೆ. ಈ ಬಿಳಿ ಛತ್ರಿ ಮೇಲೆ ಹಾಸ್ಯಕರವಾದ ಕೆಲವು ಚಮತ್ಕಾರಿ ವ್ಯಂಗ್ಯ ಡೂಡಲ್‍ಗಳನ್ನು ಮುದ್ರಿಸಲಾಗಿದೆ. ಇದು ನಿಮಗೆ ದಿನವಿಡೀ ಸ್ಫೂರ್ತಿ ನೀಡುತ್ತದೆ. ಖಂಡಿತವಾಗಿಯೂ ಈ ಛತ್ರಿ ಸಹ ಪ್ರಯಾಣಿಕನಾಗಿ ನಿಮಗೆ ಕಂಪನಿ ನೀಡುತ್ತದೆ.
ಹೆಲ್ಮೆಟ್ ಛತ್ರಿ
ಸಾಮಾನ್ಯವಾಗಿ ಕೆಲವು ಛತ್ರಿಗಳನ್ನು ಹಿಡಿದುಕೊಂಡರೂ, ಮಳೆಯಲ್ಲಿ ನಮ್ಮ ಬಟ್ಟೆಗಳು ಒದ್ದೆಯಾಗಿ ಬಹಳ ಕಿರಿಕಿರಿಯುಂಟಾಗುತ್ತದೆ. ಆದರೆ ಹೆಲ್ಮೆಟ್ ಛತ್ರಿ ಬಳಸುವುದರಿಂದ ತಲೆ ಹಾಗೂ ಬಟ್ಟೆ ಒದ್ದೆಯಾಗುವುದನ್ನು ತಡೆಗಟ್ಟಬಹುದು. ಈ ಛತ್ರಿ ಕೈಯಲ್ಲಿ ಹಿಡಿದುಕೊಳ್ಳಲು ಬಹಳ ಸುಲಭಕರವಾಗಿದೆ ಮತ್ತು ಮಳೆ ಜೊತೆಗೆ ಗಾಳಿಯಿಂದ ಕೂಡ ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.
ಕೆಹ್ಕ್ಲೋ ಗೇಮ್ ಆಫ್ ಥ್ರೋನ್ಸ್ ಛತ್ರಿ
ಈ ಛತ್ರಿಯ ಹೆಸರನ್ನು ಕೇಳಿದಾಗ ನಿಮಗೆ ನಗು ಬರಬಹುದು. ಆದರೆ ಈ ಛತ್ರಿ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಈ ಛತ್ರಿಯಲ್ಲಿ ಹಾರ್ಟ್ ಸಿಂಬಲ್ ಇದ್ದು, ಸಾಮಾನ್ಯವಾಗಿ ಕಪಲ್‍ಗಳು ಹೆಚ್ಚಾಗಿ ಬಳಸುತ್ತಾರೆ. ಮೊದಲಿಗೆ ಕಾಡ್ರ್ಸ್, ಡೈರಿ ಹಾಗೂ ಪೆನ್‍ಗಳಲ್ಲಿ ಈ ಅಕ್ಷರವನ್ನು ಮುದ್ರಿಸಲಾಗುತ್ತಿತ್ತು. ಆದರೆ ಇದೀಗ ಛತ್ರಿ ಮೇಲೆ ಕೂಡ ಮುದ್ರಿಸಲಾಗಿದೆ.
ಬಾಳೆಹಣ್ಣು ಮಾದರಿಯ ಛತ್ರಿ
ಈ ಛತ್ರಿ ಹಳದಿ ಬಣ್ಣವನ್ನು ಹೊಂದಿದ್ದು, ಪ್ರಕಾಶಮಾನವಾದ ಬಿಸಿಲಿನಲ್ಲಿ ಎದ್ದು ಕಾಣುತ್ತದೆ ಮತ್ತು ಈ ಛತ್ರಿಯನ್ನು ಬಾಳೆಹಣ್ಣಿನ ರೀತಿ ಇರುವ ಪೆಟ್ಟಿಗೆಯಲ್ಲಿ ಮಡಚಿ ಇಡಲಾಗುತ್ತದೆ. ಈ ಛತ್ರಿ ನೋಡಲು ಮುದ್ದಾಗಿರುವುದರಿಂದ ಚಿಕ್ಕ ಮಕ್ಕಳಿಗೆ ಬೇಗ ಇಷ್ಟವಾಗುತ್ತದೆ. ಇದನ್ನೂ ಓದಿ:ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ
ಸಿಂಧೂರ ನಮ್ಮ ದೇಹದ ಏಳು ಚಕ್ರಗಳಲ್ಲಿ ಒಂದಾದ ಅಗ್ಯ ಚಕ್ರವಾಗಿದೆ. ಸಿಂಧೂರ ನಮ್ಮ ಮನಸ್ಸಿನ ಜೊತೆಗೆ ಹೆಚ್ಚಿನ ಸಂಪರ್ಕ ಹೊಂದಿದ್ದು, ಬುದ್ಧಿ ಮತ್ತು ಜ್ಞಾನವನ್ನು ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಸಿಂಧೂರಕ್ಕೆ ಅದರದ್ದೇ ಆದ ಶಕ್ತಿ ಮತ್ತು ಮಹತ್ವವಿದೆ. ಸುಳ್ಳು ಮತ್ತು ಪಕ್ಷಪಾತಕ್ಕಿಂತ ಹೆಚ್ಚಾಗಿ ಸತ್ಯಾಧಾರಿತ ವಿಚಾರಗಳನ್ನು ನೋಡಲು ಸಹಾಯಕವಾಗಿದೆ. ವಧುವಿನ ಹಣೆಯ ಮೇಲೆ ಕೆಂಪು ಬಣ್ಣದ ಸಿಂಧೂರ ಭಾರತೀಯ ನಾರಿಯ ಸಮೃದ್ಧಿ, ಪ್ರೀತಿ ಮತ್ತು ಸಹಾನುಭೂತಿಯನ್ನು ಸೂಚಿಸುತ್ತದೆ.
ಸಿಂಧೂರವನ್ನು ನೀವು ಪ್ರತಿದಿನ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂಬುವುದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ವಧುವಿಗೆ ಕಂಪ್ಲೀಟ್ ಲುಕ್ ನೀಡುವುದರ ಜೊತೆಗೆ ಸುಂದರವಾಗಿ ಕಾಣಿಸುವಂತೆ ಮಾಡುವುದು ಮಾತ್ರ ಸಿಂಧೂರ. ಸಿಂಧೂರ ಕುರಿತಂತೆ ಕೆಲವೊಂದು ಡಿಸೈನ್‍ಗಳ ಮಾಹಿತಿ ಈ ಕೆಳಗಿನಂತಿದೆ.
