Tag: Department of Food Safety

  • ನಾನ್‌ವೆಜ್ ಪ್ರಿಯರೇ ಎಚ್ಚರ – ಬೆಂಗ್ಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್

    ನಾನ್‌ವೆಜ್ ಪ್ರಿಯರೇ ಎಚ್ಚರ – ಬೆಂಗ್ಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್

    ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ (Department of Food Safety) ನೋಟಿಸ್ ನೀಡಿದ್ದು, ಹೋಟೆಲ್‌ನಲ್ಲಿ ತಯಾರಿಸಲಾಗುವ ಕಬಾಬ್ (Kabab) ಅನ್‌ಸೇಫ್ ಎಂದು ತಿಳಿದು ಬಂದಿದೆ.

    ನಾನ್‌ವೆಜ್ ಪ್ರಿಯರೇ ಎಚ್ಚರವಾಗಿರಿ. ಬೆಂಗಳೂರಿನ ಆರು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ತಯಾರಾಗುವ ಕಬಾಬ್ ಅನ್‌ಸೇಫ್ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಆಹಾರ ಇಲಾಖೆ ಸುರಕ್ಷತಾ ಇಲಾಖೆ ಆರು ಹೋಟೆಲ್‌ಗಳಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ: 12 ಮಹಡಿಯಿಂದ ಬಿದ್ದು 3 ವರ್ಷದ ಮಗು ಸಾವು

    ಈ ಮೊದಲು ಶಿವಾಜಿನಗರ, ಬಸವನಗುಡಿ, ಮಹಾದೇವಪುರ, ಬೊಮ್ಮನಹಳ್ಳಿ, ಮಲ್ಲೇಶ್ವರಂ ಮತ್ತು ಹೆಬ್ಬಾಳದ ಆರು ಹೋಟೆಲ್‌ಗಳಿಂದ ಕಬಾಬ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಬಳಿಕ ಲ್ಯಾಬ್‌ನಿಂದ ವರದಿ ಬಂದಿದ್ದು, ಎಲ್ಲಾ ಹೋಟೆಲ್‌ಗಳಲ್ಲಿನ ಕಬಾಬ್ ಅನ್‌ಸೇಫ್ ಎಂದು ತಿಳಿದುಬಂದಿತ್ತು. ಕಬಾಬ್‌ಗೆ ಕಲರ್ ಬಳಕೆ ಹಾಗೂ ಕ್ಯಾನ್ಸರ್‌ಕಾರಕ ಸನ್‌ಸೆಟ್ ಯೆಲ್ಲೋ ಅಂಶ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಹಾರ ಸುರಕ್ಷತಾ ಇಲಾಖೆ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿತ್ತು. ಆದರೆ ಅಧಿಕಾರಿಗಳ ಎಚ್ಚರಿಕೆಗೂ ಕಿವಿಗೊಡದೆ ಅದನ್ನೇ ಮುಂದುವರಿಸಿದ್ದರು.

    ಇದೀಗ ಆಹಾರ ಸುರಕ್ಷತಾ ಇಲಾಖೆ ಆರು ಹೋಟೆಲ್‌ಗಳಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ:ಬಿಡುಗಡೆಗೂ ಮುನ್ನ ಓಂ ಸಾಯಿಪ್ರಕಾಶ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

  • ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಮೆದುವಾಗಿಸಲು ಬಳಸುವ ಕೆಮಿಕಲ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಮೆದುವಾಗಿಸಲು ಬಳಸುವ ಕೆಮಿಕಲ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    – ಕ್ಯಾಲ್ಸಿಯಂ, ಪ್ರೋಟಿನ್ ಪ್ರಮಾಣ ಕಡಿಮೆ

    ಬೆಂಗಳೂರು: ಕಲ್ಲಂಗಡಿ, ಸಿಹಿ ತಿಂಡಿ, ಇಡ್ಲಿ ಬಳಿಕ ಇದೀಗ ಆಹಾರ ಸುರಕ್ಷತಾ ಇಲಾಖೆ ಮತ್ತೆ ಶಾಕ್ ನೀಡುತ್ತಿದ್ದು, ಪನ್ನೀರ್‌ನಲ್ಲಿ (Paneer)  ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂಬುದು ಆಹಾರ ಸುರಕ್ಷತಾ ಇಲಾಖೆ (Department of Food Safety) ವರದಿಯಲ್ಲಿ ಗೊತ್ತಾಗಿದೆ.

