ಬೆಂಗಳೂರು: ಡೆಡ್ಲಿ ಡೆಂಗ್ಯೂ ಪ್ರಕರಣಗಳು (Dengue Cases) ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ (ಜು.8) 197 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆಯಾಗಿದೆ.
7,362 ಪ್ರಕರಣಗಳಲ್ಲಿ 303 ಸಕ್ರೀಯ ಪ್ರಕರಣಗಳಿವೆ. ಡೆಂಗ್ಯೂ ಜ್ವರಕ್ಕೆ ಸೋಮವಾರವೂ ಓರ್ವ ವ್ಯಕ್ತಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಪೈಕಿ ಹಾಸನದಲ್ಲಿ 2, ಮೈಸೂರು, ಹಾವೇರಿ, ಧಾರವಾಡ, ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ತಲಾ ಒಂದೊಂದು ಮರಣ ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ.
ಏನಿದು ಡೆಂಗ್ಯೂ?
ಇದೊಂದು ವೈರಸ್.
ಯಾವುದರಿಂದ ಹರಡುತ್ತೆ?
ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ (Idis Aegypti Mosquito).
ಡೆಂಗ್ಯೂ ವೈರಸ್ ಮೂಲ ಯಾವುದು?
ಡೆಂಗ್ಯೂ ತರಹದ ಕಾಯಿಲೆಯು ಮೊದಲು ಚೀನಾದಲ್ಲಿ ಜಿನ್ ರಾಜವಂಶದಿಂದ (265-420 ಶತಮಾನ) ಬಂದಿದೆ. 17 ನೇ ಶತಮಾನದಲ್ಲಿ ಡೆಂಗ್ಯೂಗೆ ಹೋಲುವ ಸಾಂಕ್ರಾಮಿಕ ರೋಗಗಳು ಸಂಭವಿಸಿದವು ಎಂಬುದಕ್ಕೆ ಪುರಾವೆಗಳಿವೆ.
ಡೆಂಗ್ಯೂ ರೋಗ ಬರುವುದು ಹೇಗೆ?
ಸೊಳ್ಳೆ ಕಡಿತದಿಂದ ಡೆಂಗ್ಯೂ ರೋಗ ಬರುತ್ತದೆ. ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ವೈರಸ್ ಸೋಂಕು ಹರಡುತ್ತದೆ.
ಸೋಂಕಿನ ಪರಿಣಾಮವೇನು?
ರಕ್ತನಾಳಗಳಿಗೆ ಡೆಂಗ್ಯೂ ವೈರಸ್ ಹಾನಿಯುಂಟು ಮಾಡುತ್ತದೆ. ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಅಂಗಾಂಗ ವೈಫಲ್ಯವಾಗುತ್ತದೆ. ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರಬಹುದು.
ರೋಗ ಲಕ್ಷಣಗಳೇನು?
ಜ್ವರ, ತಲೆನೋವು, ವಾಂತಿ, ಕಣ್ಣು ಊದಿಕೊಂಡು ನೋವು ಉಂಟಾಗುವುದು, ಕೈ-ಕಾಲುಗಳಲ್ಲಿ ಸೆಳೆತ, ನೋವು, ಆಯಾಸ.
ಡೆಂಗ್ಯೂ ತಡೆಗಟ್ಟುವುದು ಹೇಗೆ?
* ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
* ನೀರು ಶೇಖರಣೆಯಾಗುವ ಯಾವುದೇ ಪ್ರದೇಶವಿದ್ದರೂ ಶುಚಿಗೊಳಿಸಬೇಕು
* ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು
* ಸರಾಗವಾಗಿ ನೀರು ಹರಿಯುವಂತೆ ಚರಂಡಿ, ಮೋರಿಗಳನ್ನು ಸುಸ್ಥಿತಿಯಲ್ಲಿಡಬೇಕು
* ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
* ಸೊಳ್ಳೆ ನಿವಾರಕ ಬಳಕೆ ಮಾಡಬೇಕು
ಚಿಕಿತ್ಸಾ ಕ್ರಮ ಏನು?
ಆರಂಭಿಕ ಹಂತದಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲೂ ಡೆಂಗ್ಯೂ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ. ಡೆಂಗ್ಯೂ ಜ್ವರ ತೀವ್ರಮಟ್ಟದಲ್ಲಿದ್ದರೆ, ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ.