ಬೋಲ್ಡ್ ಮತ್ತು ಬ್ಯೂಟಿಫುಲ್ ಸಿಂಧೂರ:
ಮದುವೆಯ ದಿನ ವಧುವಿಗೆ ಸಾಂಪ್ರದಾಯಿಕ ಲುಕ್ ನೀಡುವ ಸಿಂಧೂರಗಳಲ್ಲಿ ಇದು ಕೂಡ ಒಂದು. ಈ ಸಿಂಧೂರ ವಧುವಿಗೆ ಸುಂದರವಾದ ಲುಕ್ ನೀಡುತ್ತದೆ. ನಿಮ್ಮ ಹಣೆ ಚಿಕ್ಕದಾಗಿದ್ದರೆ ಚಿಂತಿಸಬೇಡಿ, ವಾಸ್ತವವಾಗಿ ಈ ಸಿಂಧೂರ ನಿಮ್ಮ ಹಣೆಯ ಮೇಲೆ ದೊಡ್ಡದಾಗಿ ಮತ್ತು ಸರಿಯಾಗಿ ಕಾಣಿಸುವಂತೆ ಮಾಡುತ್ತದೆ ಮತ್ತು ನಿಮಗೆ ಗ್ರಾಂಡ್ ಲುಕ್ ನೀಡುತ್ತದೆ.
ಸಿಂಧೂರದ ಸಣ್ಣ ಡಿಸೈನ್:
ಅನೇಕ ವಧುಗಳು ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ಸಣ್ಣದಾಗಿರುವ ಸಿಂಧೂರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಇಳಿಮುಖವಾಗಿ ಹಣೆಯನ್ನು ಹೊಂದಿರುವವರಿಗೆ ಮಾಂಗ್ ಟಿಕ್ಕಾ ಬಹಳ ಚೆನ್ನಾಗಿ ಸೂಟ್ ಆಗುತ್ತದೆ. ಇದು ನಿಮ್ಮ ಮುಖವನ್ನು ವಿಕಾರಗೊಳಿಸದೇ ಅಂದವನ್ನು ಹೆಚ್ಚಿಸುತ್ತದೆ. ಈ ಸಿಂಧೂರವನ್ನು ನೀವು ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಧರಿಸಬಹುದು.
ಸ್ಟಡ್/ ಸ್ಟೋನ್ ಸಿಂಧೂರ:
ಸ್ಟಡ್ ಮತ್ತು ಸ್ಟೋನ್ ಸಿಂಧೂರಗಳ ಡಿಸೈನ್ ಗ್ಲಾಮರ್ ಲುಕ್ ನೀಡುತ್ತದೆ. ಸ್ಟೋನ್ ಸಿಂಧೂರಗಳು ವಿವಿಧ ಆಕಾರ ಮತ್ತು ಗಾತ್ರದಲ್ಲಿ ಸಿಗುತ್ತದೆ. ನಿಮ್ಮ ವಿಶೇಷ ದಿನಗಳಲ್ಲಿ ಈ ಸಿಂಧೂರವನ್ನು ಧರಿಸುವುದರಿಂದ ನಿಮಗೆ ಹೆಚ್ಚು ಸ್ಫೂರ್ತಿ ಮತ್ತು ಉತ್ಸಾಹ ತುಂಬುತ್ತದೆ.
ಸ್ಟೋನ್ ಆವೃತ್ತಿಯ ಸಿಂಧೂರ:
ಸ್ಟೋನ್ ಮೂಲಕ ಆವೃತ್ತಿಗೊಳಿಸಿರುವ ಅನೇಕ ಆಕಾರದಲ್ಲಿ ಸಿಂಧೂರಗಳಿದೆ. ಸಿಂಧೂರದ ಸುತ್ತ ವೃತ್ತಾಕಾರದಲ್ಲಿ ಸಣ್ಣ, ಸಣ್ಣ ಸ್ಟೋನ್‍ಗಳನ್ನು ಅಳವಡಿಸಲಾಗಿದ್ದು, ಸಿಂಧೂರ ಎದ್ದು ಕಾಣಿಸುವುದರ ಜೊತೆಗೆ ನಿಮಗೆ ಅದ್ಭುತ ಲುಕ್ ನೀಡುತ್ತದೆ.
ಮಹಾರಾಷ್ಟ್ರ ಸಿಂಧೂರ:
ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಆದ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ವಿವಾಹದ ಪದ್ಧತಿಗಳಿದೆ. ಹಲವಾರು ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದು. ಮಹಾರಾಷ್ಟ್ರದ ಕಡೆ ಮದುವೆಯ ವೇಳೆ ವಧುವಿಗೆ ಚಂದ್ರನ ಆಕಾರದ ಸಿಂಧೂರ(ಚಂದ್ರ ಕೋರ್ ಬಿಂದಿ)ವನ್ನು ಇಡಲಾಗುತ್ತದೆ. ಇದನ್ನು ವಧು ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿರುವ ಮಹಿಳೆಯರು ಸರ್ವೇ ಸಾಮಾನ್ಯವಾಗಿ ಪ್ರತಿನಿತ್ಯ ಇಟ್ಟುಕೊಳ್ಳುತ್ತಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯಿರಿ- ಆರೋಗ್ಯ ಕಾಪಾಡಿಕೊಳ್ಳಿ
ಮನುಷ್ಯ ಸಂಘ ಜೀವಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿಯೊಬ್ಬ ವ್ಯಕ್ತಿಗೂ ಜೀವದಲ್ಲಿ ಸಂಗಾತಿ ಬಹಳ ಮುಖ್ಯ. ಸಂಗಾತಿ ಇಲ್ಲದೇ ಮನುಷ್ಯರ ಜೀವನ ಪೂರ್ಣವಾಗುವುದಿಲ್ಲ. ನೀವು ನಿಜವಾಗಲೂ ಯಾರನ್ನಾದರೂ ಪ್ರೀತಿಸಿದ್ದರೆ, ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು ಅನ್ನಿಸುತ್ತದೆ. ನೀವು ಯಾವುದೇ ಕೆಲಸ ಹಾಗೂ ವ್ಯಾಪಾರ ಮಾಡಿದರೂ ಅದನ್ನು ಹೊರತುಪಡಿಸಿ ನಿಮ್ಮ ಸಂಗಾತಿಗೆಂದೇ ಕೆಲವೊಂದಷ್ಟು ಸಮಯವನ್ನು ಮೀಸಲಿಡುತ್ತೀರಾ. ನಿಮ್ಮ ಸಂಗಾತಿಗೆ ನೀವು ಮತ್ತಷ್ಟು ಹತ್ತಿರವಾಗುವ ಉತ್ತಮ ಆಯ್ಕೆ ಎಂದರೆ ಅದು ಕಪಲ್ ಟ್ಯಾಟೂ.
