Tag: demonetisation

  • Fraud Case | ನೋಟು ಅಮಾನ್ಯೀಕರಣದಿಂದಾಗಿ ಸಾಲ ಪಾವತಿಸಲು ಆಗಿರಲಿಲ್ಲ: ಶಿಲ್ಪಾ ಶೆಟ್ಟಿ ಪತಿ

    Fraud Case | ನೋಟು ಅಮಾನ್ಯೀಕರಣದಿಂದಾಗಿ ಸಾಲ ಪಾವತಿಸಲು ಆಗಿರಲಿಲ್ಲ: ಶಿಲ್ಪಾ ಶೆಟ್ಟಿ ಪತಿ

    – 60 ಕೋಟಿ ವಂಚನೆ ಪ್ರಕರಣ ಎದುರಿಸುತ್ತಿರುವ ಶಿಲ್ಪಾ ಶೆಟ್ಟಿ ದಂಪತಿ

    ನೋಟು ಅಮಾನ್ಯೀಕರಣದಿಂದಾಗಿ (Demonetisation) ತಮ್ಮ ವ್ಯವಹಾರವು ಭಾರೀ ನಷ್ಟ ಅನುಭವಿಸಿದೆ. ಅಮಾನ್ಯೀಕರಣದಿಂದಾಗಿಯೇ ಸಾಲ ಪಾವತಿಸಲು ಆಗಿರಲಿಲ್ಲ ಎಂದು ಅಂತ 60 ಕೋಟಿ ವಂಚನೆ ಪ್ರಕರಣದಲ್ಲಿ ತನಿಖೆ ಎದುರಿಸ್ತಿರುವ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್‌ಕುಂದ್ರಾ (Raj Kundra) ಹೇಳಿದ್ದಾರೆ.

    ತಮ್ಮ ಕಂಪನಿಯು ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ವ್ಯಾಪಾರ ಮಾಡುತ್ತಿತ್ತು. 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ರದ್ದತಿಯ ನಂತರ ಕಂಪನಿಯು ಬಹಳಷ್ಟು ನಷ್ಟ ಎದುರಿಸಿದೆ. ಕಂಪನಿ ಪಡೆದ ಸಾಲವನ್ನ ಮರುಪಾವತಿಸಲು ಸಾಧ್ಯವಾಗಿಲ್ಲ ಅಂದಿದ್ದಾರೆ. ಇದನ್ನೂ ಓದಿ: ಮೊದಲು 60 ಕೋಟಿ ಠೇವಣಿ ಇಡಿ – ಶಿಲ್ಪಾ ಶೆಟ್ಟಿ ದಂಪತಿ ವಿದೇಶಿ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ತಡೆ

    Shilpa Shetty and Raj Kundra

    ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿ ದೀಪಕ್ ಕೊಠಾರಿ ಅನ್ನೋವ್ರಿಗೆ 60 ಕೋಟಿ ರೂ. ವಂಚಿಸಿರುವ ಕೇಸಲ್ಲಿ ಈಗಾಗಲೇ 2 ಬಾರಿ ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಅಂದಹಾಗೆ, ಪತಿ ಕಂಪನಿಯ ಯಾವ ವ್ಯವಹಾರವನ್ನೂ ನಾನು ನೋಡಿಕೊಳ್ಳುತ್ತಿರಲಿಲ್ಲ ಎಂದು ಶಿಲ್ಪಾ ಶೆಟ್ಟಿ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಸಕ್ಸಸ್‌ ಬೆನ್ನಲ್ಲೇ ಕಟೀಲು ಅಮ್ಮನ ದರ್ಶನ ಪಡೆದ ವಿಜಯ್‌ ಕಿರಗಂದೂರು

    ಮೊದಲು 60 ಕೋಟಿ ಠೇವಣಿ ಇಡಿ ಅಂದಿದ್ದ ಕೋರ್ಟ್‌
    60 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ ಭಾರಿ ಹಿನ್ನಡೆಯಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್‌ ಸೇರಿದಂತೆ ಇತರ ದೇಶಗಳ ಪ್ರವಾಸಕ್ಕೆ ತೆರಳಲು ಮುಂದಾಗಿದ್ದ ಶಿಲ್ಪಾ ಶೆಟ್ಟಿ ದಂಪತಿಗೆ ಬಾಂಬೆ ಹೈಕೋರ್ಟ್‌ (Bombay High Court) ಇತ್ತೀಚೆಗೆ ತಡೆ ನೀಡಿದೆ.

    Shilpa Shetty 1

    ಕಾರ್ಯಕ್ರಮ ನಿಮಿತ್ತ ಲಾಸ್ ಎಂಜಲೀಸ್ (Los Angeles) ಮತ್ತು ಇತರ ದೇಶಗಳಿಗೆ ತೆರಳಬೇಕಿತ್ತು. ಹೀಗಾಗಿ ಬಾಂಬೆ ಹೈಕೋರ್ಟ್, ಲಾಸ್ ಏಂಜಲೀಸ್ ಮತ್ತು ಇತರ ವಿದೇಶಗಳಿಗೆ ಪ್ರಯಾಣಿಸಲು ಬಯಸಿದರೆ ಮೊದಲು 60 ಕೋಟಿ ರೂಪಾಯಿ ಡೆಪಾಸಿಟ್ ಇಡಿ ಎಂದು ಹೇಳಿತ್ತು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

    ಏನಿದು ವಂಚನೆ ಪ್ರಕರಣ?
    2015 ರಿಂದ 2023ರ ನಡುವೆ, ದಂಪತಿ ತಮ್ಮ ವ್ಯವಹಾರ ವಿಸ್ತರಿಸುವ ನೆಪದಲ್ಲಿ ನನ್ನಿಂದ 60 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು. ದಂಪತಿ ಹಣವನ್ನು ಸಾಲವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

