Tag: Department of Health

  • 348 ಹೊಸ ಪ್ರಕರಣ ದಾಖಲು – 311 ಮಂದಿ ಡಿಸ್ಚಾರ್ಜ್

    348 ಹೊಸ ಪ್ರಕರಣ ದಾಖಲು – 311 ಮಂದಿ ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು 348 ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಬೆಂಗಳೂರು ನಗರದಲ್ಲಿಯೇ 339 ಪ್ರಕರಣಗಳು ದಾಖಲಾಗಿದೆ. ಎಲ್ಲ ಜಿಲ್ಲೆಗಳಿಗೂ ಹೊಲಿಸಿಕೊಂಡ್ರೆ ಬೆಂಗಳೂರು ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚು ದಾಖಲಾಗಿದೆ.

    ಇಂದು ಸಹ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. 311 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 2.11 ದಾಖಲಾಗಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 40,066 ಮರಣ ಪ್ರಕರಣ ವರದಿಯಾಗಿದೆ.

    ರಾಜ್ಯದಲ್ಲಿ ಒಟ್ಟು 39,11,351 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 16,474 ಮಂದಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಒಟ್ಟು 11,962 ಸ್ಯಾಂಪಲ್ (ಆರ್‌ಟಿಪಿಸಿಆರ್ 10,709 + 5,765 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮೆಟ್ರೋ ಟ್ರೈನ್‍ನಲ್ಲಿ ಬೈಸಿಕಲ್ ಕೊಂಡೊಯ್ಯಲು ಅವಕಾಶ 

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹತೋಟಿಯಲ್ಲಿದೆ. ಕೋಲಾರದಲ್ಲಿ 1, ಮೈಸೂರು 1, ರಾಯಚೂರು 1, ತುಮಕೂರು 1, ಉಡುಪಿ 3, ಹಾಸನ 1 ಮತ್ತು ಉತ್ತರ ಕನ್ನಡ 1 ಕೊರೊನಾ ಪ್ರಕರಣಗಳು ದಾಖಲಾಗಿದೆ.

  • 60 ಮಂದಿಗೆ ಕೊರೊನಾ – 63 ಮಂದಿ ಡಿಸ್ಜಾರ್ಜ್

    60 ಮಂದಿಗೆ ಕೊರೊನಾ – 63 ಮಂದಿ ಡಿಸ್ಜಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದ್ದು, 60 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 63 ಮಂದಿ ಕೊರೊನಾ ಸೋಂಕಿನಿಂದ ಚೇತರಿಕೊಂಡಿದ್ದಾರೆ

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 57 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಶೂನ್ಯ ಮರಣ ಪ್ರಮಾಣ ಕಾಣಿಸಿಕೊಂಡಿದೆ. ಇಂದು 8,263 ಜನರು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಶೂನ್ಯ ಮರಣ ಪ್ರಮಾಣ ಇಂದು ಸಹ ದಾಖಲಾಗಿದೆ. ಕಳೆದ ಹಲವು ವಾರಗಳಿಂದ ಕೊರೊನಾ ಸೋಂಕು ಜನರ ಮೇಲೆ ಅಷ್ಟು ಪರಿಣಾಮಕಾರಿಯಾಗಿ ಬಿರುತ್ತಿಲ್ಲವೆಂಬುದಕ್ಕೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ 

    0.72% ಕೋವಿಡ್-19 ಖಚಿತ ಸೋಂಕಿನ ಪ್ರಮಾಣ ಕಾಣಿಸಿಕೊಂಡಿದ್ದು, 0.00% ಮರಣ ಪ್ರಮಾಣ ದಾಖಲಾಗಿದೆ. ರಾಜ್ಯದಲ್ಲಿ ಇಲ್ಲಿವರೆಗೂ 1,676 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 7,208 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 8,263 ಸ್ಯಾಂಪಲ್ (ಆರ್‌ಟಿಪಿಸಿಆರ್ 6,673 + 1,590 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 57, ಚಿತ್ರದುರ್ಗ 01, ಧಾರವಾಡ 01, ವಿಜಯಪುರ 01 ಕೊರೊನಾ ಸೋಂಕು ಕಾಣಿಸಿಕೊಂಡಿದೆ. 26 ಜಿಲ್ಲೆಗಳು ಸೇಫ್ ಆಗಿದೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡಿದ ಕುಟುಂಬಸ್ಥರು 