ನೀವು ಇಷ್ಟ ಪಡುವಂತಹ ಕಪಲ್ ಟ್ಯಾಟೂವನ್ನು ಹಾಕಿಸಿಕೊಳ್ಳಬಹುದು. ಇದರಿಂದ ನಿಮ್ಮ ಸಂಗಾತಿ ನೀವು ಎಲ್ಲೆ ಹೋದರೂ ಬಂದರೂ ನಿಮ್ಮ ಮನದಲ್ಲಿಯೇ ಇರುತ್ತಾರೆ ಹಾಗೂ ಇಬ್ಬರ ನಡುವೆ ಪ್ರೀತಿ ಕೂಡ ಹೆಚ್ಚಾಗುತ್ತದೆ. ಈ ಕೆಳಗೆ ಕೆಲವೊಂದು ಕಪಲ್ ಟ್ಯಾಟೂ ಡಿಸೈನ್‍ಗಳನ್ನು ನೀಡಲಾಗಿದ್ದು, ನಿಮಗೆ ಇಷ್ಟವಾದ ಟ್ಯಾಟೂಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು.
ಲಾಕ್ ಆ್ಯಂಡ್ ಕೀ ಟ್ಯಾಟೂ
ಜೋಡಿಗಳು ಈ ಟ್ಯಾಟೂವನ್ನು ಸಾಮಾನ್ಯವಾಗಿ ಹಾಕಿಸಿಕೊಳ್ಳುತ್ತಾರೆ. ಈ ಟ್ಯಾಟೂ ಡಿಸೈನ್‍ನಲ್ಲಿ ಒಬ್ಬ ವ್ಯಕ್ತಿ ಲಾಕ್ ಚಿತ್ರವನ್ನು ಬರೆಸಿಕೊಂಡರೆ ಮತ್ತೊಬ್ಬರು ಕೀ ಚಿತ್ರವನ್ನು ಬರೆಸಿಕೊಂಡಿರುತ್ತಾರೆ.
ಪದಗಳ ಟ್ಯಾಟೂ
ಸಾಮಾನ್ಯವಾಗಿ ಜೋಡಿಗಳು ಪದಗಳ ಟ್ಯಾಟೂವನ್ನು ಹಾಕಿಸಿಕೊಳ್ಳಲು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಈ ಟ್ಯಾಟೂನಲ್ಲಿ ಒಂದು ಅರ್ಥಪೂರ್ಣವಾದ ‘ಎಂದಿಗೂ ಮುಗಿಯದ ಪ್ರೀತಿ’ ಎಂಬ ವಾಕ್ಯವಿದ್ದು, ಅದರ ಅರ್ಧ ವಾಕ್ಯವನ್ನು ಒಬ್ಬರು ಪದಗಳ ಮೂಲಕ ಹಾಕಿಸಿಕೊಂಡಿದ್ದಾರೆ. ಮತ್ತೊಬ್ಬರು ಉಳಿದ ಅರ್ಧ ಪದಗಳ ಟ್ಯಾಟೂವನ್ನು ಹಾಕಿಸಿಕೊಂಡಿರುತ್ತಾರೆ.
ಲವ್ ಡಿಸೈನ್ ಟ್ಯಾಟೂ
ಪ್ರಪಂಚದಲ್ಲಿ ಪ್ರತಿಯೊಬ್ಬರು ಪ್ರೀತಿಯನ್ನು ತಮ್ಮ ಸಂಗಾತಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರೀತಿಗಿಂತ ಮಿಗಿಲಾದ ಟ್ಯಾಟೂ ಇದೆಯಾ? ಲವ್ ಎಂದು ನೂರಾರು ರೀತಿಯ ಡಿಸೈನ್‍ಗಳಲ್ಲಿ ಪದಗಳನ್ನು ಬರೆಸಿಕೊಳ್ಳಬಹುದು.
ಮಿಕ್ಕಿ ಮಿನ್ನಿ ಟ್ಯಾಟೂ
ಮಿಕ್ಕಿ ಮಿನ್ನಿ ಟ್ಯಾಟೂ ಕಪಲ್ ಟ್ಯಾಟೂಗೆ ಫೇಮಸ್. ಈ ಟ್ಯಾಟೂನಲ್ಲಿ ಮಿಕ್ಕಿ ಡಿಸೈನ್‍ನನ್ನು ಪುರುಷನ ಕೈಗೆ ಹಾಗೂ ಮಿನ್ನಿ ಡಿಸೈನ್‍ನನ್ನು ಮಹಿಳೆಯ ಕೈ ಮೇಲೆ ಹಾಕಿಸಲಾಗಿದೆ ಹಾಗೂ ಈ ಟ್ಯಾಟೂವನ್ನು ನಿಮ್ಮ ದೇಹದಲ್ಲಿ ಎಲ್ಲಿ ಬೇಕಾದರೂ ಹಾಕಿಸಿಕೊಳ್ಳಬಹುದು.
ಸನ್ ಹಾಗೂ ಮೂನ್ ಟ್ಯಾಟೂ
ಪ್ರೀತಿಯನ್ನು ವ್ಯಕ್ತಪಡಿಸಲು ಕಪಲ್‍ಗಳಿಗೆ ಸೂರ್ಯ ಹಾಗೂ ಚಂದ್ರ ಚಿಹ್ನೆಯ ಟ್ಯಾಟೂ ಬಹಳ ಉತ್ತಮ. ಈ ಟ್ಯಾಟೂ ಡಿಸೈನಲ್ಲಿ ಸೂರ್ಯ ಚಿಹ್ನೆಯನ್ನು ಪುರುಷ ಹಾಕಿಸಿಕೊಂಡಿದ್ದರೆ, ಚಂದ್ರ ಚಿಹ್ನೆಯನ್ನು ಮಹಿಳೆ ಹಾಕಿಸಿಕೊಂಡಿರುತ್ತಾರೆ.