– ಈ ವರ್ಷದಲ್ಲಿ ಬೆಂಗಳೂರಲ್ಲಿ ಮೊದಲ ಸಾವು ವರದಿ – ಕರ್ನಾಟಕದಲ್ಲಿ ಡೆಂಗ್ಯೂ ಪರಿಸ್ಥಿತಿ ಹೇಗಿದೆ?
ಬೇಸಿಗೆಯ ಕೊನೆ ಮತ್ತು ಮಳೆಗಾಲದ ಆರಂಭ ಸೊಳ್ಳೆಗಳ ಸಂತಾನೋತ್ಪತ್ತಿಗೆ ಹೇಳಿಮಾಡಿಸಿದ ಸಮಯ. ನಿಂತ ನೀರಿನ ಜಾಗವೇ ಸೊಳ್ಳೆಗಳಿಗೆ ಮನೆ. ಅಲ್ಲಿ ಮೊಟ್ಟೆ ಹಾಕಿ ಮರಿ ಮಾಡುತ್ತವೆ. ಇನ್ನು ಬದುಕಲು ಹೊಟ್ಟೆಪಾಡು ನಡೆಯಬೇಕಲ್ಲ. ಮನುಷ್ಯರ ಮೇಲೆ ದಾಳಿ ಮಾಡಿ ರಕ್ತ ಹೀರುತ್ತವೆ. ಸುಮ್ಮನೆ ರಕ್ತ ಹೀರಿಕೊಂಡು ಹೋದರೆ ಪರವಾಗಿಲ್ಲ. ಆದರೆ ಅವುಗಳ ಕಡಿತದಿಂದ ಮಾರಕ ಸೋಂಕು ಹರಡುತ್ತಿರುವುದು ಸೊಳ್ಳೆಗಳ ಬಗೆಗೆ ಮನುಷ್ಯನ ಆತಂಕಕ್ಕೆ ಪ್ರಮುಖ ಕಾರಣ.
ಈಗ ಮಳೆಗಾಲ ಆರಂಭವಾಗಿದೆ. ಮುಂಗಾರಿನ ಅಬ್ಬರ ಜೋರಾಗಿದೆ. ಎಲ್ಲೆಡೆ ಸೊಳ್ಳೆಗಳ ಸಂತತಿಯೂ ಹೆಚ್ಚಾಗುತ್ತಿದೆ. ಪರಿಣಾಮವಾಗಿ ಅವುಗಳಿಂದ ಹರಡುವ ಡೆಂಗ್ಯೂ ಪ್ರಕರಣಗಳೂ ದಿನೇ ದಿನೆ ಹೆಚ್ಚುತ್ತಿವೆ. ಮಾರಕ ಸೋಂಕಿಗೆ ಅಲ್ಲಲ್ಲಿ ಜನರು ಉಸಿರು ಚೆಲ್ಲುತ್ತಿರುವುದು ಕಳವಳ ಮೂಡಿಸಿದೆ. ಈ ವರ್ಷದಲ್ಲಿ ದೇಶದಲ್ಲೇ ಡೆಂಗ್ಯೂ ವೈರಸ್ ಸೋಂಕಿಗೆ ಕರ್ನಾಟಕದ ಬೆಂಗಳೂರಿನಲ್ಲಿ (Bengaluru) ಮೊದಲ ಬಲಿಯಾಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಡೆಂಗ್ಯೂ (Dengue) ನಿಯಂತ್ರಣಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದೆ.
ಈಗಾಗಲೇ ಡೆಂಗ್ಯೂ ವೈರಸ್ ಸೋಂಕಿಗೆ ತುತ್ತಾದ ಸಾವಿರಾರು ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲೇ ಸೋಂಕಿಗೆ ಹಲವು ಮಂದಿ ಬಲಿಯಾಗಿದ್ದಾರೆ. ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಷ್ಟಕ್ಕೂ ಏನಿದು ಡೆಂಗ್ಯೂ? ಈ ವೈರಸ್‌ನ ಇತಿಹಾಸ ಏನು? ಸೋಂಕು ಹೇಗೆ ಹರಡುತ್ತದೆ? ರೋಗ ಲಕ್ಷಣಗಳೇನು? ತಡೆಯುವುದು ಹೇಗೆ? ಚಿಕಿತ್ಸಾ ಕ್ರಮಗಳೇನು? ಬನ್ನಿ ತಿಳಿಯೋಣ. ಇದನ್ನೂ ಓದಿ: 6,187 ಡೆಂಗ್ಯೂ ಪ್ರಕರಣ ಪತ್ತೆ – ಬೆಂಗ್ಳೂರಲ್ಲಿ ಮನೆ ಮನೆ ಸಮೀಕ್ಷೆ ನಡೆಸುವಂತೆ ಪಾಲಿಕೆಗೆ ಸೂಚನೆ!
ಏನಿದು ಡೆಂಗ್ಯೂ?
ಇದೊಂದು ವೈರಸ್.
ಯಾವುದರಿಂದ ಹರಡುತ್ತೆ?
ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ.
ಡೆಂಗ್ಯೂ ವೈರಸ್ ಮೂಲ ಯಾವುದು?
ಡೆಂಗ್ಯೂ ತರಹದ ಕಾಯಿಲೆಯು ಮೊದಲು ಚೀನಾದಲ್ಲಿ ಜಿನ್ ರಾಜವಂಶದಿಂದ (265-420 ಶತಮಾನ) ಬಂದಿದೆ. 17 ನೇ ಶತಮಾನದಲ್ಲಿ ಡೆಂಗ್ಯೂಗೆ ಹೋಲುವ ಸಾಂಕ್ರಾಮಿಕ ರೋಗಗಳು ಸಂಭವಿಸಿದವು ಎಂಬುದಕ್ಕೆ ಪುರಾವೆಗಳಿವೆ.
ವೈರಸ್ ಪತ್ತೆಯಾಗಿದ್ದು ಯಾವಾಗ, ಹೇಗೆ?
1943 ರಲ್ಲಿ. ರೆನ್ ಕಿಮುರಾ ಮತ್ತು ಸುಸುಮು ಹೊಟ್ಟಾ ಮೊದಲು ಡೆಂಗ್ಯೂ ವೈರಸ್ ಅನ್ನು ಪ್ರತ್ಯೇಕಿಸಿದರು. ಈ ಇಬ್ಬರು ವಿಜ್ಞಾನಿಗಳು ಜಪಾನ್‌ನ ನಾಗಸಾಕಿಯಲ್ಲಿ 1943 ರಲ್ಲಿ ಡೆಂಗ್ಯೂ ಸಾಂಕ್ರಾಮಿಕ ಸಮಯದಲ್ಲಿ ತೆಗೆದುಕೊಂಡ ರೋಗಿಗಳ ರಕ್ತದ ಮಾದರಿಗಳನ್ನು ಅಧ್ಯಯನ ಮಾಡಿದ್ದರು. ಇದನ್ನೂ ಓದಿ: ಹಾಸನದಲ್ಲಿ ಡೆಂಗ್ಯೂಗೆ 13 ವರ್ಷದ ಬಾಲಕಿ ಬಲಿ!
ಸೋಂಕು ವಿಶ್ವದಾದ್ಯಂತ ಹರಡಿದ್ದು ಹೇಗೆ?
ಡೆಂಗ್ಯೂನ ಪ್ರಮುಖ ಸೊಳ್ಳೆ ವಾಹಕವಾದ ಈಡಿಸ್ ಈಜಿಪ್ಟಿ 15 ರಿಂದ 19 ನೇ ಶತಮಾನಗಳಲ್ಲಿ ಗುಲಾಮರ ಅಂತರರಾಷ್ಟ್ರೀಯ ವ್ಯಾಪಾರದ ವಿಸ್ತರಣೆಯಿಂದಾಗಿ ಆಫ್ರಿಕಾದಿಂದ ಹರಡಿತು. 17 ನೇ ಶತಮಾನದಲ್ಲಿ ಡೆಂಗ್ಯೂ ತರಹದ ಅನಾರೋಗ್ಯದ ಸಾಂಕ್ರಾಮಿಕ ರೋಗಗಳ ವಿವರಣೆಗಳಿವೆ. 18 ನೇ ಶತಮಾನದಲ್ಲಿ ಜಕಾರ್ತಾ, ಕೈರೋ ಮತ್ತು ಫಿಲಿಡೆಲ್ಫಿಯಾದಲ್ಲಿ ಸಾಂಕ್ರಾಮಿಕ ರೋಗಗಳು ಡೆಂಗ್ಯೂನಿಂದ ಉಂಟಾದ ಸಾಧ್ಯತೆಯಿದೆ.
