Tag: Deputy Chief Minister

  • ವಿನಯ್ ಕುಲಕರ್ಣಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವಂತೆ ಮುರುಘಾಮಠದ ಶ್ರೀಗಳ ಒತ್ತಾಯ

    ವಿನಯ್ ಕುಲಕರ್ಣಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವಂತೆ ಮುರುಘಾಮಠದ ಶ್ರೀಗಳ ಒತ್ತಾಯ

    ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ವಿನಯ್ ಕುಲಕರ್ಣಿಯವರಿಗೆ (Vinay Kulkarni) ಉಪಮುಖ್ಯಮಂತ್ರಿ (Deputy Chief Minister) ಸ್ಥಾನ ನೀಡಬೇಕು ಎಂದು ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಜನಪ್ರಿಯ ಶಾಸಕರು. ಉತ್ತರ ಕರ್ನಾಟಕದ ಪ್ರಬಲ ನಾಯಕರು. ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಚೆನ್ನಾಗಿರುತ್ತದೆ. ಇದು ನನ್ನ ಸ್ವಂತ ವಿಚಾರ. ಸಾಮಾಜಿಕವಾಗಿ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: 135 ಶಾಸಕರು ನಮ್ಮವರೇ, ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ: ಡಿಕೆ ಶಿವಕುಮಾರ್

    ವಿನಯ್ ಕುಲಕರ್ಣಿ ಮುರುಘಾಮಠದ (Murugamata) ಕಾರ್ಯಾಧ್ಯಕ್ಷರು. ಅವರ ಜೊತೆ ಉಳಿದ ಲಿಂಗಾಯತ ಶಾಸಕರಿಗೂ ಒಳ್ಳೆಯ ಸ್ಥಾನಮಾನ ಕೊಡಬೇಕು. ವಿನಯ್ ಕುಲಕರ್ಣಿ ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದೇ ಆದಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲು ಪುಷ್ಠಿ ನೀಡಿದಂತಾಗುತ್ತದೆ. ಅವರು ನಮ್ಮ ಮಠದ ಕಾರ್ಯಾಧ್ಯಕ್ಷರಾಗಿರುವುದರಿಂದ ಇದರಲ್ಲೂ ನಮ್ಮ ಸ್ವಾರ್ಥ ಇದೆ ಎಂದಿದ್ದಾರೆ. ಇದನ್ನೂ ಓದಿ: ಕಜಕಿಸ್ತಾನದಿಂದ ಬೆದರಿಕೆ ಕರೆ – ಪೊಲೀಸರಿಗೆ ದೂರು ನೀಡಿದ ಈಶ್ವರಪ್ಪ

  • ದೇವರು ಮಗಳ ರೂಪದಲ್ಲಿ ಉಡುಗೊರೆ ಕಳುಹಿಸಿದ್ದಾರೆ – ಮೊದಲ ಮಗುವನ್ನು ಸ್ವಾಗತಿಸಿದ ತೇಜಸ್ವಿ ಯಾದವ್

    ದೇವರು ಮಗಳ ರೂಪದಲ್ಲಿ ಉಡುಗೊರೆ ಕಳುಹಿಸಿದ್ದಾರೆ – ಮೊದಲ ಮಗುವನ್ನು ಸ್ವಾಗತಿಸಿದ ತೇಜಸ್ವಿ ಯಾದವ್

    ಪಾಟ್ನಾ: ಬಿಹಾರದ (Bihar) ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರು ತಮ್ಮ ಮೊದಲ ಮಗುವನ್ನು (Child) ಸ್ವಾಗತಿಸಿದ್ದಾರೆ. ಈ ವಿಚಾರವನ್ನು ಯಾದವ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದು, ಮುದ್ದಾದ ಮಗಳೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

    ದೇವರು ನನಗೆ ಮಗಳ ರೂಪದಲ್ಲಿ ಉಡುಗೊರೆಯನ್ನು ಕಳುಹಿಸಿದ್ದಾರೆ ಎಂದು ಯಾದವ್ ಬರೆದುಕೊಂಡಿದ್ದಾರೆ. ಯಾದವ್ ಒಟ್ಟು 9 ಜನ ಒಡಹುಟ್ಟಿದವರನ್ನು ಹೊಂದಿದ್ದು, ಅದರಲ್ಲಿ ಅವರು ಕಿರಿಯವರಾಗಿದ್ದಾರೆ. ಯಾದವ್ ತಮ್ಮ ಬಾಲ್ಯದ ಸ್ನೇಹಿತೆ ರಾಜಶ್ರೀ ಅವರನ್ನು ವಿವಾಹವಾಗಿದ್ದು, ಮೊದಲ ಮಗುವನ್ನು ಅವರು ಇದೀಗ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

    ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಈ ಬಗ್ಗೆ ಟ್ವೀಟ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಮೊದಲ ಮಗುವನ್ನು ಸ್ವಾಗತಿಸಿರುವ ಬಿಹಾರದ ಉಪಮುಖ್ಯಮಂತ್ರಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಸಾವರ್ಕರ್‌ಗೆ ಅವಮಾನ ಮಾಡಿದ್ರೆ ಮೈತ್ರಿಯಲ್ಲಿ ಬಿರುಕು – ರಾಹುಲ್‍ಗೆ ಉದ್ಧವ್ ನೇರ ಎಚ್ಚರಿಕೆ

  • ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಡಿಸಿಎಂ ಆಗ್ತಾರೆ: ಮೂಲಗಳು

    ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಡಿಸಿಎಂ ಆಗ್ತಾರೆ: ಮೂಲಗಳು

    ಮುಂಬೈ: ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಂದಿನ ಸಿಎಂ ಆಗಲಿದ್ದಾರೆ. ಮೈತ್ರಿಕೂಟ ಸರ್ಕಾರ ಉರುಳಲು ಕಾರಣರಾದ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ವಿಶ್ವಾಸಮತಯಾಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಕೆಲವೇ ಗಂಟೆಗಳಲ್ಲಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಫಡ್ನವಿಸ್ ಮಹಾರಾಷ್ಟ್ರದ ಮುಂದಿನ ಸಿಎಂ ಎನ್ನುವ ಮಾತು ಕೇಳಿಬರುತ್ತಿದೆ.

    ಠಾಕ್ರೆ ರಾಜೀನಾಮೆ ಬೆನ್ನಲ್ಲೇ ರಾಜ್ಯಪಾಲರ ಭೇಟಿಗೆ ದೇವೇಂದ್ರ ಫಡ್ನವಿಸ್ ಸಮಯ ಕೇಳಿದ್ದಾರೆ. ಇಂದು ಸಂಜೆ 4:30 ಕ್ಕೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ. ಫಡ್ನವಿಸ್ ಅವರು ಏಕನಾಥ್ ಶಿಂಧೆ ಜೊತೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ:‌ ಜಿಎಸ್‌ಟಿ ಪರಿಹಾರದ ಅವಧಿ ವಿಸ್ತರಣೆ: ಆಗಸ್ಟ್ ತಿಂಗಳಲ್ಲಿ ಅಂತಿಮ ನಿರ್ಣಯ – ಬೊಮ್ಮಾಯಿ

    ರೆಬೆಲ್ ಶಾಸಕರ ಸಹಿ ಪತ್ರದೊಂದಿಗೆ ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ : ಬಿಜೆಪಿ ವ್ಯಂಗ್ಯ

