Tag: dengue case

  • ಕೋವಿಡ್ ನಿರ್ವಹಣೆಯಲ್ಲಿ 30 ಕೋಟಿ ಅಕ್ರಮ – ಬಿಜೆಪಿ ವಿರುದ್ಧ ಯು.ಬಿ ವೆಂಕಟೇಶ್ ಬಾಂಬ್!

    ಕೋವಿಡ್ ನಿರ್ವಹಣೆಯಲ್ಲಿ 30 ಕೋಟಿ ಅಕ್ರಮ – ಬಿಜೆಪಿ ವಿರುದ್ಧ ಯು.ಬಿ ವೆಂಕಟೇಶ್ ಬಾಂಬ್!

    – ಗೃಹಜ್ಯೋತಿ ಯೋಜನೆಯಿಂದ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಆರ್ಥಿಕ ಸಂಕಷ್ಟ: ಶರವಣ
    – ಡೆಂಗ್ಯೂ ಚಿಕಿತ್ಸೆಗೆ ಹೆಚ್ಚು ಹಣ ಪಡೆದರೆ ಕ್ರಮ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಗುಂಡೂರಾವ್‌ ವಾರ್ನಿಂಗ್‌

    ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನದ (Karnataka Assembly Session) ಮೊದಲ ದಿನವೇ ಅಕ್ರಮಗಳ ಸದ್ದು – ಗದ್ದಲ ಜೋರಾಗಿ ನಡೆದಿದೆ. ವಾಲ್ಮೀಕಿ ನಿಗಮದ ಹಗರಣ ಮುಡಾ ಹಗರಣಗಳ ಪ್ರಸ್ತಾಪದ ನಡುವೆ ಕೋವಿಡ್ ನಿರ್ವಹಣೆಯಲ್ಲಿ ಆಗಿರುವ ಹಗರಣಗಳ (Covid Scam) ಬಗ್ಗೆ ಕಾಂಗ್ರೆಸ್ ನಾಯಕ ಯು.ಬಿ ವೆಂಕಟೇಶ್ ದನಿ ಎತ್ತಿದ್ದಾರೆ.

    ಶೂನ್ಯ ವೇಳೆಯಲ್ಲಿ ಮಾತನಾಡಿದ ಯು.ಬಿ ವೆಂಕಟೇಶ್ (UB Venkatesh), ಬೆಂಗಳೂರಿನಲ್ಲಿ 2021-22ರಲ್ಲಿ ಬಿಜೆಪಿ ಸರ್ಕಾರದ ಇದ್ದಾಗ ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ಅಕ್ರಮವಾಗಿದೆ. ಔಷಧಿ ಸೇರಿ ಇನ್ನಿತರ ಖರೀದಿಯಲ್ಲಿ ಅಕ್ರಮವಾಗಿದೆ. ಲೆಕ್ಕ ಪರಿಶೋಧನೆ ವರದಿಯಲ್ಲಿ ಅಕ್ರಮದ ಬಗ್ಗೆ ಪ್ರಸ್ತಾಪ ಇದೆ. ಸುಮಾರು 30 ಕೋಟಿ ರೂ. ಅಕ್ರಮದ ಆಗಿದೆ. ಈ ಬಗ್ಗೆ ತನಿಖೆ ಮಾಡಿ ತಪ್ಪು ಮಾಡಿರೋರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಆಗ್ರಹಿಸಿದರು.

    ʻಗೃಹಜ್ಯೋತಿʼ ಕರ್ನಾಟಕವನ್ನೇ ಬರ್ಬಾದ್ ಮಾಡುವ ಸ್ಕೀಮ್:
    ಇದಕ್ಕೂ ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಶರವಣ ಮಾತನಾಡಿದರು. ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆಯಿಂದ (Gruha Jyothi Scheme) ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಬಹಳಷ್ಟು ನಷ್ಟದಲ್ಲಿವೆ. ಕರ್ನಾಟಕವನ್ನೇ ಬರ್ಬಾದ್ ಮಾಡುವ ಸ್ಕೀಮ್ ಇದು. ಇದರಿಂದ ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ಸಂಕಷ್ಟದಲ್ಲಿವೆ. ವಿದ್ಯುತ್ ಉತ್ಪಾದನಾ ಕಂಪನಿಗಳಿಗೂ ಹಣ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಕೆ.ಜೆ ಜಾರ್ಜ್, ಯಾವುದೇ ವಿದ್ಯುತ್ ಕಂಪನಿಗಳ ಬಾಕಿ ಹಣ ಉಳಿಸಿಕೊಂಡಿಲ್ಲ. ಗೃಹ ಜ್ಯೋತಿ ಅಡಿ ಉಪಯೋಗ ಮಾಡಿದ್ದ ಎಲ್ಲ ವಿದ್ಯುತ್‌ಗೂ ಹಣ ಕಂಪನಿಗಳಿಗೆ ಈಗಾಗಲೇ ಸಂದಾಯವಾಗಿದೆ ಎಂದು ಸ್ಪಷ್ಟನೆ ನೀಡಿದರು.

    ಡೆಂಗ್ಯೂ ವಿಚಾರದಲ್ಲಿ 2 ತಿಂಗಳು ಎಚ್ಚರವಾಗಿರಿ:
    ಇನ್ನೆರಡು ತಿಂಗಳು ಡೆಂಗ್ಯೂ ವಿಚಾರದಲ್ಲಿ ಜನರು ಎಚ್ಚರವಾಗಿ ಇರಬೇಕು ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜನರಿಗೆ ಕರೆ ನೀಡಿದರು. ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ಅವಧಿಯ ವೇಳೆ ಬಿಜೆಪಿಯ ಧನಂಜಯ ಸರ್ಜಿ ಅವರ ಬದಲಾಗಿ, ಅರುಣ್ ಡೆಂಗ್ಯೂ ಬಗ್ಗೆ ಪ್ರಶ್ನೆ ಕೇಳಿದ್ರು.

