Tag: department

  • ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ

    ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ

    ಪಾಟ್ನಾ: ಎರಡನೇ ಮದುವೆಯಾಗಲು ಬಯಸುವ ಸರ್ಕಾರಿ ಉದ್ಯೋಗಿಗಳು ತಮ್ಮ ಇಲಾಖೆಗಳಿಗೆ ಸೂಚಿಸಿ ಅಗತ್ಯ ಅನುಮತಿಯನ್ನು ಪಡೆದ ನಂತರವೇ ಮುಂದುವರಿಯಬೇಕು ಎಂದು ಬಿಹಾರದ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.

    ಬಿಹಾರದ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು, ಎಲ್ಲ ಸರ್ಕಾರಿ ಅಧಿಕಾರಿಗಳು ತಮ್ಮ ವೈವಾಹಿಕ ಜೀವನದ ಬಗ್ಗೆ ತಮ್ಮ ಇಲಾಖೆಗಳಿಗೆ ಅಗತ್ಯ ಅನುಮತಿ ಕೊಟ್ಟ ನಂತರವೇ ಎರಡನೇ ಮದುವೆಗೆ ಅರ್ಹರಾಗಬೇಕೆಂದು ನಿರ್ದೇಶಿಸಿದೆ.

    ಅಧಿಸೂಚನೆಯಲ್ಲಿ ಏನಿದೆ?
    ಎರಡನೇ ಬಾರಿಗೆ ಮದುವೆಯಾಗಲು ಬಯಸುವ ಯಾವುದೇ ಉದ್ಯೋಗಿ ಮೊದಲು ಅವನ ಅಥವಾ ಅವಳ ಸಂಗಾತಿಯಿಂದ ಕಾನೂನುಬದ್ಧವಾಗಿ ಪ್ರತ್ಯೇಕವಾದ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗೆ ನೀಡಬೇಕು. ಉದ್ಯೋಗಿಯ ಮೊದಲ ಪತ್ನಿ ಅಥವಾ ಪತಿ ವಿರೋಧಿಸಿದರೆ, ಎರಡನೇ ಪತ್ನಿ ಅಥವಾ ಪತಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಿರಾಕರಿಸಲಾಗುತ್ತದೆ. ಇದನ್ನೂ ಓದಿ: ಯೋಧರು ಸೇರಿ ಐವರ ಪ್ರಾಣ ಉಳಿಸಿದ ಮೃತ ಮಹಿಳೆಯ ಅಂಗಾಂಗ

    ಸರ್ಕಾರಿ ನೌಕರನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಎರಡನೇ ಮದುವೆಯಾಗಿ ಸೇವಾ ಅವಧಿಯಲ್ಲಿ ಮರಣಹೊಂದಿದರೆ, ಅವನ ಅಥವಾ ಅವಳ ಎರಡನೇ ಪತ್ನಿ ಅಥವಾ ಪತಿ ಮತ್ತು ಅವರ ಮಕ್ಕಳು ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಅರ್ಹರಾಗಿರುವುದಿಲ್ಲ. ರಾಜ್ಯ ಸರ್ಕಾರ ಮೊದಲ ಪತ್ನಿಯ ಮಕ್ಕಳಿಗೆ ಆದ್ಯತೆ ನೀಡಲಿದೆ.

    ಈ ಆದೇಶವನ್ನು ಎಲ್ಲ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರು(ಡಿಜಿಪಿ), ಡಿಜಿಪಿ ಹೋಮ್ ಗಾರ್ಡ್, ಡಿಜಿಪಿ ಕಾರಾಗೃಹ ಮತ್ತು ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಯನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಸೂಚಿಸಿದೆ. ಇದನ್ನೂ ಓದಿ: ವೀಡಿಯೋ ಬಂದ್ ವಿಚಾರ – ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ: ಸಿಎಂ

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿ ಸಾವು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 1 ಲಕ್ಷ ಪರಿಹಾರ

    ವಿದ್ಯಾರ್ಥಿನಿ ಸಾವು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 1 ಲಕ್ಷ ಪರಿಹಾರ

    ರಾಯಚೂರು: ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮೃತಳ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

    ಇಲಾಖೆಯಿಂದ ಮೃತಳ ಕುಟುಂಬಕ್ಕೆ ಸಿಗಬಹುದಾದ ಸ್ಥೈರ್ಯ ನಿಧಿ ಯೋಜನೆಯ ಸೌಲಭ್ಯ ನೀಡಲು ಪೋಷಕರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ್ ಪೂಜಾರಿ ಹಾಗೂ ಅವರ ಸಿಬ್ಬಂದಿ ದಾಖಲೆ ಸಂಗ್ರಹಿದ್ದಾರೆ. ಮರಣ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ದಾಖಲೆ ಪರಿಶೀಲನೆ ಬಳಿಕ ಮೃತಳ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ.

    ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ರಾಯಚೂರಿನಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ನಗರದಲ್ಲಿ ವಿವಿಧ ಸಂಘಟನೆಗಳು ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದೆ.

  • ಟ್ರಾಫಿಕ್ ಇಲಾಖೆ ಹೆಸರಲ್ಲಿ ಇಮೇಲ್ ಬಂದ್ರೆ ಓಪನ್ ಮಾಡ್ಬೇಡಿ- ಬೀ ಅಲರ್ಟ್!

    ಟ್ರಾಫಿಕ್ ಇಲಾಖೆ ಹೆಸರಲ್ಲಿ ಇಮೇಲ್ ಬಂದ್ರೆ ಓಪನ್ ಮಾಡ್ಬೇಡಿ- ಬೀ ಅಲರ್ಟ್!

    ಬೆಂಗಳೂರು: ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ದಂಡ ಕಟ್ಟಿ ಅಂತಾ ನಿಮ್ಮ ಮೇಲ್‍ಗಳಿಗೆ ಲಿಂಕ್ ಇರುವ ಮೆಸೇಜ್ ಬಂದರೆ ಅಲರ್ಟ್ ಆಗಿರಿ. ದಂಡ ಕಟ್ಟಬೇಕಾ, ಅದ್ಯಾವ ರೂಲ್ಸ್ ಬ್ರೇಕ್ ಮಾಡಿದೆ ಅಂತಾ ಕುತೂಹಲದಿಂದ ಈ ಲಿಂಕ್‍ನ್ನು ಒಪನ್ ಮಾಡಬೇಡಿ. ನಿಮ್ಮ ವೈಯಕ್ತಿಕ ಡೇಟಾ, ಸ್ವಲ್ಪ ಯಾಮಾರಿದರೆ ಅಕೌಂಟ್ ಡಿಟೈಲ್ಸ್ ಸೈಬರ್ ಕಳ್ಳರ ಕೈಗೆ ಹೋಗುತ್ತೆ.

    ಬೆಂಗಳೂರಿನ ಯುವಕನೊಬ್ಬನಿಗೆ ಇದೇ ರೀತಿ ಮೇಲ್ ಬಂದಿದೆ. ಯುವಕ ಕೂಡಲೇ ಟ್ರಾಫಿಕ್ ಪೊಲೀಸರಿಗೆ ಈ ಖತರ್‍ನಾಕ್ ಕಳ್ಳರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಇದರಿಂದ ತಲೆಕೆಡಿಸಿಕೊಳ್ಳದ ಟ್ರಾಫಿಕ್ ಇಲಾಖೆ ಈ ಬಗ್ಗೆ ಸೈಬರ್ ಕ್ರೈಂಗೆ ದೂರು ಕೊಡಿ ಅಂತಾ ಉತ್ತರ ಕೊಟ್ಟಿದ್ದಾರೆ.

    ಇದರಿಂದ ಅದೆಷ್ಟೋ ಜನರಿಗೆ ತೊಂದರೆಯಾಗುತ್ತೆ ಅಂತಾ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಎಂಬವರು ಸೈಬರ್ ಕ್ರೈಂಗೆ ದೂರು ಕೊಡಲು ಮುಂದಾಗಿದ್ದಾರೆ. ಏಕೆಂದರೆ ಸಹಜವಾಗಿ ಜನ ಟ್ರಾಫಿಕ್ ಇಲಾಖೆಯ ಹೆಸರಲ್ಲಿ ಮೇಲ್ ಮಾಡಿದರೆ ತಕ್ಷಣ ಸ್ಪಂದಿಸುತ್ತಾರೆ.

