Tag: demonetisation

  • ನಿಷೇಧವಾಗಿದ್ದ ನೋಟುಗಳು ನಿಮ್ಮಲ್ಲಿದ್ದರೆ ದಂಡ ಕಟ್ಟಲು ರೆಡಿಯಾಗಿ!

    ನಿಷೇಧವಾಗಿದ್ದ ನೋಟುಗಳು ನಿಮ್ಮಲ್ಲಿದ್ದರೆ ದಂಡ ಕಟ್ಟಲು ರೆಡಿಯಾಗಿ!

    ನವದೆಹಲಿ: ಕಳೆದ ವರ್ಷ ನವೆಂಬರ್‍ನಲ್ಲಿ ನಿಷೇಧವಾಗಿದ್ದ ನೋಟುಗಳು ಇನ್ನೂ ನಿಮ್ಮಲ್ಲಿದ್ದರೆ ದಂಡ ಕಟ್ಟಲು ರೆಡಿಯಾಗಿ.

    ಇದೀಗ ವ್ಯಕ್ತಿಯೊಬ್ಬ 10ಕ್ಕಿಂತ ಹೆಚ್ಚು ಮತ್ತು ವಿಶೇಷ ಅಧ್ಯಯನ, ಹಳೆ ನೋಟುಗಳನ್ನು ಸಂಗ್ರಹಿಸುವ ಮಂದಿ 25ಕ್ಕಿಂತ ಹೆಚ್ಚಿನ ಹಳೆಯ ನೋಟುಗಳನ್ನು ಸಂಗ್ರಹಿಸುವಂತಿಲ್ಲ. ಒಂದು ವೇಳೆ ಈ ಮಿತಿಗಿಂತಲೂ ಹೆಚ್ಚಿನ ನೋಟುಗಳು ನಿಮ್ಮಲ್ಲಿದ್ದರೆ ನೀವು ದಂಡ ಕಟ್ಟಬೇಕು.

    ಡಿಸೆಂಬರ್‍ನಲ್ಲಿ ಹಳೆಯ ನೋಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರದ ಹೊಣೆಗಾರಿಕೆಯನ್ನು ಕೊನೆಗೊಳಿಸುವುದಕ್ಕಾಗಿ ನಿರ್ದಿಷ್ಟ ಬ್ಯಾಂಕ್ ನೋಟುಗಳ (ಹೊಣೆಗಾರಿಕೆ ಸ್ಥಗಿತ) ಮಸೂದೆ ಮಂಡಿಸಲಾಗಿತ್ತು. ಈ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದು, ಈಗ ಕಾಯ್ದೆಯಾಗಿ ಜಾರಿಗೆ ಬಂದಿದೆ.

    ಒಬ್ಬ ವ್ಯಕ್ತಿ 10 ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಇಟ್ಟುಕೊಂಡರೆ ಅದು ಅಪರಾಧ ಎನ್ನುವ ಅಂಶ ಈ ಕಾಯ್ದೆಯಲ್ಲಿದೆ. ಅಪರಾಧ ಸಾಬೀತಾದರೆ ಕನಿಷ್ಠ 10 ಸಾವಿರ ಅಥವಾ ಹೊಂದಿರುವ ನೋಟುಗಳ ಐದು ಪಟ್ಟು  ಹೆಚ್ಚು ಮೊತ್ತದಷ್ಟು ದಂಡ ವಿಧಿಸಬಹುದಾಗಿದೆ.

    ನೋಟ್ ನಿಷೇಧಗೊಂಡ ಅವಧಿಯಲ್ಲಿ ವಿದೇಶಕ್ಕೆ ತೆರಳಿದ್ದ ವ್ಯಕ್ತಿಗಳಿಗೆ ಹಳೆಯ ನೋಟುಗಳನ್ನು ಜಮಾ ಮಾಡಲು ಮಾರ್ಚ್ 31ರ ವರೆಗೆ ಅನುಮತಿ ನೀಡಲಾಗಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆಯನ್ನು ತೋರಿಸಿ ಹಣವನ್ನು ಜಮೆ ಮಾಡಿದ್ದರೆ, ಆ ವ್ಯಕ್ತಿಗಳಿಗೆ ಕನಿಷ್ಠ 5 ಸಾವಿರ ರೂ. ಅಥವಾ ಹೊಂದಿರುವ ನೋಟುಗಳ ಐದು ಪಟ್ಟು ಯಾವುದು ಹೆಚ್ಚೋ ಆ ಮೊತ್ತದಷ್ಟು ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 8ರಂದು ಭ್ರಷ್ಟಾಚಾರ ಹಾಗೂ ಕಪ್ಪುಹಣವನ್ನು ಹೋಗಲಾಡಿಸುವ ಸಲುವಾಗಿ ಏಕಾಏಕಿ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿತ್ತು. ಆ ಬಳಿಕ ಡಿಸೆಂಬರ್ 31ರವರೆಗೆ ಹಳೆಯ ನೋಟುಗಳನ್ನು ಬ್ಯಾಂಕ್‍ಗಳಲ್ಲಿ ಜಮೆ ಮಾಡಲು ಕಾಲಾವಕಾಶ ನೀಡಲಾಗಿತ್ತು.

  • ನಾಳೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ- ಯಾವ ಬ್ಯಾಂಕ್ ಇರುತ್ತೆ, ಯಾವುದು ಇರಲ್ಲ?

    ನಾಳೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ- ಯಾವ ಬ್ಯಾಂಕ್ ಇರುತ್ತೆ, ಯಾವುದು ಇರಲ್ಲ?

    ನವದೆಹಲಿ: ಮಂಗಳವಾರದಂದು ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಂದ್‍ಗೆ ಕರೆ ನೀಡಿವೆ.

    ಎಸ್‍ಬಿಐ ಜೊತೆ ಸಹವರ್ತಿ ಬ್ಯಾಂಕ್‍ಗಳ ವಿಲೀನಕ್ಕೆ ವಿರೋಧಿಸಿ, ನೋಟು ನಿಷೇಧದಿಂದ ಬ್ಯಾಂಕ್‍ಗಳಿಗೆ ನಷ್ಟವಾದ ವೆಚ್ಚ ಭರಿಸುವಂತೆ ಹಾಗೂ ಸೇವಾಭದ್ರತೆ ಸೇರಿದಂತೆ ಸುಮಾರು 30 ಬೇಡಿಕೆಗಳನ್ನು ಮುಂದಿಟ್ಟು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಂಗಳವಾರಂದು ಬಂದ್‍ಗೆ ಕರೆ ನೀಡಿದೆ. ದೇಶದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

    ದೇಶದ್ಯಾಂತ ಬ್ಯಾಂಕ್‍ಗಳು ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ, ಬ್ಯಾಂಕಿಂಗ್ ಸೇವೆ ಬಹುತೇಕ ಸ್ತಬ್ಧವಾಗಲಿದ್ದು, ಎಟಿಎಂನಲ್ಲಿ ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ.

    ಯಾವ ಬ್ಯಾಂಕ್‍ಗಳು ಇರಲ್ಲ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಸ್‍ಬಿಐ, ಎಸ್‍ಬಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಈ ಬ್ಯಾಂಕ್‍ಗಳ ಸೇವೆ ನಾಳೆ ಇರುವುದಿಲ್ಲ.

    ಯಾವ ಬ್ಯಾಂಕ್‍ಗಳು ಇರುತ್ತೆ?: ಐಸಿಐಸಿಐ, ಹೆಚ್‍ಡಿಎಫ್‍ಸಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರ ಸೇರಿದಂತೆ ಖಾಸಗಿ ಬ್ಯಾಂಕ್‍ಗಳು ನಾಳೆ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

  • 1000 ರೂ. ನೋಟು ಮತ್ತೆ ಬರುತ್ತಾ?: ಎಲ್ಲ ವದಂತಿಗೆ ತೆರೆ ಎಳೆದ ಸರ್ಕಾರ

    1000 ರೂ. ನೋಟು ಮತ್ತೆ ಬರುತ್ತಾ?: ಎಲ್ಲ ವದಂತಿಗೆ ತೆರೆ ಎಳೆದ ಸರ್ಕಾರ

    ನವದೆಹಲಿ: 2016ರ ನವೆಂಬರ್ 8ರಂದು ನಿಷೇಧಿಸಲಾದ 1 ಸಾವಿರ ರೂ. ನೋಟನ್ನು ಮತ್ತೆ ಚಲಾವಣೆಗೆ ತರುವ ಬಗ್ಗೆ ಸರ್ಕಾರ ಚಿಂತಿಸಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ.

    1 ಸಾವಿರ ರೂ. ನೋಟನ್ನು ಹೊಸ ರೂಪದಲ್ಲಿ ಶೀಘ್ರದಲ್ಲೇ ಚಲಾವಣೆಗೆ ತರಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನೋಟು ಮುದ್ರಣಾಲಯಗಳಲ್ಲಿ ಮುದ್ರಣಾ ಕಾರ್ಯ ಆರಂಭವಾಗಿದೆ ಎಂಬ ವದಂತಿಗೆ ಈ ಮೂಲಕ ಬ್ರೇಕ್ ಬಿದ್ದಿದೆ.

