Tag: Department of Health

  • ಬ್ರಿಟನ್ ಆರೋಗ್ಯ ಇಲಾಖೆಗೆ ರಾಜ್ಯದಿಂದ 1 ಸಾವಿರ ನರ್ಸಿಂಗ್ ಸಿಬ್ಬಂದಿ: ಡಾ.ಸಿ.ಎನ್.ಅಶ್ವಥ್ ನಾರಾಯಣ್

    ಬ್ರಿಟನ್ ಆರೋಗ್ಯ ಇಲಾಖೆಗೆ ರಾಜ್ಯದಿಂದ 1 ಸಾವಿರ ನರ್ಸಿಂಗ್ ಸಿಬ್ಬಂದಿ: ಡಾ.ಸಿ.ಎನ್.ಅಶ್ವಥ್ ನಾರಾಯಣ್

    – ಬ್ರಿಟೀಷ್ ಆರೋಗ್ಯ ಇಲಾಖೆ ಜೊತೆ ರಾಜ್ಯದ ಕೌಶಲ್ಯಾಭಿವೃದ್ಧಿ ಇಲಾಖೆ ಒಪ್ಪಂದ
    – ವಿಶ್ವ ಕನ್ನಡ ಶುಶ್ರೂಷಕರ ಸಂಘ ಉದ್ಘಾಟಿಸಿದ ಆದಿಚುಂಚನಗಿರಿ ಶ್ರೀ

    ಬೆಂಗಳೂರು: ಬ್ರಿಟನ್ ರಾಷ್ಟ್ರೀಯ ಆರೋಗ್ಯ ಇಲಾಖೆ (NHS) ಯಿಂದ 1 ಸಾವಿರ ಶುಶ್ರೂಷಕರಿಗೆ ಬೇಡಿಕೆ ಬಂದಿದ್ದು, ಕೋವಿಡ್ ಸಂಕಷ್ಟ ಮುಗಿದ ನಂತರ ಅಷ್ಟೂ ನರ್ಸಿಂಗ್ ಸಿಬ್ಬಂದಿಯನ್ನು ಲಂಡನ್‍ಗೆ ಕಳಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

    ವರ್ಚುಯಲ್ ವೇದಿಕೆ ಮೂಲಕ ಭಾನುವಾರ ವಿಶ್ವ ಕನ್ನಡ ಶುಶ್ರೂಷಕರ ಸಂಘದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗಾಗಲೇ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಎನ್‍ಎಚ್‍ಎಸ್ ಜತೆ ಒಪ್ಪಂದಕ್ಕೆ ಸಹಿ ಬಿದ್ದಿದೆ. 1 ಸಾವಿರ ಶುಶ್ರೂಷಕರನ್ನು ಕಳುಹಿಸುವಂತೆ ಅವರು ಕೋರಿದ್ದಾರೆ. ಅದಕ್ಕೆ ಈಗಾಗಲೇ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿನ ವ್ಯವಸ್ಥೆಗೆ ಒಗ್ಗಿ ಕೆಲಸ ಮಾಡುವುದಕ್ಕೆ ಅಗತ್ಯ ಭಾಷೆ, ಸಂವಹನ ಕಲೆ, ಸೇವಾ ಮನೋಭಾವ ಇತ್ಯಾದಿಗಳ ಬಗ್ಗೆ ಎಲ್ಲರಿಗೂ ತರಬೇತಿ ನೀಡಲಾಗುವುದು ಎಂದರು. ಇದನ್ನೂ ಓದಿ: ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ: ಡಿಸಿಎಂ ಅಶ್ವತ್ಥ ನಾರಾಯಣ್

    ಇನ್ನೂ ಹೆಚ್ಚಿನ ನರ್ಸಿಂಗ್ ಸಿಬ್ಬಂದಿ ಅಗತ್ಯವಿದ್ದರೆ ಕಳಿಸಲಾಗುವುದು. ಅಲ್ಲದೆ ಬ್ರಿಟನ್ ಜೊತೆಗೆ ಇತರೆ ದೇಶಗಳಿಗೂ ನರ್ಸಿಂಗ್ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಕೌಶಲ್ಯಾಭಿವೃದ್ಧಿ ಇಲಾಖೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

