Tag: denwar

  • ಇದೇನು ಅಪಘಾತ ವಲಯನಾ ಇಲ್ಲ ರೆಸ್ಟೋರೆಂಟಾ?

    ಇದೇನು ಅಪಘಾತ ವಲಯನಾ ಇಲ್ಲ ರೆಸ್ಟೋರೆಂಟಾ?

    ವಾಷಿಂಗ್ಟನ್: ಅಮೆರಿಕದ ಡೆನ್ವರ್ ಪ್ರದೇಶದಲ್ಲಿ ರೆಸ್ಟೋರೆಂಟ್‍ವೊಂದಿದೆ, ಸ್ವತಃ ಮಾಲೀಕನಿಗೆ ನಾನು ರೆಸ್ಟೋರೆಂಟ್ ನಡೆಸುತ್ತಿದ್ದೀನಾ ಎಲ್ಲ ಅಪಘಾತ ವಲಯದಲ್ಲಿದ್ದೀನಾ ಅಂತ ಅರ್ಥವಾಗ್ತಿಲ್ಲ.

    `ದಿ ಹಾರ್ನೆಟ್’ ಎಂದು ಡೆನ್ವರ್ ಪ್ರದೇಶದಲ್ಲೊಂದು ರೆಸ್ಟೋರೆಂಟ್ ಇದೆ. ಈ ರೆಸ್ಟೋರೆಂಟ್ ತಿಂಡಿ-ತಿನಿಸುಗಳಿಗಿಂತ ಅಪಘಾತಕ್ಕೆ ಪ್ರಸಿದ್ಧ. ಹೌದು, ಇಲ್ಲಿ ಮಾಲೀಕ ಗ್ರಾಹಕರಿಂದ ಲಾಭ ಪಡೆದಿದ್ದಕ್ಕಿಂತ ನಷ್ಟ ಅನುಭವಿಸಿದ್ದೇ ಜಾಸ್ತಿಯಂತೆ. ಯಾಕೆಂದರೆ 2018 ಅಂದರೆ ಒಂದೇ ವರ್ಷದಲ್ಲಿ `ದಿ ಹಾರ್ನೆಟ್’ ರೆಸ್ಟೋರೆಂಟ್‍ನಲ್ಲಿ ಸತತ ಮೂರು ಬಾರಿ ಹ್ಯಾಟ್ರಿಕ್ ಕಾರು ಅಪಘಾತವಾಗಿದೆ. ಆದ್ದರಿಂದ ಪ್ರೀತಿಯಿಂದ ಜನರು `ದಿ ಹಾರ್ನೆಟ್’ ಅನ್ನು ಪ್ರಪಂಚದ ಅತ್ಯಂತ ನತದೃಷ್ಟ ರೆಸ್ಟೋರೆಂಟ್ ಎಂದೇ ನಾಮಕರಣ ಮಾಡಿಬಿಟ್ಟಿದ್ದಾರೆ.

    ಇಲ್ಲಿ ವರ್ಷವಿಡೀ ಬರೀ ರೆಸ್ಟೋರೆಂಟ್ ರಿಪೇರಿ ಮಾಡ್ಸೋದೆ ಮಾಲೀಕರ ಕೆಲಸವಾಗಿಬಿಟ್ಟಿದೆ. ಆದ ಎರಡು ಅಪಘಾತದಿಂದ ಆಗತಾನೆ ಹೊರಬಂದಿದ್ದ ಮಾಲೀಕನಿಗೆ ಕಳೆದ ಶನಿವಾರದಂದು ಮತ್ತೊಂದು ಶಾಕ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ, ಕುಡಿದ ನಶೆಯಲ್ಲಿ ವ್ಯಕ್ತಿಯೋರ್ವ ಕಾರನ್ನು ರೆಸ್ಟೋರೆಂಟ್ ಗೆ ಗುದ್ದಿರುವ ಪರಿಣಾಮ ಗೋಡೆ ಕುಸಿದು ಅಪಾರ ಹಾನಿಯಾಗಿದೆ.

    ಈ ಕುರಿತು `ದಿ ಹಾರ್ನೆಟ್’ ರೆಸ್ಟೋರೆಂಟ್ ಮಾಲೀಕ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಅಪಘಾತದಿಂದ ಆದ ನಷ್ಟವನ್ನು ಫೋಟೋ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಆದಷ್ಟು ಬೇಗ ರೆಸ್ಟೋರೆಂಟನ್ನು ಸಿದ್ಧಗೊಳಿಸಿ, ಮತ್ತೆ ಗ್ರಾಹಕರ ಸೇವೆಗೆ ಬಹುಬೇಗ ಬರುತ್ತೇವೆ ಎಂದು ಹೇಳಿದ್ದಾರೆ.

    https://www.instagram.com/p/Bq3QyGClUjR/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv