ಕಾನ್ಪುರ: ಅಂದಾಜು 100 ಕೋಟಿ ರೂ. ಮೊತ್ತದ ಬ್ಯಾನ್ ಆದ ನೋಟುಗಳನ್ನ ಉತ್ತರಪ್ರದೇಶ ಪೊಲೀಸರು ಬುಧವಾರದಂದು ಕಾನ್ಪುರದಲ್ಲಿ ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಲಾಗಿರೋ ಹಣದ ನಿರ್ದಿಷ್ಟ ಮೊತ್ತವನ್ನು ತಿಳಿಯಲು ಎಣಿಕಾ ಕಾರ್ಯ ನಡೆಯುತ್ತಿದೆ. ಜಪ್ತಿಯಾಗಿರೋ ಹಣ ಹಳೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳಲ್ಲಿವೆ. ಕಾನ್ಪುರದ ಸೇಸಾಮೌ ಪಾಕೆಟ್‍ನಲ್ಲಿ ಈ ದಾಳಿ ನಡೆದಿದೆ.
ಕೋಟಿಗಟ್ಟಲೆ ಬ್ಯಾನ್ ಆದ ನೋಟುಗಳು ಕಾನ್ಪುರ ನಿವಾಸಿಯೊಬ್ಬರ ಮನೆಯಲ್ಲಿದೆ ಎಂದು ನಮಗೆ ಮಾಹಿತಿ ಬಂದಿತ್ತು. ಆರ್‍ಬಿಐ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ನಡೆಸಿತ್ತು. ಇನ್ನೂ ಶೋಧ ಕಾರ್ಯ ಹಾಗೂ ಎಣಿಕಾ ಕಾರ್ಯ ನಡೆಯುತ್ತಿರುವುದರಿಂದ ನಿಗದಿತ ಮೊತ್ತ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಎಸ್‍ಎಸ್‍ಪಿ ಎಕೆ ಮೀನಾ ಹೇಳಿದ್ದಾರೆ.
ಕಂತೆ ಕಂತೆ ನೋಟುಗಳನ್ನ ಹಾಸಿಗೆಯಂತೆ ಜೋಡಿಸಿರುವ ಫೋಟೋ ಹಾಗೂ ವಿಡಿಯೋವನ್ನ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ನೋಟುಗಳ ಆರೋಪಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಐಟಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿತ್ತು.
Received information of presence of demonetised currency worth crores at a person's residential premises in Kanpur, raid was conducted, RBI and I-T dept officials informed, final amount not ascertained as search & counting underway, questioning on: AK Meena, SSP, #Kanpurpic.twitter.com/Tqup83cXhj
Demonetized currency worth crores seized from a residential premises in Kanpur, counting underway, questioning on. (Outside visuals) pic.twitter.com/wmWB1Tyu0z
ತಿರುವನಂತಪುರಂ: ಕಳೆದ ವರ್ಷ ನಿಷೇಧಗೊಂಡಿರುವ 500 ಮತ್ತು 1 ಸಾವಿರ ರೂ. ನೋಟುಗಳು ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ.
ಹೌದು. 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ವೇಳೆ ಇಲ್ಲಿಯ ಪ್ರಚಾರ ಕಾರ್ಯಗಳಲ್ಲಿ ಹಾರ್ಡ್ ಬೋರ್ಡ್ ಗಳನ್ನು ಬಳಸಲಾಗುತ್ತದೆ. ಈ ಹಾರ್ಡ್ ಬೋರ್ಡ್ ಗಳನ್ನು ಭಾರತದಲ್ಲಿ ನಿಷೇಧಗೊಂಡಿರುವ ನೋಟುಗಳನ್ನು ತಯಾರಿಸಿ ನಿರ್ಮಾಣ ಮಾಡಲಾಗುತ್ತಿದೆ.
ದಕ್ಷಿಣ ಆಫ್ರಿಕಾಗೆ ಹೇಗೆ ಹೋಗುತ್ತೆ?
ನಿಷೇಧಗೊಂಡಿರುವ ನೋಟುಗಳನ್ನು ಸುಟ್ಟರೆ ಪರಿಸರ ಮಾಲಿನ್ಯವಾಗುವ ಕಾರಣ ಆರ್‍ಬಿಐ ಕೇರಳದ ಕಣ್ಣೂರಿನಲ್ಲಿರವ ವೆಸ್ಟರ್ನ್ ಇಂಡಿಯಾ ಪ್ಲೈವುಡ್(ಡಬ್ಲ್ಯೂಐಪಿ) ಕಂಪೆನಿಯನ್ನು ಸಂಪರ್ಕಿಸಿತ್ತು. ಬಳಿಕ ಕಂಪೆನಿ ಹಳೆಯ ನೋಟುಗಳನ್ನು ಬಳಸಿ ಈಗ ಪ್ಲೈವುಡ್ ಹಾರ್ಡ್ ಬೋರ್ಡ್ ಗಳನ್ನು ತಯಾರಿಸಿದೆ.
ಕಂಪನಿಯ ಪ್ರಧಾನ ವ್ಯವಸ್ಥಾಪಕ ಟಿಐ ಬಾವ ಪ್ರತಿಕ್ರಿಯಿಸಿ, ನೋಟ್ ನಿಷೇಧಗೊಂಡ ಬಳಿಕ ತಿರುವನಂತಪುರಂನಲ್ಲಿರುವ ಆರ್‍ಬಿಐ ಕಚೇರಿ ನಮ್ಮನ್ನು ಸಂಪರ್ಕಿಸಿತು. ಬಳಿಕ ನಾವು ನೋಟಿನ ಸ್ಯಾಂಪಲ್ ನೀಡುವಂತೆ ಕೇಳಿದ್ವಿ. ನಮ್ಮ ರಿಸರ್ಚ್ ತಂಡ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸುವುದು ಹೇಗೆ ಎನ್ನುವುದನ್ನು ಕಂಡುಹಿಡಿದರು. ಬಳಿಕ ಈ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸಲಾಗಿದ್ದು, ಇವುಗಳು 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ ಎಂದು ಹೇಳಿದರು.
