Tag: dental doctior

  • ಡೆಂಟಲ್ ಡಾಕ್ಟರ್ ಎಡವಟ್ಟು- 3 ಆಪರೇಷನ್‍ಗೆ ಒಳಗಾದ ಯುವಕ

    ಡೆಂಟಲ್ ಡಾಕ್ಟರ್ ಎಡವಟ್ಟು- 3 ಆಪರೇಷನ್‍ಗೆ ಒಳಗಾದ ಯುವಕ

    ಬೆಂಗಳೂರು: ಡೆಂಟಲ್ ಡಾಕ್ಟರ್ ಎಡವಟ್ಟಿನಿಂದ ಯುವಕನೊಬ್ಬ ಮೂರು ಆಪರೇಷನ್‍ಗೆ ಒಳಗಾದ ಘಟನೆ ಬೆಂಗಳೂರಿನ ಹೆಚ್‍ಎಎಲ್ ನಲ್ಲಿ ನಡೆದಿದೆ.

    ವೇಣು(19), ಹಲ್ಲಿನ ಚಿಕಿತ್ಸೆಗೆ ಹೋಗಿ ಮೂರು ಆಪರೇಷನ್ ಗೆ ಒಳಗಾಗಿರುವ ಯುವಕ. ಈತ ಡಿಸೆಂಬರ್ 24 ರಂದು ಹಲ್ಲು ನೋವಿನ ಚಿಕಿತ್ಸೆಗೆಂದು ಕಿಯಾರಾ ಡೆಂಟಲ್ ಕ್ಲಿನಿಕ್‍ಗೆ ತೆರಳಿದ್ದನು. ಈ ವೇಳೆ ಹಲ್ಲಿಗೆ ಡಾ.ಮೋನಿಕಾ ನೀಡಿದ್ದ ಚಿಕಿತ್ಸೆಯಲ್ಲಿ ಎಡವಟ್ಟಾಗಿದೆ. ಹಲ್ಲಿನ ಚಿಕಿತ್ಸೆ ಬಳಿಕ ಯುವಕನ ಗಂಟಲು ಊದಿಕೊಂಡಿದ್ದು, ಆಹಾರ ಸೇವಿಸಲು ಹಾಗೂ ಮಾತಾನಾಡಲು ಆಗದ ಸ್ಥಿತಿ ತಲುಪಿದ್ದಾನೆ.

    ಹೀಗಾಗಿ ವೇಣು ಕೂಡಲೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ. ಸದ್ಯ ವೇಣು ಇದೀಗ ದವಡೆಗೆ 3 ಅಪರೇಶನ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಡಾ.ಮೊನಿಕಾ ನೀಡಿದ ಚಿಕಿತ್ಸೆಯೇ ಇಷ್ಟೆಲ್ಲ ಅವಾಂತರ ಆಗಲು ಕಾರಣ ಅಂತ ವೇಣು ತಂದೆ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಅಲ್ಲದೆ ಡಾಕ್ಟರ್ ವಿರುದ್ಧ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

    ಸದ್ಯ ಏನೋ ಮಾಡಲು ಹೋಗಿ ಮತ್ತೊಂದೇನೊ ಆಯ್ತು ಅನ್ನೋ ಪರಿಸ್ಥಿತಿ ವೇಣು ಕುಟುಂಬಕ್ಕೆ ಬಂದೊದಗಿದೆ.