    Live Tv

  • ಹಿಂದೂ ದೇವಸ್ಥಾನ ಕೆಡವಿ ನಿರ್ಮಾಣವಾದ ಒಂದೇ ಒಂದು ಮಸೀದಿಯನ್ನೂ ಬಿಡೋದಿಲ್ಲ: ಈಶ್ವರಪ್ಪ

    ಹಿಂದೂ ದೇವಸ್ಥಾನ ಕೆಡವಿ ನಿರ್ಮಾಣವಾದ ಒಂದೇ ಒಂದು ಮಸೀದಿಯನ್ನೂ ಬಿಡೋದಿಲ್ಲ: ಈಶ್ವರಪ್ಪ

    ಚಿಕ್ಕೋಡಿ: ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

    KS ESHWARAPPA

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳಲಿ ಮಸೀದಿ ಒಂದೇ ಅಲ್ಲ. ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಪುಡಿ ಮಾಡಿ ಮಸೀದಿಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನಗಳ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ. ಅಂತಹ ಮಸೀದಿಗಳನ್ನು ಒಡೆದು 36 ಸಾವಿರ ದೇವಸ್ಥಾನವನ್ನು ಮತ್ತೆ ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಕ್ಲಾಸ್ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಈಗಾಗಲೇ ಸರ್ಕಾರದಿಂದ ಸರ್ವೆ ಕಾರ್ಯ ನಡೆಯುತ್ತಿದೆ. ಕಾಶಿಯಲ್ಲೂ ಸರ್ವೆ ಕಾರ್ಯ ಆರಂಭವಾಗಿದೆ. ಕಾನೂನು ಬದ್ಧವಾಗಿ ಕೋರ್ಟ್ ಆದೇಶ ಪಡೆದು ಎಲ್ಲವನ್ನೂ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತಕ್ಕೆ 5ರ ಮಗು ಬಲಿ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಇದೇ ವೇಳೆ ಪರಿಷತ್ ಚುನಾವಣೆ ಕುರಿತು ಮಾತನಾಡಿದ ಈಶ್ವರಪ್ಪ, ಲಕ್ಷ್ಮಣ ಸವದಿ ನನ್ನ ಆತ್ಮೀಯ ಸ್ನೇಹಿತ ಅವರು ಉಪಮುಖ್ಯಮಂತ್ರಿ ಆಗಲಿ ಎಂಬುದು ನನ್ನ ಆಸೆ. ಭಗವಂತ ಬಯಸಿದಾಗ ನಾನು ಮತ್ತೆ ಮಂತ್ರಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ದೊಡ್ಮನೆಯ ಉಪಮುಖ್ಯಮಂತ್ರಿಯಾದ ಅರವಿಂದ್

    ದೊಡ್ಮನೆಯ ಉಪಮುಖ್ಯಮಂತ್ರಿಯಾದ ಅರವಿಂದ್

    ರಾಜಕೀಯದಲ್ಲಿ ಖಾತೆ ಹಂಚಿಕೆ ಸರ್ವೇಸಾಮಾನ್ಯವಾಗಿ ನಡೆಯುತ್ತದೆ. ಆದ್ರೆ ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್‍ರವರು ಮನೆಯ ಸ್ಪರ್ಧಿಗಳಿಗೆ ಯಾವ ಖಾತೆ ಸೂಟ್ ಆಗುತ್ತದೆ ಎಂದು ತಿಳಿಸಿದ್ದಾರೆ.

    ಕಣ್ಮಣಿ ಬಿಗ್‍ಬಾಸ್ ಸಂಪುಟದಲ್ಲಿ ಯಾವ ಖಾತೆ ಯಾರಿಗೆ ಕೊಡಬಹುದು ಎಂದು ಚಕ್ರವರ್ತಿಯವರಿಗೆ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಪ್ರಿಯಾಂಕರಿಂದ ಶುರು ಮಾಡಿದ ಚಕ್ರವರ್ತಿಯವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಗೆ ನೀಡುತ್ತೇನೆ ಏಕೆಂದರೆ ಅವರು ತುಂಬಾ ಸಂಸ್ಕøತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ವಸತಿ ಮತ್ತು ಆಹಾರ ಇಲಾಖೆಯನ್ನು ಶುಭಾಗೆ ನೀಡುತ್ತೇನೆ ಕಾರಣ ಇವರು ವಸತಿ ಕಡೆಗೂ ಜಾಸ್ತಿ ಹೋಗುವುದಿಲ್ಲ ಹಾಗೂ ಆಹಾರದ ಕಡೆಗೂ ಜಾಸ್ತಿ ಹೋಗುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಅದು ಅತೀ ದೊಡ್ಡ ಖಾತೆಯಾಗಿರುವುದರಿಂದ ಅದು ಅವರಿಗಿರಲಿ ಎಂದು ಬಯಸುತ್ತೇನೆ.

    ಧರ್ಮದತ್ತಿ ಅಂದರೆ ಧಾರ್ಮಿಕ ಇಲಾಖೆಯನ್ನೇ ವೈಷ್ಣವಿಗೆ ನೀಡುತ್ತೇನೆ. ಜೀವನ ಶೂನ್ಯ, ದೇವಸ್ಥಾನ ಮುಜರಾಯಿ ಇಲಾಖೆಯನ್ನು ನೀಡಬೇಕಾಗುತ್ತದೆ. ಕಂದಾಯ ಇಲಾಖೆಯನ್ನು ನಿಧಿಗೆ ನೀಡುತ್ತೇನೆ. ಅವರ ಮೈಂಡ್ ಯಾವಾಗಲೂ ರೆವೆನ್ಯೂ, ಲೆಕ್ಕಾಚಾರನ್ನೇಲ್ಲಾ ಬಹಳ ಚೆನ್ನಾಗಿ ಮಾಡುತ್ತಾರೆ. ಇನ್ನೂ ಶಮಂತ್‍ಗೆ ಖಾತೆ ಕೊಡದೇ ಸದ್ಯಕ್ಕೆ ಬೀಜ ನಿಗಮ ನಿಯಮಿತ ನೀಡುತ್ತೇನೆ. ಇವನು ಕೃಷಿ, ಬೀಜ ಹೇಗೆ ಹಾಕಬೇಕು, ಹೇಗೆ ಬೆಳೆಸಬೇಕು ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ.