  • 2 ಸಾವಿರ ರೂ. ನೋಟು ಮೋದಿಗೆ ಇಷ್ಟವಿರಲಿಲ್ಲ – ಸಭೆಯ ಮಾಹಿತಿ ರಿವೀಲ್‌ ಮಾಡಿದ ನೃಪೇಂದ್ರ ಮಿಶ್ರಾ

    2 ಸಾವಿರ ರೂ. ನೋಟು ಮೋದಿಗೆ ಇಷ್ಟವಿರಲಿಲ್ಲ – ಸಭೆಯ ಮಾಹಿತಿ ರಿವೀಲ್‌ ಮಾಡಿದ ನೃಪೇಂದ್ರ ಮಿಶ್ರಾ

    ನವದೆಹಲಿ: ನರೇಂದ್ರ ಮೋದಿಯವರಿಗೆ (PM Narendra Modi) 2 ಸಾವಿರ ರೂ. ನೋಟುಗಳನ್ನು ಚಲಾವಣೆಗೆ ತರಲು ಇಷ್ಟವಿರಲಿಲ್ಲ ಎಂದು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ (Nripendra Misra) ಹೇಳಿದ್ದಾರೆ.

    2016ರ ನವೆಂಬರ್‌ 8 ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ (Demonetisation) ಬಳಿಕ 2 ಸಾವಿರ ರೂ. (Rs 2,000 Notes) ನೋಟು ಬಿಡುಗಡೆ ಮಾಡಲು ಮೋದಿಯವರಿಗೆ ಇಷ್ಟವಿರಲಿಲ್ಲ. ಆದರೆ ನೋಟು ನಿಷೇಧ ಚರ್ಚೆಯಲ್ಲಿ ಅಧಿಕಾರಿಗಳ ಸಲಹೆಯನ್ನು ಒಪ್ಪಿದ ಬಳಿಕ ಹೊಸ ನೋಟು ಬಿಡುಗಡೆಗೆ ಸಹಮತ ಸೂಚಿಸಿದರು ಎಂದು ಮಾಧ್ಯಮವೊಂದಕ್ಕೆ ತಿಳಿಸಿದರು.

    ಸಭೆಯಲ್ಲಿ ಏನಾಗಿತ್ತು?
    ಹಣದ ತುರ್ತು ಅಗತ್ಯವನ್ನು ಪೂರೈಸಲು 2000 ರೂ ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪವನ್ನು ಅಧಿಕಾರಿಗಳು ಮುಂದಿಟ್ಟರು. ಈ ಪ್ರಸ್ತಾಪಕ್ಕೆ ಮೋದಿ ಬಡವರು ಮತ್ತು ಮಧ್ಯಮ ವರ್ಗದ ಜನರು 2000 ರೂ. ಮುಖಬೆಲೆಯ ನೋಟುಗಳನ್ನು ಬಳಸುವುದಿಲ್ಲ. ಅವರು ಹೆಚ್ಚಾಗಿ 100 ರೂ. ಮತ್ತು 500 ರೂ. ನೋಟು ಬಳಸುತ್ತಾರೆ. ಹೀಗಾಗಿ ಬಡವರಿಗೆ ತೊಂದರೆಯಾಗುವ ನೋಟುಗಳ ಬಿಡುಗಡೆಗೆ ತಮ್ಮ ಆಕ್ಷೇಪ ಇದೆ ಎಂದಿದ್ದರು. ಇದನ್ನೂ ಓದಿ: 2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಮೋದಿ ಆಕ್ಷೇಪಕ್ಕೆ ಆಪ್ತ ತಂಡ ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ತಮ್ಮ ತಂಡದ ಸಲಹೆ ಅನ್ವಯ ತಂಡದ ನಾಯಕನಾಗಿ ಅವರು ಈ ನಿರ್ಧಾರ ಒಪ್ಪಿಕೊಂಡರು ಎಂದು ಮಿಶ್ರಾ ಹೇಳಿದ್ದಾರೆ.

     

    ಹಿಂದೆ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ರಿಕೆಗೆ ಲೇಖನ ಬರೆದಿದ್ದ ನೃಪೇಂದ್ರ ಮಿಶ್ರಾ ಅಪನಗದೀಕರಣ ಸಿದ್ಧತೆಯ ವೇಳೆ 1 ಸಾವಿರ ರೂ. ನೋಟು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಮುದ್ರಿಸಬೇಕೆಂಬ ಸಲಹೆ ಇಷ್ಟವಾಗಿರಲಿಲ್ಲ. ಆದರೆ ಹಣದ ಕೊರತೆ ನೀಗಿಸಲು ಅನಿವಾರ್ಯವಾಗಿ 2 ಸಾವಿರ ರೂ. ಮುದ್ರಿಸಬೇಕೆಂದು ಸಲಹೆ ನೀಡಿದ ಬಳಿಕ ಕೊನೆಗೆ ಮೋದಿ ಒಪ್ಪಿಕೊಂಡಿದ್ದರು ಎಂದು ಅವರು ಬರೆದಿದ್ದರು.

    ಈ ವಿಚಾರದ ಬಗ್ಗೆ ಭಾರೀ ಟೀಕೆ ಕೇಳಿ ಬಂದಿದ್ದರೂ ಮೋದಿಯವರು ಅಧಿಕಾರಿಗಳನ್ನು ದೂಷಿಸದೇ ಸ್ವತಃ ತಾವೇ ಹೊಣೆಯನ್ನು ಹೊತ್ತುಕೊಂಡಿದ್ದರು. ಕೆಲವು ವಿಚಾರಗಳ ಬಗ್ಗೆ ಸಮ್ಮತಿ ಇರದಿದ್ದರೂ ಜೊತೆಗಾರರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳುವ ಗುಣ ಮೋದಿಯವರಲ್ಲಿದೆ ಎಂದು ತಿಳಿಸಿದ್ದರು.

