Tag: Deputy Tahsildar

  • Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    ಗದಗ: ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಕೇಳಲು ಹೋದ ಯುವಕನ ಮೇಲೆ ಹಲ್ಲೆ ಮಾಡಿದ ಉಪತಹಶೀಲ್ದಾರ್‌ರನ್ನ(Deputy Tahsildar) ಅಮಾನತು ಮಾಡಲಾಗಿದೆ.

    ಮೇ 17ರಂದು ರಾತ್ರಿ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ(D T Valmiki), ಕಾಂಗ್ರೆಸ್ ಮುಖಂಡ ವಿದ್ಯಾಧರ್ ದೊಡ್ಡಮನಿ ಹಾಗೂ ಸಹಚರರು ಒಟ್ಟಾಗಿ ಅಕ್ಷಯ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಅಕ್ಷಯ್ ಎಂಬ ಯುವಕ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಕಾರಿನಲ್ಲಿ ಬಂದ ಉಪತಹಶೀಲ್ದಾರ್ ಹಾಗೂ ಅವರ ಸಹಚರರು ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿ ನ್ಯಾಯ ಕೇಳಲು ಹೋದ ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗದ ಬೆಟಗೇರಿ ನಾಡಕಚೇರಿಯ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಆದೇಶಿಸಿದ್ದಾರೆ. ಇದನ್ನೂ ಓದಿ: ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಕರ್ನಾಟಕ ನಾಗರಿಕ ಸೇವಾ 1957ರ ನಿಯಮದಡಿ ಕಲ್ಪಿಸಿರುವ ಅವಕಾಶಗಳ ಮೇರೆಗೆ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸಿದ್ದು, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • ಉಪ ತಹಶೀಲ್ದಾರ್‍ಗೆ ಸುಳ್ಳು ಹೇಳಿದರೆ `ಚೊನ್ನ’ ಬಿಚ್ಚುವೆ ಅಂದ್ರು ಸಚಿವ ಎಚ್‍ಕೆ ಪಾಟೀಲ್

    ಉಪ ತಹಶೀಲ್ದಾರ್‍ಗೆ ಸುಳ್ಳು ಹೇಳಿದರೆ `ಚೊನ್ನ’ ಬಿಚ್ಚುವೆ ಅಂದ್ರು ಸಚಿವ ಎಚ್‍ಕೆ ಪಾಟೀಲ್

    ಗದಗ: ಉಪ ತಹಶೀಲ್ದಾರ್ ದುರಾಡಳಿತ ವರ್ತನೆ ಕಂಡು ಸಚಿವ ಎಚ್‍ಕೆ ಪಾಟೀಲ್ ಅಧಿಕಾರಿ ಮೇಲೆ ಕೆಂಡಾಮಂಡಲರಾಗಿರುವ ಘಟನೆ ಬೆಟಗೇರಿನಲ್ಲಿ ನಡೆದಿದೆ.

    ಸಾಮಾಜಿಕ ಭದ್ರತಾ ಯೋಜನೆ ಅರ್ಹರಿಗೆ ಲಾಭ ಒದಗಿಸುವಲ್ಲಿ ಉಪ ತಹಶೀಲ್ದಾರ್ ಐಜೆ ಪಾಪಣ್ಣವರ್ ವಿಫಲರಾಗಿದ್ದು, ಸಾರ್ವಜನಿಕರು ಯೋಜನೆ ಬಗ್ಗೆ ಕೇಳಲು ಬಂದಾಗ, ತಹಶಿಲ್ದಾರಗೆ ಅರ್ಜಿಕೊಡಿ ನಾನೇನು ಮಾಡಲಿ ಎಂದ ಉಪ ತಹಶೀಲ್ದಾರ್ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದು, ಇದನ್ನ ಕೇಳಿದ ಎಚ್‍ಕೆ ಪಾಟೀಲ್‍ರು ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸುಳ್ಳು ಹೇಳಿದರೆ ಚೊನ್ನಾ ಬಿಚ್ಚುವೆ, ಬಡವರಿಗೆ ಸಹಾಯ ಮಾಡಬೇಕು ಅಂತಾ ಅನಿಸಲ್ವಾ ನಿನಗೆ ಎಂದು ಉಪ ತಹಶೀಲ್ದಾರ್‍ಗೆ ತರಾಟೆ ತೆಗೆದುಕೊಂಡಿದ್ದಾರೆ. ಬೆಟಗೇರಿ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಪರಿಹಾರ ನೀಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಕೆಲಸದಲ್ಲಿ ನಿರ್ಲಕ್ಷ್ಯ, ಸಾರ್ವಜನಿಕರಿಗೆ ಸ್ಪಂದಿಸದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರಿಯಾಗಿ ಕೆಲಸಮಾಡಬೇಕು. ತಹಶೀಲ್ದಾರ್ ಇರಲಿ, ಎಸಿ ಇರಲಿ ಸಹಾಯ ಅಂತ ಬಂದವರಿಗೆ ಸ್ಪಂದಿಸಬೇಕು. ಉಪ ತಹಶೀಲ್ದಾರ್ ಮೇಲೆ ನಿಗಾ ವಹಿಸುವಂತೆ ಎಸಿ ಮಂಜುನಾಥಗೆ ಸೂಚನೆ ನೀಡಿದ್ದೇನೆ ಎಂದು ಎಚ್‍ಕೆ ಪಾಟೀಲ್ ಹೇಳಿದ್ದಾರೆ.