Tag: dengue

  • ಡೆಂಗ್ಯೂ ಜ್ವರದಿಂದ MBBS ವಿದ್ಯಾರ್ಥಿ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

    ಡೆಂಗ್ಯೂ ಜ್ವರದಿಂದ MBBS ವಿದ್ಯಾರ್ಥಿ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

    – ಮಗ ಮೃತಪಟ್ಟ ಆಸ್ಪತ್ರೆಯಲ್ಲೇ ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿರೋ ತಾಯಿ

    ಹಾಸನ: ಡೆಂಗ್ಯೂ ಜ್ವರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿ (MBBS Student) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹಾಸನ ನಗರದ ಖಾಸಗಿ ಆಸ್ಪತ್ರೆಯಲ್ಲಿ (Hassan Private Hospital) ನಡೆದಿದೆ.

    ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ಗೋಹಳ್ಳಿ ಗ್ರಾಮದ ಕುಶಾಲ್ (22) ಮೃತ ವಿದ್ಯಾರ್ಥಿ. ಕುಶಾಲ್ ಡೆಂಗ್ಯೂ ಮಹಾಮಾರಿಯಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ತಿಳಿದುಬಂದಿದೆ. ಇದನ್ನೂ ಓದಿ:  PublicTV Explainer: ಬಜೆಟ್‌ ಎಂದರೇನು? ಆಯವ್ಯಯದ ಬಗ್ಗೆ ನಿಮಗೆಷ್ಟು ಗೊತ್ತು?

    ಕಳೆದ ಒಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲ್, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ತಡರಾತ್ರಿ ಸಾವನ್ನಪ್ಪಿದ್ದಾನೆ. ಪ್ರತಿಭಾನ್ವಿತ, ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಭವಿಷ್ಯದಲ್ಲಿ ವೈದ್ಯನಾಗಿ ಜನಸೇವೆ ಮಾಡಬೇಕು ಎಂಬ ಹಂಬಲ ಇಟ್ಟುಕೊಂಡಿದ್ದ ಕುಶಾಲ್, ಕಿರಿಯ ವಯಸ್ಸಿನಲ್ಲಿಯೇ ಕಣ್ಮರೆಯಾಗಿರುವುದು ಪೋಷಕರಲ್ಲಿ ಅತೀವ ದುಃಖವನ್ನುಂಟುಮಾಡಿದೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭ – ಸಂಸದ ಬ್ರಿಜೇಶ್‌ ಚೌಟ ಮನವಿಗೆ ತಕ್ಷಣವೇ ಸ್ಪಂದಿಸಿದ ರೈಲ್ವೆ ಇಲಾಖೆ

    ವಿಪರ‍್ಯಾಸವೆಂದರೇ ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ತಾಯಿ ರೇಖಾ ಸಹ ಡೆಂಗ್ಯೂ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದು, ತಂದೆ ಮಂಜುನಾಥ್‌ ಶಿಕ್ಷಕನಾಗಿದ್ದಾರೆ. ತಮ್ಮ ಇತಿಮಿತಿಯ ನಡುವೆಯೂ ಮಗ ಚೆನ್ನಾಗಿ ಓದಿ ವೈದ್ಯನಾಗಲಿ, ಆ ಮೂಲಕ ನೊಂದ ಜನರಿಗೆ ಸೇವೆ‌ ಮಾಡಲಿ ಎಂಬುದು ತಂದೆ ಮಂಜುನಾಥ್‌ ಬಯಕೆಯಾಗಿತ್ತು. ಇದಕ್ಕಾಗಿ ಎಲ್ಲಾ ರೀತಿಯ ಶ್ರಮ ತೆಗೆದುಕೊಂಡಿದ್ದರು. ಆದರೆ ತನ್ನ ಹಾಗೂ ಹೆತ್ತವರ ಆಸೆ ಈಡೇರುವ ಮುನ್ನವೇ ಕುಶಾಲ್ ಮಾರಣಾಂತಿಕ ಕಾಯಿಲೆ ಬಲಿಯಾಗಿದ್ದಾನೆ. ಇದನ್ನೂ ಓದಿ: ರಾಜ್ಯದ ಜಲಾಶಯಗಳಲ್ಲಿ 536 ಟಿಎಂಸಿ ನೀರು ಸಂಗ್ರಹ – ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

  • ರಾಮನಗರದಲ್ಲಿ ಡೆಂಗ್ಯೂಗೆ 19 ವರ್ಷದ ಯುವತಿ ಬಲಿ

    ರಾಮನಗರದಲ್ಲಿ ಡೆಂಗ್ಯೂಗೆ 19 ವರ್ಷದ ಯುವತಿ ಬಲಿ

    ರಾಮನಗರ: ಡೆಂಗ್ಯೂ (Dengue) ಜ್ವರದಿಂದ ಮಾಗಡಿಯ ಕುದೂರು ಪಟ್ಟಣದಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದೆ.