  • ನೋಟು ನಿಷೇಧದ ಅಧಿಸೂಚನೆಯೇ ಕಾನೂನುಬಾಹಿರ: ನ್ಯಾ.ನಾಗರತ್ನ

    ನೋಟು ನಿಷೇಧದ ಅಧಿಸೂಚನೆಯೇ ಕಾನೂನುಬಾಹಿರ: ನ್ಯಾ.ನಾಗರತ್ನ

    ನವದೆಹಲಿ: 2016ರ ನವೆಂಬರ್ 8ರಂದು ಅಧಿಸೂಚನೆ ಹೊರಡಿಸಿ ಕೈಗೊಂಡ ನೋಟು ನಿಷೇಧ(Note Ban) ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ನ್ಯಾಯಮೂರ್ತಿ(Supreme Court) ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಅಮಾನ್ಯೀಕರಣ(Demonetisation) ನಿರ್ಧಾರ ಸರಿ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೈಕಿ ನಾಲ್ವರು ಕೇಂದ್ರ ನಿರ್ಧಾರ ಸರಿ ಎಂದು ಹೇಳಿದರೆ ನ್ಯಾಯಮೂರ್ತಿ ನಾಗರತ್ನ(Justice BV Nagarathna) ಭಿನ್ನ ತೀರ್ಪು ನೀಡಿದ್ದಾರೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ವಜಾಗೊಳಿಸಿದೆ.

    ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು 2022ರ ಡಿಸೆಂಬರ್ 7ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

    ನ್ಯಾ. ನಾಗರತ್ನ ತೀರ್ಪಿನಲ್ಲಿ ಏನಿದೆ?
    ನೋಟು ನಿಷೇಧದ ಕಾನೂನಾತ್ಮಕ ಅಂಶಗಳು ಸಂಸತ್ತಿನಲ್ಲಿ(Parliament ) ಚರ್ಚೆ ಆಗಬೇಕಿತ್ತು. ಸಂಸತ್ತು ಇಲ್ಲದೇ ಪ್ರಜಾಪ್ರಭುತ್ವ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಸಂಸತ್ತನ್ನು ದೂರವಿಟ್ಟಿದ್ದು ಸರಿಯಲ್ಲ. ಇದನ್ನೂ ಓದಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ನೋಟು ಅಮಾನ್ಯೀಕರಣದ ಬಗ್ಗೆ ವಿಶ್ವಾದ್ಯಂತದ ಇತಿಹಾಸವನ್ನು ಉಲ್ಲೇಖಿಸಿದ್ದೇನೆ. ಕೇಂದ್ರ ಸರ್ಕಾರವು ನೋಟು ನಿಷೇಧದ ಬಗ್ಗೆ ಆರ್‌ಬಿಐ(RBI) ಅಭಿಪ್ರಾಯವನ್ನು ಮಾತ್ರ ಕೇಳಿತ್ತು. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸಿಲ್ಲ. ಆರ್‌ಬಿಐ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, “ಕೇಂದ್ರ ಸರ್ಕಾರವು ಬಯಸಿದಂತೆ”, “500 ಮತ್ತು 1000 ನೋಟುಗಳನ್ನು ಹಿಂಪಡೆಯಲು ಸರ್ಕಾರ ಶಿಫಾರಸು ಮಾಡಿದೆ” ಎಂಬ ಪದಗಳು ಮತ್ತು ಪದಗುಚ್ಛಗಳ ಬಳಕೆಯನ್ನು ನಾನು ಗಮನಿಸಿದ್ದೇನೆ. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸದೇ ಇರುವುದು ಸರಿಯಲ್ಲ.

    RBI

    ಆರ್‌ಬಿಐ ಕಾಯಿದೆ ಪ್ರಕಾರ, ನೋಟು ಅಮಾನ್ಯೀಕರಣದ ಶಿಫಾರಸು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಂಡಳಿಯಿಂದ ಬರಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನವೆಂಬರ್ 7 ರಂದು ಆರ್‌ಬಿಐಗೆ ಪತ್ರ ಬರೆದು ಅಂತಹ ಶಿಫಾರಸಿಗೆ ಸಲಹೆ ನೀಡಿದೆ.

    500 ಮತ್ತು 1000 ರೂ. ಎಲ್ಲಾ ಸರಣಿಯ ನೋಟುಗಳ ಅಮಾನ್ಯೀಕರಣದ ಸಂಪೂರ್ಣ ಕೆಲಸವನ್ನು 24 ಗಂಟೆಯಲ್ಲಿ ನಡೆಸಲಾಗಿದೆ. ಭಾರತದ ಆರ್ಥಿಕತೆ(Indian Economy) ಮತ್ತು ನಾಗರಿಕರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಆರ್‌ಬಿಐ ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಿತ್ತು.

    ಆರ್‌ಬಿಐ ಒಂದು ವೇಳೆ ನೋಟು ನಿಷೇಧ ನಿರ್ಧಾರವನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದರೂ ಸರ್ಕಾರ ಕೂಡಲೇ ನೋಟಿಫಿಕೇಶನ್‌ ಹೊರಡಿಸುವಂತಿಲ್ಲ. ಈ ನಿರ್ಧಾರ ಸಂಸತ್ತಿನ ಮೂಲಕ ಅಥವಾ ಸುಗ್ರೀವಾಜ್ಞೆಯ ಮೂಲಕ ನಡೆಯಬೇಕು. ಈ ಎಲ್ಲಾ ಕಾರಣದಿಂದ 2016 ನವೆಂಬರ್‌ 8ರ ನೋಟು ನಿಷೇಧದ ಅಧಿಸೂಚನೆ ಕಾನೂನಿಗೆ ವಿರುದ್ಧ ಮತ್ತು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ.

    ಆರ್ಥಿಕತೆಗೆ ಸಮಸ್ಯೆ ತರುತ್ತಿರುವ ಕಪ್ಪು ಹಣ, ಭಯೋತ್ಪಾದಕ ನಿಧಿ ಮತ್ತು ನಕಲಿ ನೋಟುಗಳನ್ನು ನಿಯಂತ್ರಿಸಲು ಈ ಕ್ರಮ ಸದುದ್ದೇಶವನ್ನು ಹೊಂದಿದೆ. ಉದ್ದೇಶ ಉತ್ತಮವಾಗಿದ್ದರೂ ಈ ಪ್ರಕ್ರಿಯೆ ಅನುಮಾನಾಸ್ಪದದಿಂದ ಕೂಡಿತ್ತು. ಅಮಾನ್ಯಗೊಳಿಸಲಾದ ಕರೆನ್ಸಿ ನೋಟುಗಳ ಮೌಲ್ಯದ ಸುಮಾರು ಶೇ.98 ರಷ್ಟು ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿದ್ದರಿಂದ ಕಾನೂನುಬದ್ಧ ಟೆಂಡರ್‌ ಆಗಿಯೇ ಮುಂದುವರಿಯುತ್ತದೆ. ಅಲ್ಲದೇ 2000 ರೂ. ಹೊಸ ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಇದರಿಂದಾಗಿ ಈ ನೋಟು ನಿಷೇಧದ ನಿರ್ಧಾರ ಪರಿಣಾಮಕಾರಿಯಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನೋಟು ನಿಷೇಧವನ್ನು ಸುಪ್ರೀಂ ಎತ್ತಿ ಹಿಡಿದಿಲ್ಲ; ಇದು ಜನರ ಜೀವನೋಪಾಯವನ್ನೇ ನಾಶಪಡಿಸಿದೆ – ಕಾಂಗ್ರೆಸ್‌

    ನೋಟು ನಿಷೇಧವನ್ನು ಸುಪ್ರೀಂ ಎತ್ತಿ ಹಿಡಿದಿಲ್ಲ; ಇದು ಜನರ ಜೀವನೋಪಾಯವನ್ನೇ ನಾಶಪಡಿಸಿದೆ – ಕಾಂಗ್ರೆಸ್‌

    ನವದೆಹಲಿ: 500, 1000 ಮುಖಬೆಲೆ ನೋಟುಗಳನ್ನು 2016ರಲ್ಲಿ ಅಮಾನ್ಯೀಕರಣ (Demonitisation) ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ (Supreme Court) ಎತ್ತಿ ಹಿಡಿದಿಲ್ಲ. ನೋಟು ಅಮಾನ್ಯೀಕರಣಗೊಳಿಸಿದ್ದು ದೇಶದ ಆರ್ಥಿಕತೆಗೆ ವಿನಾಶಕಾರಿಯಾಗಿದೆ. ಅಲ್ಲದೇ ಜನರ ಜೀವನೋಪಾಯವನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್‌ (Congress) ಮತ್ತೆ ಕಿಡಿಕಾರಿದೆ.

    ನೋಟ್‌ ಬ್ಯಾನ್‌ ಮಾಡಿದ್ದ ಕೇಂದ್ರದ ನಿರ್ಧಾರ ನ್ಯಾಯ ಸಮ್ಮತವಾಗಿದೆ ಎಂದು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಇಂದು ತೀರ್ಪು ಪ್ರಕಟಿಸಿತು. ಅಲ್ಲದೇ ನೋಟು ಅಮಾನ್ಯೀಕರಣ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು. ಈ ಕುರಿತು ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ನೋಟು ಅಮಾನ್ಯೀಕರಣವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಹೇಳುವುದು ಸಂಪೂರ್ಣ ತಪ್ಪು. 2016ರ ನವೆಂಬರ್ 8 ರಂದು ನೋಟು ಅಮಾನ್ಯೀಕರಣವನ್ನು ಘೋಷಿಸುವ ಮೊದಲು RBI ಕಾಯಿದೆ, 1934 ರ ಸೆಕ್ಷನ್ 26(2) ಅನ್ನು ಸರಿಯಾಗಿ ಅನ್ವಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಅಷ್ಟೆ. ಜೊತೆಗೆ ಒಬ್ಬರು ನ್ಯಾಯಾಧೀಶರು ಕೇಂದ್ರದ ನಿರ್ಧಾರದ ವಿರುದ್ಧ ತೀರ್ಪನ್ನು ಪ್ರಕಟಿಸಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ.

    ನೋಟು ಅಮಾನ್ಯೀಕರಣದ ಪರಿಣಾಮದ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಇದು ಕೇಂದ್ರ ಕೈಗೊಂಡ ವಿನಾಶಕಾರಿ ನಿರ್ಧಾರವಾಗಿದೆ. ಇದು ಬೆಳವಣಿಗೆಯ ವೇಗಕ್ಕೆ ಪೆಟ್ಟು ನೀಡಿದೆ. MSMEಗಳನ್ನು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ) ದುರ್ಬಲಗೊಳಿಸಿತು. ಅನೌಪಚಾರಿಕ ವಲಯವನ್ನು ಕೊನೆಗಾಣಿಸಿತು ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದನ್ನೂ ಓದಿ: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ

    ಚಲಾವಣೆಯಲ್ಲಿರುವ ಕರೆನ್ಸಿಯನ್ನು ಕಡಿಮೆ ಮಾಡುವುದು, ನಗದು ರಹಿತ ಆರ್ಥಿಕತೆಯತ್ತ ಸಾಗುವುದು, ನಕಲಿ ಕರೆನ್ಸಿಗೆ ಕಡಿವಾಣ ಹಾಕುವುದು, ಭಯೋತ್ಪಾದನೆಯನ್ನು ಕೊನೆಗೊಳಿಸುವುದು, ಕಪ್ಪುಹಣವನ್ನು ಹೊರತೆಗೆಯಲಾಗುವುದು ಎಂದು ಕೇಂದ್ರ ಸಮರ್ಥಿಸಿಕೊಂಡಿತ್ತು. ಆದರೆ ಈ ಯಾವ ಗುರಿಗಳನ್ನೂ ಸಾಧಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ನವದಹೆಲಿ: 500 ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ಅಮಾನ್ಯೀಕರಣ (Demonetisation) ಮಾಡಿದ್ದ ಕೇಂದ್ರ ಸರ್ಕಾರದ (Central Government) ನಿರ್ಧಾರವನ್ನು ಸುಪ್ರೀಂ ಕೋರ್ಟ್‌ (Supreme Court) ಎತ್ತಿ ಹಿಡಿದಿದೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಸೋಮವಾರ ವಜಾಗೊಳಿಸಿದೆ.