    ರಘುಗೆ ಶೇ. 100 ಅಬಕಾರಿಯನ್ನು ನೀಡುತ್ತೇನೆ. ಬೇರೆ ಚೇಂಜ್ ಮಾಡುವುದಕ್ಕೆ ಹೋಗುವುದಿಲ್ಲ. ಅವರ ಮಾತು, ನಡೆ, ನುಡಿ ಕಣ್ಣೋಟ ಇಲ್ಲದರಲ್ಲಿಯೂ ನಶೆ ತುಂಬಿರುತ್ತದೆ. ಮಂಜುಗೆ ಮನೆಯನ್ನೆಲ್ಲಾ ಸಂಬಾಳಿಸಿ ಯಾವುದಾದರೂ ತಪ್ಪು ನಡೆದರೂ ಸರಿ ಮಾಡಿಕೊಂಡು, ವಾಕಿಂಗ್ ಸ್ಟಿಕ್‍ನಲ್ಲಿ ಏನು ಮಾಡಬೇಕು, ಹಾಲ್‍ನಲ್ಲಿ ಏನು ಮಾಡಬೇಕು, ಎಲ್ಲಿ ಏನು ಮಾಡಬೇಕು ಎಂಬುವುದನ್ನೆಲ್ಲಾ ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಹೀಗಾಗಿ ಅವರಿಗೆ ಗೃಹ ಇಲಾಖೆ ಖಾತೆ ನೀಡುತ್ತೇನೆ.

    ದಿವ್ಯಾ ಸುರೇಶ್‍ರವರಿಗೆ ಪ್ರವಾಸೋದ್ಯಮ ನೀಡುತ್ತೇನೆ. ಅವರದ್ದು ಪೂರ್ತಿ ಪ್ರವಾಸವಿರುತ್ತದೆ. ಹುಡುಕಿದರೂ ಕಾಣುವುದಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಿಗರಿ ಮರಿ ತರ ನಡೆಯುತ್ತಿರುತ್ತದೆ. ನಮ್ಮ ಪ್ರಶಾಂತ್‍ಗೆ ಕಾನೂನು ಮತ್ತು ಸಂಸದೀಯ ಮಂಡಳಿ. ಬೇರೆ ಖಾತೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಕಾನೂನು ಹಾಗೂ ಸಂಸದೀಯ ಮಂಡಳಿ. ಅರವಿಂದ್ ಕೆಪಿಗೆ ಐದರೂ ಖಾತೆ ನೀಡಿ ಉಪಮುಖ್ಯಮಂತ್ರಿ ಮಾಡುತ್ತೇನೆ. ಯಾವಾಗ ಯಾವ ಖಾತೆಗೆ ಬೇಕಾದರೂ ಜಂಪ್ ಆಗಬಹುದು.

    ಕೊನೆಯದಾಗಿ ನನಗೆ ಮಹಿಳಾ ಮತ್ತು ಮಕ್ಕಳಾ ಇಲಾಖೆಯನ್ನು ಕೊಟ್ಟುಕೊಳ್ಳುತ್ತೇನೆ. ನಾನು ಅದರಲ್ಲಿ ಬಹಳ ಎಕ್ಸ್‍ಪರ್ಟ್ ಆಗಿದ್ದೇನೆ. ಮುಖ್ಯಮಂತ್ರಿ ಸ್ಥಾನವನ್ನು ಬಿಗ್‍ಬಾಸ್‍ಗೆ ಬಿಟ್ಟಿದ್ದೇನೆ. ಅವರೊಟ್ಟಿಗೆ ನನಗೆ ಫೈಟ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.

  • ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ

    ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ

    – ಡಿಸಿಎಂ ಆಗಿ ಅಜಿತ್ ಪವಾರ್

    ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಬಿಕ್ಕಟ್ಟಿಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಶಿವಸೇನೆ ಹಾಗೂ ಕಾಂಗ್ರೆಸ್ಸಿಗೆ ಶಾಕ್ ಕೊಟ್ಟು ಮತ್ತೆ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಮಹಾರಾಷ್ಟ್ರ ರಾಜಕೀಯದಲ್ಲಿ ಆದ ಈ ಬೆಳವಣಿಗೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಬಿಜೆಪಿ ಹಾಗೂ ಎನ್‍ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡಲಿದೆ. ಮುಖ್ಯಮಂತ್ರಿಯಾಗಿ ಮತ್ತೆ ದೇವೇಂದ್ರ ಫಡ್ನವಿಸ್ ಪದಗ್ರಹಣ ಮಾಡಿದ್ದು, ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅವರು ಪ್ರಮಾಣವಚಣ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಇಂದು ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಪದಗ್ರಹಣ ಮಾಡಿದ್ದಾರೆ.

    ಶುಕ್ರವಾರ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‍ಸಿಪಿ ನಡುವಿನ ಚರ್ಚೆಗಳು ಕೊನೆ ಹಂತ ತಲುಪಿದ್ದು, ಇಂದು ಎನ್‍ಸಿಪಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಗೆ ಸಜ್ಜಾಗಿದೆ. ಈ ಹಿಂದೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗಲು ಅಜಿತ್ ಪವಾರ್ ಒಮ್ಮತ ಸೂಚಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಜೊತೆ ಸೇರಿಕೊಂಡು ಈಗ ಉಪಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

    ಹೆಚ್ಚು ಸ್ಥಾನ ಗೆದ್ದ ಬಿಜೆಪಿ ಜೊತೆ ಕೈಜೊಡಿಸಿ ಸರ್ಕಾರ ಮಾಡಲು ಶಿವಸೇನೆ ಹೆಚ್ಚು ಬೇಡಿಕೆಗಳನ್ನು ಮುಂದಿಟ್ಟಿತ್ತು. ಸಿಎಂ ಸ್ಥಾನ ನಮಗೆ ಬಿಟ್ಟುಕೊಡಬೇಕು, ಸಚಿವ ಸಂಪುಟದಲ್ಲಿ ಸಮವಾಗಿ ಸ್ಥಾನಗಳನ್ನು ಹಂಚಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ ಇದಕ್ಕೆ ಬಿಜೆಪಿ ಒಪ್ಪಿರಲಿಲ್ಲ. ಇತ್ತ ಕಾಂಗ್ರೆಸ್ ಹೇಗಾದರೂ ಶಿವಸೇನೆ, ಎನ್‍ಸಿಪಿ ವಿಶ್ವಾಸಗಳಿಸಿ ಸರ್ಕಾರ ರಚನೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ ಈಗ ಈ ಎಲ್ಲಾ ಪ್ರಯತ್ನಕ್ಕೂ ನೀರೆರಚಿದಂತೆ ಆಗಿದ್ದು, ಸದ್ದಿಲ್ಲದೆ ಬಿಜೆಪಿ ಎನ್‍ಸಿಪಿ ಜೊತೆ ಸೇರಿಕೊಂಡು ದೇವೇಂದ್ರ ಫಡ್ನವಿಸ್ ಸಿಎಂ ಆಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

    ಚುನಾವಣೆಯಲ್ಲಿ 288 ಸೀಟ್‍ನಲ್ಲಿ ಬಿಜೆಪಿ 105 ಸ್ಥಾನ, ಶಿವಸೇನೆ 56 ಸ್ಥಾನ, ಎನ್‍ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು.

  • ಪೂರ್ಣ ಬಹುಮತ ಬಂದಿದ್ದರೆ ಶ್ರೀರಾಮುಲು ಅವತ್ತೆ ಡಿಸಿಎಂ ಆಗ್ತಿದ್ರು: ದಡೇಸಗೂರ್

    ಪೂರ್ಣ ಬಹುಮತ ಬಂದಿದ್ದರೆ ಶ್ರೀರಾಮುಲು ಅವತ್ತೆ ಡಿಸಿಎಂ ಆಗ್ತಿದ್ರು: ದಡೇಸಗೂರ್

    – ಶ್ರೀರಾಮುಲು ರಾಜ್ಯಕ್ಕೆ ಮಾಸ್ ಲೀಡರ್

    ಕೊಪ್ಪಳ: ಪೂರ್ಣ ಬಹುಮತ ಬಂದಿದ್ದರೆ ಸಚಿವ ಶ್ರೀರಾಮುಲು ಅವತ್ತೆ ಉಪಮುಖ್ಯಮಂತ್ರಿ ಆಗುತ್ತಿದ್ದರು ಎಂದು ಬಿಜೆಪಿ ಶಾಸಕ ಬಸವರಾಜು ದಡೇಸಗೂರ್ ಹೇಳಿದ್ದಾರೆ.

    ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂರ್ಣ ಬಹುಮತ ಬರದ ಹಿನ್ನೆಲೆ ರಾಮುಲು ಡಿಸಿಎಂ ಆಗಿಲ್ಲ. ನಾವು ಬೇರೆ ಪಕ್ಷದ ಶಾಸಕರನ್ನು ಕರೆದುಕೊಂಡು ಸರ್ಕಾರ ಮಾಡಿದ ಕಾರಣ ರಾಮುಲು ಡಿಸಿಎಂ ಆಗಿಲ್ಲ ಎಂದು ತಿಳಿಸಿದರು.

    ಬೇರೆ ಪಕ್ಷದ ಶಾಸಕರು ಬಂದ ಕಾರಣ ಸ್ವಲ್ಪ ಸಮಸ್ಯೆ ಆಗಿದೆ. ಮುಂಬರುವ ಉಪ ಚುನಾವಣೆ ಬಳಿಕ ವಾಲ್ಮೀಕಿ ಸಮುದಾಯಕ್ಕೆ ಒಳ್ಳೆಯದಾಗುತ್ತೆ. ಚುನಾವಣೆಯಾದ ಮೇಲೆ ನಾವು ನೀವು ಹೋಗಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲು ಮನವಿ ಕೊಡೋಣ ಎಂದು ದಡೇಸಗೂರ್ ಜನರಿಗೆ ಕರೆಕೊಟ್ಟರು.

    ಶ್ರೀರಾಮುಲು ರಾಜ್ಯಕ್ಕೆ ಮಾಸ್ ಲೀಡರ್, ಅವರು ಉಪಮುಖ್ಯಮಂತ್ರಿಯಾಗಬೇಕು. ಈ ವಿಚಾರದ ಬಗ್ಗೆ ಯಡಿಯೂರಪ್ಪ ಅವರು ಮಾತು ನೀಡಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಹಾಗಾಗಿ ನಾವು ನೀವು ಹೋಗಿ ಮನವಿ ಮಾಡೋಣ ಎಂದು ಹೇಳಿದರು.

  • ಇಬ್ಬರು ಮಾರ್ವಾಡಿಗಳ ಕೈಯಲ್ಲಿ ಸಿಕ್ಕಿ ದೇಶ ನಲುಗಿ ಹೋಗಿದೆ – ಲಿಂಗೇಶ್

    ಇಬ್ಬರು ಮಾರ್ವಾಡಿಗಳ ಕೈಯಲ್ಲಿ ಸಿಕ್ಕಿ ದೇಶ ನಲುಗಿ ಹೋಗಿದೆ – ಲಿಂಗೇಶ್

    ಹಾಸನ: ಗುಜರಾತಿನ ಇಬ್ಬರು ಮಾರ್ವಾಡಿಗಳ ಕೈಯಲ್ಲಿ ಸಿಕ್ಕಿ ದೇಶ ನಲುಗಿ ಹೋಗಿದೆ ಎಂದು ಶಾಸಕ ಲಿಂಗೇಶ್ ಕಿಡಿಕಾರಿದ್ದಾರೆ.

    ಹಾಸನದ ಬೇಲೂರಿನಲ್ಲಿ ಮಾತನಾಡಿದ ಲಿಂಗೇಶ್, ಅಪರೇಷನ್ ಕಮಲದಲ್ಲಿ ತಮಗೆ ಐದು ಕೋಟಿ ಅಲ್ಲ ಐವತ್ತು ಕೋಟಿ ರೂಪಾಯಿ ಆಮಿಷ ಬಂದಿದ್ದು ನಿಜ. ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಸಹ ಅವರ ಪತ್ನಿ ಮುಖಾಂತರ ಆಮಿಷ ಒಡ್ಡಲಾಗಿತ್ತು. ಅಷ್ಟೇ ಅಲ್ಲ ಹೆಚ್.ಡಿ ರೇವಣ್ಣನವರಿಗೂ ಸಹ ಉಪ ಮುಖ್ಯಮಂತ್ರಿ ಸ್ಥಾನದ ಆಮಿಷ ನೀಡಲಾಗಿತ್ತು ಎಂದು ಹೊಸ ಬಾಂಬ್ ಸಿಡಿಸಿದರು. ಈ ಸಂದರ್ಭದಲ್ಲಿ ರೇವಣ್ಣ ಕೂಡ ಸಭೆಯಲ್ಲಿ ಹಾಜರಿದ್ದರು.