    ಪಟ್ಟಣದ ಮಹಾತ್ಮನಗರ ಬಡಾವಣೆಯ ಸುರೇಶ್ ಹಾಗೂ ನಳಿನ ದಂಪತಿಯ ಪುತ್ರಿ ಹೇಮಾ (19) ಮೃತ ಯುವತಿ. ಪ್ರಥಮ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಳು. ಇದರ ಜೊತೆಗೆ ಕಳೆದ 15 ದಿನಗಳಿಂದ ಡೆಂಗ್ಯೂವಿನಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಧಾರವಾಡದಲ್ಲಿ ಶಂಕಿತ ಡೆಂಗ್ಯೂಗೆ 5 ತಿಂಗಳ ಮಗು ಬಲಿ

    ಡೆಂಗ್ಯೂನಿಂದ ಯುವತಿ ಸಾವನ್ನಪ್ಪಿದ ಹಿನ್ನೆಲೆ ಕುದೂರಿಗೆ ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಸಿ, ಸೊಳ್ಳೆ ಉತ್ಪತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ: ಅಫ್ಜಲ್‌ ಖಾನ್‌ ಕೊಲ್ಲಲು ಛತ್ರಪತಿ ಶಿವಾಜಿ ಬಳಿಸಿದ್ದ ‘ವಾಘ್‌ ನಖ್‌’ ಅಸ್ತ್ರ ಜು.19ಕ್ಕೆ ಲಂಡನ್‌ನಿಂದ ಭಾರತಕ್ಕೆ

  • ಚಿಕ್ಕಬಳ್ಳಾಪುರದಲ್ಲಿ ಶಂಕಿತ ಡೆಂಗ್ಯೂಗೆ 18 ವರ್ಷದ ಯುವತಿ ಬಲಿ

    ಚಿಕ್ಕಬಳ್ಳಾಪುರದಲ್ಲಿ ಶಂಕಿತ ಡೆಂಗ್ಯೂಗೆ 18 ವರ್ಷದ ಯುವತಿ ಬಲಿ

    ಚಿಕ್ಕಬಳ್ಳಾಪುರ: ಶಂಕಿತ ಡೆಂಗ್ಯೂಗೆ (Suspected Dengue) 18 ವರ್ಷದ ಯುವತಿ (Young Woman) ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ನಡೆದಿದೆ.

    ಯಶಸ್ವಿನಿ (18) ಮೃತ ಯುವತಿ. ಕಳೆದ ಒಂದು ವಾರದಿಂದ ತೀವ್ರತರನಾದ ಜ್ವರದಿಂದ ಬಳಲುತ್ತಿದ್ದ ಯಶಸ್ವಿನಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯಶಸ್ವಿನಿ ಮೃತಪಟ್ಟಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ 95% ಅಂಕ ಗಳಿಸಿದ್ದ ಯಶಸ್ವಿನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇದನ್ನೂ ಓದಿ: ರಾಮನಗರ ಹೆಸರು ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ಇಲ್ಲ, ಹಾಸನದವರ ವಿರೋಧ ಇದೆ: ಹೆಚ್‌ಸಿ ಬಾಲಕೃಷ್ಣ

    ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 400ಕ್ಕೂ ಹೆಚ್ಚು ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ 437 ಡೆಂಗ್ಯೂ ಕೇಸ್ ದಾಖಲಾಗಿತ್ತು. ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಕೇಸ್ 8,658ಕ್ಕೆ ಏರಿಕೆಯಾಗಿದೆ. ಶುಕ್ರವಾರದವರೆಗೆ ಡೆಂಗ್ಯೂಗೆ ಏಳು ಜನರು ಬಲಿಯಾಗಿದ್ದು, ಇದು ಎಂಟನೇ ಬಲಿಯಾಗಿದೆ. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್‌ ಮಾಡಿದ್ರು: ಹೆಚ್‌ಡಿಕೆ‌ ಕಿಡಿ