    ನರ್ಸಿಂಗ್ ಸಿಬ್ಬಂದಿಗೆ ಅಧಿಕಾರಿ ಮಟ್ಟದ ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ನಿರ್ಧಾರವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶವನ್ನೂ ಹೊರಡಿಸಿದ್ದಾರೆ. ಅಲ್ಲದೆ ಅವರ ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗಿದೆ. ಜೊತೆಗೆ ದೇಶಾದ್ಯಂತ ಸುಮಾರು 2 ಲಕ್ಷ ನರ್ಸಿಂಗ್ ಸಿಬ್ಬಂದಿಗೆ ಆರೋಗ್ಯ ಕೇಂದ್ರಗಳಲ್ಲಿ ಉದ್ಯೋಗವನ್ನು ಕೊಡಲಾಗಿದೆ ಎಂದು ಡಾ.ಅಶ್ವಥ್ ನಾರಾಯಣ್ ವಿವರಿಸಿದರು.

    ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ವಿಶ್ವ ಕನ್ನಡ ಶುಶ್ರೂಷಕರ ಸಂಘವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಎಂ.ಬಿ.ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು, ಗೋಪಾಲ ಕುಲಕರ್ಣಿ, ಸಂಘದ ಅಧ್ಯಕ್ಷ ತಮ್ಮಣ್ಣ, ಕಾರ್ಯದರ್ಶಿ ನಾಗರಾಜ್, ಖಜಾಂಚಿ ಹೇಮೇಗೌಡ ಮುಂತಾದವರು ವಿಶ್ವದ ವಿವಿಧ ದೇಶಗಳಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ಬೀದರ್ ಗ್ರಾಮದಲ್ಲಿ ದುರಂತ – 1 ತಿಂಗಳಲ್ಲಿ ಯುವಕರು ಸೇರಿದಂತೆ 20 ಜನ ನಿಗೂಢ ಸಾವು

    ಬೀದರ್ ಗ್ರಾಮದಲ್ಲಿ ದುರಂತ – 1 ತಿಂಗಳಲ್ಲಿ ಯುವಕರು ಸೇರಿದಂತೆ 20 ಜನ ನಿಗೂಢ ಸಾವು

    ಬೀದರ್: ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಸಮಯದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಜನರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ.

    ಒಂದೇ ತಿಂಗಳಲ್ಲಿ ಬರೋಬ್ಬರಿ 20 ಜನ ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗೌರಮ್ಮ ಬಿರಾದಾರ, ವಿಶ್ವನಾಥ ಸೇರಿದಂತೆ 20 ಜನ ಮೃತಪಟ್ಟಿದ್ದಾರೆ. ಉಸಿರಾಟ ಸಮಸ್ಯೆ, ಕೆಮ್ಮು ಇರುವ ವಯೋವೃದ್ಧರು ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಜೊತೆಗೆ ಗ್ರಾಮದ ಯುವಕರು ಸಹ ಸಾವನ್ನಪ್ಪುತ್ತಿರುವುದು ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ.

    ಗ್ರಾಮದ ಜನರು ಕೊರೊನಾ ಮಹಾಮಾರಿಗೆ ಸಾವನ್ನಪ್ಪುತ್ತಿದ್ದಾರಾ? ಇಲ್ಲವೇ ಯಾವ ಕಾರಣಕ್ಕಾಗಿ ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ತಿಳಿಯದೇ ಗೊಂದಲಗೊಂಡಿದ್ದಾರೆ. ಹೀಗೆ ಗ್ರಾಮದಲ್ಲಿ ನಿಗೂಢವಾಗಿ ಜನರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ತಿಳಿಯಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ಟೆಸ್ಟಿಂಗ್ ಇಂದು ಮುಂದಾಗಿದ್ದಾರೆ.