    ಇದರಿಂದ ಸೈಬರ್ ಕಳ್ಳರ ಸುಳಿಯೊಳಗೆ ಸಿಕ್ಕಿ ಹಾಕಿಕೊಂಡಂತಾಗುತ್ತೆ. ಟ್ರಾಫಿಕ್ ಇಲಾಖೆಯೇ ಸೈಬರ್ ಕಳ್ಳರ ಪಾಲಾದರೂ ಇಲಾಖೆಯೇ ಗಂಭೀರವಾಗಿ ಈ ಪ್ರಕರಣವನ್ನು ತೆಗೆದುಕೊಂಡಿಲ್ಲ. ಜನಸಾಮಾನ್ಯರು ಎಚ್ಚರಿಕೆಯಿಂದ ಇರಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 25 ವರ್ಷಗಳ ಇತಿಹಾಸವಿರುವ ಪ್ಯಾಸೆಂಜರ್ ರೈಲು ಬದಲಾವಣೆ- ನಿತ್ಯ ಪ್ರಯಾಣಿಕರಲ್ಲಿ ಆತಂಕ

    25 ವರ್ಷಗಳ ಇತಿಹಾಸವಿರುವ ಪ್ಯಾಸೆಂಜರ್ ರೈಲು ಬದಲಾವಣೆ- ನಿತ್ಯ ಪ್ರಯಾಣಿಕರಲ್ಲಿ ಆತಂಕ

    ಕೋಲಾರ: ಕೆಜಿಎಫ್ ಜನರ ಜೀವನಾಡಿಯಾಗಿದ್ದ 25 ವರ್ಷಗಳ ಇತಿಹಾಸವಿರುವ ಪ್ಯಾಸೆಂಜರ್ ರೈಲು ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ. ಪ್ಯಾಸೆಂಜರ್ ರೈಲು ಬದಲಾಗಿರುವುದು ನಿತ್ಯ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದು, ಸಾವಿರಾರು ಜನ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    18 ಬೋಗಿಗಳ ಪ್ಯಾಸೆಂಜರ್ ಬದಲಾಗಿ ಪುಶ್ ಫುಲ್ ಲೋಕಲ್ ರೈಲು ಬಿಟ್ಟಿರುವ ಇಲಾಖೆ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ವರ್ಷದ ಹಿಂದೆ ಬೆಂಗಳೂರು ಕೆಎಸ್ ಅರ್ ಮಾರಿಕುಪ್ಪಂ ಪ್ಯಾಸೆಂಜರ್ ರೈಲು ಬದಲಾವಣೆ ಮಾಡದಂತೆ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಕೆಜಿಎಫ್ ಪ್ರಯಾಣಿಕರಿಗೆ ಮತ್ತೆ ಇಲಾಖೆ ಶಾಕ್ ನೀಡಿದೆ.

    ಈ ಹಿಂದೆ ರೈಲು ಬದಲಾಯಿಸದಂತೆ ಕೆಜಿಎಫ್ ಶಾಸಕಿ ರೂಪ ಸೇರಿದಂತೆ ಸಾವಿರಾರು ಪ್ರಯಾಣಿಕರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು, ರೈಲ್ವೇ ಇಲಾಖೆ ಕ್ರಮಕ್ಕೆ ಬಂಗಾರಪೇಟೆ, ಕೆಜಿಎಫ್ ತಾಲೂಕಿನೆಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಮತ್ತೆ ಪ್ಯಾಸೆಂಜರ್ ರೈಲು ಬಿಡಬೇಕೆಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲಿ 24 ಲಕ್ಷ ಉದ್ಯೋಗ ಖಾಲಿ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ? ಇಲ್ಲಿದೆ ಮಾಹಿತಿ

    ದೇಶದಲ್ಲಿ 24 ಲಕ್ಷ ಉದ್ಯೋಗ ಖಾಲಿ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ? ಇಲ್ಲಿದೆ ಮಾಹಿತಿ

    ನವದೆಹಲಿ: ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿಂತೆ ದೇಶಾದ್ಯಂತ ಕುರಿತು ಭಾರೀ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದು, ಇದೇ ವೇಳೆ ಕೇಂದ್ರಾಡಳಿತ ಪ್ರದೇಶ, ಕೇಂದ್ರ, ರಾಜ್ಯ ಸರ್ಕಾರದಲ್ಲಿ ಒಟ್ಟು 24 ಲಕ್ಷ ಉದ್ಯೋಗಗಳು ಖಾಲಿ ಇರುವ ವಿಚಾರ ಬೆಳಕಿಗೆ ಬಂದಿದೆ.

    ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ವಿವಿಧ ದಿನಾಂಕಗಳಲ್ಲಿ ಇಲಾಖೆವಾರು ಉದ್ಯೋಗ ಸೃಷ್ಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಮುಖವಾಗಿ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ನೇಮಕವಾಗಬೇಕಿದೆ. ಇದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ 9 ಲಕ್ಷ ಇದ್ದರೆ, ಸೆಕೆಂಡರಿ ಶಾಲೆಯ 1.1 ಲಕ್ಷ ಹುದ್ದೆ ಖಾಲಿಯಿದೆ.

    ಮಾರ್ಚ್ 27 ರಂದು ಲೋಕಸಭೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಕುರಿತು ಉತ್ತರಿಸಿ, ನಾಗರಿಕ ಜಿಲ್ಲಾ ಸಶಸ್ತ್ರ ಪಡೆಯಲ್ಲಿ 4.4 ಲಕ್ಷ ಹುದ್ದೆಗಳು ಖಾಲಿ ಉಳಿದಿದೆ. ಅಲ್ಲದೇ ರಾಜ್ಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ 90,000 ಹುದ್ದೆಗಳು ಖಾಲಿ ಉಳಿದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ಹುದ್ದೆಗಳನ್ನು ಆಯಾ ರಾಜ್ಯ ಸರ್ಕಾರಗಳು ಭರ್ತಿ ಮಾಡಬೇಕಿದೆ.

    ರಾಜ್ಯ ಸಭೆಯಲ್ಲಿ ಮಾರ್ಚ್ 14 ಹಾಗೂ 19 ಮತ್ತು ಲೋಕಸಭೆಯಲ್ಲಿ ಏಪ್ರಿಲ್ 4 ರಂದು ಕೇಳಲಾದ ಪ್ರಶ್ನೆಯ ವೇಳೆ ರಕ್ಷಣಾ ಕ್ಷೇತ್ರದಲ್ಲಿ 1.2 ಲಕ್ಷ ಹುದ್ದೆಗಳು ಖಾಲಿ ಉಳಿದಿದೆ ಎಂಬ ಅಂಕಿ ಅಂಶಗಳನ್ನ ನೀಡಲಾಗಿದೆ. ದೇಶದ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗವಕಾಶ ನೀಡಿರುವ ರೈಲ್ವೇ ಇಲಾಖೆ ಕುರಿತು ಮಾರ್ಚ್ 16 ರಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನ್ ಗೆಜೆಟೆಡ್ ಹುದ್ದೆಗಳು 2.5 ಲಕ್ಷ ಹುದ್ದೆ ಖಾಲಿ ಉಳಿದಿದೆ ಎಂಬ ವರದಿ ಸಲ್ಲಿಕೆಯಾಗಿದೆ. ಇದೇ ವೇಳೆ ನೀಡಲಾದ ಮಾಹಿತಿಯಲ್ಲಿ ಫೆಬ್ರವರಿ ವೇಳೆಗೆ 89,000 ಹುದ್ದೆಗಳ ನೇಮಕಾತಿಗೆ ಆದೇಶ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

    ಪೋಸ್ಟಲ್ ಇಲಾಖೆಯಲ್ಲಿ ಮಾರ್ಚ್ 28 ರಂದು ಸದನಕ್ಕೆ ನೀಡಿರುವ ಮಾಹಿತಿ ಅನ್ವಯ 54 ಸಾವಿರ ಹುದ್ದೆಗಳು ಖಾಲಿ ಇದೆ. ಇನ್ನು ರಾಜ್ಯಸಭೆಯಲ್ಲಿ ಫೆ.6 ರಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಆರೋಗ್ಯ ಇಲಾಖೆಯಲ್ಲಿ 1.5 ಲಕ್ಷ ಹುದ್ದೆ ಖಾಲಿ ಇದ್ದು, ಪ್ರಮುಖವಾಗಿ 16 ಸಾವಿರ ವೈದ್ಯರ ನೇಮಕವಾಗಬೇಕಿದೆ.

    ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ?
    ಶಿಕ್ಷಣ ಕ್ಷೇತ್ರ – 10.1 ಲಕ್ಷ
    ಪೊಲೀಸ್ ಇಲಾಖೆ – 5.4 ಲಕ್ಷ
    ರೈಲ್ವೇ ಇಲಾಖೆ – 2.4 ಲಕ್ಷ
    ಅಂಗನವಾಡಿ – 2.2 ಲಕ್ಷ
    ಆರೋಗ್ಯ ಇಲಾಖೆ – 1.5 ಲಕ್ಷ
    ಸಶಸ್ತ್ರ ಮೀಸಲು ಪಡೆ – 62,084
    ಪ್ಯಾರಾ ಮಿಲಿಟರಿ ಪಡೆ – 61,509
    ಪೋಸ್ಟಲ್ ಇಲಾಖೆ – 54,263
    ಏಮ್ಸ್ – 21,740
    ಉನ್ನತ ಶಿಕ್ಷಣ ಸಂಸ್ಥೆ – 12,020
    ನ್ಯಾಯಾಲಯ – 5,853

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!

    ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!

    ಬೆಂಗಳೂರು: ಡೊಳ್ಳು ಹೊಟ್ಟೆ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಮಹಿಳಾ ಪೊಲೀಸರ ಯೂನಿಫಾರ್ಮ್ ನಲ್ಲಿ ಬದಲಾವಣೆ ತರಲು ಇಲಾಖೆ ನಿರ್ಧರಿಸಿದೆ.

    ಖಾಕಿ ಸೀರೆ, ಖಾಕಿ ಸಲ್ವಾರ್ ಸೇರಿದಂತೆ ವೆರೈಟಿ ಯೂನಿಫಾರ್ಮ್ ಗೆ ಬ್ರೇಕ್ ಹಾಕಿ, ಪುರಷ ಪೊಲೀಸರ ರೀತಿಯಲ್ಲೆ ಒಂದೇ ಯೂನಿಫಾರ್ಮ್ ಧರಿಸಬೇಕು. ಕೆಎಸ್‍ಆರ್ ಪಿ ಮಹಿಳಾ ಪೊಲೀಸರು ನಾಲ್ಕು ರೀತಿಯ ಯೂನಿಫಾರ್ಮ್ ಧರಿಸುತ್ತಿದ್ದಾರೆ.

    ಮಹಿಳಾ ಪೊಲೀಸ್ ಪೇದೆಗಳಿಗೂ ಫಿಟ್ನೆಸ್ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಅಂತ ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

    ಡೊಳ್ಳು ಹೊಟ್ಟೆ ಪೊಲೀಸರಿಂದ ಪೊಲೀಸ್ ಇಲಾಖೆಗೆ ಮುಜುಗರವಾಗುತ್ತಿದೆ. ಹೀಗಾಗಿ ಡೊಳ್ಳು ಹೊಟ್ಟೆ ಇರುವ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಕಮಾಂಡೇಟ್ ಗಳದ್ದಾಗಿದೆ. ರಾಜ್ಯದಲ್ಲಿ ಕೆಎಸ್‍ಆರ್ ಪಿ 12 ಪಡೆಗಳಿವೆ. ಈ 12 ಪಡೆಗಳಲ್ಲಿರುವ ಡೊಳ್ಳು ಹೊಟ್ಟೆ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾ ಕಾಮಾಂಡೇಟ್‍ಗಳದ್ದು ಎಂದು ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಸುತ್ತೊಲೆ ಹೊರಡಿಸಿದ್ದಾರೆ. ಜುಲೈ 3ರಂದು ಭಾಸ್ಕರ್ ರಾವ್ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.