ಹೇಗೆ ಹಾರ್ಡ್ ಬೋರ್ಡ್ ತಯಾರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಹೆಚ್ಚಿನ ಶಾಖದಲ್ಲಿ ನೋಟಿನ ಚೂರುಗಳನ್ನು ಕುದಿಸಿ ಹಿಟ್ಟು ಮಾಡಲಾಗುತ್ತದೆ. ಈ ಹಿಟ್ಟಿನ ಜೊತೆ ಮರದ ಹಿಟ್ಟನ್ನು ಮಿಶ್ರಣ ಮಾಡಿ ಪ್ಲೈವುಡ್ ಬೋರ್ಡ್ ತಯಾರಿಸಲಾಗಿದೆ. ಇಂತಹ ಬೋರ್ಡ್ ಗಳಿಗೆ ಆಫ್ರಿಕಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬೇಡಿಕೆಯಿದೆ ಎಂದು ಬಾವ ಉತ್ತರಿಸಿದರು.
ಪ್ರಸ್ತುತ ಭಾರತದಲ್ಲಿ ನೋಟನ್ನು ಸಂಸ್ಕರಿಸಿ ಅದನ್ನು ಪ್ಲೈವುಡ್ ಮಾಡುವ ತಂತ್ರಜ್ಞಾನ ಡಬ್ಲ್ಯೂಐಪಿ ಕಂಪೆನಿ ಬಳಿ ಮಾತ್ರ ಇದೆ. ಇದೂವರೆಗೆ 750 ಟನ್ ಹಳೆಯ ನೋಟುಗಳನ್ನು ನಾವು ಸ್ವೀಕರಿಸಿದ್ದೇವೆ. ಒಂದು ಟನ್ ನೋಟಿಗೆ 128 ರೂ. ನೀಡಿದ್ದೇವೆ. ಈ ಎಲ್ಲ ಪ್ರಕ್ರಿಯೆ ಕಣ್ಣೂರಿನ ವಾಲಪಟ್ಟನಂಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿದೆ ಎಂದು ಅವರು ವಿವರಿಸಿದರು.
ನಾವು ತಯಾರಿಸಿದ ಹಾರ್ಡ್ ಬೋರ್ಡ್ ಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಈ ಬೋರ್ಡ್ ನೋಟ್ ನಿಂದ ತಯಾರಿಸಲಾಗಿದೆ. ಹೀಗಾಗಿ ಇದಕ್ಕೆ ಬೆಲೆ ಜಾಸ್ತಿ ಎಂದು ಹೇಳಿ ಮಾರಾಟ ಮಾಡುತ್ತಿದ್ದಾರೆ. ಆದರೆ ನಾವು ಆ ರೀತಿ ಮಾಡದೇ ಒಂದೇ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು..
ಆರ್‍ಬಿಐಗೆ ಎಷ್ಟು ನೋಟು ಬಂದಿದೆ?
ರದ್ದಾಗಿರುವ 500 ಮತ್ತು 1 ಸಾವಿರ ರೂ. ಮುಖಬೆಲೆಯ 15.44 ಲಕ್ಷ ರೂ. ಮೌಲ್ಯದ ನೋಟುಗಳ ಪೈಕಿ 15.28 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಆರ್‍ಬಿಐಗೆ ವಾಪಸ್ ಬಂದಿದೆ. 16 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ಅಥವಾ ಶೇ.1.4 ರಷ್ಟು ನೋಟುಗಳು ವಾಪಸ್ ಬಂದಿಲ್ಲ. ಶೇ.98.6ರಷ್ಟು ನೋಟುಗಳು ವಾಪಸ್ ಬಂದಿದೆ ಎಂದು ಆರ್‍ಬಿಐ ಆಗಸ್ಟ್ 30ರಂದು ಮಾಹಿತಿ ನೀಡಿತ್ತು.
ಬೆಂಗಳೂರು: ನವೆಂಬರ್ 8, 2016. ಭಾರತದ ಭವ್ಯ ಇತಿಹಾಸ ಪುಟಗಳಲ್ಲಿ ದಾಖಲಾದ ಮಹಾ ದಿನ. 500 ಹಾಗೂ 1000 ರೂಪಾಯಿ ಮುಖ ಬೆಲೆಯ ದೊಡ್ಡ ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ನರೇಂದ್ರ ಮೋದಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಅಭಿವೃದ್ಧಿ ಯಜ್ಞಕ್ಕೆ ದೊಡ್ಡ ನೋಟುಗಳನ್ನು ಆಹುತಿ ಕೊಟ್ಟು ಹೊಸ ಅರ್ಥ ಕ್ರಾಂತಿಗೆ ಮುನ್ನುಡಿ ಬರೆದರು.
ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಮುಕ್ತ ಭಾರತಕ್ಕೆ ಈ ನಿರ್ದಾಕ್ಷಿಣ್ಯ ನಿರ್ಧಾರ ಅಗತ್ಯ ಎಂದು ಘಂಟಾಘೋಷವಾಗಿ ನರೇಂದ್ರ ಮೋದಿ ಹೇಳಿಬಿಟ್ರು. ಇದಾದ ನಂತರ ಶುರುವಾಗಿದ್ದೇ ಹೊಗಳಿಕೆ ತೆಗಳಿಕೆ ಪರ್ವ. ಮೋದಿಯನ್ನು ಪ್ರಜೆಗಳು ನವ ಭಾರತದ ಹರಿಕಾರ, ವಿಶ್ವ ನಾಯಕ, ಜಗದೇಕವೀರ ಅಂತೆಲ್ಲಾ ಭಜಿಸಿ ಸ್ತುತಿಸಿದರೆ, ಹಲವರು ಶ್ರೀಸಾಮಾನ್ಯರನ್ನು ಸಂಕಟದ ಕೂಪಕ್ಕೆ ದೂಡಿ ಸಂಭ್ರಮ ಪಡುವ ಢೋಂಗಿ ದೇಶಭಕ್ತ ಅಂತೆಲ್ಲಾ ಜರಿದರು.
ಹಾಗಾದ್ರೆ ಒಂದು ವರ್ಷದ ಬಳಿಕವೂ ಮೋದಿ ನೋಟು ಬ್ಯಾನ್ ನಿರ್ಧಾರದ ಬಗ್ಗೆ ನಾಗರಿಕರ ಮೂಡ್ ಹೇಗಿದೆ? ಈ ಸತ್ಯವನ್ನು ಅರಿಯಲು ಸಂಕಲ್ಪ ಮಾಡಿದ ನಿಮ್ಮ ಪಬ್ಲಿಕ್ ಟಿವಿ ಸಾಕ್ಷಾತ್ ಸಮೀಕ್ಷೆ ನಡೆಸಲು ತೀರ್ಮಾನಿಸಿತು.
ಹೌದು ವೀಕ್ಷಕರೇ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ 17 ಪ್ರಮುಖ ಪ್ರಶ್ನೆಗಳನ್ನಿಟ್ಟುಕೊಂಡು ಜನರ ಮನದಾಳ ತಿಳಿಯುವ ಅತ್ಯಂತ ಪ್ರಾಮಾಣಿಕ ಪ್ರಯತ್ನ ಮಾಡಿದೆ ನಿಮ್ಮ ಪಬ್ಲಿಕ್ ಟಿವಿ. ಇದೊಂದು ಉಹಾಪೋಹ ಅಥವಾ ಅಂದಾಜಿನ ಸರ್ವೇ ಅಲ್ಲವೇ ಇಲ್ಲ. ಸತ್ಯನಿಷ್ಠ, ವಿಶ್ವಾಸಾರ್ಹ, ನಂಬಲು ಯೋಗ್ಯವಾದ ಸಮೀಕ್ಷೆ ಅಂತ ಹೇಳಲು ನಮಗೆ ಹೆಮ್ಮೆಯಿದೆ. ಸರ್ವೇ ಕಾರ್ಯದಲ್ಲಿ ಅನುಸರಿಸಬೇಕಾದ ಎಲ್ಲಾ ಸಿದ್ಧ ಸೂತ್ರಗಳನ್ನು ಅಳತೆಗೋಲಾಗಿ ಸ್ವೀಕರಿಸಿ ಪಬ್ಲಿಕ್ ಫಲಿತಾಂಶ ಸಿದ್ಧಪಡಿಸಿದ್ದೇವೆ. ಯಾವುದೇ ರಾಗದ್ವೇಷ, ಸ್ವಹಿತಾಸಕ್ತಿ ಇಲ್ಲದೇ ಸಮೀಕ್ಷೆಯನ್ನು ಮಾಡಿದ್ದೇವೆ. ಬೆಂಗಳೂರು ಸೇರಿದಂತೆ ಎಲ್ಲಾ 30 ಜಿಲ್ಲೆಗಳಲ್ಲೂ ನಮ್ಮ ಪ್ರತಿನಿಧಿಗಳು ಜನಾಭಿಪ್ರಾಯ ಸಂಗ್ರಹಿಸಿದ್ದಾರೆ.
ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿ 1,800 ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದೇವೆ. ಇನ್ನು ಪ್ರಶ್ನೆ ಕೇಳುವಾಗ ಬೇಕಾಬಿಟ್ಟಿ ಮಾರ್ಗ ಅನುಸರಿಸಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಸ್ಥರಗಳ ಆಧಾರದ ಮೇಲೆ ವರ್ಗೀಕರಣ ಮಾಡಿಯೇ ಜನಮತ ಕ್ರೋಢೀಕರಿಸಲಾಗಿದೆ.
ಪ್ರತಿ 50 ಸ್ಯಾಂಪಲ್‍ಗಳಲ್ಲಿ 10 ಶ್ರೀಸಾಮಾನ್ಯರು, 10 ಗೃಹಿಣಿಯರು, 10 ಯುವಕರು/ ವಿದ್ಯಾರ್ಥಿಗಳು, 10 ಹಿರಿಯ ನಾಗರಿಕರು/ಪಿಂಚಣಿದಾರರು, 10 ವ್ಯಾಪಾರಸ್ಥರು/ಕಾರ್ಮಿಕರು/ ಗ್ರಾಮಸ್ಥರ ಅಭಿಮತ ಸಂಗ್ರಹಿಸಲಾಗಿದೆ. ಕರ್ನಾಟಕದಾದ್ಯಂತ ಬಂದ ಅಭಿಪ್ರಾಯಗಳನ್ನು ಅತ್ಯಂತ ಜಾಗರೂಕತೆಯಿಂದ ಹಾಗೂ ಶಿಸ್ತಿನಿಂದ ಒಟ್ಟು ಮಾಡಿ, ಅದಕ್ಕೆ ಪಕ್ಕಾ ಲೆಕ್ಕ ಇಟ್ಟು ಶೇಕಡವಾರು ಫಲಿತಾಂಶವನ್ನು ತಯಾರು ಮಾಡಿದ್ದೇವೆ. ಈ ಸಮೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಇಲ್ಲಿದೆ
1. ನೋಟ್ ಬ್ಯಾನ್ ನಿಂದ ಭ್ರಷ್ಟಾಚಾರ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಬಿದ್ದಿದ್ಯಾ..? ಕರ್ನಾಟಕ
ಹೌದು – 36.54%
ಪರವಾಗಿಲ್ಲ – 31.59%
ಇಲ್ಲ – 28.26%
ಗೊತ್ತಿಲ್ಲ – 3.61%
ಬೆಂಗಳೂರು
ಹೌದು – 21.55%
ಪರವಾಗಿಲ್ಲ – 37.93%
ಇಲ್ಲ – 37.07%
ಗೊತ್ತಿಲ್ಲ – 3.45%
2. ನೋಟ್ ಬ್ಯಾನ್ ನಿಂದ ಭಯೋತ್ಪಾದನೆ ಹಾಗೂ ನಕಲಿ ನೋಟು ಹಾವಳಿ ಕಮ್ಮಿಯಾಗಿದ್ಯಾ?
ಹೌದು – 39.92%
ಪರವಾಗಿಲ್ಲ – 28.50%
ಇಲ್ಲ – 26.34%
ಗೊತ್ತಿಲ್ಲ – 5.24%
3. ನೋಟ್ ಬ್ಯಾನ್ ಪರಿಣಾಮ ಇನ್ನೂ ಅನುಭವಿಸುತ್ತಿದ್ದೀರಾ..?
ಕರ್ನಾಟಕ
ಹೌದು – 33.57%
ಇಲ್ಲ – 60.95%
ಗೊತ್ತಿಲ್ಲ – 5.48%
ಬೆಂಗಳೂರು
ಹೌದು – 47.41%
ಇಲ್ಲ – 43.11%
ಗೊತ್ತಿಲ್ಲ – 9.48%
4. ನೋಟ್ ಬ್ಯಾನ್ ನಿಂದ ಹೆಚ್ಚು ಕಷ್ಟ ಅನುಭವಿಸಿದ್ದು ಯಾರು..? ಕರ್ನಾಟಕ
ಬಡವರು – 37.76%
ಮಧ್ಯಮ ವರ್ಗದವರು – 38.05%
ಶ್ರೀಮಂತರು – 21.15%
ಗೊತ್ತಿಲ್ಲ – 3.04%
ಬೆಂಗಳೂರು
ಬಡವರು – 34.48%
ಮಧ್ಯಮ ವರ್ಗದವರು – 50%
ಶ್ರೀಮಂತರು – 12.93%
ಗೊತ್ತಿಲ್ಲ – 2.59%
5. ನೋಟು ನಿಷೇಧದಿಂದ ಈ ಒಂದು ವರ್ಷದಲ್ಲಿ ನೀವು ಅನುಭವಿಸಿದ ಕಷ್ಟಗಳು ಏನು?
ದುಡ್ಡಿಗೆ ಬರ – 18.04%
ಚಿಲ್ಲರೆ ಸಮಸ್ಯೆ – 30.11%
ವ್ಯಾಪಾರಕ್ಕೆ ಹೊಡೆತ – 18.04%
ಜೀವನ ನಿರ್ವಹಣೆ ಕಷ್ಟ -15.70%
ಯಾವುದೇ ಸಮಸ್ಯೆ ಇಲ್ಲ – 18.10%
6. ನೋಟ್ ಬ್ಯಾನ್ ನಂತರ ಜಾರಿಯಾದ ಹೊಸ ಕಠಿಣ ನಿಯಮಗಳಿಂದ ಬೇಸತ್ತಿದ್ದೀರಾ?
ಹೌದು – 44.70%
ಇಲ್ಲ – 47.55%
ಗೊತ್ತಿಲ್ಲ – 7.75%
7. ಮೋದಿ ಇನ್ನಷ್ಟು ಚೆನ್ನಾಗಿ ನೋಟ್ ಬ್ಯಾನ್ ಯೋಜನೆ ರೂಪಿಸಬಹುದಿತ್ತಾ?
ಹೌದು – 65.68%
ಇಲ್ಲ – 20.68%
ಗೊತ್ತಿಲ್ಲ – 13.64%
8. ನೋಟ್ ಬ್ಯಾನ್ ನಿಂದ ದೇಶಕ್ಕಾದ ಲಾಭ ಏನು?
ತಕ್ಕಮಟ್ಟಿಗೆ ಕಪ್ಪು ಹಣ ವಾಪಸ್ಸಾಯ್ತು – 25.92%
ಹೊಸ ತೆರಿಗೆದಾರರು ಸೇರ್ಪಡೆಯಾದ್ರು – 22.39%
ಡಿಜಿಟಲ್ ವಹಿವಾಟು ಜಾಸ್ತಿಯಾಯ್ತು – 8.39%
ತೆರಿಗೆ ವಂಚಿಸೋ ಕಳ್ಳ ಕಂಪೆನಿಗಳು ಕಮ್ಮಿಯಾದ್ವು – 22.65%
ಏನೂ ಲಾಭ ಆಗಿಲ್ಲ – 20.64%
9. ಮೋದಿಯ ನಗದು ರಹಿತ ವ್ಯವಹಾರದ ಕನಸು ಈಡೇರಿದ್ಯಾ?
ಹೌದು – 29.55%
ಇಲ್ಲ – 56.35%
ಗೊತ್ತಿಲ್ಲ – 14.10%
10. ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕ ಪ್ರಗತಿ ಕುಸಿಯಿತಾ?
ಹೌದು – 39.39%
ಇಲ್ಲ – 45.86%
ಗೊತ್ತಿಲ್ಲ – 14.75%
11. ನೋಟ್ ಬ್ಯಾನ್ ನಿಂದ ಮೋದಿ ವರ್ಚಸ್ಸು ಹೆಚ್ಚಾಯ್ತಾ.. ಕಮ್ಮಿಯಾಯ್ತಾ? ಕರ್ನಾಟಕ
ಹೆಚ್ಚಾಯ್ತು – 47.21%
ಕಮ್ಮಿಯಾಯ್ತು – 22.61%
ಏನೂ ವ್ಯತ್ಯಾಸ ಇಲ್ಲ – 21.79%
ಗೊತ್ತಿಲ್ಲ – 8.39%
ಬೆಂಗಳೂರು
ಹೆಚ್ಚಾಯ್ತು – 38.79%
ಕಮ್ಮಿಯಾಯ್ತು – 22.41%
ಏನೂ ವ್ಯತ್ಯಾಸ ಇಲ್ಲ – 32.76%
ಗೊತ್ತಿಲ್ಲ – 6.04%
12. ನೋಟ್ ಬ್ಯಾನ್ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ? ಕರ್ನಾಟಕ
ಮೋದಿ ಪರ ಅಲೆ – 38.46%
ಮೋದಿ ವಿರೋಧಿ ಅಲೆ – 33.10%
ಗೊತ್ತಿಲ್ಲ – 28.44%
ಬೆಂಗಳೂರು
ಮೋದಿ ಪರ ಅಲೆ – 32.76%
ಮೋದಿ ವಿರೋಧಿ ಅಲೆ – 36.21%
ಗೊತ್ತಿಲ್ಲ – 31.03%
13. ನೋಟ್ ಬ್ಯಾನ್ ನಿಂದ ನಿಮಗೆ ಲಾಭ ಆಗುತ್ತೆ ಅಂತ ಇನ್ನೂ ಅನ್ಸುತ್ತಾ? ಕರ್ನಾಟಕ
ಹೌದು – 44.17%
ಇಲ್ಲ – 42.31%
ಗೊತ್ತಿಲ್ಲ – 13.52%
ಬೆಂಗಳೂರು
ಹೌದು – 33.62%
ಇಲ್ಲ – 49.14%
ಗೊತ್ತಿಲ್ಲ – 17.24%
14. ಮೋದಿ ಮತ್ತೆ ನೋಟ್ ಬ್ಯಾನ್ ಮಾಡಬೇಕಾ?
ಕರ್ನಾಟಕ
ಹೌದು – 30.59%
ಬೇಡಪ್ಪಾ ಬೇಡ – 52.97%
ಗೊತ್ತಿಲ್ಲ – 16.44%
ಬೆಂಗಳೂರು
ಹೌದು- 18.10%
ಬೇಡಪ್ಪಾ ಬೇಡ – 64.66%
ಗೊತ್ತಿಲ್ಲ -17.24%
ನವದೆಹಲಿ: 500 ಮತ್ತು 1 ಸಾವಿರ ರೂ. ನೋಟು ಬ್ಯಾನ್ ಆದ ಬಳಿಕ ಭಾರತದಲ್ಲಿ ಡಿಜಿಟಲ್ ವಹಿವಾಟು ಎಷ್ಟಾಗಿದೆ? ಪ್ರಧಾನಿ ನರೇಂದ್ರ ಮೋದಿಯ ನೋಟ್‍ಬ್ಯಾನ್‍ಗೆ ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ನೋಟ್ ಬ್ಯಾನ್ ಬಳಿಕ ಯುಪಿಐ ಮೂಲಕ ನಡೆಸುವ ವಹಿವಾಟು 77 ಪಟ್ಟು ಏರಿಕೆಯಾಗಿದೆ.
