Tag: Deputy Commissioner’s Office

  • ರಾಯಚೂರಿನಲ್ಲಿ ಸಚಿವ ಪ್ರಭು ಚವ್ಹಾಣ್‍ಗೆ ಘೇರಾವ್ – ಹೋರಾಟಗಾರರ ಬಂಧನ

    ರಾಯಚೂರಿನಲ್ಲಿ ಸಚಿವ ಪ್ರಭು ಚವ್ಹಾಣ್‍ಗೆ ಘೇರಾವ್ – ಹೋರಾಟಗಾರರ ಬಂಧನ

    ರಾಯಚೂರು: ನಗರದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ದಲಿತ ಸಂಘಟನೆಗಳ ಹೋರಾಟಗಾರರು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‍ಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Prabhu Chauhan

    ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ, ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಪ್ರಭು ಚವ್ಹಾಣ್ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಸದಾಶಿವ ಆಯೋಗ ವರದಿ ಜಾರಿಗೆಗೆ ವಿರೋಧ ವ್ಯಕ್ತಪಡಿಸಿರುವ ಸಚಿವರ ಕ್ರಮ ಖಂಡಿಸಿ ಘೋಷಣೆ ಕೂಗಿದರು. ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಘೇರಾವ್ ಹಾಕಿದ ಮೂರು ಜನ ಹೋರಾಟಗಾರರನ್ನು ಬಂಧಿಸಲಾಗಿದೆ.  ಇದನ್ನೂ ಓದಿ: ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್

    Prabhu Chauhan

    ಇದಕ್ಕೂ ಮುನ್ನ ಪ್ರಭು ಚಲ್ಹಾಣ್ ರಾಯಚೂರು ತಾಲೂಕಿನ ಮಲಿಯಾಬಾದ್ ಗೋ ಶಾಲೆಗೆ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅಡಿ 400 ಕೇಸ್ ದಾಖಲಾಗಿವೆ. 10 ಸಾವಿರ ಗೋಗಳ ರಕ್ಷಣೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ

    Prabhu Chauhan

    ಗೋ ಸಂಜೀವಿನಿ ಯೋಜನೆ ಮುಖಾಂತರ ಆಂಬುಲೆನ್ಸ್ ನೀಡಿದ್ದೇವೆ. ಗೋವುಗಳ ಆರೋಗ್ಯದ ದೃಷ್ಟಿಯಿಂದ ಗೋ ಸಂಜೀವಿನಿ ಜಾರಿಗೆ ಮಾಡಿದ್ದೇವೆ. ರಾಜ್ಯದ ಎಲ್ಲಾ ತಾಲೂಕಿಗೂ ಒಂದು ಆಂಬುಲೆನ್ಸ್ ಬರುತ್ತದೆ ಎಂದು ಹೇಳಿದ್ದಾರೆ.

  • ಧಾರವಾಡ ಕಟ್ಟಡ ದುರಂತ-ಗಾಯಾಳುಗಳಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

    ಧಾರವಾಡ ಕಟ್ಟಡ ದುರಂತ-ಗಾಯಾಳುಗಳಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

    ಧಾರವಾಡ: ಜಿಲ್ಲೆಯ ಕುಮಾರೇಶ್ವರ ನಗರದ ಕಟ್ಟಡ ದುರಂತ ನಡೆದು ಇಂದಿಗೆ 38 ದಿನಗಳೇ ಕಳೆದಿವೆ. ಮಾರ್ಚ್ 19ರಂದು ನಡೆದ ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದರೆ, 54 ಜನರು ಜೀವಂತವಾಗಿ ಹೊರ ಬಂದಿದ್ದರು. ಅದರಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದುರಂತ ಕುರಿತು 25ಕ್ಕೂ ಹೆಚ್ಚು ಜನರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.

    ಕೈ ಕಾಲು ಮುರಿದುಕೊಂಡ ಗಾಯಾಳುಗಳು ಚೇತರಿಸಿಕೊಂಡಿಲ್ಲ. ಅವರೆಲ್ಲ ಈಗಲೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರಿಗೆ ಬೇಕಾಗಿದ್ದು ಸರ್ಕಾರದ ಪರಿಹಾರ. ಆ ಪರಿಹಾರಕ್ಕಾಗಿ ಅವರೆಲ್ಲ ಕೈಚಾಚುವಂತೆ ಆಗಿದೆ.

    ಇದೇ ಘಟನೆಯಲ್ಲಿ ಅಂಗಡಿ ಮಾಲೀಕರು ಸಾವನ್ನಪ್ಪಿದ್ದರು. ಅವರ ಕುಟುಂಬದವರು ತಮಗೆ ಆದ ನಷ್ಟ ಭರಿಸೊಕೆ ಆಗದೆ ಕಣ್ಣೀರಿಡುವಂತೆ ಆಗಿದೆ. ಕಾರಣ 30 ರಿಂದ 40 ಲಕ್ಷ ಸಾಲ ಮಾಡಿ ಅಂಗಡಿ ತೆರೆದಿದ್ದರು. ಆದರೆ ಜೀವನೂ ಹೋಯಿತು, ಅದರ ಜೊತೆಯಲ್ಲಿ ಅಂಗಡಿನೂ ಹೋಯ್ತು. ಈಗ ಮನೆ ಹಾಗೂ ಮಕ್ಕಳ ಗತಿ ಬೀದಿಗೆ ಬಂದಿವೆ ಎಂದು ಗಾಯಾಳು ಯಲ್ಲಪ್ಪ ಹೇಳುತ್ತಿದ್ದಾರೆ.