  • ಡೊಳ್ಳು ಹೊಟ್ಟೆ ಬೆಳೆಸಿಕೊಂಡಿರುವ ಪೊಲೀಸರೇ ಎಚ್ಚರ!

    ಡೊಳ್ಳು ಹೊಟ್ಟೆ ಬೆಳೆಸಿಕೊಂಡಿರುವ ಪೊಲೀಸರೇ ಎಚ್ಚರ!

    ಬೆಂಗಳೂರು: ಪೊಲೀಸರ ಡೊಳ್ಳು ಹೊಟ್ಟೆಯ ಬಗ್ಗೆ ಇಲಾಖೆ ತಲೆಕೆಡಿಸಿಕೊಂಡಿದ್ದು, ಹೊಟ್ಟೆ ಕರಗಿಸಿಕೊಳ್ಳದಿದ್ದರೆ ಶಿಸ್ತು ಕ್ರಮ ಜರಗಿಸಲು ಮುಂದಾಗಿದ್ದಾರೆ.

    ಡೊಳ್ಳು ಹೊಟ್ಟೆ ಪೊಲೀಸರಿಂದ ಪೊಲೀಸ್ ಇಲಾಖೆಗೆ ಮುಜುಗರವಾಗುತ್ತಿದೆ. ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ರಿಂದ ಸುತ್ತೊಲೆ ನೀಡಲಾಗಿದೆ. ಜುಲೈ 3ರಂದು ಕೆಎಸ್‍ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಸುತ್ತೊಲೆ ಹೊರಡಿಸಿದ್ದಾರೆ.

    ಡೊಳ್ಳು ಹೊಟ್ಟೆ ಇರುವ ಪೊಲೀಸರ ಹೊಟ್ಟೆ ಕರಿಗಿಸುವ ಜವಾಬ್ದಾರಿ ಕಮಾಂಡೇಟ್ ಗಳದ್ದಾಗಿದೆ. ರಾಜ್ಯದಲ್ಲಿ ಕೆಎಸ್‍ಆರ್ ಪಿ 12 ಪಡೆಗಳಿವೆ. 12 ಪಡೆಗಳಲ್ಲಿರುವ ಡೊಳ್ಳು ಹೊಟ್ಟೆ ಪೊಲೀಸರ ಹೊಟ್ಟೆ ಕರಿಗಿಸುವ ಜವಾಬ್ದಾರಿ ಆಯಾ ಕಾಮಾಂಡೇಟ್‍ಗಳದ್ದು ಎಂದು ಸುತ್ತೊಲೆ ಹೊರಡಿಸಿದ್ದಾರೆ.

  • ಗುಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ಗುಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ಯಾದಗಿರಿ: ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಂಚಿದ ಪರಿಣಾಮ ಹೊತ್ತಿ ಉರಿದ ಘಟನೆ ಜಿಲ್ಲೆಯ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ.

    ಕಿಡಿಗೇಡಿಗಳು ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಗುಡ್ಡದ ಸುತ್ತಲೂ ಬೆಂಕಿ ಆವರಿಸಿದ್ದರಿಂದ ಗುಡ್ಡದ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಬೆಂಕಿ ಬಿದ್ದಿರುವ ವಿಚಾರ ತಿಳಿದಿದೆ. ಇದರಿಂದ ಗಾಬರಿಗೊಂಡು ಅವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಅರಣ್ಯಾ ಇಲಾಖೆ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇಸಿಗೆ ಇರುವ ಹಿನ್ನೆಲೆಯಲ್ಲಿ ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹತ್ತಿರುವುದರಿಂದ ಬೆಂಕಿಯ ಕೆನ್ನಾಲಿಗೆ ಗುಡ್ಡದ ಸುತ್ತಲೂ ವ್ಯಾಪಿಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

    ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಡಗೇರಾ ಪಿಎಸ್‍ಐ ಮಹದೇವಪ್ಪ ದಿಡ್ಡಿಮನಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

  • ವಿಧಾನಸಭೆ ಚುನಾವಣೆ ಗೆಲ್ಲಲು ಸರ್ಕಾರದಿಂದ ಖಾಕಿ ಅಧಿಕಾರ ದುರ್ಬಳಕೆ?