ನೋಟ್ ಬ್ಯಾನ್ ಮುನ್ನ ಅಕ್ಟೋಬರ್ ಅವಧಿಯಲ್ಲಿ ಯುಪಿಐ ಮೂಲಕ 1 ಲಕ್ಷ ವಹಿವಾಟು ನಡೆದಿದ್ದರೆ ಈಗ 7.6 ಕೋಟಿ ವಹಿವಾಟು ನಡೆದಿದೆ. ಸೆಪ್ಟೆಂಬರ್ 2017ರ ಅವಧಿಯಲ್ಲಿ 3 ಕೋಟಿ ವಹಿವಾಟು ನಡೆದಿದ್ದರೆ, ಅಕ್ಟೋಬರ್ ನಲ್ಲಿ ಒಂದೇ ಬಾರಿಗೆ 7.6 ಕೋಟಿಗೆ ಜಿಗಿತ ಕಂಡಿದೆ.
ಆಗಸ್ಟ್ ನಲ್ಲಿ ಒಟ್ಟು 65,149 ಕೋಟಿ ರೂ. ವಹಿವಾಟು ನಡೆದಿದ್ದರೆ, ಸೆಪ್ಟೆಂಬರ್ ನಲ್ಲಿ 71,759 ಕೋಟಿ ರೂ. ವಹಿವಾಟು ನಡೆದಿದೆ. ಆದರೆ ಅಕ್ಟೋಬರ್ ನಲ್ಲಿ 75,041 ಕೋಟಿ ರೂ. ವಹಿವಾಟು ನಡೆದಿದೆ ಎಂದು ಎನ್‍ಪಿಸಿಐ ಹೇಳಿದೆ.
ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಟ್ವೀಟ್ ಮಾಡಿ ಯುಪಿಐ ಸಾಧನೆಯನ್ನು ಹೊಗಳಿದ್ದು, ‘ವಾಟ್ ಎ ಸ್ಟೋರಿ’ ಎಂದು ಬರೆದು ಹೊಗಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‍ನಲ್ಲಿ ಭಾರತ್ ಇಂಟರ್‍ಫೇಸ್ ಫಾರ್ ಮನಿ(ಭೀಮ್) ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೇರೇಷನ್ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ. ಪೇಟಿಎಂ, ಜಿಯೋ ಮನಿ, ಪೋನ್‍ಪೇ ಇತ್ಯಾದಿ ಅಪ್‍ಗಳು ಯುಪಿಐ ಮೂಲಕವೇ ಕಾರ್ಯನಿರ್ವಹಿಸುತ್ತದೆ.
ವಾಷಿಂಗ್ಟನ್: ನೋಟ್ ಬ್ಯಾನ್ ನಿಷೇಧ ವಿಚಾರವನ್ನು ಮೊದಲೇ ಯಾಕೆ ತಿಳಿಸಿಲ್ಲ ಎನ್ನುವ ಪ್ರಶ್ನೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಸಭೆಯ ಹಿನ್ನೆಲೆಯಲ್ಲಿ ಅಮೆರಿಕಗೆ ಭೇಟಿ ನೀಡಿರುವ ಅರುಣ್ ಜೇಟ್ಲಿ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ನೋಟ್ ನಿಷೇಧ ಕ್ರಮ ಮತ್ತು ಜಿಎಸ್‍ಟಿಯನ್ನು ಹೊಗಳಿ ಮಾತನಾಡಿದ್ದಾರೆ.
ಒಂದು ವೇಳೆ 500, 1 ಸಾವಿರ ರೂ. ನೋಟುಗಳು ನಿಷೇಧವಾಗುತ್ತದೆ ಎಂದು ಗೊತ್ತಾಗಿದ್ದರೆ ಜನರು ತಮ್ಮ ಬಳಿ ಇದ್ದ ನಗದಿನ ಮೂಲಕ ಚಿನ್ನ, ವಜ್ರ ಇತ್ಯಾದಿಯನ್ನು ಖರೀದಿಸುತ್ತಿದ್ದರು. ಹೀಗಾಗಿ ನೋಟ್ ನಿಷೇಧ ನಿರ್ಧಾರವನ್ನು ಗೌಪ್ಯವಾಗಿ ಇಡಲಾಗಿತ್ತು ಎಂದು ತಿಳಿಸಿದರು.
ನೋಟ್ ನಿಷೇಧ ನಿರ್ಧಾರ ತೆಗೆದುಕೊಂಡ ಬಳಿಕ ಜನರಿಗೆ ಸಮಸ್ಯೆಯಾಗದೇ ಇರಲು ಹೊಸ ನೋಟುಗಳ ಮುದ್ರಣ ಕಾರ್ಯ ಆರಂಭಿಸಿದೆವು. ಹೀಗಾಗಿ ಮೊದಲೇ ಪ್ರಿಂಟ್ ಮಾಡಿದ ಕಾರಣ ಚೆಸ್ಟ್ ಮೂಲಕ ಹಣವನ್ನು ಬ್ಯಾಂಕ್ ಗಳಿಗೆ ಕಳುಹಿಸಿದೆವು. ಹೀಗಾಗಿ ಆಗಬಹುದಾಗಿದ್ದ ಸಂಭಾವ್ಯ ಸಮಸ್ಯೆಯನ್ನು ನಿವಾರಿಸಿದೆವು ಎಂದು ಹೇಳುವ ಮೂಲಕ ನೋಟ್ ಬ್ಯಾನ್ ರಹಸ್ಯವನ್ನು ವಿವರಿಸಿದರು.
ಪಾರದರ್ಶಕತೆ ಪದ ಕೇಳಲು ಚೆನ್ನಾಗಿರುತ್ತದೆ. ಇದನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ ನೋಟ್ ನಿಷೇಧ ವಿಚಾರದಲ್ಲಿ ಪಾರದರ್ಶಕತೆಯನ್ನು ಉಳಿಸಿ ರಹಸ್ಯವಾಗಿ ಕೈಗೊಂಡ ನಿರ್ಧಾರ ಯಶಸ್ವಿಯಾಗಿದೆ ಎಂದು ಹೇಳಿದರು.