ಬಾಣ ಹಾಗೂ ಹಾರ್ಟ್
ಬಾಣ ಹಾಗೂ ಹೃದಯ ಚಿಹ್ನೆಯ ಟ್ಯಾಟೂ ಜೋಡಿಗಳ ಕೈ ಮೇಲೆ ಬಹಳ ರೊಮ್ಯಾಟಿಂಕ್ ಆಗಿ ಕಾಣಿಸುತ್ತದೆ. ಇದರಲ್ಲಿ ಒಬ್ಬರು ಬಾಣದ ಚಿಹ್ನೆಯನ್ನು ಹಾಕಿಸಿಕೊಂಡಿದ್ದರೆ ಮತ್ತೊಬ್ಬರು ಹೃದಯದ ಚಿಹ್ನೆಯನ್ನು ಕೈ ಮೇಲೆ ಹಾಕಿಸಿಕೊಂಡಿದ್ದಾರೆ.
ಮದುವೆ ಸಮಾರಂಭ ಅಂದರೆ ಸಾಕು. ಹೆಣ್ಣು ಮಕ್ಕಳಿಗೆ ಮೆಹಂದಿ ಇರಲೇ ಬೇಕು. ಚಿಕ್ಕ-ಮಕ್ಕಳಿಂದ ದೊಡ್ಡವರವರೆಗೂ ಮೆಹಂದಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಮದುವೆ ಸಮಾರಂಭಗಳಲ್ಲಂತೂ ಮದುಮಗಳು ಮೆಹಂದಿ ಹಾಕದೇ ಇದ್ದರೆ ಮದುವೆ ಕಂಪ್ಲೀಟ್ ಆಗಿದೆ ಎಂದು ಎನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ವಧುವಿನ ಮಹೆಂದಿ ಭಾರತ ಹಳೆಯ ಸಂಸ್ಕøತಿ ಮತ್ತು ಸಾಂಪ್ರದಾಯವನ್ನು ಸೂಚಿಸುತ್ತದೆ.
ಮದುವೆ ಸಮಾರಂಭಗಳಲ್ಲಿ ವಧುವಿನ ಎರಡು ಕೈಗಳು ಮತ್ತಷ್ಟು ಸುಂದರ ಹಾಗೂ ಆಕರ್ಷಕವಾಗಿ ಎದ್ದು ಕಾಣಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಅಲ್ಲದೆ ಮದುವೆ ಸಂದರ್ಭದಲ್ಲಿ ವಧುವಿಗಷ್ಟೇ ಅಲ್ಲದೆ ವರನಿಗೂ ಮೆಹಂದಿ ಹಚ್ಚಲಾಗುತ್ತದೆ. ಹಿಂದಿನಿಂದಲೂ ಮದುವೆಯ ಎಲ್ಲ ಶಾಸ್ತ್ರಗಳಲ್ಲಿ ಮೆಹಂದಿ ಶಾಸ್ತ್ರ ಕೂಡ ಒಂದಾಗಿದೆ. ಮದುವೆ ಸಮಯದಲ್ಲಿ ವಧು-ವರನ ಕುಟುಂಬದವರು ಮೆಹಂದಿ ಶಾಸ್ತ್ರವನ್ನು ಆಯೋಜಿಸಿ ಮೆಹಂದಿ ಹಾಕಿಸಿಕೊಳ್ಳುವ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
ಕೆಲವರು ಮೆಹಂದಿ ಹಾಕಿಸಿಕೊಂಡ ಬಳಿಕ ಅದು ಅತಿಯಾದ ಬಣ್ಣ ನೀಡಿದರೆ ತಮ್ಮ ಜೀವನ ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಿಮ್ಮ ದೇಹದಲ್ಲಿ ಉಷ್ಣಾಂಶ ಅಧಿಕವಾಗಿದ್ದರೆ ಮೆಹಂದಿ ಹೆಚ್ಚು ಬಣ್ಣ ಕೊಡುತ್ತದೆ ಎಂದು ಕೂಡ ಹೇಳುತ್ತಾರೆ. ಇಷ್ಟೆಲ್ಲಾ ಗಾಢವಾದ ಪ್ರಾಮುಖ್ಯತೆ ಇರುವ ಮೆಹಂದಿ ಬಗ್ಗೆ ತಿಳಿದಿದ್ದು, ಸಮಾರಂಭಗಳಲ್ಲಿ ಯಾವ ಮೆಹಂದಿ ಡಿಸೈನ್ಸ್ ಹಾಕಿಕೊಳ್ಳಬೇಕೆಂದು ತಿಳಿಯದೇ ಇರುವವರಿಗೆ ಒಂದಷ್ಟು ಮೆಹಂದಿ ಡಿಸೈನ್ಸ್ ಈ ಕೆಳಗಿನಂತಿವೆ.
ನವಿಲು ಡಿಸೈನ್ಸ್
ಈ ಸುಂದರವಾದ ಮೆಹಂದಿ ಡಿಸೈನ್‍ನಲ್ಲಿ ಕೈನ ಮೇಲಿನ ತುದಿಯಲ್ಲಿ ಎರಡು ನವಿಲುಗಳು ಅದಲು-ಬದಲಾಗಿ ತಲೆ ಬಾಗಿಸಿಕೊಂಡಿದ್ದು, ಕೈನ ಮಧ್ಯದಲ್ಲಿ ವಧು-ವರನನ್ನು ಮಂಟಪಕ್ಕೆ ಕರೆದೊಯ್ಯಲಾಗುತ್ತಿರುವಂತೆ ಚಿತ್ರ ಬಿಡಿಸಲಾಗಿದೆ. ಜೊತೆಗೆ ವಧು-ವರ ಇಬ್ಬರು ಹಾರ ಬದಲಿಸಿಕೊಳ್ಳುವಂತಿದ್ದು ಒಂದು ಸುಂದರ ಮದುವೆ ಕಥೆ ಹೇಳುವಂತೆ ತೋರುತ್ತದೆ.
ಮಿಕ್ಕಿ ಮೌಸ್ ಡಿಸೈನ್
ಈ ಮೆಹಂದಿ ಡಿಸೈನ್‍ನಲ್ಲಿ ವಧು ಬಹಳ ಸಿಂಪಲ್ ಹಾಗೂ ಡಿಫರೆಂಟ್ ಆಗಿರುವ ಮಿಕ್ಕಿಮೌಸ್‍ನ ಚಿತ್ರವನ್ನು ಕೈ ಮೇಲೆ ಬರೆಸಿಕೊಂಡಿದ್ದಾರೆ. ಈ ಡಿಸೈನ್ ಒಂದು ರೀತಿ ಮಹಿಳೆಯರಿಗೆ ಯುನಿಕ್ ಲುಕ್ ನೀಡುತ್ತದೆ.