    ಹೌದು, ಈ ಮೊದಲು ಆಹಾರ ಸುರಕ್ಷತಾ ಇಲಾಖೆ ಕಲ್ಲಂಗಡಿಯಲ್ಲಿ ಕೆಮಿಕಲ್, ಸಿಹಿ ತಿಂಡಿ ಹಾಗೂ ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ಮಾಡಿತ್ತು. ಇದೀಗ ಪನ್ನೀರ್‌ನ್ನು ಮೆದುವಾಗಿಸಲು ಬಳಸುವ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಇಲಾಖೆಯ ವರದಿ ತಿಳಿಸಿದೆ.ಇದನ್ನೂ ಓದಿ:ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಕಡೆಯ ಪನ್ನೀರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಲ್ಯಾಬ್ ಟೆಸ್ಟ್ ವರದಿ ಬಂದಿದ್ದು, ಆತಂಕಕಾರಿ ಅಂಶ ಬಯಲಾಗಿದೆ. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದೆ. ಪನ್ನೀರ್ ತಯಾರಿಸುವಾಗ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟಿನ್‌ಅನ್ನು ಬಳಸುತ್ತಾರೆ ಮತ್ತು ಪನ್ನೀರ್‌ನ್ನು ಮೆದುವಾಗಿಸಲು ಕೆಮಿಕಲ್ ಬಳಸುತ್ತಾರೆ. ಈ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ತಿಳಿಸಿದೆ.

    ಆರೋಗ್ಯ ಸಮಸ್ಯೆಗಳೇನು?
    1. ಹೃದಯ ಸಂಬಂಧಿ ಖಾಯಿಲೆಗೆ ಕಾರಣ
    2. ಕೆಮಿಕಲ್ ಬಳಕೆ ಕ್ಯಾನ್ಸರ್‌ಗೆ ಕಾರಣ
    3. ಕೊಬ್ಬಿನ ಪ್ರಮಾಣ ಹೆಚ್ವಾಗುತ್ತದೆ.
    4. ಕಿಡ್ನಿ ಸಮಸ್ಯೆ ಉಂಟಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಹಾಗೂ ತಿನಿಸುಗಳಲ್ಲಿ ಹೆಚ್ಚಾಗಿ ಕಲಬೆರಿಕೆ ಅಂಶ ಪತ್ತೆಯಾಗಿತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾರತಹಳ್ಳಿ, ವೈಟ್‌ಫೀಲ್ಡ್, ದೊಡ್ಡನಕ್ಕುಂದಿ, ಔಟರ್ ರಿಂಗ್ ರೋಡ್, ಮಹಾದೇವಪುರ ಸುತ್ತಮುತ್ತ ಇಲಾಖೆಯ ಅಧಿಕಾರಿಗಳು ಆಹಾರ ಪದಾರ್ಥಗಳ ಕಲರಿಂಗ್ ಮತ್ತು ಕಲಬೆರಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ:ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

  • ಮೈಸೂರು ಪಾಕ್, ಜಿಲೇಬಿ ಪ್ರಿಯರೇ ಹುಷಾರ್ – ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣವಾಗ್ತಿದ್ಯಾ ಸಿಹಿತಿಂಡಿಗಳು?

    ಮೈಸೂರು ಪಾಕ್, ಜಿಲೇಬಿ ಪ್ರಿಯರೇ ಹುಷಾರ್ – ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣವಾಗ್ತಿದ್ಯಾ ಸಿಹಿತಿಂಡಿಗಳು?

