Tag: depression

  • ಎದೆ ಭಾಗಕ್ಕೆ ಗನ್‍ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ!

    ಎದೆ ಭಾಗಕ್ಕೆ ಗನ್‍ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ!

    ಧಾರವಾಡ: ನಿವೃತ್ತ ಯೋಧರೊಬ್ಬರು ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಮೋರೆ ಪ್ಲಾಟ್‍ನ ಚನ್ನಮಲ್ಲಯ್ಯ(43) ಹಿರೇಮಠ ಗನ್‍ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ. ಇವರು ಕಳೆದ ಎರಡು ದಿನಗಳಿಂದ ಮಾನಸಿಕ ಖಿನ್ನತೆಯಾದವರಂತೆ ವರ್ತಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಜೆ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ತೆಗೆದುಕೊಂಡು ಅದರಲ್ಲಿ ಗುಂಡು ಹಾಕಿ ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ನಡೆದ ವೇಳೆ ಪತ್ನಿ ಹಾಗೂ ಅವರ ಮಕ್ಕಳು ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ. ಚನ್ನಮಲ್ಲಯ್ಯ ಅವರ ಅಳಿಯ ಗನ್‍ನಿಂದ ಶೂಟ್ ಮಾಡಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನ ಮಾಡಿದಾಗ, ಅವರನ್ನ ಹಿಂದಕ್ಕೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಎರಡು ವರ್ಷಗಳ ಹಿಂದೆಯಷ್ಟೇ ಇವರು ಸೇನೆಯಿಂದ ನಿವೃತ್ತಿ ಹೊಂದಿದ್ದರು. ಸದ್ಯ ಹುಬ್ಬಳ್ಳಿಯ ಬ್ಯಾಂಕ್‍ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಉಪನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕೋಡಿಯಲ್ಲಿ ವರುಣನ ಅಬ್ಬರ

    ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕೋಡಿಯಲ್ಲಿ ವರುಣನ ಅಬ್ಬರ

    ಬಳ್ಳಾರಿ: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರೆದಿತ್ತು.

    ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಳ್ಳಾರಿ ಜಿಲ್ಲೆಯ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಭಾರೀ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲೂ ಸಹ ಕಳೆದ ರಾತ್ರಿ ಧಾರಕಾರವಾಗಿ ಸುರಿದ ಮಳೆಗೆ ಮೋರಗೇರಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಅಲ್ಲದೇ ಹಗರಿಬೊಮ್ಮನಹಳ್ಳಿ- ಹಡಗಲಿ ಮಾರ್ಗದ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.

    ಮೋರಗೇರಿ ಗ್ರಾಮದ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನರು ಯುಗಾದಿ ಹಬ್ಬದ ದಿನದಂದು ಮನೆಗೆ ನುಗ್ಗಿದ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದರು. ಒಟ್ಟಾರೆ ಬಿರುಬಿಸಿಲಿನ ಸಮಯದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ ನಿರ್ಮಿಸಿದೆ.

    ಭಾರೀ ಮಳೆಯಿಂದಾಗಿ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿ ಹೋಗಿದೆ. ಬಾಳೆಹೊನ್ನೂರು, ಜೈಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆಯಲ್ಲಿ ಭಾರೀ ಮಳೆ ಸುರಿದಿರೋದ್ರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೂಡಿಗೆರೆಯಲ್ಲಿ ಭಾರೀ ಗಾಳಿ-ಮಳೆಯಾಗಿದ್ರಿಂದ ಚಿಕ್ಕಮಗಳೂರು-ಮೂಡಿಗೆರೆಗೆ ಸಂಪರ್ಕ ಕಲ್ಪಿಸೋ ಕಬ್ಬಿಣ ಸೇತುವೆ ಬಳಿಯ ಸೇತುವೆ ಕುಸಿದು ಬಿದ್ದಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮಳೆ ಆಗಮನ ರೈತರಲ್ಲಿ ಹರ್ಷ ಮೂಡಿಸಿದೆ. ಆದ್ರೆ ಮಾವಿನ ಫಸಲು ನಾಶವಾಗುತ್ತದೇನೋ ಎಂಬ ಚಿಂತೆಯಲ್ಲಿ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆ ಹೀಗೇ ಮುಂದುವರೆದರೆ ಮುಂಗಾರಿನ ಪೂರ್ವದಲ್ಲೇ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಿರಂತರ ಮಳೆ ಸುರಿದಿದ್ದು, ವರ್ಷದ ಮೊದಲ ಮಳೆಗೆ ಜನರು ಫುಲ್ ಕುಶ್ ಆಗಿದ್ದಾರೆ. ಯುಗಾದಿ ದಿನದಂದೇ ಮಳೆಯಾಗಿರುವುದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಬೆಂಗ್ಳೂರಿನಲ್ಲಿ ನಿವೃತ್ತ ಯೋಧ ಆತ್ಮಹತ್ಯೆ

    ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಬೆಂಗ್ಳೂರಿನಲ್ಲಿ ನಿವೃತ್ತ ಯೋಧ ಆತ್ಮಹತ್ಯೆ

    ಬೆಂಗಳೂರು: ಖಿನ್ನತೆಗೆ ಒಳಗಾಗಿದ್ದ ನಿವೃತ್ತ ಯೋಧರೊಬ್ಬರು ತನ್ನ ಬಳಿಯಿದ್ದ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊರಮಾವಿನಲ್ಲಿ ನಡೆದಿದೆ.

    ಇಲ್ಲಿನ ಎಲೈಟ್ ಅಪಾರ್ಟ್‍ಮೆಂಟ್ ನಿವಾಸಿಯಾಗಿದ್ದ ಅನಿಲ್ ಅಹುಜಾ ಎಂಬವರು ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜೊತೆಗೆ ಸಾಕಷ್ಟು ಸಲ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಭಾನುವಾರ ರಾತ್ರಿ ತನ್ನ ರೂಮ್‍ನಲ್ಲಿ ಶೂಟ್ ಮಾಡಿಕೊಂಡು ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

  • ಮಗನ ನಿರ್ಧಾರದಿಂದ ಖಿನ್ನತೆಗೆ ಜಾರಿದ್ದಾನೆ ಭೂಗತ ಪಾತಕಿ ದಾವೂದ್!

    ಮಗನ ನಿರ್ಧಾರದಿಂದ ಖಿನ್ನತೆಗೆ ಜಾರಿದ್ದಾನೆ ಭೂಗತ ಪಾತಕಿ ದಾವೂದ್!

    ಥಾಣೆ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಕೌಟುಂಬಿಕ ಕಲಹಗಳಿಂದ ಖಿನ್ನತೆಗೆ ಒಳಗಾಗಿದ್ದಾನೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ದಾವೂದ್ ಉತ್ತರಾಧಿಕಾರಿ ಎಂದೇ ಕರೆಸಿಕೊಂಡಿದ್ದ, ಆತನ ಮಗ ಮೋಯಿನ್ ನವಾಜ್ ಡಿ ಕಸ್ಕರ್ (31) ಮೌಲ್ವಿ ಯಾಗಲು ನಿರ್ಧಾರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

    ಕಾನೂನು ಬಾಹಿರ ಕೃತ್ಯಗಳಿಂದ ಬೇಸತ್ತು ಹೋಗಿರುವ ಮೋಯಿನ್, ಕುಟುಂಬ ವ್ಯವಹಾರಗಳನ್ನು ಮುಂದುವರೆಸದೇ ಇರಲು ನಿರ್ಧರಿಸಿದ್ದು, ತಂದೆಯ ಕೃತ್ಯಗಳಿಂದ ಇಡೀ ಕುಟುಂಬಕ್ಕೆ ಕಳಂಕ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ.

    ಅಪಾರ ಸಂಪತ್ತು, ತೋಳ್ಬಲ ಹೊಂದಿದ್ದರೂ, ದಾವೂದ್ ತನ್ನ ಕುಟುಂಬದ ಸಮಸ್ಯೆಗಳನ್ನು ನಿವಾರಿಸಲು ವಿಫಲನಾಗಿದ್ದಾನೆ. ದಾವೂದ್ ನ ಮೂರು ಮಕ್ಕಳಲ್ಲಿ ಮೋಯಿನ್ ಒಬ್ಬನೇ ಗಂಡು ಮಗನಾಗಿದ್ದು, ಧರ್ಮ ನಿಷ್ಠನಾಗಿರುವ ಮೋಯಿನ್ ಮೌಲ್ವಿ (ಧಾರ್ಮಿಕ ಶಿಕ್ಷಕ) ಯಾಗಲು ನಿರ್ಧರಿಸಿದ್ದಾನೆ ಎಂದು ಥಾಣೆ ಪೋಲಿಸ್ ಅಧಿಕಾರಿ ಪ್ರದೀಪ್ ಶರ್ಮಾ ಹೇಳಿದ್ದಾರೆ.