  • 2 ತಿಂಗಳಿಂದ ಊರ ಮಂದಿಗೆ ಒಂದೇ ಕಾಯಿಲೆ; ಆಸ್ಪತ್ರೆಗೆ ತೋರಿಸಿದರೂ ಪ್ರಯೋಜನವಿಲ್ಲ – ಚಿಕ್ಕಮಗಳೂರಿನ ಗ್ರಾಮದಲ್ಲಿ ಆತಂಕ

    2 ತಿಂಗಳಿಂದ ಊರ ಮಂದಿಗೆ ಒಂದೇ ಕಾಯಿಲೆ; ಆಸ್ಪತ್ರೆಗೆ ತೋರಿಸಿದರೂ ಪ್ರಯೋಜನವಿಲ್ಲ – ಚಿಕ್ಕಮಗಳೂರಿನ ಗ್ರಾಮದಲ್ಲಿ ಆತಂಕ

    ಚಿಕ್ಕಮಗಳೂರು: ತಾಲೂಕಿನ ಬಯಲು ಸೀಮೆಯ ದೇವರಗೊಂಡನಹಳ್ಳಿ ಗ್ರಾಮದ ಜನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. 1500 ಕ್ಕೂ ಹೆಚ್ಚು ಮಂದಿಯಿರುವ ಗ್ರಾಮದಲ್ಲಿ 800 ಕ್ಕೂ ಅಧಿಕ ಜನರು ಒಂದೇ ಕಾಯಿಲೆಯಿಂದ ನರಳುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಒಂದೇ ಒಂದು ಡೆಂಗ್ಯೂ (Dengue) ಅಥವಾ ಇತರೆ ಮಾರಕ ಕಾಯಿಲೆ ದೃಢಪಟ್ಟಿಲ್ಲದಿರುವುದು ಅಚ್ಚರಿ ಮೂಡಿಸಿದೆ.

    ಎರಡು ತಿಂಗಳ ಹಿಂದೆ ಗ್ರಾಮದ ಕೆಲವರಲ್ಲಿ ಕಾಣಿಸಿಕೊಂಡ ಜ್ವರ, ಮೈ-ಕೈ ನೋವು, ಮಂಡಿನೋವು, ಮೈತುರಿಕೆ ಇಡೀ ಗ್ರಾಮಕ್ಕೆ ಆವರಿಸಿದೆ. ಒಂದೊಂದು ಮನೆಯಲ್ಲಿ ಇಬ್ಬರು ರೋಗಿಗಳು ನರಳುತ್ತಿದ್ದಾರೆ. ಮನೆಗೊಬ್ಬರಂತೆ ದಿನಕ್ಕೊಬ್ಬರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್

    ನಿಗೂಢ ಜ್ವರಕ್ಕೆ ಒಬ್ಬೊಬ್ಬರು 15 ಸಾವಿರ ಹಣ ಖರ್ಚು ಮಾಡಿದ್ದಾರೆ. ಆದರೆ ಕಾಯಿಲೆ ಯಾವುದು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಅಲ್ಲದೇ ಯಾರಲ್ಲಿಯೂ ಡೆಂಗ್ಯೂ ಆಗಲಿ, ಚಿಕನ್‌ಗುನ್ಯಾ ಆಗಲಿ ಕಾಣಿಸಿಕೊಂಡಿಲ್ಲ. ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈಗಾಗಲೇ ಖಾಸಗಿ ಹಾಗೂ ಸರ್ಕಾರಿ ಅಸ್ಪತ್ರೆಗೆ ಅಲೆದು ಅಲೆದು ಗ್ರಾಮದ ಜನ ಸುಸ್ತಾಗಿದ್ದಾರೆ. ಮೊದಲು ಜ್ವರ ಬಳಿಕ ಮೈ-ಕೈ ನೋವು, ತುರಿಕೆ-ಉರಿ ಬಾಧಿಸುತ್ತಿದೆ. ಆದರೆ ಮೆಡಿಸನ್ ತೆಗೆದುಕೊಂಡರೂ ಸಾಂಕ್ರಾಮಿಕ ರೋಗದಿಂದ ಮುಕ್ತಿ ಸಿಕ್ಕಿಲ್ಲ.