    – ಆಹಾರ ಇಲಾಖೆಯಿಂದ 10ಕ್ಕೂ ಅಧಿಕ ಸಿಹಿ ತಿಂಡಿಗಳು ಟೆಸ್ಟಿಂಗ್‌ಗೆ ರವಾನೆ

    ಬೆಂಗಳೂರು: ಗೋಬಿ, ಪಾನಿಪುರಿ, ಕಬಾಬ್, ಪನ್ನೀರ್ ಆಯ್ತು. ಇದೀಗ ಆಹಾರ ಇಲಾಖೆ ಸಿಹಿ ತಿಂಡಿಗಳನ್ನು ಪರೀಕ್ಷೆಗೊಳಪಡಿಸಿ ಏನೆಲ್ಲಾ ಕಲಬೆರಿಕೆ ಮಾಡಲಾಗುತ್ತಿದೆ ಹಾಗೂ ಕ್ಯಾನ್ಸರ್, ಡಯಾಬಿಟಿಸ್‌ಗೆ ಸಿಹಿತಿಂಡಿಗಳು ಕಾರಣವಾಗುತ್ತಿದ್ಯಾ ಎನ್ನುವುದನ್ನು ಪತ್ತೆ ಹಚ್ಚಲು ಹೊರಟಿದೆ.

    ಹೌದು, ಜನರು ಬಾಯಿ ಚಪ್ಪರಿಸಿಕೊಂಡು ತಿನ್ನುವ ಸ್ಟೀಟ್ಸ್‌ ಮೇಲೆ ಇದೀಗ ಆಹಾರ ಇಲಾಖೆ ಸಮರ ಸಾರಲು ಸಜ್ಜಾಗಿದ್ದು, 10ಕ್ಕೂ ಅಧಿಕ ಸಿಹಿ ತಿಂಡಿಗಳನ್ನು ಟೆಸ್ಟಿಂಗ್‌ಗೆ ರವಾನಿಸಿದೆ. ಯುಗಾದಿ ಹಬ್ಬ ಬಂದರೆ ಸಾಕು ಜನರು ಸಿಹಿ ತಿಂಡಿಗಳ ಖರೀದಿಗೆ ಮುಂದಾಗುತ್ತಾರೆ. ಹೀಗಾಗಿ ಹಬ್ಬ ಹತ್ತಿರವಾಗುತ್ತಿದ್ದಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.ಇದನ್ನೂ ಓದಿ:ಟಾರ್ಗೆಟ್‌ ರಾಜಣ್ಣ – ಹೈಕಮಾಂಡ್‌ಗೆ ದೂರು ನೀಡಲು ಮುಂದಾದ ಸಿಎಂ ಆಪ್ತರು

    ಮೈಸೂರು ಪಾಕ್, ಮಿಕ್ಸ್ಚ್‌ರ್‌, ಕಾಜುಬರ್ಫಿ, ಜಿಲೇಬಿ, ಜಹಂಗೀರ್‌ನಲ್ಲಿ ಕಲರಿಂಗ್, ಕಲಬೆರಕೆ ಮತ್ತು ಸಕ್ಕರೆ ಪ್ರಮಾಣ ಹೆಚ್ಚಳದ ಬಗ್ಗೆ ಆಹಾರ ಸುರಕ್ಷತಾ ಇಲಾಖೆಗೆ ದೂರು ಹೋಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸುರಕ್ಷತಾ ಇಲಾಖೆ ಅಧಿಕಾರಿಗಳು ಸಿಹಿ ತಿಂಡಿಗಳ ಮಾದರಿಗಳನ್ನು ಟೆಸ್ಟ್‌ಗೆ ರವಾನಿಸಿದ್ದಾರೆ.

