Tag: demolition

  • ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು

    ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು

    ಡೆಹ್ರಾಡೂನ್: ಮುಳುಗಡೆಯಾಗುತ್ತಿರುವ ಪಟ್ಟಣ ಎಂದೇ ಕರೆಸಿಕೊಳ್ಳುತ್ತಿರುವ ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ತೀವ್ರವಾಗಿ ಬಿರುಕುಬಿಟ್ಟಿರುವ ಹಾಗೂ ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ (Demolition) ಕಾರ್ಯ ಮಂಗಳವಾರದಿಂದ ಪ್ರಾರಂಭವಾಗಿದೆ.

    ಉತ್ತರಾಖಂಡದ ಜೋಶಿಮಠದಲ್ಲಿ ಎಲ್ಲೆಡೆ ಭೂಕುಸಿತಗಳು ಉಂಟಾಗುತ್ತಿದ್ದು, ಕಟ್ಟಡಗಳು ಬಿರುಕು ಬಿಡುತ್ತಿವೆ. ರಸ್ತೆಗಳಲ್ಲಿಯೂ ತೀವ್ರ ಸ್ವರೂಪದ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಕ್ಷಣ ಕ್ಷಣಕ್ಕೂ ಅಲ್ಲಿನ ಜನರು ನಗರ ಮುಳುಗಡೆಯ (Joshimath Sinking) ಭೀತಿಯಲ್ಲಿ ದಿನದೂಡುತ್ತಿದ್ದಾರೆ.

    ಈಗಾಗಲೇ ನಗರದ ಸುಮಾರು 670 ಮನೆಗಳು ಬಿರುಕುಬಿಟ್ಟಿದ್ದು, ಅವುಗಳಲ್ಲಿ ಹೆಚ್ಚಿನವುಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ನೆಲಸಮಗೊಳಿಸುವಂತಹ ಕಟ್ಟಡಗಳಿಗೆ ಈಗಾಗಲೇ ಕೆಂಪು ಬಣ್ಣದ ಗುರುತುಗಳನ್ನು ಮಾಡಲಾಗಿದೆ.

    ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿವಾಸಿಗಳನ್ನು ತಾತ್ಕಾಲಿಕ ಆಶ್ರಯಗಳಿಗೆ ಕಳುಹಿಸಲಾಗುತ್ತಿದೆ. ಈಗಾಗಲೇ 678 ಕಟ್ಟಡಗಳನ್ನು ಅಸುರಕ್ಷಿತ ಎಂದು ಗುರುತಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಲು ಪ್ರಾರಂಭಿಸಲಾಗಿದೆ. 81 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಗತ್ಯವಿರುವಂತಹ ಕೆಲವು ಪ್ರದೇಶಗಳನ್ನು ಸೀಲ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ – ಮೃತ ಕುಟುಂಬಕ್ಕೆ 20 ಲಕ್ಷ ಪರಿಹಾರ : BMRC

    ಜೋಶಿಮಠವನ್ನು ಈಗಾಗಲೇ ವಿಪತ್ತು ಪೀಡಿತ ವಲಯವೆಂದು ಘೋಷಿಸಲಾಗಿದೆ. ಜೋಶಿಮಠ ಮತ್ತು ಸಮೀಪದ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಜೋಶಿಮಠದ ಶೇ.30 ರಷ್ಟು ಹಾನಿಯಾಗಿದೆ ಎಂದು ವರದಿಯಾಗಿದೆ. ತಜ್ಞರ ಸಮಿತಿಯಿಂದ ವರದಿಯನ್ನು ಸಂಗ್ರಹಿಸಲಾಗುತ್ತಿದೆ. ಅದನ್ನು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಲಾಗುವುದು ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.