ಹೂವಿನ ರಾಶಿ ಡಿಸೈನ್
ಇದೊಂದು ಯುನಿಕ್ ಮೆಹಂದಿ ಡಿಸೈನ್ ಆಗಿದ್ದು, ಹಲವಾರು ಮೆಹಂದಿ ಡಿಸೈನ್‍ಗಳ ಮಧ್ಯೆ ಒನ್ ಆಫ್ ದಿ ಬೆಸ್ಟ್ ಡಿಸೈನ್ ಎಂದೇ ಹೇಳಬಹುದು. ಕೈ ತುಂಬಾ ಹೂವಿನ ರಾಶಿಗಳಿಂದ ತುಂಬಿಕೊಂಡಿರುವ ಈ ಡಿಸೈನ್ ನೋಡಲು ಅತ್ಯಂತ ಆಕರ್ಷಕವಾಗಿದ್ದು, ಬಹಳ ಸುಂದರವಾಗಿ ಕಾಣಿಸುತ್ತದೆ.
ವಧು-ವರ ಡಿಸೈನ್
ವಧು ವರನ ಚಿತ್ರ ಹೊಂದಿರುವ ಈ ಮೆಹಂದಿ ಕಲಾ ವಿನ್ಯಾಸದಲ್ಲಿ, ನವಿಲು, ಕಮಲ, ಹೂಗಳಿದೆ ಹಾಗೂ ಇವೆಲ್ಲವೂ ವಧು-ವರರನ್ನು ಮದುವೆಗೆ ಸ್ವಾಗತ ಕೋರುವ ರೀತಿಯಲ್ಲಿದ್ದು, ಈ ಡಿಸೈನ್ ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದರೆ ತಪ್ಪಾಗಲಾರದು.
ರಾಧಾ-ಕೃಷ್ಣ ಡಿಸೈನ್
ಒಂದು ಕೈನಲ್ಲಿ ರಾಧಾ-ಕೃಷ್ಣನೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಕೃಷ್ಣನ ಜೊತೆ ರಾಧೆ ಕೊಳಲನ್ನು ಹಿಡಿದುಕೊಂಡಿರುವಂತೆ ಚಿತ್ರವನ್ನು ಬಿಡಿಸಲಾಗಿದೆ. ಮತ್ತೊಂದು ಕೈ ಮೇಲೆ ದೇವಾಲಯ, ಮಕ್ಕಳು, ಓಂ, ಸ್ವಸ್ತಿಕ್ ಚಿತ್ರದ ಜೊತೆ ದಿನಾಂಕ, ವರ್ಷವನ್ನು ಬರೆಯಲಾಗಿದೆ.
ಗಾಂಧಿನಗರ: ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಪ್ರತಿಮೆಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದ ಗುಜರಾತ್ ಇದೀಗ ಕ್ರಿಕೆಟ್ ಸ್ಟೇಡಿಯಂ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಗುಜರಾತ್‍ನ ಅಹಮದಾಬಾದ್‍ದಿಂದ ಸ್ವಲ್ಪ ದೂರದ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಹೊರ ಹೊಮ್ಮಲಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಫೆಬ್ರವರಿ 24ರಂದು ಸರ್ದಾರ್ ಪಟೇಲ್ ಸ್ಟೇಡಿಯಂ ಉದ್ಘಾಟನೆಯಾಗಲಿದೆ. ಜೊತೆಗೆ ಇಲ್ಲಿಯೇ ಟ್ರಂಪ್ ಅವರು ಸಾರ್ಜಜನಿಕ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದೆ.
ಸ್ಟೇಡಿಯಂ ವಿಶೇಷತೆ:
ಅಹಮದಾಬಾದ್ ಸ್ಟೇಡಿಯಂನಲ್ಲಿ 1982ರಿಂದ 2015ರ ವರೆಗೂ 49,000 ಆಸನಗಳ ವ್ಯವಸ್ಥೆ ಇತ್ತು. 2016ರ ಡಿಸೆಂಬರ್ ನಿಂದ ಕಾಮಗಾರಿ ಆರಂಭಗೊಂಡು ಸುಮರು 700 ಕೋಟಿ ರೂ. ವೆಚ್ಚದಲ್ಲಿ ಎಲ್ ಆಂಡ್ ಟಿ ಕಂಪನಿ ಗುತ್ತಿಗೆ ಪಡೆದು ಸ್ಟೇಡಿಯಂ ನಿರ್ಮಿಸಿದೆ. 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸುವ ಮೂಲಕ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಮೆಲ್ಬರ್ನ್ ಸ್ಟೇಡಿಯಂನಲ್ಲಿ 1.04 ಲಕ್ಷ ಆಸನಗಳ ವ್ಯವಸ್ಥೆಯಿದೆ. ಈ ದಾಖಲೆಯನ್ನು ಗುಜರಾತ್ ಕ್ರಿಕೆಟ್ ಮಂಡಳಿ ಮುರಿಯುವ ನಿಟ್ಟಿನಲ್ಲಿ ಹಳೆಯ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಿ 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ದಾರ್ ಪಟೇಲ್ ಕ್ರೀಡಾಂಗಣ ಕೇವಲ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಷ್ಟೇ ಅಲ್ಲದೆ ವಿಶ್ವದ ಎರಡನೇ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಉತ್ತರ ಕೊರಿಯಾದ ರುಂಗ್ರಾಡೊ ಮೆ ಡೆ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಮೈದಾನ ಎಂಬ ಖ್ಯಾತಿ ಹೊಂದಿದ್ದು, ಈ ಕ್ರೀಡಾಂಗಣದಲ್ಲಿ 1.50 ಲಕ್ಷ ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ನೋಡಬಹುದು.
ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಅನ್ನು ವಿನ್ಯಾಸಗೊಳಿಸಿದ ತಂಡವೇ ಈ ಸ್ಟೇಡಿಯಂ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದೆ. 64 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ 1.10 ಲಕ್ಷ ಜನರು ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕ್ರೀಡಾಂಗಣದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ನಾಲ್ಕು ಡ್ರೆಸ್ಸಿಂಗ್ ರೂಮ್‍ಗಳು ಮತ್ತು ಮೂರು ಅಭ್ಯಾಸ ಮೈದಾನಗಳಿವೆ.