    ಸುಮಾರು 10ಕ್ಕೂ ಹೆಚ್ಚು ಸಿಹಿ ತಿಂಡಿಗಳನ್ನ ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ. ಈ ಸ್ಟೀಟ್‌ಗಳಲ್ಲಿ ಕಲಬೆರಕೆ, ಕಲರಿಂಗ್ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣ ಆಗುತ್ತಿದೆ ಎಂದು ಈ ಬಗ್ಗೆ ಆಹಾರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕಲರಿಂಗ್‌ನಿಂದ ಕ್ಯಾನ್ಸರ್, ಹೆಪಟೈಟಿಸ್ ಸಮಸ್ಯೆ ಆಗಿ ದೇಹಕ್ಕೆ ಹಾನಿಯಾಗಲಿದೆ. ಜೊತೆಗೆ ಸಕ್ಕರೆ ಪ್ರಮಾಣ ಇದ್ದರೆ ಅದು ಡಯಾಬಿಟಿಸ್‌ಗೆ ಕಾರಣ ಆಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.

    1. ಜಿಲೇಬಿ, ಮಿಕ್ಸ್ಚ್‌ರ್‌ಗಳಲ್ಲಿ ಸನ್ ಸೆಟ್ ಯಲ್ಲೋ ಕಲರ್ ಬಳಕೆ ಮಾಡಲಾಗುತ್ತದೆ. ಇದು ಕ್ಯಾನ್ಸರ್ ಕಾರಕ.
    2. ಸಿಹಿ ತಿಂಡಿಗಳಲ್ಲೂ ಅಪಾಯಕಾರಿ ರೋಡೋಮೆನ್ ಬಿ ಅಂಶ ಇರುತ್ತದೆ
    3. ಕಾರ್ಸೋನೋಜೆನಿಕ್ ಎನ್ನುವ ಕ್ಯಾನ್ಸರ್ ಕಾರಕ ಅಪಾಯಕಾರಿ
    4. ಕೆಲ ಸ್ವೀಟ್‌ಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ ಇದ್ದು ಡಯಾಬಿಟಿಸ್‌ಗೆ ಕಾರಣ
    5. ಬಳಸುವ ಅಡುಗೆ ಎಣ್ಣೆ ಕೂಡ ಹೈಜೆನಿಕ್ ಇರಲ್ಲ

    ಕಲಬೆರಕೆ, ಕಲರಿಂಗ್, ಸಕ್ಕರೆ ಪ್ರಮಾಣ ಹೆಚ್ಚಳ ಸಂಬಂಧ ಆಹಾರ ಸುರಕ್ಷತಾ ಇಲಾಖೆ (Department of Food Safety) ಅಧಿಕಾರಿಗಳು 10 ಸಿಹಿತಿಂಡಿಗಳನ್ನು ಲ್ಯಾಬ್‌ಗೆ ರವಾನಿಸಿದ್ದು, ವರದಿಯಲ್ಲಿ ಏನಿರಲಿದೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ:ಸ್ನೇಹಿತೆಯನ್ನ ಭೇಟಿಯಾಗಲು ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ

  • ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!

    ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!

    ಬೆಂಗಳೂರು: ಇಡ್ಲಿ (Idli) ಬಳಿಕ ಹೋಳಿಗೆ (Holige) ಪ್ರಿಯರಿಗೆ ಶಾಕ್ ಎದುರಾಗಿದೆ. ಇದೀಗ ಹೋಳಿಗೆಯೂ ನಿಮ್ಮ ಆರೋಗ್ಯಕ್ಕೆ ಕಂಟಕ ತರಬಹುದು. ಹೋಳಿಗೆ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪ್ಲಾಸ್ಟಿಕ್ (Plastic) ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುತ್ತಿರುವುದು ಪತ್ತೆಯಾಗಿದೆ.

