Tag: Desai

  • ‘ದೇಸಾಯಿ’ ಚಿತ್ರದ ಟೀಸರ್ ವೀಕ್ಷಿಸಿದ ಕೊಪ್ಪಳದ ಗವಿಮಠದ ಶ್ರೀ

    ‘ದೇಸಾಯಿ’ ಚಿತ್ರದ ಟೀಸರ್ ವೀಕ್ಷಿಸಿದ ಕೊಪ್ಪಳದ ಗವಿಮಠದ ಶ್ರೀ

    ತ್ತೀಚಿಗೆ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಕೊಪ್ಪಳಕ್ಕೆ ಭೇಟಿ ನೀಡಿದ ನಾಯಕ ನಟ ಪ್ರವೀಣ್ ಕುಮಾರ್, ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ ಇವರು ಸ್ವಾಮಿಗಳನ್ನು ಭೇಟಿ ಮಾಡಿ, ಇತ್ತೀಚಿಗೆ ಬಿಡುಗಡೆಯಾಗಿದ್ದ ದೇಸಾಯಿ (Desai) ಚಿತ್ರದ ಟೀಸರ್ ಹಾಗೂ ಹಾಡನ್ನು ಮೊಬೈಲ್ ನಲ್ಲೇ ಶ್ರೀಗಳಿಗೆ ತೋರಿಸಿದರು.

    ಟೀಸರ್ ಹಾಗೂ ಹಾಡು ವೀಕ್ಷಿಸಿದ ಶ್ರೀಗಳು ಎರಡೂ ಚೆನ್ನಾಗಿ ಮೂಡಿಬಂದಿದೆ. ಒಂದು ಒಳ್ಳೆಯ ಕೌಟುಂಬಿಕ ಚಿತ್ರವನ್ನು ನಿರ್ಮಾಣ ಮಾಡಿದ್ದೀರಿ. ನಿಮಗೆ ಶುಭವಾಗಲಿ ಎಂದು ಶ್ರೀಗಳು‌ ಹಾರೈಸಿ, ಶಾಲು ಹೊದಿಸಿ ಆಶೀರ್ವಾದಿಸಿದ್ದಾರೆ. ನಂತರ ಪೂಜ್ಯರು ಪ್ರಸಾದ ಸೇವಿಸಿ, ಅಜ್ಜನವರ ಗದ್ದುಗೆ ದರ್ಶನ ಮಾಡಿಕೊಂಡು ಹೋಗಿರಿ ಎಂದಿದ್ದಾರೆ.

    ಶ್ರೀಗಳ ಮಾರ್ಗದರ್ಶನದಂತೆ ಗದ್ದುಗೆ ದರ್ಶನ ಪಡೆದು ಪ್ರಸಾದ ಸೇವಿಸಿ ಗುರುಗಳಿಂದ ಆಶೀರ್ವಾದ ಪಡೆದುಕೊಂಡೆವು. ಈ ಸಂದರ್ಭದಲ್ಲಿ ತೋಟ್ಟಪ್ಪ ಕಾಮನೂರು ಮತ್ತು ಬಸವರಾಜ್  ಬುಡ್ಡನಗೌಡರ, ಶರಣಪ್ಪ ನಾವೋಜಿ, ಅಶೋಕ್ ಲಾಗಲೋಟಿ, ನಿಂಗಣ್ಣ ಗೋಡಿ, ಸಂಗನಗೌಡ ವಿ ಟಿ ಪಾಟೀಲ್, ಎನ್ ಸಿ ಗೌಡರ, ಮಂಜುನಾಥ್ ಪಾಟೀಲ್ ಇನ್ನು ಅನೇಕ ಯುವಕರು ಮತ್ತು ಅಭಿಮಾನಿ ಬಳಗ ಜೊತೆಯಿದ್ದರು.