    ಪ್ರಕರಣ ತಿಳಿದ ಕೂಡಲೇ ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಊರಿನ ಮನೆಯಲ್ಲಿ ಇದ್ದ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅದರಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಬರುವಂತಹ ಸೊಳ್ಳೆಗಳ ಮಾದರಿ ಕೂಡ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಲಾರ್ವ ಕೊಂಡೊಯ್ದಿದ್ದಾರೆ. ಅದರ ವರದಿ ಏನು ಬರುತ್ತೋ ಎಂದು ಹಳ್ಳಿಗರು ಅತಂತ್ರಕ್ಕೀಡಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಪರಿಷತ್ ಸದಸ್ಯ ಸಿ.ಟಿ.ರವಿ ಜಿಲ್ಲಾಡಳಿತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ

    ದೇವಗೊಂಡನಹಳ್ಳಿಯ ಜನರ ಜ್ವರ, ಮೈ-ಕೈ ನೋವು, ಮಂಡಿನೋವಿಗೆ ಕಾರಣವೇನು ಎಂಬುದೇ ಗೊತ್ತಾಗುತ್ತಿಲ್ಲ. ಊರಿಗೆ ಊರೇ ಮಲಗಿದರೂ ಯಾರಿಗೂ ಡೆಂಗ್ಯೂ, ಚಿಕನ್‌ಗುನ್ಯಾ ಪಾಸಿಟಿವ್ ಬಂದಿಲ್ಲ. ಇದು ಜನರ ಆತಂಕಕ್ಕೆ ಕಾರಣವಾಗಿದೆ.

  • ರಾಜ್ಯದಲ್ಲಿ ಡೆಂಗ್ಯೂ ತಾಂಡವ – ಮಹದೇವಪುರ ಟೆಕ್ ಹಬ್‍ನಲ್ಲಿ ಹೆಚ್ಚಿದ ಕೇಸ್

    ರಾಜ್ಯದಲ್ಲಿ ಡೆಂಗ್ಯೂ ತಾಂಡವ – ಮಹದೇವಪುರ ಟೆಕ್ ಹಬ್‍ನಲ್ಲಿ ಹೆಚ್ಚಿದ ಕೇಸ್

    ಬೆಂಗಳೂರು: ಮಹದೇವಪುರದ ಟೆಕ್ ಹಬ್‍ನಲ್ಲಿ ಡೆಂಗ್ಯೂ (Dengue) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ (Bengaluru) ವರದಿಯಾಗುತ್ತಿರುವ ಪ್ರತಿ 4 ಡೆಂಗ್ಯೂ ಪ್ರಕರಣಗಳಲ್ಲಿ 1 ಪ್ರಕರಣ ಮಹದೇವಪುರ ವಲಯದ್ದಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಬಿಬಿಎಂಪಿ (BBMP) ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಮಂಗಳವಾರದವರೆಗೆ 4,194 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹದೇವಪುರ ವಲಯದಲ್ಲಿ 1,126 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹದೇವಪುರ ಮೊದಲನೇ ಸ್ಥಾನದಲ್ಲಿದೆ. ಇನ್ನೂ 970 ಕೇಸ್ ವರದಿಯಾಗುವ ಮೂಲಕ ಪೂರ್ವ ವಲಯ 2ನೇ ಸ್ಥಾನದಲ್ಲಿದೆ.

    ಬೊಮ್ಮನಹಳ್ಳಿ ವಲಯದಲ್ಲಿ ಕಳೆದ 9 ದಿನಗಳಲ್ಲಿ ಒಟ್ಟು 256 ಪ್ರಕರಣ ವರದಿಯಾಗಿದೆ. ವರ್ತೂರು, ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ, ಬೆಳ್ಳಂದೂರು, ಕೆಆರ್‍ಪುರ, ಜೋಗುಪಾಳ್ಯ ಹಾಗೂ ಈಜಿಪುರ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

    ರಾಜ್ಯದಲ್ಲಿ ಬುಧವಾರ 293 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 118 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,840ಕ್ಕೆ ಏರಿಕೆ ಕಂಡಿದೆ. ಇದುವರೆಗೂ ಡೆಂಗ್ಯೂಗೆ 07 ಜನರು ಬಲಿಯಾಗಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯ ವಲಯವಾರು ಪ್ರಕರಣ