    ಒಂದು ತಿಂಗಳಿನಿಂದ ನಮ್ಮ ಗ್ರಾಮದಲ್ಲಿ 20 ಜನರು ನಿಗೂಢವಾಗಿ ಸಾವನ್ನಪ್ಪಿದ್ದು ಯಾವ ಕಾರಣ ಸಾವನ್ನಪ್ಪಿದ್ದಾರೆ ಎಂಬುದು ಇನ್ನು ತಿಳಿಯುತ್ತಿಲ್ಲಾ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • 31,531 ಮಂದಿಗೆ ಪಾಸಿಟಿವ್, 403 ಸಾವು – 36,475 ಮಂದಿ ಡಿಸ್ಚಾರ್ಜ್

    31,531 ಮಂದಿಗೆ ಪಾಸಿಟಿವ್, 403 ಸಾವು – 36,475 ಮಂದಿ ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು 31,531 ಮಂದಿಗೆ ಕೊರೊನಾ ಬಂದಿದ್ದು, 403 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 36,475 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 22,03,462 ಮಂದಿಗೆ ಸೋಂಕು ಬಂದಿದೆ. 15,81,457 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ 6,00,147 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,837ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.27.84 ಮತ್ತು ಮರಣ ಪ್ರಮಾಣ ಶೇ.1.27ರಷ್ಟಿದೆ.

    9,713 ಆಂಟಿಜನ್, 1,03,506 ಆರ್ ಟಿ ಪಿಸಿಆರ್ ಇತ್ಯಾದಿ ಸೇರಿದಂತೆ ಒಟ್ಟು 1,13,219 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 17,462 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,11,88,143 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 8,344 ಹೊಸ ಪ್ರಕರಣಗಳು ವರದಿಯಾಗಿದ್ದು, 143 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,61,380 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಬಾಗಲಕೋಟೆ 1,729 , ಬಳ್ಳಾರಿ 1,622, ಬೆಳಗಾವಿ 1,762, ಬೆಂಗಳೂರು ಗ್ರಾಮಾಂತರ 1,082, ಬೆಂಗಳೂರು ನಗರ 8,344, ಬೀದರ್ 129, ಚಾಮರಾಜನಗರ 440, ಚಿಕ್ಕಬಳ್ಳಾಪುರ 558, ಚಿಕ್ಕಮಗಳೂರು 963, ಚಿತ್ರದುರ್ಗ 640, ದಕ್ಷಿಣ ಕನ್ನಡ 957 , ದಾವಣಗೆರೆ 1155, ಧಾರವಾಡ 937, ಗದಗ 453 , ಹಾಸನ 1,182 , ಹಾವೇರಿ184 , ಕಲಬುರಗಿ 645, ಕೊಡಗು 191, ಕೋಲಾರ 778, ಕೊಪ್ಪಳ 617, ಮಂಡ್ಯ 709, ಮೈಸೂರು 1,811, ರಾಯಚೂರು 464, ರಾಮನಗರ 403, ಶಿವಮೊಗ್ಗ 643, ತುಮಕೂರು2138, ಉಡುಪಿ 745 , ಉತ್ತರ ಕನ್ನಡ 1,087, ವಿಜಯಪುರ 330 ಮತ್ತು ಯಾದಗಿರಿಯಲ್ಲಿ 233 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 41,664 ಮಂದಿಗೆ ಪಾಸಿಟಿವ್, 249 ಸಾವು – 34,425 ಮಂದಿ ಡಿಸ್ಚಾರ್ಜ್

    41,664 ಮಂದಿಗೆ ಪಾಸಿಟಿವ್, 249 ಸಾವು – 34,425 ಮಂದಿ ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು 41,664 ಮಂದಿಗೆ ಕೊರೊನಾ ಬಂದಿದ್ದು, 249 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 34,425 ಮಂದಿ ಡಿಸ್ಚಾರ್ಜ್ ಆಗಿದ್ದಾರೆ

    ಒಟ್ಟು ರಾಜ್ಯದಲ್ಲಿ 21,71,931 ಮಂದಿಗೆ ಸೋಂಕು ಬಂದಿದ್ದು, 15,44,982 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.35.20 ಮತ್ತು ಮರಣ ಪ್ರಮಾಣ ಶೇ.0.83ರಷ್ಟಿದೆ.