  • ‘ದೇಸಾಯಿ’ ಚಿತ್ರದ ಟೀಸರ್ ರಿಲೀಸ್ ಮಾಡಿದ ಲಕ್ಷ್ಮಣ ಸವದಿ

    ‘ದೇಸಾಯಿ’ ಚಿತ್ರದ ಟೀಸರ್ ರಿಲೀಸ್ ಮಾಡಿದ ಲಕ್ಷ್ಮಣ ಸವದಿ

    ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ, ನಾಗಿರೆಡ್ಡಿ ಭಡ ನಿರ್ದೇಶನದ ಹಾಗೂ ಲವ್ 360 ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸಿರುವ ‘ದೇಸಾಯಿ’ (Desai) ಚಿತ್ರದ ಟೀಸರ್ (Teaser) ಇತ್ತೀಚಿಗೆ ಬಿಡುಗಡೆಯಾಯಿತು. ಮಾಜಿ ಉಪ ಮುಖ್ಯಮಂತ್ರಿಗಳಾದ ಹಾಗೂ ಶಾಸಕ  ಲಕ್ಷ್ಮಣ್ ಸವದಿ (Lakshmana Savadi) ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಲ್ಲಿಕಾರ್ಜುನ ಲೋನಿ, ವಿಜಯಕುಮಾರ್ ಪಿ.ಜಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಸಿನಿಮಾ ನಿರ್ಮಾಣ ನನ್ನ ಕನಸು. ಆ ಕನಸು ನನಸ್ಸಾಗಲು ಚಿತ್ರತಂಡದ ಸಹಕಾರವೇ ಕಾರಣ.  ನನ್ನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿ, ಇಂದು ಟೀಸರ್ ಬಿಡುಗಡೆ ಮಾಡಿಕೊಟ್ಟ ಲಕ್ಷ್ಮಣ್ ಸವದಿ ಅವರಿಗೆ ಧನ್ಯವಾದ. ದೇಸಾಯಿ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಹೆಚ್ಚಿನ ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ. ಅಲ್ಲಿನ ಜನರ ಸಹಕಾರವನ್ನು ಸ್ಮರಿಸಿಕೊಳ್ಳುತ್ತೇನೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಮಹಂತೇಶ ವಿ ಚೋಳಚಗುಡ್ಡ.

    ಅಂದುಕೊಂಡ ಹಾಗೆ ಚಿತ್ರ ಮೂಡಿಬಂದಿದೆ. ಅದಕ್ಕೆ ಬಹುಮುಖ್ಯ ಕಾರಣ ನಿರ್ಮಾಪಕರು ಹಾಗೂ ಚಿತ್ರತಂಡ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ನೋಡಿ. ಪ್ರೋತ್ಸಾಹಿಸಿ ಎಂದು ನಿರ್ದೇಶಕ ನಾಗಿರೆಡ್ಡಿ ಭಡ. ನನ್ನ ಹಿಂದಿನ ಲವ್ 360 ಚಿತ್ರದ ಪಾತ್ರವೇ ಬೇರೆ. ಈ ಚಿತ್ರದ ಪಾತ್ರವೇ ಬೇರೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಚಿತ್ರದಲ್ಲಿ ಪ್ರವೀಣ್ ದೇಸಾಯಿ ನನ್ನ ಪಾತ್ರದ ಹೆಸರು ಎಂದರು ನಾಯಕ ಪ್ರವೀಣ್ ಕುಮಾರ್.

    ನಾಯಕಿ ರಾಧ್ಯ, ನಟ ಚೆಲುವರಾಜು ಅವರು ಸಹ ದೇಸಾಯಿ ಚಿತ್ರದ ಕುರಿತು ಮಾತನಾಡಿದರು. ಲವ್ 360 ಖ್ಯಾತಿಯ ಪ್ರವೀಣ್ ಕುಮಾರ್ ,ರಾಧ್ಯ, ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಸೀತಾ ಬೆನಕ, ಆರತಿ ಕುಲಕರ್ಣಿ, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