    ಮಹಾದೇವಪುರ – 1126
    ದಕ್ಷಿಣ ವಲಯ – 522
    ಪೂರ್ವ ವಲಯ – 970
    ಪಶ್ಚಿಮ ವಲಯ – 388
    ಯಲಹಂಕ – 258
    ಆರ್‍ಆರ್ ನಗರ – 311
    ದಾಸರಹಳ್ಳಿ – 43
    ಬೊಮ್ಮನಹಳ್ಳಿ – 576
    ಒಟ್ಟು – 4194

  • ಶಿವಮೊಗ್ಗದಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ಶಿವಮೊಗ್ಗದಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ಶಿವಮೊಗ್ಗ: ಶಂಕಿತ ಡೆಂಗ್ಯೂಗೆ (Suspected Dengue) ಮಹಿಳೆಯೊಬ್ಬರು ಬಲಿಯಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ (Ripponpet) ನಡೆದಿದೆ.

    ರಶ್ಮಿ ಆರ್.ನಾಯಕ್ (42) ಮೃತ ಮಹಿಳೆ. ಕಳೆದ 15 ದಿನಗಳಿಂದ ರಶ್ಮಿ ತೀವ್ರ ಜ್ವರದಿಂದ ಬಳಲುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಖರ್ಗೆಗೆ ಒಂದು ಕಡೆ ಲ್ಯಾಂಡ್‌ ಅಲಾಟ್‌ ಆಗಿದೆಯಂತೆ: ರಮೇಶ್‌ ಜಿಗಜಿಣಗಿ ಹೊಸ ಬಾಂಬ್‌

    ಇಂದು ಚಿಕಿತ್ಸೆ ಫಲಕಾರಿಯಾಗದೇ ರಶ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಸೂರಜ್‌ ರೇವಣ್ಣ ಜಾಮೀನು ಅರ್ಜಿ ವಜಾ

  • Dengue Cases Alert: ರಾಜ್ಯದಲ್ಲಿಂದು 197 ಕೇಸ್‌ ದಾಖಲು – ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆ!

    Dengue Cases Alert: ರಾಜ್ಯದಲ್ಲಿಂದು 197 ಕೇಸ್‌ ದಾಖಲು – ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆ!

    ಬೆಂಗಳೂರು: ಡೆಡ್ಲಿ ಡೆಂಗ್ಯೂ ಪ್ರಕರಣಗಳು (Dengue Cases) ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ (ಜು.8) 197 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆಯಾಗಿದೆ.

    7,362 ಪ್ರಕರಣಗಳಲ್ಲಿ 303 ಸಕ್ರೀಯ ಪ್ರಕರಣಗಳಿವೆ. ಡೆಂಗ್ಯೂ ಜ್ವರಕ್ಕೆ ಸೋಮವಾರವೂ ಓರ್ವ ವ್ಯಕ್ತಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಪೈಕಿ ಹಾಸನದಲ್ಲಿ 2, ಮೈಸೂರು, ಹಾವೇರಿ, ಧಾರವಾಡ, ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ತಲಾ ಒಂದೊಂದು ಮರಣ ಕೇಸ್‌ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ.

    ಏನಿದು ಡೆಂಗ್ಯೂ?
    ಇದೊಂದು ವೈರಸ್.

    ಯಾವುದರಿಂದ ಹರಡುತ್ತೆ?
    ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ (Idis Aegypti Mosquito).

    ಡೆಂಗ್ಯೂ ವೈರಸ್ ಮೂಲ ಯಾವುದು?
    ಡೆಂಗ್ಯೂ ತರಹದ ಕಾಯಿಲೆಯು ಮೊದಲು ಚೀನಾದಲ್ಲಿ ಜಿನ್ ರಾಜವಂಶದಿಂದ (265-420 ಶತಮಾನ) ಬಂದಿದೆ. 17 ನೇ ಶತಮಾನದಲ್ಲಿ ಡೆಂಗ್ಯೂಗೆ ಹೋಲುವ ಸಾಂಕ್ರಾಮಿಕ ರೋಗಗಳು ಸಂಭವಿಸಿದವು ಎಂಬುದಕ್ಕೆ ಪುರಾವೆಗಳಿವೆ.

    ಡೆಂಗ್ಯೂ ರೋಗ ಬರುವುದು ಹೇಗೆ?
    ಸೊಳ್ಳೆ ಕಡಿತದಿಂದ ಡೆಂಗ್ಯೂ ರೋಗ ಬರುತ್ತದೆ. ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ವೈರಸ್ ಸೋಂಕು ಹರಡುತ್ತದೆ.