ಡೆಂಗ್ಯೂ ರೋಗ ಬರುವುದು ಹೇಗೆ?
ಸೊಳ್ಳೆ ಕಡಿತದಿಂದ ಡೆಂಗ್ಯೂ ರೋಗ ಬರುತ್ತದೆ. ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ವೈರಸ್ ಸೋಂಕು ಹರಡುತ್ತದೆ.
ಸೋಂಕಿನ ಪರಿಣಾಮವೇನು?
ರಕ್ತನಾಳಗಳಿಗೆ ಡೆಂಗ್ಯೂ ವೈರಸ್ ಹಾನಿಯುಂಟು ಮಾಡುತ್ತದೆ. ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಅಂಗಾಂಗ ವೈಫಲ್ಯವಾಗುತ್ತದೆ. ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರಬಹುದು. ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂಗೆ 27 ವರ್ಷದ ಯುವಕ ಬಲಿ
ರೋಗ ಲಕ್ಷಣಗಳೇನು?
ಜ್ವರ, ತಲೆನೋವು, ವಾಂತಿ, ಕಣ್ಣು ಊದಿಕೊಂಡು ನೋವು ಉಂಟಾಗುವುದು, ಕೈ-ಕಾಲುಗಳಲ್ಲಿ ಸೆಳೆತ, ನೋವು, ಆಯಾಸ.
ಡೆಂಗ್ಯೂ ತಡೆಗಟ್ಟುವುದು ಹೇಗೆ?
* ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
* ನೀರು ಶೇಖರಣೆಯಾಗುವ ಯಾವುದೇ ಪ್ರದೇಶವಿದ್ದರೂ ಶುಚಿಗೊಳಿಸಬೇಕು
* ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು
* ಸರಾಗವಾಗಿ ನೀರು ಹರಿಯುವಂತೆ ಚರಂಡಿ, ಮೋರಿಗಳನ್ನು ಸುಸ್ಥಿತಿಯಲ್ಲಿಡಬೇಕು
* ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
* ಸೊಳ್ಳೆ ನಿವಾರಕ ಬಳಕೆ ಮಾಡಬೇಕು
ಚಿಕಿತ್ಸಾ ಕ್ರಮ ಏನು?
ಆರಂಭಿಕ ಹಂತದಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲೂ ಡೆಂಗ್ಯೂ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ. ಡೆಂಗ್ಯೂ ಜ್ವರ ತೀವ್ರಮಟ್ಟದಲ್ಲಿದ್ದರೆ, ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಇದನ್ನೂ ಓದಿ: ರಾಜ್ಯ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಡೆತ್ ಆಡಿಟ್
ಬೆಂಗಳೂರಲ್ಲಿ ಡೆಂಗ್ಯೂ ಕೇಸ್ ಎಷ್ಟಿದೆ?
ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದುವರೆಗೆ 1,742 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಒಂದು ಸಾವು ಕೂಡ ಆಗಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. 27 ವರ್ಷದ ವ್ಯಕ್ತಿಯೊಬ್ಬ ಡೆಂಗ್ಯೂನಿಂದ ಮೃತಪಟ್ಟಿರುವುದನ್ನು ಬಿಬಿಎಂಪಿ ದೃಢಪಡಿಸಿದೆ.
ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?
ರಾಜ್ಯದಲ್ಲಿ ಇದುವರೆಗೂ 6,187 ಡೆಂಗ್ಯೂ ಪ್ರಕರಣ ವರದಿಯಾಗಿದೆ. ಗ್ರಾಮೀಣ ಭಾಗದಲ್ಲಿ 56% ಹಾಗೂ ನಗರ ಪ್ರದೇಶಗಳಲ್ಲಿ 44% ಪಾಸಿಟಿವ್ ಆಗಿದೆ. ಡೆಂಗ್ಯೂಗೆ ಹಾಸನ – 2, ಬೆಂಗಳೂರು, ಹಾವೇರಿ, ಧಾರವಾಡ, ಶಿವಮೊಗ್ಗದಲ್ಲಿ ತಲಾ 1 ಸಾವಾಗಿದೆ.