  • ‘ದೇಸಾಯಿ’ಗಾಗಿ ರೆಸಾರ್ಟ್ ನಲ್ಲಿ ಕುಣಿದ ಪ್ರವೀಣ್ ಕುಮಾರ್

    ‘ದೇಸಾಯಿ’ಗಾಗಿ ರೆಸಾರ್ಟ್ ನಲ್ಲಿ ಕುಣಿದ ಪ್ರವೀಣ್ ಕುಮಾರ್

    ಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ, ನಾಗಿರೆಡ್ಡಿ ಭಡ ರಚನೆ ಮತ್ತು ನಿರ್ದೇಶನದ ಹಾಗೂ ಲವ್ 360 ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ‘ದೇಸಾಯಿ’ ಚಿತ್ರದ ಹಾಡೊಂದರ ಚಿತ್ರೀಕರಣ ಬೆಂಗಳೂರು ನಗರದ ಹೊರವಲಯದ ಡೆಸ್ಟಿನೊ ರೆಸಾರ್ಟ್ ನ ಸುಂದರ ಪರಿಸರದಲ್ಲಿ ನಡೆಯಿತು. ಶಿವು ಬೋರ್ಗಿ ಅವರು ಬರೆದಿರುವ, ಸಾಯಿಕಾರ್ತಿಕ್ ಸಂಗೀತ ನೀಡಿರುವ ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ನಾಯಕ ಪ್ರವೀಣ್ ಕುಮಾರ್ ಹಾಗೂ ನಾಯಕಿ ರಾಧ್ಯ ಹೆಜ್ಜೆ ಹಾಕಿದರು. ಹಾಡು ಹಾಗೂ ಚಿತ್ರದ ಬಗ್ಗೆ ಚಿತ್ರತಂಡದ ಸದಸ್ಯರು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

    ದೇಸಾಯಿ ಒಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಎಂದು ಮಾತನಾಡಿದ ನಿರ್ದೇಶಕ ನಾಗಿರೆಡ್ಡಿ ಭಡ, ಸುಮಾರು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿರುವ ನನಗೆ ಇದು ಮೊದಲ ನಿರ್ದೇಶನದ ಚಿತ್ರ.  ತಾತಾ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ‌. ಸೆಂಟಿಮೆಂಟ್ ಸನ್ನಿವೇಶಗಳು ಸಖತಾಗಿ ಮೂಡಿಬಂದಿದೆ. ಜನರು ಬಯಸುವ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.

    ನಾನು ಮೂಲತಃ  ಬಾಗಲಕೋಟೆಯವನು.  ಚಿತ್ರ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು. ಅದು ಈಗ ಈಡೇರಿದೆ. ಇದೊಂದು ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಚಿತ್ರ. ಸಂಭಾಷಣೆ ಕೂಡ ಅದೇ ಸೊಗಡಿನಲ್ಲಿರುತ್ತದೆ. ಯಾವುದಕ್ಕೂ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಹೆಚ್ಚಿನ ಚಿತ್ರೀಕರಣ ಬಾದಾಮಿ, ಬಾಗಲಕೋಟೆಯಲ್ಲಿ ನಡೆದಿದೆ‌. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದರು ನಿರ್ಮಾಪಕ ಮಹಂತೇಶ್ ವಿ ಚೋಳದಗುಡ್ಡ.

    ಈ ಚಿತ್ರದಲ್ಲಿ ನನ್ನದು ಆಟಗಾರ(ಅಥ್ಲೆಟಿಕ್)ನ ಪಾತ್ರ. ಲವ್ 360 ಚಿತ್ರದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ನಾಯಕ ಪ್ರವೀಣ್ ಕುಮಾರ್ ತಿಳಿಸಿದರು. ದೇಸಾಯಿ ಚಿತ್ರದಲ್ಲಿ ನನ್ನದು ಬೋಲ್ಡ್  ಹುಡುಗಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ರಾಧ್ಯ ಮಾಹಿತಿ ನೀಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಚಿತ್ರದ ಬಗ್ಗೆ ಮಾತನಾಡಿದರು.

    ಲವ್ 360 ಖ್ಯಾತಿಯ ಪ್ರವೀಣ್ ಕುಮಾರ್, ರಾಧ್ಯ, ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

  • ‘ದೇಸಾಯಿ’ ಚಿತ್ರಕ್ಕೆ ಡಬ್ಬಿಂಗ್ ಕೆಲಸ ಶುರು

    ‘ದೇಸಾಯಿ’ ಚಿತ್ರಕ್ಕೆ ಡಬ್ಬಿಂಗ್ ಕೆಲಸ ಶುರು

    ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ ಹಾಗೂ ನಾಗಿರೆಡ್ಡಿ ಭಡ ನಿರ್ದೇಶನದ ‘ದೇಸಾಯಿ’ ಚಿತ್ರಕ್ಕೆ ಮಾತಿನ ಜೋಡಣೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

    ದೇಸಾಯಿ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಉತ್ತರ ಕರ್ನಾಟಕದ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ರಚನೆ ಹಾಗೂ ನಿರ್ದೇಶನ ನಾಗಿರೆಡ್ಡಿ ಭಡ ಅವರದು. ಬಾದಾಮಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

    ಲವ್ 360 ಖ್ಯಾತಿಯ ಪ್ರವೀಣ್ ಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಮೈಸೂರಿನ ರಾಧ್ಯ ಇದ್ದಾರೆ. ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

     ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಾಗಿರೆಡ್ಡಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ನಿರ್ಮಾಪಕ ಮಹಾಂತೇಶ್ ಅವರಿಗೂ  ದೇಸಾಯಿ ಮೊದಲ ನಿರ್ಮಾಣದ ಚಿತ್ರ.

  • ಸಿನಿಮಾ ರಂಗಕ್ಕೆ ಕಾಲಿಟ್ಟ ಮಾಜಿ ಡಿಸಿಎಂ ಲಕ್ಷ್ಮಣ ಸವದಿ

    ಸಿನಿಮಾ ರಂಗಕ್ಕೆ ಕಾಲಿಟ್ಟ ಮಾಜಿ ಡಿಸಿಎಂ ಲಕ್ಷ್ಮಣ ಸವದಿ

    ಗಾಗಲೇ ಅನೇಕ ರಾಜಕಾರಣಿಗಳು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅವರು ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳದೇ ಇದ್ದರೂ, ಅತಿಥಿ ಪಾತ್ರದಲ್ಲಿ (cameos) ಕೆಲವರು ನಟಿಸಿದ್ದಾರೆ. ಈಗ ಅವರ ಸಾಲಿಗೆ ಹೊಸ ಸೇರ್ಪಡೆ, ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕರಾದ ಲಕ್ಷ್ಮಣ ಸವದಿ.

    ಹೌದು, ಲಕ್ಷ್ಮಣ ಸವದಿ (Lakshmana Savadi) ಸದ್ದಿಲ್ಲದೇ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ‘ದೇಸಾಯಿ’ (Desai) ಹೆಸರಿನ ಚಿತ್ರದಲ್ಲಿ ಅವರು ಅತಿಥಿ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ನಾಗರೆಡ್ಡಿ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಮಹಾಂತೇಶ್ ಚೊಳಚಗುಡ್ಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ನಿರ್ಮಾಪಕರು ಆಪ್ತರು. ಆ ಕಾರಣದಿಂದಾಗಿ ಅವರು ಒಪ್ಪಿಕೊಂಡಿದ್ದಾರೆ.

     

    ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಲಕ್ಷ್ಮಣ ಸವದಿ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕುಸ್ತಿ ಪಟುಗಳಿಗೆ ಬಹುಮಾನ ವಿತರಣಾ ಸಮಾರಂಭವೊಂದು ಸಿನಿಮಾದಲ್ಲಿದ್ದು, ಈ ಸಮಾರಂಭಕ್ಕೆ ಸವದಿ ಗೆಸ್ಟ್. ಗೆದ್ದವರಿಗೆ ಬಹುಮಾನ ನೀಡುವಂತಹ ಪಾತ್ರ ಅದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದೇಸಾಯಿ’ ಚಿತ್ರಕ್ಕೆ ‘ಲವ್ 360’ ಚಿತ್ರದ ಪ್ರವೀಣ್ ಕುಮಾರ್ ಹೀರೋ