  • 62 ಮಂದಿಗೆ ಸೋಂಕು ಪತ್ತೆ – 48 ಮಂದಿ ಡಿಸ್ಚಾರ್ಜ್

    62 ಮಂದಿಗೆ ಸೋಂಕು ಪತ್ತೆ – 48 ಮಂದಿ ಡಿಸ್ಚಾರ್ಜ್

    ಬೆಂಗಳೂರು: ಇಂದು ಸಹ ರಾಜ್ಯದಲ್ಲಿ ಕೊರೊನಾ ಸೋಂಕಿನ ಪರಿಣಾಮ ಕಡಿಮೆಯಿದೆ. 62 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ 48 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಕೆಲವು ಜಿಲ್ಲೆಗಳನ್ನು ಬಿಟ್ಟರೆ ಉಳಿದ ಜಿಲ್ಲೆಗಳು 100% ಸೇಫ್ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಜನರು ಈಗಲೂ ಎಚ್ಚರಿಕೆಯಿಂದ ಇರಬೇಕು. ಇಲ್ಲಿವರೆಗೂ ರಾಜ್ಯದಲ್ಲಿ 1,487 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿನಿಂದ ಯಾರಿಗೂ ಜೀವಹಾನಿಯಾಗಿಲ್ಲ. ಪರಿಣಾಮ ಮರಣ ಪ್ರಮಾಣ ಶೂನ್ಯವಿದೆ.  ಇದನ್ನೂ ಓದಿ: ಬಂಧಿತರು ಅಮಾಯಕರಾದ್ರೆ, ಠಾಣೆ ಮೇಲೆ ದಾಂಧಲೆ ಮಾಡಿದವ್ರು ಶಾಂತಿಪ್ರಿಯರೇ: ರೇಣುಕಾಚಾರ್ಯ ಪ್ರಶ್ನೆ 

    ಇಲ್ಲಿವರೆಗೂ ರಾಜ್ಯದಲ್ಲಿ 40,057 ಜನರು ಸೋಂಕಿನಿಂದ ಮೃತಪಟ್ಟಿದ್ದು, ವಾರದಿಂದ 0.00% ಮರಣ ಪ್ರಮಾಣವಿದೆ. ಸೋಂಕಿನ ಪ್ರಮಾಣ 0.78% ಇದೆ. ಇಂದು 7,913 ಜನರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 46,376 ಜನರಿಗೆ ಕೊರೊನಾ ಲಸಿಕೆ ಹಾಕಿಸಲಾಗಿದೆ. ಒಟ್ಟು 5,301 ಸ್ಯಾಂಪಲ್(ಆರ್‌ಟಿಪಿಸಿಆರ್ 5,210 + 2,703 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 57, ದಕ್ಷಿಣಕನ್ನಡ 2, ಮೈಸೂರು 1, ಶಿವಮೊಗ್ಗ 2 ಕೊರೊನಾ ಪ್ರಕರಣಗಳು ದಾಖಲಾಗಿದೆ. ಉಳಿದ 26 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ: ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್

  • ರಾಜ್ಯದಲ್ಲಿ ಇಂದು 53 ಸೋಂಕು – ಶೂನ್ಯ ಮರಣ ಪ್ರಮಾಣ

    ರಾಜ್ಯದಲ್ಲಿ ಇಂದು 53 ಸೋಂಕು – ಶೂನ್ಯ ಮರಣ ಪ್ರಮಾಣ

    ಬೆಂಗಳೂರು: ಇಂದು ರಾಜ್ಯದಲ್ಲಿ ಶೂನ್ಯ ಮರಣ ಪ್ರಮಾಣಯಿದ್ದು, 53 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

    ಆಸ್ಪತ್ರೆಯಿಂದ 44 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಲ್ಲಿವರೆಗೂ ಬಟ್ಟು 39,04,850 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 5,301 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಪ್ರಸ್ತುತ 1,473 ಜನರಿಗೆ ಕೊರೊನಾ ಸೋಂಕು ಇದೆ. ಸೋಂಕಿನ ಪ್ರಮಾಣ 0.99% ಮತ್ತು ಮರಣವಾರು ಪ್ರಮಾಣ 0.00% ಇದೆ. ಈ ವಾರ ಪೂರ್ತಿ ಕೊರೊನಾ ಸೋಂಕಿನಿಂದ ಯಾರು ಮೃತಪಟ್ಟಿಲ್ಲ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50ಜನ ಸಂತರು ಸ್ಪರ್ಧಿಸಲಿದ್ದಾರೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 51 ಕೊರೊನಾ ಪ್ರಕರಣ ದಾಖಲಾಗಿದ್ದು, ಶೂನ್ಯ ಮರಣ ಪ್ರಮಾಣವಿದೆ. ರಾಜ್ಯದಲ್ಲಿ ಇಂದು ಒಟ್ಟು 47,019 ಜನರಿಗೆ ಕೊರೊನಾ ಲಸಿಕೆ ಹಾಕಿಸಲಾಗಿದೆ. ಒಟ್ಟು 5,301 ಸ್ಯಾಂಪಲ್(ಆರ್‌ಟಿಪಿಸಿಆರ್ 4,544 + 757 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 51, ದಕ್ಷಿಣಕನ್ನಡ 2 ಕೊರೊನಾ ಪ್ರಕರಣಗಳು ದಾಖಲಾಗಿದೆ. ಉಳಿದ 28 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ: ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

  • ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ: 3 ವಾರಗಳಲ್ಲಿ ವರದಿ ಸಲ್ಲಿಸುವಂತೆ `ಹೈ’ ಸೂಚನೆ

    ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ: 3 ವಾರಗಳಲ್ಲಿ ವರದಿ ಸಲ್ಲಿಸುವಂತೆ `ಹೈ’ ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡಲು ನೇಮಕ ಮಾಡಲಾಗಿರುವ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

    ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠವು, ರಾಜ್ಯದಲ್ಲಿ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿದಂತೆ 2011ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ನಿವೇಶನ ಹಂಚಿಕೆ ಪರಿಶೀಲಿಸಿ: ಹೈಕೋರ್ಟ್ ಆದೇಶ

    high court (1)

    ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲೆ ಮೈತ್ರೇಯಿ ಕೃಷ್ಣನ್ ಅವರು `ಕಳೆದ ವಿಚಾರಣೆ ವೇಳೆ ನ್ಯಾಯಾಲಯ ಸಮಿತಿಗೆ ವರದಿ ಸಲ್ಲಿಸಲು ಸೂಚನೆ ನೀಡಿತ್ತು. ಆ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠವು ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

    ಕೇಂದ್ರ ಸರ್ಕಾರದ ಪರ ವಕೀಲ ಉನ್ನಿಕೃಷ್ಣನ್ ಅವರು `ರಾಜ್ಯಕ್ಕೆ ಹೆಚ್ಚುವರಿಯಾಗಿ 4,244 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಉನ್ನತ ಮಟ್ಟದ ಸಮಿತಿ ಆ ಕುರಿತು ಶಿಫಾರಸ್ಸು ಮಾಡಿದರೆ, ಅದಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.

    ರಾಜ್ಯ ಸರ್ಕಾರದ ಪರ ವಕೀಲರು, ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ, ಶೌಚಗೃಹ ನಿರ್ಮಾಣ ಸೇರಿ ಇತರ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶಗಳನ್ನು ಪಾಲನೆ ಮಾಡಲಾಗಿದೆ. ಆ ಸಂಬಂಧ ಅನುಪಾಲನಾ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಎಲ್ಲಾ ಸಮುದಾಯಗಳು ಕರ್ನಾಟಕ ಹೈಕೋರ್ಟ್‌ ಆದೇಶ ಪಾಲಿಸಬೇಕು: ಖರ್ಗೆ

    ಅಪೌಷ್ಟಿಕತೆ ನಿವಾರಿಸಲು ಕ್ರಮಕ್ಕೆ ಸೂಚನೆ: ಅಮರಾವತಿ ಜಿಲ್ಲೆಯ ಮೆಲ್ಘಾಟ್ ಪ್ರದೇಶದ ಮಕ್ಕಳಲ್ಲಿ ಅಪೌಷ್ಟಿಕತೆಯ ವಿರುದ್ಧದ ದೂರುಗಳ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರ ಪೀಠವು ವಿಚಾರಣೆ ನಡೆಸುತ್ತಿದೆ. 2007ರಿಂದ ಪಿಐಎಲ್‌ಗಳನ್ನು ಸಲ್ಲಿಸಿದಾಗಿನಿಂದ ಈ ಪ್ರದೇಶದಲ್ಲಿ ಅಪೌಷ್ಟಿಕತೆ ನಿಭಾಯಿಸಲು ಸಹಕಾರಿ ಪ್ರಯತ್ನವಿದೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ರಾಜ್ಯ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

    COURT NEW

    ಇದೇ ವೇಳೆ ಮಕ್ಕಳು ಅಪೌಷ್ಟಿಕತೆಯಿಂದ ಸಾಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ತಜ್ಞ ವೈದ್ಯರನ್ನು ಮೇಲ್ಘಾಟ್ ಪ್ರದೇಶ ಮತ್ತು ಇತರ ಬುಡಕಟ್ಟು ಪ್ರದೇಶಗಳಿಗೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಎರಡು ವಾರಗಳಲ್ಲಿ ವರದಿ ನೀಡುವಂತೆ ಪೀಠವು ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದೆ.