    ಈ ಬಗ್ಗೆ ಟ್ವೀಟ್ ಮಾಡಿರೋ ಶಕ್ತಿಕಾಂತ್ ದಾಸ್, ಹೊಸ 1 ಸಾವಿರ ರೂ. ನೋಟನ್ನು ಪರಿಚಯಿಸುವ ಬಗ್ಗೆ ಸರ್ಕಾರ ಚಿಂತಿಸಿಲ್ಲ. ಅದರ ಬದಲು 500ರೂ. ಹಾಗೂ ಇತರೆ ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣ ಮತ್ತು ಪೂರೈಕೆಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.

    ಅಲ್ಲದೆ ಎಟಿಎಂಗಳಲ್ಲಿ ಹಣದ ಕೊರತೆ ಬಗ್ಗೆ ಬಂದಿರುವ ದೂರುಗಳಿಗೆ ಸ್ಪಂದಿಸಲಾಗುತ್ತಿದೆ. ಗ್ರಾಹಕರು ತಮಗೆ ಬೇಕಿರುವಷ್ಟು ಮಾತ್ರ ಹಣವನ್ನು ಡ್ರಾ ಮಾಡಿಕೊಳ್ಳಲು ಮನವಿ ಮಾಡುತ್ತೇವೆ. ಅಗತ್ಯಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡೋದ್ರಿಂದ ಇತರರಿಗೆ ಹಣ ಸಿಗುವುದಿಲ್ಲ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನ ನಿಷೇಧಿಸಿದ ನಂತರ ಹೊಸ ರೂಪದಲ್ಲಿ 500 ರೂ. ನೋಟು ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ನೋಟನ್ನು ಪರಿಚಯಿಸಲಾಗಿದೆ.

  • ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಮೈಸೂರು: ದೇಶದ ಎಲ್ಲೆಡೆ ಡಿಜಿಟಲ್ ಪೇಮೆಂಟ್‍ನದ್ದೇ ಸದ್ದು. ಅದರಲ್ಲೂ ನೋಟ್ ಬ್ಯಾನ್ ಆದ ಮೇಲಂತೂ ಡಿಜಿಟಲ್ ಪೇಮೆಂಟ್ ದೊಡ್ಡ ಕ್ರಾಂತಿಯ ರೀತಿ ಮಾರ್ಪಟಿದ್ದೆ. ಮೈಸೂರಿನ ಶೌಚಾಲಯದಲ್ಲೂ ಇದೀಗ ಡಿಜಿಟಲ್ ಪೇಮೆಂಟ್ ಶುರುವಾಗಿದೆ.

    ನೋಟ್ ಬ್ಯಾನ್ ಬಳಿಕವಂತೂ ಬೀದಿ ವ್ಯಾಪಾರಿಗಳಿಂದ ಹಿಡಿದು ಚಿಕ್ಕ ಚಿಕ್ಕ ಅಂಗಡಿ ಮಂದಿ ಡಿಜಿಟಲ್ ಪೇಮೆಂಟ್‍ಗೆ ಜೈ ಅಂದಿದ್ರು. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿ ಮಾತ್ರ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಪರದಾಡಿದ್ದಂತೂ ಸತ್ಯ. ಇದರ ಮಧ್ಯೆ ಸ್ವಚ್ಛನಗರಿ ಮೈಸೂರಿನಲ್ಲಿ ಅಪರೂಪದ ಶೌಚಾಲಯವಿದೆ. ಇಲ್ಲಿ ನಿಮಗೆ ಚಿಲ್ಲರೆ ಸಮಸ್ಯೆ ಎದುರಾಗಲ್ಲ. ಕಾರಣ ಈ ಶೌಚಾಲಯ ನಡೆಸುವವರು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಶೌಚಾಲಯ ಬಳಸುವವರಿಗಾಗಿ ಪೇಟಿಎಂ ಅಳವಡಿಸಿದ್ದಾರೆ.

    ಮೈಸೂರಿನ ಮಹಾನಗರ ಪಾಲಿಕೆ ಹಿಂಭಾಗದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ನಿತ್ಯ ಬರುವ ನೂರಾರು ಜನರಲ್ಲಿ ಶೇ. 20ರಷ್ಟು ಮಂದಿ ಪೇಟಿಎಂ ಮೂಲಕವೇ ಹಣ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿಯೇ ಮೈಸೂರಿನ ಈ ಶೌಚಾಲಯ ಮಾದರಿಯಾಗಿದ್ದು. ಇದನ್ನು ನೋಡಿದ ಇನ್ನಷ್ಟು ಮಂದಿ ಡಿಜಿಟಲ್ ಪೇಮೆಂಟ್‍ನತ್ತ ಒಲವು ತೋರಿದ್ದಾರೆ.

  • ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಸಂಗ್ರಹಿಸಲು ಮುಂದಾಗಿದ್ರು. ನಂವೆಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧವಾಗಿದೆ. ಆದ್ರೆ ಹುಂಡಿ ತೆಗೆದಾಗ ನಿಷೇಧಿತ 500 ರೂಪಾಯಿ ಹಾಗೂ ನಕಲಿ 2 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿದೆ.

    ಹುಂಡಿಯಲ್ಲಿ ಪತ್ತೆಯಾದ 2000 ಮುಖಬೆಲೆಯ ಹಾಗೂ ಹಳೇ 500 ರೂ. ನೋಟು ಮಕ್ಕಳು ಆಡುವ ಆಟಿಕೆ ನೋಟುಗಳಾಗಿವೆ. ಆಟಿಕೆಯ ಎರಡು ಸಾವಿರದ ನೋಟು ಗಾತ್ರದಲ್ಲಿ ಚಿಕ್ಕದಾಗಿದ್ದು, ಬಹುತೇಕ ಅಸಲಿ ನೋಟಿನ ವಿನ್ಯಾಸವನ್ನೇ ಹೋಲುತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಕ್ಕಳು ಹುಂಡಿಯಲ್ಲಿ ಆಟಿಕೆ ನೋಟುಗಳನ್ನು ಹಾಕಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹುಂಡಿಯಲ್ಲಿ ಒಟ್ಟು 38,770 ರೂಪಾಯಿ ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ್ ಮಾಹಿತಿ ನೀಡಿದ್ರು.

  • ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಇಂದಿಗೆ 100 ದಿನ. ಹೊಸ 2000 ಸಾವಿರ ನೋಟ್ ಕೈಗೆ ಬಂದು ಮೂರು ತಿಂಗಳೇ ಕಳೆದಿವೆ. ಈ ಮಧ್ಯೆ ಮೈಸೂರಿನಲ್ಲಿ 2000 ನೋಟು ಪುಡಿ ಪುಡಿಯಾಗಿದ್ದ ಸುದ್ದಿ ನೋಡಿದ್ರಿ. ಅದೇ ರೀತಿಯ ಘಟನೆ ಬೆಂಗಳೂರಿನ ಪೀಣ್ಯದಲ್ಲೂ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪೀಣ್ಯ ದಾಸರಹಳ್ಳಿಯ ನಿರಂಜನ್ ಹೆಗಡೆಯವರಿಗೆ ಸಿಕ್ಕಿರುವ 2000 ಸಾವಿರ ರೂ. ಹೊಸ ನೋಟ್ ಕೂಡ ಪುಡಿ ಪುಡಿಯಾಗಿ ಉದುರುತ್ತಿದೆ.

    ಕಳೆದ ಮೂರು ದಿನಗಳ ಹಿಂದೆ ನಿರಂಜನ್ ಹೆಗಡೆಯವರ ಹಾರ್ಡ್‍ವೇರ್ ಶಾಪ್‍ಗೆ ಬಂದ ಗ್ರಾಹಕರೊಬ್ಬರು ಈ ನೋಟನ್ನ ಕೊಟ್ಟಿದ್ದಾರೆ. ಆದ್ರೆ ಇದೀಗ ಈ ನೋಟ್‍ನ್ನು ಬ್ಯಾಂಕ್‍ನವರಿಗೆ ತೋರಿಸಿದ್ರೆ ಇದು ನಕಲಿ ನೋಟ್ ಅಲ್ಲ ಒರಿಜಿನಲ್ ನೋಟು ಅದ್ರೆ ಯಾಕೆ ಹೀಗೆ ಆಗ್ತಿದೆ ಅಂತಾ ಗೊತ್ತಿಲ್ಲ ಅಂತಾರೆ ಎಂಬುವುದಾಗಿ ತಿಳಿದುಬಂದಿದೆ.

    https://www.youtube.com/watch?v=VqP0ijlkl6Q&feature=youtu.be

  • ಪಂಚರಾಜ್ಯ ಚುನಾವಣಾ ಕದನ ಆರಂಭ – ಗೋವಾ, ಪಂಜಾಬ್‍ನಲ್ಲಿಂದು ಮತದಾನ

    ಪಣಜಿ/ಚಂಡೀಘಢ: ನೋಟ್‍ಬ್ಯಾನ್ ಬಳಿಕ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಇವತ್ತು ಗೋವಾ ಮತ್ತು ಪಂಜಾಬ್ ವಿಧಾನಸಭೆಗಳಿಗೆ ಚುನಾವಣೆ ನಡೀತಿದೆ.

    ಗೋವಾದಲ್ಲಿ 40 ಹಾಗೂ ಪಂಜಾಬ್‍ನಲ್ಲಿ 117 ಸೀಟ್‍ಗಳಿವೆ. ಪಂಜಾಬ್‍ನಲ್ಲಿ ಅಕಾಲಿದಳ-ಬಿಜೆಪಿ ಮೈತ್ರಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದರೆ, ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಅಖಾಡಕ್ಕೆ ಇಳಿದಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಪಂಜಾಬ್‍ನಲ್ಲಿ ಕಾಂಗ್ರೆಸ್ ಹಾಗೂ ಆಪ್ ಮಧ್ಯೆ ಫೈಟ್ ಇದೆ.

    ಗೋವಾದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಾಯಕತ್ವದಲ್ಲಿ ಬಿಜೆಪಿ ಮತ ಯಾಚಿಸಿದ್ದರೆ, ಕಾಂಗ್ರೆಸ್ ಹಾಗೂ ಆಪ್ ಸಹ ಸ್ಪರ್ಧೆಯೊಡ್ಡುತ್ತಿವೆ. ಎರಡು ರಾಜ್ಯಗಳ ಫಲಿತಾಂಶ ಮಾರ್ಚ್ 11ಕ್ಕೆ ಹೊರ ಬೀಳಲಿದೆ.

  • ನೋಟು ನಿಷೇಧವಾದ ಬಳಿಕ ಬ್ಯಾಂಕ್‍ಗಳಲ್ಲಿ ಒಟ್ಟು 7,147 ಲಕ್ಷ ರೂ. ಅಕ್ರಮ ವಹಿವಾಟು

    ನವದೆಹಲಿ: ನೋಟು ನಿಷೇಧವಾದ ಬಳಿಕ ಬ್ಯಾಂಕ್‍ಗಳ ಮೂಲಕ ಒಟ್ಟು 7,147 ಲಕ್ಷ ರೂ. ಹಣವನ್ನು ಅಕ್ರಮವಾಗಿ ವಿನಿಮಯ ಮಾಡಿ ವ್ಯವಹಾರ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ರಾಜ್ಯ ಖಾತೆಯ ಸಚಿವ ಸಂತೋಷ್ ಕುಮಾರ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

    ಯಾವ ಬ್ಯಾಂಕಿನಿಂದ ಎಷ್ಟು ಅಕ್ರಮ?
    ಅಕ್ರಮ ಎಸಗಿದ್ದಕ್ಕಾಗಿ 5 ಬ್ಯಾಂಕ್‍ಗಳ 20 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್ 3 ಶಾಖೆಯಲ್ಲಿ 4,629 ಲಕ್ಷ ರೂ. ಅಕ್ರಮ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿಯನ್ನು ಅಮಾನತು ಮಾಡಲಾಗಿದೆ.

    ಧನಲಕ್ಷ್ಮಿ ಬ್ಯಾಂಕಿನ 6 ಶಾಖೆಗಳಲ್ಲಿ ನಲ್ಲಿ 2,267 ಲಕ್ಷ ರೂ. ಅಕ್ರಮ ನಡೆದಿದ್ದು 8 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ 2 ಶಾಖೆಗಳಲ್ಲಿ 190 ಲಕ್ಷ ರೂ. ಅಕ್ರಮ ನಡೆದಿದ್ದು, 4 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಬ್ಯಾಂಕ್ ಅಫ್ ಮಹಾರಾಷ್ಟ್ರದ 2 ಶಾಖೆಯಲ್ಲಿ 6 ಮಂದಿ 54.90 ಲಕ್ಷ ರೂ. ಅಕ್ರಮ ಎಸಗಿದ್ದರೆ, ಸಿಂಡಿಕೇಟ್ ಬ್ಯಾಂಕಿನ 1 ಶಾಖೆಯಲ್ಲಿ 6 ಲಕ್ಷ ರೂ. ಅಕ್ರಮ ವಹಿವಾಟು ನಡೆದಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.