    ‘ದೇಸಾಯಿ’ ಚಿತ್ರಕ್ಕೆ ‘ಲವ್ 360’ ಚಿತ್ರದ ಪ್ರವೀಣ್ ಕುಮಾರ್ ಹೀರೋ

    ಹಿಂದಿನಿಂದಲೂ ‘ದೇಸಾಯಿ’ (Desai) ಮನೆತನಕ್ಕೆ ಅದರದೆ ಆದ ಪರಂಪರೆಯ ವೈಶಿಷ್ಟ್ಯವಿದೆ. ಇದನ್ನು ಚಲನಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಮಹಾಂತೇಶ್ ವಿ ಚೊಳಚಗುಡ್ಡ. ‘ಲವ್ 360’ ಚಿತ್ರದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ ಪ್ರವೀಣ್ ಕುಮಾರ್ (Praveen Kumar) ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ‌. ಇತ್ತೀಚೆಗೆ ಈ ಚಿತ್ರದ ಮುಹೂರ್ತ (Muhurta) ಸಮಾರಂಭ ಬಾಗಲಕೋಟೆಯ ಮುಚಖಂಡಿಯ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

    ಚಿತ್ರದ ಮೊದಲ ಸನ್ನಿವೇಶಕ್ಕೆ  ಶಾಸಕರಾದ ಶ್ರೀ ವೀರಣ್ಣ ಚರಂತಿಮಠ ಅವರು ಆರಂಭಫಲಕ ತೋರಿದರು.  ವನಶ್ರೀಮಠ ವಿಜಯಪುರದ ಜಯಬಸವಕುಮಾರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ಮಾಡಿದರು. ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರ ಆರಂಭವಾಯಿತು. ಗಣ್ಯರು ಚಿತ್ರತಂಡದ ಸದಸ್ಯರು ಮೊದಲಿಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ‌

    ಇದು ನನ್ನ ಮೊದಲ ಚಿತ್ರ ಅದ್ಧೂರಿಯಾಗಿ ತೆರೆಯ ಮೇಲೆ ತರುವ ಹಾಗೆ ನಿರ್ದೇಶನಕ್ಕೆ ಸಿದ್ದ ಮಾಡಿಕೊಂಡಿದ್ದೇನೆ ಎಂದು ನಿರ್ದೇಶಕ ನಾಗಿರೆಡ್ಡಿ ಬಡ ತಿಳಿಸಿದರು. ಚಿತ್ರದ ನಿರ್ಮಾಪಕ ಮಹಾಂತೇಶ ವಿ ಚೊಳಚಗುಡ್ಡ ಮಾತನಾಡಿ, ವಿಶಿಷ್ಟ ಕಥಾಹಂದರ ಹೊಂದಿರುವ ಕಥೆಯನ್ನು ನಾನು ಹುಡುಕುತ್ತಿದ್ದಾಗ ನನ್ನ ಯೋಚನೆಗೆ ಬಂದದ್ದು ಈ ಗತಕಾಲದ, ತನ್ನದೇ ಆದ ವೈಶಿಷ್ಟ್ಯ ಪರಂಪರೆಯನ್ನು ಹೊಂದಿರುವ “ದೇಸಾಯಿ” ಮನೆತನದ ಕುರಿತು ಸಿನಿಮಾ ಮಾಡಬೇಕು ಎಂದು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು. ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

    ಈ ಚಿತ್ರ ನನ್ನ ನಟನಾ ವೃತ್ತಿಯಲ್ಲಿ ಒಂದು ಹೊಸ ಅಧ್ಯಾಯ ಆಗಲಿದೆ ಅಂತಹ ಚಾಲೆಂಜಿಂಗ್ ಪಾತ್ರ ಇದಾಗಿದೆ. ಚಿತ್ರದ ಕಥೆ ತುಂಬಾ ಇಷ್ಟವಾಯಿತು‌‌ ಎಂದರು ನಾಯಕ ಪ್ರವೀಣ್ ಕುಮಾರ್.  ಮೈಸೂರು ಮೂಲದ ರಾದ್ಯಾ “ದೇಸಾಯಿ” ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ಕಲಾ ಬಿರಾದಾರ್, ಮಧುಸೂದನ್ ರಾವ್,  ನಟನ  ಪ್ರಶಾಂತ್, ವೀರೇಂದ್ರ, ಹರಿಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಜೈ ಆನಂದ್ ಛಾಯಾಗ್ರಹಣ, ಸಾಯಿಕಾರ್ತಿಕ್ ಸಂಗೀತ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಯಲ್ಲಪ್ಪ ವಿ ಚೊಳಚಗುಡ್ಡ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ.