ಇತ್ತೀಚಿಗೆ ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದು, ಇದೀಗ ನಗರದ ಗದ್ವಾಲ್ ರಸ್ತೆಯ ವೀರಾಂಜನೇಯ ಸ್ವಾಮಿ ದೇವಸ್ಥಾನ ಬಳಿಯಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 400 ಲೀಟರ್ ಕಲಬೆರಕೆ ಸೇಂದಿ ಜಪ್ತಿ ಮಾಡಿದ್ದಾರೆ. ಅಕ್ರಮ ಮಾರಾಟದಲ್ಲಿ ತೊಡಗಿದ್ದ ಹಣಮಂತ, ಲಕ್ಷ್ಮಿ ದಂಪತಿಯನ್ನ ವಶಕ್ಕೆ ಪಡದಿದ್ದಾರೆ.
ದಂಪತಿ ಪಾತ್ರೆ, ಸಾಮಾನುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಬಳಿಕ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸೇಂದಿ ಮಾರಾಟ ಮಾಡುತ್ತಿದ್ದರು. ದಿನನಿತ್ಯದಂತೆ ಬೆಳಿಗ್ಗೆ ಸೇಂದಿ ಪ್ಯಾಕ್ ಮಾಡುವಾಗ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಲಬೆರಕೆ ಸೇಂದಿ ಹಾಗೂ ರಾಸಾಯನಿಕ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಡಿವೋರ್ಸ್ ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು: ಸಮಂತಾ
ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆ ಹಾವೇರಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಈ ವೇಳೆ ವಾಣಿಜ್ಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಿದ್ದು, 2,68,270 ರೂ. ನಗದು, 1 ಲಕ್ಷ 60 ಸಾವಿರ ರೂ. ಮೌಲ್ಯದ 8 ಕೆ.ಜಿ 240 ಗ್ರಾಂ ಗಾಂಜಾ, 55,13,926 ಲಕ್ಷ ರೂ. ಮೌಲ್ಯದ 4,686 ಲೀಟರ್‌ನಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದೆ. ಇನ್ನೂ 3 ಲಕ್ಷ ರೂ. ಮೌಲ್ಯದ 5 ವಾಹನ ಜಪ್ತಿ ಮಾಡಲಾಗಿದ್ದು, ಒಟ್ಟು ವಾಣಿಜ್ಯ ತೆರಿಗೆ ಇಲಾಖೆಯಿಂದ 5,34,850 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಉಪ ಅಧೀಕ್ಷಕರಾದ ಆನಂದ್ ಉಕ್ಕಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಡಿಫೆನ್ಸ್ ಸರ್ವಿಸ್ ಎಂದು ಇರುವ ಪ್ರತಿಷ್ಠಿತ ಬ್ರಾಂಡ್‌ನ ಖಾಲಿ ಬಾಟಲ್‌ಗಳಲ್ಲಿ ಕಲಬೆರಕೆ ಮದ್ಯ ತುಂಬಿ ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿ, ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೀದರ್ ನಗರದ ಲೇಬರ್ ಕಾಲೋನಿಯಲ್ಲಿರುವ ಅಂಬದಾಸ್ ಇಸ್ಮಾಯಿಲ್ ಮನೆ ಮೇಲೆ ದಾಳಿ ಮಾಡಿ 40 ಸಾವಿರ ರೂ.ಗೂ ಅಧಿಕ ಕಲಬೆರಕೆ ಮದ್ಯ ಜಪ್ತಿ ಮಾಡಿದ್ದಾರೆ. ಕಲಬೆರಕೆ ಹಾಗೂ ಪ್ರತಿಷ್ಠಿತ ಬ್ರಾಂಡ್‌ನ ಖಾಲಿ ಬಾಟಲ್‌ಗಳ ಜಪ್ತಿಯ ಜೊತೆಗೆ ಅಕ್ರಮ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇದನ್ನೂ ಓದಿ: ಮೇಲೂರು ಕೆರೆಯಲ್ಲಿ ತಾಯಿ-ಮಗನ ಶವ ಪತ್ತೆ; ಆತ್ಮಹತ್ಯೆ ಶಂಕೆ