    ಪ್ಲಾಸ್ಟಿಕ್ ಕವರ್ ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುವುದು ಕ್ಯಾನ್ಸರ್‌ಗೆ (Cancer) ಕಂಟಕವಾಗಬಹುದು. ಪ್ಲಾಸ್ಟಿಕ್ ಶಾಖದಿಂದ ಕೆಮಿಕಲ್ ಹೊರಸೂಸಿ ಕ್ಯಾನ್ಸರ್ ರೋಗಕ್ಕೆ ಎಡೆಮಾಡಿಕೊಡಬಹುದು. ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆಯ ಅಧಿಕಾರಿಗಳ ತಪಾಸಣೆಯಲ್ಲಿ ಈ ಶಾಕಿಂಗ್ ವಿಚಾರ ಬಯಲಾಗಿದೆ. ಇದನ್ನೂ ಓದಿ: ಕೆಆರ್‌ ನಗರ ರೇಪ್‌ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ – ಹೈಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

    ಮೈಸೂರಿನ ಎರಡು ಹೋಟೆಲ್‌ಗಳ ಮೇಲೆ ದಾಳಿ ಮಾಡಿದ ವೇಳೆ ಪ್ಲಾಸ್ಟಿಕ್ ಕವರ್ ಬಳಸಿ ಹೋಳಿಗೆ ತಯಾರು ಮಾಡುವುದು ಕಂಡುಬಂದಿದೆ. ಈ ಹಿನ್ನೆಲೆ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಶಾಸಕರಿಗಾಗಿ ವಿಧಾನಸೌಧಕ್ಕೆ ಬಂತು ರಿಕ್ಲೈನರ್‌, ಮಸಾಜ್ ಚೇರ್‌ಗಳು – ಬೆಲೆ ಎಷ್ಟು?

  • ಗೋಬಿ, ಕಬಾಬ್, ಪಾನಿಪುರಿ ಬಳಿಕ ತರಕಾರಿ ಸರದಿ – ಬೆಂಗಳೂರಿನ 300ಕ್ಕೂ ಹೆಚ್ಚು ಕಡೆ ಕ್ವಾಲಿಟಿ ಟೆಸ್ಟ್

    ಗೋಬಿ, ಕಬಾಬ್, ಪಾನಿಪುರಿ ಬಳಿಕ ತರಕಾರಿ ಸರದಿ – ಬೆಂಗಳೂರಿನ 300ಕ್ಕೂ ಹೆಚ್ಚು ಕಡೆ ಕ್ವಾಲಿಟಿ ಟೆಸ್ಟ್

    ಬೆಂಗಳೂರು: ಗೋಬಿ, ಕಬಾಬ್, ಪಾನಿಪುರಿಯಲ್ಲಿ ಹಾನಿಕಾರಕ ಅಂಶಗಳ ಪತ್ತೆ ಬಳಿಕ ಈಗ ತರಕಾರಿ (Vegetables) ಸರದಿ ಎದುರಾಗಿದೆ. ಬೆಂಗಳೂರಿನ (Bengaluru) 300ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಆಹಾರ ಇಲಾಖೆ (Food Safety Department) ವಿವಿಧ ತರಕಾರಿಗಳ ಕ್ವಾಲಿಟಿ ಟೆಸ್ಟ್ (Quality Test) ಮಾಡುತ್ತಿದೆ. ತರಕಾರಿಗಳಲ್ಲಿನ ಹಾನಿಕಾರಕ ಅಂಶಗಳನ್ನು ಪತ್ತೆಹಚ್ಚಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.