    ಇದಕ್ಕೆ ಉತ್ತರ ನೀಡಿದ ಸಚಿವರು, ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಅಂತ ತಿಳಿಸಿದರು.ಈ ವರ್ಷ ನಮ್ಮ ರಾಜ್ಯದಲ್ಲಿ ಡೆಂಗ್ಯೂ ಕೇಸ್ ಜಾಸ್ತಿ ಆಗಿದೆ.ಕಳೆದ ವರ್ಷ ಈ ಅವಧಿಗೆ 25 ಸಾವಿರ ಕೇಸ್ ಇತ್ತು. ಈ ವರ್ಷ ಇಲ್ಲಿವರೆಗೆ 68 ಸಾವಿರ ಕೇಸ್ ಈ ವರೆಗೆ ದಾಖಲಾಗಿದೆ. ಡೆಂಗ್ಯೂವನ್ನ ನಾವು ಗಂಭೀರವಾಗಿ ಪರಿಗಣಿಸಲಾಗಿದೆ. ಸಿಎಂ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಡೆಂಗ್ಯೂವನ್ನ ನೋಟಿಫೈ ಕಾಯಿಲೆ ಅಂತ ಘೋಷಣೆ ಮಾಡಲಾಗಿದೆ. ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಮಾಹಿತಿ ಸರ್ಕಾರಕ್ಕೆ ಕೊಡುವ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಿಸಿದರು.

    ಡೆಂಗ್ಯೂ ಚಿಕಿತ್ಸೆಗೆ ಹೆಚ್ಚು ಹಣ ಪಡೆದರೆ ಕ್ರಮ:
    ವಿಶೇಷವಾಗಿ ಟಾಸ್ಕ್ ಫೋರ್ಸ್ ನೇಮಕ ಮಾಡಲಾಗಿದೆ ಎಂದರು. ಚಿಕಿತ್ಸೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಡೆಂಗ್ಯೂ ಕಾಯಿಲೆಯನ್ನು ಕೋವಿಡ್ ಮಾದರಿಯಲ್ಲಿ ಮಾನಿಟರ್ ಮಾಡ್ತಿದ್ದೇವೆ. ಒಂದೇ ಏರಿಯಾದಲ್ಲಿ 2-3 ಕೇಸ್ ಬಂದರೆ ಅದನ್ನ ಹಾಟ್ ಸ್ಪಾಟ್ ಅಂತ ಅಂತ ಘೋಷಣೆ ಮಾಡಿ ಇಡೀ ಏರಿಯಾದಲ್ಲಿ ಫೀವರ್ ಕ್ಲಿನಿಕ್ ಓಪನ್ ಮಾಡಿ ತಪಾಸಣೆ ಮಾಡ್ತಿದ್ದೇವೆ. ಇನ್ನು ಎರಡು ತಿಂಗಳು ನಾವು ಎಚ್ಚರಿಕೆಯಿಂದ ಇರಬೇಕು. ಸೆಪ್ಟೆಂಬರ್ ವರೆಗೂ ನಾವು ಎಚ್ಚರಿಕೆಯಿಂದ ಇರಬೇಕು ಅಂತ ಕರೆ ಕೊಟ್ರು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ಉಚಿತ ಪ್ಲೇಟ್ ಲೈಟ್ಸ್ ಕೂಡಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಡಲಾಗ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯೂ ಟೆಸ್ಟ್ ಗೆ ದರ ನಿಗದಿ ಮಾಡಲಾಗಿದೆ. ಹೆಚ್ಚು ಹಣ ಪಡೆದ್ರೆ ಕ್ರಮ ತೆಗೆದುಕೊಳ್ತಿದ್ದೇವೆ ಅಂತ ತಿಳಿಸಿದರು.

  • Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 437 ಡೆಂಗ್ಯೂ ಪ್ರಕರಣಗಳು (Dengue Case) ವರದಿಯಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 388ಕ್ಕೇರಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8,658ಕ್ಕೆ ಏರಿಕೆಯಾಗಿದೆ.

    ಬೆಂಗಳೂರು ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 165 ಹೊಸ ಕೇಸ್‌ಗಳು ದಾಖಲಾಗಿದ್ದು, ಸದ್ಯ 91 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ 2,704 ಡೆಂಗ್ಯೂ ಟೆಸ್ಟ್‌ ನಡೆಸಲಾಗಿದ್ದು, ಈ ಪೈಕಿ 437 ಜನರಿಗೆ ಪ್ರಕರಣ ಧೃಢವಾಗಿದೆ. ಈವರೆಗೆ ಒಟ್ಟು 63,741 ಮಂದಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಪ್ರತಿವರ್ಷ ಜೂನ್‌ 25ರಂದು ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ – ಅಮಿತ್‌ ಶಾ ಘೋಷಣೆ

    ಯಾವ ವಯಸ್ಸಿನವರಲ್ಲಿ ಹೆಚ್ಚಿ ಕೇಸ್‌ ಪತ್ತೆ?
    ಕಳೆದ 24 ಗಂಟೆಯಲ್ಲಿ 2,704 ಮಂದಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 1 ವರ್ಷದೊಳಗಿನ 7 ಮಕ್ಕಳು, 1 ರಿಂದ 18 ವರ್ಷ ವಯಸ್ಸಿನ 154 ಮಕ್ಕಳು ಹಾಗೂ 18 ವರ್ಷ ಮೇಲ್ಪಟ್ಟ 276 ಮಂದಿ ಸೇರಿದಂತೆ ಒಟ್ಟು 437 ಕೇಸ್‌ ಪತ್ತೆಯಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಭ್ರಷ್ಟಾಚಾರಿ -‌ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‍ಗೆ ಸಾಧ್ಯವೇ?: ಜೋಶಿ