    ಇಂದು 1,18,345 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 82,793 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,11,49,833 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 13,402 ಹೊಸ ಪ್ರಕರಣಗಳು ವರದಿಯಾಗಿದ್ದು, 94 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,66,791 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 584, ಬಳ್ಳಾರಿ 1622, ಬೆಳಗಾವಿ 1502, ಬೆಂಗಳೂರು ಗ್ರಾಮಾಂತರ 1265, ಬೆಂಗಳೂರು ನಗರ 13402, ಬೀದರ್ 185, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1,093, ಚಿತ್ರದುರ್ಗ 454, ದಕ್ಷಿಣ ಕನ್ನಡ 1,787, ದಾವಣಗೆರೆ 292, ಧಾರವಾಡ 901, ಗದಗ 459 , ಹಾಸನ 2,443, ಹಾವೇರಿ267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1,188, ಮೈಸೂರು 2,489, ರಾಯಚೂರು 467, ರಾಮನಗರ524, ಶಿವಮೊಗ್ಗ 1081, ತುಮಕೂರು 2302, ಉಡುಪಿ 1,146, ಉತ್ತರ ಕನ್ನಡ 1,226, ವಿಜಯಪುರ 789 ಮತ್ತು ಯಾದಗಿರಿಯಲ್ಲಿ 343 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ 41,779 ಪಾಸಿಟಿವ್, 373 ಸಾವು – 35,879 ಜನ ಡಿಸ್ಚಾರ್ಜ್

    ರಾಜ್ಯದಲ್ಲಿ 41,779 ಪಾಸಿಟಿವ್, 373 ಸಾವು – 35,879 ಜನ ಡಿಸ್ಚಾರ್ಜ್

    ಬೆಂಗಳೂರು: ಗುರುವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 41,779 ಹೊಸ ಪ್ರಕರಣಗಳು ವರದಿಯಾಗಿದೆ.

    ರಾಜ್ಯದಲ್ಲಿ ಇಂದು ಕೊರೊನಾದಿಂದ 373 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,085ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ 35,879 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.32.86 ಮತ್ತು ಮರಣ ಪ್ರಮಾಣ ಶೇ.0.89ರಷ್ಟಿದೆ. ಇಂದು 1,27,105 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 56,350 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,10,51,982 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 14,316 ಹೊಸ ಪ್ರಕರಣಗಳು ವರದಿಯಾಗಿದ್ದು, 121 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,60,862 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 773, ಬಳ್ಳಾರಿ 2,421, ಬೆಳಗಾವಿ 1,592, ಬೆಂಗಳೂರು ಗ್ರಾಮಾಂತರ 707, ಬೆಂಗಳೂರು ನಗರ 14,316, ಬೀದರ್ 223, ಚಾಮರಾಜನಗರ 713, ಚಿಕ್ಕಬಳ್ಳಾಪುರ 676, ಚಿಕ್ಕಮಗಳೂರು 435, ಚಿತ್ರದುರ್ಗ 314, ದಕ್ಷಿಣ ಕನ್ನಡ 1,215, ದಾವಣಗೆರೆ 581, ಧಾರವಾಡ 829, ಗದಗ 591, ಹಾಸನ 1,339, ಹಾವೇರಿ 292, ಕಲಬುರಗಿ 929, ಕೊಡಗು 539, ಕೋಲಾರ 306, ಕೊಪ್ಪಳ 495, ಮಂಡ್ಯ 1,385, ಮೈಸೂರು 2,340, ರಾಯಚೂರು 1,063, ರಾಮನಗರ 459, ಶಿವಮೊಗ್ಗ 1,045, ತುಮಕೂರು 2,668, ಉಡುಪಿ 1,219, ಉತ್ತರ ಕನ್ನಡ 787, ವಿಜಯಪುರ 444 ಮತ್ತು ಯಾದಗಿರಿಯಲ್ಲಿ 683 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 35,297 ಪಾಸಿಟಿವ್, 517 ಸಾವು – 34,057 ಜನ ಡಿಸ್ಚಾರ್ಜ್

    ಇಂದು 35,297 ಪಾಸಿಟಿವ್, 517 ಸಾವು – 34,057 ಜನ ಡಿಸ್ಚಾರ್ಜ್

    ಬೆಂಗಳೂರು: ಬುಧವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಗಿಂತ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 35,297 ಹೊಸ ಪ್ರಕರಣಗಳು ವರದಿಯಾಗಿದೆ.

    ರಾಜ್ಯದಲ್ಲಿ ಇಂದು ಕೊರೊನಾದಿಂದ 344 ಮಂದಿ ಮೃತಪಟ್ಟಿದ್ದು, ಇಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 20,712ಕ್ಕೆ ಏರಿಕೆಯಾಗಿದೆ.

    ಇಂದು ಆಸ್ಪತ್ರೆಯಿಂದ 34,057 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.27.64 ಮತ್ತು ಮರಣ ಪ್ರಮಾಣ ಶೇ.0.97ರಷ್ಟಿದೆ. ಇಂದು 1,27,668 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 68,658 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,09,76,189 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 15,191 ಹೊಸ ಪ್ರಕರಣಗಳು ವರದಿಯಾಗಿದ್ದು, 161 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,59,565 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 520, ಬಳ್ಳಾರಿ 1,865, ಬೆಳಗಾವಿ 713, ಬೆಂಗಳೂರು ಗ್ರಾಮಾಂತರ 10,79 ಬೆಂಗಳೂರು ನಗರ 15,191, ಬೀದರ್ 257, ಚಾಮರಾಜನಗರ 842, ಚಿಕ್ಕಬಳ್ಳಾಪುರ 354, ಚಿಕ್ಕಮಗಳೂರು 445, ಚಿತ್ರದುರ್ಗ 292, ದಕ್ಷಿಣ ಕನ್ನಡ 812, ದಾವಣಗೆರೆ 494, ಧಾರವಾಡ 737, ಗದಗ 430, ಹಾಸನ 792, ಹಾವೇರಿ 160, ಕಲಬುರಗಿ 497, ಕೊಡಗು 425, ಕೋಲಾರ 488, ಕೊಪ್ಪಳ 437, ಮಂಡ್ಯ 1,153, ಮೈಸೂರು 1,260, ರಾಯಚೂರು 170, ರಾಮನಗರ 518, ಶಿವಮೊಗ್ಗ 880, ತುಮಕೂರು 1,798, ಉಡುಪಿ 891, ಉತ್ತರ ಕನ್ನಡ 791, ವಿಜಯಪುರ 331 ಮತ್ತು ಯಾದಗಿರಿಯಲ್ಲಿ 675 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ 39,998 ಪಾಸಿಟಿವ್, 517 ಸಾವು – 34,752 ಜನ ಡಿಸ್ಚಾರ್ಜ್

    ರಾಜ್ಯದಲ್ಲಿ 39,998 ಪಾಸಿಟಿವ್, 517 ಸಾವು – 34,752 ಜನ ಡಿಸ್ಚಾರ್ಜ್

    ಬೆಂಗಳೂರು: ಮಂಗಳವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳಿಗೆ ಹೋಲಿಸಿದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪಮಟ್ಟಿಗೆ ಏರಿಕೆಯಾಗಿದ್ದು, 39,998 ಹೊಸ ಪ್ರಕರಣಗಳು ವರದಿಯಾಗಿದೆ.

    ಮೈಸೂರಿನಲ್ಲಿ 1 ವರ್ಷ 5 ತಿಂಗಳ ಹೆಣ್ಣು ಮಗು ಸೇರಿದಂತೆ 517 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 20,368ಕ್ಕೆ ಏರಿಕೆಯಾಗಿದೆ.

    ಇಂದು ಆಸ್ಪತ್ರೆಯಿಂದ 34,752 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.67 ಮತ್ತು ಮರಣ ಪ್ರಮಾಣ ಶೇ.1.29ರಷ್ಟಿದೆ. ಟೆಸ್ಟಿಂಗ್ ಏರಿಕೆಯಾಗಿದ್ದು, ಇಂದು 1,347,92 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 88,437 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,08,82,080 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 16,286 ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,60,619 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 610, ಬಳ್ಳಾರಿ 1,823, ಬೆಳಗಾವಿ 856, ಬೆಂಗಳೂರು ಗ್ರಾಮಾಂತರ 1,138, ಬೆಂಗಳೂರು ನಗರ 16,286, ಬೀದರ್ 281, ಚಾಮರಾಜನಗರ 517, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 646, ಚಿತ್ರದುರ್ಗ 192, ದಕ್ಷಿಣ ಕನ್ನಡ 1,077, ದಾವಣಗೆರೆ 362, ಧಾರವಾಡ 904, ಗದಗ 347, ಹಾಸನ 1,572, ಹಾವೇರಿ 189, ಕಲಬುರಗಿ 646, ಕೊಡಗು 678, ಕೋಲಾರ 815, ಕೊಪ್ಪಳ 278, ಮಂಡ್ಯ 1,223, ಮೈಸೂರು 1,773, ರಾಯಚೂರು 289, ರಾಮನಗರ 135, ಶಿವಮೊಗ್ಗ 1,125, ತುಮಕೂರು 2,360, ಉಡುಪಿ 919, ಉತ್ತರ ಕನ್ನಡ 960, ವಿಜಯಪುರ 690 ಮತ್ತು ಯಾದಗಿರಿಯಲ್ಲಿ 753 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 39,510 ಪಾಸಿಟಿವ್, 480 ಸಾವು – 22,584 ಡಿಸ್ಚಾರ್ಜ್