ಮೂರು ಮಾದರಿಯ ಪಿಚ್:
ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಕೆಂಪು ಮತ್ತು ಕಪ್ಪು ಮಣ್ಣು ಬಳಸಿ ಮೂರು ಮಾದರಿಯ ಪಿಚ್‍ಗಳನ್ನು ಸಿದ್ಧಗೊಳಿಸಲಾಗಿದೆ. ಅವುಗಳ ಪೈಕಿ ಕೆಲವನ್ನು ಸಂಪೂರ್ಣ ಕಪ್ಪು ಮಣ್ಣಿನಿಂದ, ಇನ್ನೂ ಕೆಲವನ್ನು ಕೆಂಪು ಮಣ್ಣಿನಿಂದ ಹಾಗೂ ಮತ್ತೆ ಕೆಲವನ್ನು ಎರಡೂ ಮಣ್ಣುಗಳ ಮಿಶ್ರಣದಿಂದ ಸಿದ್ಧಪಡಿಸಲಾಗಿದೆ. ಸಾಧಾರಣವಾಗಿ ಮೈದಾನದ ನಾಲ್ಕು ಭಾಗಗಳಲ್ಲಿ ಫ್ಲಡ್ ಲೈಟ್ ಹಾಕಲಾಗುತ್ತದೆ, ಆದರೆ ಈ ಸ್ಟೇಡಿಯಂನಲ್ಲಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸ್ಟೇಡಿಯಂಗೆ ಎಲ್‍ಇಡಿ ದೀಪಗಳನ್ನು ಹಾಕಲಾಗಿದ್ದು 30 ಮೀಟರ್ ದೂರದವರೆಗಿನ ಪ್ರದೇಶಗಳನ್ನು ದೀಪಗಳು ಕವರ್ ಮಾಡಲಿದೆ.
ಸಬ್ ಏರ್ ಸಿಸ್ಟಂ:
ಮಳೆ ಬಂದು ಸ್ಟೇಡಿಯಂನಲ್ಲಿ ನೀರು ನಿಂತು ಪಂದ್ಯ ರದ್ದಾಗುವ ಸಾಧ್ಯತೆ ಇರುತ್ತದೆ. ಆದರೆ ಇಂತಹ ಸಮಸ್ಯೆಗೆ ಸರ್ದಾರ್ ಪಟೇಲ್ ಮೈದಾನಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೈದಾನವನ್ನು ಒಣಗಿಸುವ ಸಬ್ ಏರ್ ಸಿಸ್ಟಂ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ನಿಂತ ಅರ್ಧ ಗಂಟೆಗೆ ಮೈದಾನ ಒಣಗುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಸಬ್ ಏರ್ ಸಿಸ್ಟಂ ಅಳವಡಿಸಲಾಗಿದೆ.
ಒಳಾಂಗಣ ಕ್ರಿಕೆಟ್ ಅಕಾಡೆಮಿ ಮತ್ತು ಒಲಿಂಪಿಕ್ ಮಾನದಂಡಗಳ ಪ್ರಕಾರ ಈಜುಕೊಳ, ಸ್ಕ್ವ್ಯಾಷ್ ಏರಿಯಾ ಹಾಗೂ ಟೇಬಲ್ ಟೆನಿಸ್ ಏರಿಯಾಗಳು ಕೂಡ ಸರ್ದಾರ್ ಪಟೇಲ್ ಮೈದಾನದಲ್ಲಿವೆ. ಜೊತೆಗೆ ಮೈದಾನದಲ್ಲಿ 3 ಡಿ ಥಿಯೇಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರೊಂದಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ:
ಪಂದ್ಯ ವೀಕ್ಷಣೆಗೆ ಬರುವ ಜನರ ಬೈಕ್ ಹಾಗೂ ಕಾರ್ ಪಾರ್ಕಿಂಗ್ ವಿಶಾಲ ಜಾಗ ಒದಗಿಸಲಾಗಿದೆ. ಇಲ್ಲಿ 3,000 ಕಾರು ಹಾಗೂ 10,000 ಬೈಕ್‍ಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಜೊತೆಗೆ ಮೈದಾನಕ್ಕೆ ಸಂಪರ್ಕ ಕಲ್ಪಿಸಲು 300 ಮೀಟರ್ ದೂರದಲ್ಲೇ ಮೆಟ್ರೋ ನಿಲ್ದಾಣವನ್ನು ಸಹ ನಿರ್ಮಿಸಲಾಗುತ್ತಿದೆ. ಮೆಟ್ರೋ ನಿಲ್ದಾಣದಿಂದ ನೇರವಾಗಿ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಲು ಸ್ಕೈವಾಕ್ ನಿರ್ಮಾಣವಾಗಲಿದೆ.
ಅಷ್ಟೇ ಅಲ್ಲದೆ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋಜನೆ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಐತಿಹಾಸಿಕ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ ಯಾವ ದೇಶದ ಜೊತೆಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ಐಪಿಎಲ್ ಪಂದ್ಯದೊಂದಿಗೆ ಸರ್ದಾರ್ ಪಟೇಲ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಐಪಿಎಲ್‍ನಲ್ಲಿ ನೌಕೌಟ್ ಪಂದ್ಯಗಳು ಬಿಸಿಸಿಐ ಲೆಕ್ಕಚಾರದಂತೆ ನಡೆಯುತ್ತದೆ. ಈ ಪಂದ್ಯಗಳ ಟಿಕೆಟ್ ಮೂಲಕ ಬರುವ ಹಣ ಕೂಡ ಭಾರತೀಯ ಕ್ರಿಕೆಟ್ ಮಂಡಳಿಗೆ ಸೇರುತ್ತದೆ. ಹೀಗಾಗಿ ಫೈನಲ್ ಬಿಸಿಸಿಐ ಸೂಚನೆಯಂತೆ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಶೇ.90 ರಷ್ಟು ಕೆಲಸಗಳು ಮುಗಿದಿದ್ದು ಮಾರ್ಚ್ ಕೊನೆಯ ವೇಳೆಗೆ ಬಾ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.
ವಿಶ್ವದ 5 ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳು: ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
ದೇಶ- ಆಸ್ಟ್ರೇಲಿಯಾ
ಆಸನಗಳು- 1,00,024
ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
ಈಡನ್ ಗಾರ್ಡನ್ಸ್
ದೇಶ- ಭಾರತ (ಕೊಲ್ಕತ್ತಾ)
ಆಸನಗಳು- 66,349
ಭಾರತದ ಅತಿ ದೊಡ್ಡ ಕ್ರಿಕೆಟ್ ಮೈದಾನ
ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ದೇಶ- ಭಾರತ (ಚತ್ತೀಸ್‍ಗಢ್)
ಆಸನಗಳು- 65,000
ಈಡನ್ ಗಾರ್ಡನ್ಸ್
ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ದೇಶ- ಭಾರತ (ಹೈದರಾಬಾದ್),
ಆಸನಗಳು- 60,000
ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ
ದೇಶ- ಭಾರತ (ತಿರುವನಂತಪುರಂ)
ಆಸನಗಳು- 55,000.
