Tag: dengue fever

  • ಮೃತದೇಹ ಮನೆಯೊಳಗೆ ತರದಂತೆ ತಡೆದ ಮಾಲೀಕ- ರಾತ್ರಿಯಿಡೀ ಮಗನ ಶವದೊಂದಿಗೆ ರಸ್ತೆಯಲ್ಲಿದ್ದ ತಾಯಿ

    ಮೃತದೇಹ ಮನೆಯೊಳಗೆ ತರದಂತೆ ತಡೆದ ಮಾಲೀಕ- ರಾತ್ರಿಯಿಡೀ ಮಗನ ಶವದೊಂದಿಗೆ ರಸ್ತೆಯಲ್ಲಿದ್ದ ತಾಯಿ

    ಹೈದರಾಬಾದ್: ಮಹಿಳೆಯೊಬ್ಬರು ಮಳೆಯ ನಡುವೆ ರಾತ್ರಿಯಿಡೀ ನಡುರಸ್ತೆಯಲ್ಲಿ ತನ್ನ ಮಗನ ಮೃತದೇಹವನ್ನು ಕಾವಲು ಕಾದ ಮನಕಲಕುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ತೆಲಂಗಾಣ ರಾಜ್ಯ ರಾಜಧಾನಿಯಾದ ಹೈದರಾಬಾದ್‍ನ ಕುಕ್ಕಟ್‍ಪಲ್ಲಿ ಪ್ರದೇಶದ ವೆಂಕಟೇಶ್ವರ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದೆ ಮೆಹಬೂಬ್‍ನಗರ ಜಿಲ್ಲೆಯಿಂದ ತನ್ನ ಎರಡು ಮಕ್ಕಳೊಂದಿಗೆ ಇಲ್ಲಿಗೆ ಬಂದ ಈಶ್ವರಮ್ಮ, ವೆಂಕಟೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

    ಈಶ್ವರಮ್ಮ ಅವರ ಕಿರಿಯ ಮಗ ಸುರೇಶ್ ಡೆಂಗ್ಯೂ ಜ್ವರದಿಂದ ತೀವ್ರವಾಗಿ ಬಳಲಿ ಬುಧುವಾರ ಸಂಜೆ ಮೃತಪಟ್ಟಿದ್ದ. ಈತನ ಮೃತದೇಹವನ್ನು ಅಂದು ಸಂಜೆ ಆತನ ಕುಟುಂಬಸ್ಥರು ತಾವು ವಾಸವಿದ್ದ ಬಾಡಿಗೆ ಮನೆಗೆ ತಂದಿದ್ದಾರೆ. ಆದರೆ ಮನೆಯ ಮಾಲೀಕ ಮೃತ ದೇಹವನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಲು ಅನುಮತಿಯನ್ನು ನೀಡದೆ ಮನೆಯಿಂದ ಹೊರಹಾಕಿದ್ದಾನೆ. ಶವವನ್ನು ಒಳಗೆ ತೆಗೆದುಕೊಂಡು ಹೋದರೆ ತನ್ನ ಕುಟುಂಬಕ್ಕೆ ಕೆಟ್ಟದ್ದಾಗುತ್ತದೆ ಎಂದು ಮಾಲೀಕ ಜಗದೀಶ್ ಗುಪ್ತಾ ಹೇಳಿದ್ದಾನೆ.

    ಸುರೇಶ್ ತಾಯಿ ಈಶ್ವರಪ್ಪ ಇಲ್ಲಿಮ ರೂಮ್‍ವೊಂದರಲ್ಲಿ ವಾಸವಿದ್ದು, ಉಳಿದಂತೆ ಗುಪ್ತಾ ಹಾಗೂ ಅವರ ಸಂಬಂಧಿಕರೇ ಇಲ್ಲಿ ವಾಸ ಮಾಡುತ್ತಿದ್ದಾರೆ. ಬಾಲಕ ಡೆಂಗ್ಯೂ ಜ್ವರದಿಂದ ಬಳಲಿ ಮೃತಪಟ್ಟಿದ್ದರಿಂದ ಅದರಿಂದ ಇನ್ಫೆಕ್ಷನ್ ಆಗಬಹುದೆಂದು ಗುಪ್ತಾ ಹೇಳಿದ್ದಾನೆ.