    ಸಂತ್ರಸ್ತರ ರಕ್ಷಣೆ ಹಾಗೂ ಜೋಶಿಮಠವನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದ್ದಾರೆ. ಇದನ್ನೂ ಓದಿ: ಪೆರುವಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ – ಭದ್ರತಾ ಪಡೆ ಗುಂಡೇಟಿಗೆ 12 ಬಲಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಲಭೆಗೂ ಬುಲ್ಡೋಜರ್‌ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ: ಸುಪ್ರೀಂನಲ್ಲಿ ಯೋಗಿ ಸರ್ಕಾರದ ಸಮರ್ಥನೆ

    ಗಲಭೆಗೂ ಬುಲ್ಡೋಜರ್‌ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ: ಸುಪ್ರೀಂನಲ್ಲಿ ಯೋಗಿ ಸರ್ಕಾರದ ಸಮರ್ಥನೆ

    ನವದೆಹಲಿ: ಗಲಭೆಗೂ ಬುಲ್ಡೋಜರ್‌ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ. ಕಾನೂನು ಬದ್ಧವಾಗಿಯೇ ಅಕ್ರಮ ಕಟ್ಟಡಗಳನ್ನು ಕೆಡವಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತನ್ನ ಕಾರ್ಯಾಚರಣೆಯ ಬಗ್ಗೆ ಸಮರ್ಥನೆ ನೀಡಿದೆ.

    ನೂಪುರ್‌ ಶರ್ಮಾ ಹೇಳಿಕೆಯನ್ನು ಖಂಡಿಸಿ ನಡೆದ ಗಲಭೆಯ ಬಳಿಕ ಉತ್ತರ ಪ್ರದೇಶದ ಹಲವೆಡೆ ಕಟ್ಟಡಗಳನ್ನು ಕೆಡವಲಾಗಿತ್ತು. ಒಂದೇ ಸಮುದಾಯದ ಕಟ್ಟಡಗಳನ್ನು ಗುರಿಯಾಗಿಸಿ ನಡೆದ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿತ್ತು. ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಜೂನ್‌ 16 ಎಂದು ನೋಟಿಸ್‌ ಜಾರಿ ಮಾಡಿ ಪ್ರತಿಕ್ರಿಯಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು.

    ಈ ಅರ್ಜಿಯ ವಿಚಾರಣೆ ವೇಳೆ, ಕಾನೂನು ಬದ್ಧವಾಗಿಯೇ ಈ ಕಾರ್ಯಾಚರಣೆ ಮಾಡಲಾಗಿದೆ. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವುದು ಹೊಸದೆನಲ್ಲ. ಈ ಹಿಂದಿನಿಂದಲೂ ಈ ರೀತಿಯ ಕಾರ್ಯಾಚರಣೆ ನಡೆದುಕೊಂಡು ಬಂದಿದೆ. ಆದರೆ ಅರ್ಜಿದಾರರು ತಪ್ಪಾಗಿ ಈ ಕಾರ್ಯಾಚರಣೆಯನ್ನು ಗಲಭೆ ಪ್ರಕರಣಕ್ಕೆ ಜೋಡಿಸಿದ್ದಾರೆ ಎಂದು ಸರ್ಕಾರ ವಾದಿಸಿದೆ.

    ನೆಲಸಮ ಕಾರ್ಯಾಚರಣೆಯನ್ನು ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಹಾಲಿ ಜಾರಿಯಲ್ಲಿರುವ ಕಾನೂನು ಪ್ರಕಾರವೇ ಮಾಡಿದ್ದಾರೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ಅರ್ಜಿದಾರರು ಈ ಅರ್ಜಿಯನ್ನು ಮೊದಲು ಹೈಕೋರ್ಟ್‌ ಸಲ್ಲಿಸಬೇಕಿತ್ತು. ಆದರೆ ಸುಪ್ರೀಂ ಮೊರೆ ಹೋಗಿದ್ದಾರೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕೆಂದು ಮನವಿ ಮಾಡಿದೆ.

    ಜಾವೇದ್‌ ಮುಹಮ್ಮದ್‌ ಅವರಿಗೆ ಹಲವು ಸಮಯಗಳನ್ನು ನೀಡಿದ ಬಳಿಕ ಕಟ್ಟಡಗಳನ್ನು ಕೆಡವಲಾಗಿದೆ. ಪ್ರಯಾಗ್‌ರಾಜ್‌ ಗಲಭೆಗೂ ಈ ನೆಲಸಮ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಕೋರ್ಟ್‌ಗ ಮಾಹಿತಿ ನೀಡಿದೆ. ಇದನ್ನೂ ಓದಿ: ಕಲ್ಲು ತೂರಿದವರಿಗೆ ಬುಲ್ಡೋಜರ್‌ ಶಾಕ್‌ ಕೊಟ್ಟ ಯೋಗಿ – ಅಕ್ರಮ ಕಟ್ಟಡಗಳು ಧ್ವಂಸ

    ಕಾನ್ಪುರ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸರ್ಕಾರ, ಕಾನ್ಪುರದ ಇಬ್ಬರು ಬಿಲ್ಡರ್‌ ಅಕ್ರಮ ಕಟ್ಟಡವನ್ನು ಕಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಕಟ್ಟಡ ನೆಲಸಮ ಕಾರ್ಯಾಚರಣೆಯ ಸಿದ್ಧತೆ ಗಲಭೆಗೂ ಮೊದಲೇ ಆರಂಭವಾಗಿತ್ತು ಎಂದು ಹೇಳಿದೆ.

    ಗಲಭೆಕೋರರ ವಿರುದ್ಧ ಸಿಆರ್‌ಪಿಸಿ, ಐಪಿಸಿ, ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್‌ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1986, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಮತ್ತು ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯ ಮರುಪಡೆಯುವಿಕೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

    Live Tv

  • ಬುಲ್ಡೋಜರ್‌ ಕಾರ್ಯಾಚರಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಸುಪ್ರೀಂ ಕೋರ್ಟ್

    ಬುಲ್ಡೋಜರ್‌ ಕಾರ್ಯಾಚರಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಸುಪ್ರೀಂ ಕೋರ್ಟ್

    ನವದೆಹಲಿ: ಉತ್ತರ ದೆಹಲಿ‌ ಮುನ್ಸಿಪಲ್ ಕಾರ್ಪೊರೇಶನ್ ಕೈಗೊಂಡಿದ್ದ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಅಲ್ಲದೇ ಎಲ್ಲ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿ ಎರಡು ವಾರಗಳಲ್ಲಿ ಉತ್ತರಿಸುವಂತೆ ಅದು ಹೇಳಿದೆ.

    ದೆಹಲಿಯ ಜಹಾಂಗೀರ್‌ಪುರಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಬುಲ್ಡೋಜರ್‌ ಕಾರ್ಯಾಚರಣೆ ವಿರುದ್ಧ ಇಂದು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಜಮೀಯತ್ ಉಲೇಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಲ್.ನಾಗೇಶರಾವ್ ನೇತೃತ್ವದ ದ್ವಿ ಸದಸ್ಯ ಪೀಠ NDMC ಮೇಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಇದನ್ನೂ ಓದಿ: ದೆಹಲಿ ಕಾರ್ಯಾಚರಣೆ ಅಪರಾಧ ಕೃತ್ಯ: ಶಶಿ ತರೂರ್‌

    ಆರಂಭದಲ್ಲಿ ಜಹಾಂಗೀರ್ ಪುರಿ ಪ್ರಕರಣ ಸಂತ್ರಸ್ತರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಪ್ರಕರಣ ಸಾಂವಿಧಾನಿಕ ಮತ್ತು ರಾಷ್ಟ್ರೀಯ ದೂರಗಾಮಿ ಪ್ರಶ್ನೆಗಳನ್ನು ಎತ್ತಿದೆ, ರಾಜ್ಯ ನೀತಿಯ ಸಾಧನವಾಗಿ ಬುಲ್ಡೊಜರ್ಸ್ ಬಳಕೆ ಮಾಡಲಾಗುತ್ತಿದೆ, ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿಕೊಂಡು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದರು.

    ನಿನ್ನೆ ನಾವು 10:30ಕ್ಕೆ ಕೋರ್ಟ್‌ನಲ್ಲಿ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಲಿದ್ದೇವೆ ಎನ್ನುವ ಮಾಹಿತಿ ತಿಳಿದ NDMC, 9 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿತು. ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದ ಬಳಿಕವೂ ಕಾರ್ಯಾಚರಣೆ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ಕೋರ್ಟ್‌ಗೆ ತಿಳಿಸಿದರು.

    ಪೊಲೀಸರು ಮತ್ತು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕೆಲಸ ಮಾಡಬೇಕು. ಆದರೆ ಬಿಜೆಪಿ ನಾಯಕರ ಪತ್ರ ಆಧರಿಸಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಕಟ್ಟಡಗಳನ್ನು ಧ್ವಂಸ ಮಾಡುವಂತೆ ಹೇಗೆ ಪತ್ರ ಬರೆಯುತ್ತಾರೆ. ಪತ್ರದ ಬೆನ್ನಲ್ಲೇ ಕಾರ್ಯಾಚರಣೆ ಆರಂಭಗೊಂಡಿದೆ. ತೆರವು ಕಾರ್ಯಚರಣೆಗೂ ಮುನ್ನ ನೋಟಿಸ್ ನೀಡಬೇಕು. ಅದರ ಮೇಲೆ ಮೇಲ್ಮನವಿಗಳನ್ನು ಸ್ವೀಕರಿಸಬೇಕು. ಆದರೆ ಇಲ್ಲಿ ಯಾವುದೇ ನಿಯಮಗಳ ಪಾಲನೆಯಾಗಿಲ್ಲ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ

    50 ಲಕ್ಷ ಜನರನ್ನು ಹೊಂದಿರುವ 731 ಅನಧಿಕೃತ ಕಾಲೋನಿಗಳು ದೆಹಲಿಯಲ್ಲಿವೆ. ಎಲ್ಲವನ್ನು ಬಿಟ್ಟು ಒಂದು ಪ್ರದೇಶದಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದ್ದು ಎಷ್ಟು ಸರಿ? ಅಲ್ಲಿರುವ ಜನರು ಕಳೆದ 50 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲ ನಡೆಯಲು ಬಿಡುವುದು ಹೇಗೆ? ಮೊದಲು ದಾಖಲೆಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡಬೇಕು. ನಂತರ ಸಂಬಂಧಿಸಿದ ವ್ಯಕ್ತಿಗೆ ಅವಕಾಶ ನೀಡಬೇಕು. ಬಳಿಕ ತೆರವು ಕಾರ್ಯಾಚರಣೆ ನಡೆಯಬೇಕು. ಆದರೆ ಜಹಾಂಗೀರ್‌ಪುರಿಯಲ್ಲಿ ಬಡವರ ಮೇಲೆ ಯಾಕೆ ಪ್ರಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

    NDMC ಅತಿಕ್ರಮಣ ತೆರವು ಮಾಡುವುದಾದರೆ ಸೈನಿಕ ಫಾರ್ಮ್, ಗಾಲ್ಪ್ ಲಿಂಕ್‌ಗಳು ಒಂದಲ್ಲ ಒಂದು ಪ್ರದೇಶದಲ್ಲಿ ಅತಿಕ್ರಮಣ ಮಾಡಿಕೊಂಡಿವೆ. ಆದರೆ ಅದನ್ನು ಅಧಿಕಾರಿಗಳು ಮುಟ್ಟುವುದಿಲ್ಲ, ಬಿಜೆಪಿ ನಾಯಕರ ಪತ್ರಕ್ಕೆ ಬದ್ಧವಾಗಿ ಅಧಿಕಾರಿಗಳು ಕೆಲಸ ಮಾಡುವುದು ಖೇದಕರ ಸಂಗತಿ ಎಂದು ವಾದಿಸಿದರು.

    ಬಳಿಕ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಬುಲ್ಡೋಜರ್‌ ಕಾರ್ಯಾಚರಣೆ ಬಗ್ಗೆ ಪ್ರಸ್ತಾಪಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಅತಿಕ್ರಮಣ ಎನ್ನುವುದು ಇಡೀ ದೇಶದಲ್ಲಿರುವ ಸಮಸ್ಯೆ. ಆದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಂದೇ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕೋಮು ಘರ್ಷಣೆಗಳು ನಡೆದಾಗ ಒಂದೇ ಸಮುದಾಯದ ಆಸ್ತಿ ಮೇಲೆ ಬುಲ್ಡೋಜರ್‌ಗಳ ದಾಳಿ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ಮುಸ್ಲಿಮರು ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಚಿವರೊಬ್ಬರು ಹೇಳುತ್ತಾರೆ. ಅವರಿಗೆ ಆ ಶಕ್ತಿಯನ್ನು ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ಇದೇ ವೇಳೆ ದೇಶಾದ್ಯಾಂತ ನಡೆಯುತ್ತಿರುವ ತೆರವು ಕಾರ್ಯಾಚರಣೆಗೆ ತಡೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಇಡೀ ದೇಶದಲ್ಲಿ ತೆರವು ಕಾರ್ಯಾಚರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದಿತು. ಬಳಿಕ ಸ್ಪಷ್ಟನೆ ನೀಡಿದ ಸಿಬಲ್, ಸಮುದಾಯವನ್ನು ಟಾರ್ಗೆಟ್ ಮಾಡುವ ಸೀಮಿತ ಕಾರ್ಯಾಚರಣೆಗಳು ‌ನಿಲ್ಲಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸುಪ್ರೀಂ ಕೋರ್ಟ್ ಪರಿಶೀಲಿಸುವುದಾಗಿ ಹೇಳಿತು.

    ಈ‌ ನಡುವೆ ಜ್ಯೂಸ್ ಅಂಗಡಿ ಮಾಲೀಕರೊಬ್ಬರನ್ನು ಪ್ರತಿ‌ನಿಧಿಸಿದ ವಕೀಲ ಸಂಜಯ್ ಹೆಗಡೆ, ನನ್ನ ಜ್ಯೂಸ್ ಅಂಗಡಿಯನ್ನು ತೆರವು ಮಾಡಲಾಗಿದೆ. ಅಂಗಡಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಆಸ್ತಿ ನಷ್ಟಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿದರು.

    ಬಳಿಕ NDMC ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಒತ್ತುವರಿ ಕಾರ್ಯಾಚರಣೆ ನಿನ್ನೆಯಿಂದ ಆರಂಭವಾಗಿಲ್ಲ. ಜನವರಿ 19 ರಿಂದ ಆರಂಭವಾಗಿ ಫೆಬ್ರವರಿ, ಮಾರ್ಚ್‌ನಲ್ಲೂ ನಡೆದಿದೆ. ಅಕ್ರಮ ಕಟ್ಟಡಗಳಿಗೆ ಹಿಂದೆಯೇ ನೋಟಿಸ್ ನೀಡಿದೆ. ನೋಟಿಸ್ ಪ್ರಶ್ನೆ ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಂದು ಹೈಕೋರ್ಟ್ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ: ರಾಹುಲ್ ಗಾಂಧಿ

    ದಾಖಲೆಗಳು ಇರುವುದಾದರೆ ನಾವು ನೋಟಿಸ್ ನೀಡಿದಾಗ ಯಾಕೆ ತೋರಿಸಲಿಲ್ಲ? ಖಾರ್ಗೋನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 88 ಹಿಂದೂಗಳು ಮತ್ತು 26 ಮುಸ್ಲಿಮರ ಕಟ್ಟಡಗಳಿದ್ದವು. ಕೋರ್ಟ್ ಇದನ್ನು ಪರಿಗಣಿಸಬೇಕು. ಅಲ್ಲದೇ ಟೇಬಲ್‌ ಕುರ್ಚಿ ತೆರವು ಮಾಡಲು ನೋಟಿಸ್ ಅಗತ್ಯ ಇಲ್ಲ ಎಂದು ವಾದಿಸಿದರು.

    ಇದಕ್ಕೆ ಮರು ಪ್ರಶ್ನೆ ಹಾಕಿದ ಪೀಠ, ನೀವು ಟೇಬಲ್ ಕುರ್ಚಿಯನ್ನು ಮಾತ್ರ ತೆರವು ಮಾಡಿದ್ದೀರಾ? ಅದಕ್ಕೆ ಜೆಸಿಬಿ ಬಳಕೆ‌ ಮಾಡಿದ್ದೀರಾ? ನಮ್ಮ ಬಳಿ ವಿಡಿಯೋಗಳಿವೆ. ನಾವು ಆದೇಶ ನೀಡಿದ ಬಳಿಕವೂ ಮೇಯರ್ ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅರ್ಜಿದಾರರಿಗೂ ನೋಟಿಸ್ ಜಾರಿ ಮಾಡುತ್ತಿದ್ದು ದಾಖಲೆಗಳನ್ನು ಒದಗಿಸಲು ಎರಡು ವಾರ ಸಮಯ ನೀಡಲಾಗುತ್ತಿದೆ ಎಂದು ಪೀಠ ಹೇಳಿತು. ಮುಂದಿನ ಆದೇಶವರೆಗೂ ಬುಲ್ಡೋಜರ್‌ ಕಾರ್ಯಾಚರಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕೋರ್ಟ್ ಆದೇಶಸಿತು.

  • ದೆಹಲಿ ಕಾರ್ಯಾಚರಣೆ ಅಪರಾಧ ಕೃತ್ಯ: ಶಶಿ ತರೂರ್‌

    ದೆಹಲಿ ಕಾರ್ಯಾಚರಣೆ ಅಪರಾಧ ಕೃತ್ಯ: ಶಶಿ ತರೂರ್‌

    ನವದೆಹಲಿ: ಇಲ್ಲಿನ ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಪಾಲಿಕೆ ನಡೆಸಿದ ಕಾರ್ಯಾಚರಣೆಯು ಅಪರಾಧ ಕೃತ್ಯವಾಗಿದೆ. ಸಂಬಂಧಪಟ್ಟವರಿಗೆ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಒತ್ತಾಯಿಸಿದ್ದಾರೆ.

    ತೆರವು ಕಾರ್ಯಾಚರಣೆಯು ಕಾನೂನುಬಾಹಿರ, ಅಸಾಂವಿಧಾನಿಕ. ಬೆದರಿಕೆಯ ಹೊಸ ತಂತ್ರವಾಗಿದೆ. ಇಂತಹ ಘಟನೆಗಳು ದೇಶದ ಘನತೆಯನ್ನು ಕುಗ್ಗಿಸಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ

    ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ನಂತರವೂ ಸುಮಾರು 4 ಗಂಟೆಗಳ ಕಾಲ ಬುಲ್ಡೋಜರ್‌ ಕಾರ್ಯನಿರ್ವಹಿಸಿವೆ. ಇದು ಕಾನೂನುಬಾಹಿರ. ವಿಶ್ವದಲ್ಲಿ ಭಾರತದ ಘನತೆ ಕುಸಿಯುತ್ತಿದೆ. ವಿದೇಶದಲ್ಲಿರುವ ನನ್ನ ಸ್ನೇಹಿತರು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತರ ಶೋಷಣೆ ಮತ್ತು ಇಸ್ಲಾಮೋಫೋಬಿಯಾ (ಇಸ್ಲಾಂ ಬಗ್ಗೆ ಭಯ ಹುಟ್ಟಿಸುವುದು) ನಡೆಯುತ್ತಿದೆ. ಈ ಎಲ್ಲಾ ದುರವಸ್ಥೆಗೆ ಬಿಜೆಪಿ ನೇರ ಹೊಣೆ ಎಂದು ತಿಳಿಸಿದ್ದಾರೆ.

    ಮನೆಗಳು, ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ನಿಜಕ್ಕೂ ಇದೊಂದು ಅಪರಾಧ ಕೃತ್ಯ. ಭಾರತ ಸಂವಿಧಾನದ ಮೌಲ್ಯಗಳಿಗೆ ನೀಡಿದ ಪೆಟ್ಟು ಇದು. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ – ಹಾಕದಿದ್ದರೆ 500 ರೂ. ದಂಡ

    ಕಾರ್ಯಾಚರಣೆ ಬಗ್ಗೆ ಸೂಕ್ತ ತನಿಖೆ ಮಾಡಿ, ಯಾರು ಹೊಣೆಗಾರರೆಂದು ಪತ್ತೆ ಮಾಡಿ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರಿಗೆ ನೋಟಿಸ್ ನೀಡಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದು ಅತ್ಯಂತ ಅಮಾನವೀಯ ಸಾರ್ವಜನಿಕ ಶಿಕ್ಷೆಯಾಗಿದೆ ಎಂದು ಕಿಡಿಕಾರಿದ್ದಾರೆ.

    ಉತ್ತರ ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಟ್ಟಲು ಆಯ್ಕೆಯಾಗಿ ಬಂದಿರುವ ಸರ್ಕಾರ ತಾನೇ ನಾಶ ಮಾಡುತ್ತಿದೆ. ಸರ್ಕಾರದ ಕೆಲಸವು ರಾಷ್ಟ್ರವನ್ನು ಕಟ್ಟುವುದು, ಅದನ್ನು ಕೆಡವುದಲ್ಲ. ಈ ನಾಚಿಕೆಗೇಡಿನ ನಡವಳಿಕೆಯಿಂದ ಈ ಸರ್ಕಾರವು ನಾಗರಿಕರ ನಂಬಿಕೆಯನ್ನೇ ಕಳೆದುಕೊಂಡಿದೆ ಎಂದು ಟೀಕಿಸಿದ್ದಾರೆ.

  • ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

    ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

    – 800 ಕೆಜಿ ಸ್ಫೋಟಕ ಬಳಸಿ ಬ್ಲಾಸ್ಟ್

    ತಿರುವನಂತಪುರಂ: ನಿಯಮಮೀರಿ ಕೆರೆದಂಡೆಯ ಮೇಲೆ ಅಕ್ರಮವಾಗಿ ಕಟ್ಟಿದ್ದ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡುವ ಕೆಲಸವನ್ನು ಕೇರಳ ಸರ್ಕಾರ ಶುರುಮಾಡಿದೆ.

    ಸುಪ್ರೀಕೋರ್ಟ್ ನ ಆದೇಶದ ಬೆನ್ನಲ್ಲೇ ಸುಮಾರು ನಾಲ್ಕು ತಿಂಗಳ ನಂತರ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಕೇರಳದ ಕೊಚ್ಚಿಯ ತೀರ ಪ್ರದೇಶದ ಮರಡು ವಸತಿ ಪ್ರದೇಶದ ಹಿನ್ನೀರಿನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ನಾಲ್ಕು ಗಗನಚುಂಬಿ ಅಪಾರ್ಟ್​ಮೆಂಟ್​ಗಳ ನೆಲಸಮ ಶುರುವಾಗಿದೆ. ಇಂದು 4 ಅಪಾರ್ಟ್​ಮೆಂಟ್​ಗಳ ಪೈಕಿ 2 ಅಪಾರ್ಟ್​ಮೆಂಟ್​ಗಳನ್ನು 800 ಕೆಜಿ ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದೆ.

    ಈ ನಾಲ್ಕು ಅಪಾರ್ಟ್​ಮೆಂಟ್​ಗಳಲ್ಲಿ 350 ಫ್ಲ್ಯಾಟ್‍ಗಳು ಇದ್ದವು. 90 ಫ್ಲ್ಯಾಟ್ ಹೊಂದಿದ್ದ 19 ಫ್ಲೋರ್ ನ 60 ಮೀಟರ್ ಎತ್ತರದ H2O ಹೋಲಿಫೇತ್ ಅಪಾರ್ಟ್​ಮೆಂಟ್​ ಮತ್ತು 73 ಫ್ಲ್ಯಾಟ್ ಹೊಂದಿದ್ದ ಆಲ್ಫಾ ಸಿರೀನ್ ಅಪಾರ್ಟ್​ಮೆಂಟ್​ಗಳ ಧ್ವಂಸವಾಗಿದೆ. ಈ ಅಪಾರ್ಟ್​ಮೆಂಟ್​ಗಳಲ್ಲಿ 240 ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.

    ಕೋಸ್ಟಲ್ ರೆಗ್ಯುಲೇಷನ್ ಝೋನ್ ರೂಲ್ಸ್ ಉಲ್ಲಂಘಿಸಿ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಲಾಗಿತ್ತು. ನದಿಯ ಪಕ್ಕ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದರಿಂದ ಎಲ್ಲಾ ಕಾನೂನು ನಿಯಮಗಳನ್ನು ಮೀರಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಪಾರ್ಟ್​ಮೆಂಟ್​ಗಳ ಧ್ವಂಸಕ್ಕೆ ಸೂಚನೆ ಕೊಟ್ಟಿತ್ತು.

    ಅಲ್ಲದೇ ಸುಪ್ರೀಕೋರ್ಟ್ ಅಕ್ರಮ ಗಗನಚುಂಬಿ ಕಟ್ಟಡಗಳ ತೆರವಿಗೆ 138 ದಿನಗಳ ಡೆಡ್‍ಲೈನ್ ನೀಡಿತ್ತು. ಇದೀಗ ಕೋರ್ಟ್ ಆದೇಶದಂತೆ ನಾಲ್ಕು ಕಟ್ಟಗಳಲ್ಲಿ ಇಂದು ಎರಡು ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಎರಡು ಅಪಾರ್ಟ್ ಮೆಂಟ್​ಗಳ ನೆಲಸಮ ಮಾಡಲು ಸುಮಾರು 800 ಕೆಜಿ ಸ್ಫೋಟಕವನ್ನು ಬಳಸಲಾಗಿದೆ. ಕ್ಷಣಾರ್ಧದಲ್ಲಿ ಕಟ್ಟಡಗಳು ನೆಲಕ್ಕುರುಳಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ನೆರೆಹೊರೆಯವನ್ನು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿತ್ತು. ಅಲ್ಲದೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಸೂಚನೆ ನೀಡಿದೆ. ಭಾನುವಾರ ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಯಾಲೋರಾಂ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡಲಾಗುತ್ತದೆ.

  • ವಿಡಿಯೋ: 10 ಸೆಕೆಂಡ್ ನಲ್ಲಿ 15 ಅಂತಸ್ತಿನ ಕಟ್ಟಡ ನೆಲಸಮ!

    ವಿಡಿಯೋ: 10 ಸೆಕೆಂಡ್ ನಲ್ಲಿ 15 ಅಂತಸ್ತಿನ ಕಟ್ಟಡ ನೆಲಸಮ!

    ಬೀಜಿಂಗ್: 15 ಅಂತಸ್ತಿನ ಕಟ್ಟಡವನ್ನು ಕೇವಲ 10 ಸೆಕೆಂಡ್ ಗಳಲ್ಲಿ ನೆಲಸಮ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳೆದ ಕೆಲ ದಿನಗಳ ಹಿಂದೆ ಚೀನಾದ ಚೆಂಗ್ಡು ನಗರದಲ್ಲಿ 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ವಸ್ತು ಪ್ರದರ್ಶನ ಕಟ್ಟಡವನ್ನು ಸ್ಫೋಟಕ ಬಳಸಿ ಕೆಡವಲಾಗಿದೆ. ಕೇವಲ 10 ಸೆಕೆಂಡ್ ಗಳಲ್ಲಿ ನಡೆದ ಈ ಪ್ರಕ್ರಿಯೆಯಿಂದಾಗಿ ಕ್ಷಣ ಮಾತ್ರದಲ್ಲಿ ಸುತ್ತಲಿನ ಪ್ರದೇಶವ ಸಂಪೂರ್ಣ ದೂಳಿನಿಂದ ಆವೃತ್ತವಾಗಿತ್ತು.

    ಈ ದೃಶ್ಯಗಳನ್ನು ಸ್ಥಳೀಯ ವ್ಯಕ್ತಿ ತನ್ನ ಮೊಬೈಲ್ ನಲ್ಲಿ ಸೆರೆಡಿದಿದ್ದಾನೆ. ಕಟ್ಟಡ ನೆಲಸಮವಾದ ಬಳಿಕ ದೂಳಿನ ಪ್ರಮಾಣ ಕಡಿಮೆ ಮಾಡಲು ಕಾರ್ಮಿಕರು ಕಟ್ಟಡದ ಅವಶೇಷಗಳ ಮೇಲೆ ನೀರು ಸುರಿದಿದ್ದಾರೆ. ಸ್ಫೋಟಕ ಬಳಸಿ ಕಟ್ಟಡ ನೆಲ ಸಮ ಮಾಡುವ ವೇಳೆ ಹೊಗೆ ನಿರೋಧಕ ಫಿರಂಗಿಗಳನ್ನು ಬಳಕೆ ಮಾಡಲಾಗಿದೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.