ವಿಶೇಷತೆ: ಕ್ರಿಕೆಟ್ ಪಂದ್ಯಗಳನ್ನು ಹೊರತುಪಡಿಸಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
ಧಾರವಾಡ: ನಗರದ ಕಟ್ಟಡ ದುರಂತದ ಕಹಿ ಘಟನೆಯನ್ನು ಜನರು ಮರೆಯುವ ಮೊದಲೇ, ಕಟ್ಟಡ ದುರಂತಕ್ಕೆ ಕಾರಣವಾಗಿದ್ದ ಕಟ್ಟಡ ವಿನ್ಯಾಸಕಾರ ಮಾಡಿದ ಇನ್ನೊಂದು ಅಪಾರ್ಟ್ ಮೆಂಟ್ ಬಿರುಕು ಬಿಟ್ಟಿದೆ.
ಕಟ್ಟಡದ ವಿನ್ಯಾಸಕಾರ ವಿವೇಕ ಪವಾರ್ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ಬಹುತೇಕ ಕಟ್ಟಡ ಹಾಗೂ ಅಪಾರ್ಟ್ ಮೆಂಟ್‍ಗಳ ವಿನ್ಯಾಸ ಮಾಡಿದ್ದಾರೆ. ಆದರೆ ಅವುಗಳಲ್ಲಿ ಬಹುತೇಕ ಬಿರುಕು ಹಾಗೂ ಬಿಳುವ ಸ್ಥಿತಿಗೆ ಬಂದು ತಲುಪಿವೆ. ಹೀಗಾಗಿ ಈ ಕಟ್ಟಡಗಳ ಅಕ್ಕ ಪಕ್ಕದ ಜನರಿಗೆ ಹಾಗೂ ಅಲ್ಲಿರುವ ಜನರಿಗೆ ಕೂಡ ಆತಂಕ ಸೃಷ್ಟಿಯಾಗಿದೆ.
ಈಗಾಗಲೇ ಕುಮಾರೇಶ್ವರನಗರದ ಕಟ್ಟಡ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದು, ಈ ಘಟನೆ ಮತ್ತೆ ಪುನರಾವರ್ತನೆ ಆಗದಿರಲಿ ಎಂದ ಜನರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ಮಹಾನಗರ ಪಾಲಿಕೆ ಕೂಡ ಧಾರವಾಡದ ಮಾಳಮಡ್ಡಿಯ ಅಪಾರ್ಟ್ ಮೆಂಟ್ ಬಿರುಕಿನ ವಿಷಯ ತಿಳಿದು ಅಕ್ಕಪಕ್ಕದ ಮನೆಗಳನ್ನ ಖಾಲಿ ಮಾಡಲು ಆದೇಶ ಮಾಡಿದೆ.
ಈ ಅಪಾರ್ಟ್ ಮೆಂಟ್ ಕೂಡ ವಿವೇಕ್ ಪವಾರ ಅವರೇ ವಿಸ್ಯಾನ ಮಾಡಿದ್ದರಿಂದ ಇದು ಜನರಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿದೆ.
ಮುಂಬೈ: 100 ರೂ. ಮುಖ ಬೆಲೆಯ ಹೊಸ ನೋಟು ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿದ ಬೆನ್ನಲ್ಲೇ ಈ ಹೊಸ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಎಟಿಎಂಗಳಲ್ಲಿ ಬದಲಾವಣೆ ಮಾಡಲು 100 ಕೋಟಿ ಖರ್ಚಾಗಲಿದೆ ಎಂಬ ಮಾಹಿತಿ ಲಭಿಸಿದೆ.
ದೇಶದಲ್ಲಿ 2.4 ಲಕ್ಷ ಕೋಟಿ ಎಟಿಎಂ ಗಳಿ ಸೇವೆಗೆ ಲಭ್ಯವಿದೆ. ಎಲ್ಲ ಎಟಿಎಂಗಳಲ್ಲಿ ಹೊಸ ನೋಟಿನ ವಿನ್ಯಾಸಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಯಿಸಿ ಅಳವಡಿಸುವ ಅನಿವಾರ್ಯತೆ ಇರುವುದಾಗಿ ಪೈನಾಷಿಯಲ್ ಸಾಫ್ಟ್ ವೇರ್ ಸಿಸ್ಟಮ್ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.
ನೋಟು ನಿಷೇಧ ಬಳಿಕ ಮುದ್ರಣ ಮಾಡಲಾದ 200 ರೂ. ಮುಖ ಬೆಲೆಯ ಹೊಸ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಎಟಿಎಂಗಳಲ್ಲಿ ಬದಲಾವಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಈ ಮಧ್ಯೆ ಹೊಸ 100 ರೂ. ನೋಟಿನ ಅಳವಡಿಕೆಗೆ 100 ಕೋಟಿ. ರೂ ವೆಚ್ಚವಾಗಲಿದೆ.
ದೇಶದಲ್ಲಿರುವ 2.4 ಲಕ್ಷ ಎಟಿಎಂ ಗಳಲ್ಲಿ ಹೊಸ ಬದಲಾವಣೆ ಮಾಡಲು 100 ಕೋಟಿ ರೂ. ವೆಚ್ಚದೊಂದಿಗೆ 12 ತಿಂಗಳ ಅವಧಿಯ ಬೇಕಾಗುತ್ತದೆ ಎಂದು ಹಿಟಾಚಿ ಸೇವಾ ಸಂಸ್ಥೆಯ ಎಂಡಿ ಲೂನಿ ಆ್ಯಂಟೋನಿ ತಿಳಿಸಿದ್ದಾರೆ.
ಆರ್‌ಬಿಐ ಕೆಲ ದಿನಗಳ ಹಿಂದೆಯಷ್ಟೇ ಹೊಸ ವಿನ್ಯಾಸದ 100 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ನೂತನ 100 ರೂಪಾಯಿಯ ಹೊಸ ನೋಟು ಲ್ಯಾವೆಂಡರ್(ನೀಲಿ) ಬಣ್ಣ ಹೊಂದಿದ್ದು, 66 ಮಿ.ಮೀ. ಘಿ 142 ಮಿ.ಮೀ. ಅಳತೆಯಲ್ಲಿದೆ. ನೋಟಿನ ಹಿಂಭಾಗದಲ್ಲಿ ಗುಜರಾತ್ ನ ಐತಿಹಾಸಿಕ `ರಾಣಿ ಕಿ ವಾವ್’ನ ಚಿತ್ರವನ್ನು ಹೊಂದಿರಲಿದೆ. ಅಲ್ಲದೇ ಈಗಾಗಲೇ ಚಾಲ್ತಿಯಲ್ಲಿರುವ 100 ರೂ. ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ ಎಂದು ತಿಳಿಸಿದ್ದ ಆರ್‌ಬಿಐ ಮುಂದಿನ ದಿನಗಳಲ್ಲಿ ಹೊಸ ವಿನ್ಯಾಸದ ನೋಟುಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿತ್ತು.