    ಹೀಗಾಗಿ ಇಡೀ ರಾತ್ರಿ ಈಶ್ವರಮ್ಮ ಮನೆಯ ಹೊರಗೆ ಮೃತದೇಹದ ಜೊತೆ ಕಾಲ ಕಳೆಯುವಂತಾಗಿದೆ. ಈ ವೇಳೆ ಅಕ್ಕಪಕ್ಕದ ಮನೆಯವರೂ ಕೂಡ ಇದನ್ನ ಪ್ರಶ್ನಿಸಿಲ್ಲ.

    ಮರುದಿನ ಮುಂಜಾನೆ ವಾಕಿಂಗ್ ಮಾಡುತ್ತಿದ್ದವರು ಈಶ್ವರಮ್ಮ ಹಾಗೂ ಅವರ ಹಿರಿಯ ಮಗ ಮೃತದೇಹವನ್ನು ಹಿಡಿದು ಕುಳಿತಿದ್ದನ್ನು ನೋಡಿದ್ದಾರೆ. ನಂತರ ಸಾಕಷ್ಟು ಜನ ಗುಂಪು ಸೇರಿದ್ದಾರೆ. ಬಳಿಕ ಒಂದು ಪೆಟ್ಟಿಗೆಯನ್ನ ತರಿಸಿಮೃತದೇಹವನ್ನ ಅದರಲಿ ಇರಿಸಿದ್ದಾರೆ. ಕೆಲವರು ಅಂತ್ಯಸಂಸ್ಕಾರ್ಕಕಾಗಿ ಹಣ ಸಂಗ್ರಹಿಸಿ ಸಹಾಯ ಮಾಡಿದ್ದಾರೆ.

    ಮನೆಯ ಮಾಲೀಕನ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಸ್ಥಳಿಯರು, ಯಾರ ಮನೆಯಲ್ಲಿ ತಾನೆ ಸಾವು ಸಂಭವಿಸಿಲ್ಲ? ಅಥವಾ ಮುಂದೆ ಸಂಭವಿಸುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ.

  • ಒಂದೇ ಗ್ರಾಮದ 30ಕ್ಕೂ ಹೆಚ್ಚು ಜನರಲ್ಲಿ ಡೆಂಘೀ ಜ್ವರ – ಅಥಣಿಯಲ್ಲಿ ಆತಂಕದ ವಾತಾವರಣ

    ಒಂದೇ ಗ್ರಾಮದ 30ಕ್ಕೂ ಹೆಚ್ಚು ಜನರಲ್ಲಿ ಡೆಂಘೀ ಜ್ವರ – ಅಥಣಿಯಲ್ಲಿ ಆತಂಕದ ವಾತಾವರಣ

    ಬೆಳಗಾವಿ: ಒಂದೇ ಗ್ರಾಮದ 30 ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಜ್ವರ ಪತ್ತೆ ಆಗಿದ್ದು ಇಡೀ ಗ್ರಾಮವೇ ಆತಂಕದಲ್ಲಿರುವ ಪರಿಸ್ಥಿತಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕವಟಕೊಪ್ಪ ಗ್ರಾಮದಲ್ಲಿ ನಿರ್ಮಾಣವಾಗಿದೆ.

    ಇಡೀ ಗ್ರಾಮವೇ ಡೆಂಗ್ಯೂ ಭೀತಿಗೆ ಒಳಗಾಗಿದ್ದು, ಗ್ರಾಮದ ಬಹುತೇಕ ಜನರು ಅಥಣಿ ತಾಲೂಕಿನ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕವಟಕೊಪ್ಪ ಗ್ರಾಮದ 7 ಜನರಲ್ಲಿ ಈಗಾಗಲೇ ಡೆಂಗ್ಯೂ ಇರುವದನ್ನು ಸರಕಾರಿ ವೈದ್ಯರು ದೃಢಪಡಿಸಿದ್ದು 27 ಜನರು ಶಂಕಿತ ಡೆಂಗ್ಯೂ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಪಂಚಾಯತಿಯಿಂದ ಮುಂಜಾಗೃತಾ ಕ್ರಮಗಳನ್ನ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಡೆಂಗ್ಯೂ ಸೊಳ್ಳೆಗಳ ಮಿತಿ ಹೆಚ್ಚಾದ ಪರಿಣಾಮ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಡೆಂಗ್ಯೂ ಕಾಯಿಲೆಗೆ ಪ್ರಾಣಹಾನಿ ಸಂಭವಿಸುವ ಮುನ್ನ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.