    ಸೋಂಕಿನ ಪರಿಣಾಮವೇನು?
    ರಕ್ತನಾಳಗಳಿಗೆ ಡೆಂಗ್ಯೂ ವೈರಸ್ ಹಾನಿಯುಂಟು ಮಾಡುತ್ತದೆ. ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಅಂಗಾಂಗ ವೈಫಲ್ಯವಾಗುತ್ತದೆ. ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರಬಹುದು.

    ರೋಗ ಲಕ್ಷಣಗಳೇನು?
    ಜ್ವರ, ತಲೆನೋವು, ವಾಂತಿ, ಕಣ್ಣು ಊದಿಕೊಂಡು ನೋವು ಉಂಟಾಗುವುದು, ಕೈ-ಕಾಲುಗಳಲ್ಲಿ ಸೆಳೆತ, ನೋವು, ಆಯಾಸ.

    ಡೆಂಗ್ಯೂ ತಡೆಗಟ್ಟುವುದು ಹೇಗೆ?
    * ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
    * ನೀರು ಶೇಖರಣೆಯಾಗುವ ಯಾವುದೇ ಪ್ರದೇಶವಿದ್ದರೂ ಶುಚಿಗೊಳಿಸಬೇಕು
    * ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು
    * ಸರಾಗವಾಗಿ ನೀರು ಹರಿಯುವಂತೆ ಚರಂಡಿ, ಮೋರಿಗಳನ್ನು ಸುಸ್ಥಿತಿಯಲ್ಲಿಡಬೇಕು
    * ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
    * ಸೊಳ್ಳೆ ನಿವಾರಕ ಬಳಕೆ ಮಾಡಬೇಕು

    ಚಿಕಿತ್ಸಾ ಕ್ರಮ ಏನು?
    ಆರಂಭಿಕ ಹಂತದಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲೂ ಡೆಂಗ್ಯೂ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ. ಡೆಂಗ್ಯೂ ಜ್ವರ ತೀವ್ರಮಟ್ಟದಲ್ಲಿದ್ದರೆ, ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ.

  • ರಾಜ್ಯದಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿ – ಡೆಂಗ್ಯೂ ನಡುವೆ ಹೆಚ್ಚಾಯ್ತು ಟೆನ್ಷನ್!

    ರಾಜ್ಯದಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿ – ಡೆಂಗ್ಯೂ ನಡುವೆ ಹೆಚ್ಚಾಯ್ತು ಟೆನ್ಷನ್!

    ಹಾವೇರಿ: ಸದ್ಯ ಡೆಡ್ಲಿ ಡೆಂಗ್ಯೂ (Dengue) ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹೊತ್ತಿನಲ್ಲೇ ಇಲಿ ಜ್ವರದಿಂದ (Rat Fever) ಹಾವೇರಿಯ (Haveri) ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇದು ಇಲಿಜ್ವರಕ್ಕೆ ರಾಜ್ಯದಲ್ಲಿ ಸಂಭವಿಸಿದ ಮೊದಲ ಬಲಿಯಾಗಿದೆ.

    ಹಾವೇರಿ ಜಿಲ್ಲೆಯ ಹಾನಗಲ್ (Hangal) ತಾಲೂಕಿನ ಅರಳೇಶ್ವರ ಗ್ರಾಮದ ವೃದ್ಧ ಉಮೇಶ್ (72) ಇಲಿಜ್ವರದಿಂದ ಸಾವನ್ನಪ್ಪಿದ್ದಾರೆ. 15 ದಿನಗಳಿಂದ ಹಾವೇರಿ, ಮಂಗಳೂರು ಸೇರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳೂರಿನಲ್ಲಿ ರಕ್ತ ಪರೀಕ್ಷೆ ಬಳಿಕ ಇಲಿ ಜ್ವರ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: 20 ವರ್ಷದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ: ಡಾ.ಕೆ.ಸುಧಾಕರ್

    ವೃದ್ಧ ಕಿಡ್ನಿ ವೈಫಲ್ಯದೊಂದಿಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 2 ದಿನ ಚಿಕಿತ್ಸೆ ಪಡೆದ ನಂತರ ವೃದ್ಧ ಮೃತಪಟ್ಟಿದ್ದಾರೆ. ಇದರಿಂದ ಹಾವೇರಿ ಜಿಲ್ಲೆ ಜನರಲ್ಲಿ ಆತಂಕ ಮನೆಮಾಡಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – ಕಾಜಿರಂಗ ಪಾರ್ಕ್‍ನಲ್ಲಿ 131 ವನ್ಯಜೀವಿಗಳು ಸಾವು