ಇಡೀ ವಿಶ್ವದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಬದಲಾವಣೆ ಆಗಿಲ್ಲ. ಟಿವಿಗಳು ಬ್ಯಾಂಕ್ ಮುಂಭಾಗ ನಿಂತಿದ್ದ ಜನರನ್ನು ಪ್ರಚೋಧಿಸಿ ಮಾತನಾಡಿಸುವ ಪ್ರಯತ್ನ ನಡೆಸುತಿತ್ತು. ಆದರೆ ಜನರು ಈ ನಿರ್ಧಾರವನ್ನು ಸ್ವಾಗತಿಸಿ ಬೆಂಬಲ ನೀಡಿದರು ಎಂದರು.
ನೋಟ್ ನಿಷೇಧ ಬಳಿಕ ಡಿಜಿಟಲ್ ವ್ಯವಹಾರ ದುಪ್ಪಟ್ಟು ಆಗಿದೆ. ಅಷ್ಟೇ ಅಲ್ಲದೇ ಭಾರೀ ಸಂಖ್ಯೆಯಲ್ಲಿ ಜನರು ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
Finance Minister addresses Columbia University's Deepak & Neera Raj Center on Indian Economic Policies. pic.twitter.com/AZCOKi8C3O
ಮುಂಬೈ: ಕಳೆದ ವರ್ಷ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ನೋಟು ನಿಷೇಧ ಸಕ್ಸಸ್ ಆಯ್ತಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿತ್ತು. ಆ ಪ್ರಶ್ನೆಗೆ ಇಂದು ಉತ್ತರ ಸಿಕಿದ್ದು, 1 ಸಾವಿರ ರೂ. ಮುಖಬೆಲೆಯ 8,900 ಕೋಟಿ ರೂ. ಮೊತ್ತದ 89 ದಶಲಕ್ಷದ ನೋಟ್ ವಾಪಸ್ ಬಂದಿಲ್ಲ ಎಂದು ಆರ್‍ಬಿಐ ಹೇಳಿದೆ.
ನೋಟು ನಿಷೇಧದ ಬಳಿಕ ಶೇಕಡಾ 98.96ರಷ್ಟು ಹಳೆಯ ನೋಟ್ ಬ್ಯಾಂಕ್‍ಗೆ ವಾಪಸ್ ಬಂದಿವೆ. ಕೇವಲ ಶೇ.1.04 ರಷ್ಟು ನೋಟುಗಳು ಮಾತ್ರ ಬ್ಯಾಂಕ್ ಗೆ ಬಂದಿಲ್ಲ. ಅಂದರೆ ದೇಶದಲ್ಲಿ ಕೇವಲ 16 ಸಾವಿರ ಕೋಟಿ ರೂ. ಮೊತ್ತದ ನೋಟುಗಳಷ್ಟೇ ಕಪ್ಪು ಹಣವಾಗಿತ್ತಾ ಎಂಬ ಮತ್ತೊಂದು ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ನೋಟು ನಿಷೇಧದ ಬಳಿಕ ಕೇವಲ 16 ಸಾವಿರ ಕೋಟಿ ರೂ. ಕಪ್ಪು ಹಣ ಮಾತ್ರ ಕಾಣೆಯಾಗಿದೆ ಎಂದು ಅಂಕಿ ಅಂಶಗಳು ಬಹಿರಂಗಗೊಳಿಸಿವೆ. ಇನ್ನೂ ಹೊಸ ನೋಟುಗಳಾದ 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲು 7,695 ಕೋಟಿ ರೂ. ವೆಚ್ಚವಾಗಿದೆ.
ಹಾಗಾದ್ರೆ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಎಷ್ಟು..?
* 6,57,100 ಕೋಟಿ ರೂ. ಮೊತ್ತದ 2 ಸಾವಿರ ಮುಖಬೆಲೆಯ ನೋಟು
* 2,94,100 ಕೋಟಿ ರೂ. ಮೊತ್ತದ 500 ರೂ. ಮುಖಬೆಲೆಯ ಹೊಸ ನೋಟು
* 2,52,800 ಕೋಟಿ ರೂ. ಮೊತ್ತದ 100 ರೂ. ಮುಖಬೆಲೆಯ ನೋಟು
* 9,28,000 ಕೋಟಿ ರೂ. ಮೊತ್ತದ 10, 20, 50 ರೂಪಾಯಿ ಮುಖಬೆಲೆಯ ನೋಟು
ನೋಟು ನಿಷೇಧದಿಂದ ನಕಲಿ ನೋಟುಗಳ ಕಥೆ ಏನಾಯ್ತು….?
* ನೋಟು ನಿಷೇಧ ಬಳಿದ ಬರೋಬ್ಬರೀ 7.62 ಲಕ್ಷದಷ್ಟು ನಕಲಿ ನೋಟುಗಳು ಪತ್ತೆ
* 2,000 ರೂ. ಮುಖಬೆಲೆಯ 638 ನಕಲಿ ನೋಟು ಪತ್ತೆ
* 500 ರೂ. ಮುಖಬೆಲೆಯ ಹೊಸ 199 ನಕಲಿ ನೋಟು ಪತ್ತೆ
* 500 ರೂ. ಮುಖಬೆಲೆಯ 3,17,567 ನಕಲಿ ನೋಟು ಪತ್ತೆ
* 100 ರೂ. ಮುಖಬೆಲೆಯ 1,77,195 ನಕಲಿ ನೋಟು ಪತ್ತೆ
ಈ ಮಧ್ಯೆ, ಪ್ಯಾನ್‍ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಮಾಡೋಕೆ ನಾಳೆ ಕೊನೆದಿನ. ನಾಳೆಯೊಳಗೆ ಪ್ಯಾನ್ ಸಂಖ್ಯೆ ಜೊತೆ ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ರೆ ತೆರಿಗೆ ರಿಟನ್ರ್ಸ್ ಪ್ರಕ್ರಿಯೆ ಪೂರ್ಣಗೊಳ್ಳೋದಿಲ್ಲ ಎಂದು ಐಟಿ ಇಲಾಖೆ ಹೇಳಿದೆ.
ನವದೆಹಲಿ: ಹೊಸದಾಗಿ 1 ಸಾವಿರ ರೂ. ನೋಟುಗಳನ್ನು ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಗರ್ಗ್ ತಿಳಿಸಿದ್ದಾರೆ.
500, 1 ಸಾವಿರ ರೂ. ನೋಟುಗಳು ಬ್ಯಾನ್ ಆದ ಬಳಿಕ ಹೊಸದಾಗಿ 2 ಸಾವಿರ, 500 ರೂ., 200 ರೂ., 50 ರೂ.ಗಳನ್ನು ಬಿಡುಗಡೆ ಮಾಡಿರುವ ಆರ್‍ಬಿಐ 1 ಸಾವಿರ ರೂ. ನೋಟು ಚಲಾವಣೆಗೆ ತರಲು ಮುಂದಾಗುತ್ತಿದೆ ಎನ್ನುವ ಸುದ್ದಿ ಸೋಮವಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಈ ಸುದ್ದಿಗಳಿಗೆ ಸುಭಾಶ್ ಗರ್ಗ್, 1 ಸಾವಿರ ರೂ. ನೋಟುಗಳನ್ನು ಮತ್ತೆ ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಆರ್‍ಬಿಐ ಶೀಘ್ರದಲ್ಲೇ 1 ಸಾವಿರ ರೂ. ನೋಟುಗಳನ್ನು ಮುದ್ರಿಸಲಿದೆ. ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದ್ದು, ಮೈಸೂರು ಮತ್ತು ಸಾಲ್ಬೋನಿಯಲ್ಲಿ ಹೊಸ ನೋಟುಗಳು ವಿಶೇಷ ಭದ್ರತಾ ವೈಶಿಷ್ಟ್ಯಗಳೊಂದಿಗೆ ಮುದ್ರಣವಾಗಲಿದೆ ಎಂದು ವರದಿ ತಿಳಿಸಿತ್ತು.
ಕಪ್ಪುಹಣವನ್ನು ತಡೆಗಟ್ಟಲು ನವೆಂಬರ್ 8 ರಂದು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ತಿಳಿಸಿದ್ದರು. ಮೈಸೂರಿನ ಮೇಟಗಳ್ಳಿ, ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್, ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿ ಆರ್‍ಬಿಐ ಮುದ್ರಣ ಘಟಕವನ್ನು ಹೊಂದಿದೆ.
There is no proposal to reintroduce 1000 rupee note.
ನವದೆಹಲಿ: ನೋಟ್ ಬ್ಯಾನ್ ಬಳಿಕ ಮೂಲೆಗುಂಪಾಗಿದ್ದ ಹಳೆಯ 500, ಸಾವಿರ ನೋಟಿಗೆ ಸುಪ್ರೀಂಕೋರ್ಟ್ ಮತ್ತೆ ಮರುಜೀವ ನೀಡಿದೆ.
ಯಾವ ವ್ಯಕ್ತಿ ಪ್ರಾಮಾಣಿಕವಾಗಿ ಹಳೆಯ ನೋಟುಗಳನ್ನು ಇಟ್ಟುಕೊಂಡಿದ್ದಾರೋ ಅಂಥವರಿಗೆ ಮತ್ತೊಮ್ಮೆ ಹಣವನ್ನು ಠೇವಣಿ ಇಡಲು ಅವಕಾಶ ನೀಡಬೇಕು. ಈ ಬಗ್ಗೆ ನಿಮ್ಮ ನಿಲುವು ಏನು ಎನ್ನುವುದನ್ನು ತಿಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಹಣಕಾಸು ಸಚಿವಾಲಯ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಬೇಕು. ಇದಕ್ಕಾಗಿ 2 ವಾರಗಳ ಕಾಲ ಕಾಲಾವಕಾಶ ನೀಡುತ್ತಿದ್ದೇವೆ. ಒಂದುವೇಳೆ ನೀವು ಉತ್ತರ ನೀಡದೇ ಇದ್ದರೆ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜುಲೈ 18ರಂದು ಮತ್ತೆ ಅರ್ಜಿ ವಿಚಾರಣೆಗೆ ಕೋರ್ಟ್ ಸಮಯ ನಿಗದಿಪಡಿಸಿದ್ದು, ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್, ಪ್ರಾಮಾಣಿಕವಾಗಿ ಹಣವನ್ನು ಇಟ್ಟುಕೊಂಡವರಿಗೆ ಅವರಿಗೆ ಮತ್ತೊಮ್ಮೆ ಠೇವಣಿ ಇಡಲು ಅವಕಾಶ ನೀಡಬೇಕು. ಒಂದು ವೇಳೆ ಅವಕಾಶ ನೀಡದೇ ಇದ್ದಲ್ಲಿ ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 8ರಂದು ನೋಟು ಬ್ಯಾನ್ ನಿರ್ಧಾರ ಕೈಗೊಂಡ ಬಳಿಕ ಮಾರ್ಚ್ 31ರ ವರೆಗೆ ಹಳೆಯ ನೋಟುಗಳನ್ನು ಠೇವಣಿ ಇಡಲು ಆರ್‍ಬಿಐ ಅನುಮತಿ ನೀಡಿತ್ತು.
Demonetisation case: Central govt told division bench of Supreme Court that it would file an affidavit in the case. Next hearing on July 18.
ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಆರ್‍ಬಿಐ 200 ರೂ. ನೋಟುಗಳ ಮುದ್ರಣಕ್ಕೆ ಚಾಲನೆ ನೀಡಿದೆ. ಜನರ ವ್ಯವಹಾರವನ್ನು ಸರಳಗೊಳಿಸಲು ಈ ನೋಟುಗಳನ್ನು ಮುದ್ರಿಸಲು ಈಗ ಮುಂದಾಗಿದೆ.
200 ರೂ. ನೋಟು ಮುದ್ರಣವಾಗುತ್ತಿರುವ ವಿಚಾರವನ್ನು ಆರ್‍ಬಿಐ ಅಧಿಕೃತವಾಗಿ ತಿಳಿಸಿಲ್ಲ. ಆದರೂ ಆರ್‍ಬಿಐ ಮೂಲಗಳು ಮಾಧ್ಯಮಗಳಿಗೆ ನೋಟು ಮುದ್ರಣವಾಗುತ್ತಿರುವ ಬಗ್ಗೆ ಮಾಹಿತಿ ನೀಡಿವೆ.
ಶೀಘ್ರದಲ್ಲೇ 200 ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಲಿರುವ ಏಪ್ರಿಲ್‍ನಲ್ಲಿ ವರದಿಯಾಗಿತ್ತು. ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಆರ್‍ಬಿಐ 200 ರೂ. ನೋಟು ಬಿಡುಗಡೆ ಮಾಡುವ ಸಂಬಂಧ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
2016ರ ನವೆಂಬರ್ 8ರಂದು ಹಳೇ 500 ಹಾಗೂ 1000 ರೂ. ನೋಟ್‍ಗಳನ್ನು ನಿಷೇಧಿಸಿದ್ದ ಮೋದಿ ಸರ್ಕಾರ ಹೊಸ ವಿನ್ಯಾಸದ 500 ರೂ. ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಿತ್ತು.
ಜೈಪುರ: ನೋಟು ಬದಲಾವಣೆಗೆ ಅವಧಿ ಮೀರಿದ ಬಳಿಕವೂ ಹಳೆಯ ನೋಟು ಹೊಂದಿದ್ದ ಅನಾಥರಿಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಿದ್ದಾರೆ.
ರಾಜಸ್ಥಾನದ ಕೋಟಾದ 17 ವರ್ಷದ ಸೂರಜ್ ಬಂಜಾರಾ ಮತ್ತು ಆತನ ಸಹೋದರಿ ಸಲೋನಿಗೆ 96 ಸಾವಿರ ರೂಪಾಯಿ ಮೊತ್ತದ ಹಳೆಯ ನೋಟು ಸಿಕ್ಕಿತ್ತು. ಆದ್ರೆ ಅಷ್ಟೊತ್ತಿಗೆ ನೋಟು ವಿನಿಮಯಕ್ಕೆ ನೀಡಲಾಗಿದ್ದ ಅವಧಿ ಕೂಡಾ ಮುಗಿದುಹೋಗಿತ್ತು. ಇದರಿಂದ ಏನ್ ಮಾಡೋದು ಅಂತಾ ಗೊತ್ತಾಗದೇ ಇಬ್ಬರೂ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಈ ಮಕ್ಕಳಿಗೆ 50 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ವಿಮೆ ಪಾಲಿಸಿಯನ್ನೂ ಮಾಡಿಸಿದ್ದಾರೆ. ಈ ಎರಡೂ ಪಾಲಿಸಿಗಳಿಗಾಗಿ ಐದು ವರ್ಷದ ಮಟ್ಟಿಗೆ 1,170 ರೂಪಾಯಿಯ ಇನ್ಶೂರೆನ್ಸ್ ಪ್ರೀಮಿಯಮ್ ಹಣವನ್ನು ಬಿಡುಗಡೆ ಮಾಡಿಸಿದ್ದಾರೆ.
ಬಿಡುಗಡೆ ಮಾಡಲಾಗಿರುವ ಹಣ ಹಾಗೂ ವಿಮೆಯ ಪ್ರೀಮಿಯಮ್ ಹಣ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಕಾಗದಿದ್ದರೂ, ಈ ನೆರವಿನಿಂದ ನಿಮ್ಮ ಕಷ್ಟಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು ಎಂದು ನಂಬಿದ್ದೇನೆ. ಪತ್ರದ ಮೂಲಕ ನಿಮ್ಮ ಈಗಿನ ಪರಿಸ್ಥಿತಿ ಬಗ್ಗೆ ತಿಳಿದು ನನಗೆ ದುಃಖವಾಗಿದೆ ಎಂದು ಮೋದಿ ಈ ಮಕ್ಕಳಿಗೆ ಪತ್ರದಲ್ಲಿ ಹೇಳಿದ್ದಾರೆ.
ಈ ಮಕ್ಕಳು ಸದ್ಯ ಕೋಟಾದ ಮಕ್ಕಳ ರಕ್ಷಣಾ ಗೃಹದಲ್ಲಿದ್ದಾರೆ. ಪ್ರಧಾನಿಯಿಂದ ಬಿಡುಗಡೆಯಾಗಿರುವ ಹಣ ಈಗಾಗಲೇ ಮಕ್ಕಳ ಖಾತೆಗೆ ಸೇರಿದೆ ಎಂದು ಕೋಟಾದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಹರೀಶ್ ಹೇಳಿದ್ದಾರೆ.
ಮಕ್ಕಳಿಗೆ ಅಷ್ಟೊಂದು ಹಣ ಸಿಕ್ಕಿದ್ದು ಹೇಗೆ?: 4 ವರ್ಷಗಳ ಹಿಂದೆ ಈ ಮಕ್ಕಳ ತಾಯಿಯನ್ನು ಕೊಲೆ ಮಾಡಲಾಗಿತ್ತು. ಇವರ ತಂದೆ ಅದಕ್ಕೂ ಮೊದಲೇ ತೀರಿಕೊಂಡಿದ್ದರು. ನಂತರ ಅನಾಥರಾಗಿದ್ದ ಇವರನ್ನ ಮಕ್ಕಳ ರಕ್ಷಣಾ ಗೃಹಕ್ಕೆ ಕರೆತರಲಾಗಿತ್ತು. ಇದೇ ವರ್ಷ ಮಾರ್ಚ್‍ನಲ್ಲಿ ಕೋಟಾ ಮಕ್ಕಳ ಕಲ್ಯಾಣ ಸಮಿತಿ ಮಕ್ಕಳನ್ನ ಅವರ ಸಹರ್‍ವಾಡಾ ಗ್ರಾಮದ ಮನೆಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ಮಕ್ಕಳ ತಾಯಿ ಕೂಡಿಟ್ಟಿದ್ದ ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿತ್ತು. ಮಕ್ಕಳಿಗೆ ಸಿಕ್ಕ ಹಣವನ್ನು ಬದಲಾವಣೆ ಮಾಡಲು ಅವಧಿ ಮೀರಿದ್ದರಿಂದ ಅಧಿಕಾರಿಗಳು ಆರ್‍ಬಿಐ ಮೊರೆ ಹೋಗಿದ್ದರು. ಆದ್ರೆ ಆರ್‍ಬಿಐ ಕೂಡ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಬದಲಾವಣೆ ಮಾಡಿಕೊಡಲು ಅಸಹಾಯಕತೆ ತೋರಿತ್ತು. ನಂತರ ಈ ಮಕ್ಕಳು ಸಹಾಯ ಕೋರಿ ಮೋದಿಗೆ ಪತ್ರ ಬರೆದಿದ್ದರು.