ವಿಜಯಪುರ: ಪಂಚ ಗ್ಯಾರಂಟಿಯಿಂದ (Guarantees) ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಗ್ಯಾರಂಟಿ ಕೊಟ್ಟ ಮೇಲೆ ಕಾಂಗ್ರೆಸ್ ಸರ್ಕಾರದ್ದೆ ಗ್ಯಾರಂಟಿ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ತಿಮ್ಮಾಪುರ್ ವರ್ಗಾವಣೆ ಭ್ರಷ್ಟಾಚಾರ ವಿಚಾರವಾಗಿ, ಕಾಂಗ್ರೆಸ್ ಸರ್ಕಾರ (Congress Governmnet) ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಾಡಿದೆ. ಪಂಚ ಗ್ಯಾರಂಟಿಯಿಂದ ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಎಂದು ಗೊತ್ತಾಗುತ್ತಿಲ್ಲ. ಅಬಕಾರಿ ಇಲಾಖೆ ಹೊರತಾಗಿ ಸಚಿವರಿಗೆ ಮತ್ತೊಂದು ಸೋರ್ಸ್ ಇಲ್ಲ. ಅಬಕಾರಿ ಇಲಾಖೆಯ (Departmnet Of Excise) ವರ್ಗಾವಣೆಯಲ್ಲಿ ದೊಡ್ಡ ಉದ್ಯೋಗ ಹುಟ್ಟಿಕೊಂಡಿದೆ. ಏಕೆಂದರೆ ಅವರಿಗೆ ಗ್ಯಾರಂಟಿ ಇಲ್ಲ. ಗ್ಯಾರಂಟಿ ಕೊಟ್ಟ ಮೇಲೆ ಅವರ ಸರ್ಕಾರದ್ದೆ ಗ್ಯಾರಂಟಿ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್
ಸಿಎಂ ಸಿದ್ದರಾಮಯಯ್ಯಗೆ (CM Siddaramaiah) ಎಷ್ಟು ದಿನ ಮುಂದುವರೆಯುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಏನೂ ಸಿಗುತ್ತಿಲ್ಲ ಹೀಗಾಗಿ ಹತಾಶರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಶೇ.90 ರಷ್ಟು ಭ್ರಷ್ಟಾಚಾರ ಇದೆ. ಆಗ ನಮ್ಮದು ಶೇ.40 ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳುತ್ತಿದ್ದರು. ಜೊತೆಗೆ ಬಿಜೆಪಿ ಮೇಲೆ ಪೇಸಿಎಂ ಎಂದು ಆರೋಪ ಮಾಡುತ್ತಿದ್ದರು. ಆದರೆ ಯಾಕೆ ತನಿಖೆ ಮಾಡಲಿಲ್ಲ? ತನಿಖೆ ಮಾಡಿ ಸಾಬೀತು ಮಾಡುವುದಕ್ಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರಲ್ಲಿ ಜಾಗಗಳ ಎನ್‌ಎ ಮಾಡಲು ಭ್ರಷ್ಟಾಚಾರ ಮಾಡಿದ್ದಾರೆ. ಎನ್‌ಎ ಮಾಡಲು ಡಿಕೆಶಿಗೆ ಹಣ ಕೊಡಬೇಕು. ಚದರ ಅಡಿಗೆ 75 ರಿಂದ 100 ರೂ. ಕೊಡಬೇಕು. ಡಿಕೆಶಿ (DCM DK Shivakumar) ಕ್ಯಾಲ್ಕುಲೇಟರ್ ತೆಗೆದುಕೊಂಡು ಕೂತಿರುತ್ತಾನೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ತಹಶಿಲ್ದಾರ್ ಕಚೇರಿ ಎಸ್‌ಡಿಎ ಆತ್ಮಹತ್ಯೆಯಲ್ಲಿ ಹೆಬ್ಬಾಳ್ಕರ್ (Lakshmi Hebbalkar) ಪಿಎ ಹೆಸರು ಬರೆದಿಟ್ಟ ವಿಚಾರವಾಗಿ ಮಾತನಾಡಿ, ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಹಳಷ್ಟು ದೂರುಗಳಿವೆ. ಭ್ರಷ್ಟಾಚಾರದ ತುತ್ತ ತುದಿಯಲ್ಲಿದ್ದಾರೆ. ಹಿಂದೆ ಮಾಡಿದ ಪಾಪದ ಫಲ ಈಗ ಕಾಡುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡುವಂತೆ ಮಾಡಿದ ಪಾಪದ ಕೊಡ ತುಂಬಿ ಈಗ ಬೆನ್ನು ಹತ್ತಿದೆ. ಬೆಳಗಾವಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಐದಾರು ಸಾವಿರ ರೂ. ಕೆಲಸಕ್ಕೂ ಲಂಚ ಕೊಡಬೇಕಿದೆ. ಪಿಎ ಹೆಸರು ಬರೆದಿರುವುದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಹೊಣೆ. ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಡ್ಯಾನ್ಸ್?
ಬೆಂಗಳೂರು: ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದ ಸರ್ಕಾರ ಈಗ ಮತ್ತೊಮ್ಮೆ ಶಾಕ್ ಕೊಡಲು ಮುಂದಾಗಿದೆ. ಅಕ್ಟೋಬರ್ ಮೊದಲ ವಾರದಿಂದಲೇ ಮತ್ತೆ ಪರಿಷ್ಕೃತ ದರ ಜಾರಿ ಮಾಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಹೌದು. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು (CM Siddaramaiah) ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು.