    39,510 ಪಾಸಿಟಿವ್, 480 ಸಾವು – 22,584 ಡಿಸ್ಚಾರ್ಜ್

    ಬೆಂಗಳೂರು: ಸೋಮವಾರ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಕೊಂಚ ಏರಿಕೆಯಾಗಿದ್ದು, 39,510 ಹೊಸ ಪ್ರಕರಣಗಳು ವರದಿಯಾಗಿದೆ.

    ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಚಿತ್ರದುರ್ಗದಲ್ಲಿ 4 ವರ್ಷದ ಬಾಲಕ ಸೇರಿದಂತೆ 480 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ ನಲ್ಲಿ ಮೃತಪಟ್ಟವರ ವಿವರಗಳನ್ನು ಬಿಬಿಎಂಪಿ ಆರೋಗ್ಯ ಇಲಾಖೆಗೆ ತಡವಾಗಿ ನೀಡುತ್ತಿರುವುದರಿಂದ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,852ಕ್ಕೆ ಏರಿಕೆಯಾಗಿದೆ.

    ಇಂದು ಆಸ್ಪತ್ರೆಯಿಂದ 22,584 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.33.66 ಮತ್ತು ಮರಣ ಪ್ರಮಾಣ ಶೇ.1.21ರಷ್ಟಿದೆ. ಟೆಸ್ಟಿಂಗ್ ಇಳಿಕೆಯಾಗಿದ್ದು, ಇಂದು 1,16,238 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 15,879 ಹೊಸ ಪ್ರಕರಣಗಳು ವರದಿಯಾಗಿದ್ದು, 259 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,62,696 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 676, ಬಳ್ಳಾರಿ 1,558, ಬೆಳಗಾವಿ 755, ಬೆಂಗಳೂರು ಗ್ರಾಮಾಂತರ 688, ಬೆಂಗಳೂರು ನಗರ 15,879, ಬೀದರ್ 158, ಚಾಮರಾಜನಗರ 411, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 537, ಚಿತ್ರದುರ್ಗ 193, ದಕ್ಷಿಣ ಕನ್ನಡ 915, ದಾವಣಗೆರೆ 212, ಧಾರವಾಡ 740, ಗದಗ 456, ಹಾಸನ 654, ಹಾವೇರಿ 465, ಕಲಬುರಗಿ 971, ಕೊಡಗು 892, ಕೋಲಾರ 913, ಕೊಪ್ಪಳ 414, ಮಂಡ್ಯ 1,359, ಮೈಸೂರು 2,170, ರಾಯಚೂರು 763, ರಾಮನಗರ 440, ಶಿವಮೊಗ್ಗ 1,108, ತುಮಕೂರು 2,496, ಉಡುಪಿ 1,083, ಉತ್ತರ ಕನ್ನಡ 1,084, ವಿಜಯಪುರ 485 ಮತ್ತು ಯಾದಗಿರಿಯಲ್ಲಿ 426 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 7 ಮಂದಿಯಲ್ಲಿ ಹಕ್ಕಿಜ್ವರ ಪತ್ತೆ – ಆತಂಕವನ್ನುಂಟು ಮಾಡಿದ ವೈರಸ್

    7 ಮಂದಿಯಲ್ಲಿ ಹಕ್ಕಿಜ್ವರ ಪತ್ತೆ – ಆತಂಕವನ್ನುಂಟು ಮಾಡಿದ ವೈರಸ್

    ಮಾಸ್ಕೋ: ಮೊದಲ ಬಾರಿಗೆ 7 ಮಂದಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವ ಮೂಲಕವಾಗಿ ಜನರಲ್ಲಿ ಆತಂಕವನ್ನುಂಟು ಮಾಡಿದ ಘಟನೆ ರಷ್ಯಾದಲ್ಲಿ ನಡೆದಿದೆ.