    ಕಳೆದ ಸೆಪ್ಟೆಂಬರ್‍ನಲ್ಲಿ ಥಾಣೆಯ ಎಇಸಿಗೆ ಸಿಕ್ಕಿಬಿದ್ದ ದಾವೂದ್ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ವಿಚಾರಣೆ ವೇಳೆ ಈ ವಿಷಯ ಬಹಿರಂಗಗೊಂಡಿದ್ದು, ಇನ್ನು ಕೆಲವು ಕೌಟುಂಬಿಕ ಭಿನ್ನತೆಗಳು ಹಾಗೂ ವಯೋಸಹಜ ಅನಾರೋಗ್ಯಗಿಂದ ದಾವೂದ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದ.

    ಇನ್ನು ಮೋಯಿನ್ ಖುರಾನ್ ನ 6,236 ಶ್ಲೋಕಗಳನ್ನು ಕಂಠಪಾಠ ಮಾಡಿದ್ದು, ಧಾರ್ಮಿಕ ಮುಖಂಡರಿಂದ ಅಪಾರ ಗೌರವ ಗಳಿಸಿದ್ದಾನೆ. ಅಲ್ಲದೇ ಈಗಾಗಲೇ ಶ್ರೀಮಂತ ಜೀವನ ತ್ಯಜಿಸಿರುವ ಮೋಯಿನ್ ಕರಾಚಿಯಲ್ಲಿ ನೀಡಲಾಗಿದ್ದ ಭವ್ಯ ಬಂಗಲೆ ಹಾಗೂ ಐಶಾರಾಮಿ ಸೌಕರ್ಯಗಳನ್ನು ತಿರಸ್ಕರಿಸಿ, ತನ್ನ ಕುಟುಂಬದೊಂದಿಗೆ ತಮ್ಮ ಮನೆಯ ಪಕ್ಕದ ಮಸೀದಿಯೊಂದರಲ್ಲಿ ಜೀವನ ನಡೆಸಲು ಮುಂದಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಮೋಯಿನ್ ಪತ್ನಿ ಹಾಗೂ ಆತನ ಮೂರು ಮಕ್ಕಳು ಪ್ರಸ್ತುತ ಆತನೊಂದಿಗೆ ಮಸೀದಿ ನೀಡಿರುವ ಸಣ್ಣ ಕ್ವಾಟ್ರಸ್ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೋಯಿನ್ 2011ರಲ್ಲಿ ಪಾಕಿಸ್ತಾನ ಮತ್ತು ಬ್ರಿಟನ್‍ನಲ್ಲಿ ವ್ಯವಹಾರ ಹೊಂದಿರುವ ಉದ್ಯಮಿ ಪುತ್ರಿಯನ್ನು ಮದುವೆಯಾಗಿದ್ದಾನೆ. ಅಲ್ಲದೇ ಮೋಯಿನ್ ಸಹೋದರಿ ಮಹ್ರುಕ್ 2006 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದದ್ ಪುತ್ರನನ್ನು ಮದುವೆಯಾಗಿದ್ದಾಳೆ. ಮತ್ತೊಬ್ಬ ದಾವೂದ್ ಪುತ್ರಿ ಮಹ್ರೀನ್, ಅಮೆರಿಕದ ಮೂಲದ ಉದ್ಯಮಿಯನ್ನು ವರಿಸಿದ್ದಾಳೆ.

    ಈ ಹಿಂದೆ ಪೊಲೀಸ್ ವಿಚಾರಣೆ ವೇಳೆ ಇಬ್ರಾಹಿಂ ಕಸ್ಕರ್, ದಾವೂದ್ ಆರೋಗ್ಯವಾಗಿದ್ದು, ಪಾಕಿಸ್ತಾನಿ ಏಜೆನ್ಸಿಗಳ ರಕ್ಷಣೆಯಲ್ಲಿ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದ. ಆದರೆ ದಾವೂದ್ ಸಹೋದರರ ಪೈಕಿ ಕೆಲವರು ಮೃತಪಟ್ಟಿದ್ದು, ಮತ್ತೊಬ್ಬ ಸಹೋದರ ಅನೀಸ್ ಇಬ್ರಾಹಿಂ ಕಸ್ಕರ್ ಗೆ ವಯಸ್ಸಾಗಿದೆ. ಇನ್ನು ದಾವೂದ್ ತನ್ನ ವ್ಯವಹಾರಗಳನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಗಳ ಬಗ್ಗೆ ವಿಶ್ವಾಸ ಹೊಂದಿಲ್ಲ ಎಂದು ತಿಳಿದುಬಂದಿದೆ.

    ಇಬ್ರಾಹಿಂ ಕಸ್ಕರ್ ವಿಚಾರಣೆಯನ್ನು ಮುಂದುವರೆಸಿರುವ ಪೊಲೀಸರು, ಮುಂಬರುವ ದಿನಗಳಲ್ಲಿ ದಾವೂದ್ ಕುಟುಂಬ ಹಾಗೂ ಆತನ ಭವಿಷ್ಯದ ಚಟುವಟಿಕೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ.

  • 4 ಅಂತಸ್ತಿನ ಕಟ್ಟಡದಿಂದ ಹಾರಿ ಮಹಿಳಾ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    4 ಅಂತಸ್ತಿನ ಕಟ್ಟಡದಿಂದ ಹಾರಿ ಮಹಿಳಾ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಬಾಷ್ ಕಂಪನಿ ಮಹಿಳಾ ಉದ್ಯೋಗಿಯೊಬ್ಬರು ನಾಲ್ಕು ಅಂತಸ್ತಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಯತ್ನಿಸಿರುವ ಘಟನೆ ಬೆಂಗಳೂರಿನ ಚಿಕ್ಕ ಆಡುಗೋಡಿಯಲ್ಲಿ ನಡೆದಿದೆ.

    ಕೇರಳ ಮೂಲದ ಲೀನೆಟ್ ಆಂಡ್ರೋಸ್ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಘಟನೆಯಿಂದ ಲೀನೆಟ್ ಪರಿಸ್ಥಿತಿ ಗಂಭೀರವಾಗಿದ್ದು, ಸದ್ಯ ಮಹಿಳೆಯನ್ನು ಸೈಂಟ್ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತನ್ನ ಗಂಡ ಸಾವನಪ್ಪಿದ ಬಳಿಕ ಅಂದ್ರೆ ಮೂರು ತಿಂಗಳಿನಿಂದ ಲಿನೆಟ್ ಖಿನ್ನತೆಗೆ ಒಳಗಾಗಿದ್ದರು. ಆ ಬಳಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಮುಂದಾಗಿದ್ದರು. ಇದೀಗ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥೀತಿ ಗಂಭೀರವಾಗಿದೆ.

    ಗಂಡನ ಸಾವಿನ ಬಳಿಕ ಲಿನೆಟ್ ತಂಗಿಯೊಂದಿಗೆ ಪಿಜಿಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಡಿವಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ತಂದೆ ಸಾವಿನಿಂದ ಖಿನ್ನತೆಗೊಳಗಾಗಿ ಯುವಕ ಆತ್ಮಹತ್ಯೆ

    ತಂದೆ ಸಾವಿನಿಂದ ಖಿನ್ನತೆಗೊಳಗಾಗಿ ಯುವಕ ಆತ್ಮಹತ್ಯೆ

    ಕೋಲಾರ: ತಂದೆ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಯುವಕ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕು ಮುದವತ್ತಿ ಗ್ರಾಮದಲ್ಲಿ ಘಟನೆ.

    ಇಲ್ಲಿನ ಛತ್ರಕೋಡಿಹಳ್ಳಿ ನಿವಾಸಿಯಾದ 27 ವರ್ಷದ ನಾಗೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲವು ದಿನಗಳ ಹಿಂದೆ ನಾಗೇಶ್ ತಂದೆ ಸಾವನ್ನಪ್ಪಿದ್ದರು. ಇದರಿಂದ ಆತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.