    ಅರ್ಜಿದಾರರಾದ ಡಾ.ರಾಜೇಂದ್ರ ಬರ್ಮಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಜುಗಲ್‌ಗಿಲ್ಡಾ ಅವರು, ಮೆಲ್ಘಾಟ್ ಪ್ರದೇಶ ಮಾತ್ರವಲ್ಲದೆ ನೆರೆಯ ಇತರ ಬುಡಕಟ್ಟು ಪ್ರದೇಶಗಳ ಮಕ್ಕಳು ಮತ್ತು ತಾಯಂದಿರಿಗೆ ನಿರೀಕ್ಷಿತ ವೈದ್ಯಕೀಯ ನೆರವು ಸಿಗುತ್ತಿಲ್ಲ. ಕೋವಿಡ್ ಸಾಂಕ್ರಾಮಿಕ ಅವಧಿಯ ನಂತರ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್

    ಅರ್ಜಿದಾರ ಬಾನುಸಾನೆ, ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಮೆಲ್ಘಾಟ್ ಪ್ರದೇಶದಲ್ಲಿ ಇನ್ನೂ 900 ಮಕ್ಕಳು ಪ್ರಾಣ ಕಳೆದುಕೊಳ್ಳಬಹುದು. ಈಗಾಗಲೇ ಅಪೌಷ್ಟಿಕತೆಯಿಂದ 70ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. 11,000ಕ್ಕೂ ಹೆಚ್ಚು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಆದರೂ ಅಲ್ಲಿನ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇಲ್ಲಿ ಶಿಶುವೈದ್ಯರು ಅಥವಾ ಸ್ತ್ರೀ ರೋಗತಜ್ಞರು ಲಭ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಸರ್ಕಾರಿ ಆಸ್ಪತ್ರೆಗಳ ಸ್ತ್ರೀರೋಗತಜ್ಞರು, ಶಿಶುವೈದ್ಯರು ಮತ್ತು ರೇಡಿಯಾಲಜಿಸ್ಟ್‌ಗಳನ್ನು ರಾಜ್ಯಾದ್ಯಂತ ಬುಡಕಟ್ಟು ಪ್ರದೇಶಗಳಲ್ಲಿ ನಿಯಮಿತ ಭೇಟಿಗಾಗಿ ನಿಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

     

  • ಇಂದು ರಾಜ್ಯದಲ್ಲಿ 106 ಮಂದಿಗೆ ಸೋಂಕು – 4 ಸಾವು

    ಇಂದು ರಾಜ್ಯದಲ್ಲಿ 106 ಮಂದಿಗೆ ಸೋಂಕು – 4 ಸಾವು

    ಬೆಂಗಳೂರು: ಇಂದು ರಾಜ್ಯದಲ್ಲಿ 106 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ನಿನ್ನೆ ಶೂನ್ಯ ಪ್ರಕರಣಗಳು ದಾಖಲಾಗಿದ್ದು, ಇಂದು ನಾಲ್ಕು ಮೃತಪಟ್ಟಿದ್ದಾರೆ. ಒಟ್ಟು ರಾಜ್ಯದಲ್ಲಿ ಇಂದು 337 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿವರೆಗೂ 39,01,430 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿವರೆಗೂ ರಾಜ್ಯದಲ್ಲಿ 40,022 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಆದರೆ ಸ್ಥಿತಿ ಗಂಭೀರವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ:  ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ 