    ಕೆಲ ತಿಂಗಳ ಹಿಂದೆ ಗೋಬಿ, ಕಬಾಬ್‌ಗೆ ಬಳಸುವ ಕಲರ್‌ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಇವೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಕಲರ್ ಬಳಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಇತ್ತೀಚಿಗೆ ಪಾನಿಪುರಿಯಲ್ಲೂ ಹಾನಿಕಾರಕ ಅಂಶ ಇರೋದನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದರು. ಇದೀಗ ತರಕಾರಿಗಳ ಗುಣಮಟ್ಟ ಪರಿಶೀಲಿಸಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ತರಕಾರಿಗಳನ್ನು ಟೆಸ್ಟ್ ಮಾಡುವ ಉದ್ದೇಶದಿಂದ ಬೆಂಗಳೂರಿನ 300ಕ್ಕೂ ಹೆಚ್ಚು ಪ್ರದೇಶಗಳಿಂದ ತರಕಾರಿಗಳನ್ನು ಸಂಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರನ್ನು 5 ವಲಯಗಳನ್ನಾಗಿ ವಿಭಜಿಸುವ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ತರಕಾರಿಯಲ್ಲಿರುವ ಹಾನಿಕಾರಕ ಅಂಶಗಳು:
    ತರಕಾರಿ ಗಿಡಗಳಿಗೆ ಔಷಧಿ ಸಿಂಪಡಣೆ
    ಔಷಧಿ ಸಿಂಪಡಣೆ ಮಾಡುವುದರಿಂದ ಸುರಕ್ಷತೆ ಇಲ್ಲ
    ಕಬ್ಬಿಣದ ಅಂಶಗಳು ಪತ್ತೆ
    ಔಷಧಿ ಸಿಂಪಡಣೆ ಮಾಡಿರುವ ತರಕಾರಿ ತಿಂದರೆ ಆರೋಗ್ಯದ ಮೇಲೆ ಪರಿಣಾಮ
    ಸುರಕ್ಷತೆ ಇಲ್ಲದೇ ಇರುವ ಆಹಾರ ಸ್ಲೋಪಾಯಿಸನ್‌ಗೆ ಸಮ

    ಒಟ್ಟಾರೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಆಹಾರ ಮತ್ತು ಸುರಕ್ಷತಾ ಇಲಾಖೆ ಕ್ವಾಲಿಟಿ ಚೆಕ್ ಮಾಡುತ್ತಿದ್ದು ಯಾವೆಲ್ಲಾ ಹಾನಿಕಾರಕ ಅಂಶ ಇವೆ ಎಂದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಒಂದು ವೇಳೆ ಹಾನಿಕಾರಕ ಅಂಶಗಳು ಪತ್ತೆಯಾದರೆ ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಮೋದಿ 3.0 ಸರ್ಕಾರದ ಬಜೆಟ್‌ ಮಂಡನೆ ಇಂದು; ತೆರಿಗೆ ಪದ್ಧತಿಯಲ್ಲಿ ಆಗುತ್ತಾ ಬದಲಾವಣೆ?

  • ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

    ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

    ಯಾದಗಿರಿ: ಕಲಬೆರಕೆ (Adulteration) ಹಾಲು ಸರಬರಾಜು ಶಂಕೆ ವ್ಯಕ್ತಪಡಿಸಿ ಹಾಲು ಮಾರಾಟ ಮಳಿಗೆ ಹಾಗೂ ಹಾಲು ಸರಬರಾಜು ವಾಹನಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ (Department of Food Safety) ಅಧಿಕಾರಿಗಳು ದಾಳಿ (Ride) ನಡೆಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ರಂಜಾನ್ (Ramzan) ಹಬ್ಬ ಹಿನ್ನೆಲೆ ಕಲಬೆರಕೆ ಹಾಲು (Milk) ಸರಬರಾಜು ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ಶನಿವಾರ ಬೆಳ್ಳಂಬೆಳಗ್ಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿದ್ದಾರೆ. ಯಾದಗಿರಿ ನಗರದ ರೈಲ್ವೆ ನಿಲ್ದಾಣದ ರಸ್ತೆ, ಚಿತ್ತಾಪುರ ರಸ್ತೆ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಆಂಜನೇಯ ಎಂಬವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವಿವಿಧ ಬ್ರ್ಯಾಂಡ್‌ನ ಹಾಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಮುಗಿಯುವವರೆಗೂ ಲಿಂಗಾಯತ ದಾಳ ಬಳಸಿ: ಶಾ ತಾಕೀತು 

    ಸಂಗ್ರಹಿಸಿದ ಹಾಲನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ (Laboratory) ಕಳುಹಿಸಲಿದ್ದು, ಕಲಬೆರಕೆ ಎಂದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ನಾಯಕರಿಗೆ ಕ್ಲಾಸ್‌ – ಬಂಡಾಯ ಶಮನಕ್ಕೆ ಶಾ ಮದ್ದು