    ರಷ್ಯಾದ ಕೋಳಿ ಫಾರಂನಲ್ಲಿ ಕೆಲಸ ಮಾಡುವ 7 ಮಂದಿ ಸಿಬ್ಬಂದಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ 7 ಮಂದಿ ಆರೋಗ್ಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬೇರೆ ಕೋಳಿ ಫಾರಂಗಳಲ್ಲಿ ಹಕ್ಕಿಜ್ವರ ಬಂದಿರಬಹುದೆಂಬ ನಿಟ್ಟಿನಲ್ಲಿ ಎಲ್ಲೆಡೆ ತಪಾಸಣೆ ಮಾಡಲು ರಷ್ಯಾ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಹಕ್ಕಿಯಿಂದ ಸೋಂಕು ಹರಡಿರುವ ಮೊದಲ ಪ್ರಕರಣವಿದು. ದಕ್ಷಿಣ ರಷ್ಯಾದ ಕೋಳಿ ಘಟಕದಲ್ಲಿ 7 ಕಾರ್ಮಿಕರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಕ್ಕಿಜ್ವರ ತಳಿಗಳಾದ H5N1, H7N9, ಮತ್ತು H9N2 ಕೂಡಾ ಮಾನವರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಹಕ್ಕಿಜ್ವರ ಹರಡುವುದನ್ನು ತಡೆಗಟ್ಟಲು ನೆರೆಯ ಕೇರಳ, ತಮಿಳುನಾಡು, ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಸಾವಿರಾರು ಪಕ್ಷಿಗಳನ್ನು ಕೊಲ್ಲಲಾಗಿತ್ತು. ಆದರೆ ಹಕ್ಕಿಗಳಿಂದ ಮಾನವನಿಗೂ ಹಕ್ಕಿಜ್ವರದ ಸೋಂಕು ಹರಡಲಿದೆ ಎಂಬುದು ರಷ್ಯಾದಲ್ಲಿ ಸಾಬೀತಾಗಿದೆ.

  • 3,156 ಜನರಿಗೆ ಪಾಸಿಟಿವ್, 31 ಬಲಿ – 5,723 ಮಂದಿ ಡಿಸ್ಚಾರ್ಜ್

    3,156 ಜನರಿಗೆ ಪಾಸಿಟಿವ್, 31 ಬಲಿ – 5,723 ಮಂದಿ ಡಿಸ್ಚಾರ್ಜ್

    ಬೆಂಗಳೂರು: ಇಂದು ಕರ್ನಾಟಕದಲ್ಲಿ 3,156 ಮಂದಿಗೆ ಸೋಂಕು ಬಂದಿದ್ದು, 5,723 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 31 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,38,929ಕ್ಕೆ ಏರಿಕೆಯಾಗಿದೆ. ಈ ಪೈಕಿ 7,94,503 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು 33,095 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,312 ಮಂದಿ ಸೋಂಕಿಗೆ ಬಲಿಯಾಗಿದ್ದು, ಐಸಿಯುನಲ್ಲಿ 916 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 26,435 ಮಂದಿಗೆ ಆಂಟಿಜನ್ ಟೆಸ್ಟ್, 89,902 ಮಂದಿಗೆ ಆರ್.ಟಿ.ಪಿ.ಸಿ.ಆರ್ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,16,337 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 84,04,516 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 1,627 ಮಂದಿಗೆ, ತುಮಕೂರು 181, ಮೈಸೂರು 169, ಹಾಸನದಲ್ಲಿ 138 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರದಲ್ಲಿ 464, ಬಳ್ಳಾರಿ 38, ತುಮಕೂರು 38, ಕೋಲಾರ 29, ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.