    ಕೋವಿಡ್-19 ಸೋಂಕಿನ ಖಚಿತ ಪ್ರಕರಣ 0.45% ಇದ್ದು, ಸೋಂಕಿನಿಂದ 3.77% ಜನರು ಇಲ್ಲಿವರೆಗೂ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 69,473 ಕನರಿಗೆ ಲಸಿಕೆಯನ್ನು ಹಾಕಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 3, ಬೆಳಗಾವಿ 0, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 61, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 1, ಚಿತ್ರದುರ್ಗ 6, ದಕ್ಷಿಣ ಕನ್ನಡ 4, ದಾವಣಗೆರೆ 0, ಧಾರವಾಡ 0, ಗದಗ 0, ಹಾಸನ 0, ಹಾವೇರಿ 1, ಕಲಬುರಗಿ 1, ಕೊಡಗು 3, ಕೋಲಾರ 1, ಕೊಪ್ಪಳ 0, ಮಂಡ್ಯ 11, ಮೈಸೂರು 11, ರಾಯಚೂರು 0, ರಾಮನಗರ 1, ಶಿವಮೊಗ್ಗ 8, ತುಮಕೂರು 4, ಉಡುಪಿ 0, ಉತ್ತರ ಕನ್ನಡ 0, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 0 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  RSS ಪಥಸಂಚಲನ – ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ಹೂಹಾರ ಹಾಕಿ ಸ್ವಾಗತ

  • ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ?

    ಬೆಂಗಳೂರು: ಓಮಿಕ್ರೋನ್ ವೈರಸ್ ಸೋಂಕಿತ ವೈದ್ಯನ ಪತ್ನಿಗೂ  ಸೋಂಕು ದೃಢಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.

    ಬೆಂಗಳೂರಿನಲ್ಲಿ ಗುರುವಾರ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಸೊಂಕಿತ ವೈದ್ಯರೊಬ್ಬರ ಪತ್ನಿಗೂ ಇದೀಗ ಓಮಿಕ್ರೋನ್ ವೈರಸ್ ತಗುಲಿರುವ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಈ ಸಂಬಂಧ ಆರೋಗ್ಯ ಇಲಾಖೆ ಇಂದು ಸಂಜೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಆಫ್ರಿಕಾದಿಂದ ಬಂದವರಲ್ಲಿ, ಬೆಂಗಳೂರಿಂದ ಎಲ್ಲೂ ಹೋಗದವರಲ್ಲಿ ಕಾಣಿಸಿತು ಒಮಿಕ್ರಾನ್!

    ಓಮಿಕ್ರಾನ್ ಸೊಂಕಿತನ ಪತ್ನಿ ಕೂಡ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ವೈದ್ಯೆಯ ಸಂಪರ್ಕಕ್ಕೆ ಬಂದಿದ್ದ 30 ಜನ ಪ್ರಾಥಮಿಕ, 90 ದ್ವಿತೀಯ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯೆಗೆ 41 ವರ್ಷವಾಗಿದ್ದು, ಮೊದಲು ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ನಂತರ ಜಿನೊಮ್ ಸೀಕ್ವೆನ್ಸ್ ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಜಿನೊಮ್ ಸೀಕ್ವೆನ್ಸ್ ವರದಿಯಲ್ಲಿ ವೈದ್ಯೆಗೆ ಓಮಿಕ್ರಾನ್ ಸೋಂಕು ಧೃಡಪಟ್ಟಿದೆ ಎನ್ನಲಾಗುತ್ತಿದೆ.  ಸೋಂಕಿತ ವೈದ್ಯೆಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದೆ: ಅಶ್ವಥ್ ನಾರಾಯಣ್

    ಸೋಂಕಿತ ವೈದ್ಯೆಯ ಟ್ರಾವೆಲ್ ಹಿಸ್ಟರಿ:
    * ಖಾಸಗಿ ಹೋಟೆಲ್‍ನಲ್ಲಿ ತುಂಬಾ ಜನರ ಸಂಪರ್ಕಕ್ಕೆ ಬಂದಿರುವ ವೈದ್ಯೆ
    * ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದರೆ ಸಾಕಷ್ಟು ರೋಗಿಗಳ ಸಂಪರ್ಕಕ್ಕೆ ಬಂದಿರುವ ವೈದ್ಯೆ
    * ಮಹಾದೇವಪುರ ವಲಯದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ವೈದ್ಯೆ
    * ಮಹಾದೇವಪುರದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಜನರ ಸಂಪರ್ಕಕ್ಕೆ ಬಂದಿರುವ ವೈದ್ಯೆ

    ಸದ್ಯ ಸೋಂಕಿತ ಪತಿ ಹಾಗೂ ಪತ್ನಿ ಇಬ್ಬರಿಗೂ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಓಮಿಕ್ರಾನ್ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಮುಂದೆ ಇನ್ನಷ್ಟು ಅನಾಹುತ ಸೃಷ್ಟಿಸುತ್ತದೆಯೋ ಎಂಬ ಆತಂಕ ಜನರಲ್ಲಿ ಮೂಡಿದೆ.

  • ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಲಕ್ನೋ: ಕಾನ್ಪುರದಲ್ಲಿ ಮತ್ತೆ ಮೂವರು ಮಂದಿಗೆ ಝಿಕಾ ವೈರಸ್ ದೃಢಪಟ್ಟಿದೆ.

    ಕಾನ್ಪುರದಲ್ಲಿ ದಿನೇ ದಿನೇ ಜಿಕಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯ ಪ್ರಕಾರ, ಇಲ್ಲಿಯವರೆಗೂ 17 ಮಂದಿ ಝಿಕಾ ವೈರಸ್‍ನಿಂದ ಚೇತರಿಸಿಕೊಂಡಿದ್ದಾರೆ. ಮತ್ತು ಒಟ್ಟು 91 ಸಕ್ರಿಯ ಪ್ರಕರಣಗಳು ವರದಿಯಾಗಿದೆ.

    ಭಾನುವಾರ ಮೂವರು ಭಾರತೀಯ ವಾಯುಪಡೆ ಸಿಬ್ಬಂದಿ ಸೇರಿದಂತೆ ಇನ್ನೂ 10 ಮಂದಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಒಟ್ಟು 89 ಪ್ರಕರಣಗಳಿದ್ದ ಝಿಕಾ ವೈರಸ್ ಇದೀಗ 91ಕ್ಕೆ ಏರಿಕೆಯಾಗಿದೆ. ಶನಿವಾರ 13 ಮಂದಿಯಲ್ಲಿ ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಜೊತೆಗೆ ಕನ್ನೌಜ್ ಜಿಲ್ಲೆಯಿಂದಲೂ ಒಂದು ಪ್ರಕರಣ ವರದಿಯಾಗಿತ್ತು. ಇದನ್ನೂ ಓದಿ: ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಕೊಲೆ ಆರೋಪಿ!

    ಒಟ್ಟು 89 ಸೋಂಕಿತರಲ್ಲಿ 55 ಮಂದಿ ಪುರುಷರಾಗಿದ್ದು, 34 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 23 ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಲ್ಲದೇ ಸೋಂಕಿತರಲ್ಲಿ 12 ಮಂದಿ ಭಾರತೀಯ ವಾಯುಪಡೆ (ಐಎಎಫ್) ಸಿಬ್ಬಂದಿಯರಿದ್ದು, ಇದರಲ್ಲಿ 11 ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದಾರೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ಹೇಳಿದ್ದಾರೆ.

    Mosquito

    ಆರೋಗ್ಯ ತಂಡಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 525 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವೈರಾಲಜಿ ಲ್ಯಾಬ್ ಮತ್ತು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗಾಗಿ ಕಳುಹಿಸಿದೆ. ಇದನ್ನೂ ಓದಿ: ವಿವಾಹವಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ 18 ಬಾರಿ ಇರಿದ ಪ್ರಿಯಕರ!

    ಅಕ್ಟೋಬರ್ 23 ಐಎಎಫ್‍ನ ವಾರಂಟ್ ಅಧಿಕಾರಿಯೊಬ್ಬರಲ್ಲಿ ಝಿಕಾ ವೈರಸ್ ಮೊದಲ ಬಾರಿಗೆ ಪತ್ತೆಯಾಯಿತು. ಇದೀಗ ನಗರದಲ್ಲಿ ಒಟ್ಟು 3,283 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಲಕ್ನೋದ ಕೆಜಿಎಂಯು ಮತ್ತು ಪುಣೆಯ ಎನ್‍ಐವಿಯ ವೈರಾಲಜಿ ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ರೋಗದ ಹರಡುವಿಕೆಯನ್ನು ಪರಿಶೀಲಿಸಲು, ಆರೋಗ್ಯ ತಂಡಗಳು ಆಂಟಿ-ಲಾರ್ವಾ ಸಿಂಪರಣೆ ಮತ್ತು ಜ್ವರ ರೋಗಿಗಳನ್ನು ಗುರುತಿಸುವುದು, ಗಂಭೀರವಾಗಿ ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರನ್ನು ಪರೀಕ್ಷಿಸುವುದು ಸೇರಿದಂತೆ ನೈರ್ಮಲ್ಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಕಣ್ಗಾವಲು ಹೆಚ್ಚಿಸಲು ಮತ್ತು ಝಿಕಾ ವೈರಸ್‍ಗಾಗಿ ಮನೆ-ಮನೆಗೆ ಮಾದರಿ ಮತ್ತು ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಅಧಿಕಾರಿಗಳನ್ನು ಕೇಳಲಾಗಿದೆ.

  • ದೆಹಲಿಯಲ್ಲಿ ಡೆಂಗ್ಯೂ ಉಲ್ಬಣ – ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ

    ದೆಹಲಿಯಲ್ಲಿ ಡೆಂಗ್ಯೂ ಉಲ್ಬಣ – ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ

    ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿದ್ದು, ಇದೀಗ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾರಣ ಅನೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಎದುರಾಗಿದೆ.

    ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಯಲ್ಲಿ ಅನೇಕ ಡೆಂಗ್ಯೂ ರೋಗಿಗಳು ಹಾಸಿಗೆ ಪಡೆಯಲು ವಿಫಲರಾಗಿದ್ದಾರೆ ಮತ್ತು ಇರುವವರಿಗೆ ಇತರ ರೋಗಿಗಳೊಂದಿಗೆ ಬೆಡ್ ಹಂಚಿಕೊಳ್ಳಲು ಒತ್ತಾಯಿಸಲಾಗುತ್ತಿದೆ. ಹಾಸಿಗೆ ಸಿಗುವ ಗ್ಯಾರಂಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ತಸ್ರಾವ ಅಥವಾ ಅವರ ಪ್ಲೇಟ್‍ಲೆಟ್‍ಗಳು 30,000ಕ್ಕೆ ಕುಸಿದ ರೋಗಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ, ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

    dengue

    ದೆಹಲಿಯ ಸ್ವಾಮಿ ದಯಾನಂದ ಆಸ್ಪತ್ರೆಯಲ್ಲಿ ದಾಖಲಾದ 220 ರೋಗಿಗಳಲ್ಲಿ 54 ಮಂದಿ ಡೆಂಗ್ಯೂ ರೋಗಿಗಳಾಗಿದ್ದು, ಅವರಿಗೆ ಸ್ಥಳಾವಕಾಶ ಕಲ್ಪಿಸಲು ಆಸ್ಪತ್ರೆ ಆಡಳಿತ ತುರ್ತು ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಿದೆ. ಇದನ್ನೂ ಓದಿ: ಅವಳಿ ಮಕ್ಕಳಿಗೆ ತಂದೆಯಾದ ದಿನೇಶ್ ಕಾರ್ತಿಕ್

    ದೆಹಲಿಯಲ್ಲಿ ಈ ವರ್ಷ 1,000 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಕಳೆದ ವಾರ 280ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈ ಸೀಸನ್‍ನಲ್ಲಿ ದೆಹಲಿಯಲ್ಲಿ ದಾಖಲಾದ ಒಟ್ಟು ಡೆಂಗ್ಯೂ ಪ್ರಕರಣಗಳ ಪೈಕಿ ಈ ತಿಂಗಳ ಮೊದಲ 23 ದಿನಗಳಲ್ಲಿ 665 ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಭಾರತಕ್ಕೂ ಮೊದಲ ಕೋವಿಡ್ ಗುಳಿಗೆ ಭಾಗ್ಯ

    ಕಳೆದ ಎರಡು ವಾರಗಳಿಂದ ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಕ್ಟೋಬರ್ 18 ರಂದು ಡೆಂಗ್ಯೂಗೆ ನಗರದಲ್ಲಿ ಮೊದಲನೇ ಸಾವಿನ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!

    ಸದ್ಯ ಡೆಂಗ್ಯೂ ಪ್ರಕರಣಗಳು ವಿಪರೀತವಾಗಿರುವುದರಿಂದ ನೋಯ್ಡಾದ ಕೈಲಾಶ್ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್ ಅನ್ನು ತಾತ್ಕಾಲಿಕವಾಗಿ ಡೆಂಗ್ಯೂ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆಗೊಳಿಸಲಾಗಿದೆ.

  • ಚಿತ್ರದುರ್ಗದ ಮಕ್ಕಳಲ್ಲಿ ವಿಚಿತ್ರ ರೋಗ – ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್

    ಚಿತ್ರದುರ್ಗದ ಮಕ್ಕಳಲ್ಲಿ ವಿಚಿತ್ರ ರೋಗ – ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಮಕ್ಕಳಲ್ಲಿ ವಿಚಿತ್ರ ರೋಗ ಉಲ್ಬಣವಾಗಿದ್ದು, ಇದರಿಂದಾಗಿ ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್ ಆಗಿದೆ.

    ರೋಗದ ಪರಿಣಾಮ ಹಸುಗೂಸುಗಳು ಸೇರಿದಂತೆ 9 ವರ್ಷದೊಳಗಿನ ಮಕ್ಕಳು ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್ ಆಗಿದ್ದು, ಬೆಡ್ ಗಳಿಲ್ಲದೇ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಇದನ್ನೂ ಓದಿ:  ಹುಟ್ಟುಹಬ್ಬದ ದಿನವೇ ಪ್ರಾಣ ಬಿಟ್ಟ ಪುಟ್ಟ ಬಾಲಕಿ

    ಈ ಹಿನ್ನೆಲೆ ತಾಯಿಯ ಮಡಿಲು ಹಾಗೂ ನೆಲವೇ ಮಕ್ಕಳಿಗೆ ಆಸರೆಯಾಗಿದೆ. ಆಸ್ಪತ್ರೆಯ ಎಲ್ಲಾ ವಾರ್ಡ್ ಗಳು ಭರ್ತಿಯಾಗಿರುವ ಪರಿಣಾಮ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಮಕ್ಕಳನ್ನು ದಾಖಲಿಸಿಕೊಳ್ಳಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಈ ವೇಳೆ ತೀವ್ರವಾದ ಆಯಾಸದಿಂದ ಹಸುಗೂಸುಗಳು ನಿತ್ರಾಣಗೊಳ್ಳುತ್ತಿದ್ದು ಅವರನ್ನು ನೋಡಿ ಪೋಷಕರು ಆತಂಕಗೊಂಡಿದ್ದಾರೆ.

    ಈ ಪರಿಸ್ಥಿತಿ ಅರಿತ ಆರೋಗ್ಯ ಇಲಾಖೆ ಡಿಹೆಚ್‍ಓ ಡಾ.ರಂಗನಾಥ್ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಕೋವಿಡ್ ಟೆಸ್ಟ್ ಮಾಡಿಸಿದ್ದು, ಅವರ ವರದಿ ನೆಗೆಟಿವ್ ಎಂದು ಬಂದಿದೆ. ಆದರೂ ರೋಗ ಹತೋಟಿಗೆ ಬಾರದೇ ರೋಗ ಲಕ್ಷಣ ಹೆಚ್ಚಾಗುತ್ತಿದೆ. ಈ ಪರಿಣಾಮ ಚಿತ್ರದುರ್ಗದಲ್ಲಿ ವಿಚಿತ್ರ ಸೋಂಕು ಪತ್ತೆಗಾಗಿ ಆರೋಗ್ಯ ಇಲಾಖೆ ಇದನ್ನು ನಿವಾರಿಸಲು ಹರಸಾಹಸಪಡುತ್ತಿದೆ. ಇದನ್ನೂ ಓದಿ:  ಮಾಧುರಿಯ ಮಾಡೆಲಿಂಗ್ ವೀಡಿಯೋ ನೋಡಿ ಫಿದಾ ಆದ ಅನುಷ್ಕಾ ಶರ್ಮಾ

    ಈ ಕುರಿತು ಪ್ರತಿಕ್ರಿಯಿಸಿದ ಡಾ.ರಂಗನಾಥ್, ಜಿಲ್ಲೆಯಲ್ಲಿ ಒಟ್ಟು 215 ಮಕ್ಕಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 12 ಮಕ್ಕಳ ಗಂಟಲು, ಮೂಗು ದ್ರಾವಣವನ್ನು ಎನ್.ಐ.ವಿ ಲ್ಯಾಬ್ ಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು ಕಳುಹಿಸಲಾಗಿದ್ದ 12 ಮಕ್ಕಳ ವರದಿ ಆರ್‍ಎಸ್‍ವಿ ವೈರಸ್ ಎಂದು ಪತ್ತೆಯಾಗಿದೆ. ಅದೊಂದು ಸಾಮಾನ್ಯ ರೋಗ ಲಕ್ಷಣವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಕಳುಹಿಸಿರುವ ಟೆಸ್ಟ್ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ ಎಂದು ಮಾಹಿತಿನೀಡಿದ್ದಾರೆ. ಇದನ್ನೂ ಓದಿ:  ವಿಕ್ರಾಂತ್ ರೋಣ ಡಿಸೆಂಬರ್ ನಲ್ಲಿ ಬಿಡುಗಡೆ ಸಾಧ್ಯತೆ