    ಇಷ್ಟೆಲ್ಲ ಆಮಿಷಗಳನ್ನು ಒಡ್ಡಿದ ಸಾವಿರಾರು ಕೋಟಿ ಹಣದ ಮೂಲದ ಬಗ್ಗೆ ಬಿಜೆಪಿ ವಿರುದ್ಧ ಯಾವುದೇ ತನಿಖೆ ಮಾಡಲಿಲ್ಲ. ಆದರೆ ಕೇವಲ ಎಂಟು ಕೋಟಿಗಾಗಿ ಕಾಂಗ್ರೆಸ್ ನಾಯಕ ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಉತ್ತರ ಭಾರತದ ದಬ್ಬಾಳಿಕೆಯಿಂದ ದಕ್ಷಿಣ ಭಾರತೀಯರು ನಲುಗುವಂತಾಗಿದೆ. ಪಿವಿ ನರಸಿಂಹರಾವ್ ಮತ್ತು ಹೆಚ್.ಡಿ.ದೇವೇಗೌಡರು ಬಿಟ್ಟರೆ ಇನ್ಯಾರು ಪ್ರಧಾನಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಿದರು.

    ಇವರ ದಬ್ಬಾಳಿಕಯಿಂದ ನಾವು ಹೊರಬರಬೇಕಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಅಪಾರ ನಷ್ಟವಾಗಿದೆ. ರಾಜ್ಯದಿಂದ ಇಪ್ಪತ್ತೈದು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಬಿಜೆಪಿಯವರು ಒಂದು ಬಿಡಿಗಾಸು ಕೂಡ ನೀಡಿಲ್ಲ ಎಂದು ಹರಿಹಾಯ್ದ ಲಿಂಗೇಶ್ ಯಾವುದೇ ಕಾರಣಕ್ಕೂ ತಾವು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

  • ಮೈಸೂರಿನಲ್ಲಿ ಡಿಸಿಎಂ ಕಾರಜೋಳ ಕಾರಿನಲ್ಲೇ ಜಿ.ಟಿ.ದೇವೇಗೌಡ ರೌಂಡ್ಸ್

    ಮೈಸೂರಿನಲ್ಲಿ ಡಿಸಿಎಂ ಕಾರಜೋಳ ಕಾರಿನಲ್ಲೇ ಜಿ.ಟಿ.ದೇವೇಗೌಡ ರೌಂಡ್ಸ್

    ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಜೆಡಿಎಸ್‍ಗಿಂತ ಬಿಜೆಪಿ ಸಖ್ಯ ಹೆಚ್ಚು ಖುಷಿ ಕೊಟ್ಟಂತೆ ಕಾಣುತ್ತಿದ್ದು, ದಿನೇ ದಿನೇ ಬಿಜೆಪಿ ನಾಯಕರ ಜೊತೆ ಜಿಟಿಡಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಇಂದು ಮೈಸೂರಿಗೆ ಬಂದಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಜೊತೆ ಜಿ.ಟಿ.ದೇವೇಗೌಡ ಅವರು ಫುಲ್ ರೌಂಡ್ಸ್ ಹಾಕಿದ್ದಾರೆ. ಚಾಮುಂಡಿ ಬೆಟ್ಟ ಮತ್ತು ಸುತ್ತೂರು ಮಠದಲ್ಲಿ ಡಿಸಿಎಂಗೆ ಸಾಥ್ ಕೊಟ್ಟ ಜಿಟಿಡಿ, ಕಾರಜೋಳ ಕಾರಿನಲ್ಲೇ ಸುತ್ತೂರು ಮಠಕ್ಕೆ ಬಂದಿಳಿದಿದ್ದರು.

