Tag: Depth

  • ಹೊಸ 100 ರೂ. ನೋಟು ಎಟಿಎಂನಲ್ಲಿ ಅಳವಡಿಸಲು 100 ಕೋಟಿ ರೂ. ಖರ್ಚು!

    ಹೊಸ 100 ರೂ. ನೋಟು ಎಟಿಎಂನಲ್ಲಿ ಅಳವಡಿಸಲು 100 ಕೋಟಿ ರೂ. ಖರ್ಚು!

    ಮುಂಬೈ: 100 ರೂ. ಮುಖ ಬೆಲೆಯ ಹೊಸ ನೋಟು ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿದ ಬೆನ್ನಲ್ಲೇ ಈ ಹೊಸ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಎಟಿಎಂಗಳಲ್ಲಿ ಬದಲಾವಣೆ ಮಾಡಲು 100 ಕೋಟಿ ಖರ್ಚಾಗಲಿದೆ ಎಂಬ ಮಾಹಿತಿ ಲಭಿಸಿದೆ.

    ದೇಶದಲ್ಲಿ 2.4 ಲಕ್ಷ ಕೋಟಿ ಎಟಿಎಂ ಗಳಿ ಸೇವೆಗೆ ಲಭ್ಯವಿದೆ. ಎಲ್ಲ ಎಟಿಎಂಗಳಲ್ಲಿ ಹೊಸ ನೋಟಿನ ವಿನ್ಯಾಸಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಯಿಸಿ ಅಳವಡಿಸುವ ಅನಿವಾರ್ಯತೆ ಇರುವುದಾಗಿ ಪೈನಾಷಿಯಲ್ ಸಾಫ್ಟ್ ವೇರ್ ಸಿಸ್ಟಮ್ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.

    ನೋಟು ನಿಷೇಧ ಬಳಿಕ ಮುದ್ರಣ ಮಾಡಲಾದ 200 ರೂ. ಮುಖ ಬೆಲೆಯ ಹೊಸ ನೋಟುಗಳ ವಿನ್ಯಾಸಕ್ಕೆ ತಕ್ಕಂತೆ ಎಟಿಎಂಗಳಲ್ಲಿ ಬದಲಾವಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಈ ಮಧ್ಯೆ ಹೊಸ 100 ರೂ. ನೋಟಿನ ಅಳವಡಿಕೆಗೆ 100 ಕೋಟಿ. ರೂ ವೆಚ್ಚವಾಗಲಿದೆ.

    ದೇಶದಲ್ಲಿರುವ 2.4 ಲಕ್ಷ ಎಟಿಎಂ ಗಳಲ್ಲಿ ಹೊಸ ಬದಲಾವಣೆ ಮಾಡಲು 100 ಕೋಟಿ ರೂ. ವೆಚ್ಚದೊಂದಿಗೆ 12 ತಿಂಗಳ ಅವಧಿಯ ಬೇಕಾಗುತ್ತದೆ ಎಂದು ಹಿಟಾಚಿ ಸೇವಾ ಸಂಸ್ಥೆಯ ಎಂಡಿ ಲೂನಿ ಆ್ಯಂಟೋನಿ ತಿಳಿಸಿದ್ದಾರೆ.

    ಆರ್‌ಬಿಐ ಕೆಲ ದಿನಗಳ ಹಿಂದೆಯಷ್ಟೇ ಹೊಸ ವಿನ್ಯಾಸದ 100 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ನೂತನ 100 ರೂಪಾಯಿಯ ಹೊಸ ನೋಟು ಲ್ಯಾವೆಂಡರ್(ನೀಲಿ) ಬಣ್ಣ ಹೊಂದಿದ್ದು, 66 ಮಿ.ಮೀ. ಘಿ 142 ಮಿ.ಮೀ. ಅಳತೆಯಲ್ಲಿದೆ. ನೋಟಿನ ಹಿಂಭಾಗದಲ್ಲಿ ಗುಜರಾತ್ ನ ಐತಿಹಾಸಿಕ `ರಾಣಿ ಕಿ ವಾವ್’ನ ಚಿತ್ರವನ್ನು ಹೊಂದಿರಲಿದೆ. ಅಲ್ಲದೇ ಈಗಾಗಲೇ ಚಾಲ್ತಿಯಲ್ಲಿರುವ 100 ರೂ. ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ ಎಂದು ತಿಳಿಸಿದ್ದ ಆರ್‌ಬಿಐ ಮುಂದಿನ ದಿನಗಳಲ್ಲಿ ಹೊಸ ವಿನ್ಯಾಸದ ನೋಟುಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿತ್ತು.