    ನ್ಯಾಯಮೂರ್ತಿ ಎಸ್‌.ಎ. ನಜೀರ್‌ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿದೆ. ಕೇಂದ್ರದ ನೋಟ್‌ ಬ್ಯಾನ್‌ ನಿರ್ಧಾರಕ್ಕೆ ಪೀಠ 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ. ನೋಟು ಅಮಾನ್ಯೀಕರಣ ಮಾಡಿರುವ ಕೇಂದ್ರದ ನಿರ್ಧಾರ ಸಮ್ಮತವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದನ್ನೂ ಓದಿ: ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ನೋಟು ಬ್ಯಾನ್‌ ಮಾಡಿದ್ದು ಮಾನ್ಯವಾಗಿದೆ. ಕೇಂದ್ರವು ಅದನ್ನು ಪ್ರಾರಂಭಿಸಿದೆ ಎಂಬ ಕಾರಣಕ್ಕೆ ನಿರ್ಧಾರವನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ಆರ್‌ಬಿಐನ ಕೇಂದ್ರೀಯ ಮಂಡಳಿಯೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರವು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ಸಂಬಂಧ ಆರು ತಿಂಗಳ ಕಾಲ ಇಬ್ಬರ ನಡುವೆ ಸಮಾಲೋಚನೆ ನಡೆದಿದೆ ಎಂದು ಐವರು ಸದಸ್ಯರ ಪೀಠದಲ್ಲಿ ನಾಲ್ವರು ನ್ಯಾಯಾಧೀಶರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಕೋಪದ ಭರದಲ್ಲಿ ತನ್ನ ನವಜಾತ ಶಿಶುವನ್ನು ನೆಲಕ್ಕೆ ಎಸೆದ

    RBI

    ಆದರೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತು. ಅದು ಸರ್ಕಾರದಿಂದ ಅಲ್ಲ ಎಂದು ಕೇಂದ್ರದ ನಿರ್ಧಾರಕ್ಕೆ ಭಿನ್ನ ತೀರ್ಪು ಪ್ರಕಟಿಸಿದ್ದಾರೆ.

    ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು 2022ರ ಡಿಸೆಂಬರ್ 7ರಂದು ತೀರ್ಪನ್ನು ಕಾಯ್ದಿರಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ನೋಟು ನಿಷೇಧಕ್ಕೆ 5 ವರ್ಷ- ಚಲಾವಣೆ ಹೆಚ್ಚಳ

    ನೋಟು ನಿಷೇಧಕ್ಕೆ 5 ವರ್ಷ- ಚಲಾವಣೆ ಹೆಚ್ಚಳ

    ನವದೆಹಲಿ: ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮಖಬೆಲೆಯ ಹಳೆಯ ನೋಟುಗಳನ್ನು ರದ್ದುಗೊಳಿಸಿ ಇಂದಿಗೆ (ನವೆಂಬರ್ 8) 5 ವರ್ಷ ಪೂರ್ಣಗೊಂಡಿದೆ.

    ಈ 5 ವರ್ಷಗಳಲ್ಲಿ ಡಿಜಿಡಲ್ ಪಾವತಿ ಜೊತೆಗೆ ನೋಟುಗಳ ಚಲಾವಣೆಯಲ್ಲೂ ಹಿಂದಿಗಿಂತ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    ಕಪ್ಪು ಹಣ ನಿಗ್ರಹ ಮತ್ತು ಡಿಜಿಟಲ್ ಪಾವತಿ ಹೆಚ್ಚಿಸಲು 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಸರ್ಕಾರ ಆದೇಶಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚಳವಾದರೂ, ನೋಟುಗಳ ಚಲಾವಣೆ ಕಡಿಮೆಯಾಗಿಲ್ಲ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    MONEY

     RBI ದತ್ತಾಂಶಗಳ ಪ್ರಕಾರ 2016ರ ನವೆಂಬರ್ 4ರ ವೇಳೆಗೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಮೌಲ್ಯ 17.74 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, 2021ರ ಅಕ್ಟೋಬರ್ 29 ರಂದು ಆ ಪ್ರಮಾಣ 29.17 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲೇ ಚಲಾವಣೆ ನೋಟುಗಳ ಮೌಲ್ಯ 2.48 ಲಕ್ಷ ಕೋಟಿ ರೂಪಾಯಿ ನಷ್ಟು ಹೆಚ್ಚಳವಾಗಿದೆ. ಅಂದರೆ ಒಂದು ವರ್ಷದಲ್ಲಿ ನೋಟುಗಳ ಮೌಲ್ಯವು ಶೇ.16.8 ರಷ್ಟು ಏರಿಕೆಯಾಗಿದೆ.