    ಎಲ್ಲೆಲ್ಲಿ ಎಷ್ಟು ಕೇಸ್‌?
    ಬಿಎಂಪಿ ವ್ಯಾಪಿಯಲ್ಲಿ 165, ಬೆಂಗಳೂರು ನಗರ 10, ಬೆಂಗಳೂರು ಗ್ರಾಮಾಂತರ 5, ರಾಮನಗರ 14, ಕೋಲಾರ 19, ಚಿಕ್ಕಬಳ್ಳಾಪುರ 7, ತುಮಕೂರು 5, ಚಿತ್ರದುರ್ಗ 3, ದಾವಣಗೆರೆ 24, ಬೆಳಗಾವಿ 32, ಗದಗ 15, ಉತ್ತರ ಕನ್ನಡ 1, ಕಲಬುರಗಿ 20, ಬೀದರ್‌ 10, ಬಳ್ಳಾರಿ 4, ವಿಜಯನಗರ 1, ಕೊಪ್ಪಳ 3, ಮೈಸೂರು 17, ಮಂಡ್ಯ 47, ಹಾಸನ 6, ಉಡುಪಿ 10, ಚಿಕ್ಕಮಗಳೂರು 10, ಕೊಡಗು 9 ಕೇಸ್‌ ಪತ್ತೆಯಾಗಿವೆ. ಶುಕ್ರವಾರ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಒಟ್ಟು ಮರಣ ಸಂಖ್ಯೆ 7 ಇದೆ.

  • ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

    ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ (Dengue Cases) ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ (Health Department Guidelines) ಪ್ರಕಟಿಸಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ; ಜು.15 ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನ

    ಕೋವಿಡ್‌ ಸಂದರ್ಭದಲ್ಲಿ ವಾರ್‌ ರೂಮ್‌ ತೆರೆದ ಮಾದರಿಯಲ್ಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡೆಂಗ್ಯೂ ವಾರ್‌ ರೂಮ್‌ (Dengue War Room) ತೆರೆಯಲು ಸೂಚನೆ ನೀಡಿದೆ. ಇದರೊಂದಿಗೆ ಇನ್ನೂ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದನ್ನೂ ಓದಿ: ಗ್ಯಾರಂಟಿಗೆ 65 ಸಾವಿರ ಕೋಟಿ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ – ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ

    ಮಾರ್ಗಸೂಚಿ ಏನು?
    1. ಒಂದೇ ಸ್ಥಳದಲ್ಲಿ ಎರಡು ಅಥವಾ ಮೂರು ಡೆಂಗ್ಯೂ ಕೇಸ್ ಕಂಡುಬಂದರೆ ಹಾಟ್ ಸ್ಪಾಟ್ ಅಂತ ಪರಿಗಣನೆ
    2. ಹಾಟ್‌ಸ್ಪಾಟ್‌ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವ್ರಗೊಳಿಸುವುದು, ಒಳಾಂಗಣ/ಹೊರಾಂಗಣದಲ್ಲಿ ಲಾರ್ವಾನಾಶಕಗಳ ಬಳಕೆ ಹಾಗೂ ಒಳಾಂಗಣದಲ್ಲಿ ಡೆಂಗ್ಯೂ ನಾಶಕವನ್ನು ಸಿಂಪಡಿಸಿ ಮನೆಯ ಸದಸ್ಯರನ್ನ 30 ನಿಮಿಷಗಳ ಕಾಲ ಮನೆಯಿಂದ ಹೊರಗಡೆ ಇರುವಂತೆ ಸೂಚಿಸುವುದು
    3. ಡೆಂಗ್ಯೂ ಪಾಸಿಟಿವ್ ಆದ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತುರ್ತಾಗಿ ಸಕ್ರೀಯಗೊಳಿಸಬೇಕು.
    4. ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಣೆ ಖಚಿತಪಡಿಸಿಕೊಳ್ಳುವುದು ಹಾಗೂ ಕೈ, ಕಾಲು – ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳುವಂತೆ ತಿಳಿಸುವುದು.
    5. ಡೆಂಗ್ಯೂ ಪಾಸಿಟಿವ್ ಆದ ವ್ಯಕ್ತಿಯನ್ನ ಜ್ವರ ಕಾಣಿಸಿಕೊಂಡ ದಿನದಿಂದ 14 ದಿನಗಳ ಕಾಲ ಅನುಪಾಲನೆ ಮಾಡುವುದು
    6. ಬೇವಿನ ಎಣ್ಣೆ ಇಲ್ಲದೇ ಹೋದರೆ ಸಿಟ್ರೋನೆಲ್ ಆಯಿಲ್, ಲೆಮನ್ ಗ್ರೇಸ್ ಆಯಿಲ್ ಅಥವಾ ಡೀಟ್ ಆಧಾರಿತ ಕ್ರೀಂ ಆಯಿಲ್‌ಗಳನ್ನ ವಿತರಣೆ ಮಾಡಬೇಕು
    7. ಡೆಂಗ್ಯೂ ಪ್ರಕರಣಗಳ ನಿರ್ವಹಣೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಫತ್ರೆಗಳಲ್ಲಿ 5 ರಿಂದ 10 ಹಾಸಿಗೆಗಳನ್ನು ಮೀಸಲಿಡಬೇಕು.
    8. ಡೆಂಗ್ಯೂ ಜ್ವರ ಪ್ರಕರಣಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣಾ ಸೌಲಭ್ಯವನ್ನು ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಆರೋಗ್ಯ ಸಂಸ್ಥೆಗಳು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡಬೇಕು.
    9. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಸ್ಟಿಂಗ್‌ ಕಿಟ್‌, ಅಗತ್ಯ ಪ್ರಮಾಣದ ಔಷಧಿ ಹಾಗೂ IV Fluids ಔಷಧ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಬೇಕು. ಜಿಲ್ಲಾವಾರು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಗಳಿಂದ ಪ್ಲೇಟ್‌ಲೆಟ್‌, ಪ್ಲಾಸ್ಮಾ ಹಾಗೂ ಇತರ ಕಾಂಪೊನೆಂಟ್‌ಗಳ ಬಗ್ಗೆ ಪ್ರತಿದಿನ ಮಾಹಿತಿ ನೀಡಬೇಕು.
    10. ಕಡ್ಡಾಯವಾಗಿ ಡೆಂಗ್ಯೂ ಜ್ವರ ನಿರ್ವಹಣೆ ಸಂಬಂಧ ಶಿಷ್ಟಾಚಾರ ಪಾಲನೆ ಮಾಡಬೇಕು.

  • ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ – ಬೊಮ್ಮಾಯಿ ಆರೋಪ

    ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ – ಬೊಮ್ಮಾಯಿ ಆರೋಪ

    – ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡ್ತಿದ್ದಾರೆ ಎಂದ ಸಂಸದ

    ಹಾವೇರಿ: ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ (SC ST Community) ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

    ಶಿಗ್ಗಾಂವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಸಿ, ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ಆ ಸಮುದಾಯಗಳಿಗೆ ಮೋಸ ಮಾಡುತ್ತಿದೆ. ರಾಜ್ಯ ಸರ್ಕಾರ ದಿವಾಳಿ ಆಗಿರೋದನ್ನು ಪ್ರತಿ ಹೆಜ್ಜೆಯಲ್ಲೂ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡುವುದರಿಂದ ಹಿಡಿದು ಎಲ್ಲಾ ದರ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಅನುದಾನವನ್ನು ವರ್ಗಾಯಿಸುತ್ತಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಬಳಕೆ ಆಗಬೇಕಿದ್ದ 14,000 ಕೋಟಿ ರೂ. ಅನುದಾನ, ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ಎಸ್ಟಿ, ಎಸ್ಟಿ ಸಮುದಾಯದ ಜನರಿಗೆ ಗ್ಯಾರಂಟಿ ಮೂಲಕ ಅನುಕೂಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್‌‌ನವರು ಹೇಳುತ್ತಾರೆ. ಆದ್ರೆ ವೋಟಿಗಾಗಿ ಮಾಡಿದ ಯೋಜನೆಗಳಿಗೆ ಆ ಸಮುದಾಯಕ್ಕೆ ಸೇರಬೇಕಿರುವ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಕಾನೂನು ಉಲ್ಲಂಘನೆಯೂ ಆಗಿದೆ. ಸರ್ಕಾರ ಸುಭದ್ರವಾಗಿದ್ದಿದ್ದರೇ ಅವರ ಹಣಕ್ಕೆ ಯಾಕೆ ಕೈ ಹಾಕಿದ್ದಾರೆ? ವಾಲ್ಮೀಕಿ ನಿಗಮದ ಹಣ ಸಹ ಲೂಟಿ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: SCSP – TSP ಯೋಜನೆಯ 14 ಸಾವಿರ ಕೋಟಿ ಹಣ ಕಾಂಗ್ರೆಸ್‌ ಗ್ಯಾರಂಟಿಗೆ ಬಳಕೆ

    ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ:
    ಅಲ್ಲದೇ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುತ್ತಿದೆ. ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ, ಹುಬ್ಬಳ್ಳಿಗೆ ಹೋಗುತ್ತಿದ್ದಾರೆ, ಕೆಲವರು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಆದ್ರೆ ಇದೆಲ್ಲವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂನಿಂದ ಜನ ಸಾಯ್ತಿದ್ರೆ, ಸಚಿವರು ಸ್ವಿಮ್ಮಿಂಗ್ ಪೂಲ್‍ನಲ್ಲಿದ್ದಾರೆ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಡೆಂಗ್ಯೂಗೆ ಹಾವೇರಿಯಲ್ಲೇ ಅತಿಹೆಚ್ಚು ಸಾವು:
    ಡೆಂಗ್ಯೂ ಹೆಚ್ಚಾಗುತ್ತಿದೆ ಅಂತ ನಾನು ಮೊದಲೇ ಹೇಳಿದ್ದೆ. ಸರ್ಕಾರ ಯಾವ್ದೇ ವ್ಯವಸ್ಥೆ ಮಾಡಿಕೊಳ್ಳದೇ ಇದ್ದುದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಸಾವು ನೋವು ಹೆಚ್ಚಾಗುತ್ತಿವೆ. ಇಡೀ ರಾಜ್ಯದಲ್ಲಿ ಹಾವೇರಿಯಲ್ಲೇ ಡೆಂಗ್ಯೂಗೆ ಅತಿಹೆಚ್ಚು ಸಾವು ಸಂಭವಿಸಿದೆ. ಕೂಡಲೇ ಡಿಹೆಚ್‌ಒ ವರ್ಗಾವಣೆ ಮಾಡಬೇಕು. ಸಮರ್ಥ ಆರೋಗ್ಯಾಧಿಕಾರಿಯನ್ನ ನಿಯೋಜಿಸಬೇಕು. ಆಶಾ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ಜಾಗೃತಿ ಮೂಡಿಸಬೇಕು, ಪ್ರತಿಯೊಬ್ಬರಿಗೂ ಚಿಕಿತ್ಸೆ ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರು-ಭದ್ರತಾಪಡೆಗಳ ನಡುವೆ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ

    ಮುಂದಿನ ವಾರದಲ್ಲೇ NH ಕಾಮಗಾರಿ ಕುರಿತು ಚರ್ಚೆ:
    ನಾನು ಸಂಸತ್ ಅಧಿವೇಶನಕ್ಕೆ ತೆರಳಿದ್ದಾಗ ಹಾವೇರಿ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ಚರ್ಚಿಸಲು ಅವರು ಮುಂದಿನ ವಾರ ವಿಶೇಷ ಸಮಯ ನೀಡಿದ್ದಾರೆ. ಆಮೆಗತಿಯಲ್ಲಿ ನಡೆಯುತ್ತಿರುವ NH-4 ಕಾಮಗಾರಿ ಹಾಗೂ ಹಾನಗಲ್, ಶಿಗ್ಗಾಂವಿ, ಸವಣೂರು, ಲಕ್ಷ್ಮೇಶ್ವರ, ಗದಗ ಮಾರ್ಗವಾಗಿ ಹಾಯ್ದು ಹೋಗುವ ಇಳಕಲ್-ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ, ರಿಂಗ್ ರಸ್ತೆಗಳ ನಿರ್ಮಾಣ, ಆರ್‌ಒಬಿ ನಿರ್ಮಾಣ ಮಾಡುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದೇನೆ. ಈ ಎಲ್ಲ ವಿಷಯಗಳ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.

    ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ:
    ಇನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೆ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕುರಿತು ಚರ್ಚೆ ನಡೆಸಲಾಗಿದೆ. ಇದರ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆಗೆ ಪತ್ನಿ ಸ್ಪರ್ಧೆ ವದಂತಿಗೆ ಡಾ. ಮಂಜುನಾಥ್ ಸ್ಪಷ್ಟನೆ

    ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಧನ್ಯವಾದ ಹೇಳ್ತೀನಿ:
    ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ‌ಸಮಿತಿ ಮಾಡಿದ್ದೇವೆ. ಪಕ್ಷವು ಸಮೀಕ್ಷೆ ಮಾಡಿಸಿದ ನಂತರ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತದೆ. ನನ್ನ ಮೇಲೆ ಶಿಗ್ಗಾವಿ ಜನರ ಋಣ ಇದೆ. ರಾಜಕೀಯವಾಗಿ ಬೆಳೆಯಲು ಮಹಾ ಜನತೆಯ ಆಶೀರ್ವಾದ ಇದೆ. ಇದಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ಜನತೆಗೆ ಕೃತಜ್ಞತೆ ಹೇಳಬೇಕು ಅಂತ ಇದೆ. ರಾಜಕೀಯ ಮೀರಿ ಈ ಕ್ಷೇತ್ರದ ಜನರ ಜೊತೆಗೆ ಅನೋನ್ಯತೆ ಇದೆ. ಬರುವ ಜುಲೈ 12ರಿಂದ ಹಂತ ಹಂತವಾಗಿ ಧನ್ಯವಾದ ಯಾತ್ರೆ ಮಾಡುತ್ತೇನೆ. ಪ್ರತಿ‌ ಗ್ರಾಮದ ಜನರನ್ನು ಭೇಟಿಯಾಗಿ‌ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

  • 6,187 ಡೆಂಗ್ಯೂ ಪ್ರಕರಣ ಪತ್ತೆ – ಬೆಂಗ್ಳೂರಲ್ಲಿ ಮನೆ ಮನೆ ಸಮೀಕ್ಷೆ ನಡೆಸುವಂತೆ ಪಾಲಿಕೆಗೆ ಸೂಚನೆ!

    6,187 ಡೆಂಗ್ಯೂ ಪ್ರಕರಣ ಪತ್ತೆ – ಬೆಂಗ್ಳೂರಲ್ಲಿ ಮನೆ ಮನೆ ಸಮೀಕ್ಷೆ ನಡೆಸುವಂತೆ ಪಾಲಿಕೆಗೆ ಸೂಚನೆ!

    – ಡೆಂಗ್ಯೂ ಪತ್ತೆಗೆ ಟೆಸ್ಟಿಂಗ್‌ ಕಿಟ್‌ ವಿತರಣೆ – ದಿನೇಶ್‌ ಗುಂಡೂರಾವ್‌

    ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು (Dengue Case) ಹೆಚ್ಚುತ್ತಿರುವ ಹಿನ್ನೆಲೆ ವಿಧಾನಸೌಧದಲ್ಲಿಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಡೆಂಗ್ಯೂ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು.

    ಗ್ರಾಮೀಣ ಭಾಗದಲ್ಲೇ ಕೇಸ್‌ ಹೆಚ್ಚು:
    ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ಮೊದಲೆಲ್ಲಾ ಡೆಂಗ್ಯೂ ಪ್ರಕರಣ ಒಂದು ವರ್ಷ ಹೆಚ್ಚಿದ್ದರೆ, ಮುಂದಿನ ವರ್ಷ ಇಳಿಕೆಯಾಗುತ್ತಿತ್ತು. ಆದ್ರೆ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸಕ್ತ ವರ್ಷದ ಜನವರಿಯಿಂದ 6,187 ಕೇಸ್‌ ದಾಖಲಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 2,900 ಕೇಸ್‌ ದಾಖಲಾಗಿತ್ತು. ಒಟ್ಟಾರೆ ದಾಖಲಾಗಿರುವ ಪ್ರಕರಣಗಳಲ್ಲಿ 56% ಗ್ರಾಮೀಣ ಭಾಗದಲ್ಲಿ ಪತ್ತೆಯಾಗಿದೆ, ನಗರ ಪ್ರದೇಶಗಳಲ್ಲಿ 44% ಪಾಸಿಟಿವ್ ಆಗಿದೆ. 6 ಮಂದಿ ಸಾವನ್ನಪ್ಪಿದ್ದಾರೆ. ಅವರು ಸಹ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವಿವರಿಸಿದರು.

    ರಸ್ತೆಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಹೆಚ್ಚಾಗಿ ನೀರು ನಿಲ್ಲುತ್ತಿರುವುದೇ ಇದಕ್ಕೆ ಕಾರಣ. ಅದರಲ್ಲೂ ಬೆಂಗಳೂರು ನಗರ (Bengaluru City) ಡೆಂಗ್ಯೂ ಪ್ರಕರಣಗಳ ಏರಿಕೆಗೆ ಸೂಕ್ತ ಪ್ರದೇಶವಾದಂತೆ ಕಾಣ್ತಿದೆ. ನಿರಂತರವಾಗಿ ಮಳೆ ಬಂದರೆ ಕೇಸ್‌ ಕಡಿಮೆ ಆಗುತ್ತದೆ. ಅದಕ್ಕಾಗಿ ಟೆಸ್ಟಿಂಗ್‌ ಕಿಟ್‌ (Dengue Testing Kit) ಸರಬರಾಜು ಮಾಡ್ತಾ ಇದ್ದೇವೆ. ಇದರೊದಿಗೆ ಪ್ಯಾರಸೆಟಮಲ್ ಮಾತ್ರೆ ಕೊಡಬಹುದು, ಜೊತೆಗೆ ಪ್ಲೇಟ್‌ಲೆಟ್ಸ್‌ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

    ಖಾಸಗಿ ಆಸ್ಪತ್ರೆಗಳು ಕೇಸ್‌ಗಳನ್ನ ವರದಿ ಮಾಡ್ಬೇಕು:
    ಡೆಂಗ್ಯೂ ಪ್ರಕರಣಗಳ ಬಗ್ಗೆ ಅನೇಕ ಖಾಸಗಿ ಆಸ್ಪತ್ರೆಗಳು ವರದಿ ಮಾಡುತ್ತಿಲ್ಲ. ಐಎಹೆಚ್‌ ವೆಬ್‌ಸೈಟ್‌ನಲ್ಲಿ ವರದಿ ಮಾಡುತ್ತಿಲ್ಲ. ಸದ್ಯಕ್ಕೆ 6,187 ಕೇಸ್‌ ಇದೆ. ಇದರ ಸಂಖ್ಯೆ ಹೆಚ್ಚಿರಬಹುದು. ಹಾಗಾಗಿ ಖಾಸಗಿ ಆಸ್ಪತ್ರೆಗಳು ವರದಿ ಮಾಡುವಂತೆ ಸೂಚಿಸಿದ್ದೇವೆ. ಜೊತೆಗೆ ತಪ್ಪು ಮಾಹಿತಿ ಹರಡಬಾರದು ಎಂಬ ಕಾರಣಕ್ಕೆ ದಿನನಿತ್ಯ ಡೆಂಗ್ಯೂ ಬುಲೆಟಿನ್ ಬಿಡುಗಡೆ ಮಾಡ್ತೆವೆ. ನಗರಪಾಲಿಕೆಗಳು ಪ್ರತಿ ನಗರದಲ್ಲೂ ಮನೆ ಮನೆ ಸರ್ವೆ ಮಾಡುವಂತೆ ಸೂಚನೆ ನೀಡಿದ್ದೇವೆ. ಪ್ರತಿ ಶುಕ್ರವಾರ ಡೆಂಗ್ಯೂ ಬಗ್ಗೆ ತಪಾಸಣೆಗೆ ನಿಗಾವಹಿಸಲು ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

    ಶಾಲೆಗಳಲ್ಲೂ ಜಾಗೃತಿ ಮೂಡಿಸಲು ತಯಾರಿ:
    ಡೆಂಗ್ಯೂ ಎಲ್ಲೆಲ್ಲಿ ಪಾಸಿಟಿವ್‌ ಪ್ರಕರಣಗಳು ಬರುತ್ತವೆ, ಅಲ್ಲಿ ಮಾನಿಟರ್‌ ಮಾಡಲು ಸೂಚಿಸಿದ್ದೇವೆ. ಲಾರ್ವ ನಾಶ ಮಾಡಬೇಕು, ಫಾಗಿಂಗ್ ಮಾಡಬೇಕು. ಜೊತೆಗೆ ಬೆಂಗಳೂರು ನಗರದಲ್ಲಿರುವ ಕ್ಷೇಮಾಭಿವೃದ್ಧಿ ಸಂಘಗಳ ಸಭೆ ಕರೆದು ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಜೊತೆಗೆ ವೈದ್ಯಕೀಯ ಅಧಿಕಾರಿಗಳು ಹತ್ತಿರದ ಶಾಲೆಗಳಿಗೆ ತೆರಳಿ ವಿಜ್ಞಾನ ಶಿಕ್ಷಕರಿಂದ ಮಕ್ಕಳಿಗೆ ಜಾಗೃತಿ ಮೂಡಿಸುವ ಬಗ್ಗೆ ತರಬೇತಿ ನೀಡುವಂತೆ ಸೂಚಿಸಿದ್ದೇವೆ.

  • ಹಾಸನದಲ್ಲಿ ಡೆಂಗ್ಯೂಗೆ 13 ವರ್ಷದ ಬಾಲಕಿ ಬಲಿ!

    ಹಾಸನದಲ್ಲಿ ಡೆಂಗ್ಯೂಗೆ 13 ವರ್ಷದ ಬಾಲಕಿ ಬಲಿ!

    ಹಾಸನ: ಬೆಂಗಳೂರು ಬಳಿಕ ಮಾರಕ ಡೆಂಗ್ಯೂ ಜ್ವರಕ್ಕೆ (Dengue Fever) ಹಾಸನದಲ್ಲೊಂದು ಜೀವ ಬಲಿಯಾಗಿದೆ. 13 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ಹಾಸನ ತಾಲೂಕಿನ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಕ್ಷತಾ (13) ಮೃತ ಬಾಲಕಿ. ಅಕ್ಷತಾ ಮೂಲತಃ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದವರು. ಕೂಲಿ ಕೆಲಸ ಮಾಡುತ್ತಿದ್ದ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮಾ ದಂಪತಿ ಪುತ್ರಿ ಅಕ್ಷತಾ, ಹಾಸನದ ಖಾಸಗಿ ಶಾಲೆಯಲ್ಲಿ (Hassan Private School) 7ನೇ ತರಗತಿ‌ ಓದುತ್ತಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂಗೆ 27 ವರ್ಷದ ಯುವಕ ಬಲಿ

    ಕಳೆದ ಬುಧವಾರ ಜ್ವರಕ್ಕೆ ತುತ್ತಾಗಿದ್ದರು. ನಂತರ ಬಾಲಕಿಗೆ ಬೊಮ್ಮನಾಯಕಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದಾಗ್ಯೂ ಬಾಲಕಿ ಗುಣಮುಖಳಾಗದೇ ಇದ್ದ ಕಾರಣ ಪೋಷಕರು ಆಕೆಯನ್ನ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಅಕ್ಷತಾ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದರು.

    ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗುವಂತೆ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ನಂತರ ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಹಿನ್ನಡೆಗೆ ಅತಿಯಾದ ಆತ್ಮವಿಶ್ವಾಸ, ಕಾರ್ಯಕರ್ತರ ಕಡೆಗಣನೆ ಕಾರಣ: ಡಿವಿಎಸ್

  • ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ – ಮೇ ತಿಂಗಳಲ್ಲೇ 172 ಕೇಸ್‌ ದಾಖಲು!

    ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ – ಮೇ ತಿಂಗಳಲ್ಲೇ 172 ಕೇಸ್‌ ದಾಖಲು!

    – ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಹಲವು ಮುನ್ನೆಚ್ಚರಿಕೆ ಕ್ರಮ

    ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ. ಡೆಂಗ್ಯೂ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಬೃಹತ್‌ ಬೆಂಗಳೂರು ಮಹಾನರ ಪಾಲಿಕೆ (BBMP) ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

    ಗುರುವಾರವೂ ಸಹ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯ (National Dengue Day) ಅಂಗವಾಗಿ ಬೆಂಗಳೂರು ಪೂರ್ವ ವಲಯದ ರಾಮಸ್ವಾಮಿ ಪಾಳ್ಯದಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದೆ. ಬಿಬಿಎಂಪಿ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು ಸಹ ಈ ಅಭಿಯಾನದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ.

    ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ (Mosquito) ಸಂತತಿ ಹೆಚ್ಚಾಗಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿಂಪಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬಿಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿದಂತೆ ಇನ್ನಿತರ ಕಡೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅಂತಹ ಸ್ಥಳಗಳಲ್ಲಿ ಎಚ್ಚರಿಕೆ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

    ಆಯಾ ವಲಯದ ವಾರ್ಡ್ ಮಟ್ಟದಲ್ಲಿ ಒಂದು ವಾರ್ಡ್‌ಗೆ 4 ಔಷಧಿ ಸಿಂಪಡಣೆ ಮಾಡುವ ತಂಡಗಳನ್ನು ನಿಯೋಜನೆ ಮಾಡಿದ್ದು, ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಲಾರ್ವಾ ಸಮೀಕ್ಷೆ ಪ್ರಾರಂಭ:
    ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಗ್ಯೂ ರೋಗ ಹರಡುತ್ತದೆ. ಆ ಸೊಳ್ಳೆಗಳು ತೆರೆದಿಟ್ಟ ನೀರಿನ ತೊಟ್ಟಿಗಳು, ಏರ್ ಕೂಲರ್ ಗಳು, ಹೂವಿನ ಕುಂಡದ ತಟ್ಟೆಗಳು, ಬಕೆಟ್‌ಗಳು, ಸಿಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪುಗಳು, ಒಡೆದ ಟೈರ್‌ಗಳಲ್ಲಿ ಉತ್ಪತ್ತಿಯಾಗುತ್ತವೆ. ಈ ಸಂಬಂಧ ಪ್ರಾರಂಭಿಕ ಹಂತದಲ್ಲೇ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪಿತ್ತಿಯಾಗುವ ತಾಣಗಳನ್ನು‌ ಗುರುತಿಸಿ ನಾಶಪಡಿಸಲಾಗುತ್ತದೆ.

    ಕೊಳಚೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು ಮನೆ-ಮನೆ ಭೇಟಿ ನೀಡಿ ಡೆಂಗ್ಯೂ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಹ ಹೇಳಿದ್ದಾರೆ.

    ಜಾಥಾ, ಧ್ವನಿವರ್ಧಕಗಳ ಮೂಲಕ ಜಾಗೃತಿ ಅಭಿಯಾನ:
    ನಗರದಲ್ಲಿ ಡೆಂಗ್ಯೂ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಆಯಾ ವಲಯಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಜಾಥಾ ಹಾಗೂ ಪಾಲಿಕೆಯ ಕಸದ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಡೆಂಗ್ಯೂ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಸಲಾಗುತ್ತಿದೆ. ಜೊತೆಗೆ ಮನೆ-ಮನೆಗೆ ತೆರಳಿ ಡೆಂಗ್ಯೂ ನಿಯಂತ್ರಣದ ಕುರಿತು ಭಿತ್ತಿಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ನುಡಿದಿದ್ದಾರೆ.

    ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ.ಮದನಿ, ಪೂರ್ವ ವಲಯ ಆರೋಗ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ, ಡೆಂಗ್ಯೂ ನೋಡಲ್ ಅಧಿಕಾರಿ ಸುಜಾತಾ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

    ಮೇ 1 ರಿಂದ 13ರ ವರೆಗೆ ದಾಖಲಾದ ಡೆಂಗ್ಯೂ ಪ್ರಕರಣಗಳು – ಯಾವ ವಲಯದಲ್ಲಿ ಎಷ್ಟು ಕೇಸ್‌?
    ಬೊಮ್ಮನಹಳ್ಳಿ: 23
    ಪೂರ್ವ: 41
    ಮಹದೇವಪುರ: 44
    ಆರ್.ಆರ್ ನಗರ: 08
    ದಕ್ಷಿಣ: 34
    ಪಶ್ಚಿಮ: 16
    ಯಲಹಂಕ: 06
    ದಾಸರಹಳ್ಳಿ: 00
    ಒಟ್ಟು: 172 ಪ್ರಕರಣ

  • ಡೆಂಗ್ಯೂ ಭೀತಿ; ಬಿಳಿರಕ್ತ ಕಣಗಳಿಗೆ ಹೆಚ್ಚಿದ ಬೇಡಿಕೆ!