    ವಿಧಾನಸಭೆ ಚುನಾವಣೆ ಗೆಲ್ಲಲು ಸರ್ಕಾರದಿಂದ ಖಾಕಿ ಅಧಿಕಾರ ದುರ್ಬಳಕೆ?

    ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ಬ್ರೇಕ್ ಹಾಕಲು ಮೊದಲ ದಿನವೇ ಐಪಿಎಸ್ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಪೊಲೀಸರಿಗೆ ಮತ್ತೊಂದು ಕೆಲಸ ನೀಡಿದ್ದಾರೆ ಎನ್ನುವ ವಿಚಾರ ಲಭ್ಯವಾಗಿದೆ.

    ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಲೀಡರ್‍ಗಳನ್ನು ಫಾಲೋ ಮಾಡಿ ಡೀಟೈಲ್ಸ್ ಕೊಡಿ ಎಂದು ಪೊಲೀಸರಿಗೆ ಮೌಖಿಕ ಸೂಚನೆ ನೀಡಲಾಗಿದೆ. ಏರಿಯಾದ ನಾಯಕ ಯಾರು, ಅವರ ಸಾಮರ್ಥ್ಯ ಏನು? ಎಷ್ಟು ಜನ ಅಭಿಮಾನಿಗಳು ಇದ್ದಾರೆ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದ್ದಾರೆ ಎನ್ನವ ವಿಚಾರ ಮೂಲಗಳಿಂದ ಸಿಕ್ಕಿದೆ.

    ಇಷ್ಟೇ ಅಲ್ಲದೇ ನಾಯಕ ಮೊಬೈಲ್ ಫೋನ್ ನಂಬರ್‍ಗಳನ್ನು ಸಂಗ್ರಹ ಮಾಡಿ, ಎಷ್ಟು ಹಣ ಕೊಟ್ಟರೆ ಅವರು ಪಕ್ಷಾಂತರ ಮಾಡುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.

    ಸಿಎಂ ಸಿದ್ದರಾಮಯ್ಯ ನವೆಂಬರ್ 2 ರಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದರು. ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್‍ಪಿ, ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

    ಈ ಸಭೆಯಲ್ಲಿ ಸಿಎಂ ಬರೀ ಪರಿವರ್ತನಾ ರ್ಯಾಲಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಪರಿವರ್ತನಾ ರ್ಯಾಲಿ ಯಾವ ರೀತಿ ನಡೆಯುತ್ತೆ? ಎಲ್ಲೆಲ್ಲಿ ಏನೇನಾಗುತ್ತೆ ಎಂಬುದರ ಬಗ್ಗೆ ಇಂಚಿಚು ಮಾಹಿತಿ ನೀಡಬೇಕು. ಯಾತ್ರೆವೇಳೆ ಎಲ್ಲಿಯಾದರೂ ಉದ್ಧಟತನ ಮಾಡಿದ್ರೆ ಮುಲಾಜಿಲ್ಲದೆ ಅವರ ವಿರುದ್ಧ ಕೇಸ್ ಗಳನ್ನು ಹಾಕಬೇಕು. ಪರಿವರ್ತನಾ ಯಾತ್ರೆಯ ಅಲೆ ಹೇಗಿದೆ? ಅದಕ್ಕೆ ಎಷ್ಟು ಜನ ಸೇರಿದ್ರು, ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

    ಸಾಧ್ಯವಾದರೆ ಪರಿವರ್ತನಾ ಯಾತ್ರೆಗೆ ಅಡ್ಡಗಾಲು ಹಾಕಿ, ಭಯಪಡುವ ಅಗತ್ಯ ಇಲ್ಲ. ಸೂಕ್ಷ ಪ್ರದೇಶಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರು ಯಾರಾದರೂ ಬಂದರೆ ಅವರನ್ನು ತಡೆಯಿರಿ. ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ತಿಳಿದರೆ ತಕ್ಷಣ ನಿಷೇಧಾಜ್ಞೆ ಜಾರಿ ಮಾಡಿ. ನಿಷೇಧಾಜ್ಞೆ ಜಾರಿ ಮಾಡಿದ ಪ್ರದೇಶದಲ್ಲಿ ಯಾತ್ರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.