  • ನೋಟು ನಿಷೇಧದಿಂದ ಕಪ್ಪು ಹಣ ಕಡಿಮೆಯಾಗಿದ್ದು ತೆರಿಗೆ ಹೆಚ್ಚಳವಾಗಿದೆ – ಲೆಕ್ಕ ಕೊಟ್ಟ ಮೋದಿ

    ನೋಟು ನಿಷೇಧದಿಂದ ಕಪ್ಪು ಹಣ ಕಡಿಮೆಯಾಗಿದ್ದು ತೆರಿಗೆ ಹೆಚ್ಚಳವಾಗಿದೆ – ಲೆಕ್ಕ ಕೊಟ್ಟ ಮೋದಿ

    ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಐತಿಹಾಸಿಕಾ ನೋಟು ನಿಷೇಧ ನಿರ್ಧಾರಕ್ಕೆ 4 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಮೋದಿ ಈ ನಿರ್ಧಾರದಿಂದ ಪಾರದರ್ಶಕತೆ ಹೆಚ್ಚಾಗಿದ್ದು ರಾಷ್ಟ್ರೀಯ ಅಭಿವೃದ್ಧಿಗೆ ನೆರವಾಗಿದೆ ಎಂದು ತಿಳಿಸಿದ್ದಾರೆ. ಟ್ವೀಟ್‌ನಲ್ಲೇ ಏನು ಬದಲಾವಣೆಯಾಗಿದೆ ಎಂಬುದನ್ನು ಪ್ರಧಾನಿ ಮೋದಿ ತಿಳಿಸಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ನೋಟು ನಿಷೇಧದ ಬಳಿಕ ‘ಆಪರೇಷನ್‌ ಕ್ಲೀನ್‌ ಮನಿʼ ಬಳಿಕ ಸ್ವ ಮೌಲ್ಯ ಮಾಪನ ಮಾಡಿ13 ಸಾವಿರ ಕೋಟಿಗೂ ಅಧಿಕ ಹಣ ಪಾವತಿಯಾಗಿದೆ.

    3.4 ಲಕ್ಷ ಜನರು 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದರು. ಈ ಮೂಲಕ ಐಟಿ ರಿಟರ್ನ್‌ ಸಲ್ಲಿಸಿದವರ ವಿವರ ಬಹಿರಂಗೊಂಡಿತು. ಇದಾದ ಬಳಿಕ 2.9 ಲಕ್ಷ ಜನ ತೆರಿಗೆಯಾಗಿ 6,531 ಕೋಟಿ ರೂ. ಹಣವನ್ನು ಪಾವತಿ ಮಾಡಿದ್ದಾರೆ.

    ನೋಟು ನಿಷೇಧದ ಬಳಿಕ ತೆರಿಗೆ/ ಜಿಡಿಪಿ ಅನುಪಾತ ಹೆಚ್ಚಳವಾಗಿದೆ. 2015-16ರ ಹಣಕಾಸು ವರ್ಷದಲ್ಲಿ 16.41 ಲಕ್ಷ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿತ್ತು 2014-15ಕ್ಕೆ ಹೋಲಿಸಿದರೆ ಶೇ.14.51 ಹೆಚ್ಚಳವಾಗಿತ್ತು. ಇದೇ ಲೆಕ್ಕಾಚಾರವನ್ನು ಪರಿಗಣಿಸಿದ್ದರೆ 2019-20ರ ವೇಳೆಗೆ ದೇಶದಲ್ಲಿ 28.49 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇರಬೇಕಿತ್ತು. ಆದರೆ ಸದ್ಯ 2019-20ರ ಹಣಕಾಸು ವರ್ಷದಲ್ಲಿ 24.20 ಲಕ್ಷ ಕೋಟಿ ರೂ. ಹಣ ಚಲಾವಣೆಯಲ್ಲಿದೆ. ಡಿಜಿಟಲ್‌ ಹಣ ಪಾವತಿ ಹೆಚ್ಚಳದಿಂದಾಗಿ ನೋಟುಗಳ ಸಂಖ್ಯೆ ಕಡಿಮೆಯಾಗಿದೆ.

    ದೇಶದಲ್ಲಿ ಕಪ್ಪುಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ನವೆಂಬರ್ 8ರ ರಾತ್ರಿ ಏಕಾಏಕಿಯಾಗಿ 500ರೂ ಹಾಗೂ 1,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು.

  • 2 ಸಾವಿರ ರೂ. ನೋಟು ರಿಲೀಸ್‌ ಮಾಡಲು ಮೋದಿಗೆ ಇಷ್ಟವಿರಲಿಲ್ಲ

    2 ಸಾವಿರ ರೂ. ನೋಟು ರಿಲೀಸ್‌ ಮಾಡಲು ಮೋದಿಗೆ ಇಷ್ಟವಿರಲಿಲ್ಲ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ 2 ಸಾವಿರ ರೂ. ನೋಟುಗಳನ್ನು ಚಲಾವಣೆಗೆ ತರಲು ಇಷ್ಟವಿರಲಿಲ್ಲ ಎಂಬ ವಿಚಾರ ಈಗ ಪ್ರಕಟವಾಗಿದೆ.

    2016ರ ನವೆಂಬರ್‌ 8 ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಬಿಡುಗಡೆ ಮಾಡಲು ಮೋದಿಯವರಿಗೆ ಇಷ್ಟವಿರಲಿಲ್ಲ. ಆದರೆ ನೋಟು ನಿಷೇಧ ಚರ್ಚೆಯಲ್ಲಿ ಅಧಿಕಾರಿಗಳ ಸಲಹೆಯನ್ನು ಒಪ್ಪಿದ ಬಳಿಕ ಹೊಸ ನೋಟು ಬಿಡುಗಡೆಗೆ ಸಹಮತ ಸೂಚಿಸಿದರು ಎಂದು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಬಹಿರಂಗ ಪಡಿಸಿದ್ದಾರೆ.

    ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ರಿಕೆಗೆ ಲೇಖನ ಬರೆದಿರುವ ಅವರು, ಅಪನಗದೀಕರಣ ಸಿದ್ಧತೆಯ ವೇಳೆ 1 ಸಾವಿರ ರೂ. ನೋಟು ನಿಷೇಧಿಸಿದ ಬಳಿಕ 2 ಸಾವಿರ ರೂ. ನೋಟು ಮುದ್ರಿಸಬೇಕೆಂಬ ಸಲಹೆ ಇಷ್ಟವಾಗಿರಲಿಲ್ಲ. ಆದರೆ ಹಣದ ಕೊರತೆ ನೀಗಿಸಲು ಅನಿವಾರ್ಯವಾಗಿ 2 ಸಾವಿರ ರೂ. ಮುದ್ರಿಸಬೇಕೆಂದು ಸಲಹೆ ನೀಡಿದ ಬಳಿಕ ಕೊನೆಗೆ ಮೋದಿ ಒಪ್ಪಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    ಈ ವಿಚಾರದ ಬಗ್ಗೆ ಭಾರೀ ಟೀಕೆ ಕೇಳಿ ಬಂದಿದ್ದರೂ ಮೋದಿಯವರು ಅಧಿಕಾರಿಗಳನ್ನು ದೂಷಿಸದೇ ಸ್ವತಃ ತಾವೇ ಹೊಣೆಯನ್ನು ಹೊತ್ತುಕೊಂಡಿದ್ದರು. ಕೆಲವು ವಿಚಾರಗಳ ಬಗ್ಗೆ ಸಮ್ಮತಿ ಇರದಿದ್ದರೂ ಜೊತೆಗಾರರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳುವ ಗುಣ ಮೋದಿಯವರಲ್ಲಿದೆ ಎಂದು ಬರೆದುಕೊಂಡಿದ್ದಾರೆ.

    ಕಪ್ಪುಹಣ ತಡೆಗಟ್ಟಲು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲು 1 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಐತಿಹಾಸಿಕಾ ತೀರ್ಮಾನವನ್ನು ನರೇಂದ್ರ ಮೋದಿ ಕೈಗೊಂಡಿದ್ದರು. ಆದರೆ 2 ಸಾವಿರ ರೂ. ನೋಟು ಬಿಡುಗಡೆ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ‌ ಈ ನಿರ್ಧಾರದಿಂದ ಕಪ್ಪು ಹಣ ಸಂಗ್ರಹ ಮಾಡುವುದು ಸುಲಭ ಎಂದು ಪ್ರತಿ ಪಕ್ಷಗಳು ಮೋದಿ ನಿರ್ಧಾರವನ್ನು ಟೀಕಿಸಿದ್ದವು.

  • ನೋಟು ನಿಷೇಧದ ಬಳಿಕ ದೇಶದ ಆರ್ಥಿಕತೆ ಏನಾಗುತ್ತದೆ ಅನ್ನೋ ಅರಿವು ಕೇಂದ್ರಕ್ಕೆ ಗೊತ್ತಿರಲಿಲ್ಲ!

    ನೋಟು ನಿಷೇಧದ ಬಳಿಕ ದೇಶದ ಆರ್ಥಿಕತೆ ಏನಾಗುತ್ತದೆ ಅನ್ನೋ ಅರಿವು ಕೇಂದ್ರಕ್ಕೆ ಗೊತ್ತಿರಲಿಲ್ಲ!

    ನವದೆಹಲಿ: ನೋಟು ನಿಷೇಧದಿಂದ ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಅರಿವನ್ನು ಕೇಂದ್ರ ಸರ್ಕಾರ ಹೊಂದಿರಲಿಲ್ಲ ಎನ್ನುವ ಅಂಶ ಈಗ ಬಹಿರಂಗಗೊಂಡಿದೆ.

    ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ 8 ರಂದು ರೂ.500 ಹಾಗೂ 1,000 ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ಕಾಸರಗೋಡು ಕ್ಷೇತ್ರದ ಸಿಪಿಐ ಸಂಸದ ಪಿ.ಕರುಣಾಕರನ್ ಹಾಗೂ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ತೇಜ್ ಪ್ರತಾಪ್ ಯಾದವ್, ನೋಟು ನಿಷೇಧ ಯಾವ ರೀತಿ ಅರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಕೇಂದ್ರ ಯೋಚಿಸಿತ್ತೆ ಎಂದು ಪ್ರಶ್ನಿಸಿದ್ದರು.

     

    ಇದಕ್ಕೆ ಉತ್ತರಿಸಿದ್ದ ಕೇಂದ್ರ ವಿತ್ತ ಸಚಿವಾಲಯದ ಸಹಾಯಕ ಸಚಿವ ರಾಧಾಕೃಷ್ಣನ್, ನೋಟು ನಿಷೇಧದ ಬಳಿಕ ಭಾರತದ ಅರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರ ಮೌಲ್ಯಮಾಪನ ಮಾಡಿರಲಿಲ್ಲವೆಂದು ತಿಳಿಸಿದ್ದಾರೆ.

    ಕೇಂದ್ರ ಸರಕಾರ ನೋಟು ನಿಷೇಧದಿಂದ ಭಾರತದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲಾಗಿತ್ತೆ? ಅದರಿಂದ ಏನೇನು ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಪರಿಶೀಲನೆ ಮಾಡಿತ್ತೆ? ಎಂಬ ಪ್ರಶ್ನೆಗೆ ರಾಧಾಕೃಷ್ಣನ್ `ಇಲ್ಲ’ ಎಂದು ಉತ್ತರಿಸಿದ್ದಾರೆ.

    ಕೇವಲ ಕಪ್ಪುಹಣ ಮತ್ತು ಕಳ್ಳ ನೋಟುಗಳಿಗೆ ಕಡಿವಾಣ ಹಾಕಲು ನೋಟು ನಿಷೇಧಕ್ಕೆ ಮುಂದಾದ ಕ್ರಮಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸಮ್ಮತಿ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ.

