Tag: demonitisation

  • 2,000 ರೂ. ನೋಟಿನ ಕಥೆ ಮುಗಿದರೂ, ಕಾಫಿನಾಡ ಯುವಕನ ಬಾಳಲ್ಲಿ ಆ ನೋಟು ಎವರ್‌ಗ್ರೀನ್‌!

    2,000 ರೂ. ನೋಟಿನ ಕಥೆ ಮುಗಿದರೂ, ಕಾಫಿನಾಡ ಯುವಕನ ಬಾಳಲ್ಲಿ ಆ ನೋಟು ಎವರ್‌ಗ್ರೀನ್‌!

    ಚಿಕ್ಕಮಗಳೂರು: ಆರ್‌ಬಿಐ (RBI) 2,000 ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ಬ್ರೇಕ್‌ ಹಾಕಿದ್ದು, ಬ್ಯಾಂಕ್‌ಗಳಲ್ಲಿ ನೋಟುಗಳ ವಿನಿಯಮಕ್ಕೆ ದೇಶದ ಜನರಿಗೆ ಗಡುವು ನೀಡಿದೆ. ಇನ್ನು 4 ತಿಂಗಳಲ್ಲಿ 2,000 ರೂ. ಮುಖಬೆಲೆ ನೋಟಿಗೆ ಕೊನೆ ಮೊಳೆ ಕೂಡ ಬೀಳಲಿದೆ. ಆದರೆ ಜಿಲ್ಲೆಯ ಕಳಸ ತಾಲೂಕಿನ ತೇಜು ಎಂಬ ಯುವಕನ ಬದುಕಲ್ಲಿ ಎಷ್ಟೇ ವರ್ಷಗಳು ಕಳೆದರೂ ಆ 2,000 ರೂಪಾಯಿ ಮುಖಬೆಲೆಯ ನೋಟು ಅಚ್ಚಹಸಿರಾಗೇ ಇರಲಿದೆ.

    ಏಕೆಂದರೆ, ಆ ಯುವಕ ಪ್ರಧಾನಿ ಮೋದಿ ಮೇಲಿನ ಅಭಿಮಾನಕ್ಕಾಗಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್‍ನ್ನ 2,000 ರೂ. ನೋಟಿನಲ್ಲೇ ಮುದ್ರಣ ಹಾಕಿಸಿದ್ದ. ಆ ಮದುವೆ ಆಮಂತ್ರಣ ಪತ್ರಿಕೆಯನ್ನ ನೋಡಿದರೆ 2,000 ರೂ. ನೋಟನ್ನ ನೋಡುವುದೇ ಬೇಡ. ಅಷ್ಟು ಅಚ್ಚುಕಟ್ಟಾಗಿ ಮಾಡಿಸಿದ್ದರು. ನೋಟಿನಲ್ಲಿರುವ ನಂಬರ್, ನೋಟಿನ ಮಧ್ಯ ಭಾಗದಲ್ಲಿ ಇರುವ ಎಲ್ಲಾ ಭಾಷೆಯಲ್ಲಿ 2,000 ರೂ. ಎಂದು ಇರುವ ಜಾಗದಲ್ಲಿ ತನ್ನ ಹೆಸರಿನ ಜೊತೆ ಮದುವೆಯಾಗುವ ಹುಡುಗಿಯ ಹೆಸರನ್ನ ಹಾಕಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇರುವ ಜಾಗದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದು ಮಾಡಿಸಿದ್ದರು. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್‌ ಬ್ಯಾನ್‌ ಮಾಡಿದ RBI

    ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಜೀಯವರ ಫೋಟೋ ಇರುವ ಜಾಗದಲ್ಲಿ ವಧು-ವರರನ್ನ ಆಶೀರ್ವದಿಸುತ್ತಿರುವ ಗಣಪತಿಯ ಭಾವಚಿತ್ರವಿದೆ. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಕೂಡ ಇದ್ದು, ಅದನ್ನ ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿತ್ತು. ಸುಮಾರು 1,500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲಾ ಅದೇ ಕಾರ್ಡ್ ಹಂಚಿದ್ದ. ಇದೀಗ ಆರ್‌ಬಿಐ 2,000 ನೋಟನ್ನ ಹಿಂಪಡೆಯುತ್ತಿರುವಂತೆ ಯುವಕ ತೇಜು ಸ್ನೇಹಿತರು ಆ ನೋಟಿನ ಇನ್ವಿಟೇಷನ್ ಕಾರ್ಡ್‌ ಕಳಿಸಿ ನೆನಪಿಸಿಕೊಳ್ಳುತ್ತಿದ್ದಾರೆ.

    ಉಡುಪಿಯಲ್ಲಿ ಪ್ರಿಂಟ್ ಹಾಕಿಸಿದ್ದ ಈ ಕಾರ್ಡನ್ನ ಅಚ್ಚುಕಟ್ಟಾಗಿ ಪ್ರಿಂಟ್ ಹಾಕಿಕೊಡಲು ಉಡುಪಿಯ ಆಪ್‍ಸೆಟ್ ಪ್ರಿಂಟರ್‌ನವರು ಕೂಡ ವಾರಗಟ್ಟಲೇ ಟೈಂ ತೆಗೆದುಕೊಂಡಿದ್ದರು. ಇನ್ಮುಂದೆ ಅದೆಲ್ಲ ನೆನಪಷ್ಟೆ. ಮೋದಿ ಮೇಲಿನ ಅಭಿಮಾನಕ್ಕಾಗಿ ವಿಶೇಷವಾಗಿ ಮದುವೆ ಆಮಂತ್ರಣ ಕಾರ್ಡ್ ಮಾಡಿಸಬೇಕೆಂದು ಡಿಫರೆಂಟ್ ಆಗಿ ಕಾರ್ಡ್ ಮಾಡಿಸಿದ್ದ ಕಳಸ ತಾಲೂಕಿನ ಯುವಕನ ಬಾಳಲ್ಲಿ 2,000 ರೂಪಾಯಿ ನೋಟು ಎಂದೆಂದೂ ಅಚ್ಚಹಸಿರಾಗಿರಲಿದೆ. ಇದನ್ನೂ ಓದಿ: 2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

  • 2 ಸಾವಿರ ಮುಖಬೆಲೆಯ ನೋಟ್ ಮುದ್ರಣ ನಿಲ್ಲಿಸಲಿದೆ ಆರ್‌ಬಿಐ

    2 ಸಾವಿರ ಮುಖಬೆಲೆಯ ನೋಟ್ ಮುದ್ರಣ ನಿಲ್ಲಿಸಲಿದೆ ಆರ್‌ಬಿಐ

    ನವದೆಹಲಿ: ದೇಶದಲ್ಲಿನ ಕಪ್ಪುಹಣಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

    ನವೆಂಬರ್ 8, 2016ರಲ್ಲಿ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.

    ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್‍ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.

    2 ಸಾವಿರ ರೂ. ನೋಟುಗಳ ಮುದ್ರಣವನ್ನು ಕಡಿಮೆ ಮಾಡಿ, ಮುಂದಿನ ದಿನಗಳಲ್ಲಿ ಕಡಿಮೆ ಮೌಲ್ಯದ ನೋಟುಗಳ ಚಲಾವಣೆಯನ್ನು ಸರ್ಕಾರ ಹೆಚ್ಚಿಸಲಿದೆ. ಇದು ಹೊಸ ಪ್ರಕ್ರಿಯೆ ಏನಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

    ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ. 86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ 2018ರ ಮಾರ್ಚ್ 31ಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಶೇ.37.3ಕ್ಕೆ ಕುಸಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಲಾವಣೆಗೆ ಬರಲಿದೆ ಹೊಸ 100 ರೂ. ನೋಟು

    ಚಲಾವಣೆಗೆ ಬರಲಿದೆ ಹೊಸ 100 ರೂ. ನೋಟು

    ನವದೆಹಲಿ: 2018ರ ಎಪ್ರಿಲ್‍ನಲ್ಲಿ ಹೊಸ ವಿನ್ಯಾಸದ 100 ರೂ. ನೋಟುಗಳನ್ನು ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಮುಂದಾಗಿದೆ.

    100 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣ ಪ್ರಕ್ರಿಯೆಯನ್ನು ಎಪ್ರಿಲ್ ವೇಳೆ ಆರಂಭಿಸಲಾಗುವುದು. 200 ರೂ.ಗಳ ಹೊಸ ನೋಟುಗಳ ಮುದ್ರಣ ಮುಗಿದ ನಂತರ ಹೊಸ ವಿನ್ಯಾಸ 100 ರೂ. ನೋಟುಗಳ ಮುದ್ರಣ ಆರಂಭವಾಗಲಿದೆ ಎಂದು ಆರ್‍ಬಿಐ ಮೂಲಗಳು ತಿಳಿಸಿವೆ.

    ಆರ್‍ಬಿಐ ಆಗಸ್ಟ್ ತಿಂಗಳಿನಲ್ಲಿ 200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತಂದಿತ್ತು. ಆದರೆ ಈ ನೋಟುಗಳು ಇನ್ನೂ ಗ್ರಾಹಕರ ಕೈ ಸೇರಿಲ್ಲ. ಕೆಲ ಬ್ಯಾಂಕ್ ಗಳು 200 ರೂ. ನೋಟುಗಳನ್ನು ಹಾಕಲು ಎಟಿಎಂ ಯಂತ್ರಗಳನ್ನು ಪರಿವರ್ತನೆ ಮಾಡಲು ಸೂಚಿಸಿದೆ.

    ಎಟಿಎಂ ಯಂತ್ರಗಳ ಮರು ಪರಿವರ್ತನೆಯನ್ನು ತಪ್ಪಿಸಲು ಹೊಸ ನೋಟುಗಳು ಸಮಾನ ಅಳತೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. 

    ಮುಂದಿನ 6 ತಿಂಗಳ ಒಳಗಡೆ 200 ರೂ. ನೋಟುಗಳು ಎಲ್ಲ ಜನರ ಕೈಗೆ ಸಿಕ್ಕಿದ ಬಳಿಕ ಹೊಸ 100 ರೂ. ನೋಟುಗಳನ್ನು ಮುದ್ರಣ ಮಾಡಲು ಆರ್‍ಬಿಐ ಮುಂದಾಗಿದೆ. ಎಟಿಎಂನಲ್ಲಿರುವ ಒಟ್ಟು 4 ಕ್ಯಾಸೆಟ್ ಗಳಲ್ಲಿ ಒಂದರಲ್ಲಿ 100 ರೂ. ಮಾತ್ರ ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ನವೆಂಬರ್ 8 ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಆರ್‍ಬಿಐ 2 ಸಾವಿರ ರೂ. ಮತ್ತು 500 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು. ಇದಾದ ಬಳಿಕ 200 ರೂ. ಮತ್ತು 50 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು.

    ನೋಟು ಬ್ಯಾನ್ ಬಳಿಕ ಜನರಿಗೆ ಆಗಲಿರುವ ಸಮಸ್ಯೆಯನ್ನು ತಪ್ಪಿಸಲು ಬಿಡುಗಡೆಯಾಗಿದ್ದ 2 ಸಾವಿರ ರೂ. ನೋಟುಗಳ ಮುದ್ರಣ ಕಾರ್ಯವನ್ನು ಆರ್‍ಬಿಐ ಈಗ ಸಂಪೂರ್ಣ ಸ್ಥಗಿತಗೊಳಿಸಿದೆ.