    ಇತ್ತೀಚೆಗೆ ಬಿಜೆಪಿ ನಾಯಕರ ಜೊತೆ ಹೆಚ್ಚು ಓಡಾಡುತ್ತಿರುವ ಜಿಟಿಡಿ, ಜೆಡಿಎಸ್ ಶಾಸಕರಾಗಿದ್ದರೂ, ಜೆಡಿಎಸ್ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ, ಮತ್ತೆ ಜಿಟಿಡಿ ಬಿಜೆಪಿಗೆ ಹೋಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಟಿಡಿ ಅವರು ಗೋವಿಂದ ಕಾರಜೋಳ ಅವರ ಜೊತೆ ಓಡಾಡಿದರೂ ಸಹ ಬಿಜೆಪಿ ಶಾಸಕ ಎಸ್.ಎ.ರಾಮ್‍ದಾಸ್ ಮಾತ್ರ ಉಪ ಮುಖ್ಯಮಂತ್ರಿಗಳ ಬಳಿ ಸುಳಿಯಲೇ ಇಲ್ಲ.

    ಡಿಸಿಎಂ ಜೊತೆ ಸುತ್ತಾಟದ ಕುರಿತು ಪ್ರತಿಕ್ರಿಯಿಸಿದ ಜಿಟಿಡಿ, ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಸಭೆಗೆ ಬಂದಿದ್ದೇನೆ. ಹೊಸ ಸರ್ಕಾರ ಬಂದ ನಂತರ ನನ್ನ ಕ್ಷೇತ್ರದ ಕೆಲಸಗಳು ನಿಂತುಹೋಗಿತ್ತು. ಚಾಮುಂಡಿ ಬೆಟ್ಟದಲ್ಲಿ ಲೋಕೋಪಯೋಗಿ ಇಲಾಖೆಯ ಹಲವು ಕೆಲಸಗಳು ನಿಂತುಹೋಗಿದೆ. ದಸರಾ ಬರುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿಯಾಗಬೇಕಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಈಗಾಗಲೇ ಚರ್ಚಿಸಿದ್ದೇನೆ. ಇಬ್ಬರೂ ಈ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು ಜಿಟಿಡಿ ಸ್ಪಷ್ಟಪಡಿಸಿದರು.

    ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಕಾಲಿಗೆ ಅಡ್ಡಬಿದ್ದಿದ್ದಾರೆ.

  • ಸಿಎಂ ಆಗಲಿದ್ದಾರೆ ಲಕ್ಷ್ಮಣ ಸವದಿ- ಇಂಚಲ ಮಠದ ಸ್ವಾಮೀಜಿ ಭವಿಷ್ಯ

    ಸಿಎಂ ಆಗಲಿದ್ದಾರೆ ಲಕ್ಷ್ಮಣ ಸವದಿ- ಇಂಚಲ ಮಠದ ಸ್ವಾಮೀಜಿ ಭವಿಷ್ಯ

    ಬೆಳಗಾವಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಮುಂದಿನ ದಿನದಲ್ಲಿ ಮುಖ್ಯಮಂತ್ರಿಯ ಆಗುವ ಭಾಗ್ಯ ಸಿಗಲಿದೆ ಎಂದು ಇಂಚಲ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಇಂದು ಬೈಲಹೊಂಗಲ ತಾಲೂಕಿನ ಇಂಚಲದಲ್ಲಿ ಮಾತನಾಡಿದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗಿದ್ದು, ನನಗೆ ಸಂತೋಷವಾಗಿದೆ. ಅವರು ಜನರ ಸೇವೆಗೆ ಬಂದಿದ್ದಾರೆ. ಈ ರೀತಿಯ ವ್ಯಕ್ತಿ ನಮ್ಮ ಭಕ್ತನಾಗಿದ್ದು ನನಗೆ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

    ಅವರು ಕರ್ನಾಟಕದ ಜನರ ಸೇವೆ ಮಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸವದಿ ಅವರು ನಮ್ಮ ಮಠದ ಪರಮ ಭಕ್ತರಾಗಿದ್ದವರು. ಅವರು ಜನ ಸೇವೆ, ಮಠಗಳ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಮುಂದಿನ ದಿನದಲ್ಲಿ ಉನ್ನತ ಮಟ್ಟದ ಸ್ಥಾನ ಕೊಡಲಿ ಎಂದು ಹೇಳಿದರು.

    ಲಕ್ಷ್ಮಣ ಸವದಿ ಅವರು ನಿಷ್ಠಾವಂತ ವ್ಯಕ್ತಿ, ರಾಜಕಾರಣದಲ್ಲಿ ಯಾವುದೇ ಜಾತಿ ಭೇದ ಬಾವವಿಲ್ಲದ ರಾಜಕಾರಣ ಮಾಡುವ ವ್ಯಕ್ತಿ. ಈಗ ಉಪ ಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿ ಮುಂದಿನ ದಿನದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು.