ಕಾರವಾರ: ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆಗೆ ಶರಣಾಗಿದ್ದು, ಈ ಹಿಂದೆ ಅವರು ಮಾಡಿದ್ದ ಮಾನವೀಯ ಕಾರ್ಯವೊಂದು ಜನರ ಮೆಚ್ಚುಗೆಗೆ ಕಾರಣವಾಗಿದೆ.
ಕಾರವಾರದಲ್ಲಿ (Karwar) ಈ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ಮಾನಸಿಕ ಖಿನ್ನತೆಗೊಳಗಾಗಿ (Depression) ಬೀದಿ ಸುತ್ತುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರು ಧೈರ್ಯ ತುಂಬಿದ್ದರು. ಅಲ್ಲದೇ ಆತನಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದರು.
2016ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಚಿತ್ರದ ಶೂಟಿಂಗ್‌ಗೆ ಅವರು ಬಂದಿದ್ದರು. ಈ ವೇಳೆ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎಂಬ ವ್ಯಕ್ತಿ ಖಿನ್ನತೆಗೊಳಗಾಗಿ, ಉದ್ದನೆಯ ಕೂದಲು ಬಿಟ್ಟು ತಿರುಗುತ್ತಿದ್ದರು. ಅವರನ್ನು ನೋಡಿ ಮರುಗಿದ್ದ ಗುರುಪ್ರಸಾದ್, ಬಳಿಗೆ ಕರೆಸಿಕೊಂಡು ಆತನಿಗೆ ಕಟಿಂಗ್ ಮಾಡಿಸಿ, ಹೊಸ ಬಟ್ಟೆ ತೊಡಿಸಿದ್ದರು.
ಚಿತ್ರೀಕರಣದ ವೇಳೆ ಆತನನ್ನು ಕೆಲಸಕ್ಕೆ ಸಹ ಸೇರಿಸಿಕೊಂಡಿದ್ದರು. ಈ ಮೂಲಕ ಆತನಿಗೆ ಧೈರ್ಯ ತುಂಬಿ ದುಡಿಮೆಯ ಹಾದಿ ತೋರಿಸಿದ್ದರು.
ಲಕ್ನೋ: ವೈದ್ಯನೊಬ್ಬ (Doctor) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನು ಕೂಡಾ ಆತ್ಮಹತ್ಯೆಗೆ (Suicide) ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿಯಲ್ಲಿ (Rae Bareli) ನಡೆದಿದೆ.
ಮಂಗಳವಾರ ತಡರಾತ್ರಿ ಈ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವೈದ್ಯನನ್ನು ಅರುಣ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದೆ. ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಆಸ್ಪತ್ರೆಯ ನೇತ್ರ ತಜ್ಞನಾಗಿದ್ದ ಸಿಂಗ್‌ಗೆ ತನ್ನ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಕರೆ ಮಾಡಿದ್ದರು. ಕರೆಯನ್ನು ಸ್ವೀಕರಿಸದೇ ಹೋದಾಗ ಆಸ್ಪತ್ರೆಯ ಸಂಕೀರ್ಣದ ಒಳಗೆಯೇ ಇರುವ ಮನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.
ಮನೆಯ ಬಾಗಿಲನ್ನು ತೆರೆದಾಗ ಅರುಣ್ ಪತ್ನಿ ಅರ್ಚನಾ (40) ಮಕ್ಕಳಾದ ಅರಿಬಾ (12) ಹಾಗೂ ಆರವ್ (4) ಶವವಾಗಿ ಪತ್ತೆಯಾಗಿದ್ದಾರೆ. ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಿಂಗ್ ಮಕ್ಕಳಿಗೆ ಚುಚ್ಚು ಮದ್ದು ನೀಡಿ, ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿ ಬಳಿಕ ಕೊಂದಿದ್ದಾನೆ. ಅವರಿಬ್ಬರ ತಲೆಯಲ್ಲಿ ಬಲವಾಗಿ ಹೊಡೆದಿರುವ ಗಾಯಗಳಾಗಿವೆ. ನಂತರ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಂಡಮಾರುತಕ್ಕೆ ಬಾಲಿವುಡ್ ನಟ ಆಮೀರ್ ಸಿಲುಕಿದ್ದು ಹೇಗೆ?
ವೈದ್ಯ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ತನ್ನ ಪತ್ನಿ, ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದಾಗಿ ಹೇಳಿದ್ದಾರೆ. ಸಿಂಗ್‌ನ ನೆರೆಹೊರೆಯವರ ಪ್ರಕಾರ ಆತನ ಕುಟುಂಬದವರು 2 ದಿನಗಳ ಹಿಂದೆ ಭಾನುವಾರ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಏನಾಗುತ್ತಿದೆ ಎನ್ನುವ ಆತಂಕ ನೋಡುಗರಿಗೆ ಎದುರಾಗಿದೆ. ಇಂದು ಬೆಳಗ್ಗೆ ವಾಹಿನಿಯು ಪ್ರೊಮೊವೊಂದನ್ನು ರಿಲೀಸ್ ಮಾಡಿದ್ದು, ಮನೆಮಂದಿ ಮೇಲೆ ವಿನಯ್ ಜೋರಾಗಿಯೇ ಕೂಗಾಡಿದ್ದಾರೆ. ಅವರು ಧ್ವನಿ ಬಿಗ್ ಬಾಸ್ ಮನೆಯನ್ನೇ ಬೀಳಿಸುವಷ್ಟು ದೊಡ್ಡದಾಗಿತ್ತು. ವಿನಯ್ ಹಾಗೆ ಕೂಗಾಡಲು ಕಾರಣ ನಟಿ ಸಂಗೀತಾ ಶೃಂಗೇರಿ (Sangeetha Sringeri). ಇಡೀ ಮನೆ ಸಂಗೀತಾ ಪರವಾಗಿ ಮಾತನಾಡುತ್ತಿದೆ. ವಿನಯ್ (Vinay) ಕಡೆ ಬೆಟ್ಟು ಮಾಡುತ್ತಿದೆ. ಇದರಿಂದಾಗಿ ವಿನಯ್ ರುದ್ರಾವತಾರ ತಾಳಿದ್ದಾರೆ.
ಸಂಗೀತಾ ಮತ್ತು ವಿನಯ್ ನಡುವೆ ಇಷ್ಟೊಂದು ವೈಷಮ್ಯ ಬೆಳೆಯುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಸೀರಿಯಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಗುಡ್ ಫ್ರೆಂಡ್ಸ್.. ನೂರಾರು ದಿನಗಳ ಕಾಲ ಒಟ್ಟಿಗೆ ಕಳೆದಿದ್ದಾರೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ನಟಿಸಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದಾರೆ. ನಾಮಿನೇಟ್ ವಿಚಾರದಲ್ಲಿ ಶುರುವಾದ ಇಬ್ಬರ ನಡುವಿನ ವಾಕ್ಸಮರ ಇದೀಗ ಮಾನಸಿಕ ಖಿನ್ನತೆಗೆ ಜಾರುವಂತೆ ಮಾಡಿದ್ದು ವಿಪರ್ಯಾಸ.
ಹೌದು, ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ ಖಿನ್ನತೆಗೆ (Depression) ಜಾರಿದ್ದಾರಂತೆ. ಹಾಗಂತ ಅವರೇ ಈ ಮಾಹಿತಿಯನ್ನು ಇತರ ಕಂಟೆಸ್ಟೆಂಟ್ ಮುಂದೆ ಹೇಳಿಕೊಂಡಿದ್ದಾರೆ. ಸಂಗೀತಾ ಅವರು ಒಬ್ಬೊಬ್ಬರೇ ಕ್ಯಾಮೆರಾ ಮುಂದೆ ನಿಂತು ಮಾತನಾಡೋದನ್ನ, ಒಬ್ಬೊಬ್ಬರೇ ಕೂತು ಅಳೋದನ್ನು ಮನೆಮಂದೆ ನೋಡಿದ್ದಾರೆ. ಇಷ್ಟಕ್ಕೆಲ್ಲ ಕಾರಣ ವಿನಯ್ ಎನ್ನುವುದು ಎಲ್ಲರ ಆರೋಪವಾಗಿದೆ. ಹೀಗಾಗಿ ಸಂಗೀತಾ ವಿಷಯದಲ್ಲಿ ವಿನಯ್ ಟಾರ್ಗೆಟ್ ಆಗಿದ್ದಾರೆ.
ಸಂಗೀತಾ ಮತ್ತು ವಿನಯ್ ನಡುವಿನ ಗಲಾಟೆಯಲ್ಲಿ ಭಾಗ್ಯಶ್ರೀ ಅವರು ಪ್ರಶ್ನಿಸುತ್ತಾರೆ. ಇಬ್ಬರ ಮಧ್ಯ ಏನಾಗುತ್ತಿದೆ ಎಂದು ವಿನಯ್ ನ ಕೇಳುತ್ತಾರೆ. ಭಾಗ್ಯಶ್ರೀ ಅವರ ಪ್ರಶ್ನೆಯನ್ನು ಕೇಳುತ್ತಿದ್ದಂತೆಯೇ ವಿನಯ್ ಗರಂ ಆಗುತ್ತಾರೆ. ‘ಅವಳನ್ನು ಸಮಾಧಾನ ಮಾಡೋಕೆ, ನನ್ನ ಲವ್ವರ್?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ತನ್ನ ಮತ್ತು ಸಂಗೀತಾ ಮಧ್ಯ ಏನಾಗುತ್ತಿದೆ ಎಂದು ಶಾಂತ ರೀತಿಯಲ್ಲಿ ಕೂತುಕೊಂಡು ಯೋಚಿಸಬೇಕಿದ್ದ ವಿನಯ್, ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಕೂಗಾಟ ಮನೆಮಂದಿಗೆಲ್ಲ ಆತಂಕ ಮೂಡಿಸಿದೆ.
ಒಂದು ಕಡೆ ‘ನನಗೆ ಈ ಮನೆಯಲ್ಲಿ ಇರೋಕೆ ಭಯವಾಗುತ್ತಿದೆ’ ಎನ್ನುತ್ತಿದ್ದಾರೆ ಸಂಗೀತಾ. ಇನ್ನೊಂದು ಕಡೆ ‘ನನ್ನ ಧ್ವನಿ ಬಂದಾಗ ಕಿವಿ ಮುಚ್ಕೊಳ್ಳಿ’ ಎನ್ನುತ್ತಿದ್ದಾರೆ ವಿನಯ್. ಯಾರೇ ಹೇಳಿದರೂ, ವಿನಯ್ ಶಾಂತವಾಗುವಂತೆ ಕಾಣುತ್ತಿಲ್ಲ. ರಂಪಾಟ ಮನೆಯಲ್ಲಿ ಇನ್ನೂ ಜಾಸ್ತಿಯೇ ಆಗುತ್ತಿದೆ. ಮನೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಕೋಪವನ್ನು ಬಿಗ್ ಬಾಸ್ ಹೇಗೆ ತಣ್ಣಗೆ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲ.
ಪಾರ್ಕಿಂಗ್ ವಿಚಾರವಾಗಿ ಐಪಿಎಸ್ ಅಧಿಕಾರಿ ಜೊತೆ ಕಿರಿಕ್ ಮಾಡಿಕೊಂಡಿದ್ದ ನಟಿ ಡಿಂಪಲ್ ಹಯಾತಿ (Dimple Hayati) ಖಿನ್ನತೆಗೆ ಜಾರಿದ್ದಾರಂತೆ. ಅಧಿಕಾರಿ ಜೊತೆಗಿನ ಜಗಳದಿಂದಾಗಿ ನಟಿಗೆ ಬೆದರಿಕೆಯ ಕರೆಗಳು ಬರುತ್ತಿದ್ದು, ಅವುಗಳನ್ನು ಎದುರಿಸೋಕೆ ಆಗದೇ ಡಿಂಪಲ್ ಖಿನ್ನತೆಗೆ (Depression) ಒಳಗಾಗಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.
ಸಿನಿಮಾಗಳಿಗಿಂತ ಕಿರಿಕ್ ಸುದ್ದಿಗಳಿಂದಲೇ ಹೆಚ್ಚೆಚ್ಚು ಸುದ್ದಿ ಮಾಡಿದವರು ಡಿಂಪತ್ ಹಯಾತಿ. ಈ ಹಿಂದೆಯೂ ನಾನಾ ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರು. ಮೊನ್ನೆಯಷ್ಟೇ ಐಪಿಎಸ್ ಅಧಿಕಾರಿ ಜೊತೆ ಡಿಂ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇದನ್ನೂ ಓದಿ:ಭಾರತದ ಮಣ್ಣಿಗೆ ಘನತೆಯಿದೆ- G20 ಸಭೆಯಲ್ಲಿ ರಾಮ್ ಚರಣ್ ಮಾತು
ಪೊಲೀಸ್ ಅಧಿಕಾರಿ ರಾಹುಲ್ ಹೆಗ್ಡೆ(Rahul Hegde)- ಸೌತ್ ನಟಿ ಡಿಂಪಲ್ ಹಯಾತಿ ನಡುವಿನ ಜಗಳ ತಾರಕಕ್ಕೇರಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿತ್ತಾಟ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪೊಲೀಸ್ ಅಧಿಕಾರಿಯ ಕಾರನ್ನು ಡ್ಯಾಮೇಜ್ ಮಾಡಿದ ಆರೋಪದ ಮೇಲೆ ನಟಿ ಡಿಂಪಲ್ ಹಯಾತಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ನಟಿ ಡಿಂಪಲ್ ಹಾಗೂ ಅವರ ಗೆಳೆಯ ವಿಕ್ಟರ್ (Victor) ಹೈದರಾಬಾದ್‌ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ. ಇದೇ ಅಪಾರ್ಟ್ಮೆಂಟ್‌ನಲ್ಲಿ ಹೈದರಾಬಾದ್‌ನ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮೀಷನರ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಕೂಡ ವಾಸವಾಗಿದ್ದಾರೆ. ಇವರ ಮಧ್ಯೆ ಕೆಲ ಸಮಯದಿಂದ ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನಟಿ ಈ ವಿಚಾರದಲ್ಲಿ ರಿವೇಂಜ್ ತೆಗೆದುಕೊಂಡಿದ್ದಾರೆ.
ಮೇ ೧೪ರಂದು ಡಿಂಪಲ್ ಹಯಾತಿ ಅವರು ರಾಹುಲ್ ಕಾರಿಗೆ ಡ್ಯಾಮೇಜ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ಸಿಕ್ಕಿದೆ. ಇದನ್ನು ಆಧರಿಸಿ ನಟಿ ಡಿಂಪಲ್ ವಿರುದ್ಧ ರಾಹುಲ್ ಅವರ ಕಾರು ಡ್ರೈವರ್ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಡಿಂಪಲ್ ಹಯಾತಿಗೆ ಸಮನ್ಸ್ ನೀಡಲಾಗಿದೆ. ಸೋಮವಾರ (ಮೇ 29) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ವಿದ್ಯಾಭರಣ್ ಜೊತೆಗಿನ ನಿಶ್ಚಿತಾರ್ಥ ವಿಚಾರವಾಗಿ ನಟಿ ವೈಷ್ಣವಿ ಹಲವು ದಿನಗಳ ಕಾಲ ಕಾಣಿಸಿಕೊಂಡಿರಲಿಲ್ಲ. ಮಾಧ್ಯಮಗಳ ಜೊತೆ ಅವರ ತಾಯಿ ಮಾತನಾಡಿ, ‘ಮಗಳ ಮನಸ್ಸು ಸರಿಯಿಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಆಕೆ ಕಾಣಿಸಿಕೊಳ್ಳುತ್ತಿಲ್ಲ’ ಎಂದಿದ್ದರು. ವೈಷ್ಣವಿ ಆಚೆ ಬಾರದೇ ಇರುವ ಕಾರಣಕ್ಕಾಗಿ ಅವರು ಡಿಪ್ರೆಷನ್ ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಅದರಿಂದ ಆಚೆ ಬರಲು ಅವರು ಟ್ಯಾಟೋ ಹಾಕಿಸಿಕೊಂಡರು ಎಂದು ಚರ್ಚೆ ನಡೆದಿತ್ತು. ಈ ಕುರಿತು ವೈಷ್ಣವಿ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾಭರಣ್ ಕುರಿತಾದ ಆಡಿಯೋ ಬಹಿರಂಗವಾದಾಗ ಅವರ ಮನಸಿಗೆ ನೋವು ಆಗಿದ್ದು ನಿಜವಂತೆ. ಆದರೆ, ಯಾವುದೇ ಕಾರಣಕ್ಕೂ ಡಿಪ್ರೆಷನ್ ಗೆ ಹೋಗಿರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಕೆಲವರು ಈ ರೀತಿಯಲ್ಲಿ ಮಾತನಾಡಿದರು. ಅದರಿಂದ ಆಚೆ ಬರುವುದಕ್ಕಾಗಿ ಟ್ಯಾಟೋ ಹಾಕಿಸಿಕೊಂಡರು ಎಂದೆಲ್ಲ ಮಾತನಾಡಿದ್ದನ್ನು ಕೇಳಿದ್ದೇನೆ. ಆದರೆ, ನಾನು ತುಂಬಾ ಸ್ಟ್ರಾಂಗ್. ನನ್ನ ಬದುಕಿಗೆ ಬಗ್ಗೆ ನನಗೆ ಸ್ಪಷ್ಟತೆ ಇದೆ ಎಂದು ಅವರು ಹೇಳಿದ್ದಾರೆ.
ಸದ್ಯ ವೈಷ್ಣವಿ ಮತ್ತೊಂದು ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಆ ಧಾರಾವಾಹಿಯ ಚಿತ್ರೀಕರಣದಲ್ಲೂ ಅವರು ತೊಡಗಿಕೊಳ್ಳಲಿದ್ದಾರೆ. ‘ನನ್ನ ಬದುಕಿನ ಬಗ್ಗೆ ಸ್ಪಷ್ಟತೆ ಇದೆ. ನಾನು ಗೆಲ್ಲುತ್ತೀನೋ ಅಥವಾ ಜೀವನ ಗೆಲ್ಲತ್ತೋ ನೋಡೇ ಬಿಡೋಣ’ ಎಂದೂ ಅವರು ಹೇಳಿಕೊಂಡಿದ್ದಾರೆ. ಮದುವೆಯ ಬಗ್ಗೆ ತಮಗಿರುವ ಕನಸುಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್
ವಿದ್ಯಾಭರಣ್ ಜೊತೆ ತಮಗೆ ನಿಶ್ಚಿತಾರ್ಥ ಆಗಿರಲಿಲ್ಲ. ಮದುವೆಗೂ ತಾವು ಒಪ್ಪಿರಲಿಲ್ಲ ಎಂದೂ ಹೇಳಿರುವ ವೈಷ್ಣವಿ ಆದ ಘಟನೆಯ ಬಗ್ಗೆ ವಿಷಾದವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಸದ್ಯ ಕೆರಿಯರ್ ಬಗ್ಗೆ ಫೋಕಸ್ ಮಾಡಿಕೊಂಡು, ಧಾರಾವಾಹಿಯನ್ನು ಅವರು ಒಪ್ಪಿಕೊಂಡಿದ್ದಾರೆ. ಈ ವಿಚಾರದಿಂದ ಮತ್ತೆ ಅವರು ದೂರ ಇರುವುದಾಗಿಯೂ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಅವರನ್ನು ಈ ಹಿಂದೆ ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಂಡಿದ್ದಕ್ಕೆ ಕಳೆದ ಮಾರ್ಚ್‍ವಜಾಗೊಳಿಸಲಾಗಿತ್ತು. ಮರಳಿ ಕೆಲಸ ಸಿಗದ ಹಿನ್ನೆಲೆ ಮನನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗುವಾದ ಬಳಿಕ ಅವರು ಡಿಪ್ರೆಷನ್‌ಗೆ (ಮಾನಸಿಕ ಖಿನ್ನತೆ) ಒಳಗಾಗಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಮೊಮ್ಮಗಳ ಪಾರ್ಥಿವ ಶರೀರವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಸೌಂದರ್ಯ ಅವರನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಮಾಜಿ ಸಿಎಂ ಮೊಮ್ಮಗಳ ಸಾವಿಗೆ ಕಾರಣ ಏನೆಂಬುದು ವರದಿಯಿಂದ ತಿಳಿದುಬರಲಿದೆ. ಇದನ್ನೂ ಓದಿ:
ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‌ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‌ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದರು. ಆದರೆ ಇಂದು ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ಮೆಂಟ್ ಫ್ಲಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗುವನ್ನು ಪಕ್ಕದ ರೂಮ್‌ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಸಂಬAಧ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಲವರು ಸಚಿವರೂ ಭಾಗಿಯಾಗಿದ್ದರು. ಸದ್ಯ ಯಡಿಯೂರಪ್ಪ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭೋಪಾಲ್: ಮಕ್ಕಳಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಮಹಿಳೆ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ.
ಸಂಗೀತಾ(53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸಂಗೀತಾ ಉದ್ಯಮಿಯನ್ನು ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಮನನೊಂದಿದ್ದರು. ಹೀಗಾಗಿ ವಸತಿ ಕಟ್ಟಡವೊಂದರ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹದು ಎಂದು ಶಂಕಿಸಲಾಗಿದೆ.
ಮಹಿಳೆ ಬೆಳಗ್ಗೆ 6:30ರ ಹೊತ್ತಿಗೆ ಶ್ಯಾಮ್ ಹೈಟ್ಸ್ ಅಪಾರ್ಟ್‍ಮೆಂಟ್‍ನ 6ನೇ ಮಹಡಿಯಿಂದ ಜಿಗಿದಿದ್ದಾರೆ. ಹೊರಗಡೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿಗಳು, ತಕ್ಷಣ ಆಕೆಯ ಪತಿಗೆ ಮಾಹಿತಿ ನೀಡಿ, ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: 10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!
ಸಂಗೀತಾ ಮಕ್ಕಳನ್ನು ಪಡೆಯಲು ಕಳೆದ 6 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿದ್ರಾ ಹೀನತೆಯಿಂದಲೂ ಬಳಲುತ್ತಿದ್ದ ಮಹಿಳೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಮದುವೆಯಾಗಿ 25 ವರ್ಷಗಳಾಗಿದ್ದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಪಾರ್ಟಿ ಮಾಡ್ತಿದ್ದವರಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣ – ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ಮಂಜೂರು
ಮಹಿಳೆಯ ಆತ್ಮಹತ್ಯೆಯ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗೆ ಆಕೆಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಇಂದೋರ್‍ನ ಕನಾಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನವದೆಹಲಿ: ಲಾಕ್‍ಡೌನ್ ನಿಂದಾಗಿ ಮನೆಯಲ್ಲಿಯೇ ಲಾಕ್ ಆಗಿದ್ದ ರೂಪದರ್ಶಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಪ್ರಿಯಾ ಉರ್ಫ್ ಭಾವನಾ ಆತ್ಮಹತ್ಯೆಗೆ ಶರಣಾದ ಯುವತಿ. ಲಾಕ್‍ಡೌನ್ ಮುಂಚೆ ಪ್ರಿಯಾ ಮುಂಬೈನಲ್ಲಿ ವಾಸವಾಗಿದ್ದು, ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕಳೆದ ಎರಡು ಬಾರಿಯೂ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ತನ್ನ ವೃತ್ತಿಜೀವನದ ಕುರಿತು ಪ್ರಿಯಾ ಚಿಂತೆಯಲ್ಲಿದ್ದರು.
ಈ ಬಾರಿ ಲಾಕ್‍ಡೌನ್ ಘೋಷಣೆಯಾದಾಗ ಪ್ರಿಯಾ ಗ್ರೇಟರ್ ನೋಯ್ಡಾದಲ್ಲಿರುವ ಸೋದರಿ ಬಳಿ ಬಂದು, ಅಲ್ಲಿಯೇ ಉಳಿದುಕೊಂಡಿದ್ದರು. ಆದ್ರೆ ಪ್ರಿಯಾ ಕೆರಿಯರ್ ಕುರಿತು ಚಿಂತಿಸಿ ಖಿನ್ನತೆಗೊಳಗಾಗಿದ್ದರು. ಇದನ್ನೂ ಓದಿ:ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್ಗೆ ಇರಿಸು ಮುರಿಸು
ಸೋಮವಾರ ರಾತ್ರಿ ಬಾಲ್ಕನಿಗೆ ಬಂದ ಪ್ರಿಯಾ 14ನೇ ಮಹಡಿಯಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಪ್ರಿಯಾಳನ್ನ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪ್ರಿಯಾ ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ. ಮನೆಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ಅರವಿಂದ್ ಮಾತು
ಹಾಸನ: ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಬಳಿ ಕಾರು ಬಿಟ್ಟು ಚಾಲಕ ನಾಪತ್ತೆಯಾಗಿರುವ ಅಪರೂಪದ ಘಟನೆ ನಡೆದಿದೆ.
ಶೆಟ್ಟಿಹಳ್ಳಿ ಸೇತುವೆ ಮೇಲೆ ಕೆಎ-53 ಪಿ-3777 ನೋಂದಣಿ ಸಂಖ್ಯೆಯ ಕಾರು ನಿಂತಿದ್ದು, ಕಳೆದೆರಡು ದಿನಗಳಿಂದ ಚಾಲಕ ಮಾತ್ರ ಕಾಣಿಸುತ್ತಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅದರಲ್ಲಿದ್ದ ಚಾಲನಾ ಪರವಗಾನಗಿ (ಡಿಎಲ್) ಪರಿಶೀಲಿಸಿದ್ದು, ಈ ವೇಳೆ ಕಾರು ಬೆಂಗಳೂರಿನ ಹೆಬ್ಬಾಳ ಮೂಲದ ಹರೀಶ್ ಅವರದ್ದು ಎಂದು ಗೊತ್ತಾಗಿದೆ. ಕಾರು ನಿಲ್ಲಿಸಿ ಎರಡು ದಿನವಾದರೂ ಮಾಲೀಕ ಮಾತ್ರ ಇತ್ತ ಸುಳಿದಿಲ್ಲ.
ಇಲ್ಲಿಗೆ ಹರೀಶ್ ಅವರೇ ಬಂದಿದ್ದಾರಾ ಅಥವಾ ಯಾರಾದರೂ ತಂದು ನಿಲ್ಲಿಸಿದ್ದಾರಾ? ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹರೀಶ್ ಕನ್ಸ್‍ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ನಿರೀಕ್ಷೆಗೆ ತಕ್ಕ ಕೆಲಸ ಸಿಕ್ಕಿರಲಿಲ್ಲ. ಇದಕ್ಕೆ ಲಾಕ್‍ಡೌನ್ ಎಫೆಕ್ಟ್ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೆಲವು ದಿನಗಳಿಂದ ಹರೀಶ್ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಮುಂದಾಗಿರುವ ಗೊರೂರು ಪೊಲೀಸರು ನಾಪತ್ತೆಯಾಗಿರುವ ಹರೀಶ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಕಾರು ನಿಲ್ಲಿಸಿ ಎಲ್ಲಿಗೆ ಹೋಗಿರಬಹುದು? ಇಲ್ಲವೇ ಬೇರೆಯವರು ಕಾರು ತಂದು ನಿಲ್ಲಿಸಿದ್ದಾರಾ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.