Will shortly issue Rs 100 denomination banknotes .This new denomination has motif of “RANI KI VAV” on the reverse, depicting the country’s cultural heritage. The base colour of the note is Lavender. The existing 100 rupee note will continue to be legal tender: RBI pic.twitter.com/68HdtAW9m2
ಹೈದರಾಬಾದ್ : ಆಂಧ್ರ ಪ್ರದೇಶ ಪ್ರತ್ಯೇಕ ರಾಜ್ಯ ರಚನೆ ನಡೆದು ಹೊಸದಾಗಿ ನಿರ್ಮಿಸಲಾಗುತ್ತಿರುವ ರಾಜಧಾನಿ ಅಮರಾವತಿಯಲ್ಲಿ ಸರ್ಕಾರದ ಕಟ್ಟಡಗಳು ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ರಾಜಮೌಳಿ ಅವರ ವಿನ್ಯಾಸವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರಸ್ಕರಿಸಿದ್ದಾರೆ.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬಾಹುಬಲಿ ಸಿನಿಮಾದಲ್ಲಿನ ಮಾಹಿಷ್ಮತಿ ಸಾಮ್ರಾಜ್ಯ ಕಲ್ಪನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಇದನ್ನು ಸ್ವತಃ ಇಷ್ಟ ಪಟ್ಟು ಮೆಚ್ಚುಗೆ ಸೂಚಿಸಿದ್ದ ಸಿಎಂ ಚಂದ್ರಬಾಬು ನಾಯ್ಡು, ಅಮರಾವತಿ ರಾಜಧಾನಿ ನಿರ್ಮಾಣಕ್ಕೆ ವಿನ್ಯಾಸ ರೂಪಿಸಲು ರಾಜಮೌಳಿ ಅವರನ್ನು ಕೇಳಿಕೊಂಡಿದ್ದರು.
ಇದರಂತೆ ರಾಜಮೌಳಿ ಅವರು ತೆಲುಗು ಸಂಸ್ಕøತಿಗೆ ಅನುಗುಣವಾಗಿ ನೂತನ ರಾಜಧಾನಿ ನಿರ್ಮಾಣದ ವಿನ್ಯಾಸವನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ನಿರ್ದೇಶಕರ ವಿನ್ಯಾಸಗಳು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಈ ಕುರಿತು ಸ್ವತಃ ರಾಜಮೌಳಿ ಅವರು ಟ್ವೀಟ್ ಮಾಡಿ ತಮ್ಮ ವಿನ್ಯಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರಾಜಧಾನಿಯ ಕಟ್ಟಡ ವಿನ್ಯಾಸ ರೂಪಿಸಲು ಅವಕಾಶ ನೀಡಿದ ಆಂಧ್ರ ಪ್ರದೇಶ ಸರ್ಕಾರಕ್ಕೆ ತಮ್ಮ ಧನ್ಯವಾದ ಸೂಚಿಸಿದ್ದು, ಬ್ರಿಟನ್ ವಿನ್ಯಾಸಕಾರರು ನೀಡಿದ್ದ ವಿನ್ಯಾಸಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ರಾಜಮೌಳಿ ಅವರು ಸಿದ್ಧಪಡಿಸಿರುವ ವಿನ್ಯಾಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಮೌಳಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿನ ಕಟ್ಟಡ ವಿನ್ಯಾಸ ಪ್ರಾಚೀನ ಭಾರತದ ಖಗೋಳಶಾಸ್ತ್ರ ಮತ್ತು ವಾಸ್ತು ಶಾಸ್ತ್ರ ತಂತ್ರಜ್ಞಾನವನ್ನು ಆಧಾರಿಸಿ ಆಧುನಿಕತೆಯೊಂದಿಗೆ ಸಿದ್ಧಪಡಿಸಲಾಗಿದೆ. ಪ್ರತಿವರ್ಷ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಕಿರಣಗಳು ದೇವಾಲಯದ ವಿಗ್ರಹವನ್ನು ಪ್ರವೇಶಿಸುವಂತೆ ಈ ಕಟ್ಟಡ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ರಾಜ್ಯ ಸಭೆಯ ಕಟ್ಟಡದ ಮಧ್ಯಭಾಗದಲ್ಲಿ ಸ್ಥಾಪನೆ ಮಾಡಲಾಗುವ ತೆಲುಗು ಮಾತೆಯ ವಿಗ್ರಹದ ಮೇಲೆ ಸೂರ್ಯನ ಬೆಳಕು ಬಿಳುವಂತೆ ವಿನ್ಯಾಸ ಮಾಡಲಾಗಿದೆ.
ರಾಜಮೌಳಿ ಅವರ ವಿನ್ಯಾಸವನ್ನು ಸರ್ಕಾರ ತಿರಸ್ಕರಿಸಿಲ್ಲ. ರಾಜಧಾನಿಯಲ್ಲಿ ಮಾಧ್ಯಮ ನಗರವೊಂದು ನಿರ್ಮಾಣವಾಗಲಿದೆ. ಈ ಮಾಧ್ಯಮ ನಗರ ನಿರ್ಮಾಣಕ್ಕೆ ರಾಜಮೌಳಿ ಅವರ ವಿನ್ಯಾಸವನ್ನು ಬಳಸಲಾಗುವುದು ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.
ಸರ್ಕಾರ ತನ್ನ APCRDA ವೆಬ್‍ಸೈಟ್ ನಲ್ಲಿ ಎರಡು ವಿನ್ಯಾಸದ ಮಾದರಿ ವಿಡಿಯೋವನ್ನು ಅಪ್ಲೋಡ್ ಮಾಡಿ ಅಭಿಪ್ರಾಯವನ್ನು ಸಂಗ್ರಹಿಸಲು ಆರಂಭಿಸಿದೆ. ಅಂತಿಮವಾಗಿ ಅತಿ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ ವಿನ್ಯಾಸವನ್ನು ಆಯ್ಕೆ ಮಾಡಲಾಗುತ್ತದೆ.