    ಈಗಾಗಲೇ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರದ ವತಿಯಿಂದ 2 ಲಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2 ಲಕ್ಷ ಪರಿಹಾರ ನೀಡಲಾಗಿದೆ. ಉಳಿದಂತೆ ಹೆಚ್ಚಿನ ಗಾಯಾಳುಗಳಿಗೆ ಸಹ ಪರಿಹಾರ ನೀಡಲಾಗಿದೆ. ಉಳಿದಂತೆ ಚಿಕ್ಕಪುಟ್ಟ ಗಾಯಾಳುಗಳಿಗೆ ಇನ್ನೂ ಪರಿಹಾರ ನೀಡಬೇಕಿದ್ದು, ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

    ಘಟನೆಯಲ್ಲಿ ಕೈ,ಕಾಲು ಕಳೆದುಕೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಬಂದಿರುವವರ ಗಾಯವೂ ಚಿಕ್ಕಪುಟ್ಟವಾದುದಲ್ಲ. ಹೀಗಾಗಿ ಪರಿಹಾರ ಏಕೆ ಕೊಟ್ಟಿಲ್ಲ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ.

  • ಕೋಲಾರ ಜಿಲ್ಲಾಧಿಕಾರಿ ಕಟ್ಟಡದ 3ನೇ ಮಹಡಿ ಕಿಟಕಿಯಿಂದ ನವಜಾತ ಶಿಶು ಎಸೆದ್ರು!

    ಕೋಲಾರ ಜಿಲ್ಲಾಧಿಕಾರಿ ಕಟ್ಟಡದ 3ನೇ ಮಹಡಿ ಕಿಟಕಿಯಿಂದ ನವಜಾತ ಶಿಶು ಎಸೆದ್ರು!

    ಕೋಲಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕೋಲಾರ ನಗರದ ಟಮಕಾ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮೂರನೇ ಮಹಡಿಯಲ್ಲಿರುವ ವಿಮಾ ಅಧಿಕಾರಿ ಕಚೇರಿಯ ಕಿಟಕಿಯಿಂದ ಮಗುವನ್ನು ಎಸೆಯಲಾಗಿದೆ.

    ಇಂದು ಮುಂಜಾನೆ ಕಿಡಿಗೇಡಿಗಳು ಕಚೇರಿಗೆ ಅಕ್ರಮವಾಗಿ ಪ್ರವೇಶ ಮಾಡಿ, ಮಗುವನ್ನ ಕಚೇರಿಯ ಕಿಟಕಿಯಿಂದ ಬಿಸಾಡಿದ್ದಾರೆ. ಪರಿಣಾಮ ಕಿಟಕಿ ಬಳಿ ರಕ್ತದ ಕಲೆಗಳಾಗಿವೆ. ಆದರೆ ಕಚೇರಿ ಒಳಗೆ ಮಗು ಹೇಗೆ ಬಂತು, ಯಾರಾದರೂ ತಂದು ಉದ್ದೇಶ ಪೂರ್ವಕವಾಗಿ ಹಾಕಿದ್ದಾರಾ ಅನ್ನೋ ಸಾಕಷ್ಟು ಅನುಮಾನಗಳು ಕಚೇರಿ ಸಿಬ್ಬಂದಿಯಲ್ಲಿ ಮೂಡಿವೆ.

    ಕಚೇರಿಯ ಬಾಗಿಲಿಗೆ ಅಳವಡಿಸಿರುವ ಚಿಲಕವನ್ನ ತೆಗೆದು ಯಾರೋ ಒಳಗೆ ಹೋಗಿರುವ ಗುರುತುಗಳು ಪತ್ತೆಯಾಗಿದೆ. ಕಚೇರಿಯಲ್ಲಿ ರಕ್ತದ ಕಲೆಗಲಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇನ್ನೂ ಸ್ಥಳಕ್ಕೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

    ಕಚೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಐನೂರರಿಂದ ಸಾವಿರ ರೂಪಾಯಿ ನೀಡಲೇ ಬೇಕು. ಹಣ ಕೊಟ್ಟರೆ ಬೇಗ ಕೆಲಸವಾಗುತ್ತದೆ. ಹಣ ನೀಡದಿದ್ದರೆ ಸಿಬ್ಬಂದಿ ಅಲೆದಾಡಿಸುತ್ತಾರಂತೆ. ಇದಕ್ಕೆ ಸಾಕ್ಷಿಯೆನ್ನುವಂತೆ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಕೆಲ ಸಿಬ್ಬಂದಿ ಹಣ ತಗೆದುಕೊಂಡು ಕೀ ಪ್ಯಾಡ್ ಕೆಳಗೆ ಇಡುತ್ತಿರುವ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮನೆ, ಆಸ್ತಿ ಖರೀದಿ ಸೇರಿದಂತೆ ನೊಂದಣಿ ಮಾಡಿಸಲು ಬಂದವರಿಂದ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಈ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.