    ಡೆಂಗ್ಯೂ ಭೀತಿ; ಬಿಳಿರಕ್ತ ಕಣಗಳಿಗೆ ಹೆಚ್ಚಿದ ಬೇಡಿಕೆ!

    – ರಕ್ತದಾನ ಶಿಬಿರಕ್ಕೆ ಮುಂದಾದ ಬ್ಲಡ್ ಬ್ಯಾಂಕ್‍ಗಳು..!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಪ್ರಕರಣಗಳ (Dengue Fever) ಏರಿಕೆ ಬೆನ್ನಲ್ಲೆ, ಆಸ್ಪತ್ರೆಗಳಿಗೆ ಇದೀಗ ಮತ್ತೊಂದು ರೀತಿಯ ಟೆನ್ಷನ್ ಶುರುವಾಗಿದೆ. ಡೆಂಗ್ಯೂ ಹೊಡೆತದಿಂದ ನಲುಗಿದ ರೋಗಿಗಳಲ್ಲಿ ಬಿಳಿರಕ್ತ ಕಣಗಳ ಕೊರತೆ ಉಂಟಾಗ್ತಿದ್ದು, ಇತ್ತ ಬ್ಲಡ್ ಬ್ಯಾಂಕ್‍ಗಳಿಗೂ (Blood Bank) ಸಂಕಷ್ಟ ಎದುರಾಗಿದೆ.

    ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ರಾಜ್ಯದಲ್ಲಿ ಮಳೆ ಇಲ್ಲದಿದ್ರೂ ರಾಜಧಾನಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗ್ತಾಲೇ ಇದೆ. ಡೆಂಗ್ಯು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದ್ರೂ ಕೂಡ, ಕೆಲ ರೋಗಿಗಳಿಗೆ ಬಿಳಿರಕ್ತಕಣಗಳ ಕೊರತೆ ಇರೋದರಿಂದ ಸಮಸ್ಯೆ ಎದುರಾಗ್ತಿದೆ. ಚಿಕಿತ್ಸೆ ವೇಳೆ ವೈಟ್ ಬ್ಲಡ್ ಸೆಲ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೇ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹೈರಾಣಾಗ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿಂದು ಗಣೇಶ ಪ್ರತಿಷ್ಠಾಪನೆ- ಮೆರವಣಿಗೆ, ವಿಶೇಷ ಪೂಜೆಗೆ ಸಿದ್ಧತೆ

    ಈ ಹಿಂದೆ ದಿನಕ್ಕೆ 10-12ರಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕತೆ ಇತ್ತು, ಇದೀಗ ದಿನಕ್ಕೆ 150 ಯುನಿಟ್ ನಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳ ಅವಶ್ಯಕತೆ ಎದುರಾಗಿದ್ದು, ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡೋಕೆ ಸಮಸ್ಯೆ ಉದ್ಭವಿಸಿದೆ. ಅತ್ತ, ಬ್ಲಡ್ ಬ್ಯಾಂಕ್‍ಗಳಲ್ಲೂ ಬಿಳಿ ರಕ್ತದಾನಿಗಳ ಕೊರತೆ ಎದುರಾಗಿದ್ದು, ಬ್ಲಡ್ ಬಾಂಕ್‍ಗಳು ರಕ್ತದಾನ ಶಿಬಿರಗಳನ್ನ ಹೆಚ್ಚಳ ಮಾಡೋಕೆ ಸಜ್ಜಾಗಿವೆ.

    ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಈ ಬಾರಿ ಡೆಂಗ್ಯೂ ಸಿಲಿಕಾನ್ ಸಿಟಿ ಮಂದಿಯನ್ನೇ ಹೆಚ್ಚು ಕಾಡಲು ಶುರು ಮಾಡಿದೆ. ಡೆಂಗ್ಯೂ ಕಾಣಿಸಿಕೊಂಡ ಕೆಲ ರೋಗಿಗಳಲ್ಲಿ ಮೂಗಿನಿಂದ ರಕ್ತ ಸೋರುವುದು, ಹಲ್ಲಿನ ವಸಡುಗಳಲ್ಲಿ ರಕ್ತ ಕಾಣಿಸುವುದು, ವಾಂತಿಯಲ್ಲಿ ರಕ್ತ ಬರುವುದು ಈ ರೀತಿ ಹಲವು ಲಕ್ಷಣ ಕಂಡುಬರ್ತಿದ್ದು, ಇದರಿಂದ ವೈಟ್ ಪ್ಲೇಟ್‍ಲೇಟ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡೋ ಅವಶ್ಯಕತೆ ಎದುರಾಗ್ತಿದೆ.

    ಡೆಂಗಿ ಕೇಸ್‍ನ ಅಂಕಿ ಅಂಶ:
    ವರ್ಷ – ಕೇಸ್‍ಗಳು
    2020 – 1127
    2021 – 1629
    2022 – 2335
    2023 – 4979

    ಸದ್ಯ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರೀ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿರೋದು ಆತಂಕ ಸೃಷ್ಟಿಸಿದೆ. ಇತ್ತ ಡೆಂಗ್ಯೂ ರೋಗಿಗಳಿಗೆ ಪ್ಲೇಟ್ ಲೇಟ್ಸ್ ಕೊರತೆ ಕೂಡ ಎದುರಾಗ್ತಿರೋದು ಆಸ್ಪತ್ರೆಗಳ ಸಿಬ್ಬಂದಿಗೆ ತಲೆನೋವು ತಂದಿಟ್ಟಿದೆ. ಸದ್ಯ ಬ್ಲಡ್ ಬ್ಯಾಂಕ್‍ಗಳು ಕೂಡ ರಕ್ತದಾನ ಶಿಬಿರಗಳ ಮೂಲಕ ಜಾಗೃತಿಗೆ ಮುಂದಾಗ್ತಿದ್ದು, ಡೆಂಗ್ಯೂ ಅಬ್ಬರ ಯಾವಾಗ ತಗ್ಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]