    12 ವರ್ಷದ ಬಾಲಕನಲ್ಲಿ ಮೊದಲ ಕೇಸ್ ಪತ್ತೆ:
    ಕಳೆದ ಒಂದು ದಿನದ ಹಿಂದೆಯಷ್ಟೇ ಹಾವೇರಿಯಲ್ಲಿ ಇಲಿ ಜ್ವರ ಪತ್ತೆಯಾಗಿತ್ತು. ಹಾವೇರಿ ಜಿಲ್ಲೆಯ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಕಾಣಿಸಿಕೊಂಡಿತ್ತು. ಬಾಲಕನಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಜ್ವರ ಕಾಣಿಸಿಕೊಂಡ ಹಿನ್ನಲೆ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಬಾಲಕನಿಗೆ ಜಾಂಡೀಸ್ ಕಾಣಿಸಿಕೊಂಡಿತ್ತು. ಬಳಿಕ ರೋಗ ಗುಣಮುಖಗೊಂಡ ಹಿನ್ನೆಲೆ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದ. ಮತ್ತೆ ಬಾಲಕನಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಇಲಿ ಜ್ವರ ಇರುವುದು ಪತ್ತೆಯಾಗಿತ್ತು. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಕೆನ್ನೆಗೆ ಬಾರಿಸಬೇಕು: ಭರತ್‌ ಶೆಟ್ಟಿ ಕೆಂಡಾಮಂಡಲ

  • ಬೆಂಗಳೂರಿನ ಎಂಆರ್ ಲೇಔಟ್‍ನಲ್ಲಿ ಸೊಳ್ಳೆಗಳ ಹಾವಳಿ- ಡೆಂಗ್ಯೂ ಭೀತಿ

    ಬೆಂಗಳೂರಿನ ಎಂಆರ್ ಲೇಔಟ್‍ನಲ್ಲಿ ಸೊಳ್ಳೆಗಳ ಹಾವಳಿ- ಡೆಂಗ್ಯೂ ಭೀತಿ

    ಬೆಂಗಳೂರು: ಯಶವಂತಪುರ ಕ್ಷೇತ್ರದ ಎಂಆರ್ ಲೇಔಟ್ ನಿವಾಸಿಗಳಿಗೆ ಡೆಂಗ್ಯೂ (Dengue Fever) ಭೀತಿ ಶುರುವಾಗಿದೆ. ಮನೆಗಳ ಮುಂದೆಯೇ ಕಸ ಬಿದ್ದಿದ್ದು, ವಿಲೇವಾರಿ ಮಾಡದ ಪಾಲಿಕೆಯ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.

    ಬೆಂಗಳೂರಿನಲ್ಲಿ ಡೆಂಗ್ಯೂ ದಿನೇದಿನೇ ಆತಂಕ ಸೃಸ್ಟಿಸ್ತಿದೆ. ಬಿಬಿಎಂಪಿ ಕಮಿಷನರ್ ನಾನಾ ಕಸರತ್ತು ನಡೆಸುತ್ತಿದ್ರೂ ನಿಯಂತ್ರಣಕ್ಕೆ ಸಿಗ್ತಿಲ್ಲ. ಇದೇ ಡೆಂಗ್ಯೂ ಭೀತಿಯಿಂದ ಯಶವಂತಪುರ ಕ್ಷೇತ್ರದ ಎಂಆರ್ ಲೇಔಟ್ ನಿವಾಸಿಗಳು ಅಕ್ಷರಶಃ ಭಯಭೀತಗೊಂಡಿದ್ದಾರೆ. ಫುಟ್‍ಪಾತ್ ಮೇಲಿನ ಕಸ ವಿಲೇವಾರಿ ಮಾಡದೇ ಇರೋದ್ರಿಂದ ಸೊಳ್ಳೆಗಳು ಕಾಟ ವಿಪರೀತವಾಗಿವೆ. ಹೀಗಾಗಿ ಜನ ತಮ್ಮ ಮನೆಗಳ ಕಿಟಕಿ, ಬಾಗಿಲು ಕ್ಲೋಸ್ ಮಾಡಿಕೊಂಡೇ ವಾಸ ಮಾಡುತ್ತಿದ್ದಾರೆ.