ಈಗ ಮತ್ತೊಮ್ಮೆ ಬಿಯರ್ ಬೆಲೆ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಅಸ್ತು ಅಂದಿದ್ದು, ಅ.1 ರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಖಚಿತವಾದಂತಿದೆ. ಕಳೆದ ಆ.29ರಿಂದ ಪ್ರೀಮಿಯಂ, ಸೆಮಿ ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಬಿಯರ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು, ಅ.1ರಿಂದ ಹೊಸ ದರಗಳು ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ.
ಇನ್ನೂ ಸರ್ಕಾರದ ನಿರ್ಧಾರಕ್ಕೆ ಬಾರ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದೂವರೆ ವರ್ಷದಲ್ಲಿ ಮೂರನೇ ಬಾರಿಗೆ ದರ ಪರಿಷ್ಕರಣೆಯಾಗುತ್ತಿದೆ. ರಾಜ್ಯದಲ್ಲಿ ಬಿಯರ್ ಮಾರಾಟ ಹೆಚ್ಚಾಗಿದೆ. ಈ ಮಧ್ಯೆ ಸರ್ಕಾರ ಸುಂಕ ಹೆಚ್ಚಳ ಮಾಡಿದರೆ ಗ್ರಾಹಕರ ಜೊತೆಗೆ ಮಾರಾಟಗಾರರಿಗೂ ಹೊಡೆತ ಬೀಳಲಿದೆ. ಸರ್ಕಾರ ಏರಿಕೆ ಬದಲು ದರ ಇಳಿಕೆ ಬಗ್ಗೆ ಯೋಚನೆ ಮಾಡಿದರೆ ಹೆಚ್ಚು ಮಾರಾಟವಾಗಲಿದೆ. ಈ ಮೂಲಕ ಸರ್ಕಾರ ಮತ್ತು ಮಾಲೀಕರಿಗೆ ಅನೂಕೂಲವಾಗಲಿದೆ ಎನ್ನುತ್ತಿದ್ದಾರೆ.
ದಾವಣಗೆರೆ: ಮದ್ಯ ಸಿಗದ್ದಕ್ಕೆ ಹಲವರು ಕಳ್ಳಬಟ್ಟಿ ಸಾರಾಯಿ ಮೊರೆ ಹೋಗುತ್ತಿದ್ದು, ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ಸರ್ಜಿಕಲ್ ಸ್ಪಿರಿಟ್‍ನ್ನು ಕಳ್ಳಬಟ್ಟಿ ಸರಾಯಿ ಎಂದು ನಂಬಿಸಿ ಮಾರಾಟ ಮಾಟುತ್ತಿದ್ದಾರೆ.
ದಾವಣಗೆರೆಯಲ್ಲಿ ಸರ್ಜಿಕಲ್ ಸ್ಪಿರಿಟ್ ದಂಧೆ ಜೋರಾಗಿದ್ದು, ಸರ್ಜಿಕಲ್ ಸ್ಪೀರಿಟ್‍ನ್ನು ನೀರಿಗೆ ಬೆರೆಸಿ ಕಳ್ಳಬಟ್ಟಿ ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಯಾರೇ ಕೇಳಿದರೂ ಸರ್ಜಿಕಲ್ ಸ್ಪಿರಿಟ್ ನೀಡದಂತೆ ಡ್ರಗ್ ಕಂಟ್ರೋಲ್ ರೂಮ್‍ಗೆ ಪತ್ರ ಬರೆಯಲಾಗಿದೆ. ಸರ್ಜಿಕಲ್ ಸ್ಪಿರಿಟ್ ಬೇಕು ಎಂದರೆ ಅವರ ಅಧಾರ್ ಕಾರ್ಡ್ ಪ್ರತಿ ಪಡೆಯಲು ಔಷಧಿ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಬಕಾರಿ ಆಯುಕ್ತ ನಾಗರಾಜ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಸಾವಿರಾರು ಲೀಟರ್ ಕಳ್ಳಬಟ್ಟಿ ನಾಶ ಮಾಡಲಾಗಿದೆ. ಆಲೂರು ಹಟ್ಟಿಯಲ್ಲೇ ಸಾವಿರ ಲೀಟರ್ ಕಳ್ಳಬಟ್ಟಿ ನಾಶ ಮಾಡಲಾಗಿದೆ. ಜಿಲ್ಲೆಯಾದ್ಯಂತ 259 ಬಾರ್ ಗಳಿದ್ದು ಕಾವಲು ಕಾಯುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಯಾರೂ ಕಳ್ಳಬಟ್ಟಿ, ಸರ್ಜಿಕಲ್ ಸ್ಪಿರಿಟ್ ಕುಡಿಯ ಬೇಡಿ. ಕುಡಿದರೆ ಬಹು ಅಂಗಾಂಗ ಸಮಸ್ಯೆ ಉಂಟಾಗುತ್ತದೆ ಎಂದು ಅಬಕಾರಿ ಆಯುಕ್ತರು ಮನವಿ ಮಾಡಿದ್ದಾರೆ.