    ಕಳೆದ ರಾತ್ರಿ ಊರಾಚೆ ಇರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 4 ವರ್ಷಗಳಿಂದ ರೂಮಿನಲ್ಲೇ ಬಂಧಿಯಾಗಿದ್ದ ಅಮ್ಮ ಮಗಳನ್ನ ರಕ್ಷಿಸಿದ ಪೊಲೀಸರು!

    4 ವರ್ಷಗಳಿಂದ ರೂಮಿನಲ್ಲೇ ಬಂಧಿಯಾಗಿದ್ದ ಅಮ್ಮ ಮಗಳನ್ನ ರಕ್ಷಿಸಿದ ಪೊಲೀಸರು!

    ನವದೆಹಲಿ: 4 ವರ್ಷಗಳಿಂದ ಕೋಣೆಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಬಂಧಿಯಾಗಿದ್ದರು ಎನ್ನಲಾದ ತಾಯಿ ಮಗಳನ್ನು ದೆಹಲಿ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಈ ಇಬ್ಬರು ಇಲ್ಲಿನ ಮಹಾವೀರ್ ಎನ್‍ಕ್ಲೇವ್ ನಿವಾಸಿಗಳಾಗಿದ್ದು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. 42 ವರ್ಷದ ಕಲಾವತಿ ಮತ್ತು ಅವರ ಮಗಳಾದ 20 ವರ್ಷದ ದೀಪಾ ಮದಲನೇ ಮಹಡಿಯ ರೂಮಿನಲ್ಲಿ ಬಂಧಿಯಾಗಿದ್ದಾರೆ ಎಂದು ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಮ್ಮ ಮಗಳನ್ನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಮಹಿಳೆಯ ಮಾವ ಕೂಡ ಇದೇ ಮನೆಯಲ್ಲಿ ವಾಸವಾಗಿದ್ದು ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಹಿಳೆಯರಿದ್ದ ರೂಮಿನ ಬಾಗಿಲು ತೆರೆದೇ ಇತ್ತು. ಇಬ್ಬರೂ ಅಪೌಷ್ಟಿಕತೆಗೆ ಒಳಗಾಗಿದ್ದರು. ಅನಾರೋಗ್ಯಕರ ಸ್ಥಿಯಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೊದಲಿಗೆ ಪೊಲೀಸರೊಂದಿಗೆ ಆಸ್ಪತ್ರೆಗೆ ಹೋಗಲು ತಾಯಿ ಹಾಗೂ ಮಗಳು ನಿರಾಕರಿಸಿದ್ದರು. ಇಬ್ಬರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಕಲಾವತಿ ಅವರ ಮಾವ ಮಹಾವೀರ್ ಮಿಶ್ರಾ ಪಕ್ಕದ ರೂಮಿನಲ್ಲೇ ವಾಸವಿದ್ದು, ಮಹಿಳೆಯರು ಕೇಳಿದಾಗ ದಿನಕ್ಕೆ ಒಂದು ಬಾರಿ ಊಟ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    2000ದಲ್ಲಿ ಹಂಡತಿ ತೀರಿಕೊಂಡಿದ್ದು, 4 ವರ್ಷಗಳ ಹಿಂದೆ ಇಬ್ಬರು ಗಂಡು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಅಂದಿನಿಂದ ಕಲಾವತಿ ಹಾಗೂ ದೀಪಾ ರೂಮಿನೊಳಗೆ ಬಂಧಿಯಾಗಿದ್ದಾರೆ. ನನ್ನ ಮಕ್ಕಳೊಂದಿಗೆ ಮಾತನಾಡಿದೆ ಎಂದು ಇಬ್ಬರೂ ಆಗಾಗ ಹೇಳುತ್ತಿದ್ದರು. ಎಷ್ಟೋ ದಿನ ಊಟ ಕೂಡ ಮಾಡುತ್ತಿರಲಿಲ್ಲ. ಸ್ಥಳೀಯ ವೈದ್ಯರೊಬ್ಬರು ಇವರಿಗೆ ಚಿಕಿತ್ಸೆ ನೀಡುತ್ತಿದ್ದರು. ನನ್ನ ಬಳಿ ಹೆಚ್ಚಿನ ಹಣ ಇರಲಿಲ್ಲವಾದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿರಲಿಲ್ಲ ಎಂದು ಮಹಾವೀರ್ ಮಿಶ್ರಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.