    ಕಳೆದೊಂದು ವಾರದಿಂದ ಎಂಆರ್ ಲೇಔಟ್ ಜನರಲ್ಲಿ ಜ್ವರ ಕಾಣಿಸಿಕೊಳ್ತಿದೆ. ಕಸ ವಿಲೇವಾರಿ ಮಾಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಆರೋಗ್ಯ ಹದಗೆಟ್ಟು ಕಾಯಿಲೆಗಳು ಬಂದ್ರೆ ನಮಗೆ ಯಾರು ಗತಿ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೊಳಲ್ಕೆರೆಯ ದೀಪಿಕಾಳ ಸಿಎ ಕನಸಿಗೆ ಪಬ್ಲಿಕ್ ಬೆಳಕು- ವಿದ್ಯಾರ್ಥಿನಿಗೆ ಸಿಕ್ತು ಆರ್ಥಿಕ ನೆರವು

    ಇತ್ತ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಇಲ್ಲದಿದ್ರೆ ದಂಡ ಹಾಕ್ತೀವಿ ಅಂತ ಕಮಿಷನರ್ ಸೂಚನೆ ನೀಡಿದ್ದಾರೆ. ಆದ್ರೆ ಪಾಲಿಕೆಯ ಕೆಲ ಸಿಬ್ಬಂದಿಯೇ ಆಯಾ ಏರಿಯಾಗಳಲ್ಲಿ ಕಸ ವಿಲೇವಾರಿ ಮಾಡಿಸ್ತಿಲ್ಲ. ಅದೇನೆ ಆಗ್ಲಿ ಅನಾರೋಗ್ಯ ಸೃಷ್ಟಿಯಾಗೋ ಮುನ್ನವೇ ಏರಿಯಾ ಜನರ ಆರೋಗ್ಯ ಕಾಪಾಡಬೇಕಿದೆ.

  • ಡೆಂಗ್ಯೂಗೆ ಮೈಸೂರಿನಲ್ಲಿ 2ನೇ ಬಲಿ – ಸೋಂಕಿಗೆ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಸಾವು

    ಡೆಂಗ್ಯೂಗೆ ಮೈಸೂರಿನಲ್ಲಿ 2ನೇ ಬಲಿ – ಸೋಂಕಿಗೆ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಸಾವು

    ಮೈಸೂರು: ರಾಜ್ಯದಲ್ಲಿ ಡೆಂಗ್ಯೂ (Dengue) ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಮೈಸೂರು (Mysuru) ಜಿಲ್ಲೆಯಲ್ಲಿ ಡೆಂಗ್ಯೂ ಸೋಂಕಿಗೆ ಎರಡನೇ ಬಲಿಯಾಗಿರುವುದು ಆತಂಕ ಮೂಡಿಸಿದೆ.

    ಜಯದೇವ ಹೃದ್ರೋಗ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಲಲಿತಾ ಎಂಬವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸರ್ಕಾರ ಡೆಂಗ್ಯೂ ಎಮರ್ಜೆನ್ಸಿ ಘೋಷಣೆ ಮಾಡಲಿ: ಆರ್.ಅಶೋಕ್ ಆಗ್ರಹ

    ಡೆಂಗ್ಯೂ ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಸದ್ಯ 35 ಮಂದಿ ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ ಡೆಂಗ್ಯೂನಿಂದ ಸಾವಿಗೀಡಾಗಿದ್ದರು.

    ರಾಜ್ಯದಲ್ಲಿ ಒಟ್ಟು 301 ಡೆಂಗ್ಯೂ ಸಕ್ರಿಯ ಪ್ರಕರಣಗಳಿವೆ. ಇಂದು ಒಂದೇ ದಿನ 159 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿಗೆ ಇಂದು ಮೈಸೂರಿನ ಒಬ್ಬರು ಸೇರಿ ಇಬ್ಬರು ಬಲಿಯಾಗಿದ್ದಾರೆ. ಈವರೆಗೆ ಪ್ರಕರಣಗಳ ಸಂಖ್ಯೆ 7,165 ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಸಂಖ್ಯೆ 6 ಕ್ಕೆ ಏರಿದೆ. ಇದನ್ನೂ ಓದಿ: ಮುಡಾ ಪ್ರಕರಣ ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಲಿ: ಬೊಮ್ಮಾಯಿ