    ಮೋದಿ ಸರಕಾರದ ನಿರ್ಧಾರದಿಂದ ಚಲಾವಣೆಯಲ್ಲಿದ್ದ ಶೇ.85ರಷ್ಟು ಕರೆನ್ಸಿ ತನ್ನ ಮೌಲ್ಯ ಕಳೆದುಕೊಂಡಿತ್ತು. ಆದರೆ ಶೇ.99.3 ರಷ್ಟು ಅಪಮೌಲ್ಯಗೊಂಡ ಕರೆನ್ಸಿ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ವಾಪಾಸಾಗಿತ್ತು. ನೋಟು ನಿಷೇಧಗೊಂಡ ಬಳಿಕ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿದಿದ್ದರೆ ನಂತರದ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ ಕಾಣಿಸಿತ್ತು. ಈ ಜಿಡಿಪಿ ಬೆಳವಣಿಗೆಗೆ ನೋಟು ನಿಷೇಧವೂ ಒಂದು ಕಾರಣ ಎಂದು ಹೇಳಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬಂದಿದೆ.

    ವೆಂಕಯ್ಯ ನಾಯ್ಡು ಶ್ಲಾಘನೆ: ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿಯಿಂದ ದೇಶದ ಆರ್ಥಿಕತೆಗೆ ಸಹಕಾರಿಯಾಗಿದೆ. ಎಲ್ಲೆಲ್ಲೋ ಅಡಗಿಸಿಟ್ಟ ಕಳ್ಳ ಹಣಗಳ ಲೆಕ್ಕ ಗೊತ್ತಾಗಿದೆ. ಹಣಗಳು ಮರಳಿ ಬ್ಯಾಂಕಿಗ್ ಬಂದಿದೆ. ವಿಶ್ವದ ಆರ್ಥಿಕತೆ ಈಗ ಕುಸಿಯುತ್ತಿದ್ದರೆ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

  • 15.3 ಲಕ್ಷ  ಕೋಟಿ ರೂ. ಮೌಲ್ಯದ 99.3% ನಿಷೇಧಗೊಂಡಿದ್ದ ನೋಟುಗಳು ವಾಪಸ್: ಆರ್‌ಬಿಐ

    15.3 ಲಕ್ಷ ಕೋಟಿ ರೂ. ಮೌಲ್ಯದ 99.3% ನಿಷೇಧಗೊಂಡಿದ್ದ ನೋಟುಗಳು ವಾಪಸ್: ಆರ್‌ಬಿಐ

    ಮುಂಬೈ: 2016ರಲ್ಲಿ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳಲ್ಲಿ 99.3% ನೋಟುಗಳು ಬ್ಯಾಂಕ್‍ಗೆ ವಾಪಸ್ ಆಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ.

    2017-18 ವಾರ್ಷಿಕ ವರದಿಯಲ್ಲಿ ಈ ಅಂಶವನ್ನು ಆರ್‌ಬಿಐ ಬಹಿರಂಗಪಡಿಸಿದ್ದು, 2016ರ ನವೆಂಬರ್ 8 ನೋಟು ನಿಷೇಧಕ್ಕೂ ಮುನ್ನ ದೇಶದಲ್ಲಿ 500 ರೂ. ಹಾಗೂ 1 ಸಾವಿರ ಮುಖಬೆಲೆಯ 15.41 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇದ್ದು, ಬಳಿಕ ನಡೆದ ಪ್ರಕ್ರಿಯೆಯಲ್ಲಿ 15.31 ಲಕ್ಷ ಕೋಟಿ  ರೂ. ಮೌಲ್ಯದ ನೋಟುಗಳು ವಾಪಸ್ ಆಗಿದೆ. ನೋಟುಗಳ ಪರಿಶೀಲನೆ ಪ್ರಕ್ರಿಯೆ ಯಶ್ವಸಿಯಾಗಿ ಮುಕ್ತಾಯವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

    ನೋಟು ನಿಷೇಧದ ಬಳಿಕ 2016-17 ರ ಅವಧಿಯಲ್ಲಿ ಆರ್‌ಬಿಐ 7,965 ಕೋಟಿ ರೂ. ಗಳನ್ನು ಹೊಸ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟು ಮುದ್ರಣಕ್ಕಾಗಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಕಳೆದ ವರ್ಷದಲ್ಲಿ ಮಾಡಿದ್ದ ವೆಚ್ಚಕ್ಕಿಂತಲೂ ಎರಡರಷ್ಟು ಹೆಚ್ಚಾಗಿದೆ. ಇನ್ನು 2017-18 (ಜುಲೈ 2017 ರಿಂದ ಜೂನ್ 2018) ಅವಧಿಯಲ್ಲಿ 4,912 ಕೋಟಿ ರೂ. ಗಳನ್ನು ನೋಟು ಮುದ್ರಣಕ್ಕಾಗಿ ಆರ್‌ಬಿಐ ವೆಚ್ಚಮಾಡಿದೆ.

    ನೋಟು ನಿಷೇಧ ವೇಳೆ ಈ ಕ್ರಮ ಕಪ್ಪು ಹಣದ ಪತ್ತೆ, ಭ್ರಷ್ಟಚಾರ ನಿಯಂತ್ರಣ ಮತ್ತು ಖೋಟಾ ನೋಟು ಪರಿಶೀಲನೆಗೆ ಸಹಾಯವಾಗುತ್ತದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ವೇಳೆ 500 ರೂ. ಹಾಗೂ 1 ಸಾವಿರ ರೂ ಮುಖಬೆಲೆ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 59.7% ಮತ್ತು 59.6% ಕಡಿಮೆ ಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 100 ರೂ. ಹಾಗೂ 50 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 35%, 154.3% ರಷ್ಟು ಪತ್ತೆಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ 2017-18 ಆರ್ಥಿಕ ವರ್ಷದ ಮೇಲೆ ಪ್ರಭಾವ ಬೀರಿತ್ತು ಎಂದು ಆರ್‌ಬಿಐ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv